ಪುಟ:Mysore-University-Encyclopaedia-Vol-1-Part-3.pdf/೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದಲ್ಲಿ (ಆರ್ಕೀಯನ್ಸ) ಆ ಕಾಲದ ಶಿಲಾಸಮೂಹಗಳಿಗೂ ರೂಢಿಯಿಂದ ಅನ್ವಯವಾಗುತ್ತದೆ. ಈ ಪದ ಗ್ರೀಕ್ ಭಾಷೆಯ ಆರ್ಕೇಯ್ಸ (ಪುರಾತನ) ಮತ್ತು ಆರ್ಕಿ(ಆರಂಭ) ಎಂಬ ಮೂಲಶಬ್ದಗಳಿಂದ ನಿಷ್ಪನ್ನವಾಗಿದೆ. ಉತ್ತರ ಅಮೇರಿಕದ ಸುಪೀರಿಯರ್ ಸರೋವರದ ಸುತ್ತಮುತ್ತಲ ಅಥವಾ ಕೆನೇಡಿಯನ್ ಶೀಲ್ಡ ಪ್ರದೇಶದ ಕೇಂಬ್ರಿಯನ್ ಶಿಲಾಸ್ತೋಮಗಳಿಗಿಂತ ಹಿಂದಿನ ಶಿಲಾಸಮೂಹಗಳನ್ನು ಗುರುತಿಸಲು ಈ ಪದವನ್ನು ಮೊತ್ತಮೊದಲು ಬಳಸಿದವರು (ಜೆ.ಡಿ ನಾನಾ,1872).ಈ ಸಮುದಾಯದಲ್ಲಿ ಶೀಣಿ ಕಲ್ಲುಗಳು (ಗ್ರಾನೈಟಿಕ್ ನೈಸಸ್)ಸ್ಫಟಿಕೀಕರಿಸಿದ ಪದರುಶಿಲೆಗಳು (ಕ್ರಿಸ್ಪಲೈನ್ ಷಿಸ್ಪ)ಮಾರ್ಪಟ್ಟ ಪ್ರಸ್ತರೀ ಶಿಲೆಗಳು (ಮೆಟ ಸೆಡಿಮೆಂಟ್ಸ),ರೂಪಾಂತರಗೊಳ್ಳದ ಜೀವಾವಶೇಷವಿಲ್ಲದ ಶಿಲೆಗಳು;ಮತ್ತು ಭೂಗರ್ಭದಿಂದ ಹೊರಬಂದ ಕಣಶಿಲೆ(ಎರಪ್ಟಿವ್ ಗ್ರಾನೈಟ್) ಇವು ಸೇರಿದ್ದುವು.ಮುಂದೆ 1875ರಲ್ಲಿ,ಆರ್ಕೀಯನ್ ಪದವನ್ನು ಅತಿ ಮಡಿಕೆ ಬಿದ್ದು ಹೆಚ್ಚು ರೂಪಾಂತರಗೊಂಡ ಪದರ ಶಿಲೆಗಳು ಮತ್ತು ಶೀಣಿಕಲ್ಲುಗಳ ಸಮೂಹಕ್ಕೆ ಮಾತ್ರ ಡಾನಾ ಅನ್ವಯಿಸಿದ. ಅವುಗಳ ಮೇಲ್ಪದರವಾಗಿ ಅವಸಾದನ ವಿಳಂಬದಿಂದ (ಸ್ಟ್ರ್ಯಾಟಿಗ್ರಾಫಿಕ್ ಬ್ರೇಕ್)ಕೂಡಿದ್ದು ಜೀವಾವಶೇಷಗಳಿಲ್ಲದ ಮತ್ತು ರೂಪಾಂತರ ಹೊಂದದೆ ಇರುವ ಶಿಲಾಪದರಗಳನ್ನು ಪ್ರತ್ಯೇಕಿಸಿದೆ. ಅಲ್ಲಿಂದೀಚೆಗೆ ಆರ್ಕೀಯನ್ ಪದದ ನಿರೂಪಣೆ ಮತ್ತೆ ಕೆಲವು ಬದಲಾವಣೆಗಳನ್ನು ಹೊಂದುತ್ತ ಬಂದಿದೆ.ಅಮೇರಿಕ ಸಂಯುಕ್ತಸಂಸ್ಥಾನಗಳ ಮತ್ತು ಕೆನಡದ ಭೂಶಾಸ್ತ್ರಜ್ಞರಲ್ಲಿ ಯಾವ ಸ್ತೋಮಗಳಿಗೆ ಆರ್ಕೀಯನ್ ಅಥವಾ ಆರ್ಷೇಯ ಪದ ನಿಖರವಾಗಿ ಅನ್ವಯಿಸುವುದೆಂಬ ಬಗ್ಗೆ ಭಿನ್ನಾಭಿಪ್ರಾಯಗಳಿವೆ. ಘಟಕ ಶಿಲಾಸಮೂಹಗಳು(ಕಾಂಪೊನೆಂಟ್ ರಾಕ್ಸ) : ಕನೇಡಿಯನ್ ಶೀಲ್ಡಿನ ಶಿಲಾಸಮೂಹಗಳ ಖಚಿತ ಪರಿಶೋಧನೆಗಳಿಂದ ಅವು ವಿವಿಧ ಪದರುಶಿಲೆಗಳು, ಕಣಶಿಲೆಯಂಥ ಶೀಣಿಕಲ್ಲುಗಳು ಮತ್ತು ಕಣಶಿಲೆಗಳನ್ನು ಒಳಗೊಂಡಿವೆ ಎಂದು ಕಂಡುಬಂದಿದೆ.ವಿವಿಧ ಜ್ವಾಲಾಮುಖಿಜ ಶಿಲೆಗಳು ಮತ್ತು ಪ್ರಸ್ತರೀ ಶಿಲೆಗಳು ಅಧಿಕ ರೂಪಾಂತರ ಹೊಂದಿ ಪದರುಶಿಲೆಗಳಾದುವೆಂದೂ ಮುಂಚೆಯಿಂದಿದ್ದ ವಿವಿಧ ಶಿಲೆಗಳು ರೂಪಾಂತರ ಹೊಂದಿ ಕಣಶಿಲೆಯಂಥ ಶೀಣಿಕಲ್ಲುಗಳು ಆದುವೆಂದೂ ತೋರಿಬಂದಿದೆ. ಇವುಗಳ ಜೊತೆಯಲ್ಲಿರುವ ನಿರ್ದಿಷ್ಟಕಣಶಿಲೆಗಳು,ಭೂಗರ್ಭದಲ್ಲಿ ಜನಿಸಿ ಮೈಲ್ಮೈಯ ಶಿಲೆಗಳನ್ನೂ ಶೀಣಿಕಲ್ಲುಗಳನ್ನೂ ಒಳಹೊಕ್ಕಿರುವುದು ಖಚಿತವಾಗಿದೆ.ಈ ಪ್ರದೇಶದ ಆರ್ಷೇಯ ಶಿಲಾಸ್ತೋಮಗಳನ್ನು ಕೀವಾಟನ್ ಪದರು ಶಿಲೆಗಳು ಮತ್ತು ಲಾರೆನ್ ಷಿಯನ್ ಗ್ರಾನೈಟ್ ಎಂದು ಎರಡು ವರ್ಗಗಳಾಗಿ ವಿಭಾಗಿಸಲಾಗಿದೆ. ಕೆನೇಡಿಯನ್ ಶೀಲ್ಡಿನ ಶಿಲಾವರ್ಗಗಳನ್ನು ಹೋಲುವ ಶಿಲಾಸ್ತೋಮಗಳು ಉತ್ತರ ಅಮೇರಿಕದಲ್ಲಿ ಲ್ಯಾಬ್ರಡಾರ್ ದ್ವೀಪ, ಕೊಲರಾಡೋ ನದಿಯ ತಳಭಾಗ ಮತ್ತು ಇನ್ನೂ ಕೆಲವು ಪ್ರದೇಶಗಳಲ್ಲಿಯೂ ದಕ್ಶಿಣ ಆಫ್ರಿಕ,ಆಸ್ಟ್ರೇಲಿಯ, ಮಧ್ಯಯುರೋಪಿನ ಬಾಲ್ಟಿಕ್ ಪ್ರದೇಶ,ಭಾರತ ಮತ್ತು ಪ್ರಪಂಚದ ಇನ್ನೂ ಕೆಲವು ಭಾಗಗಳಲ್ಲಿಯೂ ಕಂಡುಬಂದಿದೆ. ಭಾರತದಲ್ಲಿ ಆರ್ಷೇಯ ಶಿಲಾವರ್ಗಗಳು : ಕನೇಡಿಯನ್ ಶೀಲ್ಡಿನ ಆರ್ಷೇಯ ಶಿಲೆಗಳನ್ನು ಹೋಲುವ ಪದರುಶಿಲೆಗಳು,ಶೀಣಿಕಲ್ಲುಗಳು ಮತ್ತು ಕಣಶಿಲೆಗಳು ಭಾರತದ ಬೇರೆ ಬೇರೆ ಪ್ರದೇಶಗಳಲ್ಲಿ ವಿವಿಧ ಪ್ರಮಾಣಗಳ ತುಕಡಿಗಳಾಗಿ ಹರಡಿರುತ್ತವೆ.ಆರ್ಷೇಯ ಶಿಲಾಸ್ತೋಮಗಳು ದಕ್ಷಿಣ ಭಾರತದ ಹೆಚ್ಚುಭಾಗ ರಾಜಸ್ತಾನ, ಮಧ್ಯಪ್ರದೇಶ, ಬಿಹಾರ ಮತ್ತು ಒರಿಸ್ಸ ಪೂರ್ವಘಟ್ಟಗಳು ಮತ್ತು ಆಂಧ‍್ರಪ್ರದೇಶದ ಕೆಲವು ಭಾಗಗಳಲ್ಲೆಲ್ಲ ಹರಡಿವೆ. ಈ ಪ್ರದೇಶಗಳ ಆರ್ಷೇಯ ಶಿಲಾಸ್ತೋಮಗಳ ಒಟ್ಟು ವಿಸ್ತೀರ್ಣ ಸು 46632 ಚ,ಕಿಮೀ.ಉತ್ತರ ಆಕ್ಷಾಂಶ 16 ಯಿಂದ ಕೆಳಗೆ ದಕ್ಷಿಣ ಭಾರತದ ಹೆಚ್ಚು ಭಾಗ ಆರ್ಷೇಯ ಶಿಲೆಗಳನ್ನು ಒಳಗೊಂಡಿದೆ. ಭಾರತ ಭೂಶೋಧನ ಶಾಖೆ 1857 ರಲ್ಲಿ ಸ್ಥಾಪಿತವಾದ ಆನಂತರ ಕೆಲವು ವರ್ಷಗಳವರೆಗೂ ದಕ್ಷಿಣ ಭಾರತದ ಆರ್ಷೇಯ ಶಿಲೆಗಳನ್ನು ವಿಭಾಗಿಸದೆ ಎಲ್ಲವನ್ನೂ ಒಟ್ಟುಗೂಡಿಸಿ ಪ್ರಾಚೀನ ಶಿಲಾಜಾಲವೆಂದು ಮೂಲಭೂತ ನಕಾಸೆಗಳಲ್ಲಿ ತೋರಿಸುತ್ತಿದ್ದರು.1875ರಲ್ಲಿ ಬ್ರೂಸ್ ಫುಟ್ ಆಗಿನ ದಕ್ಷಿಣ ಮಹಾರಷ್ಟ್ರ ಪ್ರದೇಶದಲ್ಲಿ ಶಿಲಾಸ್ತೋಮ ಪರಿಶೋಧನೆ ನಡೆಸಿ ನಕ್ಷೆಯನ್ನು ತಯಾರಿಸುತ್ತಿದಾಗ ಅಲ್ಲಿನ ಆರ್ಷೇಯ ಶಿಲಾಸ್ತೋಮಜಾಲದಿಂದ ವಿವಿಧ ಪದರುಶಿಲೆಗಳ ಸಮೂಹವನ್ನು ಬೇರ್ಪಡಿಸಿ ಅವುಗಳನ್ನು ಪ್ರತ್ಯೇಜ ವರ್ಗವಾಗಿ ವಿಂಗಡಿಸಿದ.ಈ ಪದರು ಶಿಲೆಗಳು ಧಾರವಾಡ ಪ್ರದೇಶದಲ್ಲಿ ಹರಡಿಸಿರುವುದು ಕಂಡುಬಂದಿರುವುದರಿಂದ, ಆ ಶಿಲಾಸ್ತೋಮಕ್ಕೆ ಧಾರವಾಡ ವರ್ಗ ಎಂದು ಹೆಸರುಕೊಟ್ಟ ಧಾರವಾಡ ಪದರು ಶಿಲೆಗಳು ಎಂದೂ ಇದನ್ನು ಕರೆಯುತ್ತಾರೆ. 1895ರಲ್ಲಿ ಪದರುಶಿಲೆಗಳ ಜೊತೆಯಲ್ಲಿರುವ ಕಣಶಿಲೆಯಂಥ ಶೀಣಿಕಲ್ಲುಗಳಿಗೆ ಮತ್ತು ಕಣಶಿಲೆಗಳಿಗೆ ಮಾತ್ರ ಅನ್ವಯಿಸಿದ್ದಿತು.1906ರಲ್ಲಿ ಹಾಲೆಂಡನ್ನು ಉತ್ತರ ಅಮೇರಿಕದಲ್ಲಿರುವ ಸುಪೀರಿಯರ್ ಸರೋವರ ಪ್ರದೇಶದ ಹ್ಯುರೋನಿಯನ್ ಶಿಲಾವರ್ಗಕ್ಕೆ ಹೋಲಬಹುದಾದ ಧಾರವಾಡದ ವರ್ಗಕ್ಕೂ ಜೀವಾವಶೇಷವಿಲ್ಲದ,ರೂಪಾಂತರ ಹೊಂದದ,ದ್ವೀಪಕಲ್ಪ ಭಾಗದಲ್ಲಿರುವ ಕಡಪ, ಕರ್ನೂಲ್, ವಿಂಧ್ಯ ಮುಂತಾದ ಪ್ರಸ್ತರೀ ಶಿಲಾವರ್ಗಗಳಿಗೂ ಆಗಾಧ ಅವಸಾಧನ ವಿಳಂಬನವಿರುವುದನ್ನು ಗಮನಕ್ಕೆ ತಂದು ಆರ್ಷೇಯ ಪದವನ್ನು ಧಾರವಾಡ ವರ್ಗಕ್ಕೂ ಅನ್ವಯಿಸಬೇಕೆಂದು ವಾದಿಸಿದ. ಈ ಅಭಿಪ್ರಾಯವನ್ನು ಫರ್ ಮರ್ ಮುಂತಾದ ಭೂ ವಿಜ್ಞಾನಿಗಳೂ ಅಂಗೀಕರಿಸಿದರು. ಆದುದರಿಂದ ಈಗ ಆರ್ಷೇಯ ಗುಂಪಿನಲ್ಲಿ ಕಣಶಿಲೆಗಳು ಮತ್ತು ಕಣಶಿಲೆಯೆಂಥ ಶೀಣಿಕಲ್ಲುಗಳೂ ಅಲ್ಲದೆ,ಧಾರವಾಡ ಶಿಲಾಸ್ತೋಮಗಳೂ ಸೇರಿವೆ. ಆರ್ಷೇಯ ಶಿಲಾಸ್ತೋಮಗಳು ಕರ್ನಾಟಕ ರಾಜ್ಯದಲ್ಲಿ ಅಧಿಕವಾಗಿವೆ. ಈ ರಾಜ್ಯದಲ್ಲಿ ಧಾರವಾಡ ಪದರುಶಿಲೆಗಳು ಉತ್ತರ-ದಕ್ಷಿಣವಾಗಿ ಮತ್ತು ಉತ್ತರ-ವಾಯುವ್ಯ,ದಕ್ಷಿಣ-ಆಗ್ನೇಯ ಮುಖವಾಗಿ ಸುಮಾರು 7-8 ಪಟ್ಟೆಗಳಂತೆ ಹಬ್ಬಿವೆ. ಈ ಪಟ್ಟೆಗಳಲ್ಲಿ ಅತಿ ದೊಡ್ಡವು ಉದ್ದದಲ್ಲಿ 400 ಕಿಮೀಗಳ ಮೇಲ್ಪಟ್ಟೂ ಅಗಲದಲ್ಲಿ 15-30 ಕಿಮೀಗಳವರೆಗೂ ಇರುತ್ತವೆ. ಈಗಿನ ಕರ್ನಾಟಕ ರಾಜ್ಯದಲ್ಲಿ 150259 ಚ.ಕಿ.ಮೀ.ಪ್ರದೇಶಗಳಲ್ಲಿ ಧಾರವಾಡ 129533 ಚಕಮೀ ಪದರುಶಿಲೆಗಳಿವೆ. ಉಳಿದ 129495 ಚ.ಕಿ.ಮೀ ಪ್ರದೇಶ ಕಣಶಿಲೆ