ಪುಟ:Mysore-University-Encyclopaedia-Vol-1-Part-3.pdf/೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಹೊಂದಿವೆ. ವರ್ಣಮಯವಾಗಿ ಏಕ್ಕದ ಗಿಡಗಳ ಮೇಲೆ ಜೀವಿಸುವ ಪೊಸೆಲಿಸಿರಾಷ್ಟಿಕ ಸಾಮನ್ಯವಾಗಿ ಕಾಣಬಹುದಾದ ಕುಪ್ಪಳಿಸುವೆ ಮಿಡುತೆ. ಹಸಿರು ಬಣ್ಣದ, ಉದ್ದ ಕುಡಿಮೀಸೆಗಳಿರುವ ಅನೇಕ ಪ್ರಭೇದದ ಮಿಡತೆಗಳನ್ನು ಹುಲ್ಲಿನ ಮೇಲೆ ಕುಪ್ಪಳಿಸುವುದನ್ನು ನೋಡಬಹುದು.

ಸಣ್ಣ ಕಡಿಮೀಸೆಯ ಕುಪ್ಪಳಿಸುವ ಮಿಡತೆಗಳನೇ ಹೋಲುವ ಗುಂಪುಗುಂಪಾಗಿ ವಲಸೆ ಹೋಗುವ ಮಿಡಾತೆಗಳವೆ. ಏಕಾಏಕಿ ಪಿಡುಗಿನಂತೆ ಕಾಡಿ ಸಸ್ಯಸಂಪತ್ತನ್ನು ನಾಶಮಾಡುವ ಕೆಲವೊಂದು ವಿಶಿಷ್ಟ ಮಿಡತೆಗಳಿರುತ್ತವೆ.ಉದಾಹರಣೆ: ಲೇಕಸ್ಯ ಮೈಗ್ರಟೋರಿಯ,(ವಲಸೆಮಿಡತೆ), ಸಿಸ್ಟೇಸೆರ್ಕ ಗ್ರಿಗೇರಿಯ,(ಮರು ಭೊಮಿಮಿಡತೆ) ನೋಮಡಕ್ರಿಸ್ ಸಪ್ಪೆಮಫಾಸಿಯೋಟ(ಕೆಂಪುಮಿಡತೆ).

ಚಿಮ್ಮಂಡೆಗಳಲ್ಲಿ ಕೆಲವಕ್ಕೆ ಸಣ್ಣ ರೆಕ್ಕೆಗಳಿದ್ದರೆ, ಕೆಲವೊಂದರಲ್ಲಿ ಅವು ಸಂಪೊರ್ಣವಾಗಿ ಕ್ಷೀಣಿಸಿರಬಹುದು. ಗೃಹ ಚಿಮ್ಮಂಡ(ಹೌಸ್ಕ್ರಿಕೆಟ್) ಗ್ರಿಲ್ಲಸ್ ಡೊಮೆಸ್ಟಿಕಸ್ ನಿಶಾಚರಿ. ಸಂದುಗೊಂದುಗಳಲ್ಲಿ ಅಡಗಿಕೊಂಡು ಒಂದೇ ಸಮನೆ ಶಬ್ದ ಮಾಡುವುದು. ಬಟ್ಟೆ, ಕಾಗದ, ಹಣ್ಣು ಮುಂತಾದ ಯಾವುದೇ ವಸ್ತುವನ್ನು ತಿಂದು ಹಾಳುಮಾಡುತ್ತದೆ.

ಆರ್ಥಿಕ ಅಂತಾರಾಷ್ಟ್ರೀಯತೆ: ರಾಜಕೀಯ, ಶೈಕ್ಷಣಿಕ, ಸೌಹಾರ್ದಯುತ ವ್ಯವಹಾರಗಳಿರಬೇಕೆಂಬ ಭಾವನೆ. ಎಕನಾಮಿಕ್ ಇಂಟರನ್ಯಾಷನಲಿಸಂ ಅಂದೆರೆ ಸರಕು ಸೇವೆಗಳ ವ್ಯಾಪಾರ, ಬಂಡವಾಳ ಹಾಗೊ ಶ್ರಮ ಇಂಥ ಉತ್ಪಾದನಾಂಗಗಳ ಚಲನೆ ಇತ್ಯಾದಿ ಆರ್ಥಿಕ ವ್ಯವಹಾರಗಳೆಲ್ಲವೂ ಎಲ್ಲ ಜನಾಂಗಗಳ ಅನ್ಯೋನ್ಯ ಹಿತದೃಷ್ಟಿಯಿಂದ ನಡೆಯುವಂತೆ ನೋಡಿಕೊಳ್ಳವು ಪ್ರಧಾನ ರೀತಿನೀಗಳನ್ನು ರೊಪಿಸುವುದೇ ಇದರ ಉದೇಶ. ಅಂತಾರಾಷ್ಟ್ರೀಯ ಆರ್ಥಿಕ ವ್ಯವಹಾರಗಳಿಗೆ ವಿಶೇಷವಾದ ಕೆಲವು ಕಟ್ಟುನಿಟ್ಟುಗಳಿರುವುದು ಗಮನಿಸಬೇಕಾದ ವಿಷಯ. ಇವುಗಳಲ್ಲಿ ಕೆಲವು ರಾಜಕೀಯ ಪ್ರತ್ಯೇಕತೆಯಿಂದ ಉದ್ಭವಿಸಿವೆ. ಪ್ರಜೆಗಳಿಗೆ ತಮ್ಮ ತಮ್ಮ ದೇಶದಲ್ಲಿರುವ ಆರ್ಥಿಕ ಸಂಬಂಪ್ರಾಯ-ಇತ್ಯಾದಿ ಅಂಶಗಳಲ್ಲಿ ದೇಶ ದೇಶಗಳಿಗೆ ಇರುವ ವ್ಯತ್ಯಾಸಗಳೊ ಆರ್ಥಿಕ ಸಂಬಂಧಗಳಿಗೆ ಸ್ವಲ್ಪ ಮಟ್ಟಿಗೆ ಅಡಚಣೆಯಾಗಬಹುದು. ಹೀಗೆ ಇರತಕ್ಕೆ ರಾಜಕೀಯ, ಸಾಮಾಜಿಕ, ಭೌಗೋಳಿಕ ಹಾಗೊ ಇತರ ಅವಶ್ಯಕ ವ್ಯತ್ಯಾಸಗಳಿಂದುಟಾಗಬಹುದಾದ ಮಿತಿಗಳಿಗೊಳಪಟ್ಟು ಪ್ರತಿಯೊಂದು ರಾಷ್ಟ್ರವೂ ಸ್ವರಾಷ್ಟ್ರಹಿತವನ್ನು ಇವರ ಎಲ್ಲ ರಾಷ್ಟ್ರಗಳ ಹಿತಗಳೊಡನೆ ಸಮ್ಮಿಳನಗೊಳಿಸಿ ಪರಸ್ಪರ ಕ್ಷೇಮಾಭ್ಯುದಯವಾಗುವಂತೆ ಆರ್ಥಿಕ ಅಂತಾರಾಷ್ಟ್ರಿಯತೆ ಎನ್ನಿಸುವುದು.

ಆರ್ಥಿಕ ಅಂತಾರಾಷ್ಟ್ರಿಯತೆ, ಆಧುನಿಕ ಯುಗದ ಮುಖ್ಯ ಲಕ್ಷಣ. ಪ್ರತಿ ರಾಷ್ಟ್ರವೂ ತನ್ನ ಅವಶ್ಯಕತೆಗಳಿಗನುಸಾರವಾಗಿ ಪ್ರಕೃತಿದತ್ತ ಸಂಪತ್ತು ಮತ್ತು ಇತರ ಉತ್ಪನ್ನ ಸಾಧನಗಳನ್ನು ಹೊಂದಿರುವುದಿಲ್ಲ. ಆಹಾರ, ಬಟ್ಟೆ, ವಸತಿ, ಭೋಗ ಇವುಗಳಿಗೆ ಬೇಕಾಗುವ ಅನೇಕ ಸರಕುಗಳು ಪ್ರಪಂಚದ ಎಲ್ಲ ಭಾಗದ ಜನರಿಗೊ ಬೇಕಾಗಿದ್ದರೊ, ಇವುಗಳೆಲ್ಲವನ್ನೊ ಆಯಾ ದೇಶಸಲ್ಲಿಯೇ ತಯಾರಿಸಿ ಬೇಡಿಕೆಯನ್ನು ಪೊರೈಸಲು ಅನುಗುಣವಾದ ಪ್ರಕೃತಿದತ್ತ ಸೌಕರ್ಯಗಳು ಇರುವುದಿಲ್ಲ. ಅದ್ದರಿಂದ ಅಂತಾರಾಷ್ಟ್ರೀಯ ಶ್ರಮವಿಭ್ಜನೆ ಹಾಗೊ ಪರಸ್ಪರ ಅವಲಂಬನೆ ಸ್ವಾಭಾವಿಕವಾಗಿಯೇ ಬೆಳೆದು ಬಂದಿವೆ. ಅಲ್ಲದೆ ಇವು ಆಧುನಿಕ ಆರ್ಥಿಕ ಜೀವನದ ಮುಖ್ಯ ಲಕ್ಷಣಗಳಾಗಿವೆ. ನಾವು ತಯಾರಿಸುವ ವಸ್ತುಗಳುನ್ನೊ ಎಣಿಸಿದರೆ ಎಷ್ಟರ ಮಟ್ಟಿಗೆ ನಮ್ಮ ನಗರಿಕ ಜೀವನ ಅಂತಾರಾಷ್ಟ್ರೀಯ ಸಂಬಂಧದ ಮೇಲೆ ನಿಂತಿದೆ ಎಂಬುದು ವ್ಯಕ್ತವಾಗುವುದು. ಇಂಥ ಸಂಬಂಧಗಳನ್ನು ಸ್ಪಷ್ಟ ಮಾರ್ಗಗಳಲ್ಲಿ ರೊಪಿಸಬೇಕು, ಹಾಗು ಈ ಭಾವನೆಗನುಸಾರವಾದ ರೀತಿ ನೀತಿಗಳು ಅಚರಣೆಗೆ ಬರಬೇಕು.

ಆಧುನಿಕ ಪ್ರಪಂಚದ ಆರ್ಥಿಕ ಚರಿತ್ರೆಯನ್ನು ವೀಕ್ಷಿಸಿದರೆ ಆರ್ಥಿಕ ಅಂತಾರಾಷ್ಟ್ರೀಯತೆ ಹಾಗೊ ಅದರ ವಿರುದ್ಧ ಶಕ್ತಿಗಳು ಹೇಗೆ ಆತ್ತ ಇತ್ತ ಹೊಯ್ದಾಡಿವೆ ಎಂಬುದು ಗೋಚರವಾಗುವುದು: ಮಧ್ಯಯುಗದಲ್ಲಿ ಕೊಲಂಬಸ್, ವಾಸ್ಕೋಡಗಮ, ಮೆಗಲನ್ ಇತ್ಯಾದಿ ಸಾಹಸಿಗಳ ಶ್ರಮದಿಂದ ಫಲಿಸಿದ ಹೊಸ ಅಂತಾರಾಷ್ಟ್ರೀಯ, ಸಂಪರ್ಕಗಳ ಬೆಳೆವಣಿಗೆ ಹಾಗೊ ಪ್ರಪಂಚದ ಐಕ್ಯದ ಅರಿವು-ಇವು ಆಧುನಿಕ ಅಂತಾರಾಷ್ಟ್ರೀಯತೆಯ ಮುಖ್ಯ ಹಿನ್ನಲೆಯಾದವು. ಆದರೆ ಅನೇಕ ಐರೋಪ್ಯ ರಾಷ್ಟ್ರೀಗಳು ಅಂದಿನ ಕಾಲದಲ್ಲಿ ಅನುಸರಿಸುತ್ತಿದ್ದ ಮಾರ್ಕೆಂಟೈಲಿಸಮ್ ಎಂಬ ರಾಷ್ಟ್ರೀಯ ಧೋರಣೆಯ ಆರ್ಥಿಕ ಅಂತಾರಾಷ್ಟ್ರೀಯತೆಯ ಬೆಳವಣೆಗೆಗ ವಾತಾವರಣ ಅನುಕೊಲವಾಗಿರಲ್ಲಿಲ್ಲ.

18ನೆಯ ಶತಮಾನದ ಇಂಗ್ಲೆಂಡಿನ ಕೈಗಾರಿಕಾ ಕ್ರಾಂತಿ ಮತ್ತು ಆಡಾಮ್ ಸ್ಮಿತ್ (ನೋಡಿ-ಆಡಮಸ್ಮಿತ್) ಎಂಬ ಪ್ರಥಮ ಆರ್ಥಶಾಸ್ತ್ರಜ್ಞ ಉಪದೇಶಿಸಿದ ಮೈಯಕ್ತಿಕ ಸ್ವಾತಂತ್ರ್ಯ ತತ್ತ್ವ (ಲೇಸಿಫೇರ್ ಡಾಕ್ಟ್ರಿನ್) ಇವು ಹೊಸ ಅಂತಾರಾಷ್ಟ್ರೀಯ ಆರ್ಥಿಕ ಪದ್ಧತಿಯ ಬೆಳವಣಿಗೆಗೆ ತಳಹದಿಯಾದವು. ಮರ್ಕೆಂಟೈಲಿಸಮ್ ಕಾಲದಲ್ಲಿ ಸರ್ಕಾರ ವಿಧಿಸಿದ್ದ ಅನೇಕ ಆರ್ಥಿಕ ನಿರ್ಬಂಧಗಳು ಸಡಿಲವಾದುದರಿಂದ ಆರ್ಥಿಕ ಶಕ್ತಿಗಳು ಸ್ವಂತಸ್ಥಾನವನ್ನು ಪಡೆದವು. ಪ್ರಪಂಚದಲ್ಲಿ ವಿವಿಧ ಭಾಗಗಳೊ ಬೇಡಿಕೆ-ನೀಡಿಕೆಗಳ ಪರಸ್ಪರ ತಾಕಲಾಟದಿಂದ ಹೊಂದಿಕೆಗೊಂಡ ಒಂದೇ ವಿಸ್ತಾರವಾದ ಆರ್ಥಿಕ ಕ್ಷೇತ್ರವಾಯಿತು. ಅಂತಾರಾಷ್ಟ್ರೀಯ ಬಂಡವಾಳ ಚಲನೆ, ಜನರು ವಿದೇಶಗಳಲ್ಲಿ ನೆಲೆಸುವುದು, ಸರಕುಗಳ ವ್ಯಾಪಾರ-ಇವು ಹಿಂದೆ ಎಂದೊ ಇಲ್ಲದ ಪ್ರಮಾಣದಲ್ಲಿ ಬೆಳೆದವು. ವಿವಿಧ ರಾಷ್ಟ್ರಗಳ ಆರ್ಥಿಕ ಸ್ಥಿತಿಗತಿಗಳು ಸ್ವರ್ಣಮಾನ ಮುಖಾಂತರ ಸಂಬಂಧ ಹೊಂದಿದ್ದವು. ಅಂತಾರಷ್ಟ್ರೀಯ ವ್ಯಾಪಾರ ಹಾಗೊ ಉತ್ಪಾದನಾಂಗಗಳ ಚಲನವಲನ ಮತ್ತು ಚಿನ್ನದ ಆಮದು ರಫ್ತು ಇವುಗಳ ಮೇಲೆ ಹೆಚ್ಚು ಪ್ರತಿಬಂಧಕಗಳಿಲ್ಲದ್ದುದರಿಂದ ಬೆಲೆಗಳ ತಾರತಮ್ಯಕ್ಕನುಸಾರವಾಗಿ ಸರಕುಗಳ ಹಾಗೊ ಚಿನ್ನದ ರಫ್ತು ಆಮದು ವ್ಯಾಪಾರ ವ್ಯವಹಾರಗಳೊ ನಡೆದು ವಿವಿಧರಾಷ್ಟ್ರಗಳ ಬೆಲೆಮಟ್ಟುಗಳ ಸಂಘಟಿತವಾದವು. ಹೀಗೆ 1914ಕ್ಕೆ ಹಿಂದಿನ ಶತಮಾನದಲ್ಲಿ ಆರ್ಥಿಕ ಅಂತಾರಾಷ್ಟ್ರೀಯತೆ ಸಾಮ್ರಾಜ್ಯ ಶಾಹಿ ಅದು ಆರ್ಥಿಕ ಅಂತಾರಾಷ್ಟ್ರೀಯತೆಯ ಸ್ವರ್ಣಯುಗವೆನಿಸಿಕೊಡಿತ್ತು.

19ನೆಯ ಶತಮಾನದ ಉದಾತ್ತ ಆರ್ಥಿಕ ಆಂತಾರಾಷ್ಟ್ರೀಯ ಸಾಮ್ರಾಜ್ಯ, ಶಾಹಿ ರಾಜಕೀಯ ಪರಿಸ್ಥಿತಿಯೊಡನೆ ಸೇರಿಕೊಂಡಿದ್ದುದು ಗಮನಿಸಬೇಕಾದ ಅಂಶ, ಬ್ರಿಟನ್, ಫ್ರಾನ್ಸ, ಜರ್ಮನಿ, ಫೋರ್ಚುಲ್, ಇಟಲಿ ಇತ್ಯಾದಿ ರಾಷ್ಟ್ರಗಳು ವಸಾಹತುಗಳನ್ನು ಹೆಚ್ಚಿಸಿಕೊಳ್ಳಲು ಹವಣಿಸುತ್ತಲೇ ಇದ್ದವು.ಅಲ್ಲದೆ ಆಯಾ ಸಾಮ್ರಾಜ್ಯ ರಾಷ್ಟ್ರಗಳೊಳಗೆ ಹೆಚ್ಚು ನಿಕಟವಾದ ಆರ್ಥಿಕ ಸಂಬಂಧಗಳು ಬೆಳೆದುಬಂದವು.ಶ್ರಮ ವಿಭಜನೆ ತತ್ತ್ವ,ಈ