ಪುಟ:Mysore-University-Encyclopaedia-Vol-1-Part-3.pdf/೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆರ್ಟಿಯೊಡ್ಯಾಕ್ಟೈಲ ದೇಶಗಳಲ್ಲೂ ಇದನ್ನು ಸಾಗುವಳಿ ಮಾಡುವರು. ಇದರ ಗೋಳಾಕಾರದ ಹೂಗೊಂಚಲನ್ನು ತರಕಾರಿಯಾಗಿ ಉಪಯೋಗಿಸುತ್ತಾರೆ. ಎಳಸಾದ ಹೂಗೊಂಚಲನ್ನು ಹಸಿ ತರಕಾರಿಯಾಗಿ, ಇಲ್ಲವೆ ಬೇಯಿಸಿ ಅಥವಾ ಕರಿದು ಆಹಾರವಾಗಿ ಬಳಸುವರು. ಇದರಲ್ಲಿ ಕಬ್ಬಿಣ, ಅಯ್ಸೊಡೀನ್, ಮತ್ತಿತರ ಖನಿಜ ಪೌಷ್ಟಿಕಾಂಶಗಳು ಹೆಚ್ಚು ಪ್ರಮಾಣದಲ್ಲಿವೆ. ಇದರಂತೆಯೇ೩ ಇರುವ ಇನ್ನೊಂದು. ಕಾರಡೂನ್ಂ ಎಂಬುದು. ಇದು ಗುಂಡು ಆರ್ಟಿಚೋಕ್ ಗಿಡದ ಸಮೀಪ ಬಂದು. ಆದರೆ ಇದರ ಬುಡ ಮತ್ತು ಎಲೆತೊಟ್ಟುಗಳನ್ನು ಮಾತ್ರ ತರಕಾರಿಯಾಗಿ ಉಪಯೋಗಿಸುತ್ತಾರೆ. ೨. ಜೆರೂಸಲಂ ಆರ್ಟಿಚೋಕ್ : ಇದು ಕೂಡ ಆಸ್ಪರೇಸೀ ಕುಟುಂಬಕ್ಕೆ ಸೇರಿದೆ. ಸೂರ್ಯಕಾಂತಿ ಗಿಡದ ಹತ್ತಿರ ಸಂಬಂಧಿ. ಇದರ ವೈಜ್ಞಾನಿಕ ಹೆಸರು ಹೀಲಿಯಾಂತಸ್ ಟ್ಯೂಬರೋಸಸ್. ಜೆರೂಸಲಂ ಪಟ್ಟಣಕ್ಕೂ ಇದರ ಹೆಸರಿಗೂ ಯಾವ ಸಂಬಂಧವೂ ಇಲ್ಲ. ಪ್ರಾಯಶಃ ಇಟ್ಯಾಲಿಯನ್ ಗೀರಾಸೋಲ್ (ಸೂರ್ಯಕಾಂತಿ ಹೂ) ಅಪಭ್ರಂಶವಾಗಿ ಈ ಹೆಸರು ಬಂದಿರಬಹುದು. ಇದರ ಗಡ್ಡೆಗಳಲ್ಲಿ ಇನ್ಯೂಲಿನ್ ಎಂಬ ಪಿಷ್ಟಪದಾರ್ಥ ಇದೆ. ಗಡ್ಡೆಗಳನ್ನು ಬೇಯಿಸಿ ತಿನ್ನುವುದುಂಟು. ಇದು ದನಕರುಗಳಿಗೆ ಒಳ್ಳೆಯ ಮೇವು. ೩. ಚೀನಿ ಆರ್ಟಿಚೋಕ್ : ಇದು ಲೇಬಿಯೇಟೀ (ಲ್ಯಾಮಿಯೇಸೀ) ಕುಟುಂಬಕ್ಕೆ ಸೇರಿದ ಸ್ಟ್ಯಾಕಿಸ್ ಅಫಿನಿಸ್ ಎಂಬುದು. ಇದರ ತವರು ದೂರ ಪೂರ್ವ ಪ್ರದೇಶ. ಈ ಕಾರಣದಿಂದಲೇ ಇದಕ್ಕೆ ಈ ಹೆಸರು. ಇದರ ಗಡ್ಡೆಗಳು ಮೂಲಂಗಿಯನ್ನು ಹೋಲುವುವು. ಈ ಗಡ್ಡೆಗಳನ್ನು ಹಸಿ ತರಕಾರಿಯಾಗಿಯೂ ಬೇಯಿಸಿ ಅಥವಾ ಖಾದ್ಯ ತಯಾರಿಸಿ ಉಪಯೋಗಿಸಬಹುದು. (ಬಿ.ಎಸ್.ಆರ್.) ಆರ್ಟಿಯೊಡ್ಯಾಕ್ಟೈಲ : ಸಾಮಾನ್ಯವಾಗಿ ಸೀಳುಗೊರಸುಳ್ಳ ನೀರಾನೆ, ಒಂಟೆ, ಲಾಮ, ಜಿಂಕೆ, ಜಿರಾಫೆ, ಎರಳೆ, ಕುರಿ, ಆಡು, ದನ ಮುಂತಾದ ಪ್ರಾಣಿಗಳನ್ನೊಳಗೊಂಡ ಸ್ತನಿಗಳ ಗುಂಪು. (ಆರ್ಟಿಯೊ=ಜೊತೆ, ಡ್ಯಾಕ್ಟುಲಸ್=ಬೆರಳು). ಇವು ಹುಲ್ಲು, ಸೊಪ್ಪು ಹಾಗೂ ಇತರ ಸಸ್ಯಗಳನ್ನು ತಿಂದು ಜೀವಿಸುವ ಶಾಕಾಹಾರಿಗಳು. ಮುಂದಿನ ಹಾಗೂ ಹಿಂದಿನ ಕಾಲುಗಳಲ್ಲಿ ಎರಡು ಅಥವಾ ನಾಲ್ಕು ಸಮಸಂಖ್ಯೆಯ ಕಾಲ್ಬೆರಳುಗಳಿರುತ್ತವೆ. ಕಾಲುಗಳ ಮುಖ್ಯ ಅಕ್ಷ (ಆಕ್ಸಿಸ್) ಮೂರು ಮತ್ತು ನಾಲ್ಕನೆಯ ಕಾಲ್ಬೆರಳುಗಳ ಮಧ್ಯೆ ಸಾಗಿರುತ್ತದೆ. ಪ್ರತಿಯೊಂದು ಕಾಲ್ಬೆರಳೂ ಚೆನ್ನಾಗಿ ಬೆಳೆದಿದ್ದು, ಹೆಚ್ಚು ಕಡಿಮೆ ಒಂದೇ ಗಾತ್ರದಲ್ಲಿರುತ್ತದೆ. ಸಾಮಾನ್ಯವಾಗಿ ಎರಡನೆಯ ಮತ್ತು ಐದನೆಯ ಅಥವಾ ಹೊರಗಿನ ಕಾಲ್ಬೆರಳುಗಳು ಚಿಕ್ಕದಾಗಿರುತ್ತವೆ. ಕೆಲವು ವೇಳೆ ಅವು ಪೂರ್ಣವಾಗಿ ಇರುವುದಿಲ್ಲ. ಇಂದಿನ ಆರ್ಟಿಯೊಡ್ಯಾಕ್ಟೈಲದ ಮೊದಲನೆಯ ಕಾಲ್ಬೆರಳು ಇಲ್ಲವಾದರೂ ಹಂದಿಯಂತಿದ್ದ ಕೆಲವು ಪ್ರಾಣಿಗಳ ಮುಂದಿನ ಪಾದದಲ್ಲಿ ಅದು ಉಳಿದುಕೊಂಡಿರಬೇಕು. ಆರ್ಟಿಯೊಡ್ಯಾಕ್ಟೈಲಗಳಲ್ಲಿ ಹಿಂದಿನ ಪಾದದಲ್ಲಿ ಮೂರು ಕಾಲ್ಬೆರಳುಗಳನ್ನುಳ್ಳ ವರಾಹಗಳನ್ನು (ಪೆಕರೀಸ್) ಬಿಟ್ಟರೆ, ಈ ಗುಂಪಿನ ಜೀವಿಸಿರುವ ಎಲ್ಲ ಪ್ರಾಣಿಗಳಲ್ಲೂ ಮುಂದಿನ ಮತ್ತು ಹಿಂದಿನ ಪಾದಗಳಲ್ಲಿ ಎರಡು ಅಥವಾ ನಾಲ್ಕು ಕಾಲ್ಬೆರಳುಗಳಿರುತ್ತವೆ. ಈ ಜೀವಿಗಳ ಗುಂಪಿಗೆ ಅನ್ವಯಿಸಿರುವ ಪ್ಯಾರಾಕ್ಸೋನಿಯ ಎಂಬ ಹೆಸರು ಸಹ ಇವುಗಳಲ್ಲಿ ಇಡೀ ಪಾದದ ಮುಖ್ಯ ಅಕ್ಷ ಪ್ರತಿಯೊಂದು ಪಾರ್ಶ್ವದಲ್ಲಿ ಅನುಕ್ರಮವಾಗಿರುವ ಮೂರು ಹಾಗೂ ನಾಲ್ಕನೆಯ ಕಾಲ್ಬೆರಳುಗಳ ವ್ಯವಸ್ಥೆಯನ್ನು ಸೂಚಿಸುತ್ತದೆ. ಪೆರಿಸೊಡ್ಯಾಕ್ಟೈಲ ಎಂಬ ಪಂಗಡದ ಪ್ರಾಣಿಗಳಲ್ಲಿ ಬೆಸಸಂಖ್ಯೆಯ ಕಾಲ್ಬೆರಳಿನ ವ್ಯವಸ್ಥೆಯುಂಟು. ಇವುಗಳಲ್ಲಿ ಪ್ರತಿಯೊಂದು ಪಾದದ ಮುಖ್ಯ ಅಕ್ಷ ಯಾವಾಗಲೂ ಇನ್ನಿತರ ಕಾಲ್ಬೆರಳುಗಳಿಗಿಂತ ದೊಡ್ಡದಾಗಿರುವ ಮೂರನೆಯ ಕಾಲ್ಬೆರಳಿನ ಒಂದು ಪಾರ್ಶ್ವಕ್ಕೆ ಹೋಗದೆ ಮಧ್ಯೆ ಸಾಗುತ್ತದೆ. ಇವುಗಳ ಪಾದಗಳ ರಚನೆ ಆಶ್ಚರ್ಯಕರವಾಗಿದೆ. ಪ್ರತಿಯೊಂದು ಪಾದದ ನಾಲ್ಕು ಕಾಲ್ಬೆರಳುಗಳು ನೆಲವನ್ನು ಮುಟ್ಟುವ ನೀರಾನೆಯನ್ನು (ಹಿಪಟಾತಮಸ್) ಬಿಟ್ಟರೆ, ಆರ್ಟಿಯೊಡ್ಯಾಕ್ಟೈಲ ಗುಂಪಿನ ಇತರ ಪ್ರಾಣಿಗಳಲ್ಲಿ, ನಡೆಯುವಾಗ ಪ್ರತಿಯೊಂದು ಪಾದದ ಮಧ್ಯದ ಎರಡು ಕಾಲ್ಬೆರಳುಗಳು ತುದಿಯ ಮೇಲೆ ಆಧಾರವಾಗಿರುತ್ತವೆ. ಒಂಟೆಗಳ ಹೊರತು. ಇತ್ತೀಚಿನ ಎಲ್ಲ ಆರ್ಟಿಯೊಡ್ಯಾಕ್ಟೈಲಗಳ ಕಾಲ್ಬೆರಳುಗಳು ಗೊರಸುಗಳಲ್ಲಿ ಅಳವಟ್ಟಿವೆ. ಆದರೆ ಒಂಟೆಗಳಲ್ಲಿ, ಮಧ್ಯದ ಎರಡು ಕಾಲ್ಬೆರಳುಗಳು ಪಾದದ ಅಂಗಾಲೆನಿಸಿರುವ ಒಂದು ಅಗಲವಾದ ಸಿಂಬಿಯಲ್ಲಿ ಸೇರಿರುವದು. ಉತ್ತರ ಅಮೆರಿಕದ ಅಳಿದುಹೋದ ಅಗ್ರಿಯೊಖೀರಸ್ ನ ಗೊರಸುಗಳು ಮೊನಚಾದ ಉಗುರುಗಳಂತಿದ್ದವು. ಇಂದು ಬದುಕುಳಿದಿರುವ ಸಂಬಂಧಿಗಳಲ್ಲಿ ಪಾದಗಳ ಮೂಳೆಗಳ ಮಾರ್ಪಾಡಿನೊಂದಿಗೆ, ಮುಂಗಾಲಿನ ಅಲ್ನ ಕ್ಷೀಣಿಸಿವೆ. ಶೆವ್ರೋಟೇನ್ ಎಂಬ ಸಣ್ಣ ಕಸ್ತೂರಿ ಮೃಗಗಳನ್ನೂ ಹೊರತುಪಡಿಸಿ ಇಂದಿನ ಇನ್ನಿತರ ಆರ್ಟಿಯೊಡ್ಯಾಕ್ಟೈಲಗಳ ತೋಳು ಮೂಳೆಗಳಲ್ಲಿ ಎಂಟೆಪಿಕಾಂಡೈಲಾರ್ ರಂಧ್ರಗಳಿರುವುದಿಲ್ಲ. ಆದರೆ ಹಿಂಗಾಲಿನಲ್ಲಿ ಫಿಬ್ಯುಲ ಅವಶೇಷವಾಗಿ ಉಳಿದುಕೊಂಡರೂ ತೊಡೆ ಮೂಳೆಯ (ಫೀಮರ್) ಮೂರನೆಯ ಟ್ರೊಕ್ಯಾಂಟರ್ ಸಂಪೂರ್ಣವಾಗಿ ಇಲ್ಲವಾಗಿದೆ. ಇವುಗಳ ದೇಹದ ರಚನಾವೈಖರಿ ಕುತೂಹಲಕಾರಿಯಾಗಿದೆ. ಬಹು ಸಂಖ್ಯೆಯ ಆರ್ಟಿಯೊಡ್ಯಾಕ್ಟೈಲಗಳು ತಮ್ಮ ತಲೆಯ ಮುಂಭಾಗದಲ್ಲಿ ಜೋಡಿ ಕೊಂಬುಗಳನ್ನು ಪಡೆದಿವೆ. ಆದರೆ ಅಳಿದುಹೋದ ಹಲವು ಜಿಂಕೆಗಳಲ್ಲಿ ಮೂರನೆಯ ಕೊಂಬು ಇದ್ದಿರಬೇಕು. ಇವುಗಳಲ್ಲಿ ಗಂಡು ಪ್ರಾಣಿಗಳಲ್ಲಿ ಮಾತ್ರ ಕೊಂಬುಗಳು ಇರುವುದು ಕಂಡುಬರುತ್ತದೆ. ಇಂದಿನ ಕುರಿಗಳಲ್ಲೂ ಈ ವೈಶಿಷ್ಟ್ಯವನ್ನು ಕಾಣಬಹುದು. ಆರ್ಟಿಯೊಡ್ಯಾಕ್ತೈಲಗಳ ಮೂತಿ ಉದ್ದ. ಬುರುಡೆಯ ಪಟ್ಟಿ ಚಿಕ್ಕದು. ಮೂಗಿನ ಮೂಳೆಗಳು ಹಿಂದಕ್ಕೆ ವಿಸ್ತರಿಸಿಲ್ಲ; ಕಣ್ಣಿನ ಗುಳಿ ಮೂಳೆಯಿಂದ ಸಂಪೂರ್ಣವಾಗಿ ಆವರಿಸಿದೆ. ಇವುಗಳಲ್ಲಿ ಕತ್ತಿನ ಕೆಳಗಣ ಅಡ್ಡೆಲುಬು (ಕ್ಲಾವಿಕಲ್) ಇರುವುದಿಲ್ಲ. ಜಿರಾಫೆಯನ್ನೂ ಒಳಗೊಂಡು ಇವುಗಳೆಲ್ಲದರಲ್ಲೂ ಕತ್ತಿನ್ ಏಳು ಕಶೇರು ಮಣಿ (ವರ್ಟಿಬ್ರೇ)ಗಳಿರುವುವು. ಸಾಮಾನ್ಯವಾಗಿ ಎದೆಯ ಕಶೇರುಮಣಿಗಳ ಸಂಖ್ಯೆ ಒಂಟೆಯಲ್ಲಿ ೧೨ ಇದ್ದರೆ ನೀರಾನೆಯಲ್ಲಿ ೧೫ ಅಥವಾ ೧೬ರವರೆಹೆ ಇರುತ್ತದೆ. ಇಂದು ಬದುಕುಳಿದಿರುವ ಆರ್ಟಿಯೊಡ್ಯಾಕ್ಟೈಲಗಳಲ್ಲಿ ಎದೆಯ ಹಾಗೂ ನಡುವಿನ ಕಶೇರುಮಣಿಗಳ ಒಟ್ಟು ಸಂಖ್ಯೆ ೧೯ನ್ನು ಮೀರುವುದಿಲ್ಲ. ಇವುಗಳಲ್ಲಿ ಐದುಲಾಂಗೂಲ ಕಶೇರುಮಣಿಗಳಿರುತ್ತವೆ. ಬಾಲದ ಕಶೇರುಮಣಿಗಳ ಸಂಖ್ಯೆಯಲ್ಲಿ ವ್ಯತ್ಯಾಸವಿದೆ. ಮೇಲಿನ ದವಡೆ ಹಾಗೂ ಕೆಳದವಡೆಯ ಪ್ರತಿಯೊಂದು ಪಾರ್ಶ್ವದಲ್ಲಿರುವ ಮೂರು ಬಾಚಿಹಲ್ಲುಗಳೂ ಒಂದು ಕೋರೆಹಲ್ಲೂ ನಾಲ್ಕು ಮುಂದವಡೆಯ್ ಹಲ್ಲುಗಳೂ ಮೂರು ಹಿಂದವಡೆ ಹಲ್ಲುಗಳೂ ಸೇರಿ ಒಟ್ಟು ೪೪ ಹಲ್ಲುಗಳಿವೆ. ಅನೇಕ ಮೆಲುಕುಹಾಕುವ ಪ್ರಾಣಿಗಳಲ್ಲಿ ಮೇಲಿನ ಕೋರೆ ಹಲ್ಲುಗಳೂ ಮೊದಲಿನ ಮುಂದವಡೆ ಹಲ್ಲುಗಳಲ್ಲೊಂದು ಉದ್ದವಾದ ದಂತವಾಗಿ ಬೆಳೆಯಬಹುದಾದರೂ ಕೆಲವು ವೇಳೆ ಅದು ಇರುವುದೇ ಇಲ್ಲ. ಹಂದಿ ಮತ್ತು ನೀರಾನೆಗಳಲ್ಲಿಯ ಕೆಳಗಿನ ಕೋರೆಹಲ್ಲು ಚೆನ್ನಾಗಿ ಬೆಳೆದಿರುವುದುಂಟು. ಆದರೆ ಮೆಲಕು ಪ್ರಾಣಿಗಳಲ್ಲಿ ಅದು ಕ್ಷೀಣಿಸಿರುತ್ತದೆ. ಹಲವು ವೇಳೆ ಅದು ಬಾಚಿ ಹಲ್ಲಿನಂತೆ ಮಾರ್ಪಟ್ಟಿರುವುದುಂಟು. ಆರ್ಟಿಯೋಡ್ಯಾಕ್ಟೈಲಗಳ ದವಡೆ ಹಲ್ಲುಗಳ ರಚನೆಯಲ್ಲಿ ಎರಡು ವಿಧಗಳುಂಟು. ಬ್ರಾಕಿಯೋಡಾಂಟ್ ವಿಧದ ದವಡೆ ಹಲ್ಲುಗಳು ಸಾಮಾನ್ಯವಾಗಿ ತಗ್ಗಿದ ಶಿಖರವನ್ನುಳ್ಳವು. ಆದರೆ ಡಿಪ್ತೊಡಾಂಟ್ ಎಂಬ್ ವಿಧದ ದವಡೆ ಹಲ್ಲುಗಳು ಎತ್ತರದ ಶಿಖರವನ್ನು ಪಡೆದಿರುವುವು. ಈ ದವಡೆ ಹಲ್ಲುಗಳ ಶೃಂಗವನ್ನು ನಿರೂಪಿಸುವ ಮಿನಾಯಿಯ ಎನಾಮಲ್ ಪದರಗಳ ತಳಗಳು ಅರೆಯುವ ಹೊರಭಾಗದಿಂದ ಕಾಣಿಸುವುದಿಲ್ಲ. ಬ್ರಾಕಿಯೋಡಾಂಟ್ ದವಡೆ ಹಲ್ಲುಗಳ ಮೂರು ಇಲ್ಲವೆ ನಾಲ್ಕು ಮುಖ್ಯ ಶೃಂಗಗಳು ಸಾಮಾನ್ಯವಾಗಿ ಶಂಖದ ರೀತಿಯಲ್ಲಿವೆ. ಈ ರೀತಿ ಇದ್ದಾಗ ಇವುಗಳನ್ನು ಬ್ಯೂನೊಡಾಂಟ್ ಎಂದು ಕರೆಯುತ್ತಾರೆ. ಶೃಂಗಗಳ ಇನ್ನೊಂದು ವಿಧದ ರಚನೆ ಹಿಪ್ಸೊಡಾಂಟ್ ದವಡೆ ಹಲ್ಲುಗಳಲ್ಲಿದೆ. ಈ ಹಿಪ್ಸೊಡಾಂಟ್ ದವಡೆ ಹಲ್ಲುಗಳ ಮುಖ್ಯ ಶೃಂಗಗಳು ಸಾಧಾರಣವಾಗಿ ಅರ್ಧಚಂದ್ರಾಕೃತಿಯಲ್ಲಿವೆ. ಇಂಥ ದವಡೆ ಹಲ್ಲುಗಳನ್ನು ಸೆಲೆನೊಡಾಂಟ್ ಎನ್ನುತ್ತಾರೆ. ಆದರೆ ಮಧ್ಯಮ ಎತ್ತರದ ದವಡೆ ಹಲ್ಲಿನ ಶಿಖರಗಳಲ್ಲಿ ಒಂದು ಪಾರ್ಶ್ವದ ಶೃಂಗಗಳು ಬ್ಯೂನೊಡಾಂಟ್ ಆಗಿದ್ದು ಎದುರು ಪಾರ್ಶ್ವದ ಶ್ರ್ಂಗಗಳು ಸೆಲಿನೊಡಾಂಟ್ ಎಂದು ಕರೆಯುತ್ತಾರೆ, ಆರ್ಟಿಯೊಡ್ಯಾಕ್ಟೈಲಗಳ ವರ್ಗೀಕರಣದಲ್ಲಿ ದವಡೆ ಹಲ್ಲುಗಳ ಹಾಗೂ ಕೈ ಕಾಲು ಮೂಳೆಗಳ ರಚನೆ ಉಪಯುಕ್ತ ಆಧಾರಗಳೆನಿಸಿವೆ. ಸಾಮಾನ್ಯವಾಗಿ ಎಲ್ಲ ಆರ್ಟಿಯೊಡ್ಯಾಕ್ಟೈಲಗಳಲ್ಲಿ ಜೀರ್ಣಾಂಗ ದೀರ್ಘವಾಗಿಯೂ ವಿಸ್ತಾರವಾಗಿಯೂ ಇದೆ. ಅವೆಲ್ಲ ಸಸ್ಯಾಹಾರಿಗಳಾಗಿದ್ದುದರಿಂದ ಹೆಚ್ಚಿನ ಪ್ರಮಾಣದಲ್ಲಿ ಆಹಾರ ತೆಗೆದುಕೊಳ್ಳುವುದರಿಂದ ಅಂಥ ಅಂಗವ್ಯೂಹ ಅಗತ್ಯ. ಮೆಲುಕು ಹಾಕುವ ಆರ್ಟಿಯೊಡ್ಯಾಕ್ಟೈಲಗಳು ಆಹಾರವನ್ನು ಜೀರ್ಣಿಸಲು ನೆರವಾಗುವ ವಿಶಿಷ್ಟ ಅಂಗರಚನೆಯನ್ನು ಪಡೆದುಕೊಂಡಿವೆ. ಜೀವಿಸಿರುವ ಮೆಲಕು ಪ್ರಾಣಿಗಳಲ್ಲಿ ಜಠರ ಸಾಧಾರಣವಾಗಿ ನಾಲ್ಕು ಗೂಡು (ಭಾಗ)ಗಳಾಗಿ ವಿಭಾಗವಾಗಿರುತ್ತದೆ. ಒಮ್ಮೆ ನುಂಗಿದ ಆಹಾರವನ್ನು ಬಾಯಿಗೆ ಮತ್ತೆ ತೆಗೆದುಕೊಂಡು ಅಗಿದು ನುಂಗಲು ಅನುಕೂಲಿಸವಂತಿದೆ. ಜಠರದ ಮೊದಲಿನ ಎರಡು ಗೂಡುಗಳಲ್ಲಿ ಆಹಾರ ಸೂಕ್ಷ್ಮಜೀವಿಗಳಿಂದ ವಿಭಜನೆಯಾಗುವುದುಂಟು. ಹಂದಿ ಮತ್ತು ನೀರಾನೆಗಳಲ್ಲಿ ಜಠರ ಸರಳವಾಗಿದ್ದು, ಮೆಲುಕು ಹಾಕುವುದಕ್ಕೆ ಅನುಕೂಲವಿಲ್ಲ. ಆರ್ಟಿಯೊಡ್ಯಾಕ್ಟೈಲಗಳು ಸಾಮಾನ್ಯವಾಗಿ ಒಂದು ಅಂಧ್ರಾಂತ್ರವನ್ನೂ (ಸೀಕಂ) ಒಂದು.