ಪುಟ:Mysore-University-Encyclopaedia-Vol-1-Part-2.pdf/೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಶ್ರಗ -ಅಶ್ಲೀಲ

 ಹೂರಾಶಿಗಳು ಚೆಲುವಾಗಿ ಕಾಣುತ್ತವೆ.ಹೂವು ಪತ್ರದ (ಕ್ಯಾಲಿಕ್ಸ್) ಕೆಳಗೆ ಕೆಂಪಾದ ಉಪಪತ್ರ 

(ಎಪಿಕೇಲಿಕ್ಸ್) ಇದೆ. ಹೂ ಬಿಡುವ ಕಾಲ ಜನವರಿಯಿಂದ ಮೇ ತಿಂಗಳವರೆಗೆ.ಹೂವಿನಲ್ಲಿ ಮಧುರವಾದ ಸುಗಂಧವೂ ಉಂಟು.

 ಬೀಜಗಳನ್ನು ನೆಟ್ಟು ಸಸ್ಯಗಳನ್ನು ಪಡೆಯಬಹುದು.ಎಳೆಯ ಗಿಡಕ್ಕೆ ನೆರಳು ಅಗತ್ಯ.ಬಿಸಿಲು ಹೆಚ್ಚಾಗಿದ್ದರೆ ಗಿಡಗಳು ಮುರುಟಿಕೊಳ್ಳುವುವು.
 ಮರದ ತೊಗಟೆಯಲ್ಲಿ ದೊರೆಯುವ ಗ್ಯಾಲಿಕ್ ಆಮ್ಲ ಔಷಧಿಗಳಿಗೆ ಉಪಯೋಗವಾಗುತ್ತದೆ.ಹೂವನ್ನು ಇದೇ ರೀತಿ ಬಳಸುವುದುಂಟು.ಶ್ರೀಲಂಕದಲ್ಲಿ ಈ ಮರವನ್ನುಮನೆ ಕಟ್ಟುವ ಮರಮುಟ್ಟುಗಳಿಗಾಗಿ ಉಪಯೋಗಿಸುತ್ತಾರೆ.ಹಿಂದೂಗಳೂ ಬೌದ್ಧರೂ ಈ ಮರವನ್ನು ದೇವಾಲಯಗಳ ಸುತ್ತಲೂ ಬಳೆಸುವುದುಂಟು.ಇದರ ಹೂಗಳು ಪೂಜಗೆ ಒದಗುತ್ತವೆ.ಈ ವೃಕ್ಷವನ್ನು ಇತ್ತೀಚೆಗೆ ಉದ್ಯಾನಗಳಲ್ಲಿ ಅಂದಕ್ಕಾಗಿ ಬೆಳೆಸುತ್ತಾರೆ.ಭಾರತದ ಪ್ರಾಚೀನ ಸಾಹಿತ್ಯದಲ್ಲಿ ಅಶೋಕವೃಕ್ಷಕ್ಕೆ ಕೊಟ್ಟಿರುವ ಸ್ಥಾನ ಬಹಳ ಮುಖ್ಯವಾದುದು.ರಮಾಯಣ,ಮಹಾಭಾರತ ಕಾಲದಿಂದಲೂ ಜನಪ್ರಿಯ ವೃಕ್ಷ.ಈ ವೃಕ್ಷಗಳಿಂದ ಕೂಡಿದ ವನದಲ್ಲಿ ರವಣ ಸೀತೆಯನ್ನು ಆವಿತಿ (ಅಡಗಿಸಿ)ಟ್ಟಿದ್ದನೆಂದು ಹೇಳುತ್ತಾರೆ ಕಾಳಿದಾಸನ ಕಾಲದಲ್ಲಂತೂ ಈ ಮರಕ್ಕೆ ದೊರೆತೆ ಗೌರವ ಅಪಾರ. ವಸಂತಕಾಲದಲ್ಲಿ ಒಂದು ನಿಶ್ಚಿತದಿನ ಸುಂದರಿಯೊಬ್ಬಳು ತನ್ನ ಎಡೆಗಾಲಿನಿಂದ ಮೃದುವಾಗಿ ಅಶೋಕವೃಕ್ಷವನ್ನು ಒದ್ದರೆ ಆ ಮರದಲ್ಲಿ ಗರ್ಭಾಂಕುರವಾಗುತ್ತಿತ್ತೆಂದು ಭೋಜರಾಜನ ಸರಸ್ವತೀ ಕಂಠಾಭರಣ, ಕಾಳಿದಾಸನ ಮಾಲವಿಕಾಗ್ನೀಮಿತ್ರ ಹರ್ಷನ ರತ್ನಾವಳೀ ಗ್ರಂಥಗಳಲ್ಲಿ  ಹೇಳಲಾಗಿದೆ.ಇದನ್ನು ದೊಹದ ಕ್ರಿಯೆಯೆಂದು ಬಣ್ಣಿಸಲಾಗಿದೆ.ಚೈತ್ರ ಶುಕ್ಲ ಅಷ್ಟಮಿಯಂದು ವ್ರತಮಾಡಿ ಅಶೋಕದ ಎಂಟು ಎಲೆಗಳನ್ನು ತಿಂದಲ್ಲಿ ಸ್ತ್ರೀಯರ ಸಂತಾನ ಪ್ರಾಪ್ತಿಯಾಗುವುದೆಂಬ ನಂಬಿಕೆಯಿದೆ.
  
   ಅಶ್ರಗ : ಒಂದು ಜ್ಯಾಮಿತೀಯ ಆಕೃತಿ (ಪ್ರಿಸ್ ಮ್). ಎರಡು ಸರ್ವಾಂತರ ಸರ್ವಸಮ ಬಹುಭುಜಗಳು ಇದರ ಆಧಾರ ತಲಗಳು (ಬೇಸಸ್) . ಇವುಗಳನ್ನು ಸಮರೂಪವಾಗಿಯೂ (ಸಿಮಿಲರ್ಲಿ) ಪರಸ್ಪರ ಸಮಾನಾಂತರವಾಗಿಯೂ ಭಿನ್ನ ಸಮತಲಗಳಲ್ಲಿ ಇಡಲಾಗಿದೆ.
  ತಲಗಳ ಅನುರೂಪ ಶೃಂಗಗಳನ್ನು ಸರಳರೇಕೆಗಳಿಂದ ಜೋಡಿಸಿದರೆ ಆರಶ್ರಕದ ಫಲಕಗಳು ದೊರೆಯುತ್ತವೆ. ಆದ್ದರಿಂದ ತಲಗಳನ್ನುಳಿದ ಈ ಫಲಕಗಳನ್ನು ಪಾರ್ಶ್ವಫಲಕಗಳೆಂದು ಕರೆಯುವುದುಂಟು. ಪಾರ್ಶ್ವಫಲಕಗಳು ಸಮಾಂತರ ಚತುರ್ಭುಜಗಳು. ಇಂಥ ಎರಡು ಫಲಕಗಳು ಸಂಧಿಸುವ ರೇಖೆ ಅಥವಾ ತಲಗಳ ಅನುರೂಪ ಶೃಂಗಗಳನ್ನು ಜೋಡಿಸುವ ರೇಖೆಯ ಹೆಸರು ಪಾರ್ಶ್ವ ಅಂಚು ( ಲ್ಯಾಟರಲ್ ಎಡ್ಜ್).
  ಅಶ್ರಗದ ಎರಡು ರುಪಗಳು:ಪಾರ್ಶ್ವ ಅಂಚುಗಳು ಪರಸ್ಪರ ಸಮಾನ ಮತ್ತು ಸಮಾಂತರವಾಗಿದೆ.ತಲಗಳು ತ್ರಿಕೋನಗಳಾದಾಗ ತ್ರಿಕೋಣೀಯ ಅಶ್ರಗವೂ ಚತುಷ್ಕೋನಗಳಾದಾಗ ಚತುಷ್ಕೋನಾಶ್ರಗವೂ ಇತ್ಯಾದಿ ದೊರೆಯುತ್ತವೆ. ಸಮಾಂತರ ಷಟ್ ಫಲಕ (ಪ್ಯಾರಲ್ಲಲೇಪೈಪಡ್) ಒಂದು ಅಶ್ರಗ. ಇಲ್ಲಿ ಯಾವದೇ ಒಂದು ಜೊತೆ  
  ಎದುರು ಫಲಕಗಳು ತಲಗಳಾಗುತ್ತವೆ. ಒಂದು ಅಶ್ರಗದ ತಲಗಳು ಕ್ರಮಬಹುಭುಜಗಳಾದರೆ (ರೆಗ್ಯುಲರ್ ಪಾಲಿಗನ್ಸ್-ಎಲ್ಲ ಭುಜಗಳೂ ಸಮಾನ,ಎಲ್ಲ ಕೋನಗಳೂ ಸಮಾನ).ಆ ಅಶ್ರಗ ಕ್ರಮಾಶ್ರಗವಾಗುವುದು (ರೆಗ್ಯುಲರ್ ಪ್ರಿಸ್ ಮ್).ಇದ್ದನ್ನು ಪಟ್ಟಕವೆಂದು ಕರೆಯುವುದು ರೂದಿಯಲ್ಲಿದೆ. ವಿಶೇಷವಾಗಿ ದ್ಯುತಿ ವಿಗ್ನ್ಯನದಲ್ಲಿ ಕಿರಣ ಪಥವನ್ನು ವಿಚಲಿಸಲು, ಬಿಳಿ ಬೆಳಕನ್ನು ಗೋಚರ ರೋಹಿತವಾಗಿ ಪ್ರಸರಿಸಲು ಅಥವಾ ತಲೆಕೆಳಗಾದ ಪ್ರತಿಬಿಂಬ ಸ್ಥಾಪಿಸಲು ವಿವಿಧ ರೀತಿಯಲ್ಲಿ ತಯಾರಿಸಿದ ಅಶ್ರಗದ ಬಳಕೆ ಇದೆ   (ಬಿ.ಬಿ.ಬಿ)

ಅಶ್ರಗೀಯೋಕ್ತಿ : ಭಾಸ್ಕರಾಚಾರ್ಯನ (ಸು. ೧೧೫೦) ಲೀಲಾವತಿ ಗ್ರಂಥದ ಖಾತವ್ಯವಹಾರವೆಂಬ ಅಧ್ಯಾಯದಲ್ಲಿ ಕಂಡುಬರುವ ಒಂದು ಸೂತ್ರ (ಪ್ರಿಸ್ ಮಾಯ್ ಡಲ್ ಫಾರ್ಮ್ಯುಲ). ಸೂಚೀಮುಕಾಕೃತಿಯ (ಸಿಲಿಂಡರ್) ಮುಂಡದ (ಫ್ರಸ್ಪಮ್) ಘನಗಾತ್ರಕ್ಕೆ ಭಾಸ್ಕರಚಾರ್ಯಾ ಕೊಟ್ಟಿರುವ ಸೂತ್ರ : ಮುಂಡದ ಮೇಲುಮುಖ ಮತ್ತು ಕೆಳಮುಖಗಳ ಕ್ಷೇತ್ರಫಲಗಳನ್ನೂ ಬಾಹುಗಳ ಮೊತ್ತದಿಂದ ಗುಣಿಸಿ ಬರುವ ಕ್ಷೇತ್ರಫಲವನ್ನೂ ಸೇರಿಸಿ ೬ ರಿಂದ ಭಾಗಿಸಿ ಎತ್ತರದಿಂದ ಗುಣಿಸಿದರೆ ಘನಗಾತ್ರ ಬರುತ್ತದೆ (ಲೀಲಾವತಿ ಶ್ಲೋ.೨೨೧). ಎಂದರೆ ಮೇಲುಮುಖ ಮತ್ತು ಕೆಳಮುಖಗಳು a,b,a',b' ಭುಜಗಳಿಗಿರುವಾ ಆಯಾಕೃತಿಗಳಾಗಿದ್ದು,h ಮುಂಡದ ಎತ್ತರವಾಗಿದ್ದರೆ ಮುಂಡದ ಘನಗಾತ್ರ

   ಇದೇ ಅಶ್ರಗೀಯೋಕ್ತಿ.
   ಈ ವಿಷಯ ಬಹಳ ಪ್ರಾಚೀನವಾದ ಚರಿತ್ರೆಯನೋಳಗೊಂಡಿದೆ.ಪ್ರಶ.ಪೂ ಸು.೧೮೦೦ರಲ್ಲಿ ಈ ಸೂತ್ರ ಈಜಿಪ್ಟ್ ಗಣಿತಗ್ನ್ಯರಿಗೆ ತಿಳಿದಿತ್ತು. ಇದೇ ವಿಚಾರ ಚೀನ ದೇಶದ ಗಣಿತದಲ್ಲಿಯೂ ಭಾರತದ ಬ್ರಹ್ಮಗುಪ್ತನ ಗ್ರಂಥದಲ್ಲಿಯೂ (೬೨೮) ಕೊಟ್ಟಿದೆ ಎಂಬ ವಿಚಾರ ಗಮನಿಸಿದರೆ ಆಗಿನ ಕಾಲದಲ್ಲಿಯೂ ದೇಶ ದೇಶಗಳ ನಡುವೆ ವಿಗ್ನ್ಯಾನಸಂಪರ್ಕ ಇದ್ದಿರಬಹುದೇ, ಇಲ್ಲವೇ ಪ್ರತಿಯೊಂದು ದೇಶದಲ್ಲೂ ಇಂಥ ವಿಚಾರಗಳನ್ನು ಪ್ರತ್ಯೇಕವಾಗಿ ಕಂಡುಹಿಡಿದರೇ ಎಂದು ಮುಂತಾದ ಪ್ರಶ್ನೆಗಳು ಬರುತ್ತವೆ.
   ಭಾಸ್ಕರಾಚಾರ್ಯನ ಉದಹರಣೆ ಹೀಗಿದೆ : ಒಂದು ಬಾವಿ ಮೇಲುಗಡೆ ೧೨ ಮೊಳ ಉದ್ದ, ೧೦ ಮೊಳ ಅಗಲವುಳ್ಳದ್ದಾಗಿಯೂ ತಳದಲ್ಲಿ ಇದರ ಅರ್ಧದಷ್ಟೂ ಇದೆ.ಬಾವಿಯ ಆಳ ೭ ಮೊಳಗಳಿದ್ದರೆ ಬಾವಿಯನ್ನು ಅಗಿದಾಗ ಎಷ್ಟು ಮಣ್ಣು ಹೊರಬಿದ್ದಿತು?
  ಉತ್ತರ+೭/೬[೧೨*೧೦+೬*೫+(೧೨+೬)(೧೦+೫)]=೪೯೦ ಘನಮೊಳಗಳು.
                                        (ಸಿ.ಎನ್.ಎಸ್.)
  h/6[ab+ab+(a+a)(b+b)]
  
  ಅಶ್ಲೀಲ : ಕೆಲವು ವಸ್ತು ಅಥವಾ ವಿಷಯಗಳನ್ನು ನೋಡುವುದರಿಂದ, ಕೇಳುವುದರಿಂದ, ಓದುವುದರಿಂದ ಅಪಕ್ವ ಮತ್ತು ಅಪ್ರಬುದ್ಧ ಮನಸ್ಸಿನ ಮೇಲೆ ಕೆಟ್ಟ ಪರಿಣಾಮವಾಗಿ ಅನೀತಿಗೆ ಪ್ರಚೋದನೆಯುಂಟಾಗುತ್ತದೋ ಅಂಥ ವಸ್ತು ಅಥವಾ ವಿಷಯ ಅಶ್ಲೀಲ ಎನ್ನಿಸಿಕೊಳ್ಳುತ್ತದೆ. ಅಶ್ಲೀಲವಾದುದನ್ನು ಬರೆಯುವುದು, ಪ್ರಕಟಿಸುವುದು, ಪ್ರದರ್ಶಿಸುವುದು ಶಿಕ್ಷಾರ್ಹವೆಂದು ಪ್ರಪಂಚದ ಎಲ್ಲ ದೇಶಗಳೂ ಶಾಸನ ಮಾಡಿವೆಯಾದರೂ ಯಾವ ದೇಶದ ಶಾಸನದಲ್ಲೂ ಅಶ್ಲೀಲ ಎಂದರೆ ಏನೆಂಬುದನ್ನು ನಿರ್ದಿಷ್ಟವಾಗಿ ಹೇಳಿಲ್ಲ.ನ್ಯಾಯಾಲಯಗಳು ತಮ್ಮ ತೀರ್ಪುಗಳಲ್ಲಿ ಕೊಟ್ಟ ಅಭಿಪ್ರಾಯಗಳನ್ನು ಕ್ರೋಡೀಕರಿಸಿ ಅಶ್ಲೀಲ ಎಂಬ ಪದದ ಅರ್ಥವನ್ನು ಗ್ರಹಿಸಬಹುದು. ಹಾಗೆಯೇ ನ್ಯಾಯಾಲಯಗಳು ಕೊಟ್ಟ ತೀರ್ಪುಗಳನ್ನು ಅವಲೋಕಿಸಿದರೆ ಅಶ್ಲೀಲ ಎಂಬುದು ಲೈಂಗಿಕ ವಿಚಾರಗಳಿಗೇ ಬಹುಮಟ್ಟಿಗೆ ಸಂಬಂಧಿಸಿರುವುದಾಗಿ ತೋರುತ್ತದೆ. ಕಾಮಪ್ರಚೋದನೆ ಮಾಡುವಂಥೆ ವಸ್ತು ಅಥವಾ ಸಂಗತಿಗಳೆಗೆ ಬಹುತೇಕ ಅಶ್ಲೀಲ ಎಂಬುದು ಈಗ ಪರಿಮಿತವಾಗಿರುವಂತೆ ಕಾಣುತ್ತದೆ. ಪರಿಣಾಮವಾಗಿ ಅಮೆರಿಕದ ಸಂಯುಕ್ತಸಂಸ್ಥಾನದ ಜಾರ್ಜಿಯ ನ್ಯೂಹ್ಯಾಂಪ್ ಷ್ಕೈರ್, ನ್ಯೂಮೆಕ್ಸಿಕೊ ಮತ್ತು ಉತ್ತರ ಕೆರೋಲಿನ-ಈ ನಾಲ್ಕು ರಾಜ್ಯಗಳ ಹೊರತಾಗಿ ಎಲ್ಲ ರಾಜ್ಯ ಸರ್ಕಾರಗಳೂ ಸಂಯುಕ್ತಸಂಸ್ಥಾನದ ಫೆಡರಲ್ ಸರ್ಕಾರವೂ ಸಂತಾನನಿರೋಧಪದ್ಧತಿಗಳನ್ನು ಪ್ರಚುರ ಪಡಿಸುವುದನ್ನ ಶಾಸನ ಬಾಹಿರವನ್ನಾಗಿ ಮಾಡಿವೆ.
 ಒಂದು ವಸ್ತು ಅಥವಾ ವಿಷಯ ಅಶ್ಲೀಲವೇ ಅಲ್ಲವೆ ಎಂಬುದನ್ನು ನಿರ್ಧರಿಸುವಾಗ ಅದು ಯಾರ ಗಮನಕ್ಕೆ ಬರುತ್ತದೆಯೋ ಅವರ ವಯಸ್ಸು, ಮನಸ್ಸು,ಸ್ಥಳ, ಆಚಾರ,ವಿಚಾರ,ಜೀವನಪದ್ಧತಿ-ಇವೆಲ್ಲವನ್ನೂ ಪರಿಶೀಲಿಸಬೇಕಾಗುತ್ತದೆ.ಸಾರ್ವಜನಿಕ ಸ್ಥಳಗಳಲ್ಲಿ ಭಿಹಿರಂಗವಾಗಿ ಚುಂಬಿಸುವು ಪದ್ಧತಿ ಭಾರತದಲ್ಲಿಲ್ಲ. ಹಾಗೆ ಮಾಡಿದರೆ ಅದು ಅಸಭ್ಯತೆ ಎಂದು ಪರಿಗಣಿಸಿದ್ದಾರೆ. ಒಮ್ಮೊಮ್ಮೆ ಅದು ಅಶ್ಲೀಲದ ಮಟ್ಟಕ್ಕೂ ಹೋಗಬಹುದು.ಚುಂಬಿಸುವಾಗ ನಿಂತ ಭಂಗಿ, ಸ್ಥಳ, ಕಾಲ, ರೀತಿ, ಅಂಗಪ್ರದರ್ಶನ-ಇವೆಲ್ಲುವೂ ಸೇರಿ ಅಶ್ಲೀಲ ಎಂದು ಎನ್ನಿಸಿಕೊಳ್ಳಬಹುದು, ಭಾರತೀಯರ ದೃಷ್ಟಿಯಲ್ಲಿ. ಆದರೆ ಪಾಶ್ಚಾತ್ಯದೇಶಗಳಲ್ಲಿ ಬಹಿರಂಗವಾಗಿ ಸಾರ್ವಜನಿಕ ಸ್ಥಳಗಳಲ್ಲಿ ಚುಂಬಿಸುವುದು ಸರ್ವಸಾಧಾರಣ ಪದ್ಧತಿಯಾಗಿದೆ. ಹಾಗೆಯೇ ವಯೋಧರ್ಮಕ್ಕನುಗುಣವಾಗಿ ಒಂದು ವಸ್ತು ಅಥವಾ ವಿಷಯ ಅಶ್ಲೀಲವಾಗಬಹುದು, ಆಗದಿರಲೂಬಹುದು. ಯುವಕರಿಗಾಗಲಿ, ಮುದುಕರಿಗಾಗಲಿ.