ಪುಟ:Mysore-University-Encyclopaedia-Vol-1-Part-3.pdf/೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆರ್ಯಾವರ್ತ-ಆರ್ಲಿಕ್, ಪಾಲ್ ಮಿಲಿಯನ್ ಅನುಯಾಯಿಗಳಿದ್ದಾರೆ ಅಂತಾರಾಷ್ಟ್ರೀಯ ಪ್ರತಿನಿಧಿಗಳನ್ನೊಳಗೊಂಡ ಸಭೆ ದೆಹಲಿಯಲ್ಲಿದೆ. ಮೂಲತಃ ೧೦೦ ಜನ ಸದಾಸ್ಯರಿಂದ ಆರಂಭವಾದ ಆರ್ಯಸಮಾಜದಲ್ಲಿ ಪ್ರಪಂಗಚಾದ್ಯಂತ ಈಗ ೩ ರಿಂದ ೪ ಮಿಲಿಯನ್ ಅನುಯಾಯಿಗಳಿದ್ದಾರೆ.

(ಎಸ್.ಕೆ.ಆರ್: ಎಸ್.ಎಂ.ಎಚ್: ಬಿ.ಪಿ.ಎಸ್.)
ಆರ್ಯಾವರ್ತ: ಭಾರತಕ್ಕೆ ಬಂದ ಆರ್ಯರು ತಾವು ನೆಲೆಸಿದ ನೆಲವನ್ನು ಈ ಹೆಸರಿನಿಂದ ಕರೆದರು. ವಾಯವ್ಯ ಸರಹದ್ದಿನ ಮೂಲಕ ವಲಸೆ ಬಂದ ಆ ಜನ ಕ್ರಮೇಣ ಅವರು ಗಂಗಾನದಿ ಬಯಲಿನಲ್ಲಿ ನೆಲೆನಿಂತು ಅವರ ಸಂಸ್ಕೃತಿಯನ್ನು ಪಸರಿಸಿದರು. ಗಂಗಾ ಮತ್ತು ಯಮುನಾ ನದಿಗಳ ವಿಸ್ತಾರವಾದ ಬಯಲು ಪ್ರದೆಶವನ್ನು ಆರ್ಯಾವರ್ತ ಎಂದು ಕರೆಯಲಾಗಿದೆ. ಅವರು ಪೂರ್ವದಲ್ಲಿ ಬಿಹಾರದವರೆಗೂ ದಕ್ಷಿಣದಲ್ಲಿ ವಿಂಧ್ಯ ಪರ್ವತದವರೆಗೂ ಹರಡಿದರು. ಸಿಂಧು, ಗಂಗಾ, ಯಮುನಾ ನದಿಗಳ ಫಲವತ್ತಾದ ಬಯಲು ಪ್ರದೇಶವನ್ನು ಅವರು ಪುಣ್ಯ ಭೂಮಿಯೆಂದು ವರ್ಣಿಸಿದ್ದಾರೆ.. ಆರ್ಯಾವರ್ತ ಪೂರ್ವಸಮುದ್ರದಿಂದ ಪಶ್ಚಿಮಸಮುದ್ರದವರೆಗೂ ಉತ್ತರದಲ್ಲಿ ಹಿಮಾಲಯ ಪರ್ವತದಿಂದ ದಕ್ಷಿಣದಲ್ಲಿ ವಿಂಧ್ಯಪರ್ವತಗಳವರೆಗೂ ಹಬ್ಬಿವೆ. 

(ಜಿ.)

ಆರ್ಯಾವರ್ತ-೨: ಇಹಾರ, ಪಶ್ಚಿಮ ಬಂಗಾಲ, ಉತ್ತರ ಪ್ರದೇಶ ಮತ್ತು ನೇಪಾಲಗಳಲ್ಲಿ ಪ್ರಸಾರ ಹೊಂದಿರುವ ಜನಪ್ರಿಯ, ಪ್ರಗತಿಪರ ದಿನಪತ್ರಿಕೆ. ೧೯೪೦ರಿಂದ ಪಾಟ್ನಾದ ಇಂಡಿಯನ್ ನೇಷನ್ ಪತ್ರಿಕಾ ಗುಂಪಿನ ಅಂಗವಾಗಿ ಹಿಂದಿ ಭಾಷೆಯಲ್ಲಿ ಪ್ರಕಟವಾಗುತ್ತಿದೆ. ನಗರವಾಸಿಗಳ ಮತ್ತು ಹಳ್ಳಿಗರ ಅಭಿರುಚಿಗೆ ತಕ್ಕಂತೆ ಸುದ್ದಿಯನ್ನು ಸಾರುತ್ತ ಹಿಂದಿ ಪತ್ರಿಕೆಗಳ ಗುಂಪಿನ ಪ್ರಭಾವೀ ಪತ್ರಿಕೆಗಳಲ್ಲೊಂದೆನಿಸಿದೆ. (ಎನ್.ಕೆ.)

ಆರ್ಲ್ಯಾಂಡೊ ಫ್ಯೂರಿಯೋಸ: ಇಟಲಿ ದೇಶದ ಆರಿಯೋಸ್ಟೊ ಕವಿಯ ಉತ್ತಮ ಕಥನ ಕಾವ್ಯ. ಇದು ೧೫೧೬ರಲ್ಲಿ ಮೊದಲು ಪ್ರಕಟವಾಯಿತು. ಯೂರೋಪಿನ ಕಲೆ ಮತ್ತು ಸಾಹಿತ್ಯ ಪುನರುತ್ಥಾನ ಕಾಲದ ಪೂರ್ವ ಸಂಪ್ರದಾಯದ ಉತ್ತ್ಮ ಕೃತಿಯೆಂದು ಪರಿಗಣಿಸಲ್ಪಟ್ಟಿದೆ. ಇದನ್ನು ಪೂರೈಸಲು ಸುಮಾರು ಮೂವತ್ತು ವರ್ಷಗಳ ಕಾಲ ಹಿಡಿಯಿತು(೧೫೦೨-೩೩). ಇದು ಯೂರೋಪಿನಲ್ಲಿ ಬಹಳ ಬೇಗ ಜನರ ಮೆಚ್ಚುಗೆಯನ್ನು ಗಳಿಸಿದುದಲ್ಲದೆ ಆ ಕಾಲದ ಸಾಹಿತ್ಯದ ಮೇಲೆ ಪ್ರಭಾವ ಬೀರಿತು. ಆರ್ಲ್ಯಾಂಡೊ ಫ್ಯುರಿಯೋಸ ಎಂದರೆ ಉನ್ಮತ್ತ ಆರ್ಲ್ಯಾಂಡೊ ಎಂದು ಅರ್ಥ. ಕವಿಯು ನಾಯಕ ಆರ್ಲ್ಯಾಂಡೊವನ್ನು ಬೇರೆ ಬೇರೆ ಕಾಲ್ಪನಿಕ ಸನ್ನಿವೇಶಗಳಲ್ಲಿ ಚಿತ್ರಿಸಿದ್ದಾನೆ. ಅನೇಕ ಪ್ರಕರಣಗಳು ಇದರಲ್ಲಿ ಸೇರಿಕೊಂಡಿವೆ. ಇವನ್ನು ಕವಿ ಜಾಣ್ಮೆಯಿಂದ ಹೆಣೆದು ಕ್ರುತಿಗೆ ಒಂದು ಏಕರೂಪತೆಯನ್ನು ಕೊಟ್ಟಿದ್ದಾನೆ. ಇದರಲ್ಲಿ ಕಾಣಬರುವುದು ಮೂರು ಎಳೆಗಳು:ಏಂಜಲಿಕಳ ಬಗ್ಗೆ ಆರ್ಲ್ಯಾಂಡೊವಿನ ಪ್ರೇಮ, ಕ್ರೈಸ್ತರಿಗೂ ಪೇಗನ್ನರಿಗೂ ನಡೆಯುವ ಯುದ್ಧ, ರಗೇರು ಮತ್ತು ಬ್ರಡಮಂಟೊ ಪ್ರಣಯಿಗಳ ಪ್ರಕರಣ. ಮೊದಲನೆಯದೇ ಅತಿ ಮುಖ್ಯವಾದ ಭಾಗ. ಎರಡನೆಯದು ಇಡೀ ಕಾವ್ಯಕ್ಕೆ ಶೌರ್ಯದ ಹಿನ್ನಲೆಯನ್ನು ಕೊಡುತ್ತದೆ. ಮೂರನೆಯದು ರಗೇರೊ ಮತ್ತು ಬ್ರಡಮೆಂಟೊ ಮದುವೆಯಾಗಿ ಆಲಿಯೋಸ್ಟೊವಿನ ಆಶ್ರಯದಾತರ ಪೂರ್ವಜರಾಗಿ ವರ್ಣಿಸಲ್ಪಟ್ಟಿರುವಿದು. ಹದಿನಾರನೆಯ ಶತಮಾನದ ಜನಕ್ಕೆ ಆಸಕ್ತಿಯಿದ್ದ ವಿಚಾರಗಳೆಲ್ಲ ಇಲ್ಲಿವೆ-ಅತಿಭೌತಿಕ, ಸಾಂಕೇತಿಕ ಮತ್ತು ಸಾಹಸಮಯವಾದ ಘಟನೆಗಳು, ಚನ್ದ್ರಲೋಕದ ಪ್ರವಾಸ, ಮಾಯಾ ಉನ್ಗುರಗಳು, ಖಡ್ಗಗಳು ಎಲ್ಲವೂ ಬರುತ್ತವೆ. ಇವೆಲ್ಲ ವಿಚಾರಗಳನ್ನು ಬೆಸೆದು ಒನ್ದಾಗಿ ಸೇರಿಸುವುದು ಕವಿಯ ವಿಶಿಷ್ಟ ವ್ಯಕ್ತಿತ್ವ ಕವಿ೯ ಉಪಯೋಗಿಸಿರುವ ಛಂದಸ್ಸು ಅಟ್ಟರೀಮಾ ಎಂಬ ಅಷ್ಟಪದಿ. (ಎಚ್.ಜಿ.ಎಸ್.ಆರ್.)

ಆರ್ಲಿಂಗ್ಟನ್: ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಇದೇ ಹೆಸರಿನ ೭ ಸ್ಥಳಗಳಿವೆ, ಅವುಗಳಲ್ಲಿ ಮ್ಯಾಸಚೂಸೆಟ್ಸ್ ಪ್ರಾಂತ್ಯದ ಒನ್ದು ಪಟ್ಟಣ. ಬಾಸ್ಟನ್ ನಗರದ ವಾಯವ್ಯಕ್ಕೆ ಸು.೧೩ ಕಿಮೀ ದೂರದಲ್ಲಿದೆ. ಬಾಸ್ಟನ್ ಹಾಗು ಮೇನ್ ರೈಲು ಮಾರ್ಗ ಇದಕ್ಕೆ ಸಂಕಲ್ಪವನ್ನು ಕಲ್ಪಿಸುವುದು. ಇದರ ಒಟ್ಟು ವಿಸ್ತೀರ್ಣ ೧೪.೨ ಚಕಿಮೀ. ಜನಸಂಖ್ಯೆ ೪೨೩೮೯(೨೦೦೧). ಜನಸಂಖ್ಯೆ ೧೭೦೯೩೬(೨೦೦೪) ಒನ್ದು ಸುಂದರವಾದ ಸ್ಪೈ ಎಂಬ ಕೊಳವಿದೆ. ತೋಟಗಾರಿಕೆ ಮುಖ್ಯ ಕಸಬು. ಪಿಯಾನೊ, ದಿನಬಳಕೆ ಯಂತ್ರದ ಸಾಮಾನುಗಳು ಹಾಗೂ ಚಿತ್ರಪಟ ಸಾಮಗ್ರಿಗಳನ್ನು ತಯಾರಿಸುವ ಕಾರ್ಖಾನೆಗಳಿವೆ. ೧೮೦೭ರಲ್ಲಿ ವೆಸ್ಟ್ ಕೇಂಬ್ರಿಡ್ಜ್ ಎಂಬ ಹೆಸರಿನಿಂದ ಆರ್ಲಿಂಗ್ಟನ್ ಮಾರ್ಪಾಡಾಯಿತು. ಆದರೆ ಅದೇ ವರ್ಷ ಆರ್ಲಿಂಗ್ಟನ್ ಎಂಬ ಹೆಸರನ್ನೇ ಮತ್ತೆ ಸ್ವೀಕರಿಸಲಾಯಿತು. ಆರ್ಲಿಂಗ್ಟನ್ ವರ್ಜೀನಿಯದಲ್ಲಿ ಆರ್ಲಿಂಗ್ಟನ್ ಎಂಬ ಒಂದು ಐತಿಹಾಸಿಕ ಗೃಹ ಪೋಟೋಮಾಕ್ ನದಿಯ ಪಕ್ಕದಲ್ಲಿದೆ ವಾಷಿಂಗ್ಟನ್ ಡಿ.ಸಿಗೆ ಎದುರಿನಲ್ಲಿದೆ. ಒಮ್ಮೆ ಈ ಗೃಹ ಜಾರ್ಜ್ ವಾಷಿಂಗ್ಟನ್ ನ ಸ್ವತ್ತಾಗಿತ್ತು. ಅನಂತರ ಆತನ ಮೊಮ್ಮೊಗನ ದತ್ತು ಸ್ವತ್ತಾಯಿತು. ಈತನ ಮಗಳನ್ನು ಮದುವೆಯಾದ ರಾಬರ್ಟ್ ಈಲಿಗೆ ೧೮೩೧ರಲ್ಲಿ ದೊರಕಿತು. ಕೆಲವು ಕಾಲಾನಂತರ ಆರ್ಲಿಂಗ್ಟನ್ ರಾಷ್ಟ್ರದ ಸಮಾಧಿ ಸ್ಥಳವಾಗಿ ಅನೇಕ ಅಗ್ರಗಣ್ಯ ವ್ಯಕ್ತಿಗಳ ಹಾಗೂ ಸೈನಿಕರ ಬೀಡಾಯಿತು. ವಸಾಹತು ಕಲೆಗೆ ಈ ಕಟ್ಟಡ ಇಂದಿಗೂ ಒನ್ದು ಮಾದರಿ. ಆರ್ಲಿಂಗ್ಟನ್ ಗೃಹದ ಸುತ್ತಲಿನ ರಾಷ್ಟ್ರೀಯ ಸಮಾಧಿ ಪ್ರದೇಶ ೪೦೦ ಎಕರೆಗಳಿಗಿಂತಲೂ ಹೆಚ್ಚು. ಇದೊಂದು ರಮಣೀಯ ಪ್ರದೇಶ. (ಎಮ್.ಎಸ್.)

ಆರ್ಲಿಕ್, ಪಾಲ್: ೧೮೫೪-೧೯೧೫. ಜೀವ ಮತ್ತು ವೈದ್ಯಕ ವಿಜ್ಞಾನಗಳಲ್ಲಿ ಮೊತ್ತಮೊದಲು ರಸಾಯನ ವಿಜ್ಞಾನವನ್ನು ಬಹಳವಾಗಿ ಬಲಸಿದ ಪ್ರಯೋಗಶೀಲ ಮೇಧಾವಿ, ಜರ್ಮನಿಯ ವಸಿದ್ಯಕ ಸಂಶೋಧಕ. ಕೋಶರಕ್ಷಣೆಯ (ಇಮ್ಯೂನಿಟಿ) ಮೇಲಿನ ಸಂಶೋಧನೆಗಾಗಿ ಯಲ್ಯಾ ಮೆಷ್ನಿಕಾವ್ನೊಂದಿಗೆ ನೊಬೆಲ್ ಪಾರಿತೋಷಕ(೧೯೦೮) ಪಡೆದವ. ೧೪, ಮಾರ್ಚ್ ೧೮೫೪ರಲ್ಲಿ ಯೆಹೂದಿ ಮನೆತನದಲ್ಲಿ ಜನಿಸಿದ ಇವನಿಗೆ ಚಿಕ್ಕಂದಿನಲ್ಲಿ ಗಣಿತ, ಲ್ಯಾಟಿನ್ನುಗಳನ್ನು ಬಿಟ್ಟರೆ, ಇನ್ನಾವುದರಲ್ಲೂ ಆಸಕ್ತಿ ಇರಲಿಲ್ಲ. ಇವನಿಗೆ ಪರೀಕ್ಷೆಗಳೇ ಹಿಡಿಸುತ್ತಿರಲಿಲ್ಲ. ವೈದ್ಯ ಪದವೀಧರನಾಗಿ (೧೮೭೮) ರಸಾಯನ ವಿಜ್ಞಾನ ಇವನಿಗೆ ಬಹುವಾಗಿ ರುಚಿಸಿತು. ತನ್ನದೇ ಯತ್ನಗಳಿಂದ ಆಳವಾದ ಅಭ್ಯಾಸಕ್ಕಿಳಿದ. ಕೆಲವು ವರ್ಷಗಳು ವೈದ್ಯ ಸಂಶೋಧನೆಗಾಗಿ ಚಿಕ್ಕ ಪ್ರಯೋಗಾಲಯವನ್ನು ತೆರೆದು, ಅಲ್ಲಿ ನಡೆಸಿದ ರಕ್ತಕಣಗಳ ಮೇಲಿನ ಸಂಶೋಧನೆಯಿಂದ ಬೇಗನೆ ಬೆಳಕಿಗೆ ಬಂದ. ಆಮೇಲೆ ರಾಬರ್ಟ್ ಕಾಕನ ಸೋಂಕು ರೋಗಗಳ ಸಂಸ್ಥೆ ಸೇರಿದ್ದು, ಬರ್ಲಿನ್ನಿನ ಲಸಿಕೆ ಸಂಶೋಧನಾ ನಿರ್ದೇಶಕನಾಗಿದ್ದು (೧೮೦೬) ಕೊನೆಗೆ ಇವನಿಗಾಗಿ ಹುಟ್ಟಿಕೊಂಡ ರೋಗ ಚಿಕಿತ್ಸಾ ಪ್ರಯೋಗದ ಸಂಸ್ಥೆಯ ಹಿರಿಯನಾದ. ಜೊತೆಗೆ, ಇದರ ಪಕ್ಕದಲ್ಲಿದ್ದ ಜಾರ್ಜ್ ಸ್ಟೇಯರ್ ಸಂಸ್ಥೆಯಲ್ಲೂ ರಸಾಯನ ರೋಗ ಚಿಕಿತ್ಸೆಯ ನಿರ್ದೇಶಕನಾಗಿದ್ದ. ಮೊದಮೊದಲು ಅನೇಕರಿಗೆ ಇವನು ಹಿಡಿಸದಿದ್ದರೂ ಲಂಡನ್ನಿನ ರಾಯಲ್ ಸೊಸೈಟಿಯ ಹೊರನಾಡಿನ ಸದಸ್ಯತ್ತ್ವವನ್ನು, ಜರ್ಮನ್ ಬಿರುದಾದ ಎಕ್ಸೆಲೆನ್ಸಿಯೂ ದಕ್ಕಿದುವು. ಬ್ಯಾಡ್ ಹೊಂಬರ್ಗಿನಲ್ಲಿ ೨೦ ಆಗಸ್ಟ್ ೧೯೧೫ರಂದು ಈತ ನಿಧನ ಹೊಂದಿದ. ಮುಖ್ಯವಾಗಿ ಒಂದಾದರ ಮೇಲೆ ಒಂದರಂತೆ, ೧೦-೧೫ ವರ್ಷಗಳ ಕಾಲ, ಊತಕಶಾಸ್ತ್ರದೊಂದಿಗೆ ರಕ್ತ ಜೀವಕಣಶಾಸ್ತ್ರ, ಮರೆವಣೆಯೊಂದಿಗೆ ರಾಸಾಯನ ರೋಗ ಚಿಕಿತ್ಸೆಗಳಲ್ಲಿ ಆರ್ಲಿಕನ ಸಂಶೋಧನೆಗಳು ನಡೆದುವು.ಇದರೊಂದಿಗೇ ರಸಾಯನಿಕ ಸಂಶೋಧನೆಗಳನ್ನಂತೂ ಬಿಟ್ಟಿದ್ದೇ ಇಲ್ಲ. ಏಕಾಣುಜೀವಶಾಸ್ತ್ರ, ಔಷಧಶಾಸ್ತ್ರ, ಏಡಿಗಂತಿ ಸಂಶೋಧನೆಗಳಲ್ಲೂ ಹೆಚ್ಚಿನ ಮುನ್ನಡೆಗಳಿಗೂ ಕಾರಣನಾದ. ಹೊಸ ತಿಳಿವೇ ಆರ್ಲಿಕ್ಕನ ಮೂಲ ಗುರಿಯಾಗಿದ್ದರ, ಅವುಗಳಿಂದ ಬಂದ ಫಲಗಳಂತೂ ಒನ್ದು ನವಯುಗವನ್ನೇ ಹುಟ್ಟಿಸಿದಂತಿದ್ದುವು. ಇವುಗಳಲ್ಲಿ ಮುಖ್ಯವಾದ ಕೆಲವುಗಳನ್ನು ಸೂಚಿಸಬಹುದು.ಊತಕಗಳು ಎತ್ತಿಕೊಳ್ಳುವ ಬಣ್ಣಗಳ ಬಿಡಿಪರೀಕ್ಷೆಗಾಗಿ, ಆಗ ಜರ್ಮನಿಯ ವಿಜ್ಞಾನವೂ ರಾಸಾಯನಿಕ ಕೈಗಾರಿಕೆಗಳೂ ದಂಡಿಯಾಗಿ ತಯಾರಿಸುತ್ತಿದ್ದ, ಕೃತಕ ಬಣ್ಣ ವಸ್ತುಗಳ ಜೀವಜ್ಞಾನದ ಗುಣಗಳನ್ನು ಕಂಡುಕೊಳ್ಳುತ್ತಾ ಮೊದಲುಮಾಡಿದ. ಊತಕದ ಜೀವಕಣಗಳು, ರಕ್ತದ ಬಿಳಿಯ ಜೀವಕಣಗಳಲ್ಲಿಯ ಬೇರೆ ಬೇರೆ ಕಣಗಳು ವಿಶಿಷ್ಟ ಬಣ್ಣತಳೆವ ಗುಣಗಳನ್ನು ತೋರಿಸಿಕೊಟ್ಟು ಇಂದಿನ ರಕ್ತಶಾಸ್ತ್ರವನ್ನು(ಹೆಮಟಾಲಜಿ) ಸ್ಥಾಪಿಸಿದ. ನರದ ತಂತುಗಳು ಮೆತಿಲೀನ್ ನೀಲಿಯಿಂದ ಬಣ್ಣವೇರುವ ಹಾಗೆ, ಯಾವ ಅಡ್ಡ ವಿಷ ಪರಿಣಾಮಗಳೂ ಆಗದೆಯೇ ಬದುಕಿರುವ ಪ್ರಾಣಿಗಳಲ್ಲಿ ಊತಕಗಳಿಗೆ ಬಣ್ಣ ಕೊಡುವ ಜೀವಾಲದ ವರ್ಣಕಗಳನ್ನು(ವೈಟಲ್ ಸ್ಟೇನ್ಸ್) ಕಂಡು ಹಿಡಿದ. ಹೊಸ ವಿಧಾನಗಳಲ್ಲಿ ಇದೊಂದು ಮಹಾ ಸಾಧನೆ. ಬೇಕಾದಾಗ ಆಕ್ಸಿಜನ್ ಕೊಡಿಸುವ ಇಲ್ಲವೆ ಕಳೆವ ವರ್ಣವಸ್ತುಗಳನ್ನು, ಬಳಸಿ ಜೀವಿಗಳ ಬೇರೆ ಬೇರೆ ಊತಕಗಳಲ್ಲಿನ ಆಕ್ಸಿಜನ್ ಪೂರೈಕೆಯ ಮಟ್ಟಗಳು ಬೇರೆ ಬೇರೆ ಆಗಿರುವುವೆಂದು ತೋರಿಸಿದ. ಆಮ್ಲಕ್ಕೆ ಜಗ್ಗದ ಬಣ್ಣವೇರಿಕೆಯಿಂದ ಕಾಕ್ ನ(ಕ್ಷಯದ) ದಂಡಾಣು ಜೀವಿಯನ್ನು ಅವನು ತೋರಿಸಿದ್ದರಿಂದ, ಕ್ಷಯರೋಗ ನಿದಾನದಲ್ಲಿ ಅಗತ್ಯವಾದ ವಿಧಾನವೊಂದು ದೊರಕಿತು. ಕಾರ್ಖಾನೆ ತಯಾರಕರ ಮದ್ದುಗಳ ಬಲ ಹೆಚ್ಚು ಅಗಿರುತ್ತಿದ್ದುದರಿಂದ ಗಂಟಲ ಮಾರಿಯ(ಡಿಫ್ತೀರಿಯ) ಚಿಕಿತ್ಸೆಯಲ್ಲಿ ವಿಷಹಾರಿಯ(ಆಂಟಿಟೊಕ್ಸಿನ್) ಬಳಕೆ ಚೆನ್ನಾಗಿರಲಿಲ್ಲಾ. ಈ ತರನ ರಸಿಕೆರೋಧಕಗಳ(ಆಂಟಿಸೀರಂ) ಗುಣಮಟ್ಟವನ್ನು ನಿಗದಿಸುವ, ಈಗಲೂ ಎಲ್ಲೆಲ್ಲೂ ಬಳಕೆಯಲ್ಲಿರುವ ವಿಧಾನವನ್ನು ಆರ್ಲಿಕ್ ಜಾರಿಗೆ ತಂದ. ಪ್ರತಿಜನಕ(ಆಂಟಿಜನ್) ಮೆರವಣೆ ಆದ ಜೀವಿಗಳ ರಸಿಕೆಯಲ್ಲಿ ಹುಟ್ಟಿಕೊಳ್ಳುವ, ರೋಧ ವಸ್ತುಗಳ(ಆಂಟಿಬಾಡೀಸ್), ಏಕಾಣುಜೀವಿ ವಿಷಗಳು ಮತ್ತು ಅದೇ ತೆರನ ವಿಷಗಳ ವರ್ತನೆಯ ರೀತಿಯ ಮೇಲೆ ಅವನ ಶೋಧನೆಗಳು ಕೋಶರಕ್ಷಾಶಾಸ್ತ್ರದ(ಇಮ್ಯುನಾಲಜಿ) ಮುಖ್ಯ ಅಡಿಗಲ್ಲಾಗಿದೆ. ಈ ಶೋಧನೆಗಳಿಂದ, ಅದರಲ್ಲೂ ಅವನ ಅಡ್ಡ ಸರಪಣಿ ಸಿದ್ಧಾಂತ ಹುಟ್ಟಿಕೊಂಡಿತು. ಆರ್ಲಿಕ್ಕನಿಂದ ಜನಿಸಿದ, ಔಶಧಶಾಸ್ತ್ರದ ಶಾಖೆಯಾದ ರಸಾಯನರೋಗಚಿಕಿತ್ಸೆಯ ಕೇಮೋತೆರಪಿ ದಸೆಯಿಂದ ಈಗ ಮಹಾರಾಸಾಯನಿಕ ಕೈಗಾರಿಕೆಯೇ ನಳನಳಿಸುತ್ತಿದೆ. ರೋಗಕಾರಣಗಳಾದ ಪರಪಿಣ್ಡಿಗಳನ್ನು ಹಾಳುಗೆಡವಿ, ಅವುಗಳ ಹುಟ್ಟಡಗಿಸುವ ಮದ್ದಿನಿಂದ, ಸೊಂಕು ಹತ್ತಿರುವ ಪ್ರಾಣಿಯ ರೋಗವನ್ನು ವಾಸಿಮಾಡುವುದು ಮೊತ್ತಮೊದಲು ಗೊತ್ತಾದುದು ೧೯೦೪ರಲ್ಲಿ. ಬೈರೊಡಲಿ(ಟ್ರಿಪನೊಸೋಮ್) ರೋಗಾಣುವನ್ನು ಚುಚ್ಚಿ