ಪುಟ:Mysore-University-Encyclopaedia-Vol-1-Part-2.pdf/೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಶ್ವತ್ಥಾಮ

 ರಾಜ್ಯ ಕೈಗಾರಿಕಾ ಇಲಾಖೆ ನಿದೇ‍ಶಕರೂ ಸಾಹಿತಿಗಳೂ ಆದ ಎಸ್.ಜಿ.ಶಾಸ್ತ್ರಿಗಳು ಮಕ್ಕಳ ಪುಸ್ತಕದ ಮೊದಲ ಸಂಚಿಕೆ ನೋಡಿ ನೀನು ಎರಡನೆ ಸಮಚಿಕೆ ಹೊರತರದಿದ್ದರೂ ಪರವಾಗಿಲ್ಲ. ಇದೊಂದೇ ಸಾಕು ನಿನ್ನ ಹೆಸರನ್ನು ಶಾಶ್ವತವಾಗಿ ಉಳಿಸಲು ಎಂದು ಹೇಳಿದ್ದು ಆ ಪ್ರಕಟಣೆಗೆ ಬಂದ ಸಾವ‍ಜನಿಕ ಪ್ರತಿಕ್ರಿಯೆಗಳಿಗೆ ಪ್ರಾತಿನಿಧಿಕವಾಗಿತ್ತು. 
 ಮುಂದೆ ಮಕ್ಕಳ ಪುಸ್ತಕ ಮೂರು ರೂಪದಲ್ಲಿ ಅವತರಿಸಿತು. ಪ್ರಾಥಮಿಕ ಹಂತದ ಮಕ್ಕಳಿಗೆ, ಸೆಕೆಂಡರಿ ಹಂತದ ವಿದ್ಯಾಥಿ‍ಗಳಿಗೆ, ಮತ್ತು ಹಿರಿಯರಿಗೆ ಹೀಗೆ ಮೂರು ಮುದ್ರಣ ೩,೫, ೧೦ ರೂಪಾಯಿಗಳು. ಪ್ರಸಾರ ೫೦,೦೦೦ ಮುಟ್ಟಿತು. ಮನೆಮನೆಗೆ ಹೋಗಿ ಪ್ರಚಾರ ಮಾಡಿ ಚಂದಾ ಸಂಗ್ರಹಿಸುತ್ತಿದ್ದುದು, ಬರವಣಿಗೆ ಅಕ್ಷರ ಜೋಡಣೆ, ಮುದ್ರಣ ಮತ್ತು ಬೀದಿಯಲ್ಲಿ ಮಾರಾಟ ಎಲ್ಲ ಅಶ್ವತ್ಥನಾರಾಯಣರದೇ.
 ವಿದ್ಯಾಥಿ‍ದೆಸೆಯಿಂದಲೇ ಬೆಳೆದ ರಾಷ್ಟ್ರೀಯಭಾವನೆ ದೇಶಾಭಿಮಾನ, ಸ್ವಾತಂತ್ರ್ಯಾಕಾಂಕ್ಷೆಯ ಪರಿಣಾಮವಾಗಿ "ನವಜೀವನ" ೧೯೨೭ರಿಂದ ವಾರದ ಪತ್ರಿಕೆಯಾಗಿ ಪ್ರಾರಂಭವಾಗಿ ೧೯೨೮ರಿಂದ ದಿನಪತ್ರಿಕೆಯಾಗಿ ಪ್ರಕಟಣೆಗೊಂಡಿತು. ವೀರಕೇಸರಿ ಸೀತಾರಾಮಶಾಸ್ತ್ರಿಗಳು ದುಡ್ಡಿನ ಅಡಚಣೆಯಿಂದ ಪತ್ರಿಕೆ ನಿಲ್ಲಿಸಿದ್ದರು. ಇಬ್ಬರೂ ಕಟ್ಟಾ ದೇಶಪ್ರೇಮಿಗಳು. ವಿದುರಾಶ್ವತ್ಥ, ಗಣೇಶನ ಗಲಾಟೆ ಮೊದಲಾದ ಪ್ರಸಂಗಗಳು ಸೇರಿದಂತೆ ದಿವಾನರ ಜನವಿರೋಧಿ ಮನೋಭಾವ ನಡವಳಿಕೆಯನ್ನೂ ಖಂಡಿಸುವ, ತಕ್ಷಣವೇ ಜವಾಬ್ದಾರಿ ಸರಕಾರ ರಚಿಸಬೇಕೆಂಬ ಆಗ್ರಹಪಡಿಸುವ ಲೇಖನಗಳು ಪ್ರಕಟವಾದವು. ರಾಜದ್ರೋಹದ ಆಪಾದನೆ ಮೇಲೆ ಮೊಕದ್ದಮೆ ಹೂಡಿ, ೨ ವಷ‌ ಜೈಲು ಶಿಕ್ಷೆ ವಿಧಿಸಲಾಯಿತು. ಇದು ಮೊದಲ ರಾಜಕೀಯ ದಾವೆ. ಮುದ್ರಣಾಲಯ ಮುಚ್ಚಿತು. ಅಶ್ವತ್ಥನಾರಾಯಣರಾಯರು ಮತ್ತು ವೀರಕೇಸರಿ ಜೈಲು ಸೇರಿದರು. ಈ ಗಲಾಟೆಯ ಫಲವಾಗಿ, ಜವಾಬ್ದಾರಿ ಸಕಾ‍ರದ ಬೇಡಿಕೆಗೆ ಒತ್ತಾಯ ಎಲ್ಲ ಕಡೆಯಿಂದ ಬರಲಾರಂಭಿಸಿತು. ೧೯೨೬ರಲ್ಲಿ ವಿಶ್ವೇಶ್ವರಯ್ಯ ಅವರ ನೇತೃತ್ವದಲ್ಲಿ ಸಮಿತಿ ಸ್ಥಾಪನೆಗೆ ಚಾಲನೆ ದೊರೆಯಿತು. 
 "ನವಜೀವನ", ಸಕಾ‍ರದ ಎಲ್ಲ ಬಗೆಯ ಕಿರುಕುಳ ಸಹಿಸಿಕೊಂಡು ಮುನ್ನಡೆಯಿತು. ಪತ್ರಿಕೆ ದಿನಕ್ಕೆ ಎರಡು ಬಾರಿ ೧೧ ಗಂಟೆಗೆ ಮೊದಲ ಸಂಚಿಕೆ, ಸಂಜೆ ಇನ್ನೊಂದು, ಹೀಗೆ ಆಥಿ‍ಕ ಅಡಚಣೆಯೊಡನೆ ಪ್ರಕಟವಾಗುತ್ತಾ ಬೆಳ್ಳಿ ಹಬ್ಬವನ್ನು ಆಚರಿಸಿಕೊಂಡದ್ದು ಅದರ ಹಿರಿಮೆಯಾಯಿತು. ೧೯೪೨ರ ಚಳವಳಿಯಲ್ಲಿ ಭಾಗವಹಿಸಿ ಅಶ್ವತ್ಥನಾರಾಯಣರು ಸೆರೆಮನೆಗೆ ಹೋದರು. ದೇಶಸೇವೆಯ ಹಂಬಲದ ಈ ವ್ಯಕ್ತಿ, ಬ್ರಿಟಿಷರನ್ನು ಹೊರದಬ್ಬಲು ಕ್ರಾಂತಿಕಾರಿ ಚಟುವಟಿಕೆಗಳಲ್ಲೂ ಭಾಗಿಯಾಗಿದ್ದರು. ಅಶ್ವತ್ಥನಾರಾಯಣರ ಮಾಗ‍ದಶ‍ನದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರಿ, ರಾಜಕೀಯವಾಗಿ ಮುಂದೆ ಬಂದವರು ಅನೇಕರು, ಅಶ್ವತ್ಥನಾರಾಯಣರನ್ನು ಕಾಂಗ್ರೆಸಿಗರು ರಾಜಕೀಯ ಗುರು ಎಂದರು.