ಪುಟ:Mysore-University-Encyclopaedia-Vol-1-Part-3.pdf/೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆರ್ಕಿಡ್ಡಗಳು ಪ್ರತ್ಯೀಕವಾಗಿ ಉಳಿದಿರುವಂತೆ ಕಾಣುತ್ತದೆ. ಇದರಲ್ಲಿ ಗಂಧದ ಮರದ ಕುಟುಂಬ, ದಂಟು ಕುಟುಂಬ, (ಅಮರಾಂತೇಸೀ), ಚಕ್ಕೋತ ಸೊಪ್ಪು ಕುಟುಂಬ ಮುಂತಾದುವು ಅಡಕವಾಗಿವೆ. ಪುಷ್ಷಪತ್ರಗಳು ಒಂ ತರಹದ್ದಾಗಿ ದಳಕಲ್ಪವಾಗಿವೆ. ಮುಂದುವರಿದ ಕುಟುಂಬಗಳಲ್ಲಿ ಪುಷ್ಪಪತ್ರಕ್ಕೂ ದಳಸಮೂಹಕ್ಕೂ ವ್ಯತ್ಯಾಸ ಕಂಡಿದೆ. ಪುಷ್ಪವಲಯಗಳು ವೃತ್ತಕ್ರಮದಲ್ಲಿ ಕಾಣುತ್ತವೆ; ಪ್ರತಿ ಸುತ್ತಿನಲ್ಲೂ 3 ರಿಂದ 5 ರವರೆಗೆ ಬಿಡಿ ಭಾಗಗಳಿವೆ. ಕೆಲವು ಕುಟುಂಬಗಳಲ್ಲಿ ಕೀಟದಿಂದ ಪರಾಗಸ್ಪರ್ಶ ನಡೆಯುತ್ತದೆ.

ವರ್ಗ 21 : ( ನೇಲೀಸ್ 19 ಕುಟುಂಬಗಳು): ಇತ್ತೀಚಿಗೆ ಈ ವರ್ಗಕ್ಕೆ ಇತರ 6 ಕುಟುಂಬಗಳನ್ನು ಸೇರಿಸಿಕೊಳ್ಳಲಾಗಿದೆ. ಈ ವರ್ಗ ಆರ್ಕಿಕ್ಲ್ಯಾಮಿಡೀ ಉಪತರಗತಿಯಲ್ಲಿ ಬಹು ವಿಶಾಲವಾದ ಮತ್ತು ಮುಕ್ಯವಾದ ವರ್ಗವೆಂದು ಪರಿಗಣಿಸಲಾಗಿದೆ. ಇದರಲ್ಲಿ ಸಾಮಾನ್ಯವಾದ ನನ್ ಕ್ಯುಲೇಸೀ, ನಿಂಪ್ಪಿಯೇಸೀ, ಅನೋನೇಸೀ, ಮ್ಯಾಗ್ನೋಲಿಯೇಸೀ (ತಾವರೆ, ಸೀತಾಫಲ, ಸಂಪಿಗೆ) ಮುಂತಾದ ಕುಲಗಳು ಸೇರಿವೆ. ಪುಷ್ಪಗಳು, ಪುಷ್ಪಪತ್ರ ಮತ್ತು ದಳಸಮೂಹಗಳು ಸ್ಪಷ್ಟವಾದ ವ್ಯತ್ಯಾಸವನ್ನು ತೋರಿಸುವುದಿಲ್ಲ. ಪುಷ್ಪಾಂಗಗಳು ಅಧಿಕ ಸಂಖ್ಯೆಯಲ್ಲಿದ್ದು ಕೀಳ್ತೆರದ ಕುಟುಂಬಗಳಲ್ಲಿ ಸುರುಳಿ ಕ್ರಮದಲ್ಲಿಯೂ ಮೇಲ್ತರದ ಕುಟುಂಬಗಳಲ್ಲಿ ವೃತ್ತ ಕ್ರಮದಲ್ಲಿಯೂ ಜೋಡಿಸಲ್ಪಟ್ಟಿವೆ. ಅಂದಕೋಶ ಅಧಿಕ ಶಲಾಕಾಗ್ರಗಳನ್ನೂ ವಿಭಕ್ತ ಅಂಡಕೋಶವನ್ನೂ ಹೊಂದಿದೆ. ಅಂಡಾಶಯ ಉಚ್ಚಸ್ಥಿತಿಯಲ್ಲಿದೆ. ಕೆಲವು ವರ್ಗೀಕರಣಶಾಸ್ತ್ರ ಜ್ಞರು ಈ ರಾನೇಲೀಸ್ ವರ್ಗವನ್ನು ಆರ್ಕಿಕ್ಲ್ಯಾ ಮಿಡೀಯಲ್ಲಿ ಆದಿರೂಪದ ಜೀವಂತ ವರ್ಗ ಎಂದೂ ಈ ವರ್ಗದಿಂದ ಏಕದಳ ಮತ್ತು ದ್ವಿದಳ ಸಸ್ಯಪಂಗಡಗಳು ಉದ್ಭವಿಸಿವೆಯೆಂದೂ ಹೇಳುತ್ತಾರೆ.

ವರ್ಗ 24: (ರೊಸೇಲೀಸ್ 17 ಕುಟುಂಬಗಳು). ಈ ವರ್ಗ ಆಕಿರ್ಕ್ಲ್ಯಾಮಿಡೀಯ ಒಂದು ವಿಶಾಲ ಪಂಗಡ. ಇದರಲ್ಲಿ ಹಿರಿದಾದ 12,000 ಪ್ರಭೇದಗಳಿರುವ ಲೆಗ್ಯುಮಿನೋಸೀ (ಹುರುಳಿ ಇತ್ಯಾದಿ ಜಾತಿಗಳ) ಕುಟುಂಬವೂ ಪ್ರಮುಖವಾದ (ಗುಲಾಬಿ) ಕುಟುಂಬವೂ ಸೇರಿವೆ. ಈ ಎರಡು ಕುಟುಂಬಗಳೂ ರಾನೇಲೀಸ್ ರೊಸೇಸಿವರ್ಗದಿಂದ ಜನಿಸಿದ ಶಾಖೆಗಳಾಗಿ ಕಾಣುತ್ತವೆ. ಪುಷ್ಪಂಗಗಳು ವೃತ್ತಕ್ರಮದಲ್ಲಿಯೂ ಪಂಚಾಪವರ್ತ್ಯವಾಗಿಯೂ ಇವೆ. ಅಂಡಾಶಯ ಉಚ್ಚ, ಮಧ್ಯ ಅಥವಾ ಅಧೋಸ್ಥಿತಿಯಲ್ಲಿ ಕಂಡುಬರುತ್ತದೆ. ಲೆಗ್ಯುಮಿನೋಸೀ ಕುಟುಂಬದಲ್ಲಿ ಪುಷ್ಪಗಳು ದ್ವಿಪಾರ್ಶ ಸಮಾಂಗತೆ ಪಡೆದು ಕೀಟಪರಾಗ ಸ್ಪರ್ಶಕ್ಕಿರುವ ಹೊಂದಾಣಿಕೆಯನ್ನು ತೋರಿಸುತ್ತವೆ.

ವರ್ಗಗಳು 25 ರಿಂದ 32: (ಪ್ಯಾಂಡೇಲೀಸ್, ಜಿರೇನಿಯೇಲೀಸ್, ಸಪಿಂಡೇಲೀಸ್ ರಾಮ್ ನೇಲೀಸ್, ಮಾಲ್ ವೇಲೀಸ್ ಪೆರೈಟೇಲೀಸ್, ಒಪನ್ ಷಿಯೇಲೀಸ್, ಮತ್ತು ಮಿರ್ಟಿಸೊರೀ 89 ಕುಟುಂಬಗಳು). ಈ ವರ್ಗಗಳು ಹಿಂದಿನ ಕೆಲವು ವರ್ಗಗಳಿಂದ ಶಾಖೆಗಳಾಗಿ ಬೇರ್ಪಟ್ಟು ಪ್ರತಿಯೊಂದೂ ತನ್ನದೇ ಆದ ವಿಶೇಷ ಗುಣಗಳನ್ನು ಹೊಂದಿದೆ. ಎಲಚಿ, ದಾಸವಾಳ, ಪಾಪಾಸುಕಳ್ಳಿ, ಸೀಬೆ ಮುಂತಾದ ಜಾತಿಗಳು ಇದರಲ್ಲಿ ಸೇರಿವೆ. ಪುಷ್ಪಗಳು ಖಚಿತ ವೃತ್ತ ಕ್ರಮವನ್ನು ತೋರಿಸುತ್ತವೆ. ಮುಂದುವರಿದ ವರ್ಗಗಳಲ್ಲಿ ಆಂಡಾಶಯ ಅಧೋಸ್ಥಿತಿಯಲ್ಲಿರುತ್ತದೆ.

ವರ್ಗ 33: (ಅಂಬೆಲಿಘ್ಲೋರೀ 3 ಕುಟುಂಬಗಳು). ಆರ್ಕಿಕ್ಲ್ಯಾಮಿಡೀಯಲ್ಲಿ ಈ ವರ್ಗ ಅತ್ಯಂತ ಮುಂದುವರಿದ ವರ್ಗ. ಇದರಲ್ಲಿ ಅಂಬೆಲಿಘ್ಲೋರೀ (ಕೊತ್ತಂಬರಿ) ಕುಟುಂಬ ಪ್ರಮುಖ. ಛತ್ರಮಂಜರಿ, ಪುಷ್ಪಾಂಗಗಳ ಸಂಖ್ಯೆ 2 ಮತ್ತು ಪ್ರತಿ ಅಂಡಕೋಶದಲ್ಲಿಯೂ ಒಂದೇ ಅಂಡಕವಿರುವಿಕೆ; ಛತ್ರಮಂಜರಿಯ ಸುತ್ತಲೂ ಇನ್ ವಲ್ಯೂಕರ್ ಎಂಬ ಕ್ಷೀಣಪತ್ರಗಳಿವೆ; ಹೂ ಗೊಂಚಲಿನ ಹೊರಾವರಣದ ಹೂಗಳು ಆಕರ್ಷಕ, ಮಧ್ಯದ ಹೂಗಳು ಹೆಚ್ಚು ಫಲಕಾರಿ-ಇವು ಈ ವರ್ಗದ ಮುಖ್ಯ ಗುಣಗಳು.

ಆರ್ಕಿಡ್ಡುಗಳು: ಆರ್ಕಿಡೇಸೀ ಕುಟುಂಬಕ್ಕೆ ಸೇರಿದ ಬಹುವಾರ್ಷಿಕ ಪರ್ಣ ಸಸ್ಯಗಳು. ಇವು ಕೆಲವು ಅಂಗುಲಗಳಿಂದ ಹಲವು ಅಡಿಗಳ ಎತ್ತರ ಬೆಳೆಯುತ್ತವೆ. ಇವು ಏಕದಳ ಸಸ್ಯಗಳು. ಆರ್ಕಿಡೇಸೀ ಕುಟುಂಬದಲ್ಲಿರುವಷ್ಟು ಹೂ ಬಿಡುವ ಸಸ್ಯಗಳು ಇಡೀ ಸಸ್ಯವರ್ಗದಲ್ಲೇ ಇಲ್ಲ. ಈ ಕುಟುಂಬದಲ್ಲಿ 788ಕ್ಕೂ ಹೆಚ್ಚು ಗುರುತಿಸಲಾದ ಜಾತಿಗಳೂ ಮತ್ತು 18500 ಪ್ರಭೇದಗಳೂ ಇವೆ. ಜೊತೆಗೆ ಸಾವಿರಾರು ಅಡ್ಡತಳಿಗಳಿವೆ.ಆರ್ಕಿಡ್ಡುಗಳು ಬೆಳೆಯುವ ರೀತಿಯಲ್ಲಿ ಬಹಳ ವೈವಿಧ್ಯ್ ಇದೆ. ನೆಲದ ಮೇಲೆ ಬೆಳೆಯುವ ಭೂಸಸ್ಯಗಳು, ಕೊಳೆತು ಬಿದ್ದಿರುವ ಕೆಲವು ಸಸ್ಯಕಾಂಡಗಳ ಮೇಲೆ ಬೆಳೆಯುವ ಪೂತಿಜನ್ಯ ಸಸ್ಯಗಳು, ಜೀವಂತವಾಗಿರುವ ಸಸ್ಯಗಳ ಮೇಲೆ ಬೆಳೆಯುವ ಅಪ್ಪು ಸಸ್ಯಗಳು, ಬಂಡೆಗಳ ಮೇಲೆ ಬೆಳೆಯುವ ಶಿಲಾ ಸಸ್ಯಗಳು ಆರ್ಕಿಡ್ಡುಗಳ ವಿವಿಧ ಪ್ರಕಾರಗಳಿಗೆ ನಿದರ್ಶನಗಳು.

ಆರ್ಕಿಡ್ಡುಗಳು ಎಲ್ಲ ವಲಯಗಳಲ್ಲಿ ಬೆಳೆದರೂ ಉಷ್ಣ್ ಮತ್ತು ಸಮಶೀತೋಷ್ಣ್ವಲಯಗಳಲ್ಲಿ ಚೆನ್ನಾಗಿ ಬೆಳೆಯುತ್ತವೆ. ಈ ವಲಯಗಳಲ್ಲಿ ಪ್ರಪಂಚದಲ್ಲಿ ಬೆಳೆಯುವವುಗಳಲ್ಲಿ ಅಪ್ಪು ಸಸ್ಯವಾಗಿ ಬೆಳೆಯುವ ಆರ್ಕಿಡ್ಡುಗಳೇ ಹೆಚ್ಚು. ಕೆಲವು ಆರ್ಕಿಡ್ಡುಗಳು ತಮ್ಮ ತವರೂರನ್ನು ಬಿಟ್ಟು ಬೇರೆ ಕಡೆ ಬೆಳೆಯುವುದಿಲ್ಲ. ಇವುಗಳ ಕಾಂಡ ಕವಲೊಡೆಯುವುದನ್ನು ಅನುಸರಿಸಿ ಆರ್ಕಿಡ್ಡುಗಳನ್ನು ಮೂರು ಗುಂಪುಗಳಾಗಿ ವಿಂಗಡಿಸಿದೆ: ಏಕಕಾಂಡಗಳ ಗುಂಪು, ನಕಲಿ ಏಕಕಾಂಡಗಳ ಗುಂಪು ಮತ್ತು ಬಹು ಕವಲೊಡೆಯುವ ಕಾಂಡಗಳ ಗುಂಪು. ಆರ್ಕಿಡ್ಡುಗಳ ಎಲೆಗಳ ಆಕಾರ, ರಚನೆ, ಬಣ್ಣ್ ಇತ್ಯಾದಿಗಳಲ್ಲಿ ಬಹು ಭಿನ್ನತೆ ಇದೆ. ಇವು ಹೂಗೊಂಚಲುಗಳು ಮೂಲವಾಗಿ ಅಂತ್ಯಾರಂಭಿ ಮಾದರಿಯವಾಗಿದೆ. ಈ ವಿಧದಲ್ಲಿ ರೇಸೀಮ್, ಸ್ಪೈಕ್ ಮುಂತಾದ ಕೆಲವು ರೀತಿಗಳೂ ಇವೆ. ಆರ್ಕಿಡ್ಡುಗಳ ಹೂಗಳು ಏಕಲಿಂಗಿಗಳು ಇಲ್ಲಿವೆ ದ್ವಿಲಿಂಗಿಗಳು. ಇವುಗಳ ಹೂರಚನೆ ವಿಚಿತ್ರ. ಪುಷ್ಪಪತ್ರ ಮತ್ತು ದಳಗಳು ಕೂಡಿ ಪೆರಿಯಂತ್ ಆಗಿದ್ದು ಎರಡು ಸಾಲುಗಳಲ್ಲಿ ಇರುತ್ತವೆ. ಕೂಡಿಕೆಯ ಹೆಸರು ಲಿಪ್. ಆರ್ಕಿಡ್ ಹೂಗಳ ಗಂಡುಭಾಗ ಮತ್ತು ಹೆಣ್ಣುಭಾಗ ಕೂಡಿಕೊಂಡು ಹೂಕಂಬ ಆಗಿರುತ್ತದೆ. ಹಣ್ಣು ಕ್ಯಾಪ್ಸ್ಯೊಲುಗಳು.

ಆರ್ಕಿಡ್ಡುಗಳ ಮೂರು ಬಗೆಗಳು: 1 ಇಸ್ಸಿ ಸ್ಪೀಸಿಯೋಸ(ಡಾಫೊಲ್) 2 ಕ್ರಿಪ್ಟೊ ಪೊರಾಂಥಸ್ ಡಯನಸ್; 3 ಅಯನೊಪ್ಸಿಸ್ ಪ್ಯಾವಿಕುಲೇಟ.

ಆರ್ಕಿಡ್ಡುಗಳ ವರ್ಗೀಕರಣ: ಇದನ್ನು ಶಾಸ್ತ್ರೋಕ್ತವಾಗಿ ಆರಂಭಿಸಿದವರಲ್ಲಿ ಸಸ್ಯವಿಜ್ಞಾನಿ ಲಿನೀಯೆಸ್ ಮೊದಲಿಗ. ಮುಂದೆ ಓಕ್ಸ್ ಎಮ್ಸ್, ಲಿಬರ್ಟಿ ಹೈಡ್ಬೈಲೆ. ಬೆಂತಮ್ ಮತ್ತು ಹೂಕರ್, ಫಿಟ್ಜ್ ರ್ ಮತ್ತು ಸ್ಕ್ಲಟ್ಜ್ ರ್ ಇವರು ಮಾಡಿರುವ ವಿಧಾನ. ಇದರ ಪ್ರಕಾರ ಆರ್ಕಿಡ್ ಕುಟುಂಬದ ವರ್ಗೀಕರಣ ಆರು ಅಂಶಗಳ ಸಹಾಯದಿಂದ ಮಾಡಲಾಗಿದೆ:

1 ಬೆಳೆವಣಿಗೆಯ ವಿಧ. 2 ಹೂಗೊಂಚಲಿನ ಮತ್ತು ಹೂವಿನ ಆಕಾರ. 3 ಎಲೆ ಇರುವಿಕೆ ಅಥವಾ ಇಲ್ಲದಿರುವಿಕೆ. 4 ನಕಲಿ ಲಶುನ ಇರುವಿಕೆ ಅಥವಾ ಇಲ್ಲದಿರುವಿಕೆ. 5 ಪರಾಗ ಗೊಂಪು ಆಗುವ ವಿಧಾನ ಮತ್ತು ಅವುಗಳ ಸಂಖ್ಯೆ ಮತ್ತು ಅಂಟಿಕೊಂಡಿರುವ ವಿಧಾನ. 6 ಗರ್ಭಧಾರಣೆ ವಿಧಾನ.

ಆರ್ಕಿಡೇಸೀ ಕುಟುಂಬವನ್ನು ಕೆಲವು ಕುಲ (ಟ್ರೈಬ್) ಮತ್ತು ಉಪಕುಲಗಳಾಗಿ (ಸಬ್ ಟ್ರೈಬ್) ವರ್ಗೀಕರಿಸಿದ್ದಾರೆ. ಪ್ರತಿ ಉಪಪ್ರಭೇದದಲ್ಲಿ ಕೆಲವು ಜಾತಿ (ಜೀನಸ್) ಮತ್ತು ಅನೇಕ ಪ್ರಭೇದಗಳು (ಸ್ಪಿಷೀಸ್) ಸೇರಿವೆ.