ಪುಟ:Mysore-University-Encyclopaedia-Vol-1-Part-2.pdf/೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅರ್ಸಿನಿಯ ಅನೆತಾಯ್ಡಿಸ್ - ಅಲ್ ಉತ್ಬಿ

ವಿಲಿಯಂ ಅರ್ವಿಂಗ್, ಜೇಮ್ಸ್ಸ್ ಕೆ. ಪಾಡ್ಲಿಂಗರೊಡನೆ ಸೇರಿ ಸಲ್ಮಗುಂಡಿ(೧೮೦೭-೦೮) ಲೇಖನಮಾಲೆಯನ್ನೂ ನಿಕರ್ ಬಾಕರ್ ಎಂಬ ಸಾಹಿತ್ಯನಾಮದಿಂದ ಹಿಸ್ಟ್ತ್ರಿ ಆಫ್ ನ್ಯೂಯಾರ್ಕ್(೧೮೦೯) ಎಂಬ ಹಾಸ್ಯ ಗ್ರ್ಂಥವನ್ನೂ ರಚಿಸಿದ.ಲಿವರ್ಪೂಲ್ನಲ್ಲಿದ್ದ ತಮ್ಮ ಕುಟುಂಬದ ವ್ಯಾಪಾರಶಾಖೆಯನ್ನು ನೋಡಿಕೊಳ್ಳಲು ಅಲ್ಲಿಗೆ ಹೋದರೂ ವ್ಯಾಪಾರದಲ್ಲಿ ನಶ್ಟವಾದುದರಿಂದ ಜೀವನಕ್ಕಾಗಿ ಬರೆಹವನ್ನೇ ಅವಲಂಬಿಸಿದ. ದಿ ಸ್ಕೆಚ್ ಬುಕ್ ಆಫ್ ಜೊಫ್ರೆ ಕ್ರಯಾನ್ (೧೮೧೯-೨೦) ಎಂಬ ಪ್ರಬಂಧ ಮತ್ತು ಸಣ್ಣಕಥೆಗಳ ಸಂಗ್ರಹವೂ ಬೇಸ್ ಬ್ರಿಜ್ ಹಾಲ್ (೧೮೨೨) ಎಂಬ ಕೃತಿಯೂ ಇವನಿಗೆ ಪ್ರಸಿದ್ಧಿ ತಂದುವು. ಟೇಲ್ಸ್ ಆಫ್ ಅ ಟ್ರಾವಲರ್ (೧೮೨೪) ವಿಪರೀತ ಟೀಕೆಗೊಳಗಾಯಿತು. ೧೮೨೬ರಿಂದ ಮೂರು ವರ್ಶ ಸ್ಪೇನಿನ ರಾಯಭಾರಿ ವರ್ಗದಲ್ಲಿದ್ದು ಕೊಲಂಬಸ್ಸನ ಜೀವನಚರಿತ್ರೆ(೧೮೨೮), ದಿ ಕಾಂಕ್ಟೆಸ್ಟ್ ಆಫ್ ಗ್ರಾನಡಾ(೧೮೨೯) ಮತ್ತು ದಿ ಆಲ್ಹಾಂಬ್ರಾ(೧೮೩೨) ಗ್ರಂಥಗಳನ್ನು ಬರೆದ. ೫ ಸಂಪುಟಗಳ ಲೈಫ್ ಆಫ್ ವಾಶಿಂಗ್ಟನ್ (೧೮೫೫-೫೯) ಎಂಬುದು ಈತನ ಉತ್ತಮ ಜೀವನಚರಿತ್ರೆ.
 ಅರ್ಸಿನಿಯ ಅನೆತಾಯ್ಡಿಸ್: ದಕ್ಶಿಣ ಆಫ್ರಿಕಾದ, ಬೇಸಗಯಲ್ಲಿ ಹೂ ಬಿಡುವ, ವಾರ್ಶಿಕ ಸಸ್ಯ.. ೧೮" ಎತ್ತರ ಬೆಳೆಯುತ್ತದೆ. ಹೂಗಳು ಡೈಸಿಯದಂತೆ ಬಹುಸುಂದರ. ಬಣ್ಣ ಕಿತ್ತಳೆ ಹಳದಿ ಮತ್ತು ನೀಲಿ. ಗಿಡ ಬಹಳ ದಿನಗಳ ವರೆಗೆ ಹೂ ಬಿಡುತ್ತಿರುತ್ತದೆ. ಬಿಡಿಹೂಗಳಾಗಿ ಉಪಯೋಗಿಸಲು ಇವು ಅನುಕೂಲವಾಗಿವೆ.ಬೀಜವನ್ನು ಮಡಿಗಳಲ್ಲಿ ಇಲ್ಲವೆ ಕುಂಡಗಳಲ್ಲಿ ಬಿತ್ತನೆ ಮಾಡಿ ಬೆಳೆಸಬೇಕು.ಸಸಿಗಳನ್ನು ನಾಟಿಮಾಡಿ ಬೆಳೆಸುವುದು ಕಶ್ಟ ಮೈದಾನಪ್ರದೇಶಗಳಲ್ಲಿ ಚೆನ್ನಾಗಿ ಬೆಳೆಯುವುದಿಲ್ಲ.
ಅರ್ಹತ್: ನಾಲ್ಕು ವಿಧವಾದ ಘಾತಿಕರ್ಮಗಳನ್ನೂ ಗೆದ್ದು ಜಿನರೆನ್ನಿಸಿಕೊಂಡವರೇ. ಅರ್ಹಂತರು ಇವರಿಗೆ ಅನಂತಜ್ನ್ಯಾನ , ಅನಂತದರ್ಶನ,ಅನಂತವೀರ್ಯ, ಅನಂತಸುಖಗಳು ಪ್ರಾಪ್ತವಾಗಿರುತ್ತವೆ. ಇವರಿಗೆ ಹಸಿವು ನೀರಡಿಕೆ ಮೊದಲಾದ ಹದಿನೆಂಟು ದೋಷಗಳಿರುವುದಿಲ್ಲ. ಅರ್ಹತ್ ಪರಮೇಷ್ಟಿಗಳು ಜೀವ ಮಾತ್ರವನ್ನು ಉದ್ಧರಿಸುವ ಧರ್ಮತೀರ್ಥವನ್ನು ಪ್ರವರ್ತಿಸುವುದರಿಂದ ತೀರ್ಥಂಕನಿಸುವರು. ಇದರಿಂದಾಗಿ ಪಂಚಪರಮೇಷ್ಟಿಗಳಲ್ಲಿ ಇವರ ಹೆಸರು  ಮೊದಲು ಬರುತ್ತದೆ. ಅನಂತಜ್ನ್ಯಾನ ದರ್ಶನಾದಿಗಳನ್ನುಳ್ಳವರಾದ್ದರಿಂದ ಇವರು ಉಪದೇಶ ಮಾಡಲು ಅರ್ಹರು, ಆಪ್ತರು. ಇವರ ದೇಹ ಪವಿತ್ರವಿದ್ದು ಸಪ್ತಧಾತುರಹಿತವಾಗಿದೆ, ಅತ್ಯುಜ್ಜ್ವಲವಾಗಿದೆ. ಇವರು ಶುಧಾತ್ಮರು.
 ಅರ್ಹತೆಗಳು: ಯಾವುದೇ ಹುದ್ದೆಗೆ ಅಭ್ಯರ್ಥಿಯನ್ನು ಆರಿಸುವಾಗ ಆತನಲ್ಲಿ  ಇರಬೇಕಾದ ಗುಣಗಳು (ಕ್ವಾಲುಪಿಕೇಶನ್ಸ್), ವಿಶ್ವವಿದ್ಯಾನಿಲಯದ ಅಥವಾ ಬೇರೆ ತರಹದ ಪದವಿ(ಡಿಗ್ರಿ), ಅನುಭವ(ಎಕ್ಸ್ಪೀರಿಯನ್ಸ್), ಸಂಶೋಧನ ಪತ್ರಗಳು, ಗ್ರಂಥರಚನೆ ಇತ್ಯಾದಿ ಉದಾಹರಣೆಗಳು. ಸರ್ಕಾರಿ  ಹುದ್ದೆಗಳಿಗೆ  ಅಭ್ಯಾರ್ಥಿಗಳನ್ನು ನೇಮಿಸಿಕೊಳ್ಳುವ ತತ್ತ್ವ ಸರ್ಕಾರದ ಆಡಳಿತ