ಪುಟ:Mysore-University-Encyclopaedia-Vol-1-Part-3.pdf/೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆರ್ಥಿಕ ಅಧ್ಯಯನ ಕ್ರಮಗಳು ಆಯಕಟ್ಟಿನೊಳಗೆ ವಿಸ್ತೃತಗೊಂಡು ಅಂದಿನ ಪ್ರಪಂಚದ ಆರ್ಥಿಕತೆಯಲ್ಲಿ ಸಮನ್ವಯ ಹಾಗೂ ಸ್ತಿಮಿತತೆಯನ್ನು ಉಂಟುಮಾಡಿತು.ಅಧೀನ ಜನಾಂಗದವರ ಆರ್ಥಿಕ ಏಳಿಗೆಯ ದೃಷ್ಟಿಯಿಂದ ಈ ವಿಧದ ಸ್ಥಿಮಿತತೆ ಎಷ್ಟರಮಟ್ಟಿಗೆ ಅಪೇಕ್ಷಣೀವಾಗಿತ್ತೆಂಬುದರ ಚರ್ಚೆ ಇಲ್ಲಿ ಆಪ್ರಕೃತ. ೧೯೪೧-೧೮ರ ಒಂದನೆಯ ಮಹಾಯುದ್ಧ , ೧೯೨೦-೩೨ರಲ್ಲಿ ಉಂಟಾದ ಘೋರ ಆರ್ಥಿಕ ಮುಗ್ಗಟ್ಟು , ಹಾಗು ಕಾಲಕ್ರಮೇಣ ಉಂಟಾದ ಆರ್ಥಿಕ ರಚನೆಯ ಬದಲಾವಣೆಗಳು ಇತ್ಯಾದಿ ಕಾರಣಗಳಿಂದ ಅಂತಾರಾಷ್ತ್ರೀಯ ವ್ಯಾಪಾರ-ವ್ಯವಹಾರಗಳು ಹಿಂದಿನಂತೆ ನಿರಾತಂಕವಾಗಿ ನಡೆಯಲಿಲ್ಲ. ಆರ್ಥಿಕ ರಾಷ್ಟ್ರೀಯತೆಯ ಪ್ರಭಾವ ಹೆಚ್ಚಾಯಿತು.ಅನೇಕ ರಾಷ್ಟ್ರಗಳು ರಕ್ಷಣಾ ಸುಂಕ , ವಿನಿಮಯ ಹತೋಟಿ ,ದ್ವಿರಾಷ್ಟ್ರೀಯ ವ್ಯಾಪಾರ (ಬೈಲಾಟರಲ್ ಟ್ರೇಡ್) ಹಾಗೂ ವಿನಿಮಯದ ಒಪ್ಪಂದ-ಇಂಥ ಕ್ರಮಗಳನ್ನು ಅನುಸರಿಸಿದವು. ಇವುಗಳ ಪರಿಣಾಮವಾಗಿ ವಿಶ್ವ ಆರ್ಥಿಕತೆಯ ಸಂಘಟನೆ ಸಡಿಲಿಸಿತು. ಎರಡನೆಯ ಮಹಾಯುದ್ಧ ಕಾಲದಿಂದ ಆರ್ಥಿಕ ಅಂತಾರಾಷ್ಟ್ರೀಯತೆ ಆಶಾಜನಕ ರೀತಿಯಲ್ಲಿ ಬೆಳೆಯುತ್ತಿದೆ. ಇನ್ನೊಂದು ಮಹಾಯುದ್ಧ ಸಂಭವಿಸದಂತೆ ನೋಡಿಕೊಳ್ಳಬೇಕೆಂಬ ಸಾರ್ವತ್ರಿಕ ಆಕಾಂಕ್ಷೆ , ಎರಡು ಯುದ್ಧಗಳ ನಡುವಣ ಕಾಲದ ಸಂಕುಚಿತರಾಷ್ಟ್ರೀಯ ಆರ್ಥಿಕನೀತಿಗಳ ದುಷ್ಪರಿಣಾಮಗಳ ಅರಿವು-ಇವುಗಳ ಆಧಾರದ ಮೇಲೆ ಯುದ್ಧೋತರ ವಿಶ್ವ ಆರ್ಥಿಕ ಪದ್ಧತಿ ರೂಪುಗೊಳ್ಳುತ್ತಿದೆ. ಇಂದಿನ ಆರ್ಥಿಕ ಅಂತಾರಾಷ್ಟ್ರೀಯತೆ ಕೆಲವು ಅಂಶಗಳಲ್ಲಿ ಮುಖ್ಯವಾದುದಾಗಿದೆ.ಮೊದಲನೆಯದಾಗಿ , ಅಧೀನ ಹಾಗು ವಸಾಹತು ಭಾಗಗಳಾಗಿದ್ದ ಅನೇಕ ರಾಷ್ಟ್ರಗಳು ರಾಜಕೀಯ ಸ್ವಾತಂತ್ರ್ಯ ಪಡೆದು ತಮ್ಮ ತಮ್ಮ ರಾಷ್ಟ್ರೀಯ ಹಿತಕ್ಕನುಸಾರವಾಗಿ ಆರ್ಥಿಕಾಭಿವೃದ್ಧಿ ಸಾಧಿಸಲು ಹವಣಿಸುತ್ತಿರುವದು ಇಂದಿನ ಅಂತಾರಾಷ್ಟ್ರೀಯ ಆರ್ಥಿಕ ಸಂಬಂಧಗಳಿಗೆ ವಿಶೇಷ ಲಕ್ಷಣವನ್ನು ಕೊಟ್ಟಿದೆ. ಎರಡನೆಯದಾಗಿ , ಹೀಗೆ ಆರ್ಥಿಕೋನ್ನತಿ ಸಾಧಿಸಬೇಕೆಂಬ ದೃಡಸಂಕಲ್ಪ ಮಾಡಿ ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿರುವ ಹಿಂದುಳಿದಿರುವ ರಾಷ್ಟ್ರಗಳಿಗೆ ಬೆಂಬಲ ಕೊಟ್ಟು ಬಂಡವಾಳ ,ಯಾಂತ್ರಿಕ ಸಹಾಯ ಇವುಗಳನ್ನು ಒದಗಿಸುವುದು ತಮ್ಮ ಮುಖ್ಯ ಹೊಣೆ ಎಂದು ಮುಂದುವರಿದಿರುವ ರಾಷ್ಟ್ರಗಳು ಒಪ್ಪಿರುವ ಸದ್ಭಾವನೆ ಅಂತಾರಾಷ್ಟ್ರೀಯ ಆರ್ಥಿಕಸಂಬಂಧಗಳಿಗೆ ಹೊಸ ಸ್ವರೂಪ ಕೊಟ್ಟಿದೆ. ಮೂರನೆಯದಾಗಿ ,ಇಂದಿನ ಅಂತಾರಾಷ್ಟ್ರೀಯ ಸಹಕಾರ ಅನೇಕ ಶತಮಾನಗಳ ಅನುಭವ ಆಲೋಚನೆಗಳ ಫಲ. ಹಿಂದೆ ೧೯ನೆಯ ಶತಮಾನದಲ್ಲಿ ನಿರಾತಂಕವಾಗಿ ಚಲಿಸುತ್ತಿದ್ದ ಆರ್ಥಿಕ ಶಕ್ತಿಗಳ ಮೂಲಕ ವಿವಿಧ ರಾಷ್ಟ್ರಗಳ ಆರ್ಥಿಕತೆಗಳಲ್ಲಿ ಪರಸ್ಪರವಾಗಿ ಹೊಂದಾಣಿಕೆಯಾಗುತ್ತಿತ್ತು. ಆಗ ಸ್ವರ್ಣಮಾನ ಮುಖ್ಯ ಪಾತ್ರ ವಹಿಸಿತ್ತು. ಬದಲಿಸಿರುವ ಈ ಶತಮಾನದ ವಾತಾವರಣದಲ್ಲಿ ಆರ್ಥಿಕ ಶಕ್ತಿಗಳ ಸ್ವಾಭಾವಿಕ ಕ್ರಿಯೆ, ಪ್ರತಿಕ್ರಿಯೆಗಳು ಅನೇಕ ಕಟ್ಟುಗಳಿಗೆ ಒಳಗಾಗಿವೆ. ದೇಶ ವಿದೇಶಗಳ ವ್ಯಾಪಾರ , ವಿನಿಮಯ