ಪುಟ:Mysore-University-Encyclopaedia-Vol-1-Part-3.pdf/೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.
  1. REDIRECT [[ಅಟಿ‌ಯಡ್ಯಾಕ್ಟೈಲ

ಪಿತ್ರಕೋಶವನ್ನು ಪಡೆದಿರುವುದುಂಟು. ಇವುಗಳಲ್ಲಿ ಕೆಲವೇ ಸ್ತನ್ಯಗ್ರಂಥಿಗಳಿವೆ. ಅವು ಹೊಟ್ಟೆ ಮತ್ತು ತೊಡೆಯ ನಡುವಿನ ತನಕ ತಗ್ಗಿನ ಭಾಗದಲ್ಲಿರುತ್ತವೆ. ಹೆಚ್ಚಿನ ಸಂಖ್ಯೆಲ್ಲಿದ್ದರೆ ಅವು ಹೊಟ್ಟೆಯ ಭಾಗದಲ್ಲಿರುವುವು. ಗಭ‌‌‌‌‌‌‍ ಕೋಶ ಇಬ್ಬಾಗವಾಗಿರುತ್ತವೆ. ನೀರಾನೆಯ ವಿನಾ ಎಲ್ಲಾ ಅಟಿ‍ ಯೊಡ್ಯಾಕ್ಟೈಲಗಳಲ್ಲಿ ವೃಷಣಗಳು ವೃಷಣಕೋಶದಲ್ಲಿ ಇಳಿದಿರುವುದುಂಟು. ನೀರಾನೆಯಲ್ಲಿ ಹಾಗೆ ಇಳಿಯದೆ ಉದರದಲ್ಲೇ ಉಳಿದಿದೆ. ವಿವಿಧ ನಮೂನೆಯ ಗಭ ವೇಷ್ಪನಗಳು (ಪ್ಲ್ಯಾಸೆಂಟ) ಇವುಗಳಿಲ್ಲಿರುವುದುಂಟು.

   ಅಟಿ ಯೊಡ್ಯಾಕ್ಟ್ರೈಲಗಳಲ್ಲಿ ಚಮ‌ ಗ್ರಂಥಿಗಳು ಚೆನ್ನಾಗಿ ರೂಪುಗೊಂಡಿವೆ. ಇವುಗಳಲ್ಲಿ ಸ್ತನ್ಯಗ್ರಂಥಿಗಳು ಯಾವಾಗಲೂ, ಹೊಟ್ಟೆ ಹಾಗೂ ತೊಡೆಯ ಮಧ್ಯದ ತಗ್ಗಿನ ಭಾಗದಲ್ಲಿರುವುದು ಕಂಡುಬರುತ್ತದೆ. ಹೊಟ್ಟೆ, ತೊಡೆಯ ಮಧ್ಯದಭಾಗ, ಉದರದ ಭಾಗಗಳು, ಬೆನ್ನಿನ ಮಧ್ಯಭಾಗ, ಕಣ್ಣಿನ ಮುಂಭಾಗ, ಹಣೆ, ಪಾದ ಮುಂತಾದ ದೇಹದ ಅನೇಕ ಭಾಗಗಳಲ್ಲಿ ಅವು ಇರುವುವು. ಈ ಗುಂಪಿನ ಪ್ರಾಣಿಗಳಲ್ಲಿ

ಪ್ರಾಣೇಂದ್ರಿಯ ತೀರ ಚುರುಕಾಗಿದೆ. ಈ ಪ್ರಾಣಿಗಳ ಶ್ರವಣಶಕ್ತಿಯೂ ಚುರುಕು. ಆದರೆ ದೃಷ್ಟಿಶಕ್ತಿ ಅಷ್ಟೇನೂ ಚೆನ್ನಾಗಿ ವೃದ್ದಿಯಾಗಿಲ್ಲ. ಬಹುಪಾಲು ಅಟಿ‍ಯೊಡ್ಯಾಕ್ಟೈಲಗಳು, ತಾವು ಬದುಕಿ ಉಳಿಯಲು ದೃಷ್ಟಿಗಿಂತ ವಾಸನೆ ಮತ್ತು ಧ್ವನಿಗಳು ಸಹಾಯವನ್ನು ಅವಲಂಬಿಸಿವೆ. ವಾಸನೆ ಇವುಗಳಲ್ಲಿ ಸಂಘಜೀವಿಯನ್ನು ಉತ್ತೇಜಿಸುವದೂ ಅಲ್ಲದೇ ಅದನ್ನು ಸಾಂಕೇತಿಕ ವಿನಿಮಯಕ್ಕೂ ಬಳಸುತ್ತದೆ. ಸಾಧಾರಣವಾಗಿ ಗಂಡು ಮತ್ತು ಹೆಣ್ಣುಗಳು ಋತುಕಾಲದಲ್ಲಿ ಒಟ್ಟಿಗಿರುವುದನ್ನು ಬಿಟ್ಟರೆ, ಯಾವಾಗಲೂ ಪ್ರತ್ಯೇಕವಾಗಿಯೇ ಜೀವಿಸುತ್ತವೆ. ಸಂತಾನವೃದ್ದಿಯ ಕಾಲದಲ್ಲಿ ಸಹಜವಾಗಿ ಗಂಡುಗಳು ಹೆಣ್ಣುಗಳ ಮೇಲಿನ ಪ್ರಭುತ್ವಕ್ಕೋಸ್ಕರ ಒಂದರೊಡನೊಂದು ಹೋರಾಡುವುದುಂಟು. ಸಾಮಾನ್ಯವಾಗಿ ಸಮಶೀತೋಷ್ಣವಲಯದ ಪ್ರಾಣಿಗಳಲ್ಲಿ ಕಾಮೋದ್ರೇಕ ಮಾಗಿ ಕಾಲದಲ್ಲಿ ಉಂಟಾದರೆ, ಉಷ್ಣವಲಯದ ಪ್ರಾಣಿಗಳಲ್ಲಿ ವಿವಿಧ ಕಾಲದಲ್ಲಿ ಸಂಭವಿಸಬಹುದು. ಗಭ ಧಾರಣೆಯಕಾಲ ಸಮಾನ್ಯವಾಗಿ ಸಣ್ಣ ಗಾತ್ರದ ಅಟಿ‍ಯಾಡ್ಯಾಕ್ಟೈಲಗಳಿಗಿಂತ ದೊಡ್ಡ ಗಾತ್ರವಾದವುಗಳಲ್ಲಿ ದೀಘ‍ವಾಗಿರುತ್ತದೆ. ಸಮಶಿತೋಷ್ಣವಲಯದಲ್ಲಿರುವ ಮೆಲುಕುಪ್ರಾಣಿಗಳಿಗೆ ವಸಂತಕಾಲದಲ್ಲೂ ಉಷ್ಣವಲಯಗಳಲ್ಲಿರುವ ಪ್ರಾಣಿಗಳಿಗೆ ಮಳೆಗಾಲದ ಪ್ರಾರಂಭದ ಸರಿಸುಮಾರಿಗೂ ಒಂದು, ಎರಡು ಇಲ್ಲವೆ ಅಪರೂಪವಾಗಿ ಮೂರು ಮರಿಗಳು ಹುಟ್ಟುವುದುಂಟು. ಸಾಕಿದ ಹಂದಿಗಳು ಒಂದು ಸೂಲಿಗೆ ಸಾಮಾನ್ಯವಾಗಿ ಹಿನಾಲ್ಕರವರೆಗೆ ಮರಿಗಳನ್ನು ಹಾಕಬಹುದು. ಗೊರಸುಳ್ಳ ಇ ಎಳೆಯ ಸಸ್ತನಿಗಳು ಹುಟ್ಟಿದ ಕೆಲವೇ ಗಂಟೆಗಳೊಳಗೆ ತಮ್ಮ ತಾಯಿಯನ್ನು ಹಿಂಭಾಲಿಸುವುವು. ಅಸ್ಟ್ರೇಲಿಯಾ, ಅಂಟಾಕ್ ಟಿಕ್ ಪ್ರದೇಶಗಳನ್ನು ಬಿಟ್ಟರೆ ಅಟಿ ಯೊಡ್ಯಾಕ್ಟೈಲಗಳು ಎಲ್ಲಾ ಭೂಖಂಡಗಳಲ್ಲೂ ವಾಸಿಸುತ್ತವೆ. ಹಂದಿ, ಜಿಂಕೆ ಮತ್ತು ಎಮ್ಮೆಗಳು ನ್ಯೂಗಿನಿ, ನ್ಯೂಜಿಲ್ಯಾಂಡ್, ಟಾಸ್ಮೇನಿಯ ಹಾಗೂ ಅಂಟಾಕ್ ಟಿಕ್ ಪ್ರದೇಶದ ದ್ವೀಪಗಳನ್ನು ಬಿಟ್ಟರೆ ಅಲವು ದೊಡ್ಡ ದೀಪಗಳನ್ನು ಸಾಕು ಪ್ರಾಣಿಗಳಾಗಿ ಜೀವಿಸುತ್ತವೆ. ಬೇಸಾಯ ಹಾಗೂ ಬೇಟೆಯ ಅಟಿ ಯೊಡ್ಯಾಕ್ಟೈಲಗಳನ್ನು ಮಾನವ ಸರಿಯಾಗಿ ಮೇವು ದೊರಕುವ ಎಲ್ಲಾ ಭಾಗಗಳಿಗೂ ತಂದು ಸಾಕುತ್ತಿದ್ದಾನೆ.

 ವಗಿ‌ಕರಣ : ಇಂದು ಕಾಣಸಿಗುವ ಹಾಗೂ ಅಳಿದುಹೊದ ಅಟಿ‍ಯೊಡ್ಯಾಕ್ಟೈಲಗಳನ್ನು ಸಾಮಾನ್ಯವಾಗಿ ಸೂಯಿಫಾರಮ್, ಟೈಲೊಪೋಡಗಳು ಮತ್ತು ರೂಮಿನೆನ್ಪೆಯ ಎಂಬ ಮೂರು ಉಪಗಣಗಳನ್ನು ಗುರುತಿಸಲಾಗಿದೆ.
 ಸೂಯಿಫಾರಮ್ ಗಳು : ಜೀವಿಸಿರುವ ಅಟಿ‍ ಯೊಡ್ಯಾಕ್ಟೈಲಗಳಲ್ಲಿ ಹಂದಿ, ಪೆಕರೀಸ್, ನೀರಾನೆ - ಈ ಪ್ರಾಣಿಗಳನ್ನು ಸೂಯಿಫಾರಮ್ ಗುಂಪಿಗೆ ಸೇರಿಸಲಾಗಿದೆ. ಇವುಗಳ ಜಠರಗಳ ಹೆಚ್ಚು ಕಡಿಮೆ ವಿಶೇಷಭಾಗಗಳಾಗಿ ಪುನರ್ ವಿಭಾಗಿಸಲ್ಪಟ್ಟಿದ್ದರೂ ಇವು ಮೆಲುಕುಹಾಕುವುದಿಲ್ಲ. ಇವುಗಳಲ್ಲಿ ಸಾಮಾನ್ಯವಾಗಿ ಒಂದರಿಂದ ಮೂರರವರೆಗೆ ಮೇಲ್ದವಡೆಯ ಪ್ರತಿ ಪಾಶ್ವ ದಲ್ಲೂ ಬಾಚಿ ಹಲ್ಲುಗಳಿವೆ. ಇವುಗಳಲ್ಲಿ ಕೆಳಗಿನ ಬಾಚೆ ಹಲ್ಲುಗಳು ಮುಂದಕ್ಕೆ ಚಾಚಿಕೊಂಡಿವೆ. ಇವುಗಳ ಕೋರೆಹಲ್ಲುಗಳು ಚೆನ್ನಾಗಿ ಬೆಳೆದಿದ್ದು, ದಾಡೆಯಂತಿರುವುದನ್ನು ನೋಡಬಹುದು. ಸಾಮಾನ್ಯವಾಗಿ ಯಾವಾಗಲೂ ಬೆಳೆಯುತ್ತಿಎರುವುದೇ ಕೋರೆ ಹಲ್ಲುಗಳ ವೈಶಿಷ್ಟ್ಯ., ಸೂಯಿಫಾರಮ್ ಗಳ ದವಡೆಗಳು ಬ್ಯೂನೊಡಾಂಟ್ ಮಾರಿಯದು. ಕಣ್ಣಿನ ಗೂಡು ಟೆಂಪೊರೆಲ್ ಫಾಸದಿಂದ ಬೇಪ ಟ್ಟಿರುವುದಿಲ್ಲ. ಇವುಗಳಿಗ ಕೊಂಬುಗಳಿರುವುದಿಲ್ಲ. ಸೂಯಿಫಾರಮ್ ಗಳಲ್ಲಿ ಅಲ್ನ ಹಗೂ ಫಿಬ್ಯುಲ ವಿಶೇಷವಾಗಿ ರೂಪಗೊಂಡಿಲ್ಲವೆಂದೇ ಹೇಳಬಹದು. ಪಾದದಲ್ಲಿರುವ ಮಧ್ಯದ ಎರಡು ಮೂಳೆಗಳು, ಕ್ಯಾನನ್ ಮೂಲೆಯಾಗಿ ರಚನೆಹೊಂದಲು. ಸಂಪೂಣ‌ ವಾಗಿ ಒಂದುಗೂಡಿಲ್ಲ.
 ಹಂದಿಗಳು ಯುರೋಪಿನಲ್ಲಿ ಸು. ೨೫,೦೦೦,೦೦-೩೦,೦೦೦,೦೦೦ ವಷ‌ ಗಳ ನಡುಗಾಲದ ಪೂವ ದಲ್ಲಿ ಕಾಣಿಸಿಕೊಂಡವು. ಆಲಿಗೊಸಿನ್ ಕಾಲದ ಪೇಲಿಯೋಕೀರಸ್ ಅನ್ನು ಸೂಯಿಡೀ ಎಂಬ ನೈಜ ಹಂದಿಯ ಬಳಗದ ಮೂಲವೆಂದೇ ಪರಿಗಣಿಸಬಹದು. ಇದು ಅಳಿದುಹೋಗುವುದಕ್ಕಿಂತ ಮುಂಚೆ, ಭಾರತ ಹಾಗೂ ಆಫ್ರಿಕಗಳಲ್ಲಿ ಮಯಸೀನ್ ಕಾಲದ ಪ್ರಾರಂಭದಲ್ಲಿ ಕಾಣಿಸಿಕೊಂಡಿತು. ಇದು ಅನಂತರ ಏಷ್ಯ ಖಂಡಕ್ಕೆ ಮತ್ತು ಪ್ಲೈಯಸೀನ್ ಕಾಲದಲ್ಲಿ ಭಾರತಕ್ಕೂ ಹರಡಿತು. ಏಷ್ಯಾದ ಪಿಗ್ಮಿ ಹಂದಿ (ಪೋರುಲ್ಕ), ಈಸ್ಟ್ ಇಂಡಿಯಾದ ಬ್ಯಾಬಿರುಸ್ಸ, ಆಫ್ರೀಕದ ನದಿಹಂದಿ (ಪೋಟವೋಕೀರಸ್) ಹಾಗೂ ಫ್ರೆಷ್ ಹಂದಿ, ಹೈಲೋಕೀಸರ್ ಮುಂತಾದವುಗಳೇ ಹಂದಿಯ ಬಳಗದ ಬದುಕಿರುವ ಇನ್ನಿತರ ಪ್ರತಿನಿಧಿಗಳು.
 ಟಯುಸ್ಸೂಯಿಡೀ ಬಳಗದ ನೈಜಪೆಕರಿಗಳು ಯುರೋಪಿನಲ್ಲಿ ಇದೇ ಸರಿಸುಮಾರಿನ ಸಮಯದಲ್ಲಿ ವಿಕಾಸಗೊಂಡಿರಬೇಕೆಂದು ಅಭಿಪ್ರಾಯಪಟ್ಟಿದ್ದಾರೆ. ಇವು ನೈಜ ಹಂದಿಗಳಿಗಿಂತ ಮುಂಚಿತವಾಗಿಯೇ ಕಾಣಿಸಿಕೊಂಡಿರಬೇಕೆಂದು ಅಭಿಪ್ರಾಯವೂ ಉಂಟು. ಅದರೆ ಈಗ ಜೀವಿಸಿರುವ ಪೆಕ್ಕೆರಿಗಳು ಅಮೇರಿಕದ ಉಷ್ಣವಲಯದಲ್ಲಿರುವ ಕೇವಲ ಎರಡು ಜಾತಿಗಳಿಂದ ಪ್ರತಿನಿಧಿಸಲ್ಪಟ್ಟಿವೆ. ಕೊರಳುಪಟ್ಟಿಯ ಪೆಕರಿ-ಪಕರಿ ಜಾಕು ಹಾಗೂ ದೊಡ್ಡದಾದ ಬೆಳ್ದುಟಿಯ ಪೆಕರಿ (ಟಯಸ್ಸು ಪೆಕರಿ) ಇವುಗಳೇ ಈಗ ಜೀವಿಸಿರುವ ಪ್ರತಿನಿಧಿಗಳು.
  ನೀರಾನೆಗಳ ಬಳಗ ಮೂರು ಜಾತಿಗಳನ್ನೂಳಗೊಂಡಿದೆ. ಇವುಗಳ ಪೈಕಿ ಹೆಕ್ಸಪ್ರೋಟೋಡಾನ್ ಎಂಬುದು ಮಾತ್ರ ನಿನಾ‌ಮವಾಗಿಹೋಗಿದೆ. ಈ ಜಾತಿ  ಸು. ೨೦,೦೦೦,೦೦೦ ವಷ‍ಗಳ ಹಿಂದೆ, ಮಯೋಸೀನ್ ಕಾಲದ ಕೊನೆಯಲ್ಲಿ ಮೆಡಿಟರೇನಿಯರ್ ಪ್ರದೇಶ ಹಾಗೂ ಭಾರತದಲ್ಲಿ ಕಾಣಿಸಿಕೊಂಡಿತೆನ್ನುವರು. ಇದು ಪ್ಲೈಸ್ಪೋಸೀನ್ ಕಾಲದವರೆಗೂ ಮುಂದುವರಿಯಿತೆಂದು ತಕಿ‍ ಸಿದ್ದಾರೆ. ಈಗ ಜೀವಿಸಿರುವ ನೀರಾನೆಗಳಲ್ಲಿ ಒಂದಾದ ಹಿಪಪಾಟಸ್ ಆಂಪೀಬಿಯಸ್ ಎನ್ನುವ ನೀರಾನೆ ಈಗ ಆಫ್ರಿಕಾದ ಸಹಕರ ದಕ್ಷಿಣ ಭಾಗಕ್ಕೆ ಮಿತಿಗೊಳಿಸಲ್ಪಟ್ಟಿದೆ. ಈ ನೀರಾನೆ ಪ್ಲೈಯೋಸೀನ್ ಕಾಲದ ಪ್ರಾರಂಭದಲ್ಲಿ ಆಫ್ರಿಕ ಹಾಗೂ ಯೂರೋಪ್ ಗಳಿಗೆ ವಲಸೆ ಹೋಗಿ ಇಂಗ್ಲೆಂಡನ್ನು ಪ್ಲೈಸ್ಪೋಸೀನ್ ಕಾಲದಲ್ಲಿ ತಲುಪಿತೆಂದು ನಿಣ‍ಯಿಸಿದ್ದಾರೆ. ಕೆಲವು ವೇಳೆ ನದಿಯ ಕುದುರೆ ಎಂದು ಕರೆಸಿಕೊಳ್ಳುವ ನೀರಾನೆ ಸು. ೩೧/೩' ಉದ್ದವಿರುವುದುಂಟು. ಇದು ಚೆನ್ನಾಗಿ ಈಜಬಲ್ಲದು. ಈ ಬಳಗದ ಮೂರನೆಯ ಪ್ರತಿನಿಧಿ ಆಫ್ರಿಕದ ಗಿಡ್ಡ ನೀರಾನೆಯಾದ ಕೀರೋಪ್ಸಿಸ್ ಲೈಬೀರಿಯಾನ್ಸಿಸ್. ಇದು ಸಾಮಾನ್ಯವಾಗಿ ನಾಲ್ಕು ಟನ್ ಗಳಷ್ಟ್ ತೂಕವಿರುಬಹದು.
ಟೈಲೊಪೋಡ : ಟೈಲೊಪೋಡ ಉಪಕ್ರಮ ಕ್ಯಾಮಿಲಿಡೀ ಮತ್ತು ಸಿಫೋಡಾಂಟಿಡೀ ಎಂಬ ಎರಡು ಬಳಗಗಳಿಂದ ಕೂಡಿದೆ. ಕ್ಯಾಮಿಲಿಡೀ ಬಳಗ ಇತ್ತಿಚೆನ ಒಂಟೆಗಳನ್ನು ಹಾಗೂ ಲಾಮಗಳನ್ನು ಒಳಗೊಂಡಿದೆ. ಆದರೆ ಸಿಫೋಡಾಂಟಿಡೀ ಎಂಬುದು ಕಣ್ಮರೆಯಾದ ಪ್ರಾಣಿಗಳ ಗುಂಪು. ಅವಕ್ಕೆ ಮೆಲುಕಾಡುಲು ಅನುಕೂಲಕರ ಜಠರವಿದೆ. ಇತರೆ ಎಲ್ಲಾ ಸಸ್ತನಿಗಳಲ್ಲಿ ಗೋಳಾಕಾರದ ಕೆಂಪುರಕ್ತಕಣಗಳಿದ್ದರೆ, ಒಂಟೆಗಳಲ್ಲಿ ಅವು ಅಂಡಾಕಾರವಾಗಿರುತ್ತವೆ. ಒಂಟೆಮರಿಗಳಲ್ಲಿ ಪ್ರತಿಯೊಂದು ದವಡೆಗಳಲ್ಲೂ ಮೂರು ಬಾಚಿಹಲ್ಲುಗಳ್ಳಿರುತ್ತವೆ. ಪಾಯಕೆ ಬಂದ ಒಂಟೆಗಳಲ್ಲಿ ಮೂರನೆಯ ಪಾಶದ ಬಾಚಿಹಲು ಮಾತ್ರ ದೃಡವಾಗಿ ಉಳಿದುಕೊಂಡಿರುತ್ತದೆ. ಬಾಚಿಹಲ್ಲುಗಳಿಂದ ಭಿನ್ನವಾಗಿರುವ ಕೋರೆಹಲ್ಲುಗಳು ಮೇಲಿನ ಹಾಗೂ ಕೆಳಗಿನ ದವಡೆಗಳಲ್ಲಿವೆ. ಇವುಗಳ ದವಡೆ ಹಲ್ಲುಗಳ ಸೆಲಿನೋಡಾಂಟ್ ಹಾಗೂ ಹಿಪ್ಪೂಡಾಂಟ್ ರೀತಿಯಾಗಿವೆ. ಒಂಟೆಗಳ ಹೊಟ್ಟೆಯಾಗಲಿ ಡುಬ್ಬವಾಗಲಿ ಜನಸಾಮಾನ್ಯರು ಹೇಳುವಂತೆ ನೀರಿನ ಕೋಶವಾಗಿ ಉಪಯೋಗವಾಗುವುದಿಲ್ಲ.
 ಮರುಭೂಮಿಯ ಹಡುಗು ಎನಿಸಿಕೊಂಡಿರುವ ಒಂಟೆಗಳು ಉತ್ತರ ಅಮೇಇರಕಾದಲ್ಲಿ ಇಯೊಸೀನ್ ಕಾಲದ ಪ್ರಾರಂಭದಲ್ಲಿ ಸುಮಾರು ೪೦,೦೦೦,೦೦೦ ವಷ‍ಗಳ ಹಿಂದೆ ಹುಟ್ಟಿದವೆಂದು ವಿಜ್ಞಾನಿಗಳ ಅಭಿಪ್ರಾಯ. ಅವುಗಳು ಪ್ಲೈಸ್ಟೋಸೀನ್ ಏಷ್ಯಾ ಹಾಗೂ ದಕ್ಷಿಣ ಅಮೇರಿಕಾಗಳಲ್ಲಿ ಹರಡುವುದಕ್ಕೆ ಮುಂಚೆ ಕುದುರೆಗಳಂತೆ, ಉತ್ತರ ಅಮೆರಿಕ ಖಂಡದಲ್ಲಿಯೇ ವಿಕಾಸ ಹೊಂದಿರಬೇಕು. ಒಂಟೆಗಳಲ್ಲಿ ಎರಡು ಪ್ರಭೇದಗಳಿವೆ. ಅರೇಬಿಯದ ಒಂದು ಡುಬ್ಬುವುಳ್ಳ, ಕ್ಯಾಮೆಲಸ್ ಡ್ರಮೆಡೇರಿಯಸ್ ಮತ್ತು ತುಕಿ‍ಸ್ತಾನದ ಎರಡು