ಪುಟ:Mysore-University-Encyclopaedia-Vol-1-Part-2.pdf/೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಷ್ಟಮಹಿಷಿಯರು-ಅಷ್ಟಾಂಗ ಯೋಗ

    ಅಷ್ಟಮಹಿಷಿಯರು : ಕೃಷ್ಟನ ಎಂಟುಮಂದಿ ಹೆಂಡತಿಯರನ್ನು ಹೀಗೆ ಕರೆಯುವುದು ವಾಡಿಕೆ. 1.ಭೀಷ್ಮಕನ ಮಗಳು ರುಕ್ಮಿಣಿ 2.ಸತ್ರಾಜಿತನ ಮಗಳು ಸತ್ಯಭಾಮೆ 3.ಚಾಂಬುವಂತನ ಮಗಳು ಜಾಂಬವತಿ 4. ಶೃತಕೀರ್ತಿಯ ಮಗಳು ಭದ್ರೆ 5.ಸೂಯ೯ನ ಮಗಳು ಕಾಳಿಂದಿ 6. ಜಯತ್ಸೇನನ ಮಗಳು ಮಿತ್ರವಿಂದೆ 7. ನಗ್ನಜಿತನ ಮಗಳು ಸತ್ಯೆ 8.ಮದ್ರರಾಜನ ಮಗಳು ಲಕ್ಷ್ಮಣಿ                                        (ಜಿ.ಎಚ್.)                 
     ಅಷ್ಟಮಿ: ತಿಥಿಗಳಲ್ಲಿ ಒಂದು, ಶುಕ್ಮಾಷ್ಟಮಿ, ಕೃಷ್ಣಾಷ್ಟಮಿ ಎಂದು ಎರಡು ವಿಧ.ಅಧಿಕಮಾಸ ಬರುವ ವರ್ಷಗಳಲ್ಲಿ ಎರಡು ಆಷ್ಟಮಿಗಳು ಅಧಿಕ.
      ಚೈತ್ರಮಾಸದ ಶುಕ್ಮಾಷ್ತಮಿಯ ದಿವಸ ಎಂಟು ಅಶೋಕ ಚಿಗುರುಗಳಿಂದ ಕೂಡಿದ ನೀರಿನ ಪಾನ, ಬ್ರಹ್ಮಪುತ್ರಾ ನದಿಯಸ್ನಾನ ಮತ್ತು ಭವಾನಿಯ ದರ್ಶನ ಇವು ಪುಣ್ಯ ಫಲಪ್ರದಗಳು.
 
    ಶ್ರಾವಣಮಾಸದ ಕೃಷ್ಣಾಷ್ಟಮಿಯೇ ಜನ್ಮಾಷ್ಟಮಿ.ಇದು ಕೇವಲಾಷ್ಟಮಿ, ಜಯಂತಿ ಎಂದು ಎರಡು ವಿಧ.ಶ್ರೀಕೃಷ್ಣನ ಜನ್ಮತಿಥಿಯಾದ ಆಷ್ಟಮಿ, ಜನನ ನಕ್ಷತ್ರವಾದ ರೋಹಿಣಿ ಇವು ಒಂದೇ ದಿವಸದಲ್ಲಾಗಲಿ, ಬೇರೆ ಬೇರೆ ದಿವಸದಲ್ಲಾಗಲಿ ಬರಬಹುದು.ಶುದ್ಧವಾದ ಅಷ್ಟಮೀ ತಿಥಿ, ರೋಹಿಣೀ ನಕ್ಷತ್ರ ಈ ಎರಡೂ ಅಧ೯ರಾತ್ರಿಯ

ಕಾಲದಲ್ಲಿರುವುದು ಈ ವ್ರತದಲ್ಲಿ ಮುಖ್ಯವಾಗಿ ಗ್ರಾಹ್ಯ. ಈ ದಿವಸ ಉಪವಾಸವಿದ್ದು, ರಾತ್ರಿ ಪರಿವಾರದೊಡನೆ ಶ್ರೀಕೃಷ್ಣನನ್ನು ಪೂಜಿಸಿ ಶಂಖತೀರ್ಥದಿರಿದ ಮೊದಲು ಕೃಷ್ಣನಿಗೂ ಬಳಿಕ ರೋಹಿಣೀಸಹಿತ ನಾದ ಚರಿದ್ರನಿಗೂ ಪ್ರತ್ಯೇಕವಾಗಿ ಮೂರು ಮೂರು ಸಲ ಅರ್ಘ್ಯಕೊಡಬೇಕು. ವ್ರತಾಂತ್ಯದಲ್ಲಿ ಪಾರಣೆ ವಿಹಿತವಾಗಿದೆ. ಇಂದಿಗೂ ಈ ವ್ರತವನ್ನು ಭಾರತದ ಎಲ್ಲೆಡೆಗಳಲ್ಲೂ ಆಚರಿಸುತ್ತಾರೆ.

     ಭಾದ್ರಪದ ಶುಕ್ಲಾಷ್ಟಮಿ ದೂರ್ವಾಷ್ಟಮಿ, ಇದೇ ತಿಂಗಳಿನ ಕೃಷ್ಣಾಷ್ಟಮಿ ಮಧ್ಯಾಷ್ಟಮಿ ಆಶ್ವಯುಜ ಶುಕ್ಲಾಷ್ಟಮಿ ದುರ್ಗಾಷ್ಟಮಿ, ಮಾರ್ಗಶಿರ ಕೃಷ್ಣಾಷ್ಣಮಿ ಭೈರವಾಷ್ಟಮಿ, ಮಾಘಶುಕ್ಲಾಷ್ಟಮಿ  ಭೀಷ್ಮಾಪ್ಪಮಿ. ಮಾರ್ಗಶಿರ ಮಾಸದಿಂದ ನಾಲ್ಕು ತಿಂಗಳಿನ ಕೃಷ್ಣಾಷ್ಟಮಿಗಳು ಅಷ್ಟಕಗಳು. ದೂರ್ವಾಷ್ಟಮಿಯ ದಿವಸ ದೂರ್ವೆಯಿಂದ ಶಂಕರನ ಪೂಜೆ,ದುಗಾ೯ಷ್ಟಮಿಯ ದಿವಸ ದುರ್ಗಯ ಪೂಜೆ, ಭೀಷ್ಮಾಷ್ಟಮಿಯ ದಿವಸ ಭೀಷ್ಮನನ್ನುದ್ದೇಶಿಸಿ ತಪ೯ಣ, ಮಧ್ಯಾಷ್ಟಮಿ ಮತ್ತು ಅಷ್ಟಕಗಳಲ್ಲಿ ಪಿತೃಗಳನ್ನುದ್ದೇಶಿಸಿ ಶ್ರಾದ್ಧಮಾಡುವುದು- ಇವು ಆ೦ದಂದಿನ ವಿಶೇಷ ಕಾಯ೯ಗಳು.                             (ಎಸ್,ಎನ್, ಕೆ)
   
     ಅಷ್ಟಮೂರ್ತಿಗಳು : ಈಶ್ವರನಿಗೆ ಇರುವ ಎಂಟು ಸ್ವರೂಪಗಳು. ಈಶ್ವರನಿಗೆ ಅಷ್ಟನಮೂರ್ತಿಯೆನ್ನುವ ಹೆಸರೂ ಉಂಟು. ಭವ, ಶವ೯, ಈಶಾನ, ಪಶುಪತಿ, ಭೀಮ, ಉಗ್ರ, ಮಹಾದೇವ, ರುದ್ರ ಇವರೇ ಶಿವನ ಅಷ್ಟಮೂರ್ತಿಗಳು. ಇವರಿಗೆ ಕ್ರಮವಾಗಿ ಉಷಾ, ಸುಕೇಶೀ, ಶಿವಾ,ಸ್ವಾಹಾ, ದಿಕ್, ದೀಕ್ಷಾ, ರೋಹಿಣಿ, ಸುವಚ೯ಲಾ ಎನ್ನುವ ಶಕ್ತಿಯರೂ ಶುಕ್ರ ಅಂಗಾರಕ, ಹನೂಮಂತ, ಸ್ಕಂದ, ಸ್ವರ್ಗ, ಸಂತಾನ, ಬುಧ, ಶನಿ ಎನ್ನುವ ಮಕ್ಕಳೂ ಇದ್ದಾರೆ. (ಎಸ್.ಕೆ.ಆರ್)
 
     ಅಷ್ಟಸುಗಳು : ದಕ್ಷಪ್ರಚಾಪತಿಯ ಮಗಳು ವಸು ಎಂಬಾಕೆಯ ಮಕ್ಕಳು. ಈ ಎಂಟು ವಸುಗಳಿಗೆ ಧರ, ಧ್ರುವ, ಸೋಮ, ಅಹ, ಅನಿಲ, ಅನಲ, ಪ್ರತ್ಯೂಷ, ಪ್ರಭಾಸ ಎಂಬ ಹೆಸರುಗಳುಂಟು. ಇವರ ವಿಚಾರ ಮಹಾಭಾರತದ ಅದಿಪರ್ವದಲ್ಲಿ ಬರುತ್ತದೆ. ಇವರು ಒಮ್ಮೆ ವಸಿಷ್ಠ ಮಹರ್ಷಿಯ ಆಶ್ರಮದಲ್ಲಿ ಸಂಚರಿಸುತ್ತ, ನಂದಿನೀ ಧೇನುವನ್ನು ಕದ್ದೊಯ್ಯಲು ಹವಣಿಸಿ, ಋಷಿಯಿಂದ ಶಾಪವನ್ನು ಪಡೆದು ಭೂಲೋಕದಲ್ಲಿ ಶಂತನುವಿನ ಹೆಂಡತಿ ಗಂಗೆಯ ಮಕ್ಕಳಾಗಿ ಹುಟ್ಟಿದರು. ಹಿರಿಯವನಾದ ಧರನೇ ಭೀಷ್ಮನಾಗಿ ಜನ್ಮವೆತ್ತಿದ.
                                                   (ಎಸ್.ಕೆ.ಆರ್)
   ಅಷ್ಟವೀರಸ್ಥಾನಗಳು : ಎಂಟು ಶಿವಕ್ಷೇತ್ರಗಳು. ಈ ವೀರಸ್ಥಾನಗಳಲ್ಲಿರುವ ಒಂದೊಂದು ಶಿವನ ವಿಗ್ರಹವೂ ಕಂಸಾಸುರ, ತ್ರಿಪುರಾಸುರ ಮುಂತಾದ ಅಸುರರ ಸಂಹಾರವನ್ನೂ ಕಾಮನನ್ನು ಸುಟ್ಟದ್ದನ್ನೂ ಯುಮನನ್ನು ದಂಡಿಸಿದ್ದನ್ನೂ ಬ್ರಹ್ಮನ ಐದನೆಯ ತಲೆಯನ್ನು ಕತ್ತರಿಸಿ ಹಾಕಿದ್ದನ್ನೂ-ಈ ರೀತಿ ಅವನು ಮಾಡಿದ ಎಂಟು ಬಗೆಯ ವೀರಕಾಯ೯ಗಳನ್ನು ತೋರಿಸುತ್ತದೆ.                       (ಜಿ.ಎಚ್.)
    ಅಷ್ಟಸಿದ್ಧಿಗಳು : ಸಿದ್ಧಿಯೆಂದರೆ ಕೆಲಸ ಕೈಗೂಡುವುದು (ಕ್ರಿಯಾಸಿದ್ಧಿ). ಸಾಮಾನ್ಯವಾಗಿ ಈ ಮಾತನ್ನು ಆಲೌಕಿಕವಾಗಿರುವ ಕೌಶಲಗಳನ್ನು ಪಡೆಯುವುದಕ್ಕೆ ಬಳಸುತ್ತಾರೆ. ಸಿದ್ಧಿಯೆಂದರೆ ತುಂಬ ಚಮತ್ಕಾರದ ಆದ್ಭುತಶಕ್ತಿ. ತಪಶ್ಚರ್ಯೆಯಿಂದಲೋ ಮಂತ್ರತಂತ್ರಗಳ ಅನುಸಂಧಾನದಿಂದಲೋ ದೈನಿಕ ಆನುಗ್ರಹದಿಂದಲೋ ಮನುಷ್ಯರು ಪಡೆಯುವ ವಿಶೇಷಸಾಮರ್ಥ್ಯ. ಇದನ್ನು ಎ೦ಟೆ೦ದು ಪರಿಗಣಿಸಿದ್ದಾರೆ. ಆಣಿಮಾ (ಅತಿ

ಸಣ್ಣ ಆಕಾರವನ್ನು ಪಡೆಯುವುದು), ಮಹಿಮಾ (ಅತಿ ದೊಡ್ಡ ಆಕಾರವನ್ನು ಪಡೆಯುವುದು), ಗರಿಮಾ (ತುಂಬ ಭಾರವಾಗುವುದು), ಲಘಿಮಾ (ತುಂಬ ಹಗುರವಾಗಿ ಗಾಳಿಯಲ್ಲಿ ಹಾರಾಡುವುದು), ಪ್ರಾಪ್ತಿ (ಸಾಮಾನ್ಯವಾಗಿ ಪಡೆಯಲಾರದುದನ್ನು ಪಡೆಯುವುದು),ಪ್ರಾಕಾಮ್ಯ (ಸ್ವಲ್ಪವಾಗಿರುವ ಪದಾರ್ಥವನ್ನು ಹೆಚ್ಚಿಸುವ ಶಕ್ತಿ), ಈಶಿತ್ವ (ಎಲ್ಲ ಸಂದರ್ಭಗಳಲ್ಲಿಯೂ ಒಡೆತನವನ್ನು ಮಾಡಿ ತನ್ನ ಪ್ರಭಾವವನ್ನು ಬೀರುವುದು) ಮತ್ತು ವಶಿತ್ವ (ಇಂದ್ರಿಯಗಳನ್ನು ನಿಯಮನ ಮಾಡಿಕೊಳ್ಳುವುದು) ಇವು ಅಷ್ಟಸಿದ್ಧಿಗಳು. ಯೋಗಮಾರ್ಗದಲ್ಲಿ ಹಠಯೋಶೀಗವನ್ನು ಹಿಡಿದವರು ಈ ಸಿದ್ಧಿಗಳನ್ನು ಪಡೆಯುತ್ತಾರೆಂದು ನಂಬಿಕೆ. (ಎಸ್.ಕೆ.ಆರ್)

     ಅಷ್ಟಾಂಗ ಮಾರ್ಗ : ಬೌದ್ಧರು ಶಮಥಸಾಧನೆಗಾಗಿ ಅಷ್ಟಾಂಗಯುಕ್ತವಾದ ಮಧ್ಯಮಮಾರ್ಗನ್ನು ನಿರ್ದೇಶಿಸಿದ್ದಾರೆ, ಗೌತಮಬುದ್ಧನ ಮೊಟ್ಟ ಮೊದಲ ಪ್ರವಚನನವಾದ ಧಮಾ೯ಚಕ್ರಪ್ರವರ್ತನ ಸೂತ್ರದಲ್ಲಿಯೇ ಈ ಎಂಟು ಆಂಗಗಳ ವಿವರಣೆ ಬರುತ್ತದೆ. ಇದನ್ನು ಆರ್ಯ-ಆಷ್ಟಾಂಗಿಕ-ಮಾರ್ಗ (ಅರಿಯೋ ಆಟ್ಠಂಗಿಕೋ ಮಸಗ್ಗೋ) ಎಂದು ಬುದ್ಧನೇ ಕರೆದಿದ್ದಾನೆ. ಈ ಅಷ್ಟಾಂಗಮಾರ್ಗವೇ ಚಕ್ಷುಕರಣೆ, ಜ್ಞಾನಕರಣೆ ಇದರಿಂದ ಉಷಶಮ, ನಿರ್ವೇದ, ನಿವಾ೯ಣ ಒದಗುತ್ತದೆ ಎಂದು ಬುದ್ಧನ ಅಶ್ವಾಸನೆ,ಆಷ್ಟಾಂಗಮಾರ್ಗದ ಎಂಟು ವಿವರಗಳನ್ನು ಪ್ರಜ್ಝಾಶೀಲ, ಸಮಾಧಿ ಎರಿಬ ಮೂರು ವರ್ಗಗಳಲ್ಲಿ ಅಳವಡಿಸಿದ್ದಾರೆ. ಸಮ್ಯಕದೃಷ್ಟಿ ಸಮ್ಯಕ್ ಸಂಕಲ್ಪ ಎರಡೂ ಪ್ರಜ್ಝಾವರ್ಗ; ಸಮ್ಯಕ್ ವಾಚಾ, ಸಮ್ಯಕ್ ಕರ್ಮಾಂತ, ಸಕ್ಯಕ್ ಆಜೀವ ಇವು ಮೂರು ಶೀಲವರ್ಗ; ಸಮ್ಯಕ್ ವ್ಯಾಯಾಮ, ಸಮ್ಯಕ್ ಸ್ಕೃತಿ ಮತ್ತು ಸಮ್ಶಕ್ ಸಮಾಧಿ ಇವು ಮೂರು ಸಮಾಧಿವರ್ಗ,ಇದು ತ್ರಿವಿಧ ಶಿಕ್ಷೆ (ತಿವಿಧಾ ಸಿಕ್ಖಾ) ಎನಿಸಿಕೊಳ್ಳುತ್ತದೆ. ದೃಮ್ಯಕ್ ದೃಷ್ಟಿಯೆನ್ನುದು ನಿಜವಾಗಿ ಮಾರ್ಗಾನುಸಂಧಾನದಿಂದ ಬರತಕ್ಕ ಫಲ. ಸಂಸಾರವನ್ನು ಅನಿತ್ಯ, ಆನಿತ್ಮ ದುಖವೆಂದು ಮನದಟ್ಟು ಮಾಡಿಕೊಳ್ಳುವುದು ಸಮ್ಶಕ್  ದೃಷ್ಟಿ; ಮೋಹ, ದ್ವೆಷ, ರಾಗಗಳಿಂದ ವಿಮುಕ್ತಿ. ಸಮ್ಯಕ್ಸಂಕಲ್ಪವೆಂದರೆ ವಿರಕ್ತಿ

(ನೈಷ್ಕರ್ಮ್ಯ ಸಂಕಲ್ಪ). ಶುಭಭಾವನೆಗಳು, ಯಾರಿಗೂ ಕೆಡುಕ'ನ್ನು ಮಾಡದಿರುವ ಸಂಕಲ್ಪ , (ಅವಿಹಿಂಸಾ ಸಂಕಲ್ಪ)

             ಸಮ್ಯಕ್ ವ್ಯಾಯಾಮವೆಂದರೆ ಆಶುಭ ಭಾವನೆಗಳು ಉಂಟಾಗದಂತೆಯೂ ಶುಭಭಾವನೆಗಳು ಉಂಟಾಗುವೆಂತೆಯೂ ಮೊದಲೇ ಇರುವ ಆಶುಭಭಾವನೆಗಳು ಹೋಗಿ ಮೊದಲೇ ಇರುವ ಶುಭಭಾವನೆಗಳು ಬೇರೂರುವಂತೆಯೂ ಪ್ರಯತ್ನಮಾಡುವುದು. ಸಮ್ಯಕ್ ಸ್ಕೃತಿಯಲ್ಲಿ

ಕಾಯಾನುಪಶ್ಯನ. ವೇದನಾನುಪಶ್ಯನ. ಚಿತ್ತಾನುಪಶ್ಯನ ಮತ್ತು ಧರ್ಮಾನುಪಶ್ಯನಗಳು ಸೇರುತ್ತವೆ. ಬೌದ್ದರ ಧ್ಯಾನಪಂಥಕ್ಕೆ ಸ್ಕೃತಿಮಾರ್ಗವೆಂದೇ ಹೆಸರು. ಅನುಪಾನ. ಚಂಕ್ರಮಣಧ್ಯನ ಮುಂತಾದುವು ಸಮ್ಯಕ್ ಸ್ಕೃತಿಯ ವಿಭಾಗದ ವಿವಿಧ ಪ್ರಕಾರಗಳು. ಬಲಗೊಂಡು ಸಾರ್ಥಕವಾದರೆ ದಮ್ಯಕ್ ಸಮಾಧಿ ಒದಗುತ್ತದೆ. ಗಾಳಿಯಿಲ್ಲದ ಸ್ಥಳದಲ್ಲಿರುವ ದೀಪ ಅಚಲವಾಗಿ ಉರಿಯುವಂತೆ ಚಿತ್ತ ಸ್ಥಿರವಾಗಿರುವುದು ಸಮಾಧಿಯೆನಿಸಿಕೊಳ್ಳುತ್ತದೆ. (ಎಸ್.ಕೆ.ಅರ್)

         ಅಷ್ಟಾಂಗ ಯೋಗ : ಪತಂಜಲಿಯಿಂದ ಪ್ರವೃತ್ತವಾದ ಯೋಗಪದ್ಧತಿ. ಯೋಗ

ವೆಂದರೆ ಚಿತ್ತವೃತ್ತಿನಿರೋಧವೆಂದು ವಿವರಿಸಿ ಯೋಗಸೂತ್ರ ಇದೆಕ್ಕೆ ಸಾಧನರೂಪವಾಗಿ ಯಮ, ನಿಯಮ, ಅಸನ, ಪ್ರಾಣಾಯಾಮ, ಪ್ರತ್ಯಾಹಾರ, ಧ್ಯಾನ, ಧಾರಣ, ಸಮಾಧಿ ಎಂಬ ಎಂಟು ಅಂಗಗಳನ್ನು ಎರಡನೆಯ ಆಧ್ಯಾಯವಾದ ಸಾಧನಪಾದದಲ್ಲಿ ಹೇಳಿದೆ. ಆಂಗವೆಂದರೆ ಆಶುದ್ಧವದ ಚಿಕತ್ತಕಲ್ಮಷಗಳು ಹೋಗಿ ವಿವೇಕ ಖ್ಯಾತಿ ಉಂಟಾಗುವುದಕಕ್ಕೆ ನೆರವಾಗುವ ಸಾಧನವೆ೦ದೂ ಅದರಿಂದ ಚಿತ್ತದಲ್ಲಿ ಸಾತ್ತ್ವಿಕ ಪರಿಣಾಮರೂಪವಾದ. ನಿರ್ಮಲರೂಪವಾದ ಪ್ರಕಾಸ್ಗಹ (ಜ್ಝಾನದೀಪ್ತಿ) ಒದಗುವುದೆಂದೂ ಯೋಗಸೂತ್ರ ಭಾಷ್ಯರರ ವ್ಯಾಸರು ವಿವರಿಸಿದ್ದಾರೆ. ನಿಷಿದ್ಧಕಾರ್ಯಗಳ ತ್ಯಾಗ ಯಮ; ಈ ಆಂಗದಲ್ಲಿ ಸೇರಿಬರುತ್ತವೆ. ವಿಹಿತ ಕಾಯ೯ಗಳ ಆಚರಣೆ ನಿಯಮ, ಶಚ,ಸಂತೋಷ. ತಪಸ್ಸು ಸ್ವಾಧ್ಯಾಯ. ಈಶ್ವರಪ್ರಣಿಧಾನ-ಇವು ನಿಯಮಗಳು. ಆಸನವೆಂದರೆ ನಿಯಮಗಳ ಆಭ್ಯಾಸೆಕ್ಕೆ ಅನುಕೂಲವಾದ ಸ್ಥಿರಸುಖವಾದ ಭಂಗಿ. ಆಸನಗಳಲ್ಲಿ ಸಿದ್ಧಾಸನ. ಷದ್ಮಾಸನ. ಸ್ವಸ್ತಿಕಾಸನ ಮೊದಲಾದ ವೈವಿಧ್ಯವುಂಟು .ಆಸನಸಿದ್ಧಿಯಾದ ಅನಂತರ ಶ್ವಾಸ-ಪ್ರಶ್ಚಾಸಗಳ ಗಮನಾಗಮನಗಳನ್ನು ತಡೆಯುವುದನ್ನು (ಶ್ವಾಸಪ್ರಶ್ವಾಸರ್ಯೋತಿಏಚ್ಛೇದ) ಪ್ರಾಣಾಯಾಮವೆಂದು ನಿರ್ದೇಶಿಸಿ ದ್ಧಾರೆ. ಪ್ರಾಣಾಯಾಮದಿಂದ ಶುದ್ಧವಾದ ಚಿತ್ತವನ್ನು ಒಂದೆಡೆ ನಿಲ್ಲಿಸುವುದು ಧಾರಣ. ಪಂಚೇಂದ್ರಿಯಗಳು ತಂತಮ್ಮ ವಿಷಯಗಳಕಡೆ ಒಲಿಯದಂತೆ ತಡಹಿಡಿದು, ಧಾರಣದಲ್ಲಿರುವ ಚೆತ್ತದಲ್ಲಿಯೇ ನಿಲ್ಲುವಂತೆ ಮಾಡುವುದು ಪ್ರತ್ಯಾಹಾದ ಯೋಗಾಂಗ ಧ್ಯಾನ, ಆಧರಣೆಯ ಸ್ಥಳದಲ್ಲಿ ಎಕತಾನತೆಯನ್ನು ಆವಲಂಬಿಸಿ ಚಿತ್ತಮನ್ನು ಸ್ಥಿರವಾಗಿ ನಿಲ್ಲಸುವುದೇ