ಪುಟ:Mysore-University-Encyclopaedia-Vol-1-Part-3.pdf/೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆರೋಗ್ಯ ಸಂರಕ್ಷಣಾ ಕಾಯಿದೆಗಳು ೮೬೯

೧೫ನೆಯ ಶತಮಾನದ ಪೂರ್ವಾರ್ಧದಲ್ಲಿ ಆರೋಗ್ಯ ವೈದ್ಯಕೀಯ ಸುಧಾರಣೆಯ ಶಾಸನಗಳು ಬಂದುವು. ಆದರೆ, ಅನೇಕವು ಕೇವಲ ಶಾಸನಗಳಾಗಿದ್ದುವೇ ಹೊರತು ಅವನ್ನು ಕಡ್ಡಾಯವಾಗಿ ಆಚರಣೆಗೆ ತಂದಿರಲಿಲ್ಲ. ಬೇಕೆಂದಾಗ ಮಾತ್ರ ಈ ಶಾಸನಗಳು ಜಾರಿಯಾಗುತ್ತಿದ್ದುವು. ಆಹಾರಕಲಬೆರೆಕೆಗೆ ವಿರುದ್ಧವಾದ ಶಾಸನಗಳು ಸಾಂಕ್ರಾಮಿಕ ರೋಗ ತಲೆದೋರಿದಾಗ ರೋಗಿ ಮತ್ತವನ ಸಂಬಂಧಿಕರನ್ನು, ಹತ್ತಿರ ಇದ್ದವರನ್ನು ಬೇರೆಡೆ ಪ್ರತ್ಯೇಕಿಸುವ ಕಾಯಿದೆಗಳು ಕಡ್ಡಾಯವಾಗಿದ್ದುವು.

ರೋಗಗಳ ವಿಚಾರದಲ್ಲಿ ಕುರುಡು ನಂಬಿಕೆಗಳು ಇದ್ದರೂ ಕೆಲವು ಹರಡುವ ವಿಧಾನಗಳೂ ಆಗ ತಿಳಿದಿದ್ದುವು. ಜಸ್ಟಿನಿಯನ್, ಕಾಲದ ಪ್ಲೇಗ್ ನಿಂದ ಹಿಡಿದು ೧೩೪೮ರಲ್ಲಿ ಬಂದ ಕರಾಳ ಮೃತ್ಯುವಿನ (ಬ್ಲಾಕ್ ಡೆತ್) ಕಾಲದತನಕ ಅನೇಕ ಭೀಕರ ಸಾಂಕ್ರಾಮಿಕಗಳು ತಲೆಹಾಕಿದ್ದುವು. ಕುಷ್ಠ, ಸಿಡುಬು, ಪ್ಲೇಗು, ದಡಾರ, ಗಂಟಲಮಾರಿ, ಉರಿಶೀತ(ಇನ್ ಫ್ಲುಯೆನ್ ಜ) ಮುಂತಾದುವು ಜನಗಳಲ್ಲಿ ಭೀತಿ ಹುಟ್ಟಿಸಿದ್ದುವು. ಅದರಲ್ಲೂ ಕುಷ್ಠರೋಗವನ್ನು ಕಂಡರೆ ಸಾಮಾನ್ಯರಿಗಿದ್ದ ಭೀತಿ ವರ್ಣಿಸಲಸಾಧ್ಯ. ೧೩ನೆಯ ಶತಮಾನದ ಪೂರ್ವಾರ್ಧದಲ್ಲಿ ಫ್ರಾನ್ಸ್ ದೇಶ ಒಂದರಲ್ಲೇ ಸುಮಾರು ೨,೦೦೦ ಕುಷ್ಠರೋಗಿಗಳ ಚಿಕಿತ್ಸಾವಸಾಹತು ಆಸ್ಪತ್ರೆಗಳಿದ್ದುವಂತೆ.

೧೧೭೯ರಲ್ಲಿ ಮೂರನೆಯ ಲ್ಯಾಟಿರಾನ್ ಮಂಡಲ ಸಭೆ ಕುಷ್ಠರೋಗಿಗಳನ್ನು ಶಾಸನಕ್ಕೊಳಪಡಿಸುವ ವಿವರವಾದ ಕಾಯಿದೆ ಜಾರಿಗೆ ತಂದಿತು. ಇದರ ಅನುಭವವೇ ಮುಂದೆ ಸಹಸ್ರಾರು ಜನ ಅಸುನೀಗಿದ ೧೪ನೆಯ ಶತಮಾನದ ಪ್ಲೇಗು ಸಾಂಕ್ರಾಮಿಕದಲ್ಲಿ ಬಳಕೆಯಾಯಿತು. ಸೋಂಕಿನ ಅನುಮಾನವಿದ್ದವರು ಸ್ಥಳೀಯ ಅಧಿಕಾರಿಗಳ ಹತ್ತಿರ ಹೋಗಿ ಪರೀಕ್ಷೆಗೊಳಪಡಬೇಕು. ಸೋಂಕು ಇದ್ದರೆ ಕಡ್ಡಾಯವಾಗಿ ಅವರನ್ನು ಬೇರ್ಪಡಿಸುವುದೊಂದೇ ಅಲ್ಲದೆ ಅವರೊಂದಿಗಿದ್ದವರನ್ನೂ ಬೇರ್ಪಡಿಸಲಾಗುತ್ತಿತ್ತು. ಆಹಾರ ಇತ್ಯಾದಿ ಅವಶ್ಯಕ ವಸ್ತುಗಳನ್ನು ಒದಗಿಸಲಾಗುತ್ತಿತ್ತು. ರೋಗಿಯ ಶವವನ್ನೂ ಅದಕ್ಕೆ ಸೇರಿದ ವಸ್ತುಗಳನ್ನೂ ಊರ ಹೊರಗಡೆ ಹೂಳಲಾಗುತ್ತಿತ್ತು. ರೋಗಿ ಸತ್ತ ಸ್ಥಳವನ್ನು ಕ್ರಿಮಿನಾಶಕ ಹೊಗೆಯಿಂದ ಶುದ್ಧಿಗೊಳಿಸುತ್ತಿದ್ದರು. ಮುಖ್ಯವಾಗಿ ವ್ಯಾಪಾರ, ಕೇಂದ್ರವಾಗಿ ವೆನಿಸ್ ನಗರದಲ್ಲಿ ಈ ಕ್ರಮಗಳೆಲ್ಲ ಮೊದಲು ಜಾರಿಗೆ ಬಂದು ಉಳಿದ ರೇವು ಪಟ್ಟಣಗಳಲ್ಲೂ ಕ್ರಮೇಣ ಅವಲೋಕನಾ ಕೇಂದ್ರಗಳೂ ಸೋಂಕು ರೋಗಿಗಳಿಗೆ ಬೇರೆಯಾಗಿ ಚಿಕಿತ್ಸೆ ನೀಡುವ ಆಸ್ಪತ್ರೆಗಳೂ ಆರಂಭವಾದವು. ಇಂಗ್ಲೆಂಡ್ ದೇಶ ಒಂದರಲ್ಲೇ ೧೨-೧೫ ಶತಮಾನಗಳ ನಡುವೆ ಇಂಥ ಆಸ್ಪತ್ರೆಗಳು ೭೨೦ಕ್ಕೂ ಮೀರಿದ್ದುವು. ಇವುಗಳಲ್ಲಿ ೨೧೭ ಕುಷ್ಠರೋಗಿಗಳ ಕೇಂದ್ರಗಳು, ಮಧ್ಯಯುಗದ ಉತ್ತರಾರ್ಧದಲ್ಲಿ ನಗರಗಳೂ ಸರ್ಕಾರಗಳೂ ಆಸ್ಪತ್ರೆಗಳನ್ನು ಸ್ಥಾಪಿಸಿ ಅವನ್ನು ನಡೆಸಿಕೊಂಡು ಬರುವುದು ಹೆಚ್ಚಿತು.

ಮಧ್ಯಯುಗ ಮುಗಿಯುವ ವೇಳೆಗೆ ವೈದ್ಯಕೀಯ ಮತ್ತು ಜನಾರೋಗ್ಯ ಚಟುವಟಿಕೆಗಳು ಯುರೋಪ್ ನಲ್ಲಿ ಸ್ಥಳೀಯ ಸರ್ಕಾರದ ಹತೋಟಿಯಲ್ಲಿದ್ದುವು. ಕುಡಿಯುವ ನೀರನ್ನು ಕೆಡಿಸುವುದನ್ನು ತಡೆಯುವ ಕಾಯಿದೆಯೊಂದಿಗೆ, ರಸ್ತೆಗಳ ನೈರ್ಮಲ್ಯ ಕಚರದ ವಿಲೇವಾರಿಗಳಿಗೂ ಕಾನೂನುಗಳಾದವು. ವೈದ್ಯರು ಕೆಲವು ವಿಧಿಗಳನ್ನು ಕಡ್ಡಾಯವಾಗಿ ಅನುಸರಿಸಲೇಬೇಕಾಯಿತು. ಪೌಷ್ಟಿಕ ಆಹಾರವಸ್ತುಗಳ ಮೇಲೆ ಲೇಖನಗಳು ಬರಹತ್ತಿದುವು. ಸಾರ್ವಜನಿಕ ಸ್ನಾನಗೃಹಗಳು ನಿಯಮಗಳಿಗನುಸಾರವಾಗಿರಬೇಕಾದುದಲ್ಲದೆ ಸನ್ನದು ಪಡೆಯಬೇಕಾಗಿತು. ೧೬ನೆಯ ಶತಮಾನದ ಮೊದಲಲ್ಲಿ ಮೇಹರೋಗಗಳು ಹರಡಿದಾಗ ಮೊದಲು ವೇಶ್ಯೆಯರ ಮೇಲೆ ಕಟ್ಟಳೆಗಳನ್ನು ವಿಧಿಸಲಾಯಿತು. ಪೌರಸಭೆಯ ಅಧಿಕ್ಕಾರಕ್ಕೊಳಪಡಿಸಿದ ಸಾರ್ವಜನಿಕ ಆರೋಗ್ಯ ಪಾಲನೆ ಯಶಸ್ವಿಯಾಗಲಿಲ್ಲ. ಹೊರಗಿನಿಂದ ಹಾಗೂ ರೇವುಗಳಿಂದ ಬರುತ್ತಿದ್ದ ಭೀಕರ ಸಾಂಕ್ರಾಮಿಕ ಜಾಡ್ಯಗಳೆನ್ನುದುರಿಸಿ ತಮ್ಮನ್ನು ತಾವು ಕಾಪಾಡಿಕೊಳ್ಳಲಾಗಲಿಲ್ಲ. ದೊಡ್ಡ ನಗರಗಳಲ್ಲಿ ಆರೋಗ್ಯಾಡಳಿತ ಮತ್ತು ಶಾಸನಗಳನ್ನು ಜಾರಿ ಮಾಡುವ ಅಧಿಕಾರ ಸಮಿತಿಗಳು, ಮಂಡಲಿಗಳು, ನಿಯೋಜಿತ ಜನಸಭೆಗಳ ಸದಸ್ಯರು ಮುಂತಾದವರಿಗೆ ನಿಬಂಧನೆಗಳನ್ನು ಕಾರ್ಯಗತ ಮಾಡಲಾಗಲಿಲ್ಲ. ವಸಾಹತು ಅಮೆರಿಕ ದೇಶದಲ್ಲೂ ಸಾಂಕ್ರಾಮಿಕ ಜಾಡ್ಯಗಳನ್ನೆದುರಿಸಲು ರೋಗಿಗಳನ್ನೂ ಅವರೊಂದಿಗೆ ಇದ್ದವರನ್ನೂ ಬೇರೆ ಇರಿಸಲು ಶಾಸನಗಳನ್ನು ವಿಧಿಸಲಾಯಿತು. ೧೬೨೦ ಡಿಸೆಂಬರ್ ನಲ್ಲಿ ಫ್ಲಿಮೆತ್ ಗೆ ಬಂದ ೧೦೦ ಯಾತ್ರಿಕರಲ್ಲಿ ಅರ್ಧ ಜನ ೩ ತಿಂಗಳಲ್ಲೇ ಸತ್ತರು. ನ್ಯೂ ಇಂಗ್ಲೆಂಡ್ ನ ೯೦೦೦ ಸೈನಿಕರಲ್ಲಿ ಭೀಕರ ಸಾಂಕ್ರಾಮಿಕದಿಂದ ಬಹುಮಂದಿ ಸತ್ತು ಕೇವಲ ಕೆಲವೇ ನೂರು ಜನ ಉಳಿದರು. ರೋಗನಿರೋಧ ಚುಚ್ಚುಮದ್ದು ನೀಡುವುದು ಕೆಲವು ವಸಾಹತುಗಳಲ್ಲಿ ಆರಂಭವಾಯಿತು. ಆಮೇಲೆ ಇದು ಶಾಸನವಾಯಿತು. ಅಮೆರಿಕ ದೇಶದಲ್ಲೇ ಮೊದಲಿನ ಆರೋಗ್ಯಸಮಿತಿ ೧೭೯೩ರಲ್ಲಿ ಮೇರಿಲ್ಯಾಂಡ್ ನ ಬಾಲ್ಟಿಮೋರ್ ನಗರದಲ್ಲಿ ಸ್ಥಾಪನೆ ಆಯಿತು. ಇದೇ ತರದ ಸಮಿತಿಗಳು ನ್ಯೂಯಾರ್ಕ್, ಮ್ಯಾಸಚುಟ್ಸ್ ಗಳಲ್ಲೂ ಆರಂಭವಾದುವು.

ಕೈಗಾರಿಕೋದ್ಯಮಗಳ ಕ್ರಾಂತಿಯಿಂದಾಗಿ ನಗರಗಳ ಜನನಿಬಿಡತೆ ಒಮ್ಮೆಲೇ ಹೆಚ್ಚಿ ಕಾರ್ಖಾನೆಗಳ ಸುತ್ತಲೂ ಕೊಳಚೆ ಪ್ರದೇಶಗಳು ಹುಟ್ಟಿಕೊಂಡು ಭಯಂಕರ ಅನಾರೋಗ್ಯವಾಯಿತು. ಲಂಡನ್ ನಗರದಲ್ಲಿ ಕೊಳಚೆ ಪ್ರದೇಶಗಳ ನಿರ್ಮಲೀಕರಣ ಚಟುವಟಿಕೆ ಆರಂಭವಾಯಿತು (೧೭೬೦). ಕೊಳಚೆ, ರೋಗಗಳ ಜತೆಗೆ ಬಡತನ, ನಿರುದ್ಯೋಗ ತಲೆಹಾಕಿದ್ದುವು. ಎಲಿಜಬೆತ್ ಬಡತನ ನಿವಾರಣಾ ಕಾನೂನು ಆಯಾ ಪ್ಯಾರಿಷ್ ಗಳಿಗೆ (ಜಿಲ್ಲೆ) ವೈದ್ಯಕೀಯ ನೆರವು ಹಾಗೂ ಇತರ ಉಪಶಮನಗಳಿಗೆ ಜವಾಬ್ದಾರಿ ವಹಿಸಿತು.

ಸಾಮಾಜಿಕ ಸುಧಾರಣೆಗಳು : ಬಡತನದಿಂದ ರೋಗ, ರೋಗದಿಂದ ಬಡತನ. ಕೊಳಚೆ ಎಡೆಗಳಲ್ಲಿ ಹೆಚ್ಚು ರೋಗ. ರೋಗ ಹೆಚ್ಚಿದ್ದಲ್ಲಿ ಕೊಳಚೆ, ಹೊಲಸು, ಬಡತನದೊಂದಿಗೆ ಕೆಟ್ಟ ಕೆಲಸ, ಅಪರಾಧ ಇವೇ ಮೊದಲಾದ ಸಂಗತಿಗಳು ೧೯ನೆಯ ಶತಮಾನದ ಮೊದಲಲ್ಲೇ ಮನದಟ್ಟಾಗಿದ್ದವು. ಈ ಪರಿಸ್ಥಿತಿ ಪ್ರಾರಬ್ಧಕರ್ಮವೇನೂ ಅಲ್ಲ. ಪರಿಹಾರವಿಲ್ಲದಂಥ ಸಮಸ್ಯೆಯೂ ಅಲ್ಲವೆಂಬುದು ಗೋಚರವಾಗತೊಡಗಿತು. ಇಂಗ್ಲೆಂಡಿನಲ್ಲಿ ಸುಪ್ರಸಿದ್ಧ ಸಮಾಜಸುಧಾರಕರು ಜರೆಮೀಬೆಂತ್ಯಾಮ್, ಎಡ್ವಿನ್ ಚಾಡ್ ವಿಕ್ ಮುಂದಾಳುತನದಲ್ಲಿ ಸುಧಾರಣೆಗಳನ್ನು ತರಲು ತೀವ್ರ ಆಸಕ್ತಿ ವಹಿಸಲಾಯಿತು. ಈ ಸಮಸ್ಯೆಗಳನ್ನು ಬಿಡಿಸಿ ಮುಂದಿನ ಕ್ರಮಗಳನ್ನು ಸೂಚಿಸಲು ಚಕ್ರವರ್ತಿ ಆಯೋಗ ನೇಮಕವಾಯಿತು. ಈ ಸಮಿತಿ ವರದಿ ಒಪ್ಪಿಸಿತು. ಇತರ ಸಂಶೊಧನೆಗಳೂ ನಡೆದುವು. ಅಂಕಿಅಂಶಗಳೂ ಸಂಗ್ರಹವಾಗಿ ಲಂಡನ್ ನಗರದ ಸಮಾಜ ಸುಧಾರಣಾ ಶಾಸನ (೧೮೩೦) ಜಾರಿಗೆ ಬಂದಿತು.

ಅಂಕಿ ಅಂಶ ಸಂಗ್ರಹಣ : ಈ ಸಮಾಜ ಸುಧಾರಣಾ ಚಳವಳಿಯಿಂದ ಆರಂಭವಾದ ಅಂಕಿಅಂಶಗಳ ಸಂಕಲನ ಶಾಸನಗಳ ಪ್ರತಿಪಾದನೆಗೆ ಮಾರ್ಗದರ್ಶಕವಾದದ್ದಲ್ಲದೆ ಜನಸಾಮಾನ್ಯರಿಗೆ ಅರಿವು ಜಾಗೃತಿ ಮೂಡಿ ಅವರು ಸುಧಾರಣೆಗೆ ಒತ್ತಾಯಪಡಿಸಿದರು. ಈ ಚಳವಳಿಯಲ್ಲಿ ಹೆಸರಾಂತ ವ್ಯಕ್ತಿ ೧೯ನೆಯ ಶತಮಾನದ ಜೀವಸಂಖ್ಯಾಶಾಸ್ತ್ರಜ್ಞ ವಿಲಿಯಮ್ ಫಾರ್ (೧೮೭೫). ಇವನು ವಿಮರ್ಶಿಸಿದ ಅಂಕಿಅಂಶಗಳು ನಮ್ಮ ಸಮಾಜದ ಜೀವನ, ಆಹಾರ, ಆರ್ಥಿಕಸ್ಥಿತಿ ಇತ್ಯಾದಿಗಳಿಗೂ ಸಮಾಜದ ಜನರ ಆರೋಗ್ಯ ಅನಾರೋಗ್ಯಕ್ಕೂ ಇರುವ ನಿಕಟ ಸಂಬಂಧವನ್ನು ಎಲ್ಲರಿಗೂ ಎತ್ತಿ ತೋರಿದಂತಾಯಿತು.ಮಾನವಕುಲದ ಕಷ್ಟಕಾರ್ಪಣ್ಯಗಳಿಗೆ ಮಿತಿ ಮೀರಿದ ಜನಸಂಖ್ಯೆ ಕಾರಣವಲ್ಲ, ಒಬ್ಬೊಬ್ಬರಲ್ಲೂ ಇದ್ದೇ ಇರುವ ನ್ಯೂನತೆಗಳೇ ಕಾರಣ ಎಂದ. ಜೀವನ ಗಣತಿಯನ್ನು ಇವನು ವಿಜ್ಞಾನದ ಮಟ್ಟಕ್ಕೇರಿಸಿದ. ಇದಕ್ಕೂ ಮುಂಚೆ ಸರ್ ವಿಲಿಯಮ್ ಬೆಟ್ಟಿ ದೇಶದ ಆಡಳಿತದಲ್ಲಿ ಜನಗಳ ಆರೋಗ್ಯ, ಅನಾರೋಗ್ಯಗಳ ಪ್ರಭಾವವನ್ನು ತೋರಿಸಿದ. ರೋಗಬಾರದಂತೆ ತಡೆಗಟ್ಟುವ ಸ್ವಲ್ಪವೇ ಹಣ ದೇಶದ ಹಣಕಾಸಿನ ಹೆಚ್ಚಳಕ್ಕೆ ಬಹಳ ಸಹಾಯಕ. ರೋಗಕ್ಕೀಡಾಗದ ರೋಗದಿಂದ ಸಾಯದೆ ಉಳಿದ ಜನರಿಂದ ಕೈಗಾರಿಕೆ, ಉದ್ಯಮ ಇತ್ಯಾದಿಗಳಲ್ಲಿ ಹೆಚ್ಚು ಉತ್ಪಾದನೆಯೇ ಇದಕ್ಕೆ ಕಾರಣ. ೧೭ನೆಯ ಶತಮಾನದಲ್ಲಿ ಜಾನ್ ಗ್ರಾಂಟ್ (೧೬೬೨) ಜನಾರೋಗ್ಯದ ವಿಚಾರವಾಗಿ ಅಂಕಿಅಂಶಗಳನ್ನು ಸಂಗ್ರಹಿಸಿ ಅವುಗಳ ಮಹತ್ವವನ್ನು ತೋರಿಸಿದ. ಜರ್ಮನಿಯ ಇನ್ನೂ ಹೆಸರಾದವರ ಪರಿಶೋಧನೆ, ವರದಿಗಳೇ ಮುಂದೆ ಬಿಸ್ಮಾರ್ಕ್ ಜಾರಿಗೆ ತಂದ ಶಾಸನಗಳಿಗೆ ಆಧಾರ. ಮೊದಲು (೧೭೪೮) ಜನನ, ಮರಣ ಇತ್ಯಾದಿಯ ಜೀವನಗಣತಿಯನ್ನು ಕಡ್ಡಾಯಮಾಡಿದ ಶಾಸನ ಜಾರಿಗೆ ತಂದ ಹೆಸರು ಸ್ವೀಡನ್ ದೇಶದ್ದು.ಮೊಟ್ಟಮೊದಲನೆಯ ಜನಗಣತಿ ೧೮೦೩ರಲ್ಲಿ ಇಂಗ್ಲೆಂಡ್ ದಲ್ಲೂ ಭಾರತದಲ್ಲಿ ೧೮೬೭-೭೨ ರಲ್ಲೂ, ಆಮೇಲೆ ೧೮೮೧ ರಲ್ಲೂ ಜರುಗಿತು. ಅಲ್ಲಿಂದೀಚೆಗೆ ಇದು ದಶಕಗಳಿಗೊಮ್ಮೆ ತಪ್ಪದೆ ನಡೆದುಕೊಂಡು ಬಂದಿದೆ. ಅಮೆರಿಕದ ಸಂಯುಕ್ತ ಸಂಸ್ಥಾನದಲ್ಲಿ ಮೊದಲು ಮ್ಯಾಸಚುಟ್ಸ್ ಸಂಸ್ಥಾನ ಕಾರ್ಮಿಕರ ಅಂಕಿಅಂಶ ಸಂಗ್ರಹದ ಖಾತೆಯನ್ನು ಪ್ರಾರಂಭಿಸಿತು. ನ್ಯೂಯಾರ್ಕ್ ಜನಗಳ ಆರೋಗ್ಯ, ಅನಾರೋಗ್ಯದ ವಿಚಾರವಾಗಿ ಜಾನ್ ಗ್ರಿಸ್ಕೋಮ್ ಅಧ್ಯಯನ ಮಾಡಿ ೧೮೪೫ರಲ್ಲಿ ವರದಿ ಒಪ್ಪಿಸಿದ. ಬಾಸ್ಟನ್ ನಗರದಲ್ಲಿ ಹೊರಬಿದ್ದ ಕ್ಯಾಟಕ್ ನ ವರದಿಯಿಂದ (೧೮೫೦) ಆರೋಗ್ಯಶಾಸನ ರೂಪುಗೊಂಡಿತು. ಮುಂದಿನ ಶಾಸನಗಳಿಗೆ ಇದೇ ಮಾದರಿಯಾಯಿತು. ಬರಬರುತ್ತಾ ಜೀವನಗಣತಿಗಾಗಿನ ಅಂಕಿಅಂಶಗಳ ಸಂಗ್ರಹಣೆಯ ಮಹತ್ವದ ಅರಿವು ಜನಸಾಮಾನ್ಯರಿಗೂ ತಿಳಿದುಬಂತು. ಶಾಸನಗಳಲ್ಲಿನ ಕಟ್ಟಳೆಗಳನ್ನು ಜಾರಿಮಾಡಲು ಸುಸಜ್ಜಿತ ಪೋಲೀಸ್ ಖಾತೆ ಸಿದ್ಧವಾಯಿತು. ಮೊದಲು ಸಮಸ್ಯೆಗಳ ಅಂಕಿಅಂಶಗಳನ್ನು ಸಂಗ್ರಹಿಸಿ, ಅಧ್ಯಯನ ಮಾಡಿದ ಮೇಲೆ ಈ ಶಾಸನಗಳೆಲ್ಲವೂ ರೂಪುಗೊಂಡುವು. ಹಿಂದೆಂದೂ ನಡೆಯದ ಈ ಬಗೆಗಳ ರಾಷ್ಟ್ರೀಯ ಮಟ್ಟದ ದಿಸೆಯಲ್ಲಿ ಯುರೋಪ್ ಮತ್ತು ಅಮೆರಿಕ ಸಂಯುಕ್ತ ಸಂಸ್ಥಾನಗಳು ಬಹಳ ಮುಂದುವರಿದುವು. ಯುರೋಪ್ ದೇಶಗಳಲ್ಲಿ ಶಿಶುಮರಣಗಳು (ಹುಟ್ಟಿದ ಆಮೇಲೆ ಮೊದಲನೆಯ ಹುಟ್ಟಿದ ಹಬ್ಬವನ್ನೂ ಕಾಣದೆ ಸತ್ತ ಹಸುಳೆಗಳ ಸಂಖ್ಯೆ) ಅತಿಯಾಗಿತ್ತು. ಈ ಮಿತಿಮೀರಿದ ಸಾವುಗಳನ್ನು ತಡೆಗಟ್ಟಲೂ ಜನರಲ್ಲಿ ನೈತಿಕ ಮಟ್ಟವನ್ನು ಸುಧಾರಿಸಲೂ ಪಾರ್ಲಿಮೆಂಟಿನಲ್ಲಿ ಕೆಲವು ಕಾಯಿದೆಗಳಾದುವು. ಮ್ಯಾಜಿಸ್ಟ್ರೇಟರುಗಳಿಗೆ ಅನೇಕ ವಿಧದ ಆರೋಗ್ಯಕ್ಕೆ ಸಂಬಂಧಪಟ್ಟ ಕಾರ್ಯಾಚರಣೆಗಳು ಮೇಲ್ವಿಚಾರಣೆಗಾಗಿ ಅನುಜ್ಞೆ, ಅಧಿಕಾರವೀವ ಕಾನೂನು (೧೭೫೧) ಜಾರಿಗೆ ಬಂತು. ಮೊಟ್ಟಮೊದಲಿನ ಸಮಾಜ ಸುಧಾರಣಾ ವಿಮಾ ಎನ್ನಬಹುದಾದ ಶಾಸನ ಮಂಡಿತವಾಯಿತು (೧೭೫೭). ಇದರಿಂದ ಥೇಮ್ಸ್ ನದಿಯಲ್ಲಿ ಓಡಾಡುವ ಹಡಗು ಇತ್ಯಾದಿಗಳಿಗೆ ಕಲ್ಲಿದ್ದಲನ್ನು ಹೊರುವ ಕಾರ್ಮಿಕರಿಗೆ ಒಂದು ರೀತಿಯ ಪರಿಹಾರಕ್ಕೆ ಏರ್ಪಾಡಾಯಿತು. ಯಜಮಾನ