ಪುಟ:Mysore-University-Encyclopaedia-Vol-1-Part-2.pdf/೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಒಂದು ದಹ್ಯವಸ್ತುವನ್ನು ಕಂಡುಹಿಡಿದು ಅದಕ್ಕೆ ವುಡ್ ಸ್ಪಿರಿಟ್ ಎಂದು ಹೆಸರಿಟ್ಟ. ಜರ್ಮನ್ ವಿಜ್ಞಾನಿ ಗ್ಲಾಬರ್, ಉತ್ಪತ್ತಿಯಾದ ಇಂಗಾಲದ ಸಂಯುಕ್ತಗಳಲ್ಲಿ ವಿನೆಗರ್ ಎಂಬ ಸಂಯುಕ್ತ ಮುಖ್ಯವಾದುದು ಎಂದು ತೋರಿಸಿದ (೧೬೫೮). ಟೈಲರ್ ವುಡ್ ಸ್ಪಿರಿಟ್ ಆಲ್ಕೋಹಾಲೆಂದೂ (೧೮೧೨) ಫ್ರಾನ್ಸಿನ್ ಡ್ಯೂಮಾಸಸ್ ಅದನ್ನು ಮೀಥೈಲ್ ಆಲ್ಕೋಹಾಲೆಂದೂ (೧೮೩೪) ಗುರುತಿಸಿದರು. ಕೋಲ್ ಟಾರ್ ಎಣ್ಣೆಯ ಸಂಯುಕ್ತಗಳು ಬಳಕೆಗೆ ಬಂದಮೇಲೆ, ಕಟ್ಟಿಗೆಯ ವಿಧ್ವಂಸಕ ಬಟ್ಟೆಯಿಂದ ಬರುವ ಸಂಯುಕ್ತಗಳಲ್ಲಿ ಅಸಿಟಿಕ್ ಆಮ್ಲ ಮೀಥೈಲ್ ಆಲ್ಕೋಹಾಲ್ ಮತ್ತು ಅಸಿಟೋನ್ ಈ ಮೂರು ಸಂಯುಕ್ತಗಳು ಬಹಳ ಮುಖ್ಯ. ೨೫೦೦-೪೦೦೦ ಸೆಂ. ಅಂತರದಲ್ಲಿ ತಾಂಡವಾಳದ ಪಾತ್ರೆಗಳಲ್ಲಿ ಕಟ್ಟಿಗೆಗಳನ್ನು ಇಟ್ಟು ಗಾಳಿಯ ಸಂಪರ್ಕವಿಲ್ಲದೆ ಕಾಯಿಸಿದಾಗ ನಾಲ್ಕು ಬಗೆಯ ವಸ್ತುಗಳು ಬ್ರುವುವು: ೧. ವುಡ್ ಗ್ಯಾಸ್; ೨ ನೀರು, ೩. ಮಿಶ್ರದ್ರವ (ಪೈರೋಲಿಗ್ನಿಯಸ್ ಆಮ್ಲ); ೩ ವುಡ್ ಟಾರು; ಮತ್ತು ೪ ವುಡ್ ಶೇಷ. ಇವುಗಳಲ್ಲಿ ಮುಖ್ಯವಾದುದು ನೀರು ಮಿಶ್ರದ್ರವವಾದ ಪೈರೊಲಿಗ್ನಿಯಸ್ ಆಮ್ಲ. ಈ ಆಮ್ಲದಲ್ಲಿ ಶೇ.೯-೧೦ ರಷ್ಟು ಅಸಿಟಿಕ್ ಆಮ್ಲ. ಶೇ.೧-೨ ರಷ್ಟು ಮೀಥೈಲ್ ಆಲ್ಕೋಹಾಲು ಮತ್ತು ಶೇ.೦.೧-೦.೫ ರಷ್ಟು ಅಸಿಟೋನ್ ಇರುವುವು.

ಚಿತ್ರದಲ್ಲಿ ತೋರಿಸಿದ ಮೂರು ಪಾತ್ರೆಗಳ ಜೋಡಣೆಯಲ್ಲಿ ಪೈರೊಲಿಗ್ನಿಯಸ್ ಆಮ್ಲವನ್ನು, ನೀರಾವಿಯನ್ನು ಸಿಂಬಿಯ ಮೂಲಕ ಹಾಯಿಸಿ ಕಾಯಿಸಿದಾಗ, ಆಮ್ಲದಲ್ಲಿರುವ್ ಅಸಿಟಿಕ್ ಆಮ್ಲ, ಮೀಥೈಲ್ ಆಲ್ಕೋಹಾಲ್ ಮತ್ತು ಅಸಿಟೋನ್ ಇವು ಆವಿಯಾಗುತ್ತವೆ. ಆವಿಯನ್ನು ಅರಳಿದ ಸುಣ್ಣ ಇರುವ ಒಂದೇ ತೆರನಾದ ಎರಡು ಪಾತ್ರೆಗಳ ಮೂಲಕ ಹಾಯಿಸುವರು. ಪೈರೊಲಿಗ್ನಿಯಸ್ ಆಮ್ಲದಲ್ಲಿರುವ ಟಾರು ಕೆಳಗೆ ಉಳಿದು ಕವಾಟದ ಮೂಲಕ ಹರಿದು ಕೆಳಗಡೆ ಇರುವ ಪಾತ್ರೆಯಲ್ಲಿ ಶೇಖರವಾಗುವುದು. ಎರಡು ಪಾತ್ರೆಗಳಲ್ಲಿರುವ ಅರಳಿದ ಸುಣ್ಣ ಅಸಿಟಿಕ್ ಆಮ್ಲ ವರ್ತಿಸಿ ಆವಿಯಾಗದ ಕ್ಯಾಲ್ಸಿಯಂ ಅಸಿಟೇಟ್ ಸಂಯುಕ್ತ ಉಂಟಾಗುವುದು. ನೀರಾವಿಯನ್ನು ಈ ಎರಡು ಪಾತ್ರೆಗಳ ಮೂಲಕ ಹಾಯಿಸಿದಾಗ ಅಸಿಟೋನ್ ಮತ್ತು ಮೀಥೈಲ್ ಆಲ್ಕೋಹಾಲ್ ಆವಿಯಾಗಿ ಕ್ಯಾಲ್ಸಿಯಂ ಅಸಿಟೇಟ್ ಹಾಗೆಯೇ ಉಳಿಯುವುದು. ಇದನ್ನು ಇನ್ನೆರಡು ಕವಾಟಗಳ ಮೂಲಕ ಹರಿಸಿ ಪಾತ್ರೆಯಲ್ಲಿ ಶೇಖರಿಸಿ ದೊಡ್ಡ ಬೇಸಿನ್ ನಲ್ಲಿ ಸಾಂದ್ರೀಕರಿಸುವರು. ಶೇ.೮೦ ರಷ್ಟು ಪ್ರಬಲ ದ್ರಾವಣ ಉಂಟಾಗುವುದು. ಗಂಧಕಾಮ್ಲ ಕ್ಯಾಲ್ಸಿಯಂ ಅಸಿಟೇಟ್ ನಲ್ಲಿರುವ ಆಮ್ಲವನ್ನು ಬಿಡುಗಡೆ ಮಾಡುವುದು.

ಶೇ.೭೦-೭೫ ರಷ್ಟು ಅಸಿಟಿಕ್ ಆಮ್ಲ ಉಂಟಾಗುವುದು. ಶುದ್ಧ ಆಮ್ಲ ಬೇಕಾದರೆ ಉತ್ಪತ್ತಿಯಾದ ಆಮ್ಲವನ್ನು ಸೋಡಿಯಂ ಹೈಡ್ರಾಕ್ಸೈಡ್ ದ್ರಾವಣದಲ್ಲಿ ತಟಸ್ಥೀಕರಿಸಿ, ಸೋಡಿಯಂ ಅಸಿಟೇಟ್ ದ್ರಾವಣವನ್ನು ಸಾಂದ್ರೀಕರಿಸಿ, ಸೋಡಿಯಂ ಅಸಿಟೇಟ್ ಹರಳುಗಳನ್ನು ಪ್ರಬಲ ಗಂಧಕಾಮ್ಲದೊಡನೆ ಬಟ್ಟೆ ಇಳಿಸಿದಾಗ ಗ್ಲೇಷಿಯಲ್ ಅಸಿಟಿಕ್ ಆಮ್ಲ ಉತ್ಪತ್ತಿಯಾಗುವುದು.

ಶೇ.೧೨-೧೫ ರಷ್ಟು ಆಲ್ಕೋಹಾಲ್ ಇರುವ ಹುಳಿ ಹಿಡಿದ ಕಷಾಯ (ಫರ್ ಮೆಂಟೆಡ್ ಲಿಕ್ಕರ್) ಬ್ಯಾಕ್ಟೀರಿಯ ಅಸಿಟೈಜೀವಾಣುಗಳ ಸಂಪರ್ಕದಲ್ಲಿ ಗಾಳಿಯೊಡನೆ ವರ್ತಿಸಿ ಅಸಿಟಿಕ್ ಆಮ್ಲವನ್ನು ಕೊಡುವುದು.

CH3. CH2.OH+O2→CH3.COOH+H2O. ಕ್ವಿಕ್ ವಿನೆಗರ್ ವಿಧಾನದಲ್ಲಿ ಅಸಿಟಿಕ್ ಫಂಗಸ್ ಅಥವಾ ಬ್ಯಾಕ್ಟೀರಿಯಾ ಅಸಿಟ್ಯ್ ಜೀವಾಣುಗಳ ಸಂಪರ್ಕದಲ್ಲಿ ದುರ್ಬಲ ಆಲ್ಕೋಹಾಲನ್ನು ತೊಟ್ಟು ತೊಟ್ಟಾಗಿ ಮರದ ಸಿಪ್ಪೆಗಳ ಮೇಲೆ ಬೀಳುವಂತೆ ಮಾಡಿ, ಗಳಿಯನ್ನು ಅದರ ಮೂಲಕ ಹಾಯಿಸಿದಾಗ ಆಲ್ಕೋಹಾಲ್ ಉತ್ಕರ್ಷಣ ಹೊಂದಿ ಅಸಿಟೆಕ್ ಆಮ್ಲ ಬರುವುದು. ಆಲ್ಕೋಹಾಲ್ ಉತ್ಕರ್ಷಣ ಹೊಂದಿದಾಗ ಉಷ್ಣತೆ ಉತ್ಪತ್ತಿಯಾಗಿ ೩೫ ಸೆಂ.ಗ್ರೇ ಮಟ್ಟದಲ್ಲಿರುವುದು. ಜೀವಾಣುಗಳು ಬೆಳೆಯುವುದಕ್ಕೆ ಈ ಉಷ್ಣತೆ ಅತ್ಯಂತ ಅನುಕೂಲವಾಗಿರುವುದು. ದುರ್ಬಲ ದ್ರಾವಣದಲ್ಲಿ ಶೇ.೧೦ ರಷ್ಟು ಅಸಿಟಿಕ್ ಆಮ್ಲವಿರುವುದು. ಈ ರೀತಿ ಆಗಲು ಹತ್ತು ದಿವಸಗಳಾಗುತ್ತವೆ.

ಇತ್ತೀಚೆಗೆ ಆಮ್ಲವನ್ನು ಅಸಿಟಲೀನ್ ನಿಂದ ತ್ಯಾರಿಸುವರು. ಅಸಿಟಲೀನ್ ಅನಿಲವನ್ನು ಪಾದರಸದ ಸಲ್ಫೇಟ್ ಇರುವ ದುರ್ಬಲ ಗಂಧಕಾಮ್ಲದ ಮೂಲಕ ಹಾಯಿಸಿದಎ ಅಸಿಟಲ್ಡಿಹೈಡ್ ಉತ್ಪಾತ್ತಿಯಾಗುವುದು. ಈ ಆಲ್ಡಿಹೈಡಿನ ಆವಿಯನ್ನೂ ಗಾಳಿಯನ್ನೂ ಮಿಶ್ರಮಾಡಿ ೬೦ ಸೆಂ.ಗ್ರೇ ಉಷ್ಣತೆಯಲ್ಲಿ ಮ್ಯಾಂಗನೀಸ್ ಅಸಿಟೇಟಿನ ಮೇಲೆ ಹಾಸಿದಾಗ ಅಲ್ಡಿಹೈಡ್ ಉತ್ಕರ್ಷಣ ಹೊಂದಿ ಅಸಿಟೆಕ್ ಆಮ್ಲ ಉತ್ಪತ್ತಿಯಗುವುದು.

೧೬.೬೦ ಸೆಂ.ಗ್ರೇ ಉಷ್ಣತೆಯಲ್ಲಿ ಕರಗುವ, ೧೧೮೦ ಸೆಂ.ಗ್ರೇ ಉಷ್ಣತೆಯಲ್ಲಿ ಕುದಿಯುವ ಅನ್ ಹೈಡ್ರಸ್ ಆಮ್ಲವನ್ನು ಗ್ಲೇಷಿಯಲ್ ಅಸಿಟಿಕ್ ಆಮ್ಲ ಎನ್ನುವರು. ಪಾಶ್ಚಿಮಾತ್ಯ ದೇಶಗಳಲ್ಲಿ ಚಳಿಗಾಲ ಬಂದಾಗ ಪ್ರಯೋಗಶಾಲೆಗಳಲ್ಲಿ ಈ ಆಮ್ಲ ಮಂಜುಗಡ್ಡೆಯಂಥ ಹರಳಾಕೃತಿಯನ್ನು ಹೊಂದಿರುವ ಕಾರಣ ಗ್ಲೇಷಿಯಲ್ ಅಸಿಟಿಕ್ ಆಮ್ಲ ಎಂದು ಹೆಸರುಂಟಾಯಿತು. ಈ ಆಮ್ಲದಲ್ಲಿ ತೇವಾಂಶವಿದ್ದರೆ ಅದರ ಕುದಿಯುವ ಬಿಂದು ಕಡಿಮೆಯಾಗುವುದು. ಇದು ಜಲಾಕರ್ಷಕ. ಈಥರ್, ಆಲ್ಕೊಹಾಲ್ ಮತ್ತು ನೀರು ಇವುಗಳಲ್ಲಿ ಎಲ್ಲ ಪ್ರಮಾಣಗಳಲ್ಲಿ ಬೆರೆಯುವುದು, ಇದು ನೀರಿನಲ್ಲಿ ವಿಲೀನವಾದಾಗ ಉಷ್ಣತೆ ಉತ್ಪತ್ತಿಯಾಗಿ, ಗಾತ್ರದಲ್ಲಿ ಕುಗ್ಗಿ ಮತ್ತೆ ಹಿಗ್ಗುವುದು. ಈ ಆಮ್ಲ ಗಂಧಕ, ಅಯೋಡಿನ್ ರಂಜಕ ಮತ್ತು ಇಂಗಾಲದ ಸಂಯುಕ್ತಗಳನ್ನು ವಿಲೀನಗೊಳಿಸುವುದು. ಇದು ಚರ್ಮದ ಮೇಲೆ ಬಿದ್ದಾಗ ತೀವ್ರ ನೋವುಂಟು ಮಾಡುವ ಗಾಯಗಳಾಗುತ್ತವೆ. ಇದು ಏಕಪ್ರತ್ಯಾಮ್ಲೀಯ ಆಮ್ಲ. ಅಯೋಡಿನ್ ಸಂಪರ್ಕದಲ್ಲಿ ಕ್ಲೋರೀನ್ ಅಸಿಟೆಕ್ ಆಮ್ಲದೊಡನೆ ವರ್ತಿಸಿದಾಗ ಕ್ಲೋರೋ ಅಸಿಟಿಕ್ ಆಮ್ಲಗಳು ಉಂಟಾಗುವುವು. ಕ್ಷಾರ, ಆಕ್ಸೈಡ್ ಮತ್ತು ಕಾರ್ಬೊನೇಟ್ ಇವುಗಳೊಡನೆ ಗಂಧಕಾಮ್ಲವನ್ನು ಸೇರಿಸಿ ಅಸಿಟಿಕ್ ಆಮ್ಲದೊಡನೆ ಕಾಯಿಸಿದಾಗ ಸುವಾಸನೆಯುಳ್ಳ್ ಎಸ್ಟರ್ ಉತ್ಪತ್ತಿಯಾಗುವುದು.

ಅರ್ಸೆನಿಕ್ ಆಕ್ಸೈಡಿನೊಡನೆ ಇದನ್ನು ಕಾಯಿಸುವುದರಿಂದ ಘಾಟುವಾಸನೆಯುಳ್ಳ ವಿಷ ಸಂಯುಕ್ತ ಕ್ಯಾಕೊಡಿಲ್ ಆಕ್ಸೈಡ್ ಉಂಟಾಗುವುದು. ಅಸಿಟಿಕ್ ಆಮ್ಲದ ಆವಿಯನ್ನು ಮ್ಯಾಂಗನೀಸ್ ಆಕ್ಸೈಡಿನ ಮೇಲೆ ೩೦೦ ಸೆಂ.ಗ್ರೇ ಉಷ್ಣತೆಯಲ್ಲಿ ಹಾಯಿಸಿದಾಗ ಅಸಿಟೋನ್ ಉಂಟಾಗುವುದು.

ಈ ಆಮ್ಲದ ಎರಡು ಬಗೆಯ ಲವಣಗಳಿವೆ: ೧. ಕರಗುವ ನಾರ್ಮಲ್ ಅಸಿಟೇಟ್ ಗಳು, ಕರಗದ ಪ್ರತ್ಯಾಮ್ಲೀಯ ಅಸಿಟೇಟ್ ಗಳು. ಸಾಮಾನ್ಯ ಅಸಿಟೇಟುಗಳಲ್ಲಿ ಮುಖ್ಯವಾದುವು ಸೋಡಿಯಂ ಅಸಿಟೇತ್, ಸೀಸದ ಅಸಿಟೇಟ್, ಪ್ರತ್ಯಾಮ್ಲೀಯ ಅಸಿಟೇಟುಗಳಲ್ಲಿ ಮುಖ್ಯವಾದುವು ತಾಮ್ರದ ಅಸಿಟೇಟ್. ತಾಮ್ರದ ಅಸಿಟೇಟನ್ನು ವರ್ಡಿಗ್ರೀಸ್ ಎನ್ನುವರು ನಾರ್ಮಲ್ ಫೆರಿಕ್ ಅಸಿಟೇಟ್ ಕಾಯಿಸಿದಾಗ ಕೆಂಪುವತ್ತರವುಳ್ಳ ಪ್ರತ್ಯಾಮ್ಲೀಯ ಫೆರಿಕ್ ಅಸಿಟೇಟ್ ಉಂಟಾಗುವುದು. ಪ್ರತ್ಯಾಮ್ಲೀಯ ಅಸಿಟೇಟುಗಳನ್ನು ಬಟ್ಟೆಗೆ ಬಣ್ಣ ಹಾಕುವಾಗ ಮಾರ್ಡಂಟ್ ಆಗಿ ಉಪಯೋಗಿಸುವರು.

ಕಾಲಿನ ಆಣಿಯನ್ನು ತೆಗೆಯಲು ಗ್ಲೇಷಿಯಸ್ ಆಮ್ಲವನ್ನು ಉಪಯೋಗಿಸುವರು. ದುರ್ಬಲ ಆಮ್ಲ ಅಥವಾ ವಿನೆಗರನ್ನು ಜ್ವರ ಬಂದಾಗ ಚರ್ಮಕ್ಕೆ ಸವರಿದರೆ ತಂಪು ಮಾಡುವುದು. ಔಷಧೀಯವಾಗಿ ಸೇವನೆಗೆ ಒಳ್ಳೆಯ ಗುಣಗಳನ್ನು ಪಡೆದಿಲ್ಲವಾದರೂ ಶೇ.೫ ರಷ್ಟು ಆಮ್ಲವನ್ನ್ ಅಡಿಗಡಿಗೆ ತೆಗೆದುಕೊಂಡರೆ ದೇಹದ ತೂಕ ತಗ್ಗಿಸಲ್ಪಡುವುದೆಂದು ಹೇಳುವರು. ಪೊಟಸಿಯಂ ಅಸಿಟೇಟ್ ರಕ್ತದಲ್ಲಿ ಕಾರ್ಬನೇಟಾಗಿ ಉತ್ಕರ್ಷಿಸಲ್ಪಡುವುದರಿಂದ ರಕ್ತದಲ್ಲಿ ಕ್ಷಾರೀಯ ಸ್ವಭಾವವನ್ನು ಹೆಚ್ಚಿಸುವುದಕ್ಕಾಗಲಿ ಅಥವಾ ಮೂತ್ರದ ಆಮ್ಲತೆಯನ್ನು ಕುಗ್ಗಿಸುವುದಕ್ಕಾಗಲಿ ಪೊಟಾಸಿಯಂ ಅಸಿಟೇಟನ್ನು ಔಷದಿಯಾಗಿ ಕೊಡುವರು. ಆಹಾರದ ಅಂಶಗಳಿಂದ ಕಾರ್ಬೋಹೈಡ್ರೇಟ್ ಗಳು ಮತ್ತು ಕೊಬ್ಬುಗಳು ದೇಹದಲ್ಲಿ ರಾಸಾಯನಿಕ ಕ್ರಿಯೆಗೊಳ್ಪಟ್ಟಾಗ, ಕೋಶಗಳಲ್ಲಿ ಅಸಿಟಿಕ್ ಆಮ್ಲ ಅಸಿಟೈಲ್ ಕೊ ಎನ್ ಜ್ಯ್ಮ್ ಎ ಎಂಬ ರೂಪದಲ್ಲಿ ಉತ್ಪತ್ತಿಯಾಗುವುದು. ಮೂತ್ರದಲ್ಲಿ ಅಲ್ಬುಮಿನ್ ಎಂಬ ಪ್ರೊಟೀನನ್ನು ಕಂಡುಹಿಡಿಯಲು ಈ ಸಾಮಾನ್ಯ ಆಮ್ಲವನ್ನು ಬಳಸುವರು. ನಾಲ್ಕು ಅಥವಾ ಐದು ಮಿ.ಲೀ ಲೀಟರಿನಷ್ಟು ಶೋಧಿಸಿದ ಮೂತ್ರವನ್ನು ಪ್ರನಾಳದಲ್ಲಿ ತೆಗೆದುಕೊಂಡು ಕಾಯಿಸಬೇಕು. ಮೂತ್ರದಲ್ಲಿ ಅಲ್ಬುಮಿನ್ ಇದ್ದರ ಮಾಸಲು ಬಿಳುಪು ಬರುವುದು. ಈ ಬಣ್ಣ ಮೂತ್ರದ ಫಾಸ್ಪೇಟ್ ಗಳಿಂದಲೂ ಬರುವುದು. ಐದಾರು ತೊಟ್ಟು ಶೇ.೫-೧೦ ರಷ್ಟು ಅಸಿಟಿಕ್ ಆಮ್ಲವನ್ನು ಮೂತ್ರಕ್ಕೆ ಸೇರಿಸಿ ಕುದಿಸಿದಾಗ ಫಾಸ್ಫೇಟಿದ್ದರೆ ವಿಲೀನವಾಗುವುದು.