ಪುಟ:Mysore-University-Encyclopaedia-Vol-1-Part-3.pdf/೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆರೋಪ ಭಾರತ ಸರ್ಕಾರ ಹಾಗೂ ರಾಜ್ಯಸರ್ಕಾರಗಳು ಜಾರಿಗೆ ತಂದಿರುವ ಕೆಲವು ಮುಖ್ಯ ಆರೋಗ್ಯ ಮತ್ತು ಸಮಾಜಕಲ್ಯಾಣ ಶಾಸನಗಳನ್ನು ಈ ಕೆಳಗೆ ಕೊಡಲಾಗಿದೆ: ೧.ರೋಗಿಗಳ ಮತ್ತು ರೋಗಿಗಳೊಂದಿಗೆ ಸಂಪರ್ಕ ಹೊಂದಿದವರನ್ನು ಪ್ರತ್ಯೇಕ ಮಾಡಿ ಅವರ ಚಲನವಲನಗಳ ಮೇಲೆ ಹತೋಟಿ ಇಡಲು ೧೮೨೫ರಲ್ಲಿ ಮಂಡಿಸಿದ ಶಾಸನ (ಕ್ವಾರಂಟೀನ್ ಆಕ್ಟ್ ೧೮೨೫). ೨.ಭಾರತ ಸಾಂಕ್ರಾಮಿಕ ಜಾಡ್ಯಗಳ ಹತೋಟಿ ಶಾಸನ ೧೮೫೭ ೩.ಭಾರತದ ನೌಕಾವ್ಯಾಪಾರಿಗಳ ಶಾಸನ ೧೮೫೯ ೪.ಭಾರತೀಯ ದಂಡ ಸಂಹಿತ ೧೮೬೦ (ಇಂಡಿಯನ್ ಪೀನಲ್ ಕೋಡ್) ೫.ಜನನ ಮರಣಗಳ ದಾಖಲೆ ಶಾಸನ ೧೮೭೩ ೬.ಸಿಡುಬು ನಿರೋಧ ಚುಚ್ಚುಮದ್ದಿನ ಶಾಸನ ೧೮೮೦ ೭.ವೈದ್ಯಕೀಯ ಶಾಸನ ೧೮೮೬ ೮.ಕುಷ್ಟರೋಗಿಗಳಿಗನ್ವಯಿಸುವ ಶಾಸನ ೧೮೯೮ ೯.ಭಾರತದ ಹುಚ್ಛು ಹಿಡಿದವರಿಗೆ ಅನ್ವಯಿಸುವ ಶಾಸನ ೧೯೧೨ ೧೦.ಭಾರತ ರೆಡ್ ಕ್ರಾಸ್ ಶಾಸನ ೧೯೨೨ ೧೧.ಭಾರತ ಗಣಿಗಳ ಶಾಸನ ೧೯೨೩ ೧೨.ಕಾರ್ಮಿಕರ ಪರಿಹಾರ ನೀಡುವ ಕಾಯಿದೆ ೧೯೨೩ ೧೩.ಕೇಂದ್ರ ಸರ್ಕಾರದ ಆಹಾರ ಶಾಸನ ೧೯೪೦ ೧೪.ಭಾರತದ ಗಿರಿಣಿಗಳ ಶಾಸನ ೧೯೪೮ ೧೫.ಕಾಎಮಿಕರ ರಾಜ್ಯವಿಮಾ ಶಾಸನ ೧೯೪೮ ೧೬.ಕಲ್ಲಿದ್ದಲು ಗಣಿ ಕೆಲಸಗಾರರಿಗೆ ಮಿತವ್ಯಯ ಮತ್ತು ಲಾಭಾಂಶ ಸಂಗ್ರಹ ನಿಧಿ ಯೋಜನೆ ೧೯೪೮ ೧೭.ಕೆಲಸಗಾರರ ಮಿತವ್ಯಯ ಸಂಗ್ರಹ ನಿಧಿ ಶಾಸನ ೧೯೫೨ ೧೮.ಆಹಾರದ ಕೀಳ್ಬೆರಕೆ ತಡೆಗಟ್ಟುವ ಶಾಸನ ೧೯೫೪ ೧೯.ವಿಶೇಷ ರೀತ್ಯಾ ವಿವಾಹಗಳಿಗೆ ಅನ್ವಯಿಸುವ ಶಾಸನ ೧೯೫೪ ೨೦.ಹಿಂದೂ ವಿವಾಹ ಶಾಸನ ೧೯೫೫ ೨೧.ವರದಕ್ಷಿಣೆ ಮತ್ತು ಕನ್ಯಾದಕ್ಷಿಣೆ ಸ್ವೀಕಾರ ರದ್ದುಗೊಳಿಸಿದ ಶಾಸನ ೨೨.ಕೊಳಚೆ ಪ್ರದೇಶ ನಿರ್ಮೂಲನ ಶಾಸನ ೨೩.ಹೆರಿಗೆ ಸಹಾಯಾರ್ಥ ಪರಿಹಾರ ಶಾಸನ ೨೪.ಅಶಕ್ತರ ಸಹಾಯ ನಿಧಿ ಶಾಸನ ೨೫.ಆಶ್ರಿತರ ಸಹಾಯ ನಿಧಿ ಶಾಸನ ೨೬.ಸ್ತ್ರೀಯರ ಮತ್ತು ಹೆಣ್ಣುಮಕ್ಕಳ ಅನೈತಿಕ ವ್ಯಾಪಾರನಿಗ್ರಹ ಶಾಸನ ಇತ್ಯಾದಿ ಇವಿಷ್ತೇ ಅಲ್ಲದೆ ಇನ್ನೂ ಅನೇಕ ಶಾಸನಗಳು ಜಾರಿಯಲ್ಲಿದೆ.ಉದಾಹರಣೆಗೆ,ಪೌರಸಭಾ ಶಾಸನ,ಗ್ರಾಮಪಂಚಾಯತಿ ಶಾಸನ-ಇವು ತಮ್ಮ ತಮ್ಮ ಕ್ಷೇತ್ರಗಳಿಗೆ ಅನ್ವಯಿಸುವಂತೆ ಜನಾರೋಗ್ಯ ಮತ್ತು ನೈರ್ಮಲ್ಯ,ಕುಡಿಯುವ ನೀರು,ಕಕ್ಕಸು ನಿವೇಶನಗಳ ನಿರ್ಮಾಣ,ಕೊಳಚೆ ಪ್ರದೇಶಗಳ ನಿರ್ಮೂಲನ ,ಸಾಂಕ್ರಾಮಿಕ ಜಾಡ್ಯಗಳ ಹತೋಟಿ ,ವಸತಿ ಸೌಕರ್ಯ,ವೇಶ್ಯಾಗೃಹಗಳ ಹತೋಟಿಗೆ ಇತ್ಯಾದಿ ವಿಷಯಗಳಿಗೆ ಅನ್ವಯಿಸುವ ನಿಯಮಗಳನ್ನು ಅಡಕಮಾಡಿ ಜಾರಿಗೆ ತಂದಿವೆ.ಕೆಲವು ರಾಜ್ಯಗಳಲ್ಲಿ ಜನಾರೋಗ್ಯ ಮತ್ತು ನೈರ್ಮಲ್ಯ ಹಾಗೂ ಸಮಾಜ ಕಲ್ಯಾಣಕ್ಕೆ ಅನ್ವಯಿಸುವ ಹಲವಾರು ನಿಯಮಗಳನ್ನು ಕ್ರೋಡೀಕರಿಸಿ ಜನಾರೋಗ್ಯ ಶಾಸನ ಎಂಬ ಸರ್ವವ್ಯಾಪಿ ಶಾಸನವನ್ನೂ ಜಾರಿಗೆ ತಂದಿದ್ದಾರೆ. ಈ ವಿಷಯದ ಉಪಸಂಹಾರಕ್ಕೆ ಮೊದಲು ,ಅಂತಾರಾಷ್ಟೀಯ ಮಟ್ಟದಲ್ಲಿ ಚಟುವಟಿಕೆಗಳನ್ನು ಸ್ಠೂಲವಾಗಿ ಪರಿಶೀಲಿಸಬಹುದು. ಆರೋಗ್ಯ ಮತ್ತು ಕ್ಷೇಮರಕ್ಷಣಿಯ ವಿಚಾರ ಅಂತರಾಷ್ತೀಯ ಹೊಣೆ ಎಂಬುದನ್ನು ಅನೇಕ ಮಹನೀಯರು ೧೭-೧೮ನೆಯ ಶತಮಾನಗಳಲ್ಲಿ ತಾವು ಬರೆದ ಗ್ರಂಥಗಳಲ್ಲಿ ಹಾಗೂ ವರದಿಗಳಲ್ಲಿ ನಮೂದಿಸಿದ್ದಾರೆ. ಈ ವಿಚಾರದಲ್ಲಿ ಲೀಗ್ ಆಫ್ ನೇಷನ್ಸ್, ಸಂಯುಕ್ತ ರಾಷ್ತ್ರಸಂಸ್ಥೆ ಹಾಗು ವಿಶ್ವ ಆರೋಗ್ಯ ಸಂಸ್ಥೆಗಳು ತಮ್ಮ ಸಂಸ್ಥೆಗಳ ಉದ್ದೇಶವನ್ನು ತಮ್ಮ ತಮ್ಮ ರಾಜ್ಯಾಂಗಗಳಲ್ಲಿ ಅಡಕ ಮಾಡಿವೆ ಹಾಗೂ ಸಾಕಷ್ತು ಪ್ರಾಮುಖ್ಯವನ್ನು ಕೊಟ್ಟಿವೆ. ತಿಳಿವಳಿಕೆಯಿಂದ ಪ್ರೇರಿತವಾದ ಜನಾಭಿಪ್ರಾಯ ಹಾಗೂ ಜನತೆಯ ಸಂಪೂರ್ಣ ಸಹಕಾರ ಜನಾರೋಗ್ಯವನ್ನು ಕಾಪಾಡಲು ಅತ್ಯಂತ ಮುಖ್ಯ ಮತ್ತು ಅಗತ್ಯವೆಂದು ಈ ಅಂತಾರಾಷ್ತ್ರೀಯ ಸಂಸ್ಥೆಗಳು ಒತ್ತಿ ಹೇಳಿವೆ. ಪ್ರತಿಯೊಬ್ಬ ಮಾನವನೂ ತನ್ನ ಆರೋಗ್ಯವನ್ನು ಉನ್ನತ ಮಟ್ಟದಲ್ಲಿಟ್ಟು ಕಾಪಾಡಿ ಪರಸ್ಪರ ನೆರವು ನೀಡುವದು ತನ್ನ ಕರ್ತವ್ಯ ಎಂದು ತಿಳಿದಿದೆ.ಸಂಯುಕ್ತ ರಾಷ್ತ್ರಗಳ ಅಂತಾರಾಷ್ತ್ರೀಯ ಮಕ್ಕಳ ತುರ್ತುನಿಧಿ ,ಆಹಾರ ಮತ್ತು ಕೃಷಿಸಂಸ್ಥೆ, ಅಂತಾರಾಷ್ತ್ರೀಯ ಕಾರ್ಮಿಕ ಸಂಸ್ಥೆ ಈ ಶಾಖೆಗಳೆಲ್ಲವೂ ಇದೇ ಧ್ಯೇಯವನ್ನೊಳಗೊಂಡು ಕಾರ್ಯಮಾಡುತ್ತಿವೆ. ಖಾಸಗಿ ಸಂಸ್ಥೆಗಳ ಪಾತ್ರ ಏನೂ ಕಡಿಮೆ ಇಲ್ಲ. ಉದಾಹರಣಿಗೆ ,ಅಮೇರಿಕದ ರಾಕ್ ಫ್ ಲ್ಲರ್ ಫೌಂಡೇಷನ್, ಅಂತಾರಾಷ್ತ್ರೀಯ ರೆಡ್ ಕ್ರಾಸ್ ಮುಂತಾದವು ಅತ್ಯಂತ ದಕ್ಷತೆಯಿಂದ ಮಾನವ ಕುಲಕೋಟಿಗೆ ಸೇವೆ ಸಲ್ಲಿಸುತ್ತಿವೆ. ಮುಂದೆ ಬರುವ ಶಾಸನಗಳು ಮಾನವಕೋಟಿಯನ್ನು ಪರಮಾಣುಶಕ್ತಿಯಿಂದ ಉತ್ಪತ್ತಿಯಾಗುವ ವಿದ್ಯುತ್ ವಿಕಿರಣ ಕ್ರಿಯಾಶಕ್ತಿ ಇಂದ ಕಾಪಾಡಲು , ಆಧುನಿಕ ಕೈಗಾರಿಕೆ ಉದ್ಯಮಗಳು ಹಾಗೂ ಸ್ವಯಂಚಾಲಿತ ಯಂತ್ರಗಳಿಂದ ವಾತಾವರಣ ಮಲಿನವಾಗದಂತೆ ರಕ್ಷಣೆಕೊಡಲು , ಕೃತಕ ಗರ್ಭಧಾರಣೆಯಿಂದ ಉದ್ಭವವಾಗುವ ವೈಯಕ್ತಿಕ ಸಮಸ್ಯೆಗಳ ಪರಿಹಾರ ಮಾಡಲು , ಬದಲಿ ಅಂಗಗಳ ಜೋಡಣೆಯಿಂದ ಮಾನವ ಆಮರನಾದಲ್ಲಿ ಯಾವ ರೀತಿ ಸಮಾಜ ನಡೆದುಕೊಳ್ಳಬೇಕು , ಯಾರಿಗೆ ಬದಲಿ ಜೋಡಣೆಯ ಅಗತ್ಯ , ಅಂತರಿಕ್ಷದಲ್ಲಿ ಯಾನ ಮಾಡುವವರ ಆರೋಗ್ಯ ಸಂರಕ್ಷಣೆಗೆ ನಿಯಮಗಳಾವುವುಇವೇ ಮುಂತಾದ ಗಂಭೀರ ಪ್ರಶ್ನೆಗಳನ್ನು ಎದುರಿಸಿ ಶಾಸನಗಳಾನ್ನು ರೂಪಿಸಲೇ ಬೇಕಾಗುತ್ತದೆಂಬುದರಲ್ಲಿ ಅನುಮಾನವೇ ಇರಲಾರದು.