ಪುಟ:Mysore-University-Encyclopaedia-Vol-1-Part-2.pdf/೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಅಸರ್ ಬೈವಾನ್-ಅಸಾಧಾರಣ ಮಕ್ಕಳು ಜನ ತಮ್ಮ ಸಹಕಾರವನ್ನು ನಿರಾಕರಿಸಿ, ಸರ್ಕಾರವನ್ನು ದಾರಿಗೆ ತರಬಹುದು ಎಂಬ ತತ್ತ್ವವನ್ನು ಧೋರೊ.ಟಾಲ್ಸ್ಟಾಯ್,ರಸ್ಥಿನ್ ಮೊದಲಾದವರು ಪ್ರತಿಪಾದಿಸಿದರು.ಈ ಸಿದ್ಧಾಂತವನ್ನೇ ಆಧಾರವಾಗಿಟ್ಟುಕೊಂಡು ಭಾರತದಲ್ಲಿ ಮಹಾತ್ಮಾ ಗಾಂಧಿ ಅದನ್ನು ಅನೇಕ ಸನ್ನಿವೇಶಗಳಲ್ಲಿ ಬೃಹತ್ ಪ್ರಮಾಣದಲ್ಲಿ ಕಾರ್ಯರೂಪಕ್ಕೆ ತಂದರು. ಸತ್ಯಯುತ, ಅಹಿಂಸಾತ್ಮಕ ಪ್ರತಿಭಟನೆ ಸತ್ಯಾಗ್ರಹ ಎನಿಸಿಕೊಂಡಿತು. ಅಮೆರಿಕದ ಅರಾಜಕತವಾದಿ ಬೆಂಜಮಿನ್ ಟಕರ್ ಅಸಹಕಾರದ ಹೋರಾಟವನ್ನು ಈ ರೀತಿ ಸಮರ್ತಿಸಿಕೊಳ್ಳುತ್ತಾನೆ. ಒಂದು ರಾಜ್ಯದ ಐದನೆಯ ಒಂದು ಭಾಗದ ಜನ ತೆರಿಗೆ ಕೊಡಲು ನಿರಾಕರಿಸಿದರೆ ಉಳಿದ ನಾಲ್ಕುಭಾಗದ ಪ್ರಜೆಗಳು ತೆರಿಗೆ ಕೊಡಲು ಸಮ್ಮತಿಸಿ ತೆರಿಗೆ ಕೊಟ್ಟರೂ ಆ ಹಣವೆಲ್ಲ ತೆರಿಗೆ ವಸೂಲಿಗಾಗಿಯೆ ವೆಚ್ಚವಾಗಿ ಹೋಗುತ್ತದೆ. ಹಿಂಸಾತ್ಮಕ ಚಳವಳಿಯನ್ನು ಸರ್ಕಾರ ಸದೆಬಡಿಯಬಹುದು.ಆದರೆ ಅಹಿಂಸಾತ್ಮಕ ಹೊರಾಟವನ್ನು ತುಳಿದುಹಾಕುವುದು ಅಸಾಧ್ಯ. ಪ್ಲಾಸಿಫಿಸಂ ಅಥವಾ ಯುದ್ಧವಿರೋಧ,ಶಾಂತಿಯುತ ಕಾನೂನುಭಂಗ ( ಸಿವಿಲ್ ಡಿಸ್ ಒಬೀಡಿಯನ್ಸೆ) ಕಾನೂನು ಕಟ್ಟಲೆಗಳನ್ನು ವಿಧಿಪೂರ್ವಕ ವಿರೋಧಿಸುವುದು;ಸಾತ್ವಿಕ ವಿರೋಧ(ಪ್ಯಾಸೀವ್ ರೆಸಿಸ್ಟೆನ್ಸ್), ಅಸಹಕಾರ(ನಾನ್ ಕೊ ಒಪರೇಶನ್) ಇವು ಅಸಹಕಾರ ಚಳವಳಿಯ ವಿವಿಧ ರೂಪಾಂತರಗಳು. ನೈತಿಕ ಕಾರಣಗಳಿಗಾಗಿ ಯುದ್ಧವನ್ನು ವಿರೋಧಿಸುವುದು ಯುದ್ಧವಿರೋಧಿಯ ಮುಖ್ಯಧ್ಯೇಯ. ಆತ ತನಗೆ ಏನೇ ವಿಪತ್ತುಬಂದರೂ ಯುದ್ಧೋಧ್ಯಮದಲ್ಲಿ ಸಹಕರಿಸನು. ಸಿಪಾಯಿಯಾಗಿ ದುಡಿಯನು. ಕೇವಲ ತಟಸ್ಥನಾಗಿರುವುದರಲ್ಲಿ ಆತ ಸಮಾಧಾನ ಪಡೆಯುವನು; ಇಲ್ಲವೆ ಯುದ್ಧವನ್ನು ಹೂಡುವನು ಒಂದನೆಯ ಮಹಾಯುದ್ಧದ ಕಾಲದಲ್ಲಿ ಇಂಗ್ಲೆಂಡಿನಲ್ಲಿ ಸುಮಾರು ೧೬೦೦೦ ಯುದ್ಧ ವಿರೋಧಿಗಳಿದ್ಧರು. ಎರಡನೆಯ ಮಹಾಯುದ್ಧದಲ್ಲಿ ಮಾರ್ಚ್ ೧೯೪೦ರವರೆಗೆ ಇವರ ಸಂಖ್ಯೆ೨೬೬೮೧ ಇದ್ಧಿತು. ತತ್ತ್ವಗ್ನಾನಿ ಬರ್ಟ್ರಂಡ್ ರಸಲ್,ವಿಗ್ನಾನಿ ಹಕ್ಸ್ಲಿ, ರಾಜಕಾರಣಿ ಫೆನ್ನರ್ ಬ್ರಾಕ್ವೆ ಮೊದಲಾದ ಮೇಧಾವಿಗಳು ಯುದ್ಧದಲ್ಲಿ ನಿರಾಕರಿಸಿ ಸೆರೆಮನೆ ಸೇರಿದರು. ಈಗ ಅನೇಕ ದೇಶಗಳಲ್ಲಿ ಯುದ್ಧವಿರೊಧಿ ಸಂಸ್ಥೆಗಳಿವೆ. ಧರ್ಮವಿರುದ್ಧ, ನೀತಿವಿರುದ್ಧ, ಅಪ್ರಿಯವಾದ ಅಥವಾ ಸ್ವಾತಂತ್ರ್ಯವನ್ನು ಮೊಟಕುಗೊಳಿಸುವ ಶಸನವನ್ನು ಶಂತಿಯುತ ಕ್ರಮಗಳಿಂದ ವಿರೋಧಿಸುವುದೇ ಶಾಂತಿಯುತ ಕಾನೂನು ಭಂಗ ಚಳವಳಿ. ಅಪ್ರಿಯವಾದ ಶಾಸನವನ್ನು ಉದ್ದೇಶ ಪೂರ್ವಕವಾಗಿ ಧಿಕ್ಕರಿಸಿ ನ್ಯಾಯಲಯದ ವಿಸಚಾರಣೆಗೆ ಅದನ್ನು ಒಳಪಡಿಸುವುದೂ ಒಂದು ಕ್ರಮ. ಅಪ್ರಿಯ ಶಾಸನವನ್ನು ಹೆಚ್ಚು ಸಂಖ್ಯೆಯಲ್ಲಿ ಪ್ರತಿಭಟಿಸಿ, ನ್ಯಾಯಲಯ ವಿಧಿಸುವ ಶಿಕ್ಷೆಯನ್ನು ಸ್ವಾಗತಿಸಿ ಅನುಭವಿಸುವುದು ಮತ್ತೊಂದು ಕ್ರಮ. ೧೯೦೨ರಲ್ಲಿ ಇಂಗ್ಲೆಂಡಿನಲ್ಲಿ ಶಿಕ್ಷಣಶುಲ್ಕವನ್ನು ಪ್ರತಿಭಟಿಸಲು ನಡೆದ ಸಾತ್ವಿಕ ವಿರೋಧಚಳವಳಿಯಲ್ಲಿ ಭಾಗವಹಿಸಲು ೬೦೦೦೦ ಜನ ಸಿದ್ಧರಾಗಿದ್ಧು ೨೫೪ ಜನ ಸೆರೆಮನೆ ಸೇರಿದರು. ೧೮ನೆಯ ಶತಮಾನದಲ್ಲಿ ಹಂಗರಿಯ ಜನ ಡೀಕನ ಮುಂದಾಳತ್ವದಲ್ಲಿ ಆಸ್ಟ್ರಿಯ ಚಕ್ರವರ್ತಿ ಹಂಗರಿಯಾಲಿ ಮಂತ್ರಿಮಂಡಲ ಸ್ಥಾಪಿಸಲು ಕೈಗೊಂಡ ಕ್ರಮವನ್ನು ಸಾತ್ವಿಕವಿರೋಧದಿಂದ ಪ್ರತಿಭಟಿಸಿದರು.೧೮೫೭ ರಲ್ಲಿ ಹಂಗರಿ ಪೂರ್ಣಸ್ವಾತಂತ್ರ್ಯ ಪಡೆಯಿತು. ೧೯೧೯ರಲ್ಲಿ ಈಜಿಪ್ಟ್ ಜಗಲೂಲ್ಪಾಷಾನ ನೇತೃತ್ವದಲ್ಲಿ ಬ್ರಿಟನ್ ವಿರುದ್ಧ ಅಸಹಕಾರ ಚಳವಳಿಹೂಡಿ ಸ್ವಾತಂತ್ರ್ಯ ಗಳಿಸಿತು. ೧೯೧೦ರಿಂದ ಒಂಬತ್ತು ವರ್ಷಗಳ ಕಾಲ ಕೊರಿಯ ಸಾತ್ವಿಕ ವಿರೋಧ ಚಳವಳಿ ಹೂಡಿ ಜಪಾನಿನಿಂದ ಸ್ವಾತಂತ್ರ್ಯವನ್ನು ಗಳಿಸಿತು. ೧೯೨೩ರಲ್ಲಿ ಮಹಾಯುದ್ಧದ ತರುವಾಯ ಫ್ರೆಂಚರು ಜರ್ಮನಿಗೆ ಸೇರಿದ ರ್ಹೂರ್ ಕೈಗಾರಿಕಾ ಪ್ರದೇಶವನ್ನು ವಶಪಡಿಸಿಕೊಂಡರು. ಇದರಿಂದ ಕೋಪಗೊಂಡ ಜರ್ಮನ್ ಸರ್ಕಾರ ಫ್ರೆಂಚ್ ಸರ್ಕಾರದ ವಿರುದ್ಧ ಚಳವಳಿ ಹೂಡಿ ಫ್ರೆಂಚರಿಗೆ ಒಂದು ಟನ್ ಕಲ್ಲಿದ್ದಲೂ ದೊರೆಯದಂತೆ ಮಾಡಿತು. ೧೯೨೫ರಲ್ಲಿ ಚಳವಳಿಯಿಂದ ಬೇಸತ್ತ ಫ್ರೆಂಚ್ ಸರ್ಕಾರ ತನ್ನ ಸೇನಾಬಲವನ್ನು ಹಿಂದಕ್ಕೆ ಕರೆಸಿಕೊಂಡು ಜರ್ಮನಿಯೊಡನೆ ಒಪ್ಪಂದಮಾಡಿಕೊಂಡಿತು. ಒಂದು ಸರ್ಕಾರ ಮತ್ತೊಂದು ಸರ್ಕಾರವನ್ನು ಸಾತ್ವಿಕ ವಿರೋಧ ಚಳವಳಿ ನಡೆಸಿ ತಮ್ಮ ಗುರಿ ಸಾಧಿಸಿಕೊಂಡಿತು. ಇವು ಚರಿತ್ರಾರ್ಹವಾದ ಕೆಲವು ನಿದರ್ಶನಗಳು. ಈ ವಿಧಾನಗಳೆಲ್ಲ ಒಂದಾಗಿ ತೋರಿದರೂ ಸತ್ಯ, ಶಾಂತಿ, ಅಹಿಂಸೆ, ಆತ್ಮಬಲ ಇವುಗಳ ಆಧಾರವಾದ ಮಹಾತ್ಮ ಗಾಂಧಿಯವರ ಸತ್ಯಾಗ್ರಹ ತತ್ವಶಃ ಪ್ರತ್ಯೇಕವಾದದ್ದು. ಅಜ಼ರ್ ಬೈಜಾನ್: ನೈರುತ್ಯ ಏಷ್ಯ ಮತ್ತು ಯುರೋಪ್ ನಲ್ಲಿರುವ ಒಂದು ಸ್ವತಂತ್ರ ಗಣರಾಜ್ಯ, ರಷ್ಯಕ್ಕೆ ಸೇರಿದ್ಧ ಇದು ೧೯೯೧ರಲ್ಲಿ ಸ್ವತಂತ್ರವಾಯಿತು. ಯುರೋಪಿಯನ್ ರಷ್ಯದ ಅತ್ಯಂತ ದಕ್ಷಿಣಭಾಗದಲ್ಲಿದೆ. ( ಉತ್ತರ ಆಕ್ಷಾಂಶ ೩೯ ಮತ್ತು ೪೨). ಪೂರ್ವದಲ್ಲಿ ಕ್ಯಾಸ್ಪಿಯನ್ ಸಮುದ್ರ, ದಕ್ಷಿಣದಲ್ಲಿ ಇರಾನ್, ಮತ್ತು ಟರ್ಕಿ, ಪಶ್ಚಿಮದಲ್ಲಿ ಆರ್ಮೀನಿಯನ್ ಗಣರಾಜ್ಯ, ಉತ್ತರದಲ್ಲಿ ಜಾರ್ಜಿಯ ಮತ್ತು ರಷ್ಯ ಗಣರಾಜ್ಯಗಳಿವೆ. ಉತ್ತರ ದಕ್ಷಿಣವಾಗಿ ೩೮೫ ಕಿಮೀ ಪೂರ್ವ ಪಶ್ಚಿಮವಾಗಿ ೪೭೫ ಕಿಮೀ ಇರುವ ಇದರ ಒಟ್ಟು ವಿಸ್ತೀರ್ಣ ೮೬೬೦೦ಚ.ಕಿಮೀ. ಅಜ಼ರ್ ಬೈಜಾನಿನ ಮೇಲ್ಮೈ ಲಕ್ಷಣ ಮೂರು ಮುಖ್ಯ ಸ್ವಾಭಾವಿಕ ವಿಭಾಗಗಳಿಂದ ಕೂಡಿದೆ-ಉತ್ತರದ ಕಕಾಸಸ್, ಕೇಂದ್ರದ ಶುಷ್ಕ ಸ್ಟೆಪ್ಪಿ ಮೈದಾನ ಮತ್ತು ನೈರುತ್ಯದ ಉಪ ಕಕಾಸಸ್ ನ ಉನ್ನತ ಭಾಗ. ದೇಶದ ಶೇ.೨೦ ಭಾಗ ತಗ್ಗು ಪ್ರದೇಶವಾಗಿದೆ. ಕೇಂದ್ರದ ಮೈದಾನದಲ್ಲಿ ಕುರಾ ನದಿಹರಿಯುತ್ತದೆ. ಅರಾಸ್ ಎಂಬುದು ಅದರ ಪ್ರಮುಖ ನದಿ. ಅರೆ ಮರುಭೂಮಿಯ ವಾಯುಗುಣ . ಬೇಸಿಗೆ ಅತಿ ಶಾಖವಾಗಿದ್ದು ಚಳಿಗಾಲವು ತಂಪಾಗಿರುತ್ತದೆ. ಗೋಧಿ, ಹತ್ತಿ, ಬಾರ್ಲಿ, ಓಟ್ಸ್, ಸಕ್ಕರೆಗಡ್ಡೆ, ಆಲೂಗಡ್ಡೆ, ಬಾದಾಮಿ, ಹುಳಿಹಣ್ಣು ಮತ್ತು ದ್ರಾಕ್ಷಿಗಳು ಪ್ರಮುಖ ಕೃಷಿ ಉತ್ಪನ್ನಗಳು. ಪೆಟ್ರೋಲಿಯಂ ಮತ್ತು ಸ್ವಾಭಾವಿಕ ಅನಿಲಗಳು ದೇಶದ ಆರ್ಥಿಕ ವ್ಯವಸ್ಥೆಯಲ್ಲಿ ಪ್ರಮುಖ ಸ್ಥಾನ ಹೊಂದಿದೆ. ಬಾಕು ಪ್ರಸಿದ್ಧ ತೈಲ ಶುದ್ದೀಕರಣ ಕೇಂದ್ರ ಸಮೀಪದಲ್ಲಿ ರಾಸಾಯನಿಕ ಕೈಗಾರಿಕೆಗಳಿವೆ. ಅಲ್ಯೂಮಿನಿಯಂ ಉತ್ಪಾದನೆಯಾಗುತ್ತದೆ. ಆಹಾರ ಪದಾರ್ಥಗಳ ಸಂಸ್ಕರಣೆ, ಜವಳಿ ಮತ್ತು ಜಮಖಾನಗಳ ತಯಾರಿಕಾ ಉದ್ಯಮಗಳು ಮುಖ್ಯವಾದವು. ಇಲ್ಲಿನ ಜನಸಂಖ್ಯೆ ೮೧೭೬೦೦೦(೨೦೦೨). ಇವರಲ್ಲಿ ಬಹಳಷ್ಟು ಜನ ಟರ್ಕಿ ಮೂಲದವರು. ಶೇ.೮೦ ಮುಸಲ್ಮಾನ, ತಲಾ ಶೇ.೮೦ ರಷ್ಟು ರಷ್ಯನ್ನರು ಮತ್ತು ಆರ್ಮೀನರು.ಜನ ಸಂಖ್ಯೆಯಲ್ಲಿ ಶೇ.೫೨ ಭಾಗ ಗ್ರಾಮೀಣರು. ಜನಸಾಂದ್ರತೆ ಪ್ರತಿ ಚ.ಕಿಮೀಗೆ ೯೪.೪ ಜನರು. ಬಾಕು ರಾಜಧಾನಿ, ಮುಖ್ಯನಗರ, ವಾಣಿಜ್ಯ ಮತ್ತು ವಿದ್ಯಾಕೇಂದ್ರ. ಇದರ ಜನಸಂಖ್ಯೆ ೧೭೧೩೩೦೦(೨೦೦೨) ಇಲ್ಲೊಂದು ವಿಶ್ವವಿದ್ಯಾಲಯವಿದೆ. ಜಚ್ಚಾತೈಲ, ಸ್ವಾಭಾವಿಕ ಅನಿಲ, ರಾಸಾಯನಿಕ ಅನಿಲ ಮತ್ತು ರಫ್ತಾಗುತ್ತವೆ. ರಾಷ್ಟ್ರೀಯ ಆದಾಯದಲ್ಲಿ ಶೇ.೮೦ ಭಾಗ ಹತ್ತಿ ತೈಲ ಉತ್ಪನ್ನಗಳಿಂದ ದೊರೆಯುತ್ತವೆ. ಅಸಾಧರಣ ಮಕ್ಕಳು: ಮಾನಸಿಕವಾಗಿ ಅಥವಾ ದೈಹಿಕವಾಗಿ ಹುಟ್ಟಿನಿಂದ ಅಥವಾ ಆನಂತರದ ಕಾರಣದಿಂದ ವೈಕಲ್ಯ ಹೊಂದಿದ ಮಕ್ಕಳು ಅಂದರೆ ಸಾಧಾರಣ ಮಕ್ಕಳಿಗಿಂತ ಮನಸ್ಸು ಮತ್ತು ಅಂಗಗಳಲ್ಲಿ ಭಿನ್ನವಾಗಿರುವವರು(ಟಿಪಿಕಲ್ ಚಿಲ್ದ್ರನ್ಸ್); ಮಾನಸಿಕ ವೈಕಲ್ಯವಿರುವ ಮಕ್ಕಳಿಗೆ ರೂಢಿಯಲ್ಲಿ ಈ ಹೆಸರಿದೆ. ಬುದ್ಧಿಶಕ್ತಿಯಲ್ಲಿರುವ ವ್ಯತ್ಯಾಸಗಳನ್ನು ಮಾನಸಿಕ ಪರೀಕ್ಷೆಗಳಿಂದ ನಿರೀಕ್ಷಿಸಬಹುದು. ಸಾಧಾರಣ ಮಕ್ಕಳ ಐ.ಕ್ಯೂ.೧೦೦ ಆಗಿದ್ದರೆ ಮಾನಸಿಕ ವೈಕಲ್ಯವಿರುವ ಅಂದರೆ ಅಸಾಧಾರಣ ಮಕ್ಕಳ ಐ.ಕ್ಯೂ ಎಪ್ಪತ್ತಕ್ಕಿಂತ ಕಡಿಮೆ ಅಥವಾ ೧೪೦ ಕ್ಕಿಂತ ಹೆಚ್ಚು (ಇವರು ಅತಿಬುದ್ಧಿವಂತರು) ಇರುವುದು. ಅಸಾಧಾರಣ ಮಕ್ಕಳನ್ನು ನಾಲ್ಕು ವಿಭಾಗಗಳಾಗಿ ವಿಂಗಡಿಸಬಹುದು. ೧. ಐ. ಕ್ಯೂ ೫೦-೭೦ ರವರೆಗೆ ಇರುವ ಮಕ್ಕಳು. ಇವರಿಗೆ ಪ್ರಾಥಮಿಕ ವಿದ್ಯಾಭ್ಯಾಸ ಪೂರೈಸಲು ಸಾಧ್ಯವಿದೆ. ಇದಕ್ಕಿಂತ ಹೆಚ್ಚು ಮಟ್ಟಿನ ವಿದ್ಯಾಭ್ಯಾಸ ಸಾಧ್ಯವಾಗದು. ಇವರಿಗೆ ಪ್ರತ್ಯೇಕ ತರಗತಿಗಳಲ್ಲಿ ಶಿಕ್ಷಣವಿತ್ತರೆ ಅವರ ಕಲಿಯುವಿಕೆ ಚೆನ್ನಾಗಿ ಮುಂದುವರೆಯುವುದು. ಇಂಥವರು ಅಕ್ಷರಸ್ಥರಾಗುವರೇ ವಿನಾ ವಿದ್ಯಾವಂತರಾಗಲಾರರು. ಸಮಾಜದಲ್ಲಿ ಸಾಧಾರಣವಾದ ಕೆಲಸಗಳನ್ನು ಮಾಡಿ ತಮ್ಮ ಜೀವನೋಪಾಯವನ್ನು ಗಳಿಸುವರು. ೨. ಐ.ಕ್ಯೂ೩೦-೫೦ ರವರೆಗೆ ಇರುವ ಮಕ್ಕಳು. ಅಕ್ಷರಾಭ್ಯಾಸವನ್ನು ಮಾಡಲು ಸಾಧ್ಯವಿಲ್ಲ. ಇವರಿಗೆ ಪ್ರತ್ಯೇಕ ಶಾಲೆಗಳಲ್ಲಿ ತಕ್ಕ ತರಬೇತಿಯನ್ನು ಪಡೆದ ಉಪಾಧ್ಯಾಯರ ಮೂಲಕ ಅತಿ ಸುಲಭವಾದ ಕೆಲಸ ಕಾರ್ಯಗಳನ್ನು ಮಾಡುವುದನ್ನೂ ತಮ್ಮ ನಿತ್ಯ ಕಾರ್ಯಗಳನ್ನೂ ಕಲಿಸಬಹುದು. ೩. ಐ.ಕ್ಯೂ.೩೦ ಕ್ಕಿಂತ ಕಡಿಮೆ ಇರುವ ಮಕ್ಕಳು. ಇವರಿಗೆ ಏನನ್ನು ಮಾಡಲು ಸಾಧ್ಯವಿಲ್ಲ. ಇವರನ್ನು ಪ್ರತ್ಯೇಕ ಸಂಸ್ಥೆಗಳಲ್ಲಿಟ್ಟು ರಕ್ಷಿಸಬೇಕಾಗುವುದು. ೪. ಅತೀ ಬುದ್ಧಿವಂತ ಮಕ್ಕಳು ( ಐ. ಕ್ಯೂ. ೧೪೦ ಕ್ಕಿಂತ ಹೆಚ್ಚು). ಇವರಿಗೂ ಪ್ರತ್ಯೇಕವಾದ ತರಬೇತಿಯನ್ನು ನೀಡಬೇಕಾಗುವುದು. ಸಾಧಾರಣ ಶಾಲೆಗಳಲ್ಲಿ ಇವರ ಬುದ್ಧಿಶಕ್ತಿಗೆ ಸಾಕಾಗುವಶ್ಟು ಅವಕಾಶವಿರುವುದಿಲ್ಲ; ಶಿಕ್ಷಣಸೌಕಭ್ಯಗಳೂ ಇರುವುದಿಲ್ಲ. ಭಾವಜೀವನದಲ್ಲಿ ಸರಿಯಾದ ಬೆಳೆವಣಿಗೆಯನ್ನು ಹೊಂದದಿರುವ ಮಕ್ಕಳು ಅನೇಕ ವರ್ತನಾಸಮಸ್ಯೆಗಳಿಗೆ ತುತ್ತಗುವರು. ಮನೆಯಿಂದ ಓಡಿಹೋಗುವುದು, ಅತಿ ಹೆಚ್ಚಾಗಿ ಕೋಪಗೊಳ್ಳುವುದು, ಹಾಸಿಗೆಯಲ್ಲಿ ಮೂತ್ರವಿಸರ್ಜಿಸಿಕೊಳ್ಳುವುದು, ತೊದಲು ಮಾತನ್ನು ಆಡುವುದು ಮುಂತಾದವು ವರ್ತನಾಸಮಸ್ಯೆಗಳು. ಇವು ಉಂಟಾಗುವುದಕ್ಕೆ ತಂದೆತಾಯಿಗಳೂ, ಕುಟುಂಬದ ವಾತಾವರಣವೂ ಕಾರಣ. ಕೆಲ ತಂದೆ ತಾಯಿಗಳು ಮಕ್ಕಳನ್ನು ಅತಿ ಮುದ್ದಿನಿಂದ ಬೆಳೆಸಿ, ಅವರ ಭಾವಿಜೀವನದಲ್ಲಿ ವೈಪರೀತ್ಯವನ್ನು ಉಂಟುಮಾಡುವರು. ಹೀಗೆಯೆ ಮಕ್ಕಳನ್ನು ಪ್ರೀತಿಯಿಂದ ನೋಡದೆ ತಿರಸ್ಕರಿಸಿದಾಗಲೂ ಭಾವಜೀವನ ಸರಿಯಾಗಿರುವುದಿಲ್ಲ. ಅಣ್ಣತಮ್ಮಂದಿರಲ್ಲಿ ಅಥವಾ ಅಕ್ಕ ತಂಗಿಯರಲ್ಲಿ ಅತಿ ಹೆಚ್ಚಾದ ದ್ವೇಷ ಭಾವಜೀವನದ