ಪುಟ:Mysore-University-Encyclopaedia-Vol-1-Part-2.pdf/೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಗ್ನಿಯಂ ಅಸಿಟೇಟ್ ಬಟ್ಟೆಗಳಿಗೆ ಬಣ್ಣ ಕಚ್ಚಿಸುವುದು,ಚ್ವಾಲೆಗಳನ್ನು ನಿರೋಧಿಸುವ ಬಟ್ಟೆಗಳ ತಯಾರಿಕೆ,ನೀರಿನಿಂದ ತೇವವಾಗದ ಕಾಗದಗಳ ತಯಾರಿಕೆಗಳಲ್ಲಿ ಉಪಯೋಗಕಾರಿ.ಬಿಳಿಯ ಜೇಡಿಮಣ್ಣಿನಿಂದ ಬಟ್ಟೆಗಳ ಬಿಳುಪಿಗೆ ಉಪಯೋಗಿಸುವ ನೀಲಿಯನ್ನು(ಅಲ್ಟ್ರಮರೀನ್ ಬ್ಲೂ) ತಯಾರಿಸುವರು.

ಅಲ್ಯೂಮಿನಿಯಂ ಗುರುತಿಸುವಿಕೆ: ಅಲ್ಯೂಮಿನಾನ್ ಎಂಬ ರಾಸಾಯನಿಕ ದ್ರಾವಣದ ಮಧ್ಯದಲ್ಲಿ ಅಚಲವಾಗಿರುತ್ತಾದೆ.ಈ ರಾಸಾಯನಿಕ ಕ್ರಿಯೆಯನ್ನು ಅಲ್ಯೂಮಿನಿಯಮನ್ನು ಗುರುತು ಹಚ್ಚಲು ಉಪಯೋಗಿಸುವರು.ಅದೇ ರೀತಿ ಅಲಜರಿನ್ ರೆಡ್ ಎಸ್ ಎಂಬ ಬಣ್ಣದೊಂದಿಗೂ ಕೆಂಪು ಬಣ್ಣ ವೃದ್ದಿಯಾಗಿ ಅದು ಅಸಿಟಿಕ್ ಆಮ್ಲದಲ್ಲಿ ನಾಶವಾಗದೇ ಇರುವುದು.ಅಲ್ಯೂಮಿನಿಯಮನು ಗುರುತು ಹಚ್ಚಲು ಉಪಯೋಗಿಸುವ ಮತ್ತೊಂದು ಪ್ರಯೋಗ.

ಅಲ್ಯೂಮಿನಿಯಂ ಪ್ರಮಾಣಮಾಪನೆ:ಅಲ್ಯೂಮಿನಿಯಂ ಮಿಶ್ರಲೋಹ ಒಂದರಲ್ಲಿಯಾಗಲಿ ಅಥವಾ ಅಲ್ಯೂಮಿನಿಯಂನ ಸಂಯುಕ್ತವೊಂದರಲ್ಲಿಯಾಗಲಿ ಅಲ್ಯೂಮಿನಿಯಂ ಲೋಹಾಂಶ ಪ್ರಮಾನವನ್ನು ನಿಖರವಾಗಿ ಅಳೆಯಲು ಅನೇಕ ವಿಧಾನಗಳನ್ನು ಅನುಸರಿಸಬಹುದು.ವೊದಲು ಘನಸ್ತುವನ್ನು ದ್ರಾವಣ ರೂಪಕ್ಕೆ ಮಾಪಾ೯ಡು ಮಾಡಬೇಕು ಪ್ರಬಲ ಹೈಡ್ರೊಕ್ಲೋರಿಕ್ ಆಮದಲ್ಲಿ ಮಿಶ್ರ ಲೋಕ ಕರಗಿಸಬಹುದು. ಸಂಯುಕ್ತಗಳು ಪುಣ೯ವಾಗಿ ನೀರಿನಲ್ಲಿ ವಿಲೀನವಾಗದೆ ಇದ್ದರೆ ಹೈಡ್ರೋಕ್ಲೋರಿಕ್ ಆಮ್ಲವನ್ನು ಉಪಯೋಗಿಸಬಹುದು.ದ್ರಾವಣದೊಳಗಿನ ಅಲ್ಯೂಮಿನಿಯಂ ಹೈಡ್ರಾಕ್ಸೈಡ್ ಆಗಿ ಪಡೆಯ ಬಹುದು. ಅಲ್ಯೂಮಿನಿಯಂ ಹೈಡ್ರಾಕ್ಸೈಡ್ ಬೆರೆಸುವುದರಿಂದ ಅಲ್ಯೂಮಿನಿಯಂ ಹೈಡ್ರಾಕ್ಸೈಡ್ ಆಗಿ ಪಡೆಯಬಹುದು,ಅಲ್ಯೂಮಿನಿಯಂ ಹೈಡ್ರಾಕ್ಸೈಡ್ ನೀರಿನಲ್ಲಿ ಲೀನವಾಗುವುದಿಲ್ಲ.ಆದುದರಿಂದ ನೀರಿನಲ್ಲಿ ಚೆನ್ನಾಗಿ ತೊಳೆದರೆ ಅಂತ್ಯದಲ್ಲಿ ಬಿಳಿಯ ಗಷ್ಟು ಅಲ್ಯೂಮಿನಿಯಂ ಹೈಡ್ರಾಕ್ಸೈಡ್ ಉಳಿಯುತ್ತದೆ.ಅದನ್ನು ಪಿಂಗಾಣಿ ಮೂಸೆಯಲ್ಲಿ ಹಾಕಿ ಕಾಸಿದರೆ ಜಲಾಂಶವೆಲ್ಲವು ಹೊರಬಿದ್ದು ಶುದ್ದ ಒಣ ಅಲ್ಯೂಮಿನಿಯಂ ಆಕ್ಸೈಡ್ ಉಳಿಯುತ್ತದೆ.ಅದರ ತೂಕವನ್ನು ಕಂಡುಹಿಡಿದು ಅಲ್ಯೂಮಿನಿಯಂ ಮೂಲ ದ್ರಾವಣದಲ್ಲಿ ಎಷ್ಟು ಇತ್ತು ಎಂಬುದನ್ನು ಲೆಕ್ಕಾಚಾರ ಮಾಡಿ ತಿಳಿಯಬಹುದು.ವಿಶ್ಲೇಷಣೆಗೆ ಒಳಪಡಿಸಿರುವ ಮೂಲ ವಸ್ತುವಿನಲ್ಲಿ ಕಬ್ಬಿಣದ ಅಂಶವೇನಾದರೂ ಇದ್ದಲ್ಲಿ ಅವೋನಿಯಂ ಬದಲು ಪ್ರಬಲ ಸೋಡಿಯಂ ಹೈಡ್ರಾಕ್ಸೈಡ್ ದ್ರಾವಣವನ್ನು ಉಪಯೋಗಿಸಿದರೆ,ಕಬ್ಬಿಣದ ಆಕ್ಸೈಡ್ ವಿಲೀನವಾಗದೆ ಉಳಿದು, ಸೋಸಿ ಪ್ರತ್ಯೇಕಿಸಬಹುದು.ಅಲ್ಯೂಮಿನಿಯಂ ಮಾತ್ರ ಲೀನವಾಗುತ್ತದೆ.ತತ್ವರಿಣಾಮವಾಗಿ ಉಂಟಾದ ಸೋಡಿಯಂ ಅಲ್ಯೂಮಿನೇಟ್ ದ್ರಾವಣದಿಂದ ಅಲ್ಯೂಮಿನಿಯಂ ಹೈಡ್ರಾಕ್ಸೈಡ್ ಹೊರಬರುವಂತೆ ಮಾಡಿ,ಮೇಲೆ ವಿವರಿಸುವಂತೆ ಅಲ್ಲೂಮಿನಿಯಂ ಪ್ರಮಾಣವನ್ನು ಲೆಕ್ಕಾಚಾರ ಮಾಡಬಹುದು. ಅಲ್ಯೂಮಿನಿಯಂ ದ್ರಾವಣದಿಂದ ಅಲ್ಯೂಮಿನಿಯಂ ಅಂಶವನ್ನು ಆಕ್ಸಿನ್ ಎಂಬ ಇಂಗಾಲ ಸಂಯುಕ್ತ ದೊಡನೆಯೂ ಕ್ರಿಯೆಗೊಲಳಪಡಿಸಿ,ಅಲ್ಯೂಮಿನಿಯಂ ಆಕ್ಸಿನೇಟ್ ಎಂಬ ನೀರಿನಲ್ಲಿ ಲೀನವಾಗದಿರುವ ಸಂಯುಕ್ತವನ್ನು ಹೊಂದಬಹುದು.ಅದನ್ನು ಸೋಸಿ ಬೇಪ೯ಡಿಸಿ ಒಣಗಿಸಿ ತೂಕ ಮಾಡಿ ಅದರಿಂದಲೂ ಅಲ್ಯೂಮಿನಿಯಂ ಲೋಹಾಂಶವನ್ನು ಲೆಕ್ಕಾಚಾರ ಮಾಡಬಹುದು.

ಅಲ್ಯೂಮಿನಿಯಂ ತಾಪನ ; ಅಲ್ಯೂಮಿನಿಯಮ್ನಿಂದ ಕೆಲವು ಲೋಹದ ಭಸ್ಮಗಳನ್ನು(ಆಕ್ಸೈಡ್) ಲೋಹವಾಗಿ ರೂಪಾಂತರಿಸುವ ವಿಧಾನ(ಅಲ್ಯೂಮಿನೋಥಮಿ೯ಕಸ್).ಸೂಕ್ಷ್ಮವಾಗಿ ವಿಭಜಿಸಿದ ಅಲ್ಯೂಮಿನಿಯಮ್ ಪುಡಿಯೊಡನೆ ಲೋಹಭಸ್ಮವನ್ನು ನಿಕಟವಾಗಿ ಬೆರೆಸಿ ಮಿಶ್ರಣವನ್ನು ಒಂದು ರಾಸಾಯನಿಕ-ಪ್ರಕ್ರಿಯಾ ಪಾತ್ರೆಯಲ್ಲಿ ದಹಿಸಲಾಗುವುದು.ಲೋಹಭಸ್ಮದ ಮತ್ತು ಅಲ್ಯೂಮಿನಿಯಮ್ ಚೂಣ೯ದ ನಿಕಟ ಮಿಶ್ರಣವನ್ನು ದಹಿಸಿದಾಗ, ಅಲ್ಯೂಮಿನಿಯಮ್ ಆಕ್ಸೈಡ್ ಉತ್ಪತ್ತಿಯಾಗುತ್ತದೆ. ಈ ಕ್ರಿಯೆಯಲ್ಲಿ ಉಂಟಾಗುವ ಉಷ್ಣ ಬೇರೆ ಲೋಹಗಳ ಭಸ್ಮದ ಪೃಥಕ್ಕಾರಣದಲ್ಲಿ ಹೀರಿದ ಉಷ್ಣಕ್ಕಿಂತ ಅಧಿಕವಾಗಿರುವುದರಿಂದ ಉತ್ಪತ್ತಿಯಾದ ಅಲ್ಯೂಮಿನ ಕರಗಿದ ಪರಿಸ್ಧಿತಿಯಲ್ಲಿ ದ್ರವರೂಪಿಕಿಟ್ಟದಿಂತೆ ಇದ್ದು,ಲೋಹಗಳನ್ನು ಅದರಿಂದ ತ್ವರಿತವಾಗಿ ಬೇಪ೯ಡಿಸಲು ಅನುಕೂಲವಾಗಿರುತ್ತದೆ.ದಹನ ಕ್ರಿಯೆಯನ್ನು ಪ್ರಾರಂಭಿಸಲು ಪ್ರಕ್ರಿಯಾ ಬೇರಿಯರಿ ಪೆರಾಕ್ಸೈಡ್ ಮತ್ತು ಅಲ್ಯೂಮಿನಿಯಮ್ ಗಳ ಸಕ್ರಿಯ ಮಿಶ್ರಣವನ್ನು ಉಪಯೋಗಿಸುತ್ತಾರೆ.ಅಪಘಷ೯ಣವಾಗಲು ಎರಡು ವಿಧಗಳಿವೆ. ಮೊದಲನೆಯದರಲ್ಲಿ ಪ್ರಕ್ರಿಯೆಯ ಪ್ರತ್ಯಾಘಾತದ ಪಾತ್ರೆಯನ್ನು ಭಸ್ಮ ಮತ್ತು ಅಲ್ಯೂಮಿನಿಯಮ್ ಮಿಶ್ರಣದಿಂದ ಭತಿ೯ಮಾಡಿ ಅದರ ಮೇಲೆ ಪ್ರಕ್ರಿಯೆಯ ಮಿಶ್ರಣ ಇದ್ದು ದಹನಕ್ಕೆ ಸಹಕಾರಿಯಾಗುವುದು.ಪ್ರಕ್ರಿಯೆ ೫೦-೯೦ ಸೆಕೆಂಡುಗಳಲ್ಲಿ ಪುತಿ೯ಯಾಗಿ ಲೋಹ ಪಾತ್ರೆಯ ಮೇಲೆ ಕಿಟ್ಟಿ ಕಟ್ಟುವುದು. ಒಂದು ಟನ್ನಿನಷ್ಟು ಒಂದೇ ಸಲ ಈ ವಿಧಾನದಿಂದ ಕಾಯಿಸುವುದು ಸಾಧ್ಯ. ಎರಡನೆಯ ವಿಧಾನದಲ್ಲಿ ಮಿಶ್ರಣದ ಸ್ವಲ್ಪಭಾಗವನ್ನು ಪಾತ್ರೆಯಲ್ಲಿ ಹಾಕಿ, ಪ್ರಕ್ರಿಯೆಯನ್ನು ಪುಷ್ಟೀಕರಿಸಲು ಮತ್ತಷ್ಟು ಮಿಶ್ರಣವನ್ನು ಎಚ್ಚರಿಕೆಯಿಂದ ಸ್ವಲ್ಪವಾಗಿ ಸೇರಿಸಲಾಗುವುದು. ಕಿಟ್ಟಿ ಮತ್ತು ಲೋಹದಿಂದ ಪಾತ್ರೆಯನ್ನು ಪುತಿ೯ ತುಂಬಿಸಬಹುದು. ಈ ರೀತಿ ಹಲವಾರು ಟನ್ನುಗಳಷ್ಟು ಪದಾಥ೯ವನ್ನು ಇಂಥ ಪ್ರಕ್ರಿಯೆಗೆ ಒಳಪಡಿಸಬಹುದು.

ಬರಿಯ ಲೋಹಗಳಲ್ಲದೆ ಕಬ್ಬಿಣದ ಮಿಶ್ರಲೋಹಗಳನ್ನೂ ಈ ವಿಧಾನದಿಂದನ ತಯಾರಿಸಬಹುದು. ಈ ವಿಧಾನ ಕೆಲವು ಪದಾಥ೯ಗಳನ್ನು ಇದ್ದಲ್ಲಿಯೇ ಬೆಸೆಯಲು ಉಪಯೋಗವಾಗುತ್ತದೆ.ಉದಾಹರಣೆಗೆ ರೈಲು ಕಂಬಿಗಳು ಮತ್ತು ಹಡಗಿನಲ್ಲಿರುವ ಚಾಲಕ ದಂಡಗಳು ಇವುಗಳನ್ನು ಇರುವ ಜೌಗದಲ್ಲಿಯೇ ಮಿಶ್ರಣ ಹೊಯ್ದು ಕರಗಿಸಿ ಬೆಸುಗೆ ಹಾಕಬಾಹುದು.

ಅಲ್ಯೂರೋಡಿಡೀ: ಬಿಳಿ ನೊಣಗಳು.ದೇಹ ಮತ್ತು ರೆಕ್ಕೆಗಳ ಮೇಲೆ ಬಿಳಿಯದೂಳು ಆವರಿಸಿದ್ದು ಸಸ್ಯಹೇನುಗಳಂತೆ ಇವೆ. ಈ ನೊಣದ ಮರಿಗಳಿಂದ ಸಸ್ಯಗಳಿಗೆ ಹಾನಿಯಿದೆ. ಇವು ತೆಳುಪೊರೆಯ ಕೀಟಗಳಿಂದ ಭಿನ್ನವಾಗಿವೆ. ಪೊರೆಹುಳುಗಳಿಗೆ ಹೊಳೆಯುವ ಬಿಳಿಯ ದಾರದಿಂದ ಸುತ್ತಲ್ಪಟ್ಟಿರುತ್ತವೆ. ಬಿಚ್ಚಿದಾಗ ಅದರ ಉದ್ದ ಸು. ೨ ಮಿಮೀ ಇರುತ್ತದೆ. ಪ್ರೌಢ ಕೀಟ ಚಿಕ್ಕದಾಗಿ ಬಿಳಿ ಪತಂಗದಂತಿರುವುದು.ನಾಲ್ಕು ರೆಕ್ಕೆಗಳು ಇರುವುವು.ಇದರ ಮೊಟ್ಟೆಗಳಿಗೆ ತೊಟ್ಟು ಇದ್ದು ರೇತ್ರಾಣುಗಳು ಈ ತೊಟ್ಟಿನ ಮೂಲಕ ಹಾದು ಗಭಾ೯ಕಟ್ಟುತ್ತದೆ.ಅನಂತರ ಈ ತೊಟ್ಟುಗಳು ಮುದುರಿಕೊಳ್ಳುತ್ತವೆ.ಹೂದಾನಿಯಾಕಾರದ ಸಂದಿನಲ್ಲಿ ಗುದದ್ವಾರವಿರುವುದು ಇದರ ರಚನೆಯ ಒಂದು ವೈಶಿಷ್ಟ್ಯ. ಈ ದ್ವಾರಕ್ಕೆ ಒಂದು ಅಗಲವಾದ ಮುಚ್ಚಳವಿದೆ.ಈ ರಂಧ್ರದಿಂದ ಸಿಹಿಯಾದ ಅಂಟು ಪದಾಥ೯ ಸ್ರವಿಸುತ್ತದೆ.ಹೆಚ್ಚು ಹಾವಳಿ ಮಾಡುವ ಈ ಜೌತಿಯ ಕೀಟಗಳು ಜಂಬಿರ ಜೌತಿಯ ಮತ್ತು ಗಾಜಿನ ಮನೆಯಲ್ಲಿ ಬೆಳೆಸುವ ಕೋಮಲ ಸಸ್ಯಗಳನ್ನು ನಾಶಮಾಡುತ್ತದೆ.ಬಿಳಿ ನೊಣಗಳು ಪಪ್ರಂಚದ ಎಲ್ಲೆಡೆಯಲ್ಲಿಯೂ ವಾಸಿಸುತ್ತವೆ.ಇವಕ್ಕೆ ಕಂದು ಬಣ್ಣದ ರೆಕ್ಕೆಗಳೂ ಇವೆ.

ಅಲ್ಯೂಷಿಯನ್ ದ್ವೀಪಗಳು: ಉತ್ತರ ಪೆಸಿಫಿಕ್ ಸಾಗರದಲ್ಲಿರುವ ದ್ವೀಪಸ್ತೋಮ.ಸಿಮಾರು ೧೫೦ ದ್ವೀಪಗಳಿವೆ. ಇವು ಅಲಾಸ್ಕ ಪಯಾ೯ಯದ್ವೀಪದದಿಂದ ಪಶ್ಚಿಮಾಕ್ಕೆ ಕಮ್ ಚಟ್ಕಾ ಪಯಾ೯ಯದ್ವೀಪದ ಅಟ್ಟು ದ್ವೀಪದವರೆಗೆ ಸು.೧೯೩೨ ಕಿಮೀ ಉದ್ದ ಹಬ್ಬಿವೆ. ೫೨೦-೫೫೦ ಉತ್ತರ ರೇಖಾಂಶ ,೧೬೩೦-೧೭೦೦ ಪಶ್ವಿಮ ರೇಖಾಂಶ ಜನಸಂಖ್ಯೆ ೫೬೦೦. ಪ್ರಮುಖ ದ್ವೀಪ ಸಮೂಹಗಳೆಂದರೆ;ಪಾಕ್ಸ್ ದ್ವೀಪಗಳು,ಫೋರ್ ಮೌಂಟೇನ್ಸ್ ದ್ವೀಪಗಳು,ಆಂಡ್ರಿಯನ್ ಆಫ್ ದ್ವೀಪಗಳು ಮಾತ್ತು ಅಟ್ಟುದ್ವೀಪವನ್ನೊಳ ಗೊಂಡ ನಿಯರ್ ದ್ವೀಪಗಳು -ಇವು ಜ್ವೌಲಾಮುಖಿಗಳಿವೆ. ಸಾಗರಿಕ ವಾಯುಗುಣವಿದ್ದು ವಷ೯ವೆಲ್ಲ ಮಳೆ ಬೀಳುತ್ತದೆ. ವಷ೯ದ ಬಹುಕಾಲ ವಾತಾವರಣ ದಟ್ಟ ಮಂಜಿನಿಂದ ಕೂಡಿದ್ದು,ಸರಾಸರಿ ೩೮ ಸೆಂ.ಉಷ್ಣತೆಯಿರುತ್ತದೆ.ಪೈರು ಚೆಳೆಯುವ ಅವಧಿ ಸುಮಾರು ೧೩೫ ದಿವಸಗಳು.ಇಲ್ಲಿಯ ನಿತ್ಯಹರಿದ್ವಣ೯ದ ಕೋನಿಫರಸ್ ಕಾಡುಗಳಲ್ಲಿ ಮೃದು ಮರ ದೊರೆತರೂ ಆ ಬಗ್ಗೆ ಕೈಗಾರಿಕೆ ಬೆಳೆದಿಲ್ಲ.ಮೀನುಗಾರಿಕೆ, ಬೇಟೆ ಜನರ ಮುಖ್ಯ ಉದ್ಯೋಗಗಳು.ಪ್ರಮುಖ ರೇವು ಹಾಗೂ ವ್ಯಾಪಾರ ಯುನಲಾಸ್ಕ ಅತಿ ದೊಡ್ಡ ಪಟಣ್ಣ. ಇಲ್ಲಿ ಅಮೇರಿಕ ಸಂಯುಕ್ತ ಸಂಸ್ಥಾನದ ನೌಕೌ ನೆಲೆ ಇದೆ.

ಅಲ್ಲಮಂಡ ; ಅಪೋಸೈನೇಸೀ ಕುತುಂಬಕ್ಕೆ ಸೇರಿದ ಅಲಂಕಾರ ಸಸ್ಯಜೌತಿ.ಇದು ಬಹುವಾಷಿ೯ಕ ಪೊದೆಸಸ್ಯವಾಗಿರುವುದರಿಂದ ತೋಟಗಾರಿಕೆಯಲ್ಲಿ ಉಪಯುಕ್ತವೆನಿಸಿದೆ.ಬಳ್ಳಿಯಾಗಿಯೂ ಬೆಳೆಯುವುದುಂಟು.ವಷ೯ವಿಡೀ ಗಂಟೆಯಾಕಾರದ ಸುಂದರ ಹಳದಿ ಹೂ ಬಿಡುತ್ತದೆ.ಅಲ್ಲಮಂಡ ಸಸ್ಯಗಳ ಕಾಂಡ ಆಕಾರದಲ್ಲಿ ಗುಂಡು,ಎಳೆಯ ಬಳ್ಳಿಯ ಬಾಣ್ಣ ಹಸಿರು.ಬಲಿತ ಮೇಲೆ ಬುದಿ ಬಣ್ಣ ತಳೆಯುತ್ತದೆ.ಅಲ್ಲಮಂಡದ ವಿವಿಧ ಪ್ರಭೇದಗಳನ್ನು ಅನುಸರಿಸಿ ಎಲೆಗಳನ್ನು ಆಕಾರಗಳನ್ನು ವಿಧವಿಧವಾಗಿರುತ್ತವೆ.ಗಿಣ್ಣಿನಲ್ಲಿ ಎಲೆಗಳು ವೃತ್ತಾಕಾರದಲ್ಲಿ ಜೋಡಣೆಗೊಂಡಿರುತ್ತದೆ.ಕೆಲವು ಸಸ್ಯಗಳಲ್ಲಿ ಎಲೆಗಳು ಅಭೀಮುಖವಾಗಿ ಜೋಡಣೆಯಾಗಿರುತ್ತವೆ.ಎಲೆಗಳ ಅಂಚು ನಯ. ಹೂಗಳು ಸಾಮಾನ್ಯವಾಗಿ ದ್ವಿತೀಯ ಹಂಬುಗಳ ತುದಿಯಲ್ಲಿರುತ್ತವೆ.ವೊಗ್ಗು ಕಳಸದಾಕಾರ.

ಅಲ್ಲಮಂಡದ ಕೆಲವು ಪ್ರಭೇದಗಳು ; ೧.ಅಲ್ಲಮಂಡ ನಿರಿಫೋಲಿಯ-ತವರೂರು ದಕ್ಶಿನ ಅಮೇರಿಕ ಖಂಡದ ಬ್ರೆಜಿಲ್ ೨.ಅಲ್ಲಮಂಡ ನೊಬಿಲಿಸ್ ಅತ್ಯತ್ತಮ ಪ್ರಭೇದ ಎಂದು ಪರಿಗಣಿಸಲಾಗಿದೆ. ೩.ಅಲ್ಲಮಂಡ ಗ್ರಾಂಡಿಫ್ಲೋರ-ತವರೂರು ಬ್ರೆಜಿಲ್. ೪.ಅಲ್ಲಮಂಡ ಕ್ಯಾಥರ್ ಟಿಕ.