ಪುಟ:Mysore-University-Encyclopaedia-Vol-1-Part-3.pdf/೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೮೮೦ ಆಕಿ೯ಮಿಡೀಸ್

  ಆಕಿ೯ಡ್ಡುಗಳ ವೃದ್ಧಿ ಳ  ಆಕಿ೯ಡ್ಡುಗಳನ್ನು ಬೀಜ, ಬೇರು ತುಂಡು, ಅಥವಾ ಸಕಲಿ ಲಶುನಗಳಿಂದ ವೃದ್ಧಿ ಮಾಡಬಹುದು. ವೃದ್ಧಿ ಸಾಮಾನ್ಯವಾಗಿ ಜಾತಿಗಳನ್ನು ಅನುಸರಿಸಿದೆ.  ವೃದ್ಧಿಸಲು ಸಾಧಾರಣವಾಗಿ ಸುಪ್ತಾವಸ್ಥೆ ಯೋಗ್ಯವಾದ ಕಾಲ. ಮಧ್ಯ ಸುಪ್ತಾವಸ್ಥೆ ಕಾಲದಲ್ಲಿ ಇವನ್ನು ಇತರ ಸ್ಥಳಗಳಿಗೆ ಸುಲಭವಾಗಿ ಸಾಗಿಸಿ  ವೃದ್ಧಿಸಬಹುದು. ಬೇರು ಅಥವಾ ಕಾಂಡ ಮತ್ತು ನಕಲಿ ಲಶುಗಳನ್ನು ನೆಡುವುದಕ್ಕೆ ಮುಂಚೆ ಒಣ ಮತ್ತು ರೋಗಪೀಡಿತ ಭಾಗಗಳನ್ನು ತೆಗೆದುಹಾಕಬೇಕು. ತುಂಡುಗಳನ್ನು ತೇವ ಮಾಡಿದ ಸ್ಪಂಜಿನಿಂದ ಒರಸಿ ಕೆಲವು ದಿವಸಗಳ ಕಾಲ ಇರುವ ಸ್ಥಳಗಳಲ್ಲಿ ತೂಗು ಹಾಕಬೇಕು. ತುಂಡುಗಳನ್ನು ನೆಡುವ ಮೊದಲು ಶುದ್ದೀಕರಣ ಮಾಡಿ ಆನಂತರ ಆಕಿ೯ಡ್ಡುಗಳನ್ನು ಬೆಳೆಸಬೇಕು.
    ಆಕಿ೯ಡ್ಡುಗಳ ಬೇಸಾಯ : ಆಕಿ೯ಡ್ ಹೂಗಳು ಎಷ್ಟು ಸುಂದರವೋ ಆಕಿ೯ಡ್ಡುಗಳ ಬೇಸಾಯ ಆಷ್ಟೇ ಕಷ್ಟ. ಇತರ ಎಲ್ಲ ಸಸ್ಯಗಳ ಬೇಸಾಯದಲ್ಲಿ ಪರಿಣಿತನಾದ ತೋಟಗಾರ  ಆಕಿ೯ಡ್ಡುಗಳ ಬೇಸಾಯದಲ್ಲಿ ಕಷ್ಟ ಅನುಭವಿಸುವಂತಾಗುತ್ತದೆ.  ಆಕಿ೯ಡ್ಡುಗಳನ್ನು ಆವು ಬೆಳೆಯುವ ಗುಣಗಳ ಆಧಾರದ ಮೇಲೆ ನಾಲ್ಕು ಗುಂಪುಗಳಾಗಿ ವಿಂಗಡಿಸಬಹುದು : 1 ಅಪ್ಪು ಸಸ್ಯಗಳು, 2 ಶಿಲಾ ಸಸ್ಯಗಳು 3 ಪೂತಿಜನ್ಯ ಸಸ್ಯಗಳು, 4 ಭೂ ಸಸ್ಯಗಳು.
     ಸಾಧ್ಯವಾದಷ್ಟು ಮಟ್ಟಿಗೆ ಆಕಿ೯ಡ್ಡಿನ ಮೂಲಸ್ಥಾನದ ಹವಾ ಪರಿಸ್ಥಿತಿ ಕಲ್ಪಿಸುವ ಪ್ರಯತ್ನ ಮಾಡಬೇಕು. ಪ್ರತಿಜನ್ಯ ಆಕಿ೯ಡ್ಡನ್ನು ಒಣ ಮರದ ತುಂಡಿನ ಮೇಲೆ ಬೆಳೆಸಿ ಕಂಬಿಯಿಂದ ತೂಗುಹಾಕಬೇಕು. ಭೂ ಆಕಿ೯ಡ್ಡುಗಳನ್ನು ಕುಂಡಗಳಲ್ಲಿ ಭೆಳೆಸಬೇಕು. ಇವನ್ನು ಬೆಳೆಸುವ ಕುಂಡಗಳಿಗೆ 10 ಸೆಮೀ. ಅಗಲದ ಆನೇಕ ರಂಧ್ರಗಳು ಇರಬೇಕು. ತೆಂಗಿನ ನಾರು ಅಥವಾ ಪಾಚೆಯನ್ನು ಜೌಗು ಒಂಧ್ರದ ಮೇಲೆ ಹಾಕಬೇಕು. 4 ಭಾಗ ಒಣ ಪಾಚೆ, 2 ಭಾಗ ಸಣ್ಣ ಇಟ್ಟಿಗೆ ಚೂರು, 1 ಭಾಗ ಇದ್ದಲು ಪುಡಿ, 1 ಭಾಗ ಗೋಡು ಮಣ್ಣು, 1 ಭಾಗ ಎಲೆ ಗೊಬ್ಬರದ ಮಿಶ್ರಣ ಮಾಡಿ ಕುಂಡಗಳಿಗೆ ತುಂಬಲು ಉಪಯೋಗಿಸ ಬೇಕು. ಸ್ವಚ್ಛತೆ ಇಲ್ಲದೆ ಆಕಿ೯ಡ್ಡುಗಳ ಬೇಸಾಯ ಸಾಧ್ಯವಿಲ್ಲ. ರೋಗಪೀಡಿತ ವಸ್ತುಗಳನ್ನು ಇವುಗಳ ಬೇಸಾಯಕ್ಕೆ ಉಪಯೋಗಿಸಿದಾಗ ರೋಗಕ್ಕೆ ಬಲಿಯಾಗಿ ನಾಶವಾಗುತ್ತವೆ. ಆದ್ದರಿಂದ ಮರದ ತುಂಡು ಮತ್ತು ಗೊಬ್ಬರ ಇತ್ಯಾದಿಗಳನ್ನು ಶುದ್ಧೀಕರಣ ಮಾಡಿ ಅನಂತರ ಬೇಸಾಯಕ್ಕೆ ಉಪಯೋಗಿಸಬೇಕು. ಸಾಮಾನ್ಯವಾಗಿ ಆಕಿ೯ಡ್ಡುಗಳು ತೇವಾಂಶ ಬಯಸುತ್ತವೆ. ಜಾಗರೂಕತೆಯಿಂದ ನೀರು ಕುಡಿಸಿದರೆ ಆವು ಸಮೃದ್ಧವಾಗಿ ಬೆಳೆಯುತ್ತವೆ.
   ಆಕಿ೯ಡ್ಡುಗಳ ಬೆಳೆವಣೆಗೆಯಲ್ಲಿ ಬಹಳ ವೈವಿಧ್ಯವಿದೆ. ಮಳೆಗಾಲದಲ್ಲಿ ಬೆಳವಣಿಗೆ ಇವುಗಳ ಮೊದಲನೆ ಹಂತ. ಈ ಹಂತದಲ್ಲಿ ಇವು ಆಹಾರ ಮತ್ತು ನೀರನ್ನು ತಮ್ಮ ನಕಲಿ ಲಶುನಗಳಲ್ಲಿ ಶೇಖರಿಸಿಟ್ಟುಕೊಳ್ಳುತ್ತವೆ. ಎರಡನೆಯ ಹಂತದಲ್ಲಿ ನವೆಂಬರ್ ತಿಂಗಳಿಂದ ಮಾಚ್ ತಿಂಗಳವರೆಗೆ ಸುಪ್ತಾವಸ್ಥೆಯನ್ನು ಮುಟ್ಟುತ್ತವೆ. ಕೊನೆಯ ಹಂತದಲ್ಲಿ ಸುಪ್ತಾವಸ್ಥೆಯಿಂದ ಚೇತರಿಸಿಕೊಂಡು ಹೂ ಬಿಡಲು ಪ್ರಾರಂಭಿಸುತ್ತವೆ. ಸುಪ್ತಾವಸ್ಥೆಯ ಕಾಲವನ್ನು ಸರಿಯಾಗಿ ತಿಳಿದ ಬೇಸಾಯಗಾರ ಮಾತ್ರ ಆಕಿ೯ಡ್ಡುಗಳ ಬೇಸಾಯವನ್ನು ಸುಗಮವಾಗಿ ಮಾಡಬಲ್ಲ. ಸುಪ್ತಾವಸ್ಥೆಯಲ್ಲಿ ಆಕಿ೯ಡ್ಡುಗಳಿಗೆ ನೀರು ಕೊಡುವ ಅಗತ್ಯವಿಲ್ಲ. ಆದರೆ ಹೆಚ್ಚು ದಿವಸಗಳ ಅಂತರದಲ್ಲಿ ಸ್ವಲ್ಪ ನೀರು ಕೊಟ್ಟು ಅವಯಗಳನ್ನು ಜೀವಿತವಾಗಿಟ್ಟಿರುವುದು ಬಹು ಮುಖ್ಯ ಅಂಶ. ಸುಪ್ತಾವಸ್ಥೆ ಮುಗಿದ ತಕ್ಷಣ ಕುಂಡ ಬದಲಾವಣೆ ಮಾಡಬೇಕು. ಉತ್ತಮ ಗೊಬ್ಬರ ಮಿಶ್ರಣ ಕೊಟ್ಟು ಧಾರಾಳವಾಗಿ ನೀರು ಕೊಡುವುದರಿಂದ ಆಕಿ೯ಡ್ಡುಗಳು ಮತ್ತೆ ತಮ್ಮ ಬೆಳೆವಣಿಗೆಯನ್ನು ಪ್ರಾರಂಭಿಸುತ್ತವೆ. ಸಾಮಾನ್ಯವಾಗಿ ಕೆಲವನ್ನು ಬಿಟ್ಟರೆ ಉಳಿದ ಆಕಿ೯ಡ್ಡುಗಳು ಪಾಶ್ವ೯ ನೆರೆಳಿನಲ್ಲಿ ಉತ್ಕೃಷ್ಟವಾಗಿ ಬೆಳೆಯುತ್ತವೆ, ಇವುಗಳ ಬೇಸಾಯಕ್ಕೆ ಸರಾಗವಾದ ಗಾಳಿ, ಬೆಳಕು ಆಗತ್ಯ. ಆಗತಾನೆ ವೃದ್ಧಿ ಮಾಡಿದ ಮತ್ತು ಸಣ್ಣ ಎಲೆಯುಳ್ಳ ಆಕಿ೯ಡ್ಡುಗಳು ಬಿಸಿಲನ್ನು ಸಹಿಸುವುದಿಲ್ಲ. ಪ್ರಾಪ್ತ ವಯಸ್ಸಿಗೆ ಬಂದ ಮತ್ತು ಆಗಲ ಎಲೆಯ ಆಕಿ೯ಡ್ಡುಗಳು ಸ್ವಲ್ಪ ಮಟ್ಟಿಗೆ ಬಿಸಿಲಿನ ತಾಪವನ್ನು ಸಹಿಸಬಲ್ಲುವು. ಆಕಿ೯ಡ್ಡುಗಳು ಕೃತಕ ಗೊಬ್ಬರಗಳಿಗೆ ವಿರುದ್ಧ ಪ್ರತಿಕ್ರಿಯೆ ವ್ಯಕ್ತ ಪಡಿಸುತ್ತವೆ. ವಷ೯ಕ್ಕೊಮ್ಮೆ ಆಗತ್ಯವಾಗಿ ಕುಂಡ ಬದಲಾಯಿಸಬೇಕು. ಆಕಿ೯ಡ್ಡುಗಳಿಗೆ ನುಸಿ, ಜೇಡರಹುಳು, ಗೊಂಡೆಹೊಳು, ಬಸವನಹುಳು, ಬಿಳಿತಿಗಣೆ, ಜಿರಲೆ, ಶಲ್ಕ ಕೀಟಗಳು ಮುಂತಾದ ಕೀಟಗಳು ಬೀಳುತ್ತವೆ. ಈ ಕೀಟಗಳ ಹಾವಳಿಯನ್ನು ಸ್ವಚ್ಛವಾದ ಮುನ್ನೆಚ್ಚರಿಕೆ ಬೇಸಾಯದಿಂದ ತಪ್ಪಿಸಬಹುದು. ಗಿಡಗಳ ಮೇಲೆ ಆಗಾಗ ನೀರು ಸಿಂಪಡಿಸುವುದರಿಂದ ಆಕಸ್ಮಿಕವಾಗಿ ಬೀಳುವ ಕೀಟಗಳನ್ನು ತಪ್ಪಿಸಬಹುದು. ಆಕಿ೯ಡ್ಡುಗಳನ್ನು ಕಾಡುವ ರೋಗ ಇಲ್ಲ. ಕೆಲವು ಸಾರಿ ಒಣಗುವಿಕೆ ಕಾಣಿಸಿಕೊಳ್ಳುತ್ತದೆ. ಇದನ್ನು ಬೋಡೊ೯ ದ್ರಾವಣದಿಂದ ತಡೆಗಟ್ಟಬಹುದು. (ಎಂ.ಎಚ್.)
    ಆಕಿ೯ಮಿಡೀಸ್ : ಪ್ರಶ.ಪೂ. 287 - 212. ಪ್ರಪಂಚದ ಮೂವರು ಸಾವ೯ಕಾಲಿಕ ಆತಿಶ್ರೇಷ್ಠ ಗಣಿತ ವಿದ್ವಾಂಸರ ಯಾದಿಯನ್ನು ಯಾವ ತರಹದಲ್ಲಿ ಸಿದ್ಧಪಡಿಸಿದರೂ ಆದರಲ್ಲಿ ಒಂದು ಆನಿವಾಯ೯ ಹೆಸರು ಆಕಿ೯ಮಿಡೀಸ್ ಎಂದು ಈ.ಟಿ.ಬೆಲ್ ಹೇಳಿದ್ದಾನೆ. ಅವನ ಮಾತಿನಲ್ಲಿ " ಶ್ರೇಷ್ಠ ಗಣಿತವಿದ್ವಾಂಸರ ಶ್ರೇಣಿಯಲ್ಲಿ ಆಕಿ೯ಮಿಡೀಸ್, 
     ನ್ಯೂಟನ್ ಮತ್ತು ಗಾಸ್ ಇವರ ಸ್ಥಾನ ವಿಶಿಷ್ಟವಾದುದ್ದು. ಶುದ್ದ ಮತ್ತು ಆನ್ವಯಿಕ ಗಣಿತಗಳೆರಡರಲ್ಲೂ ಈ ಮೂವರು ಪ್ರಚಂಡ ತರಂಗಗಳನ್ನೇ ಎಬ್ಬಿಸಿದರು. ಆಕಿ೯ಮಿಡೀಸ್ ಆನ್ವಯಿಕ ಗಣಿತಕ್ಕಿಂತ ಶುದ್ಧ ಹಣಿತಕ್ಕೆ ಆಧಿಕ ಮೌಲ್ಯವಿತ್ತ. ಪ್ರಾಚೀನಕಾಲದ ಪರಮ ಮೇಧಾವಿ ಆಕಿ೯ಮಿಡೀಸ್ ರೋಮ ರೋಮಕ್ಕೆ ಅತ್ಯಾಧುನಿಕ. ಅವನೂ ನ್ಯೂಟನ್ನನೂ ಆನ್ವಯಿಕ (ಕಾಲಾಂತರ ಸು. 2000 ವಷ೯) ಪರಸ್ಪರರನ್ನು ಪರಿಪೂಣ೯ವಾಗಿ ಆಥ೯ವಿಸಬಹುದಿತ್ತು. ಸಾಕಷ್ಟು ದೀಘ೯ಕಾಲ ಆಕಿ೯ಮಿಡೀಸ್ ಬದುಕಿದ್ದು ಗಣಿತ ಮತ್ತು ಭೌತಶಾಸ್ತ್ರಗಳಲ್ಲಿ ಸ್ನಾತಕೋತ್ತರ ಶಿಕ್ಷಣ ಪಡೆದಿದ್ದರೆ ಅವನು ಐಸ್ಪೈನ್, ಬೋರ್, ಹೈಸನ್ಬಗ್೯ ಮತ್ತು ಡಿರಾಕ್ರನ್ನು ಅವರೇ ತಮ್ಮನ್ನು ಅಥ೯ಮಾಡಿಕೊಂಡುದಕ್ಕಿಂತಲೂ ಚೆನ್ನಾಗಿ ತಿಳಿದುಕೊಳ್ಳುತ್ತಿದ್ದ" ಪ್ರಾಚೀನ ದೇಹದಲ್ಲಿ ಆಧುನಿಕ ಮನಸ್ಸು ಎಂದು ಆಕಿ೯ಮಿಡೀಸನನ್ನು ಈತ ವಣಿ೯ಸಿದ್ದಾನೆ. 
   ನಿಲ್ಲಲು ಇನ್ನೊಂದು ನೆಲೆ ತೋರಿಸಿ, ಆಗ ಭೂಮಿಯನ್ನೇ ನಾನು ಕದಲಿಸನಲ್ಲೆ ಎಂದು ದಿಟ್ಟತನದಿಂದ ಉದ್ಘೋಷಿಸಿದ ಪ್ರಚಂಡ ಗ್ರೀಕ್ ವಿಙ್ಞಾನನಿ ಆಕಿ೯ಮಿಡೀಸ್. ಅವನ ಮೇಧಾಶಕ್ತಿ, ಯಂತ್ರ ಕೌಶಲ ಮತ್ತು ಭರವಸಿಗಳ ಹಿರಿಮೆ ಈ ಘೋಷ ಒಂದರಿಂದಲೇ ಊಹಿಸಬಹುದು. ಆಕಿ೯ಮಿಡೀಸ್ ನ ತರುವಾಯ 22 ಶತಮಾನಗಳು ಉರುಳಿಹೋಗಿವೆ. ಆದರೆ ಇಂದಿಗೂ ಆತನ ಮೂಲತತ್ತ್ವ, ಪರಿಭ್ರಮಿ (ಸ್ಪೈರಲ್), ತಿರುಪು (ಆಕಿ೯ಮಿಡೀಸ್ ಸ್ಕ್ರೂ) ಇವುಗಳನ್ನು ಅರಿಯದ ವಿದ್ಯಾಥಿ೯ಯಿಲ್ಲ. 
  ಆಕಿ೯ಮಿಡೀಸ್ ಪ್ರ.ಶ.ಪೂ. 287ರಲ್ಲಿ ಸಿಸಿಲಿಯ ಸಿರಕ್ಯೂಸ್ ನಲ್ಲಿ ಜನಿಸಿದ. ಅವನ ತಂದೆ ಫೈಡಿಯಾ ಗ್ರೀಸ್ ದೇಶದ ಒಬ್ಬ ಖಗೋಳ ಶಾಸ್ತ್ರಙ್ಞ ಆಕಿ೯ಮಿಡೀಸನ ವಿದ್ಯಾಭ್ಯಾಸ ಆಗಿನ ಕಾಲದಲ್ಲಿ ಗಣಿತಶಾಸ್ತ್ರ ಕೇಂದ್ರವೆನಿಸಿದ್ದ ಆಲೆಗ್ಸಾಂಡ್ರಿಯದ ಶಾಲೆಯಲ್ಲಿ ನಡೆಯಿತು. ಯೂಕ್ಲಿಡ್ ಎಂಬ ಸುಪ್ರಸಿದ್ಧ ರೇಖಾಗಣಿತಙ್ಞನ ಶಿಷ್ಯನಾಗಿದ್ದ ಸಿನಾನ್ ಎಂಬ ಗಣಿತಶಾಸ್ತ್ರಙ್ಞ ಆಕಿ೯ಮಿಡೀಸ್ ನ ಅಧ್ಯಾಪಕ. ಎಒಟಾಸ್ತನೀಸ್ (ಪ್ರ.ಶ.ಪೂ. 274-194) ಎಂಬ ಮೇಧಾವಿ ಆಕಿ೯ಮಿಡೀಸ್ ನ ಸ್ನೇಹಿತ. ಆಕಿ೯ಮಿಡೀಸ್ ತನ್ನ ಇಡೀ ಜೀವಿತಕಾಲವನ್ನು ಗಣಿತ ಮತ್ತು ವೈಙ್ಞಾನಿಕ ಶೋಧನೆಗೆ ವಿನಿಯೋಗಿಸಿದ. ಗಣಿತಶಾಸ್ತ್ರವನ್ನು ಯಂತ್ರನಿಮಾ೯ಣಕ್ಕೆ ಪ್ರಯೋಗಿಸುವುದರಲ್ಲಿ ಅವನು ಆ ಕಾಲದಲ್ಲಿ ಅದ್ವಿತೀಯನಾಗಿದ್ದ. ವಿಙ್ಞಾನದ ಪ್ರಗತಿಯನ್ನು ಅತ್ಯಂತ ಭರದಿಂದ ಸಾಧಿಸಿದ ನ್ಯೂಟನ್ (17ನೆಯ ಶತಮಾನ) ಮುಂತಾದ ವಿಙ್ಙಾನಿಗಳೆಲ್ಲರೂ ಅನೇಕ ಮುಖ್ಯ ವಿಷಯಗಳಲ್ಲಿ ಆಕಿ೯ಮಿಡೀಸ್ನ ನಿಗೆ ಋಣಿಗಳಾಗಿದ್ದರು. ಗಣಿತಶಾಸ್ತ್ರದಲ್ಲಿ ಆಕಿ೯ಮಿಡೀಸ್ ಬರೆದ ಏಳು ಕೃತಿಗಳು ದೊರೆರಿವೆ, ಸಂಖ್ಯಾರೂಪಣಿ (ನೊಟೇಷನ್), ವತು೯ಲಗಳ ಪ್ರಮಾಣ, ಪ್ಯರಾಬೊಲದ ಕ್ಷೇತ್ರಫಲ ನಿಣ೯ಯ, ಗೋಳ ಮತ್ತು ಸಿಲಿಂಡರ್, ಗೋಳಕಲ್ಪಗಳು, ಪರೊಭ್ರಮಿಗಳು, ಶಾಂಕೇಯಗಳು (ಕೊನಾಯ್ಡ್ಸ್). ಆಕಿ೯ಮಿಡೀಸ್ ಖಗೋಳಶಾಸ್ತ್ರದಲ್ಲೂ ಆಸಕ್ತನಾಗಿದ್ದಂತೆ ಕಾಣುತ್ತದೆ; ಆದರೆ ಅವನ ಖಗೋಳಶಾಸ್ತ್ರ ಲೇಖನವಾವುದೂ ದೊರೆತಿಲ್ಲ. ಸಂಖ್ಯೆಗಳ ಎಣಿಕೆಗೆ ಆಕಿ೯ಮಿಡೀಸ್ ಘಾತಗಳನ್ನು ಉಪಯೋಗಿಸಿ, ಒಂದು ವಿಧಾನವನ್ನು ಕಲ್ಪಿಸಿದ್ದ:      ಕಂಡುಹಿಡಿದ. ವೃತ್ತದ ಕ್ಷೇತ್ರಫಲ ನಿಣ೯ಯದಲ್ಲಿ  am, an=am+n ಎಂಬ ಶ್ರೇಣಿಯ ಮೊತ್ತವನ್ನು ಕಂಡುಹಿಡಿದ. ವೃತ್ತದ ಕ್ಷೇತ್ರಫಲ ನಿಣ೯ಯದಲ್ಲಿ     ಎಂಬ ಸಂಖ್ಯೆಯ ಬೆಲೆ      31/7<‌ 310/71,3.1408< 3,1429 ಎಂಬ ಅಸಮೀಕರಣಗಳನ್ನು ಪಾಲಿಸುತ್ತದೆಯೆಂದು ಕಂಡುಹಿದ. ಪ್ಯರಾಬೊಲದ ಖಂಡದ ಕ್ಷೇತ್ರಫಲ, ಪರಿಗತಿಸುವ ಸಮಾನಾಂತರ ಚತುಭು೯ಜದ (ಸಕ೯ಮ್ ಸ್ಕ್ರೈಬಿಂಗ್ ಪ್ಯಾರಲಲೋಗ್ರಾಂ) ಕ್ಷೇತ್ರಫಲದ ಮೂರನೆಯ ಎರಡರಷ್ಪಿದೆಯೆಂದು ತೋರಿಸಿದ, ಗೋಳ, ಸಿಲಿಂಡರ್, ಮತ್ತು ಶಂಕುಘಳ ಛೇದನಗಳಿಂದ ಮೂರನೆಯ ಘಾತದ ಸಮೀಕರಣಗಳನ್ನು ಬಿಡಿಸಿದ. ಪ್ಯರಾಬೊಲ ಮತ್ತು ದೀಘ೯ವೃತ್ತಗಳ ಅಕ್ಷ ಪರಿಭ್ರಮಣದಿಂದ ಉತ್ಪನ್ನವಾಗುವ ಪ್ಯರಾಬೊಲಕಲ್ಪ ಮತ್ತ ದೀಘ೯ವೃತ್ತಗಳ ಗುಣಗಳನ್ನು ವಿಚಾರಮಾಡಿದ. ಕೆಲವು ಕೃತಿಗಳ ಗುರುತ್ವಕೇಂದ್ರಗಳನ್ನು ಕಂಡುಹಿಡಿದ. ತನ್ನ ವಿದ್ಯಾಗುರುವಾದ ಸೆನಾನ್ ಕಂಡುಹಿದಿದ್ದ r=a8 ಎಂಬ ಪರಿಭ್ರಮಿಯ ಗುಣಗಳನ್ನು ವಿಸ್ತಾರವಾಗಿ ಪರಿಶೀಲಿಸಿದ. ಅದು ಈಗ ಆಕಿ೯ಮಿಡೀಸ್ ನ ಪರಿಭ್ರಮಿಯೆಂದೇ ಪ್ರಸಿದ್ಧವಾಗಿದೆ. ಅಲ್ಲದೆ, ಶಾಂಕೇಯಗಳು (ಕೊನಾಯ್ಡ್ಸ್) ಎಂಬ ರೇಖೆಗಳ ಅನೇಕ ಗುಣಗಳನ್ನು ಕಂಡುಹಿಡಿದ. ಜಲಸ್ಥಿತಿವಿಙ್ಞಾನದಲ್ಲಿ (ಹೈಡ್ರೊಸ್ಪಾಟಿಕ್ಷ್) ಸುಪ್ರಸಿದ್ಧವಾಗಿರುವ ಆಕಿ೯ಮಿಡೀಸನ ಮೂಲತತ್ತ್ವವನನ್ನು ಕಂಡುಹಿಡಿಯಲು ಒಂದು