ಪುಟ:Mysore-University-Encyclopaedia-Vol-1-Part-3.pdf/೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಿವಿಧ ಪ್ರದೇಶಗಳಲ್ಲಿ ಕಂಡುಬರುವ ಕೇಂಬ್ರಿಯನ್ ಶಿಲಾವರ್ಗಕ್ಕಿಂತ ಹಿಂದಿನ ಶಿಲಾವರ್ಗಗಳನ್ನು ಸ್ಥೂಲವಾಗಿ ಪರಸ್ಪರ ರ್ಸಂಬಂಧಗಳನ್ನು ಏಪ‌ಡಿಸಲು ಅಥವಾ ತಿಳಿಯಲು ಪ್ರೀಕೇಂಬ್ರಿಯನ್ ಶಿಲಾವರ್ಗಗಳೆನ್ನು ಅವುಗಳ ನಿರ್ದಿಷ್ಟ ಕಾಲವನ್ನನುಸರಿಸಿ 8 ತಂಡಗಳಾಗಿ ವಿಭಾಗಿಸಿ,ಸಮಂಜಸವಾಗಿ ಕಂಡುಬರುವ, ಎಲ್ಲ ಪ್ರದೇಶಗಳಲ್ಲಿಯೂ ಉಪಯೋಗಿಸಲಾಗುವ ಹೆಸರುಗಳನ್ನು ಕೊಡುವುದು ಸೂಕ್ತವೆಂದು ತೋರುವುದು. ಕಾಲಮಾನ (ದಶಲಕ್ಷ ದರ್ಷಗಳಲ್ಲಿ) ಸೂಚಿಸಿರುವ ಹೆಸರುಗಳು 600-800 ... ಆತಿಮೇಲಿನ ಪ್ರೀಕೇಂಬ್ರಿಯನ್ 800-1000 ... ಮೇಲಿನ ಪ್ರೀಕೇಂಬ್ರಿಯನ್

1000-1200 ... ಮಧ್ಯದ ಪ್ರೀಕೇಂಬ್ರಿಯನ್ 1200-1500 ... ತಳದ ಪ್ರೀಕೇಂಬ್ರಿಯನ್ 1500-1800 ... ಇಪಾರ್ಕಿಯನ್ 1800-2500 ... ಮೆಸಾರ್ಕಿಯೆನ್ 2500-3500 ... ಕ್ಯಾಟಾರ್ಕಿಯನ್ >3500 ... ಪ್ರೋಟೊಲಿಥಿಕ್ ಇಂಥ ವಿಭಾಗ ಕೃತಕ ಅಥವಾ ಅಸ್ವಾಭಾವಿಕ ಎಂದು ಕಂಡುಬರಬಹುದು. ಆದರೆ ಇದು ಕೇಂಬ್ರಿಯನ್ ವರ್ಗದ ಹಿಂದಿನ ಎಲ್ಲ ಶಿಲಾವರ್ಗಗಳನ್ನೂ ಪ್ರೀಕೇಂಬ್ರಿಯನ್ ಎಂಬ ಒಂದೇ ಹೆಸರಿನಿಂದ ಕರೆಯುವ ಅಸಮಂಜಸ ಅಗತ್ಯವನ್ನು ತಪ್ಪಿಸುತ್ತದೆ. ಖನಿಜ ಸಂಪತ್ತು : ಆರ್ಥಿಕದೃಷ್ಟಿಯಿಂದ ಉಪಯುಕ್ತವಾದ ಅನೇಕ ಖನಿಜಗಳು ಆರ್ಷೇಯ ಶಿಲಾಸ್ತೋಮಗಳಲ್ಲಿವೆ.ಭಾರತದಲ್ಲಿ ಪದರು ಶಿಲಾಸ್ತೋಮ ಚಿನ್ನ,ಕಬ್ಬಿಣದ ಅದಿರು, ಮ್ಯಾಂಗನೀಸ್ ಅದಿರು,ಕ್ರೋಮೈಟ್, ತಾಮ್ರ, ಸೀಸ, ಸತು, ಪಾಷಾಣ ಮತ್ತು ಸುರಮ(ಅಂಟಿಮೊನಿ)ಅದಿರುಗಳನ್ನೂ ಲೋಹೇತರ ಖನಿಜಗಳಲ್ಲಿ ಕಲ್ಲಾರು,ಕುರಂದ(ಕೊರಾಂಡಮ್)ಗಾರೆಟ್ಸ ಅಥವಾ ಕೆಂಪು ಹರಳು, ಕಯನೈಟ್ ಮತ್ತು ಸಿಲಿಮನೈಟ್, ಸುಣ್ಣಕಲ್ಲು ಮತ್ತು ಅಮೃತಶಿಲೆ,ಶ್ವೇತ ಸುಧಾಶಿಲೆ (ಮ್ಯಾಗ್ನಸೈಟ್), ಖನಿಜವರ್ಣಗಳು (ಮಿನರಲ್ ಪಿಗಮೆಂಟ್ಸ), ಹೇಮಾಕ್ಷೀ (ಪೈರೈಟ್), ಬಳಪದ ಕಲ್ಲುಗಳು, ವರ್ಮಿಕ್ಯುಲೈಟ್ ಮುಂತಾದ ಅನೇಕ ಖನಿಜ ನಿಕ್ಷೇಪಗಳನ್ನು ಒಳಗೊಂಡಿದೆ. ಕಣಶಿಲೆ ಮತ್ತು ಶೀಣಿಕಲ್ಲುಗಳ ಪೆಗ್ಮಟೈಟ್ ಸಿರಗಳಲ್ಲಿ ಬೆಣಚು ಫೆಲ‍ಸ್ಟಾರ್ ಅಭ್ರಕ, ಬಿಳೀ ಜೇಚು,ಪಚ್ಚೆಕಲ್ಲು, ಮಾನಜೈಟ್, ಸಾಮರಸ್ಕೆಟ್ ಕೊಲಂಬೈಟ್ ಮತ್ತು ಇತರ ವಿಕಿರಣಶಕ್ತಿ ತೋರುವ ಅಪೂರ್ವ ಮೂಲಧಾತು ಖನಿಜಗಳಿರುತ್ತವೆ.(ನೋಡಿ - ಆದಿಜೀವಯುಗ; ಆಧುನಿಕ ಜೀವಯುಗ; ಯುಗ ಮತ್ತು ಕಲ್ಪ)

ಆರ್ಸಾನ್ವಾಲ್, ಜಾಕ್ ಆರ್ಸೇನ್ ದ್ : 1851-1940 ಫ್ರೆಂಚ್ ಭೌತವಿಜ್ಞಾನಿ. ಜನನ ಲಾಬೋರಿಯಲ್ಲಿ (1851). 1882ರ ವೇಳೆಗೆ ಈತ ಕಾಲೇಜ್ ದ ಫ್ರಾನ್ಸ ಎಂಬ ವಿದ್ಯಾಲಯದಲ್ಲಿ ಜೀವಭೌತವಿಜ್ಞಾನದ ಪ್ರಯೋಗಶಾಲೆಯ ಮುಖಂಡನಾಗಿ,1894ರಲ್ಲಿ ಪ್ರಾಧ್ಯಾಪಕನಾದ. ಭೌತವಿಜ್ಞಾಕ್ಕೆ ಈತ ಮಾಡಿದ ಮುಖ್ಯ ಉಪಕಾರ ಈತನ ಹೆಸರುಳ್ಳ ವಿದ್ಯುತ್ಪ್ರವಾಹಮಾಪಕದ ನಿರ್ಮಾಣ, ಇದರಲ್ಲಿ ಆಯಸ್ಕಾಂತ ಧ್ರುವಗಳ ಮಧ್ಯೆ ಒಂದು ಸಣ್ಣ ಕನ್ನಡಿಯನ್ನು ಸುರುಳಿಯ ಮುಖದಲ್ಲಿ ಸೇರಿಸಿರುತ್ತಾರೆ. ಇದಲ್ಲದೆ ಈತ ಹೆಚ್ಚು ಆವೃತ್ತಿಯ ಪರ್ಯಾಯ ವಿದ್ಯುತ್ಪ್ರವಾಹಗಳನ್ನು ವೈದ್ಯವಿಜ್ಞಾನದಲ್ಲಿ ಪ್ರಯೋಗಿಸಿ ದಾರ್ಸಾನ್ವಾಲೀಕರಣ ಎಂದು ಕರೆಯಲ್ಪಡುವ ವೈದ್ಯಮಾರ್ಗವನ್ನು ಕಂಡುಹಿಡಿದ; ಮತ್ತೆ ಕೆಲವು ಉಪಕರಣಗಳನ್ನೂ ನಿರ್ಮಿಸಿದ. ಆರ್ಸೆನಿಕ್ : ಒಂದು ಮೂಲವಸ್ತು. ತಾಳಕ ಪರ್ಯಾಯನಾಮ. ರಾಸಾಯನಿಕ ಚಿಹ್ನೆ As.ಪರಮಾಣು ಸಂಖ್ಯೆ33.ಪರಮಾಣು ತೂಕ 74.9216.ಬಹುಹಿಂದಿನಿಂದಲೂ ವಿಷವಸ್ತುವೆಂದು ತಿಳಿದಿದೆ. ಅನೇಕ ಸಂದರ್ಭಗಳಲ್ಲಿ ಸೇಡು ತೀರಿಸಿಕೊಳ್ಳುವ ಸಲುವಾಗಿ ಪ್ರಾಣಾಪಾಯ ಮಾಡಲು ಘೋರ ವಿಷವಾಗಿ ಪ್ರಯೋಗವಾಗಿರುವ ಕರಾಳ ಸ್ವರೂಪದ ರಾಸಾಯನಿಕ. ಇದು ಪ್ರಕೃತಿಯಲ್ಲಿ ಅಲ್ಪಾಂಶದಲ್ಲಿ ಪ್ರಸರಿಸಿರುವುದಾದರೂ ವಿಶೇಷವಾಗಿ ಗಂಧಕದೊಡನೆ ಸಂಯೋಜಿವಾಗಿ ಸಲ್ಫೆಡ್ ರೂಪದಲ್ಲಿ ದೊರೆಯುತ್ತದೆ. ಅವುಗಳಲ್ಲಿ ಕೆಂಪು ಬಣ‍್ಣವುಳ್ಳ (As2S2)ಮತ್ತು ಹಳದಿ ಬಣ್ನದ ಆರಿಮೆಂಟ್ (As2S3) ಮುಖ್ಯವಾದವು. ಇತರ ಅದಿರುಗಳು ಮಿಸ್ ಪಿಕೆಲ್ (FcAsS) ಮತ್ತು ಕೋಬಾಲ್ಟ ಗ್ಲಾನ್ಸ್(CoAsS). ಮೇಲ್ಕಂಡ ಯಾವ ಅದಿರನ್ನಾದರೂ, ವಾಯುರಹಿತವಾದ ಆವರಣದಲ್ಲಿ, ಚೆನ್ನಾಗಿ ಕಾಯಿಸಿದ್ದೇ ಆದರೆ, ಆರ್ಸೆನಿಕ್ ಶೇಖರಣೆಯಾಗುತ್ತದೆ. ಗಾಳಿಯ ಸಂಪರ್ಕದೊಡನೆ ಮೇಲ್ಕಂಡ ಅದಿರುಗಳನ್ನು ಕಾಯಿಸಿದಲ್ಲಿ, ಬಿಳುಪಾದ. ಆರ್ಸೆನಿಕ್ ಆಕ್ಸೈಡ್ (As2O3)ದೊರೆಯುತ್ತದೆ. ಇದನ್ನು ಇದ್ದಿಲ್ಲುಪುಡಿಯೊಡನೆ ಮಿಶ್ರಮಾಡಿ ಕಾಯಿಸುವುದರಿಂದ ಆರ್ಸೆನಿಕ್ ಅನಿಲರೂಪದಲ್ಲಿ ಬಿಡುಗಡೆಯಾಗುತ್ತದೆ. ಇದನ್ನು ಘನರೂಪಕ್ಕೂ ತಂದುಕೊಳ್ಳಬಹುದು. ಆರ್ಸೆನಿಕ್ ಗಂಧಕದಂತೆ ಬಹುರೂಪತ್ವವನ್ನು ಹೊಂದಿರುವ ವಸ್ತು ಸಾಮಾನ್ಯವಾಗಿ ದೊರಕುವ ಲೋಹದ ಆರ್ಸೆನಿಕ್ ಕಂದು ಬಣ್ನದ ಪೆಡಸಾದ ಹರಳಿನ ರೂಪದ್ದು;ಮತ್ತು ಲೋಹಕ್ಕೆ ಸಹಜವಾದ ಮೆರುಗನ್ನು ಹೊಂದಿದೆ. ಒಳ್ಳೆಯ ವಿದ್ಯುತ್ ವಾಹಕ. ಕಾಯಿಸಿದಾಗ ಸುಮಾರು 800 ಸೆಂ.ಗ್ರೇ. ಮೇಲ್ಪಟ್ಟು ಶಾಖದಲ್ಲಿ ಇದು ನೇರವಾಗಿ ಆವಿಯಾಗುತ್ತದೆ.ನೀರು ಅಥವಾ ಇಂಗಾಲದ ಡೈಸಲ್ಫೈಡ್ ನಲ್ಲಿ(CS2)ಅದ್ರಾವ್ಯ ಸಾಮಾನ್ಯ ಉಷ್ಣತೆಯಲ್ಲಿ ಸ್ಥಿರ. ಇದನ್ನು r (ಗ್ಯಾಮ) ಬಹುರೂಪಿ ಎನ್ನಬಹುದು.ಪುಡಿಯ ರೂಪದಲ್ಲಿರುವ ಮತ್ತೊಂದು ಬಗೆಗೆ (ಬೀಟ) ಆರ್ಸೆನಿಕ್ ಎಂದೂ ಹಳದಿ ಬಣ್ಣದಲ್ಲಿರುವ ಬೇರೊಂದು ಬಗೆಗೆ (ಆಲ್ಫ) ಎಂದೂ ಕರೆದಿದೆ. ಈ ಎರಡು ಬಗೆಗೆಳೂ ಅಷ್ಟು ಸ್ಥಿರವಾಗಿರದೆ,r ರೂಪಕ್ಕೆ ಕ್ರಮೇಣ ಪರಿವರ್ತನೆ ಹೊಂದುತ್ತದೆ.ಎಲ್ಲ ಬಗೆಗಳೂ ಪ್ರಬಲ ವಿಷವಸ್ತುಗಳು.ಪ್ರಬಲ ನೈಟ್ರಿಕ್ ಆಮ್ಲ.ಆರ್ಸೆನಿಕ್ ನೊಡನೆ ವರ್ತಿಸಿ ಆರ್ಸೆನಿಕ್ ಆಮ್ಲ(H3AsO4) ಉತ್ಪತ್ತಿಯಾಗುತ್ತದೆ.ಕ್ಲೋರಿನ್ ಅನಿಲ ಸುಲಭವಾಗಿ ಆರ್ಸೆನೊಂದಿಗೆ ಸಂಯೋಗ ಹೊಂದಿ ಆರ್ಸೆನಿಕ್ ಕ್ಲೋರೈಡ್(AsCl3) ದೊರೆಯುವುದಲ್ಲದೆ, ಸರಿಯೋಗ ಸಂಬಂಧದಲ್ಲಿ ಉಂಟಾದ ಹೆಚ್ಚಿನ ಉಷ್ಣ ಕಿಡಿಗಳ ರೂಪದಲ್ಲಿ ಕಾಣುತ್ತದೆ. ಆರ್ಸೆನಿಕ್ ವಿಷಬಾಧೆ : ಆರ್ಸೆನಿಕ್ ಅನೇಕ ರೂಪಗಳಲ್ಲಿ ಅಲ್ಲದೆ ಬಳಕೆಯಲ್ಲಿ ಸುಲಭವಾಗಿ ಉಪಯೋಗಿಸಲ್ಪಡುವ ಧಾತುವಾದ್ದರಿಂದ, ಹಲವಾರು ವಿಧಗಳಿಂದ ಇದರ ಬಾಧೆಯುಂಟಾಗುತ್ತದೆ. ಸಾಮಾನ್ಯವಾಗಿ ಬಳಕೆಯಲ್ಲಿರುವ ಆರ್ಸೆನಿಕ್ ಲವಣಗಳು ಬಣ‍್ಣರಹಿತ ಮತ್ತು ಈ ಪಾಷಾಣಬಾಧೆ ತೀವ್ರತರ ಇಲ್ಲದೆ ಜಡರದ್ದಾಗಿ ಕಂಡುಬರಬಹುದು. ಆರ್ಸೆನಿಕ್ ಲವಣಗಳಾದ ಬಿಳಿ ಆರ್ಸೆನಿಕ್, ಸೀಸದ ಆರ್ಸೆನೈಟ್, ತಾಮ್ರದ ಆರ್ಸೆನೈಟ್ ಮುಂತಾದವುಗಳು ಕ್ರಿಮಿಕೀಟ,ಹೆಗ್ಗಣ, ಬೆಳೆಯಲ್ಲಿಯ ಕಳೆ, ಪರೋಪಜೇವಿ ಇವುಗಳ ನಾಶಕ್ಕೆ ಉಪಯೋಗಿಸಲ್ಪಡುತ್ತದೆ.ಆದರೆ ಇಂಥ ವಿಷವಸ್ತುಗಳು ಆಕಸ್ಮಿಕವಾಗಿಯಾಗಲಿ ಉದ್ದೇಶಪೂರ್ವಕವಾಗಿಯಾಗಲಿ ಸಾಕಷ್ಟು ಪ್ರಮಾಣದಲ್ಲಿ ಸೇವಿಸಲ್ಪಟ್ಟರೆ ಆರ್ಸೆನಿಕ್ ವಿಷಬಾದೆಯುಂಟಾಗುತ್ತದೆ. ಆಗ ಪೀಡಿತ ಜೀವಿಗಳಲ್ಲಿ ಯಾತನಾಪೂರ್ವಕ ಹೊಟ್ಟೆನೋವು, ಉತ್ ಕ್ಷೇಪನ,ವಾಂತಿ,ತೀವ್ರ ಅತಿಸಾರ, ಸ್ನಾಯುಗಳಲ್ಲಿ ಚಳಕು ಮುಂತಾದ ತೀವ್ರ ಲಕ್ಷಣಗಳು ಕಂಡುಬಂದು ಸಕಾಲದಲ್ಲಿ ಚಿಕಿತ್ಸೆಯಾಗದಿದ್ದರೆ ಕೆಲವು ಗಂಟೆಗಳಲ್ಲಿಯೇ ಅವು ಸಾಯುತ್ತವೆ.ಆರ್ಸೆನಿಕ್ ಶರೀರದಿಂದ ಅಷ್ಟು ಸುಲಭವಾಗಿ ವಿಸರ್ಜಿಸಲ್ಪಡದೆ ಶರೀರದ ನಾಡಿಕೂಟದಲ್ಲಿ ಶೇಖರಿಸಲ್ಪಡುವ ವಸ್ತುವಾದ್ದರಿಂದ ಆರ್ಸೆನಿಕ್ ಯುಕ್ತ ಔಷಧಗಳನ್ನು ಚಿಕಿತ್ಸೆಗಾಗಿ ಆಗಾಗ ಉಪಯೋಗಿಸದಿದ್ದರೆ ಇಲ್ಲವೆ ಆರ್ಸೆನಿಕ್ ಯಾವುದೇ ಕಾರಣದಿಂದಾಗಿ ಸಣ್ಣ ಪ್ರಮಾಣದಲ್ಲಿ ಬಹುಕಾಲದವರೆಗೆ ದೇಹದೊಳಕ್ಕೆ ಸೇರಿದರೆ ಆರ್ಸೆನಿಕ್ ತೀವ್ರ(ಕ್ರಾನಿಕ್) ವಿಷಬಾಧೆಯುಂಟಾಗುತ್ತದೆ. ಈ ಬಾಧೆಯನ್ನು ಗುರುತಿಸುವುದು ಕಷ್ಟಕರ. ಆದರೂ ಜಡರತರದ ಭೇದಿ, ಕೂದಲು ಉದುರುವುದು,ಉಸಿರು,ಬೆವರಿನಲ್ಲಿ ಬೆಳ‍್ಳುಳ‍್ಳಿಯ ವಾಸನೆ ಮೊದಲಾದ ಚಿಹ್ನೆಗಳು ಈ ವಿಷಬಾಧೆಯ ಸೂಚಕಗಳಾಗಿವೆ. ತೀವ್ರ ವಿಷಬಾಧೆಯಿಂದ ನರಳುವ ಜೀವಿಗಳ ಮಲ,ಮೂತ್ರ, ರಕ್ತಾದಿಗಳನ್ನು ರಾಸಾಯನಿಕ ವಿಚ್ಛೇದನೆಗೊಳಪಡಿಸಿದರೆ ತಾಳಕದ (ಆರ್ಸೆನಿಕ್) ವಿಷಬಾಧೆಯ ಸಾಧ್ಯತೆಯನ್ನು ದೃಢೀಕರಿಸುವುದು ಸುಲಭ. ಬಿ.ಏ.ಲ‍್ ನ್ನು (ಬ್ರಿಟಿಷ್ ಆಂಟಿ ಲೆವಿಸೈಟ್) ಸೂಜಿಮದ್ದಾಗಿ ಕೊಡುವುದು ಈ ವಿಷಬಾಧೆಗೆ ಪ್ರಮುಖವಾದ ಚಿಕಿತ್ಸೆ.