ಪುಟ:Mysore-University-Encyclopaedia-Vol-1-Part-3.pdf/೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆರೋಗ್ಯ ಸುರಕ್ಷತಾ ಕಾಯಿದೆಗಳು ವೈದ್ಯಶಾಸ್ತ್ರ ವಿಚಾರದಲ್ಲಿ ಪ್ರಯೋಗಶಾಲೆಗಳಲ್ಲಿ ನಡೆಸಿದ ಪ್ರಯೋಗ ಸಿದ್ದಾಂತಗಳನ್ನು ಮಾನವಕೋಟಿಯ ದಿನ ದಿನದ ಬಾಳಿಗೆ ಅನ್ವಯಿಸಲು ಬಹು ದೀಘ‌‌ ಕಾಲದಿಂದಲೂ ಮಹತ್ವದ ಕಾಯ್ಯಕ್ರಮವೆಂದು ಒಪ್ಪಿಕೊಳ್ಳಲಾದ ಈ ಬಗೆಯ ಆಧುನಿಕ ಜನಾರೋಗ್ಯ ನೀತಿಶಿಕ್ಷಣ ಈಚೆಗೆ ಹೆಚ್ಚು ಹೆಚ್ಚು ಬಳಕೆಗೆ ಬರುತ್ತಿದೆ. ನಾನಾ ಆರೋಗ್ಯ ಕಾರ್ಯಕತ‌ರಿಂದ ಹಿಡಿದು, ಸಮಾಜದ ಮುಂದಾಳುಗಳಂಥ ಸ್ವಯಂಸೇವಾಕತ‌ರಿಂದ ಹಿಡಿದು, ಸಮಾಜದ ಮುಂದಾಳುಗಳಂಥ ಸ್ವಯಂ ಸೇವಾಕತ‍ರವರೆಗಿನ ಸಕಲ ಕಲ್ಯಾಣ ಕಾಯ‍ಕತರೂ ಆರೋಗ್ಯ ಶಿಕ್ಷಕರೇ ಸರಿ. ಆರೋಗ್ಯಶಿಕ್ಷಣ ಕಾಯ‍ರೂಪಕ್ಕೆ ಬರಲು ಸೂಕ್ತ ಜ್ಞಾನಾಜ‍ನೆಯೂ, ಈ ವಿಚಾರದಲ್ಲಿ ಆತ್ಯಾಧುನಿಕ ಜ್ಞಾನವನ್ನು ಸಂಪಾದಿಸಿಕೊಂಡು ಅದನ್ನು ಬಳಕೆಗೆ ತರುವ ನೈಪುಣ್ಯವೂ ಬೇಕಾಗುವುದು. ಇದರ ಜೊತೆಗೆ, ಆರೋಗ್ಯಶಿಕ್ಷಣದ ವಿಧಾನಗಳನ್ನೂ ಅರಿತಿರಬಬೇಕು; ಶ್ರವಣ, ವೀಕ್ಷಣ ಸಾಧನಗಳಂಥ ಶಿಕ್ಷಣ ಮಾಧ್ಯಮಗಳನ್ನು ಬಳಸುವ ಕ್ರಮವನ್ನೂ ತಿಳಿದಿರಬೇಕು. ನಮ್ಮ ದೇಶಕ್ಕೆ ಸ್ವಾತಂತ್ರ್ಯ ಲಭಿಸಿದ ತರುವಾಯ, ಪ್ರಜಾಪ್ರಭುತ್ವವನ್ನು ಅಳವಡಿಸಿಕೊಂಡಿರುವ ಭಾರತ ಆರೋಗ್ಯ ಶಿಕ್ಷಣಕ್ಕೆ ವಿಶೇಷ ಮಹತ್ತ್ವ ನೀಡಿದೆ. ಸಾವಜನಿಕ ಆರೋಗ್ಯ ಇಲಾಖೆ, ಗ್ರಾಮಾಂತರ ಆರೋಗ್ಯ ಶಿಕ್ಷಣಕ್ಕೆ ವಿಶೇಷ ಮಹತ್ತ್ವ ನೀಡಿದೆ. ಸಾವ‍ಜನಿಕ ಆರೋಗ್ಯ ಇಲಾಖೆ, ಗ್ರಾಮಾಂತರ ಆರೋಗ್ಯ ಕೇಂದ್ರಗಳು, ಸಕಾ‌‍ರದ ಪ್ರಚಾರ ಇಲಾಖೆ, ರೆಡ್ ಕ್ರಾಸ್ ಸಂಸ್ಥೆ ಇವೇ ಮೊದಲಾದುವು ಈ ಬಗ್ಗೆ ಸಾಕಷ್ಟು ಕೆಲಸವನ್ನು ನಿವ‍ಹಿಸುತ್ತಿವೆ. (ನೋಡಿ - ಅಂಗಸಾಧನೆ; ಕ್ರೀಡೆಗಳು; ದೈಹಿಕ ಚಟುವಟಿಕೆಗಳು) ಆರೋಗ್ಯ ಸುರಕ್ಷಣಾ ಕಾಯಿದೆಗಳು : ಜನತೆಯ ಆರೋಗ್ಯ, ನೆಮ್ಮದಿಗಳನ್ನು ಪಾಲಿಸುವುದು ಒಳ್ಳೆಯ ಸಕಾ‍ಋರದ, ಕಾನೂನುಗಳ ಮುಖ್ಯ ಜವಾಬ್ದಾರಿಗಳಲ್ಲಿ ಒಂದು. ಹಿಂದಿನ ಕಾಲದಲ್ಲಿ ಒಬ್ಬನಿಂದ ಅಪಾಯದ ಸುಳಿವು ಕಂಡುಬಂದ ಕೂಡಲೇ ಜನತೆಗೆ ಕೆಡುಕಾಗದಿರಲೆಂದು ಅವನನ್ನು ದೂರವಿರಿಸಿ ಅಥವಾ ಕೊಂದು ಅಪಾಯದಿಂದ ಪಾರಾಗುತ್ತಿದ್ದರು. ಕುಷ್ಟರೋಗಿಗಳು ಬದುಕಿರುವಾಗಲೇ ಹೂಳುತ್ತಿದ್ದರಂತೆ. ಆಧುನಿಕ ಸಾವ‍ಜನಿಕ ಆರೋಗ್ಯ ರಕ್ಷಣಾ ಕಾಯಿದೆಗಳು ಸಮಾಜ ಶಾಸನಗಳು ಮತ್ತು ರೋಗನಿವಾರಕ ಉಪಾಯಗಳು ೧೯ನೆಯ ಶತಮಾನದಿಂದೀಚಿನ ವಿಜ್ಞಾನದ ಮುನ್ನಡೆಯಿಂದ ಹುಟ್ಟಿ ಬೆಳೆದು ಸ್ಥಾಪಿತವಾಗುತ್ತಿವೆ. ಭಾರತದ ಸಂಸ್ಖೃತಿಯ ಇತಿಹಾಸದಲ್ಲಂತೂ ಜನಾರೋಗ್ಯ, ನೆಮ್ಮದಿ ಮುಖ್ಯಸ್ಥಾನ ಗಳಿಸಿದ್ದುವು ೨೫ ಶತಮಾನಗಳ ಹಿಂದೆಯೇ ಹರಪ್ಪ ಮತ್ತು ಮೊಹೆಂಜೋದಾರೊಗಳ ಪಂಡಿತರಿಗೆ ಚರಂಡಿಯ ವ್ಯವಸ್ಥಯು ಜನಾರೋಗ್ಯ ರಕ್ಷಣೆಗೆ ಮುಖ್ಯವೆಂಬುದು ತಿಳಿದಿತ್ತು. ಆಧುನಿಕ ವೈದ್ಯವಿಜ್ಞಾನ ಪಿತಾಮಹ ಹಿಪೊಕ್ರೆಟಿಸ್ ಹುಟ್ಟುವ ಎಷ್ಟೋ ಕಾಲದ ಮೊದಲೇ, ಅಂದರೆ ವೇದಗಳ ಕಾಲದಲ್ಲಿಯೇ, ಹಿಂದುಗಳು ನೈಮ‍ಲ್ಯದ ಮಹತ್ವ ಅರಿತಿದ್ದರು. ಆಯುವೇದದ ಚರಕ ಸಂಹಿತೆ ಸುಶ್ರುತಸಂಹಿತೆಗಳಲ್ಲಿ ಆರೋಗ್ಯಶಾಸ್ತ್ರಕ್ಕೆ ಬೇರೆ ಅಧ್ಯಾಯವೇ ಮುಡಿಪಾಗಿದೆ. ಸುಶ್ರುತ ಸಂಹಿತೆಗಳಲ್ಲಿ ಆರೋಗ್ಯಶಾಸ್ತ್ರಕ್ಕೆ ಬೇರೆ ಅಧ್ಯಾಯವೇ ಮುಡಿಪಾಗಿದೆ. ಸುಶ್ರುತ ಸಂಹಿತೆಯಲ್ಲಿ ಆರೋಗ್ಯರಕ್ಷಣೆಯಲ್ಲಿ ನೀರು ಆಹಾರಗಳ ಪಾತ್ರ ಉಲ್ಲೇಖಿಸಿದೆ. ಮಹಾಭಾರತದ ಏಳನೆಯ ಅಧ್ಯಾಯದಲ್ಲಿ (ಪ್ರ.ಶ.ಪೂ. ೬೦೦) ನೊಣ, ಕಾಗೆ, ಹದ್ದುಗಳ ಉಪದ್ರವ ಮುಂಬರುವ ವಾಂತಿ, ಭೇದಿ, ಸಾಂಕ್ರಾಮಿಕದ ಸೂಚನೆ ಎಂದಿದೆ. ಕೌಟಿಲ್ಯನ ಅಥ‍ಶಾಸ್ತ್ರದಲ್ಲಿ (ಪ್ರ.ಶ.ಪೂ. ೩೫೦), ಸೈನ್ಯಗಳು ಬೀಡು ಬೀಡುವ ಜಾಗಗಳನ್ನು ರಕ್ಷಣೆಗೆ ನೆರಳಿನ ಮರ, ಇವನ್ನೆಲ್ಲ ಗಮನಿಸಬೇಕೆಂದಿದೆ. ನೀರು ಸಿಗದ ಕಡೆಗಳಲ್ಲಿ, ಶುಭ್ರವಾದ ನೀರನ್ನು ಗಾಡಿಗಳಲ್ಲಿ ಸಾಕಷ್ಟು ಒಯ್ಯಬೇಕು. ಇಲ್ಲದಿದ್ದರೆ ಕೊಳಕು, ನೀರಿನಿಂದ ರೋಗಕ್ಕೆ ತುತ್ತಾಗಬೇಕಾಗುತ್ತದೆ ಎಂದಿದೆ. ರೋಮಿನ ಜೂಲಿಯಸ್ ಸೀಸರ್ ತನ್ನ ಸೈನ್ಯದ ದೈಹಿಕ ಪುಷ್ಠಿ ಅದರಲ್ಲೂ ದಿನವೂ ಸ್ನಾನ, ಬೀಡಿನ ನೈಮ‍ಲ್ಯದ ಕಡೆ ಗಮನಕೊಡುತ್ತಿದ್ದನಂತೆ. ಇಂಗ್ಲೆಂಡಿನ ಮಾಲ್‍ಬರೋ ಡ್ಯೂಕ್ ತನ್ನ ಸೈನಿಕರ ಉಡುಪು ಆಹಾರಗಳಿಗೆ ಬಹಳ ಮಹತ್ತ್ವ ಕೊಡುತ್ತಿದ್ದ. ಕಾಯಿಲೆ ಬರದಂತೆ ನೋಡಿಕೊಳ್ಳುತ್ತಿದ್ದೆ. ಹೀಗೆ ಯಾವುದಾದರೂ ಒಂದು ನಡವಳಿಕೆ ಆರೋಗ್ಯ ದೃಷ್ಟಿಯಿಂದ ಅತ್ಯಗತ್ಯವೆಂದೆನಿಸಿದರೆ ಅದನ್ನು ಸಾವ‍ಜನಿಕ ಹಿತದೃಷ್ಟಿಯಿಂದ ಕಾನೂನಾಗಿ ಆಚರಣೆಗೆ ತರುವುದು ಸಮಾಜದ ಹೊಣೆ, ಕೇವಲ ರೋಗಿಗಳ ಬೇಪ‍ಡಿಕೆ, ಆರೋಗ್ಯ ನೈಮ‍ಲ್ಯದ ನಿಯಮಗಳ ಪಾಲನೆ ಹಿಂದಿನಿಂದಲೂ ಬಂದಿದೆ. ಈ ನಿಯಮಗಳು ಸಮಾಜದ ಒಳಿತಿಗೆ ಬೇಕೇಬೇಕೆನಿಸಿದಾಗ ಕಾಯಿದೆಗಳಾಗುತ್ತಿದ್ದುವು. ಹಲವು ವೇಳೆ ಕಾಯಿದೆಯಾಗಿ ಅಲ್ಲದಿದ್ದರೂ ನಿಯಮಗಳು ಸಂಪ್ರದಾಯವಾಗೋ ಧಮ‍ನಿಷ್ಠೆಯಾಗೋ ಆಚರಣೆಗೆ ಬರುತ್ತಿದ್ದುವು. ಆರೋಗ್ಯ, ಸುರಕ್ಷಣಾ ಕಾಯಿದೆಗಳ ಮೂಲ ಉದ್ದೇಶಗಳಲ್ಲಿ ಸಮಾಜದ ವ್ಯವಸ್ಥೆ, ಶಾಂತಿ ನೆಲೆಸಿಕೆ, ಜನಬಲದ ಸಂಘಟನೆ, ಹೊಲಸು ಕೆಲಸಗಳಿಗೆ ಎದೆಗೊಡದಿರುವುದು ಮುಖ್ಯವಾದುವು. ಈ ಕಾಯಿದೆಗಳು ಆಧುನಿಕ ಪೋಲೀಸ್ ಇಲಾಖೆಯ ಕಾಯಾ‍ಚರಣೆಯ ಮುನ್ಸೂಚಕಗಳೆಂದು ಹೇಳಬಹುದು. ಆರೋಗ್ಯ ಮತ್ತು ಕ್ಷೇಮರಕ್ಷಣಾ ಕಾಯಿದೆಗಳು ಚರಿತ್ರೆ ಮುಖ್ಯವಾಗಿ ಜಾತಿ, ಧಮ‍ಗಳ, ರಾಜಕೀಯ, ಆಥಿ‍ಕ ವಿಜ್ಞಾನದ ಪ್ರಭಾವಗಳಿಗೆ ಈಡಾಗಿದೆ. ಸಮಾಜ ಜೀವನದ ಆರೋಗ್ಯ ಸಮಸ್ಯೆಗಳನ್ನು ಅಂದರೆ ಸಾಂಕ್ರಾಮಿಕ ಚಾಡ್ಯಗಳದಿಂದಾಗಿ ಸತ್ತಿದ್ದರೆ, ಈ ಸಂಪ್ರದಾಯದಿಂದ ಮತ್ತೊಬ್ಬರಿಗೆ ರೋಗ ಹರಡುವ ಸಂಭವ ಕಡಿಮೆ. ೧೫ ದಿನವಸಗಳಿಗೊಂದಾವತಿ‍ ಏಕಾದಶಿ ಉಪವಾಸ, ಹಬ್ಬ ಹುಣ್ಣಿಮೆಗಳಲ್ಲಿ ಊಟಕ್ಕೆ ಬಡಿಸಬೇಕಾದ ಸಮತೂಕದ ಆಹಾರ, ದಿನಂಪ್ರತಿ ಸ್ನಾನ, ಶುಭ್ರವಾದ ಬಟ್ಟೆ ಹಾಕಿಕೊಳ್ಳುವುದು ಇವೆಲ್ಲ ನಿತ್ಯಕಮ‌ಗಳು. ಚಿಕ್ಕಪ್ಪ, ದೊಡ್ಡಪ್ಪ, ಅಣ್ಣ ತಂಗಿಯರ ಮಕ್ಕಳು, ಸ್ವಗೋತ್ರದವರು, ಹತ್ತಿರ ಸಂಬಂಧಿಗಳ ನಡುವೆ ವಿವಾಹಗಳು ನಿಷಿದ್ಧ. ಇವುಗಳ ನಡುವೆ ಅನುವಂಶಿಕವಾಗಿ ಬರುವ ಕುಂದುಗಳು, ದುಬ‌ಲತೆ, ರೋಗಗಳನ್ನು ತಡೆಗಟ್ಟುವ ಮುಂಜಾಗ್ರತೆಯ ಕ್ರಮಗಳು. ಹೀಗೆ ಇನ್ನೂ ಅನೇಕ ಸಂಪ್ರದಾಯಗಳು ರೂಢಿಯಲ್ಲಿವೆ. ಪಾಶ್ಚಿಮಾತ್ಯರಲ್ಲಿಯೂ ಬಹಳ ಹಿಂದಿನ ಕಾಲದಲ್ಲಿ ಚಚೆಗೂ, ರಾಜ್ಯಾಡಳಿತ ಕಾರುಬಾರುಗಳಿಗೂ ನಿಕಟ ಸಂಬಂಧವಿದ್ದೇ ಇತ್ತು. ಅನೇಕ ಶತಮಾನಗಳ ತನಕ ವಿದ್ಯಾವಂತರೆಲ್ಲರೂ ಚಚಿ‍ಗೆ ಸಂಬಂಧಿಸಿದವರೇ ಆಗಿದ್ದರು; ಅಂದರೆ ಜ್ಞಾನ, ವಿಜ್ಞಾನ ಚಚಿ‍ನ ಹತೋಟಿಯಲ್ಲಿತ್ತು ಯುರೋಪಿನಲ್ಲಿ ನಡೆದ ಸುಧಾರಣೆಯ ಅನಂತರವೇ ಚಚಿ‍ಸನ ಹತೋಟಿಯಲ್ಲಿತ್ತು ಯುರೋಪಿನಲ್ಲಿ ನಡೆದ ಸುಧಾರಣೆಯ ಅನಂತರವೇ ಚಚಿ‍ನ ಹತೋಟಿಯಲ್ಲಿತ್ತು ಯುರೋಪಿನಲ್ಲಿ ನಡೆದ ಸುಧಾರಣೆಯ ಅನಂತರವೇ ಚಚಿ‍ನ ನಿಕಟ ಸಂಬಂಧ ದೂರವಾದುದು. ಕಾಲರ, ಪ್ಲೇಗು, ಸಿಡುಬುಗಳ ಉಪದ್ರವಗಳು ದೇವರ ಶಾಪವೆಂಬ ನಂಬಿಕೆಗಳು ಜನಾರೋಗ್ಯ, ಸಾಮಾಜಿಕ ಸುಧಾರಣೆಗಳಿಗೆ ಆಚರಣೆಗಳು. ೧೯-೨೦ನೆಯ ಶತಮಾನದ ಕೈಗಾರಿಕಾ ಆಂದೋಲನ ಆದಮೇಲೆ ಜನಾರೋಗ್ಯ, ನೈಮ‍ಲ್ಯಗಳಿಗೆ ಅಧಿಕೃತ ಮನ್ನಣೆ ದೊರೆತಿದೆ. ಪ್ರ.ಶ.ಪೂ.೫೦೦೧-೫೦೦ರ ಕಾಲದಲ್ಲಿ ಆರೋಗ್ಯ, ನೈಮ‍ಲ್ಯಗಲ ಮಟ್ಟಿ ಇಳಿಯಿತು. ಗ್ರೀಕ್ ಜನರ ನೈಮಲ್ಯ ರೋಮ್ ಜನಾರೋಗ್ಯ ನೈಮ‍ಲ್ಯ ಆಧುನಿಕ ಕಾನೂನುಗಳಿಗೆ ತಳಹದಿ. ಗ್ರೀಸಿನಲ್ಲಿ ಪ್ರ.ಶ.ಪೂ. ೨೧೦೦-೧೭೦೦ರ ಹೊತ್ತಿಗೆ ಸ್ನಾನದಮನೆ ಹಾಗೂ ಸಾವ‍ಜನಿಕ ಕಚರ ವಿಲೇವಾರಿ ವ್ಯವಸ್ಥೆ ಇತ್ತು. ಗ್ರೀಕರು ಆರೋಗ್ಯ ನಿಯಮಗಳನ್ನೂ ಸೂತ್ರಗಳನ್ನೂ ಜಾರಿಗೆ ತಂದರಲ್ಲದೆ, ವಾತಾವರಣಕ್ಕೂ ರೋಗೋತ್ಪತ್ತಿಗೂ ಇರುವ ನಿಕಟಸಂಬಂಧ ಅರಿತಿದ್ದರು. ಗಾಳಿ, ನೀರು ಮತ್ತು ಸ್ಥಳ ಮಹಾತ್ಮೆ ಎಂಬ ಹಿಫ್ಫಕ್ರೆಟಿಸ್ನ ಗ್ರಂಥವನ್ನು ಇಲ್ಲಿ ಉದ್ದೇಖಿಸಬಹುದು. ರೋಮ್ ದೇಶದವರು ಮಲೇರಿಯ ರೋಗ ಚೌಗುಪ್ರದೇಶದ ಕೆಟ್ಟ ಗಾಳಿಯಿಂದ ಬರುತ್ತದೆಂದುಕೊಂಡಿದ್ದರು. ರೋಗಕಾರಕ ಧೂಳನ್ನು ಕೆಲಸಗಾರರಿಗೆ ಸೇರಿದಂತೆ ಉಸಿರಾಟಿಕಗಳನ್ನು ಅಣಿಮಾಡಿದ್ದರು. ೨ನೆಯ ಶತಮಾನದಲ್ಲಿ ಸಾವ‍ಜನಿಕ ವೈದ್ಯಸೇವಾ ವ್ಯವಸ್ಥೇ ಇತ್ತು. ಒಳಚರಂಡಿ, ಕುಡಿಯುವ ನೀರನ್ನು ಸಾಗಿಸಲು ನೀಗಾ‍ಲುವೆಗಳನ್ನು ಕಟ್ಟಿದ್ದರು. ಆಸ್ಪತ್ರೆಗಳು ಸ್ಥಾಪಿತವಾದುವು. ಟೈಬರ್ ನದಿಯ ಕಾಲುವೆಗಳ ನೀರನ್ನು ಕೊಳಕು ಮಾಡದಂತೆ ಕಾಯಲು, ಒಳಚರಂಡಿಗಳನ್ನೂ ಮಲಮೂತ್ರ ವಿಲೇವಾರಿಯನ್ನೂ ಯಶಸ್ವಿಯಾಗಿ ಆಗುವಂತೆ ಮೇಲ್ವಿಚಾರಣೆ, ಹೊಲಸು ಆಹಾರ ಪದಾಥ‌ಗಳನ್ನು ಮಾರದಂತೆ ಹಾಗೂ ಅವುಗಳನ್ನು ನಾಶಮಾಡಲು ಸಿಬ್ಬಂದಿ, ಅಳತೆ ತೂಕದಲ್ಲಿ ಮೋಸ ನಡೆಯದಂತೆ ಮೇಲ್ಚಿಚಾರಣೆ, ಸಾವ‍ಜನಿಕ ಸ್ನಾನಗೃಹಗಳಲ್ಲಿ, ವೇಶ್ಯಾಗೃಹಗಳಲ್ಲಿ, ಸ್ಮಶಾನಗಳಲ್ಲಿ ಮೇಲ್ಚಿಚಾರಕರು ಇರುತ್ತಿದ್ದರು. ಬಿಜಾರಿಯಮ್ ನಲ್ಲಿ ೫೩೨ರಲ್ಲಿ ಬಂದ ಅತ ಭೀಕರ ಫ್ಲೇಗ್ ಸಾಂಕ್ರಾಮಿಕ ಕಾಲದಲ್ಲಿ ಒಂದನೆಯ ಜಸ್ಟಿನಿಯನ್ ಫ್ಲೇಗ್ ರೋಗಿಯನ್ನು ಮುಟ್ಟಿಕೊಂಡಿದ್ದವರನ್ನು ಬಲಾತ್ಕಾರವಾಗಿ ಹೊರಗಿಟ್ಟಿರುತ್ತಿದ್ದ. ನಗರದೊಳಗೆ ಕಾನೂನುಬದ್ಧ ಪರವಾನಗಿ ಉಳ್ಳವರಿಗೆ ಮಾತ್ರ ಪ್ರವೇಶವಿತ್ತು. ರೋಮ್ ಮತ್ತು ಗ್ರೀಸ್ ಸಂಸ್ಕೃತಿಗಳು ನಾಕವಾದಂತೆಲ್ಲ ಜನಾರೋಗ್ಯ ಸುರಕ್ಷಣೆ ಸೂತ್ರಗಳು ಸಡಿಲವಾಗಿ ಹೋದುವು. ಆಮೇಲೆ ಬಿಜಾಂಟಿಯಮ್ ಸಾಂಸ್ಕೃತಿಕ ಕೇಂದ್ರವಾಯಿತು. ಗ್ರೀಸ್, ರೋಮ್ ದೇಶಗಳ ವೈದ್ಯವಿಜ್ಞಾನ ಭಂಡಾರ ಅರಬ್ಬೀ ದೇಶಕ್ಕೆ ಬಂದಿತು. ಪಾಶ್ಚಿಮಾತ್ಯರಲ್ಲಿ ಆ ಕಾಲದಲ್ಲಿ ವೈದ್ಯ ಇನ್ನೂ ಮೋಡಿ, ಮಂತ್ರ, ತಂತ್ರಗಳ ಮಟ್ಟದಲ್ಲೇ ಇತ್ತು. ಅಲ್ಲಲ್ಲಿ ಕೆಲವೆಡೆಗಳಲ್ಲಿ ಶುದ್ಧ ನೀರಿನ ಸರಬರಾಜು, ಒಳ್ಳೆ ಗಾಳಿ ಬೆಳಕಿರುವ ವಸತಿಗಳು ಅವನ್ನು ಬೆಚ್ಚಗಿಡುವ ವ್ಯವಸ್ಥೆಗಳಿದ್ದುವು. ಇದು ಎಲ್ಲರಿಗೂ ನಿಲುಕದ ಸೌಲಭ್ಯ. ಜನರನ್ನು ರೋಗದಿಂದ ರಕ್ಸಿಸುವುದೂ ಅವರಿಗೆ ಸಾಕಷ್ಟು ಕುಡಿಯುವ ನೀರನ್ನು ಒದಿಗಿಸುವುದೂ ಕಷ್ಟವಾಗಿದ್ದುವು. ಚಮ‍ ಹದಮಾಡುವ, ಬಣ್ಣದ ಕಾಖಾ‍ನೆಗಳಿಂದ ಬರುವ ಕೆಟ್ಟ ನೀರನ್ನು ಕುಡಿಯುವ ನೀರೊದಗಿಸುವ ನದಿಗಳಿಗೆ ಬಿಡಲು ಅವಕಾಶವಿರಲಿಲ್ಲ.