ಪುಟ:Mysore-University-Encyclopaedia-Vol-1-Part-3.pdf/೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೮೭೧

                                                     ಆರೋಗ್ಯ ಸುರಕ್ಷಣ ಕಾಯಿದೆಗಳು

ಪರ್ಸಿವಾಲ್ ಪಾಟ್ ಬರೆದ ಕುಲುಮೆಗಾರರ ರೋಗಗಳು ಹಾಗೂ ೧೮೩೧ ರಲ್ಲಿ ಚಾರಲ್ಸ್ ಟರ್ನರ್ ಥಾಕ್ರಾದವರು ಬರೆದ ಕೈಗಾರಿಕೆಗಳಿಂದೇಳುವ ರೋಗಗಳು,ಆಮೂಲಾಗ್ರ ಅಧ್ಯಯನ --ಇವು ಮುಖ್ಯ ಎಡ್ವಿನ್ ಚಾಡ್ವಿಕ್ ಮೊದಲಾದ ಸಮಾಜಸುಧಾರಕರು ಕಡೆಯ ವರೆದಿಗೆ ಬಹಳ ಮಹತ್ತ್ವ ಕೊಟ್ಟು ಅದನ್ನು ಆಧಾರವಾಗಿಟ್ಟುಕೊಂಡಿದ್ದರು.

ಆಕಸ್ಮಿಕಗಳು : ಅನೇಕರಿಗೆ ಕೆಲಸಮಾಡುವಾಗ ಚಿಕ್ಕಪುಟ್ಟ ಗಾಯಗಳು,ತೀವ್ರತರ ಗಾಯ, ಕೈಕಾಲು ಯಂತ್ರದಲ್ಲಿ ಸಿಕ್ಕಿಯೋ ಗಣಿಗಳಲ್ಲಿ ಮೇಲಿನಿಂದ ಒಮ್ಮೆಲೇ ಬೀಳುವ ಕಲ್ಲು ಇತ್ಯಾದಿಗಳಿಂದಲೋ ಅಂಗ ಊನವಗುವುದು,ಕುರುಡಾಗುವುದು,ಕಿವುಡಾಗುವುದು ಸಾಮನ್ಯ ಸುರಕ್ಷಣೆಗಾಗಿ ತಕ್ಕ ಸೌಲಭ್ಯಗಳನ್ನು ಧಣೆಗಳು ಒದಗಿಸಿದರೂ ಅಪಘಾತಗಳಾಗುತ್ತವೆ. ಈ ರೀತಿಯ ಅಪಘಾತಗಳಿಗೆ ಹಣವನ್ನು ಪರಿಹಾರವಾಗಿ ಕೊಡಲು ತೀರ್ಮಾನವಾಯಿತು.ಇದ್ಕ್ಕೆ ಮೊದಲು ಒಬ್ಬ ಕೆಲಸಗಾರ ಪರಿಹಾರ ಪಡೆಯಲು,ನಾಯಸ್ಥಾನದಲ್ಲಿ ಅಪಘಾತಕ್ಕೆ ಧಣಿಯ ನಿರ್ಲಕ್ಷ್ಯವನ್ನು ಸಾಬೀತು ಮಾಡಿದ ಹೊರತು ಯಾವ ಪರಿಹಾರವೂ ದೊರಕುತ್ತಿರಲಿಲ್ಲ.ಅಪಾಯವೆಂಬುದು ತಿಳಿದೂ ಕೆಲಸಗಾರನ ಅಕ್ಷ್ಯದಿಂದಾದ ಅಪಘಾತಕ್ಕೆ ಯಾವ ತರಹದ ಪರಿಹಾರವೂ ದೊರಕುತಿರಲ್ಲಿಲ್ಲ.ಮಾಲೀಕನೇನೋ ಯಂತ್ರೋಪಕರಣಗಳನ್ನು ಸುಸಜ್ಜಿತವಾಗಿ ನ್ಯೂನ್ಯತೆಗಳಿಲ್ಲದಂತೆ,ನೋಡಿಕೊಳ್ಳಬೇಕೆಂದು ನಮೂದಿಸಿತ್ತಾದರೂ ಹಾಗೆ ಅವನು ನೋಡಿಕೊಳ್ಳದೇ ಆದ ಅಪಘಾತಕ್ಕೆ ಕೆಲಸಗಾರನಿಗೆ ಪರಿಹಾರವಿರಲ್ಲಿಲ್ಲ.ಮಾಲೀಕ ಸುರಕ್ಷಣೆಗೆ ಸಂಬಂಧಿಸಿದ ಕಟ್ಟಳೆಯನ್ನು ಮೀರಿದ್ದರೂ ಅವನ ಮೇಲೆ ಯಾವ ರೀತಿಯ ಹೊಣೆಯನ್ನೂ ಹೊರಿಸುತ್ತಿರಲಿಲ್ಲ.ಇಂಗ್ಲೆಂಡಿನಲ್ಲಿ ೧೮೮೦ ಪಾರ್ಲಿಮೆಂಟು ಮಾಲೀಕರ ಹೊಣೆಗಾರಿಕೆ ಶಾಸನ ಮಂಡಿಸಿತ್ತಾದರೂ ಈ ಶಾಸನ ಕಡತದಲ್ಲೇ ಉಳಿಯಿತು.ಏಕೆಂದರೆ ಇಂಗ್ಲೆಂಡ್ ನ ನ್ಯಾಯಸ್ಥಾನಗಳು-ಈ ಶಾಸನದಲ್ಲಿ ಮಾಲೀಕರು ತಮ್ಮ ಕೆಲಸಗಾರರನ್ನು ಸೇರಿಸಿಕೊಲ್ಲುವ ಮುಂಚೆ ಶಾಸನದಲ್ಲಿ ಅಡಕವಾಗಿರುವ ಕಟ್ಟಳೆಗಳು ತಮಗೆ ಅನ್ವಯಿಸದಂದು ಒಪ್ಪಂದ ಮಾದಿಕೊಂಡು ಕೆಲಸ ಕೊಡಲು ಅಡೆಚಣೆಗಳಿಲ್ಲವೆಂದೂ,ಹಾಗೆ ನ್ಯಾಯಬಾಹಿರವಲ್ಲವೆಂದೂ ಪರಿಗಣಿಸಿತು.ಜರ್ಮನಿಯಲ್ಲಿ ಬಿಸ್ಮಾರ್ಕ್(೧೮೮೪) ಜಾರಿಗೆ ತಂದ ಪರಿಹಾರ ವಿಮಾಶಾಸನ ಮುಂಜೆ ಬಂದ ಶಾಸನಗಳಿಗೆ ಮೂಲಾಧಾರ,ಮಾದರಿ ಆಯಿತು.ಇಂಗ್ಲೆಂಡಿನ ಕೆಲಸಗಾರರ ಪರಿಹಾರ ಶಾಸನ(೧೮೯೭),ಆಮೇಲೆ ಅಮೇರಿಕ ಸಂಯುಕ್ತಸಂಸ್ಥಾನಗಳಲ್ಲಿ ಜಾರಿಗೆ ಬಂದ ಶಾಸನ ಇವೆರಡೂ ಬಿಸ್ಮಾರ್ಕ್ ಮಾಡಿದ ಶಾಸನದ ಮಾದರಿಯನ್ನು ಅನುಸರಿಸಿದ್ದುವು.೧೮೮೦ ರಿಂದ ೧೯೧೦ ರೊಳಗೆ ಅಮೇರಿಕ ಸಂಯುಕ್ತಸಂಸ್ಥಾನಗಳಲ್ಲಿ,ಎಲ್ಲಾ ಸಂಸ್ಥಾನಗಳೂ ಕೈಗಾರಿಕೋದ್ಯಮಗಳಲ್ಲಿ ಉಂಟಾಗುವ ಅಪಘಾತಗಳಿಗೆ,ಒಂದಲ್ಲೊಂದು ರೀತಿಯಲ್ಲಿ ಮಾಲೀಕರು ಜವಾಬ್ದಾರರೆಂಬ ತತ್ತ್ವ ಮನದಟ್ಟಾಗಿ ಶಾಸನಗಳಾದುವು.೧೯೦೬-೧೯೦೮ ರಲ್ಲಿ ರೈಲ್ ರಸ್ತೆ ಕೆಲಸಗಾರರಿಗೆ ಪರಿಹಾರ ದೊರಕುವಂತೆ ಮಾಡಿದ ಶಾಸನಗಳೇ ಮುಖ್ಯ.ಈ ಶಾಸನಗಲೂ ಏರಿಪೇರುಗಳಿಗೊಳಗಾದರೂ ಕೊನೆಗೆ ಶಾಸನ ಬದ್ಧವೆಂದು ಪರಿಗಣಿಸಲಾಯಿತು.

ಜನತೆಯ ಸುರಕ್ಷಣೆ : ೧೭ನೇ ಶತಮಾನದಲ್ಲಿ ಹೊರಬಿದ್ದ ದಾರಿದ್ರ್ಯ ನಿವಾರಣೆ ಶಾಸನ ಜಾರಿಗೆ ಬರುವ ಮುನ್ನ ದರಿದ್ರರನ್ನು ನೋಡಿಕೊಳ್ಳುವ ಜವಾಬ್ದಾರಿ ಪಾಶ್ಚಿಮಾತ್ಯ ದೇಶಗಳಲ್ಲಿ ಚರ್ಚಿನ ಹೊಣೆಯಾಗಿತ್ತು.ಭಾರತದಲ್ಲಂತೂ ದಾರಿದ್ರ್ಯ ನಿವಾರಣೆ ಎಂದರೆ ಎರಡು ಹೊತ್ತು ಊಟಕ್ಕೆ ಭಿಕ್ಷೆ ಬೀಡುವುದೇ ರೂಢಿಯಾಗಿ ಬಿಟ್ಟಿತ್ತು.ಜೊತೆಗೆ ಭಿಕ್ಷೆ ಹಾಕುವುದು ಒಂದು ಧರ್ಮಕಾರ್ಯವೆಂದು ನಂಬಿಕೆ ಇತ್ತು.ಭಾರತದಲ್ಲೆಲ್ಲ,ಅದರಲ್ಲೂ ಯಾತ್ರಾಸ್ಥಳಗಳಲ್ಲಿ ಧರ್ಮಛತ್ರಗಳು ಉಚಿತವಾಗಿ ಊಟ ವಸತಿಗಳನ್ನು ಯಾತ್ರಿಕರಿಗೆ ಒದಗಿಸುವುದು ಮಾತ್ರವಲ್ಲದೆ ; ನಿರ್ಗತಿಕರು,ದೀನರು,ದರಿದ್ರರಿಗೆ ದಿನವೂ ಉಚಿತವಾಗಿ ಆಹಾರ ಒದಗಿಸುವದು ಒಂದು ಸಹಯೋಗವಂಬ ಭಾವನೆಯಿದೆ.ಹಳ್ಳಿಯಲ್ಲೂ ಮನೆಯಲ್ಲೂ ಊಟಮಾಡುವ ಸಮಯಕ್ಕೆ ಬಂದ ಅಥಿತಿ ಅಭ್ಯಾಗತರಿಗೇ ಅಲ್ಲದೆ ದೀನದರಿದ್ರರಿಗೂ ಆಹಾರ ನೀಡುವುದು ಯಜಮಾನನ ಕರ್ತವ್ಯವೆಂದು ತಿಳಿಯಲಾಗಿತ್ತು.ಇದರಿಂದ ಇಹಲೋಕ ಪರಲೋಕಗಳಲ್ಲಿ ಪಪಗಳು ಕಳೆದು ಮೋಕ್ಷ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇತ್ತು.ಈಗಲೂ ಅನೇಕ ಸಾಂಪ್ರದಾಯಿಕ ಕುಟುಂಬಗಳಲ್ಲಿ ಇದು ಆನುವಂಶಿಕವಾಗಿ ನಡೆದುಕೊಂಡು ಬರುತ್ತಿದೆ.ಯೆಹೂದಿಯರಲ್ಲೂ ಇದೇ ರೀತಿಯ ಭಾವನೆಗಳನ್ನು ಕಾಣಬಹುದು.ರಾಜರು ಕೆಲವರ,ತಮ್ಮ ಅಧೀನಕ್ಕೊಳಪಟ್ಟ ಸಾಮಂತರ ಹಾಗೂ ಶ್ರೀಮಂತರ ಅವರವರ ಆಡಳಿತ ಕ್ಷೇತ್ರದಲ್ಲಿರುವ ದೀನದರಿದ್ರರಿಗೆ ನೆರವುಕೊಟ್ಟು ಕಾಪಾಡುವ ಜವಾಬ್ದಾರಿಯನ್ನು ಹೊರಿಸಿದ್ದರು.ಹಿಂದಿನ ಕಾಲದಿಂದಲೂ,ಸಮಾಜದಲ್ಲಿ ತಮ್ಮ ತಮ್ಮಲ್ಲೇ ಸಂಘಗಳನ್ನು ಕಟ್ಟಿಕೊಂಡು ಅನೇಕ ರೀತಿಯ ಸಾರ್ವಜನಿಕ ಹಿತದೃಷ್ಟಿಯ ಧ್ಯೇಯಗಳನ್ನು ಸಾಧಿಸುವುದು ತಿಳಿದ ವಿಚಾರ.ಉದಾಹರಣೆಗೆ ದಾರಿದ್ರ್ಯ.ನೀಗಲು ಉದ್ಯೋಗ ಒದಗಿಸುವುದು.ಧರ್ಮಪಾಲನೆಗೆ ಶವಸಂಸ್ಕಾರದ ಏರ್ಪಾಟು,ವಿಧವೆ ಆದವಳು ಮತ್ತೊಬ್ಬರಿಗೆ ಹೊರೆಯಾಗದ ರೀತಿ ಅವಳಿಗೆ ಕೆಲಸದ ಹವಣೆಕೆ ಇತ್ಯಾದಿ.ಈ ರೀತಿಯ ಧರ್ಮಕಾರ್ಯಗಳು ಎಷ್ಟೇ ನಡೆಯುತ್ತಿದ್ದರೂ ಸಮಸ್ಯೆ ಬೃಹದಾಕಾರವಾದ್ದರಿಂದ ಖಾಸಗಿ ಸಂಸ್ಥೆಗಳಿಗೆ ಪರಿಹಾರ ಏರ್ಪಾಡು ಮಾಡುವುದೂ,ಆಗದ ಕೆಲಸವಾಯಿತು.ಆದರಲ್ಲಿ ಕ್ಷಾಮ ಡಾಮರ,ಆರ್ಥಿಕ ಮುಗ್ಗಟ್ಟುಗಳೇ ಮುಂತಾದ ಕಾಲಗಳಲ್ಲಿ ನಿರುದ್ಯೋಗ ಭೀಕರ ರೂಪವನ್ನು ತಾಳಿ ದಾರಿದ್ರ್ಯ,ಹಸಿವು,ರೋಗರುಚಿನಾದಿಗಳು ತಾಂಡವವಾಡುತ್ತಿದ್ದಾಗ ಸರ್ಕಾರ ಸುಮ್ಮನೆ ಕೊಡಲಾಗಲಿಲ್ಲ.ಸಾರ್ವಜನಿಕರಿಂದ ಮೇಲಿಂದ ಮೇಲೆ ಒತ್ತಾಯ ಆರಂಭವಾಯಿತು.೧೬ನೆಯ ಶತಮಾನದ ಮೊದಲಲ್ಲೇ ಸರ್ ಥಾಮಸ್ ಮೋರ್ ತಮ್ಮ ಯೂಟೋಪಿಯಾ ಗ್ರಂಥದಲ್ಲಿ ಸರ್ವಜನಿಕ ಆರೋಗ್ಯ ರಕ್ಷಣೆಗೆ ಕಾರ್ಯಕ್ರಮಗಳು,ಸಮಾಜಾರೋಯ ವಿಮಾ,ಸಾಮಾಜಿಕ ಭದ್ರತೆ ಕಾಪಾಡಲು ಕ್ರಮಗಳು ಹಾಗೂ ಸಾರ್ವಜನಿಕ ವಸತಿನಿರ್ಮಣ ಇವೇ ಮೊದಲಾದ ಯೋಜನೆಗಳನ್ನು ಸೂಚಿಸಿದ್ದ.ಇದೇ ರೀತಿ ಡೇನಿಯಲ್ ಡೀಫೊ ಕೊಡ ಸುಧಾರಣೆಗಳನ್ನು ಸೂಚಿಸಿದ್ದ.ಡೆನಿಸ್ ಡೈಡೆರೋ ಬರೆದ ವಿಶ್ವಕೋಶದಲ್ಲಿ ಆಸ್ಪತ್ರೆಗಳ ವಿಚಾರದಲ್ಲಿ ಬರೆಯುತ್ತ ಮುಪ್ಪಿನಕಾಲದ ಮಿಮೆ,ವೈದ್ಯಕೀಯ ನೆರವು ಮುಂತಾದ ಸಾರ್ವಜನಿಕ ನೆರವುಗಳ ಯೋಜನೆಗಳ ವಿಚಾರವಾಗಿ ಸ್ಥೂಲವಾಗಿ ವಿವರಿಸಿದ್ದಾನೆ.

ಇಂಗ್ಲೆಂಡಿನಲ್ಲಿ ೧೯೪೮ರ ಹೊತ್ತಿಗೆ ಎಲಿಜಬೆತ್ ಕಾಲದಿಂದ ದಾರಿದ್ರ್ಯ ನಿವಾರಣ ಶಾಸನ ಮೂಲೆಗೆ ಬಿತ್ತು.ರಾಷ್ಟ್ರೀಯ ನೆರವು ಶಾಸನ ಜಾರಿಗೆಬಂದು,ಮೊದಲಿದ್ದ ಅನೇಕ ಪುರಾತನ ಕಲ್ಪನೆಗಳು ದೂರವಾದುವು.ಒಂದನೆಯ ಮಹಾಯುದ್ಧಕ್ಕೆ ಮೊದಲೆ,೧೯೧೧ರ ರಾಷ್ಟ್ರೀಯ ಆರೋಗ್ಯ ವಿಮಾ ಶಾಸನ ಮಂಡಿತವಾಗಿತ್ತು.ಇದರಿಂದ ಕೆಲಸಗಾರ ರೋಗಿಯಾದರೆ ವೈದ್ಯಕೀಯ ನೆರವು ಬೇಕಾದರೆ,ಪರಿಹಾರ ಒದಗಿಸಬೇಕೆಂಬ ಮೂಲತತ್ತ್ವ ಅಂಗೀಕೃತವಾಗಿತ್ತು.ಆದರೆ ಈ ಪರಿಹಾರವನ್ನು ಬೆಳಸಲು ಕೆಲಸಗಾರರು ವಿಮಾ ಯೋಜನೆಗೆ ಒಳಪಟ್ಟಿರುವುದು ಕಡ್ಡಾಯವಾಗಿತ್ತು.ಎರದನೆಯ ಮಹಾಯುದ್ಧದ ಕೊನೆಯಲ್ಲಿ ರಾಷ್ಟ್ರೀಯ ವಿಮಾ ಶಾಸನ(೧೯೪೪), ಕುಟುಂಬ ಸಂಭಾವನಾ ಶಾಸನ(೧೯೪೫),ರಾಷ್ಟ್ರೀಯ ಜನಾರೋಗ್ಯ ಸೇವಾ ಶಾಸನ(೧೯೪೬),ರಾಷ್ಟ್ರೀಯ ವಿಮಾ ಶಾಸನಗಳನ್ನು(೧೯೪೬) ಪಾರ್ಲಿಮೆಂಟ್ ಅಂಹೀಕರಿಸಿತು.ಇವೆಲ್ಲದರಿಂದ ಸಾರ್ವಜನಿಕ ನೆಮ್ಮದಿಯ ವಿಚಾರದಲ್ಲಿ ಸರ್ವವ್ಯಾಪಕ ಯೋಜನೆಗೆ ವಾತಾವರನ ಚೆನ್ನಾಗಿತ್ತು.

ಅಮೆರಿಕ ಸಂಯುಕ್ತ ಸಂಸ್ಥಾನಗಳಲ್ಲಿ ೧೯೫೩ರ ಹೊತ್ತಿಗೆ ಆರೋಗ್ಯ,ವಿದ್ಯೆ,ಸುರಕ್ಷಣೆಯ ಬೇರೆ ಇಲಾಕೆಯೇ ರೂಪುಗೊಂಡರೂ,ಅನೇಕ ಸಮಾಜಶಾಸನಗಳು ಸಂಯುಕ್ತ ರಾಷ್ಟ್ರ ಸರ್ಕಾರ ಹಾಗೂ ಸಂಸ್ಥಾನಗಳ ಪರಸ್ಪರ ಸಹಕಾರದ ಮೇಲೆ ನಿಂತಿತ್ತು.ಇವು ಪೊರ್ಣ ರಾಷ್ಟ್ರೀಯ ಸ್ವತ್ತಗಿರಲಿಲ್ಲ.ಮುಖವಾಗಿ ಸಂಯುಕ್ತ ರಾಷ್ಟ್ರ ಸರ್ಕಾರ ಸಂಸ್ಥಾನಗಳಿಗೆ ಸಹಾಯದ್ರವ್ಯವನ್ನು ಒದಗಿಸುತ್ತಿತ್ತು.ಉದಾಹರಣೆಗೆ ಬಾಣಂತಿ,ಶಿಶುಶಾಸನ(೧೯೨೧),ರಾಷ್ಟ್ರೀಯ ಶಾಲಾ ಉಪಹಾರ ಶಾಸನ(೧೯೪೬) ಇವು ಪರಸ್ಪರ ಸಹಕಾರದಿಂದ ಬ್ಧವಾದ ಶಾಸನಗಳು.ಇಂಗ್ಲೆಂಡ್ ಸ್ಕ್ಯಾಂಡಿನೇವಿಯ ದೇಶಗಳಷ್ಟು ಕಲ್ಯಾಣರಾಜ್ಯ ಸ್ಥಾಪನೆಯಲ್ಲಿ ಅಮೇರಿಕ ಸಂಯುಕ್ತ ಸಂಸ್ಥಾನ ಮುಂದುವರಿದಿಲ್ಲವೆಂದು ಹೇಳಬಹುದು.ಆದರೂ ಎಲ್ಲ ಸಮಾಜ ಶಾಸನಕ್ಕೂ ವಿಮಾ ತತ್ತ್ವವನ್ನು ಅನ್ವಯಿಸಬೇಕೆಂದು ಅಭಿಪ್ರಾಯ ರೂಪುಗೊಳ್ಳುತ್ತಿರುವ ಹಾಗೆ ಕಂಡುಬರುತ್ತದೆ.

೧೯೩೦ರ ಆರ್ಥಿಕ ಮುಗ್ಗಟ್ಟು,ಸಾರ್ವಜನಿಕರಿಗೆ ನೆರವು,ನಿರುದ್ಯೋಗ ಪರಿಹಾರ,ಸಮಾಜಿಕ ಭದ್ರತಾ ವೇತನ ಕೆಲವು ಸಾರ್ವಜನಿಕ ನೆಮ್ಮದಿಯ ರಕ್ಷಣಾ ಕಾಯಿದೆಗಳಿಗೆ ದಾರಿಮಾಡಿ ಕೊಟ್ಟಿತು.ಈ ಕಾಯಿದೆಗಳು ಇಡೀ ರಾಷ್ಟ್ರಕ್ಕೆ ಅನ್ವಯಿಸುವ ಕಾಯಿದೆಗಳು.ಸಮಾಜ ಸುಧಾರಣಾ ಕಾಯಿದೆಗಳ ಪೈಕಿ ಸಮಾಜದ ಭದ್ರತೆ ಕಾಪಾಡಲು ಹಾಗೂ ನ್ಯಾಯಸಮ್ಮತವಾದ ಕಾರ್ಮಿಕರ ಸೇವಾಸ್ಥಿತಿಗಳನ್ನು ನಿಗದಿ ಮಾಡುವ ಶಾಸನಗಳೂ ಮುಖ್ಯವಾದುವು.

೧೯೩೭ರ ಆರಂಭದಲ್ಲಿ ಅಮೇರಿಕ ವರಿಷ್ಠ ನ್ಯಾಯಾಲಯ ಕಾಂಗ್ರೆಸ್ಸಿಗೆ ಶಾಸನಗಳನ್ನು ಮಾಡುವ ಪೂರ್ಣಹಕ್ಕು ಇದೆ ಎಂದು ಸಾರಿತು.ಆದರೂ ಈ ಶಾಸನಗಳ ಸತ್ವದಲ್ಲೂ ಕಾರ್ಯಕ್ರಮಗಳಲ್ಲೂ ನ್ಯೂನ್ಯತೆಗಳೂ ಲೋಪದೋಷಗಳು ಇದ್ದೇ ಇದ್ದುವು.ಸಂಸ್ಥಾನಗಳ ರಾಜ್ಯಾಂಗಗಳಲ್ಲಿ ಅಡಕವಾಗಿರುವ ಹಕ್ಕು ಬಾಧ್ಯತೆಗಳ ಮೇಲೆ ಸಂಸ್ಥಾನಗಳಲ್ಲಿರುವ ನ್ಯಾಯಾಂಗ-ಶಾಸನಗಳು ನ್ಯಾಯಸಮ್ಮತ ಅಥವಾ ಅಸಮ್ಮತವೆಂದು ನಿರ್ಧಾರ ಮಾಡುತ್ತವೆ.ಆದರೆ ಸಾರ್ವಜನಿಕ ಆರೋಗ್ಯಕ್ಕೆ ಸಂಬಂಧಿಸಿದ ಶಾಸನಗಳನ್ನು ಆಚರಣೆಗೆ ತರುವಾಗ ಮಾತ್ರ ಅನೇಕ ನ್ಯೂನ್ಯತೆಗಳು ಕಂಡುಬಂದಿವೆ.ಶಾಸನದ ವಿಧಿಗಳನ್ನು ಚಲಾಯಿಸಲು ಆಧಿಕಾರವನ್ನು ನ್ಯಾಯಾಂಗದಿಂದ ಆರೋಗ್ಯ ಇಲಾಖೆಯ ಸಿಬ್ಬಂದಿಗೆ ವಹಿಸಿಕೊಡುವುದು,ಪ್ರತಿಯೊಂದಕ್ಕೂ ನಿಗದಿಯಾದ ಪ್ರಮಾಣ,ದರ್ಜೆಯನ್ನು ನಿರ್ಧರಿಸಿ ಆಡಳಿತ ವ್ಯವಹಾರಗಳಲ್ಲಿ ತಾವೇತಾವಾಗಿ ವರ್ತಿಸಲು ಎಡೆಯಿಲ್ಲದಂತೆ ಮಾಡುವುದೂ ಇನ್ನೂ ಅನೇಕ ವಿಧದ ಲೋಪದೋಷಗಳ ಪರಿಹಾರ ಅಗತ್ಯವೆಂದೂ ಕಂಡುಬಂದಿತು.ಸಂಸ್ಥಾನದ ಶಾಸನಗಳನ್ನು ಉಲ್ಲಂಘಿಸಿದಾಗ ಆರೋಗ್ಯಾಧಿಕಾರಿಗಳು ಅನೇಕ ವಿಧದ ಕಾರ್ಯಕ್ರಮ ಕೈಗೊಳ್ಳಬೇಕಾಗುತ್ತದೆ.ಉದಾಹರಣೆಗೆ,ತನಿಖೆ,ಕೆಡುಕಾಗಿಸುವ ವಸ್ತುಗಳ,ಜಾಡ್ಯವನ್ನು ಇತರರಿಗೆ ಹರಡ್ಬಲ್ಲ ಪದಾರ್ಥಗಳ ನಾಶ,ಸಾರ್ವಜನಿಕ ಸ್ಥಳಗಳನ್ನು(ಸಿನಿಮಾ,ಹೋಟೆಲ್ ಇತ್ಯಾದಿ)ಮುಚ್ಚುವುದು,ನಿವೇಶನ,ವಸ್ತು ಮುಂತಾದುವಲ್ಲಿ ಸೋಂಕುಕಳೆತ,ಪ್ರತಿಬಂಧಕ ಚುಚ್ಚುವುದ್ದನ್ನು ಹಾಕುವುದು,ರೋಗಿಯೊಡನೆ ಇದ್ದವರನ್ನು ಬೇರೆಯಾಗಿ ಇರಿಸುವುದು,ಇವೇ ಮೊದಲಾದ