ಪುಟ:Mysore-University-Encyclopaedia-Vol-1-Part-3.pdf/೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮತ್ತು ಪದರುಕಣಶಿಲೆಗಳಿಂದ ಕೂಡಿದೆ. ಕರ್ನಾಟದಲ್ಲಿ ಧಾರವಾಡ ವರ್ಗವನ್ನು ಮೇಲು ಮಧ್ಯ ಮತ್ತು ತಳಭಾಗಗಳೆಂದು 3 ವಿಭಾಗಗಳಾಗಿ ವಿಂಗಡಿಸಿದೆ. ಸೂಕ್ಷ್ಮವಾಗಿ ಮೇಲೆ ವಿವರಿಸಿರುವ ಕರ್ನಾಟಕ ರಾಜ್ಯದ ಆರ್ಷೇಯ ಶಿಲಾಸ್ತೋಮಗಳನ್ನು ಸ್ವಲ್ಪ ಹೆಚ್ಚು ಕಡಿಮೆ ಹೋಲುವ ಆರ್ಷೇಯ ಶಿಲಾಸಮೂಹಗಳು ರಾಜಸ್ತಾನದ ಕೆಲವೆಡೆಗಳಲ್ಲಿವೆ. ಅಲ್ಲಿನ ಪದರು ಶಿಲಾಸ್ತೋಮದ ಹೆಸರು ಅರಾವಳೀ ವರ್ಗ.ಈ ಪದರುಶಿಲೆಗಳ ತಳದಲ್ಲಿರುವ ಕಣಶಿಲೆ ಮತ್ತು ಶೀಣಿಕಲ್ಲುಗಳನ್ನು ಪಟ್ಟೆ ಆಕೃತಿಯ ನೈಸ್ ಮತ್ತು ಬುಂದೇಲ್ ಖಂಡ ನೈಸ್ ಎಂದು ಕರೆದಿದೆ. ಇವು ಮುಖ್ಯವಾಗಿ ಜೇಡಿಮಣ್ಣಿನ ರೂಪಾಂತರಗಳು. ಇವುಗಳೊಂದಿಗೆ ಬೆಣಚು ಪದರುಶಿಲೆಗಳು ರೂಪಾಂತರಿಸಿದ ಸುಣ‍್ಣಕಲ್ಲುಗಳು ಮತ್ತು ಇತರ ವಿಧದ ಪ್ರಸ್ತರೀ ಶಿಲೆಗಳೂ ಸೇರಿವೆ.

ಮಧ್ಯಪ್ರದೇಶದಲ್ಲಿ ಪದರಶಿಲಾಸ್ತೋಮಗಳು ಪೂರ್ವ-ಈಶಾನ್ಯ,ಪಶ್ಚಿಮ-ನೈಋತ್ಯ ಮುಖವಾಗಿ ಹರಡಿವೆ. ಈ ಶಿಲಾಸ್ತೋಮಗಳನ್ನು ಪಶ್ಚಿಮ ಭಾಗದಲ್ಲಿ ಸಾಸರ್ ಮತ್ತು ಸಕೋಲಿ ಶ್ರೇಣಿಗಳೆಂದೂ ಪೂರ್ವಭಾಗದಲ್ಲಿ ಸೋಣವಾಣಿ ಮತ್ತು ಚೆಲ್ಪಿಘಟ್ಟಶ್ರೇಣಿಗಳು ಎಂದೂ ಕರೆದಿದೆ. ಇದು ಉತ್ತರದ ಮತ್ತು ದಕ್ಷಿಣದ ಎರಡು ಪಟ್ಟೆಗಳಾಗಿ ವಿಭಾಗವಾಗಿದೆ. ಉತ್ತರ ಪಟ್ಟೆ ನಾಗಪುರ,ಚಿಂದವಾರ ಮತ್ತು ಬಾಲಘಾಟಿ ಜಿಲ್ಲೆಗಳಲ್ಲಿ ಪ್ರಸರಿಸಿರುತ್ತದೆಯಲ್ಲೆ ಅದು ಇಲ್ಲಿ ಹೆಚ್ಚು ರೂಪಾಂತರಿಸಿದ ಸಾಸರ್ ಮತ್ತು ಸಕೋಲೆ ಶ್ರೇಣಿಗಳೆರಡನ್ನೂ ಒಳಗೊಂಡು, ನಾಗಪುರ ಮತ್ತು ಭಂಡಾರ ಜಿಲ್ಲೆಗಳ ದಕ್ಷಿಣಭಾಗದಲ್ಲಿ ಪ್ರಸರಿಸಿದೆ. ಈ ಪ್ರದೇಶದಲ್ಲಿ ಪದರುಶಿಲಾ ಶ್ರೇಣಿಗಳು ಹೆಚ್ಚು ರೂಪಾಂರಿಸಿಲ್ಲ. ಕಣಶಿಲೆ ಮತ್ತು ಶೀಣಿಕಲ್ಲುಗಳನ್ನು ಹಿರಿಯ ಪಟ್ಟೆರೂಪದ ನೈಸ್ ಗಳೆಂದೂ ಕಿರಿಯ ಆಮ್ಲ ಕಣಶಿಲೆಗಳೆಂದೂ ಎರಡು ಗುಂಪಾಗಿ ವಿಭಾಗಿಸಿದೆ. ಮಧ್ಯಪ್ರದೇಶದ ಉತ್ತರ ಮತ್ತು ದಕ್ಷಿಣ ವಿಭಾಗದ ಪದರ ಶಿಲಾಪಟ್ಟೆಗಳು ಪೂರ್ವಾಭಿಮುಖವಾಗಿ ಬಿಹಾರ ಮತ್ತು ಉತ್ತರ ಪ್ರದೇಶಗಳಲ್ಲಿ ಮುಂದುವರಿದಿವೆ.ಉತ್ತರ ವಿಭಾಗದ ಪಟ್ಟೆಗೆ ಶೋಣಾದಿನದಿ ಕಣಿವೆಯ ಮತ್ತು ಹಜಾರಿಬಾಗ ಗಯಾಮಾಮಫಿರ್ ಪ್ರದೇಶಗಳ ಬಾಹ್ಯಶಿಲಾಸ್ತರಗಳು ಸೇರಿವೆ. ದಕ್ಷಿಣ ವಿಭಾಗದ ಪಟ್ಟೆಯ ಪೂರ್ವಾಭಿಮುಖ ಮುಂದೆಳೆಯಲ್ಲಿ ಸಿಂಗಭೂಮ್ ಕಿಯೋಂಝಾರ್ ಬೊನಾಯ್ ಮಯೂರ್ ಬಂಜ್ ಪ್ರದೇಶಗಳ ಆರ್ಷೇಯ ಶಿಲಾಸ್ತೋಮಗಳಿವೆ. ಇವುಗಳನ್ನು ಕೊಲಾನ್ಶ‍್ರೇಣಿ, ಕಬ್ಬಿಣ ಅದಿರು ಶ‍್ರೇಣಿ ಮತ್ತು ಪ್ರಾಚೀನ ರೂಪಾಂತರ ಶಿಲೆಗಳು ಎಂದು ಮೂರು ವಿಭಾಗಮಾಡಿದೆ. ಇವುಗಳಲ್ಲಿ ಪ್ರಾಚೀನ ರೂಪಾಂತರ ಶಿಲಾಸ್ತೋಮ ಅತ್ಯಂತ ಹಿರಿಯದು. ಈ ಪ್ರದೇಶ ಕಣಶಿಲೆ ಮತ್ತು ಕಣಶಿಲಾರೂಪದ ಶೀಣಿಕಲ್ಲುಗಳು (ಡೋಮ್ ನೈಸ್)ಮತ್ತು ಛೋಟಾನಾಗಪುರ ಕಣಶಿಲಾ ನೈಸ್ ಎಂದು ಎರಡು ವಿಭಾಗಗಳಾಗಿ ಹೆಸರುಗೊಂಡಿವೆ ಇಲ್ಲಿನ ರಾಂಚಿ ಕಣಶಿಲೆಗಳು ಉತ್ತರ ಮತ್ತು ದಕ್ಷಿಣ ಪದರುಶಿಲಾಪಟ್ಟೆಗಳ ಮಧ್ಯದಲ್ಲಿ ಹೊರಬಂದು ಅವುಗಳನ್ನು ಪ್ರತ್ಯೇಕಿಸಿರುತ್ತದೆ. ಪೂರ್ವಘಟ್ಟಗಳ ಆರ್ಷೇಯ ಶಿಲಾಸ್ತೋಮಗಳು ಹೆಚ್ಚು ರೂಪಾಂತರಿಸಿದ ಪದರುಶಿಲೆಗಳನ್ನು ಒಳಗೊಂಡಿವೆ. ಈ ಶಿಲಾಸ್ತೋಮದ ಹೆಸರು ಖಾಂಡ್ ಲೈಟ್ಸ, ಹೈಪರ್ ಸ್ತೀನ್ ಗ್ರಾನುಲೈಟ್ ಅಥವಾ ಚಾರಕೈಟ್ ಎಂಬ ಶಿಲೆಗಳಿಂದಲೂ ಮತ್ತು ಕೆಲವು ಪದರುಶಿಲೆಗಳ (ಕ್ವಾಟ್ ಸೈಟ್ಸ) ಗುಂಪಿಗೆ ಸೇರಿ ಸಿಲಿನುನೈಟ್, ಗ್ರಾಫೈಟ್ ಗಾರೆಟ್ಸ ಮತ್ತು ಕಲ್ಮಷ ಮರಳು ಕಲ್ಲುಗಳು ಒಳಗೊಂಡಿವೆ.ಇವು ಅರಾವಳೀ ಪದರುಶಿಲೆಗಳಂತೆ ಘಟ್ಟಪ್ರದೇಶದ ಪೂರ್ವಭಾಗದಲ್ಲಿ ಈಶಾನ್ಯ ನೈಋತ್ಯಾಭಿಮುಖವಾಗಿವೆ;ಅದಕ್ಕೆ ಪಶ್ಚಿಮಭಾಗದಲ್ಲಿ ವಾಯುವ್ಯ ಆಗ್ನೇಯಾಭಿಮುಖವಾಗಿ ಹರಡಿವೆ.ಇತರ ಆರ್ಷೇಯ ಪ್ರದೇಶಗಳಂತೆ ಇಲ್ಲಿಯ ಪದರುಶಿಲೆಗಳೂ ಕಣಶಿಲೆ ಮತ್ತು ಶೀಣಿಕಲ್ಲುಗಳೊಂದಿಗೆ ಕೂಡಿವೆ. ಮೇಲೆ ಸೂಕ್ಷ್ಮವಾಗಿ ವಿವರಿಸಿರುವ ಖಾಂಡಲೈಟ್ ಪದರುಶಿಲೆಗಳು ನೈಋತ್ಯಾಭಿಮುಖವಾಗಿ ಮುಂದುವರಿದು ಆಂಧ್ರಪ್ರದೇಶದ ಪೂರ್ವಘಟ್ಟಗಳಲ್ಲಿ ಇದುವರೆಗೆ ಬೇರೆ ಹೆಸರಿನಿಂದ ಕರೆಯಲ್ಪಟ್ಟಿದ್ದ ಬೆಜವಾಡ ನೈಸ್ ಆಗಿ ಪರಿಣಮಿಸಿವೆ. ಇವುಗಳೊಂದಿಗೆ ಕಣಶಿಲೆಗಳು,ಶೀಣಿಕಲ್ಲುಗಳು ಮತ್ತು ಪೆಗ್ಮಟೈಟ್ ಗಳು ಬೆರೆತಿವೆ. ಅವುಗಳನ್ನು ಸಾಧಾರಣವಾಗಿ ನೆಲ್ಲೂರು ಪೆಗ್ಮಟೈಟ್ ಎಂದು ಕರೆಯುವುದು ರೂಢಿ. ಮೇಲೆ ವಿವರಿಸಿರುವ ಬೇರೆ ಬೇರೆ ಆರ್ಷೇಯ ಪ್ರದೇಶಗಳ ಪದರುಶಿಲೆಗಳನ್ನೂ ಅವುಗಳೊಂದಿಗಿರುವ ಕಣಶಿಲೆ ಮತ್ತು ಶೀಣಿಕಲ್ಲುಗಳನ್ನೂ ವಿಭಾಗಿಸಿ ಒಂದು ಪ್ರದೇಶದ ಆರ್ಷೇಯ ಶಿಲೆಗಳನ್ನು ಮತ್ತೊಂದು ಪ್ರದೇಶದ ಆರ್ಷೇಯ ಶಿಲೆಗಳೊಂದಿಗೆ ಪರಸ್ಪರ ಸಂಬಂಧ ಏರ್ಪಡಿಸಿ ಸರಿತೂಗಿಸುವುದು ಈಗಿರುವ ಖಚಿತ ಪ್ರಮಾಣಗಳ ಅಭಾವದಿಂದ ಕಷ್ಟತರವಾಗಿದೆ. 1936ರಲ್ಲಿ ಫರ್ಮನ್ ಭಾರತ ಪ್ರದೇಶಗಳ ಪದರುಶಿಲೆಗಳ ಪರಸ್ಪರ ಸಂಬಂಧವೇರ್ಪಡಿಸಲು 8 ವಿವಿಧ ಪ್ರಮಾಣದ ಆಧಾರಗಳಿಂದ ಪ್ರಯತ್ನಿಸಿದ. ಈ ಪ್ರಮಾಣಗಳಲ್ಲಿ ಶಿಲೋತ್ಪತ್ತಿಯ ಖಚಿತಕಾಲವನ್ನು ಕಂಡುಹಿಡಿಯಲು ಈಚೆಗೆ ಬಂದಿರುವ ವಿಕಿರಣ ನಿರ್ದಿಷ್ಟಕಾಲಮಾಪಕ ಪದ್ಧತಿಗಳೂ(ರೇಡಿಯೊಮೆಟ್ರಿಕ್ ಡಿಟರ್ಮಿನೇಷನ್ ಆಫ್ ಆಬ್ಸಲ್ಯೂಟ್ ಏಜಸ್) ಯುರೇನಿಯಂ ಮತ್ತು ಹೀಲಿಯಂ ಪದ್ಧತಿಗಳೂ ಸೇರಿವೆ. ಇವರ ಪ್ರಯತ್ನಗಳಲ್ಲದೆ ಇನ್ನೂ ಅನೇಕ ಭೂವಿಜ್ಞಾನಿಗಳು ಆರ್ಷೇಯ ಶಿಲೆಗಳ ಪರಸ್ಪರ ಸಂಬಂಧವೇರ್ಪಡಿಸಲು ಪ್ರಯತ್ನಪಟ್ಟಿರುತ್ತಾರೆ. ಆದರೂ ಅವರ ಹೇಳಿಕೆಗಳಲ್ಲಿ ಇನ್ನೂ ಭಿನ್ನಾಭಿಪ್ರಾಯಗಳಿರುವುದರಿಂದ ಈ ಶಿಲಾಸ್ತೋಮಗಳ ಪರಸ್ಪರ ಸಂಬಂಧವನ್ನು ಇದುವರೆಗೆ ಏರ್ಪಡಿಸಿರುವುದು ನಿರ್ದಿಷ್ಟವಾಗಿಲ್ಲವಾಗಿ ಈ ಹೇಳಿಕೆಗಳನ್ನು ನಿಸ್ಸಂದೇಹವಾಗಿ ಆಂಗೀಕರಿಸಲಾಗಿಲ್ಲ.