ಪುಟ:Mysore-University-Encyclopaedia-Vol-1-Part-3.pdf/೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆರೋರೂಟ್ ಚರಿತ್ರೆಯಲ್ಲಿ ಮೊದಲು ನಮ್ಮ ಗಮನಕ್ಕೆ ಬಂದ ಬೆಂಜೀನ್ ಜನ್ಯ ಸಂಯುಕ್ತಗಳೆಲ್ಲದಕ್ಕೂ ತೀಕ್ಶ್ಣವಾದ ಸುವಾಸನೆ(ಆರೋಮ)ಇದ್ದುದರಿಂದ ಇವಕ್ಕೆ ಆರೋಮ್ಯಾಟಿಕ್ ಸಂಯುಕ್ತಗಳೆಂಬ ಹೆಸರು ಬಂತು.ಆದರೆ ಈಗ ಆ ವಾಸನೆಯೇ ವಗೀ೯ಕರಣಕ್ಕೆ ಆಧಾರವಲ್ಲ.ವಾಸನೆ ಇರಲಿ,ಇಲ್ಲದಿರಲಿ,ಬೆಂಜೀನ್ ಆವತ೯ವಿರುವ ಸಂಯುಕ್ತಗಳೆಲ್ಲ ಆರೋಮ್ಯಾಟಿಕ್ ಸಂಯುಕ್ತಗಳೇ.

ಬೆಂಜೀನ್ ಆಣುವಿನಲ್ಲಿಯ ಹ್ಯೆಡ್ರೋಜನ್ ಪರಮಾಣುಗಳನ್ನು ಬೇರೆ ಬೇರೆ ಪರಮಾಣುಗಳಿಂದ ಅಥವಾ ಪರಮಾಣುಪುಂಜಗಳಿಂದ ಬದಲಿಸಿದರೆ ಉಂಟಾಗುವ ಸಂಯುಕ್ತಗಳು ಆರೋಮ್ಯಾಟಿಕ್ ಸಂಯುಕ್ತಗಳಲ್ಲಿ ಅತ್ಯಂತ ಸರಳವಾದವು.ಉದಾಹರಣೆಗೆ ಒಂದು ಹ್ಯೆಡ್ರೋಜನ್ ಪರಮಾಣುವನ್ನು ಕ್ಲೋರೀನ್ ಪರಮಾಣುವಿನಿಂದಬದಲಿಸಿದರೆ ಕ್ಲೋರೊಬೆಂಜೀನ್ ಉಂಟಾಗುತ್ತದೆ.

ಬೆಂಜೀನ್ ಆಣುರಚನೆಯಲ್ಲಿ ಕಂಡುಬರುವ ಆರು ಹ್ಯೆಡ್ರೋಜನ್ ಪರಮಾಣುಗಳು ಸಮಾನ ಸ್ಥಾನಗಳಲ್ಲಿರುವುದರಿಂದ ಸಮಮಿತಿಯ ಕಾರಣಗಳಿಂದ ಆವುಗಳಲ್ಲಿ ಯಾವುದನ್ನು ಕ್ಲೋರೀನ್ ಪರಮಾಣುವಿನಿಂದ ಬದಲಿಸಿದರೂ ಬರುವುದು ಒಂದೇ ಕ್ಲೋರೋಬೆಂಜೀನ್.

ಎರಡು ಅಥವಾ ಹೆಚ್ಚು ಹ್ಯೆಡ್ರೋಜನ್ ಪರಮಾಣುಗಳನ್ನು ಇತರ ಪರಮಾಣುಗಳಿಂದ ಅಥವಾ ಪರಮಾಣು ಪುಂಜಗಳಿಂದ ಬದಲಿಸಿದರೆ ಬರುವ ಜನ್ಯ ಸಂಯುಕ್ತಗಳನ್ನು ಹೆಸರಿಸುವಾಗ ಬದಲಿ ಪುಂಜಗಳ ಸ್ಥಾನವನ್ನು ಸೂಚಿಸಬೇಕಾಗುತ್ತದೆ.ಅದಕ್ಕಾಗಿ ಬೆಂಜೀನ್ ಆಣುವಿನಲ್ಲಿ ಯಾವುದಾದರೊಂದು ಸ್ಥಾನವನ್ನು ೧ ಎಂದು ಕರೆದು ಅಲ್ಲಿಂದ ಗಡಿಯಾರ ಕ್ರಮದಲ್ಲಿ ಬರುವ ಸ್ಥಾನಗಳಿಗೆ ಕ್ರಮವಾಗಿ ೨,೩,೪,೫ ಮತ್ತು ೬ ಎಂದು ಕರೆಯುತ್ತಾರೆ.

ಮೇಲಿನಂತೆ ಹ್ಯೆಡ್ರೋಜನ್ ಪರಮಾಣುವನ್ನು ಒಂದೇ ಒಂದು ಪರಮಾಣುವಿನಿಂದ ಬದಲಿಸದೆ,ಪರಮಾಣು ಪುಂಜಗಳಿಂದ ಬದಲಿಸಬಹುದು ಹಾಗೆ ಮಾಡಿದಾಗ ಪುಂಜಗಳಲ್ಲಿರಬಹುದಾದ ರಾಸಾಯನಿಕ ಗುಂಪುಗಳನ್ನು ಅವಲಂಬಿಸಿ