ಪುಟ:Mysore-University-Encyclopaedia-Vol-1-Part-2.pdf/೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅರ್ಥಾಶಾಸ್ತ್ರ,ಕೌಟಿಲ್ಯನ-ಅರ್ಥಾಲಂಕಾರ

ಸರ್ಕಾರದ ಆರ್ಥಿಕ ಚಟುವಟಿಕೆಗಳೂ ಹೊಣೆಗಾರಿಕೆಯೂ ಹೆಚ್ಚಿರುವ ಇಂದು ಸರ್ಕಾರದ ನೀತಿ ನಿರೂಪಕರೂ ಕಾರ್ಯನಿರ್ವಾಹಕರೂ ಅರ್ಥಶಾಸ್ತ್ರದ ಅದ್ಯಯನದಿಂದ ಪ್ರಯೋಜನ ಪಡೆಯುವರು.ಆರ್ಥಿಕ ನಿರ್ವಹಣೆಯಲ್ಲಿ ಭಾಗವಹಿಸಿರುವ ಉದ್ಯಮಿಗಳು ಕಾರ್ಮಿಕರು ಇತ್ಯಾದಿ ಪಂಗಡಗಳ ಆರ್ಥಿಕತೆಗೂ ತಮಗೂ ಸಂಬಂಧಪಟ್ಟ ಸಮಸ್ಯೆಗಳನ್ನು ನಿಷ್ಪಕ್ಷಪಾತ ರೀತಿಯಲ್ಲಿ ವಸ್ತು ನಿಷ್ಟೆಯಿಂದ ವಿವೇಚಿಸುವ ಶಕ್ತಿ ಬೆಳೆಸಿಕೊಳ್ಳಲು ಅರ್ಥಶಾಸ್ಥ್ರಜ್ನರು ಸಹಾಯ ಮಾಡಬಲ್ಲರು.

ಅರ್ಥಶಾಸ್ತ್ರ ಮತ್ತು ರಾಜ್ಯಶಾಸ್ತ್ರಗಳಿಗೆ ನಿಕಟ ಬಾಂಧವ್ಯವಿದೆ.ಆರ್ಥಿಕ ಚಟುವಟಿಕೆಗಳು ಒಂದು ನಿರ್ದಿಷ್ಟ ರಾಜಕೀಯ ಚೌಕಟ್ಟಿನೊಳಗೆ ನಡೆಯುವುದೂ ಆರ್ಥಿಕತೆಯಲ್ಲಿ ಸರ್ಕಾರಗಳ ಪಾತ್ರ ಮುಖ್ಯವಾಗಿರುವುದೂ ಇದರ ಕಾರಣ. ಅರ್ಥಶಾಸ್ತ್ರದ ನಿಯಮಗಳೂ ಅಧ್ಯಯನವೂ ಮಾನವನ ವರ್ತನೆಗೆ ಸಂಬಂಧಿಸಿದುದರಿಂದ ಈ ವರ್ತನೆಯನ್ನು ವೈಜ್ನಾನಿಕ ಮಾರ್ಗದಲ್ಲಿ ಅಧ್ಯಯನ ಮಾಡಿ ನಿರೂಪಿಸಲಾಗುವ ಮನಶ್ಶಾಸ್ತ್ರದ ಸಿದ್ಧಾಂತಗಳು ಅರ್ಥಶಾಸ್ತ್ರದಲ್ಲಿ ಬಹು ಉಪಯುಕ್ತ.ಆರ್ಥಿಕ ವ್ಯವಹಾರ ಮತ್ತು ಪ್ರಗತಿಗೂ ಜನರ ನೈತಿಕಮಟ್ಟಕ್ಕೂ ಸಂಬಂಧವಿದೆ ಎಂದು ಹೇಳುವುದಾದರೆ ಈ ನೈತಿಕ ಮೌಲ್ಯಗಳನ್ನು ಪರಿಶಿಲಿಸುವ ನೀತಿಶಾಸ್ತ್ರಕ್ಕೂ ಇರುವ ಸಂಬಂಧ ಹೊಂದಿದೆ.ಶಿಲ್ಪ ವಿಜ್ನಾನ ಆರ್ಥಿಕ ಪ್ರಗತಿಯ ಒಂದು ತಳಹದಿ.

ಇತ್ತಿಚಿನ ಬೆಳೆವಣಿಗೆ:೧೯೨೦ರಿಂದೀಚೆಗೆ ಅರ್ಥಶಾಸ್ತ್ರದಲ್ಲಾದ ಮಹತ್ತರ ಪ್ರಗತಿಯನ್ನು ನಾಲ್ಕು ಶೀರ್ಷಿಕೆಗಳಡಿಯಲ್ಲಿ ವಿಶ್ಲೇಷಿಸಬಹುದು.ಸುಖೀ ಅರ್ಥಶಾಸ್ತ್ರ ಏಕಸ್ವಾಮ್ಯಸ್ಪರ್ಧೆಯನ್ನು ತತ್ತ್ವ,ರಾಷ್ಟ್ರೀಯ ಆದಾಯ ನಿರ್ಧರಿಸುವ ತತ್ತ್ವ ಮತ್ತು ಉದ್ಯೋಗ,ಗಣಿತೀಯ ಅರ್ಥಶಾಸ್ತ್ರ ಈ ಬೆಳೆವಣಿಗೆಯ ಅಸ್ತಿಭಾರವನ್ನು ಮೊದಲಿನ ಕೆಲಸಗಳಲ್ಲಿ ಗುರುತಿಸಿಬಹುದು.ವೈಜ್ನಾನಿಕ ವಿಶ್ಲೇಷಣೆ ಮತ್ತು ಅದಕ್ಕೆ ದೊರೆತ ವಿಶೇಷ ಗಮನ ತೀರ ಇತ್ತಿಚಿನದು.

ಸುಖೀ ಅರ್ಥಶಾಸ್ತ್ರದ ಬಗ್ಗೆ ಇದು ಪೂರ್ಣ ಸತ್ಯ ೨೦ನೆಯ ಶತಮಾನದಲ್ಲಿ ಇದು ಪ್ರತ್ಯೇಕ ಮತ್ತು ಸವಿವರಣೆಯ ವಿಭಾಗದ ಇಲಾಖೆಯಾಗಿದೆ.ಆರ್ಥಿಕ ಧೋರಣೆಯ ತತ್ತ್ವವನ್ನು ಸುಖೀ ಸಮಾಜದ ಮೇಲೆ ಮಾಡುವ ಪರಿಣಾಮದ ಅನ್ವೇಷಣೆಯನ್ನು ನಡೆಸುತ್ತಿವೆ.ಸರ್ಕಾರದ ಧೋರಣೆಯ ವಿವಿಧ ಮಾರುಕಟ್ಟೆಗಳ ಮೇಲಾಗುವ ಪರಿಣಾಮ(ಏಕಸ್ವಾಮ್ಯ ಮತ್ತು ಸ್ಪರ್ಧೆ) ಆರ್ಥಿಕ ಸಂಪತ್ತಿನ ವಿತರಣೆ ಜನತೆಯ ಆಕಾಂಕ್ಷೆಗಳಿಗೆ ಅವುಗಳ ಸಂಬಂಧಗಳಿಗೆ ಇದು ಹೆಚ್ಚು ಗಮನವೀಯುತ್ತದೆ.ವಿವಿಧ ಮಾದರಿಯ ತೆರಿಗೆಗಳ ಪರಿಣಾಮ,ಅಮದು ತೆರಿಗೆ,ಬೆಲೆನಿಯಂತ್ರಣ,ಪಡಿತರ ರಾಷ್ಟ್ರೀಕರಣ,ಸಮಾಜವಾದ ಮೊದಲಾದ ವಿಷಯಗಳ ಬಗ್ಗೆಯೂ ಅಧ್ಯಯನ ನಡೆಸಲಾಗಿದೆ ಈ ದಾರಿಯಲ್ಲಿ ಆರ್ಥರ್ ಸಿಸಿಲ್ ಪಿಗೂನ ದಿ ಎಕನಾಮಿಕ್ಸ್ ಆಫ್ ವೆಲ್ ಫೇರ್(೧೯೨೦)ಪುಸ್ತಕ ವ್ಯವಸ್ಥಿವಾಗಿ ಮಾಡಿದ ಪ್ರಥಮ ಮತ್ತು ಮಹತ್ವವಾದ ಕೆಲಸ ೧೯೪೦ರ ಅನಂತರದ ಕೆಲಸಗಳೆಲ್ಲ ಸುಖೀ ಅರ್ಥಶಾಸ್ತ್ರದ ತಾತ್ತ್ವಿಕ ವಿಷಯಗಳನ್ನೊಳಗೊಂಡಿವೆ.ಅದರ ತೀರ ಇತ್ತಿಚಿಗೆ ಸರ್ಕಾರದ ಬಂಡವಾಳ ಹೂಡುವಿಕೆ ಧೋರಣೆಯನ್ನು ಕುರಿತು ಆಸಕ್ತಿ ಹುಟ್ಟಿದೆ.

ಅರ್ಥಶಾಸ್ತ್ರ ತತ್ತ್ವದಲ್ಲಿಯ ಎರಡನೇಯ ಮುಖ್ಯ ಬೆಳವಣೆಗೆ ಏಕಸ್ವಾಮ್ಯ ಸ್ಪರ್ಧೆಯ ತತ್ತ್ವ.ಇದು ಅಪ್ಪಟ ಸ್ಪರ್ಧೆ ಮತ್ತು ಅಪ್ಪಟ ಏಕಸ್ವಾಮ್ಯಕ್ಕೆ ಮಾರುಕಟ್ಟೆಯಲ್ಲಿ ಸಂಪೂರ್ಣವಾಗಿ ಮಾನ್ಯತೆ ನೀಡಿತು.ಈ ವಿಷಯದ ಬಗ್ಗೆ ಬಹಳ ಜನ ಅರ್ಥಶಾಸ್ತ್ರಜ್ನರು ತಮ್ಮ ಗಮನವಿತ್ತರು.ಇವರಲ್ಲಿ ಮುಖ್ಯವಾಗಿ ಜೆಕೊಟ್ ವಿನರ್,ರೋಯ್ ಎಫ್ ಹೆರೊಡ್ ಮತ್ತು ಫ್ರೆಡ್ರಿಕ್ ಝೀತನ್ ಇವರುಗಳನ್ನು ಹೆಸರಿಸಬಹುದು.ಈ ಸಿದ್ಧಾಂತರ ಪ್ರಕಾರ ಪ್ರತಿಯೊಬ್ಬ ವ್ಯಾಪರಿಯೂ ತನ್ನ ಸರಕುಗಳನ್ನೊಯ್ಯುವಾಗ ಗ್ರಾಹಕನನ್ನು ದೃಷ್ಟಿಯಲ್ಲಿಟ್ಟು ಕೊಳ್ಳುತ್ತಾನೆ.ಇದರಿಂದ ವಾಪರಿಗೆ ಆಂಶಿಕ ಏಕಸ್ವಾಮ್ಯ ಪಡೆಯಲು ಅನಕೂಲವಾಗುತ್ತದೆ.ಬೃಹತ್ ಉದ್ದಿಮೆಗಳು ಅಲ್ಪ ಸಂಖ್ಯೆಯಲ್ಲಿರುವ ಒಂದು ಕೈಗಾರಿಕಾ ಕ್ಷೇತ್ರದಲ್ಲಿನ ಅಲ್ಪಾಧಿಕಾರವನ್ನು(ಅಲಿಗೊಪೊಲಿ)ವಿಶ್ಲೆಷಿಸಲಾಯಿತು.ಏಕಸ್ವಾಮ್ಯ ಮತ್ತು ಅಲ್ಪಾಧಿಕಾರದಲ್ಲಿರುವ ವ್ಯತ್ಯಾಸವನ್ನು ಇದು ತೋರಿಸಿತು.ಏಕಾಧಿಕಾರವಿರುವಲ್ಲಿ ಸಾಮಗ್ರಿಯನ್ನು ವಿವಿಧ ಬೆಲೆಗಳಿಗೆ ಮಾರಲಾಗುತ್ತಿದ್ದು,ಏಕಕ್ರಯವಿರುವಲ್ಲಿ(ಮೊನೊಪ್ಸೊನಿ)ಒಬ್ಬನೆ ಖರೀದಿದಾರನಿರುತ್ತಾನೆ.ಈ ವಿಶ್ಲೇಷಣೆ ವಿಶೇಷ ಆಸಕ್ತಿಯನ್ನು ಪ್ರಚೋದಿಸಿತು.ಆದರೆ ಇವರ ದಾರಿಯಲ್ಲಿರುವ ಅನೇಕ ಜಟಿಲ ಸಮಸ್ಯೆಗಳು ಈ ವಿಶ್ಲೇಷ್ಣೆಯ ಪ್ರಗತಿಯ ಪ್ರತಿಬಂಧಕವಾಗಿದೆ.

ಆದಾಯನಿರ್ಧಾರತತ್ತ್ವ ಮೂರನೆಯ ಪಮುಖ ಬೆಳೆವಣೆಗೆ.ಜಾನ್ ಮೇಯ್ ನಾರ್ಡ್ ಕೀನ್ಸ್ ನ ಹೆಸರು ಇದಕ್ಕೆ ಸಂಬಂಧಿಸಿದೆ.ದಿ ಜನರಲ್ ಥಿಯೊರಿ ಆಫ್ ಎಂಪ್ಲಾಯ್ಮೆಂಟ್,ಇಂಟ್ರೆಸ್ಟ್ ಅಂಡ್ ಮನಿ(೧೯೩೬)ಎಂಬ ಇವನ ಪುಸ್ತಕದಲ್ಲಿ ಆದಾಯನಿರ್ಧಾರತತ್ತ್ವ ಒಬ್ಬನ ಕೆಲಸಕ್ಕೆ ಸಂಬಂಧಿಸಿದ್ದು ಎಂದಿದ್ದಾನೆ.ಈತನ ವಿಶ್ಲೇಷಣೆಯ ಪ್ರಕಾರ ಉತ್ಪಾದಕರ ಮತ್ತು ಗ್ರಾಹಕರ ವಸ್ತುಗಳಿರುವ ಪರಿಣಾಮಕಾರಿ ಬೇಡಿಕೆ ಕೆಲವು ವೇಳೆ ದೇಶದ ಉತ್ಪಾದನಾ ಸಾಮರ್ಥ್ಯಕ್ಕಿಂತ ಕಡಿಮೆಯಾಗಬಹುದು ಅಥವಾ ಹೆಚ್ಚಾಗಬಹುದು.ಮೊದಲನೆಯದರಲ್ಲಿ ನಿರುದ್ಯೋಗ ಸಮಸ್ಯೆ ಮತ್ತು ಹಣದುಬ್ಬರ ಇವು ಕಂಡುಬರುತ್ತವೆ.ಎರಡೆನೆಯರು ಆರ್ಥಿಕ ಕುಸಿತಕ್ಕೆ(ಡಿಪ್ರೆಷನ್)ಮಾರ್ಗ ಮಾಡಿಕೊಡುತ್ತದೆ.ಪರಿಣಾಮಕಾರಿ ಬೇಡಿಕೆಯನ್ನು ನಿರ್ಧರಿಸುವುದರ ಬಗ್ಗೆ ಅವನು ಚರ್ಚಿಸುತ್ತಾನೆ.ಒಟ್ಟಾರೆ ಗ್ರಾಹಕನ ಬೇಡಿಕೆಯ ನಿರ್ಧಾರ ರಾಷ್ಟ್ರೀಯ ಆದಾಯವನ್ನವಲಂಬಿಸಿದೆ.ಅಂದರೆ ಗ್ರಾಹಕನ ಕೊಂಡುಕೊಳ್ಳುವ ಶಕ್ತಿಯನ್ನವಲಂಬಿಸಿದೆ.ಉತ್ಪಾದಕರ ಸಾಮಗ್ರಿಗಿರುವ ಬೇಡಿಕೆ ಮುಖ್ಯವಾಗಿ ಲಾಭ ಮತ್ತು ಸರಕುಗಳನ್ನು ಕೊಂಡುಕೊಳ್ಳಲು ಅವರು ವಿನಿಯೊಗಿಸುವ ಬಂಡವಾಳ ಹೂಡಿಕೆ ಜಮಾ-ಖರ್ಚು ಇವುಗಳನ್ನವಲಂಬಿಸಿದೆ.ಬಡ್ಡಿಯ ದರ ಹೆಚ್ಚಾದರೆ ನೂತನ ಯಂತ್ರ-ಸಾಮಗ್ರಿಗಳನ್ನು ಸ್ಥಾಪಿಸಲು ಹಣ ಪಡೆಯುವುದು ಅಸಾಧ್ಯ.ಹೆಚ್ಚಿನ ಬಡ್ಡಿದರ ಉತ್ಪನ್ನದ ಸಾಮಗ್ರಿಗಳ ಬೇಡಿಕೆಯನ್ನು ಕಡಿಮೆ ಮಾಡುತ್ತದೆ.ಇದು ಒಮ್ಮೊಮ್ಮೆ ನಿರುದ್ಯೋಗ,ಹಣದುಬ್ಬರಗಳನ್ನು ತೆಡೆಗಟ್ಟಲು ವಿವಿಧ ಮಾರ್ಗಗಳನ್ನು ಸೂಚಿಸುತ್ತದೆ.ಉದಾಹರಣೆ,ಕುಸಿತದ ಕಾಲದಲ್ಲಿ ಈ ಕೆಳಗಿನ ಕ್ರಮಗಳನ್ನು ಕೈಗೊಳ್ಳಬಹುದು;ಹಣದ ಸರಬರಾಜು ಕಡಿಮೆ ಮಾಡುವುದು;ಬಡ್ಡಿ ದರವನ್ನು ಹೆಚ್ಚಿಸಿ ಉತ್ಪಾದಕರ ವಸ್ತುಗಳಿಗೆ ಬೇಡಿಕೆ ಕಡಿಮೆ ಮಾಡುವುದು;ಸರ್ಕಾರಿ ವೆಚ್ಚವನ್ನು ಕಡಿಮೆಮಾಡಿ ಅದರಿಂದ ಸರಕುಗಳಿಗಿರುವ ಬೇಡಿಕೆ ತಗ್ಗಿಸುವುದು;ತೆರಿಗೆಗಳನ್ನು ಏರಿಸಿ ಅಥವಾ ಸರಕಾರಿ ಭದ್ರತಾ ಟೇವಣಿ ಸಾರ್ವಜನಿಕರಿಗೆ ನೀಡಿ ಗ್ರಾಹಕರ ಕೊಂಡುಕೊಳ್ಳುವ ಸಾಮರ್ಥ್ಯ ಕಡಿಮೆ ಮಾಡುವುದು.ಇವೆಲ್ಲ ತಂತ್ರಗಳಿಗೂ ಅಡೆತಡೆಗಳಿರುವುದಿಲ್ಲ.ಆದರೆ ನಿರುದ್ಯೋಗ ಮತ್ತು ಹಣದುಬ್ಬರಗಳನ್ನು ತುಂಬಾ ಗಂಭೀರವಾಗಿದ್ದರೆ ಮಾತ್ರ ಇಂಥ ಕ್ರಮಕೈಗೊಳ್ಳುವುದು ಉಚಿತ.ಇಂಥ ಧೋರಣೆಗಳು ಸರ್ಕಾರಕ್ಕೆ ಯುದ್ಧ ಕಾಲದಲ್ಲಿ ಹಣದಬ್ಬರ ಅಥವಾ ನಿರುದ್ಯೋಗವನ್ನು ತಡೆಗಟ್ಟಲು ಸಹಕಾರಿ,ಸಂಬಳದಲ್ಲಿ ಖೋತಾ ಮಾಡುವುದು ನಿರುದ್ಯೋಗಕ್ಕೆ ಪರಿಣಾಮಕಾರಿಯಾದ ಪರಿಹಾರವಲ್ಲವೆಂದು ಕೀನ್ಸ್ ಹೇಳಿದ್ದಾರೆ.ಪ್ರಾರಂಭದಲ್ಲಿ ಉತ್ಪಾದನಾ ವೆಚ್ಛದಲ್ಲಿ ಇಳಿತವನ್ನು ತೋರಿಸಿದರೂ ಇದು ಜನಸಾಮಾನ್ಯರ ಕೊಂಡುಕೊಳ್ಳುವ ಶಕ್ತಿ ಕಡಿಮೆ ಮಾಡುತ್ತದೆ.

ಗಣಿತೀಯ ಅರ್ಥಶಾಸ್ತ್ರದ ವಿಸ್ತರಣೆ ನಾಲ್ಕನೆಯ ಮಹತ್ತರ ಕಲಾಶಾಸ್ತ್ರದ ವಿಸ್ತೃತ ಅನ್ವಯ ಅರ್ಥಶಾಸ್ತ್ರದ ಹಲವಾರು ಸಮಸ್ಯೆಗಳನ್ನು ಪರಿಮಾಣೀಕರಿಸಿ ನಿರಪೇಕ್ಷವಾದ ವಿಶ್ಲೇಷಣೆಯನ್ನು ಸಾಧ್ಯವಾಗಿಸಿದೆ.ಇತ್ತೀಚಿಗೆ ಆರ್ಥಿಕ ಚಲನಶಾಸ್ತ್ರ,ಚಟುವಟಿಕೆ ವಿಶ್ಲೇಷಣೆಶಾಸ್ತ್ರ,ಕ್ರೀಡಾಸಿದ್ದಾಂತ(ಗೇಮ್ ಥಿಯೋರಿ)ಇವು ಸ್ವತಂತ್ರ ಶಾಖೆಗಳಾಗಿ ಬೆಳೆದು ಅರ್ಥ ಮತ್ತು ಗಣಿತ ವಿಜ್ನಾನಗಳ ನಿಕಟ ಮತ್ತು ನಿರಂತರ ಬಾಂಧವ್ಯಗಳನ್ನು ಸ್ಥಿರಗೊಳಿಸಿವೆ.

ಅರ್ಥಶಾಸ್ತ್ರ ವ್ಯಕ್ತಿಯ,ಸಮಾಜದ,ಸರ್ಕಾರದ,ಅಂತರಾಷ್ಟ್ರೀಯ ವ್ಯವಹಾರದ ಪ್ರತಿ ಚಟುವಟಿಕೆಯಲ್ಲಿಯೂ ಹಾಸ್ಯ್ಹೊಕ್ಕಾಗಿದೆ.ನೋಡಿ ಹಣ,ಬ್ಯಾಂಕುಗಳು,ವ್ಯಾಪಾರ ಸಂಸ್ಥೆಗಳು,ವಿಮೆ,ಸಹಕಾರ ಸಂಘಗಳು,ರಾಷ್ಟ್ರೀಯ ಅಯವ್ಯಯ,ಅಂತರಾಷ್ಟ್ರೀಯ ಆರ್ಥಿಕ ಮಂಡಿಳಿ,ಅಂತರಾಷ್ಟ್ರೀಯ ದ್ರವ್ಯನಿಧಿ,ಅಂತರಾಷ್ಟ್ರೀಯ ಶೀರುವೆ ಬ್ಯಾಂಕು

ಅರ್ಥಶಾಸ್ತ್ರ,ಕೌಟಿಲ್ಯನ:ನೋಡಿ-ಕೌಟಿಲ್ಯ ಅರ್ಥಾಪತ್ತಿ:ಜ್ನಾನದ ಪ್ರಮಾಣಗಳಲ್ಲಿ ಒಂದು ದತ್ತವಾದ ಎರಡು ಅಂಶಗಳಿಂದ ಸಿದ್ಧಿಸುವ ಮೂರನೆಯ ಅಂಶವನ್ನು ಗ್ರಹಿಸಬಹುದು.ಇದನ್ನು ಎಲ್ಲ ಭಾರತೀಯ ದಾರ್ಶನಿಕರೂ ಅಂಗೀಕರಿಸುವುದಿಲ್ಲ.ಇದು ಪೂರ್ವ ಮೀಮಾಂಸಾ ದರ್ಶನಕ್ಕೂ ಪ್ರಮಾಣದ ವಿಚಾರದಲ್ಲಿ ಮಿಮಾಂಸಕರನ್ನೇ ಅನುಸರಿಸುವ ಅದ್ವೈತಕ್ಕೂ ವಿಶಿಷ್ಟವಾದ ಪ್ರಮಾಣ.ಇದನ್ನು ವಿವರಿಸಲು ಸಾಮಾನ್ಯವಾಗಿ ಕೊಡುವ ಉದಾಹರಣೆಗಳು ಇವೂ ದೇವದತ್ತ ಬದುಕಿದ್ದಾನೆ ಮತ್ತು ಆತ ಮನೆಯಲ್ಲಿ ಇಲ್ಲ ಎಂಬ ಎರಡು ನಿಶ್ಚಿತವಾದ ಪ್ರತಿಜ್ನೆಗಳಿಂದ ದೇವದತ್ತ ಮನೆಯ ಹೊರಗೆ ಇರಬೇಕು ಎಂದು ತಿಳಿಯಬಹುದು.ದೇವದತ್ತ ಪುಷ್ಟನಾಗಿದ್ದಾನೆ ಮತ್ತು ಆತ ಹಗಲು ಊಟ ಮಾಡುವುದಿಲ್ಲ ಎಂಬ ಎರಡು ನಿಶ್ಚಿತ ಪ್ರತಿಜ್ನೆಗಳು ತಿಳಿದಿದ್ದರೆ,ಆ ಪ್ರತಿಜ್ನೆಗಳಿಂದ ದೇವದತ್ತ ರಾತ್ರಿ ಊಟ ಮಾಡುತ್ತಿರಬೇಕು ಎಂದು ತಿಳಿಯಬಹುದು.ಈ ತಿಳಿವು ಹುಟ್ಟಿಸುವ ಪ್ರಮಾಣವೇ ಅರ್ಥಾಪತ್ತಿ.

ಅರ್ಥಾಲಂಕಾರ:ಶಬ್ಧಾಲಂಕಾರಗಳು ಕವಿತಾವನಿತೆಗೆ ಶರೀರದ ಬಾಹ್ಯ ಅಲಂಕಾರದಂತಿದ್ದರೆ,ಇವನ್ನು ಇನ್ನು ಅಭ್ಯಂತರವಾದ ಲಕ್ಷಣಗಳು ಮತ್ತು ಹಾವಭಾವಗಳಂತೆನ್ನಬಹುದು.ಅಲಂಕಾರವಿಲ್ಲದ ವಾಣಿ ವಿಧವೆಯೇ ಸರಿ ಎಂಬ ಉಕ್ತಿ ಸಂಸ್ಕ್ರತ ಲಾಕ್ಷಣಿಕರಿಗಿದ್ದ ಅಲಂಕಾರ ವ್ಯಾಮೋಹಕ್ಕೆ ಸಾಕ್ಷಿಯಾಗಿದೆ. ಮೊದ ಮೊದಲು ಇವುಗಳ ಸಂಖ್ಯೆ ಸಣ್ಣದಾಗಿತ್ತು.ಭರತನ ನಾಟ್ಯ ಶಾಸ್ತ್ರದಲ್ಲಿ ಉಪಮಾ,ರೂಪಕ,ದೀಪಕಗಳೆಂಬ ಮೂರೇ ನಿರ್ಧಿಷ್ಟವಾಗಿವೆ.ಸಾದೃಶ್ಯವೇ ಇವಕ್ಕೆಲ್ಲ ಮೂಲ.ಕವಿಪ್ರತಿಭೆ ವಸ್ತುಗಳನ್ನು ವರ್ಣಿಸ ಹೊರಟಾಗ ತತ್ಸದೃಶ್ಯವಾದ್ದನ್ನು ನಾನಾ ಭಂಗಿಗಳಿಂದ ತಂದು ತೋರಿಸಬಹುದು.ಹೀಗೆ ಸಕಲ ಅರ್ಥಾಲಂಕಾರಗಳಿಗೂ ಉಪಮಾತತ್ವವ್ವೇ ಮೂಲಕಾರಣವೆಂದು ವಾಮನ.ಅಪ್ಪಯ್ಯಧೀಕ್ಷಿತ ಮುಂತಾದವರು ನಿರ್ಣಯಿಸಿದ್ದಾರೆ.ನಿರೂಪಣೆಯಲ್ಲಿ ಉಪಮಾನೋಪಮೇಯಗಳ ಭೇಧವನ್ನೋ ಅಭೇಧವನ್ನೋ ಭೇಧಾಭೇಧವನ್ನೋ