ಪುಟ:Mysore-University-Encyclopaedia-Vol-1-Part-3.pdf/೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾವ್ಯವು ನಮ್ಮನ್ನು ರೂಪಿಸುತ್ತದೆ, ನಮಗೆ ಆಧಾರವಾಗುತ್ತದೆ ಆನಂದವನ್ನು ನೀಡುತ್ತದೆ ಎಂದ ಆತ ವರ್ಡ್ಸವರ್ತ್ ನ ಶ್ರೇಷ್ಠ ಕವನಗಳನ್ನು ಆರಿಸಿ, ಸಂಗ್ರಹದ ಮುನ್ನುಡಿಯಲ್ಲಿ ಅವನ ಕಾವ್ಯದ ಸ್ವರೂಪವನ್ನು, ಮಹತ್ವವನ್ನು ವಿವರಿಸಿ, ವರ್ಡ್ಸವರ್ತ್ ನ ಕಾವ್ಯವನ್ನು ಸವಿಯುವುದನ್ನು ತನ್ನ ಕಾಲದ ಓದುಗರಿಗೆ ಕಲಿಸಿಕೊಟ್ಟ.

ಆರ್ನಲ್ಡ್ ನದು ಅತಿ ನೈತಿಕತೆ. ಇವನು ಕಾವ್ಯದ ಒಳ ಅಂಶ( ಕಂಟೆಂಟ್)ಕ್ಕೆ ಪ್ರಾಧಾನ್ಯ ನೀಡಿದ, ಕಾವ್ಯಾಂಶಕ್ಕೆ ಸಾಕಷ್ಟು ಪ್ರಾಧಾನ್ಯ ನೀಡಲಿಲ್ಲ ಎಂಬ ಆಕ್ಷೇಪಣೆಯುಂಟು, ಇವನು ಕಾವ್ಯವು ಬದುಕಿನ ವಿಮರ್ಶೆ ಎಂದು ಹೇಳಿದ ಎನ್ನುವುದು ಈ ಆಕ್ಷೇಪಣೆಗೆ ಮುಖ್ಯ ಆಧಾರ. ಆದರೆ ಇವನ ಪೂರ್ತಿ ವಾಕ್ಯವನ್ನು ಗಮನಿಸಬೇಕು: ಕಾವ್ಯ ಸೌಂದರ್ಯ ಮತ್ತು ಕಾವ್ಯ ಸತ್ವಗಳ ನಿಯಮಗಳಿಗೆ ಒಳಪಟ್ಟಂತೆ ಕಾವ್ಯವು ಬದುಕಿನ ವಿಮರ್ಶೆ.

ಆರ್ನಲ್ಡ್ ನ ಅನಂತರ ಬಂದ ಟಿ.ಎಸ್.ಎಲಿಯೆಟ್ ಇವನನ್ನು ಉಗ್ರವಾಗಿ ಟೀಕಿಸಿದ್ದರೂ ಇವನ ಪ್ರಭಾವಕ್ಕೆ ಒಳಗಾಗಿದ್ದಾನೆ. ಆರ್ನಲ್ಡ್ ನ ವಿಮರ್ಶೆಯ ಹಲವು ಅಂಶಗಳು ಎಲಿಯೆಟ್ ನ ವಿಮರ್ಶೆಯಲ್ಲಿ ಸೇರಿವೆ.

ಆರ್ನಲ್ಡ್, ಸರ್ ಎಡ್ವಿನ್ : ೧೮೩೨- ೧೯೦೪, ದ ಲೈಟ್ ಆಫ್ ಏಷ್ಯಾ ಆರ್ ದಿ ಗ್ರೇಟ್ ರಿನನ್ಸಿಯೇಷನ್(೧೮೭೦) ಎಂಬ ಬುದ್ಧ ಜೀವನವನ್ನು ಕುರಿತ ಖ್ಯಾತ ಕವನದ ಕರ್ತೃ. ಇಂಗ್ಲೆಂಡಿನ ಸಸೆಕ್ಸ್ ನಲ್ಲಿನ ಒಬ್ಬ ಮ್ಯಾಜಿಸ್ಟ್ರೇಟನ ಮಗನಾಗಿ ಜನಿಸಿ ಲಂಡನ್, ಆಕ್ಸ್ ಫರ್ಡ್ ಗಳಲ್ಲಿ ಓದಿ, ಪೂಣೆಯ ಡೆಕ್ಕನ್ ಕಾಲೇಜಿನಲ್ಲಿ ಮುಖ್ಯ ಅಧಿಕಾರಯಾಗಿ ಕೆಲಸ ಮಾಡಿದ ( ೧೮೫೬-೬೧). ಈತ ಸಂಸ್ಕೃತದಿಂದ ಅನುವಾದಿಸಿದ ಮೊದಲ ಕೃತಿ ಹಿತೋಪದೇಶ(೧೮೬೧) . ಭಗವದ್ಗೀತೆಯನ್ನು ಇಂಗ್ಲೀಷ್ ಗೆ ಅನುವಾದಿಸಿದ್ದಾನೆ.

ಈತ ೧೮೬೧ರಲ್ಲಿ ಇಂಗ್ಲೆಂಡಿಗೆ ಹಿಂತಿರುಗಿ ಡೇಲಿ ಟೆಲಿಗ್ರಾಫ್ ಪತ್ರಿಕೆಯ ಸಂಪಾದಕ ಮಂಡಲಿಯನ್ನು ಸೇರಿದ. ಮುಂದೆ ಆಧಾರ ಸಂಪಾದಕನಾದ. ಪೂರ್ವ ಜಗತ್ತಿನ ಬದುಕಿನ ರೀತಿ ಮತ್ತು ಚಿಂತನೆಗಳನ್ನು ಪಶ್ಚಿಮ ಜಗತ್ತಿನ ಪರಿಚಯ ಮಾಡಿಕೊಡುವುದು ಇವನ ಗುರಿ. ದ ಲೈಟ್ ಆಫ್ ಏಷ್ಯಾ ಎನ್ನುವ ದೀರ್ಘ ಕವನವನ್ನು ಬರೆದ . ಇವನ ಇತರ ಕೃತಿಗಳು ದ ಸಾಂಗ್ ಆಫ್ ಸಾಂಗ್ಸ್ ಆಫ್ ಇಂಡಿಯಾ, ವಿತ್ ಸಾದಿ ಇನ್ ದ ಗಾರ್ಡೆನ್, ಮತ್ತು ದಿ ಟೆಂತ್ ಮ್ಯಾನ್.

ಈತನ ದ ಲೈಟ್ ಆಫ್ ಏಷ್ಯಾ ಕೃತಿ ಬಹು ಜನಪ್ರಿಯವಾಯಿತು. ಪಾಶ್ಚಾತ್ಯ ಜಗತ್ತಿಗೆ ಬುದ್ಧನ ಜೀವನ ಮತ್ತು ಉಪದೇಶವನ್ನು ಸರಳವಾದ ಭಾಷೆಯಲ್ಲಿ ಮುರ್ತವಾದ ಪ್ರಸಂಗಗಳಿಗೆ ಪ್ರಾಧಾನ್ಯ ನೀಡಿ ಪರಿಚಯ ಮಾಡಿಕೊಟ್ಟಿತು. ಭಾರತದಲ್ಲಿ ಇಂಗ್ಲೀಷ್ ಬಲ್ಲವರು ಈ ಕವನವನ್ನು ಮೆಚ್ಚಿಕೊಂಡರು .ದ ಲೈಟ್ ಆಫ್ ದಿ ವರ್ಲ್ಡ್ ಎನ್ನುವ ದೀರ್ಘ ಕವನದಲ್ಲಿ ಯೇಸು ಕ್ರಿಸ್ತನ ಬದುಕನ್ನು, ಉಪದೇಶವನ್ನು ನಿರೂಪಿಸಲು ಪ್ರಯತ್ನ ಪಟ್ಟಿದ್ದಾನೆ. ಆದರೆ ಈ ರಚನೆ ಹೆಚ್ಚು ಯಶಸ್ವಿಯಾಗಲಿಲ್ಲ.

ಆರ್ನೀಮ್, ಆಖಿಂ ಫಾನ್: ೧೭೮೧-೧೮೩೧.ಹತ್ತೊಂಬತ್ತನೆಯ ಶತಮಾನದ ರೊಮ್ಯಾಂಟಿಕ್ ಯುಗದ ಜರ್ಮನಿಯ ಕವಿ. ವಿದ್ಯಾರ್ಥಿ ದೆಶೆಯಲ್ಲಿದ್ದಾಗಲೆ ಗಯಟೆ ಹಾಗೂ ಹರ್ಡರ್ ಮುಂತಾದ ಜರ್ಮನ್ ಕವಿಗಳ ಪ್ರಭಾವಕ್ಕೊಳಗಾಗಿ ಜರ್ಮನಿಯ ಜನಪದ ಕತೆಗಳನ್ನು, ಐತಿಹ್ಯ ಪರಂಪರೆಯನ್ನು ಆಳವಾಗಿ ಅಭ್ಯಸಿಸಿದ. ಯೂರೋಪಿನಲ್ಲೆಲ್ಲ ಪ್ರವಾಸ ನಡೆಸಿ ಹೈಡೆಲ್ ಬರ್ಗ್ ಪಟ್ಟಣದಲ್ಲಿ ಬ್ರೆಂಟಾನೋ ಎಂಬ ಇನ್ನೊಬ್ಬ ಪ್ರತಿಭಾವಂತ ಕವಿಯೊಡನೆ ಕಲೆತು ಜರ್ಮನ್ ಜನಪದ ಗೀತೆಗಳ, ಐತಿಹ್ಯಗಳ ಅತ್ಯಮೂಲ್ಯ ಸಂಗ್ರಹವೊಂದನ್ನು ಸಂಪಾದಿಸಿದ. ಜರ್ಮನಿಯ ಕವಿಗಳಿಬ್ಬರು ಜರ್ಮನಿಯ ಕಿರಿಯ, ಕ್ರಂತಿಕಾರಕ ಸಾಹಿತಿಗಳ ನೇತಾರರಾಗಿ, ರೊಮ್ಯಾಟಿಕ್ ಚಳವಳಿಯ ಅದ್ಯಪ್ರವರ್ತಕರಾದರು. ಜರ್ಮನಿಯ ಸಾಹಿತ್ಯದ ಉತ್ಕರ್ಷಕ್ಕೆ ಪರೋಕ್ಷವಾಗಿಯೂ ನೆರವಾದರು. ಇವೆಲ್ಲದರ ಜೊತೆಗೆ ಆರ್ನೀಮ್ ಬರೆದ ಹಲವು ಕಿರುಕಾದಂಬರಿಗಳು ಎರಡು ಸಂಪುಟಗಳುಳ್ಳ ರಮ್ಯ ಕತೆಯು ಇವನಿಗೆ ಅಪಾರ ಕೀರ್ತಿ ಗಳಿಸಿ ಕೊಟ್ಟವು.

ಆರ್ನೆ, ಆಂಟಿ :೧೮೬೭-೧೯೨೫. ಜಾನಪದ ಸಂಶೋದನೆಯಲ್ಲಿ ಬಹು ಗಣನೀಯ ಸ್ಥಾನವನ್ನು ಪಡೆದಿರುವ ಫಿನ್ ಲೆಂಡ್ ನ ಶ್ರೇಷ್ಠ ಜಾನಪದ ವಿದ್ವಾಂಸರ ಸಾಲಿನಲ್ಲಿ ಅಗ್ರಗಣ್ಯ. ಅಲ್ಲಿನ ಜಾನಪದ ವಿದ್ವತ್ತಿಗೆ ಚೈತನ್ಯವನ್ನು ತುಂಬಿದ್ದವರಲ್ಲಿ ಪ್ರಮುಖ. ಆಧುನಿಕ ಜಾನಪದ ಕ್ಷೇತ್ರಕ್ಕೆ ಮೀಸಲಾಗದೆ ಇಡೀ ವಿಶ್ವದ ಜಾನಪದ ಸಂಶೋದನೆಗೆ ಮಾರ್ಗದರ್ಶಕವಾಯಿತು. ಜನಪದ ಕತೆಗಳ ವರ್ಗೀಕರಣದಲ್ಲಿ ಈತನ ಪಾತ್ರ ದೊಡ್ಡದು. ೧೯೧೩ರಲ್ಲಿ ಚಾರಿತ್ರಿಕ ಭೌಗೋಳಿಕ ಮಾರ್ಗದ ಮಹತ್ವವನ್ನು ಕುರಿತು ಬರೆದ ಮೇಲೆ ಜನಪದ ಕಥೆಗಳ ಒಂದೊಂದರ ಮೂಲವನ್ನು ಶೋಧಿಸ ತೊಡಗಿದ. ಇದರ ವಿವರವಾದ ಅಭ್ಯಾಸಕ್ಕಾಗಿ ದೇಶ ವಿದೇಶಗಳನ್ನು ಸುತ್ತಿ ಸಾಮಗ್ರಿಯನ್ನು ಕಲೆ ಹಾಕಿದ. ಯುರೋಪಿನ ಸಂಪ್ರದಾಯಕ್ಕೆ ಒಳಪಡುವ ಎಲ್ಲ ಕಥೆಗಳ ಅಭ್ಯಾಸವನ್ನು ನಡೆಸಿ ಪ್ರತಿಯೊಂದಕ್ಕೂ ನಿರ್ದಿಷ್ಟ ಸಂಶೋಧನಾ ರಂಗದಲ್ಲಿ ತುಂಬ ಉಪಯುಕ್ತವಾಯಿತು.ಸುಪ್ರಸಿದ್ದ ಜಾನಪದ ವಿದ್ವಾಂಸ ಸ್ಟಿತ್ ಥಾಮಸನ್ ಈತನೊಡನೆ ಕಲೆತು ಈ ಕ್ರಮವನ್ನು ಇನ್ನೂ ಬೆಳಿಸಿದ.

ಒಂದೊಂದು ಕಥೆಗು ತನ್ನದೆ ಆದ ಆತ್ಮ ಕಥೆ ಇದೆ, ತಂತ್ರವಿದೆ ಎಂದು ಗುರುತಿಸಿದ ಮೊದಲ ವ್ಯಕ್ತಿ ಆರ್ನೆ. ಜನಪದ ಕಥೆಗಳ ಮೂಲವನ್ನು ವಿಶೆಷವಾಗಿ ಭಾರತಕ್ಕೆ ಅನ್ವಯಿಸಿದ ಚಿಹ್ನೆಯ ಸಿದ್ಧಾಂತವನ್ನು ಈತ ಅನುಮೋದಿಸಿ ಕೆಲವು ಕಥೆಗಳು ಮಧ್ಯೆಯುಗದ ಪಶ್ಚಿಮ ಯುರೊಪಿನ ಸೃಷ್ಟಿಯನ್ನುವುದನ್ನು ಸ್ಪಷ್ಟ ಪಡಿಸಿದ. ಐತಿಹ್ಯ ಹಾಗು ಒಗಟುಗಳಿಗೂ ಚಾರಿತ್ರಿಕಅ ಭೌಗೋಳಿಕ ಮಾರ್ಗವನ್ನು ಅನ್ವಹಿಸಿ ಯಶಸ್ವಿಯಾದ.

ಆರ್ನೇಯ ಆರೋಗ್ಯ ಅಷ್ಟೇನು ಉತ್ತಮ ಸ್ಥಿತಿಯಲ್ಲಿರಲಿಲ್ಲ. ಮೊದಮೊದಲು ತುಂಬ ತೊಂದರೆಯನ್ನೆ ಅನುಭವಿಸಿದ. ಪ್ರಾಧ್ಯಾಪಕ ಪದವಿಯನ್ನು ಪಡೆಯುವ ಮುನ್ನ ಶಾಲೆಗಳಲ್ಲಿ ಪಾಠ ಹೇಳುತ ಬಡತನವನ್ನು ಕಂಡ ವ್ಯಕ್ತಿ. ತನ್ನೆಲ್ಲಾ ಕಷ್ಟಗಳ ನಡುವೆಯೂ ಜಾನಪದ ಸಂಶೋದನೆಯನ್ನು ನಡೆಸಿ ಮುಂದಿನ ಅನೇಕ ವಿದ್ವಾಂಸರಿಗೆ ಮಾರ್ಗದರ್ಶನ ಮಾಡಿದ ಕೀರ್ತಿ ಈತನದು .

ಆರ್ನೆಟ್, ಇ. ಎಂ. : ೧೭೬೯-೧೮೬೦. ಜರ್ಮನಿಯ ಕ್ರಾಂತಿಕಾರಿಕ ಕವಿ ವೃತ್ತಿಯಿಂದ ಇತಿಹಾಸ ಪ್ರಾದ್ಯಾಪಕ. ತನ್ನ ೨೮ನೆಯ ವಯಸ್ಸಿನಲ್ಲಿ, ವ್ಯಾಪಕವಾಗಿ ದೇಶಾಟನೆ ನಡೆಸುತ್ತಿದ್ದಾಗ, ರೈನ್ ನದಿಯ ದಂಡೆಯುದ್ದಕ್ಕೂ ಫ್ರೆಂಚರು ಜರ್ಮನಿಯ ಮೇಲೆ ನಡೆಸಿದ ದಾಳಿಯ ಫಲವಾಗಿ ಕಾಣಿಸಿದ ಭಗ್ನ ವಶೇಷಗಳು- ಕೋಟೆಕೊತ್ತಲಗಳು ಹರಕು ಮುರುಕು ಅರಮನೆಗಳು - ಇವೆಲ್ಲ ಫ್ರೆಂಚರ ವಿರುದ್ದ ಕೆರಳಿಸಿದವು . ನೆಪೋಲಿಯನ್ ನ ವಿರುದ್ಧವಾಗಿ ಪ್ರಬಲವಾದ ಹೋರಾಟ ಪ್ರಾರಂಬಿಸಲು ಸಂಕಲ್ಪ ಮಾಡಿದ.ತನ್ನ ಈ ಪರಿಯಟನದ ಅನುಭವಗಳನ್ನು ಹಲವಾರು ಕವನಗಳಲ್ಲಿ ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ್ದಾನೆ. ಹಲವು ಕಾಲ ಬಾನ್ ವಿಶ್ವನಿಲಯದಲ್ಲಿ ಇತಿಹಾಸದ ಪ್ರಾಧ್ಯಾಪಕನಾಗಿದ್ದೂ ತನ್ನ ಕ್ರಾಂತಿಕಾರ ಹಾಗು ಪ್ರಗತಿ ಪರ ಮನೋಭಾವದಿಂದ ವಿಶೇಷ ಜನಾರಾಧನೆ ಗಳಿಸಿದ. ಆದರೆ ಆ ಕಾರಣಗಳಿಂದಲೇ ಜರ್ಮನ್