ಪುಟ:Mysore-University-Encyclopaedia-Vol-2-Part-1.pdf/೧೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆಸುರೀ ಸಂಪತ್ತು - ಆಸ್ಕರ್ ಪುರಸ್ಕಾರ ಆಸುರೀ ಸಂಪತ್ತು:ಅಸುರ ಅಂದರೆ ರಾಕ್ಷಸ ಸಂಬಂಧವಾದುದು.ಆಸುರೀಮಾಯಾ,ಆಸುರೀರಾತ್ರಿ, ಆಸುರೀಸಂಪತ್ತು ಎಂಬುದು ಈ ಅರ್ಥದಲ್ಲಿಯೇ ಪ್ರಯುಕ್ತವಾಗಿದೆ.ದೈವಕ್ಕೆ ಪ್ರತಿಕಕ್ಷಿಯಾದುದು ಎನ್ನುವ ನೆಲೆಯಲ್ಲಿ ಅಸುರೀಸಂಪತ್ತಿನ ವಿವರಣೆ ಭಗವದ್ಗೀತೆಯ(ನೋಡಿ) 16ನೆಯ ಅಧ್ಯಾಯದಲ್ಲಿ ಬರುತ್ತದೆ.ಈ ಅಧ್ಯಾಯಕ್ಕೆ ದೈವಾಸುರ-ಸಂಪದ್ವಿಭಾಗಯೋಗವೆಂದು ಹೆಸರು 'ದಂಭೋ ದರ್ಪೋತಿ ಮಾನಶ್ಚ ಕ್ರೋಧಃ ಪಾರುಷ್ಯಮೇವ ಚ.ಅಗ್ನಾನಂ ಚ ಅಭಿಜಾತಸ್ಯ ಪಾರ್ಥ ಸಂಪದಮಾಸುರೀ'.ಜಂಭ,ದರ್ಪ,ಅಹಂಭಾವ,ಕೋಪ ಪರುಷವಚನ,ಅಗ್ನಾನ-ಇವು ಆಸುರೀ ಸಂಪತ್ತುಗಳೆಂದು ಇಲ್ಲಿನ ನಿರೂಪಣೆ.ದೈವೀಸಂಪತ್ತಿನಿಂದ ಮೋಕ್ಷ ಉಂಟಾಗುವುದಾದರೆ,ಆಸುರೀ ಸಂಪತ್ತಿನಿಂದ ಸಂಸಾರಬಂಧ ಒದಗುತ್ತದೆ.ಆಸುರೀ ಸಂಪತ್ತು ಇರುವ ಜನಕ್ಕೆ ಪ್ರವೃತ್ತಿ ನಿವೃತ್ತಿಗಳ ನಡುವೆ ಇರುವ ವ್ಯತ್ಯಾಸ ತಿಳಿಯುವುದರಲ್ಲಿ.ಅವರು ಶುಚಿಯಾಗಿರುವುದಿಲ್ಲ.ಸತ್ಯವಂತರಲ್ಲ,ಜಗತ್ತು ಅಸತ್ಯವೆಂದೂ ಅದು ಭಗವಂತನಿಂದ ನಿಯಮಿತವಾದುದೆಂದೂ ಅವರು ನಂಬುವುದಿಲ್ಲ.ಅವರು ನಷ್ಟಾತ್ಮರು,ಅಲ್ಪ ಬುದ್ಧಿಗಳು,ಉಗ್ರಕರ್ಮರು.ಅಂಥವರು ಜಗತ್ತಿನ ಅಹಿತಕ್ಕೆ,ಕ್ಷಯಕ್ಕೆ ಕಾರಣವಾಗುವರಲ್ಲದೆ ಅಧಮಗತಿಯನ್ನು ಎಂದರೆ ಮೂರು ವಿಧವಾದ ನರಕವನ್ನು ಹೊಂದುವರು. (ಎಸ್.ಕೆ.ಆರ್) ಆಸ್ಕಮ್,ರೋಜರ್: 1515-68,ಇಂಗ್ಲೆಂಡ್ ದೇಶದ ವಿದ್ವಾಂಸ,ಶಿಕ್ಷಣಶಾಸ್ತ್ರಗ್ನ.ರಾಜಕುಮಾರಿ ಎಲಿಜ಼ಬೆತಳ ಗುರು,ಮೇರಿಗೆ ಲ್ಯಾಟಿನ್ ಕಾರ್ಯದರ್ಶಿಯಾಗೂ ಕೆಲಸಮಾಡಿ.ಅಡಕವಾದ ಬಿಗಿಯಾದ ಶೈಲಿಗೆ ಹೆಸರಾಗಿದ್ದಾನೆ.ಟ್ಯಾಕ್ಸೊಫಿಲಸ್ ಮತ್ತು ದಿ ಸ್ಕೂಲ್ ಮಾಸ್ಟರ್ ಇವನ ಮುಖ್ಯ ಕೃತಿಗಳು,ಮೊದಲ ಪುಸ್ತಕ ಬಿಲ್ವಿದ್ಯೆಯನ್ನೂ ಎರಡನೆಯದು ಲ್ಯಾಟಿನ್ ಭಾಷಾಬೋಧನೆಯನ್ನೂ ಕುರಿತಾಗಿವೆ.ಕೇಂಬ್ರಿಜ್ ವಿಮರ್ಶಾಪಂಥಕ್ಕೆ ಸೇರಿದ ಈತ ಬರಿಯ ಪಾಂಡಿತ್ಯಪೂರ್ಣ ಶಬ್ದಗಳ ಬಳಕೆಯನ್ನು ವಿರೋಧಿಸಿದ.ಇವನ ಶೈಲಿ ಲ್ಯಾಟಿನ್ ಪದಸಂಯೋಜನೆಯ ಪ್ರಭಾವಕ್ಕೆ ಒಳಗಾದುದರಿಂದ ಸ್ವಲ್ಪ ಜಟಿಲವಾಗಿದೆ.ಆದರೂ ಪ್ರಾಚೀನ ಬರೆಹಗಾರರ-ಮುಖ್ಯವಾಗಿ ಸಿಸಿರೊ ಮತ್ತು ಸೈನಿಕರ ಶೈಲಿಯ - ಶಿಸ್ತು ಕಾಣುತ್ತದೆ.ಆದರೆ ಶೈಲಿಯಲ್ಲಿ ಇವನದು ವಾಸ್ತವಿಕತೆಯ ಪರಮಾವದಿ.ಅದು ಅತ್ಯಂತ ಸರಳ,ನಿರಾಡಂಬರ.ಸ್ಕೂಲ್ ಮಾಸ್ಟರ್ ನಲ್ಲಿ ತೀಕ್ಷ್ಣವಾದ ವಿಮರ್ಶೆಯೂ ಉಂಟು.ಹಳೆಯ ಸಂಪ್ರದಾಯದ ಇಂಗ್ಲಿಷ್ ಗದ್ಯರೀತಿಯನ್ನು ಪ್ರಾರಂಭದಲ್ಲಿ,ಶುದ್ಧವಾಗಿರಬೇಕೆಂದು ಶ್ರಮಿಸಿದವರಲ್ಲಿ ಈತನೂ ಒಬ್ಬ.ಇವನಿಗೆ ಇಂಗ್ಲಿಷ್ ಭಾಷೆಯಲ್ಲಿ ನೈಜವಾದ ಅಭಿಮಾನವಿತ್ತು.ಪ್ರಾರಂಭದಲ್ಲಿ ಮುಖ್ಯವಾದ ಪತ್ರಗಳನ್ನು ಲ್ಯಾಟಿನ್ ಭಾಷೆಯಲ್ಲಿ ಬರೆಯುತ್ತಿದ್ದವ ತನ್ನ ಜರ್ಮನಿಯ ಪ್ರವಾಸದ ಅನುಭವಗಳನ್ನು ಮಿತ್ರರಿಗೆ ಇಂಗ್ಲಿಷ್ ಭಾಷೆಯಲ್ಲಿ ನಿರೂಪಿಸಿದ.ಇಂಗ್ಲಿಷರಿಗಾಗಿ ಇಂಗ್ಲಿಷ್ ಭಾಷೆಯಲ್ಲಿ ಇಂಗ್ಲಿಷ್ ವಸ್ತುವನ್ನು ರೂಪಿಸುವ ಬಯಕೆಯನ್ನು ಟ್ಯಾಕ್ಸೊಫಿಲಸ್ನಲ್ಲಿ ವ್ಯಕ್ತಪಡಿಸಿದ್ದಾನೆ.(ಎಲ್.ಎಸ್.ಎಸ್) ಆಸ್ ಕ್ವಿತ್, ಹರ್ಬರ್ಟ್ ಹೆನ್ರಿ: 1852-1928.ಪ್ರಸಿದ್ದ ಬ್ರಿಟಿಷ್ ರಾಜಕಾರಣಿ.ಯಾರ್ಕ್ ಪೈರಿನ ಮಾರ್ಲೆಯಲ್ಲಿ ಜನಿಸಿದ.ಲೀಡ್ಸ್ ನಗರದ ಸಮೀಪವಿರುವ ಹಡರ್ಸ್ ಫೀಲ್ಡ್ ನಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಮುಗಿಸಿ,1863ರಲ್ಲಿ ಲಂಡನ್ ಶಾಲೆಯಲ್ಲಿ ಓದಿ,1870ರಲ್ಲಿ ಆಕ್ಸ್ ಫರ್ಡ್ ಸೇರಿ ಉಚ್ಚಶಿಕ್ಷಣ ಪಡೆದ.ಆಕ್ಸ್ ಫರ್ಡ್ ಯೂನಿಯನ್ನಿನ ಅಧ್ಯಕ್ಷನಾಗಿದ್ದ ಸಮಯವಂತೂ ಸ್ಮರಣೀಯವಾದುದು.ಅಲ್ಲಿ ಪ್ರತಿಭೆ ವಿಕಾಸಗೊಂಡಿತು.1876ರಲ್ಲಿ ವಕೀಲಿವೃತ್ತಿ ಆರಂಭಿಸಿದ.1877ರಲ್ಲಿ ಹೆಲನ್ ಕೆಲ್ ಸಾಲ್ ಮೆಲಾಂದಳನ್ನು ಮದುವೆಯಾದ. ಮೊದಲಿಗೆ ಎಕಾನಮಿಸ್ಟ್ ಮತ್ತು ಸ್ಪೆಕ್ಟೇಟರ್ ಪತ್ರಿಕೆಗಳ ಮೂಲಕ ತನ್ನ ವಿಚಾರಗಳನ್ನು ಪ್ರಕಟಿಸಿದ.ಬಿಡುವಿನ ವೇಳೆಯನ್ನೆಲ್ಲ ರಾಜಕೀಯ ಚಟುವಟಿಕೆಗಳಿಗೆ ಮೀಸಲಿರಿಸಿದ.ಗ್ಲಾಡ್ ಸ್ಪನ್ ನ ಉದಾರಿವಾದಿಪಂಥಕ್ಕೆ ಸೇರಿ 1886ರಲ್ಲಿ ಪಾರ್ಲಿಮೆಂಟ್ ಸದಸ್ಯನಾದ.ಬಹು ಬೇಗ ಪಕ್ಷದ ಅತ್ಯಂತ ಸಮರ್ಥ ಸದಸ್ಯನಾಗಿ ಪ್ರಭಾವ ಬೀರಿ ಕಾಮನ್ಸ್ ಸಭೆಯ ಗಣ್ಯವ್ಯಕ್ತಿಯಾದ.1890ರಲ್ಲಿ ರಾಣಿಯ ಆಪ್ತಸಲಹೆಗಾರನಾಗಿ,ಗ್ಲಾಡ್ ಸ್ಟನ್ ಮಂತ್ರಿಮಂಡಲದಲ್ಲಿ ಗೃಹಸಚಿವನಾಗಿ.ಮೊದಲಪತ್ನಿ ಕಾಲವಾದ್ದರಿಂದ 1894ರಲ್ಲಿ ಎಮ್ಮಾ ಆಲೇಸಿ ಮಾರ್ಗರೆಟ್ ಳನ್ನು ಮದುವೆಯಾದ. ಲಿಬರಲ್ ಪಕ್ಷದಲ್ಲಿ ಒಡಕುಂಟಾದ ಕಾರಣದಿಂದಾಗಿ 1895-1905ರವರೆಗೆ ಅಧಿಕಾರದಿಂದ ದೂರವಾಗಿ,ಪಕ್ಷದಲ್ಲಿದ್ದ ಬಿರುಕನ್ನು ಮುಚ್ಚಲು ಶ್ರಮಿಸಿದ.ಅನಂತರ ಕ್ಯಾಂಪ್ ಬೆಲ್ ಮಂತ್ರಿಮಂಡಲದಲ್ಲಿ ಅರ್ಥಸಚಿವನಾದ.ಅದೇ ಸಮಯದಲ್ಲಿ ವೃದ್ಧಾಪ್ಯ ನಿವೃತ್ತಿವೇತನ (ಓಲ್ಡ್ ಏಜ್ ಪೆನ್ಷನ್) ಮಸೂದೆಯನ್ನು ಜಾರಿಗೆ ತಂದ.ಅನಾರೋಗ್ಯದ ನಿಮಿತ್ತ ಕ್ಯಾಂಪ್ ಬೆಲ್ ನಿವೃತ್ತನಾದ ತರುವಾಯ ತಾನೇ ಪ್ರಧಾನಿಯಾಗಿ ಅನೇಕ ಸಾಮಾಜಿಕ ಸುಧಾರಣೆಗಳನ್ನು ಜಾರಿಗೆ ತಂದ.ಆಸ್ ಕ್ವಿತ್ ಮಾಡಿದ ಸುಧಾರಣೆಗಳನ್ನು ಮೊಟಕು ಮಾಡಲು 1911ರಲ್ಲಿ ಪಾರ್ಲಿಮೆಂಟ್ ಹ್ಯಾಕ್ಟ್ ನ್ನೂ ಐರ್ಲೆಂಡಿಗಾಗಿ ಹೊಮ್ ರೂಲ್ ಮಸೂದೆಯನ್ನೂ ಜಾರಿಗೆ ತಂದ.ಅಷ್ಟರಲ್ಲೇ ಒಂದನೆಯ ಮಹಾಯುದ್ಧ ಪ್ರಾರಂಭವಾದ್ದರಿಂದ 1915ರಲ್ಲಿ ಸಮ್ಮಿಶ್ರ ಸರ್ಕಾರವನ್ನು ರಚಿಸಿ ಅನೇಕ ಕಾರಣಗಳಿಂದಾಗಿ 1916ರಲ್ಲಿ ಪ್ರಧಾನಿ ಪದವಿಗೆ ರಾಜೀನಾಮೆ ಸಲ್ಲಿಸಿದ.ಮುಂದೆ ನಡೆದ ಮಧ್ಯಕಾಲೀನ ಚುನಾವಣೆಯಲ್ಲಿ ಮತ್ತೆ ಜಯಗಳಿಸಿ ಪಾರ್ಲಿಮೆಂಟ್ ಸದಸ್ಯನಾದ.ಸ್ತ್ರೀಯರು ರಾಜಕೀಯಕ್ಕೆ ಪ್ರವೇಶಿಸುವುದನ್ನು ಆಸ್ ಕ್ವಿತ್ ಪ್ರಾರಂಭದಿಂದ ಪ್ರಬಲವಾಗಿ ವಿರೋಧಿಸುತ್ತ ಬಂದಿದ್ದರೂ ಯುದ್ಧಕಾಲದಲ್ಲಿ ಅವರು ಸಲ್ಲಿಸಿದ ಅನುಪಮ ಸೇವಾ ಮನೋಭಾವವನ್ನು ಮೆಚ್ಚಿ,ಅವರಿಗೂ ರಾಜಕೀಯ ಜೀವನದಿಂದ ನಿವೃತ್ತನಾದ.1925ರಲ್ಲಿ ಆಸ್ ಕ್ವಿತ್ ನ ಸೇವೆಯನ್ನು ಪ್ರಶಂಸಿಸಿ ಅರ್ಲ್ ಆಫ್ ಆಕ್ಸ್ ಫರ್ಡ್ ಎಂಬ ಬಿರುದು ನೀಡಿ ಗೌರವಿಸಲಾಯಿತು.1926ರಲ್ಲಿ ಮೆಮಾಯಾರ್ಸ್ ಮತ್ತು ರಿಪ್ಲೆಕ್ಷನ್ ಎಂಬ ಇವನ ಕೃತಿಗಳು ಇವನ ಜೀವನದ ಮತ್ತು ಅಂದಿನ ಜನಜೀವನದ ಉತ್ತಮ ಚಿತ್ರಗಳನ್ನು ಒದಗಿಸುತ್ತವೆ. (ಕೆ.ಎಸ್.ಎನ್) ಆಸ್ಕರ್ ಪುರಸ್ಕಾರ: ಈ ಪುರಸ್ಕಾರವನ್ನು ಸಿನಿರಂಗದ ಅತ್ಯುತ್ತಮ ನಿರ್ದೇಶಕರು,ನಟನಟಿಯರು,ಲೇಖಕಾರಿಗೆ 'ಅಮೆರಿಕನ್ ಅಕ್ಯಾಡೆಮಿ ಆಫ಼್ ಮೋಷನ್ ಪಿಕ್ಚರ್ಸ್ ಆಂಡ್ ಸೈನ್ಸಸ್' (AMPAS) ಸಂಸ್ಥೆಯು ನೀಡುತ್ತದೆ. 'ಆಸ್ಕರ್ ಕಿರುಪ್ರತಿಮೆ'ಯನ್ನು 'ಅಕ್ಯಾಡೆಮಿ ಅವಾರ್ಡ್ ಆಫ಼್ ಮೆರಿಟ್' ಎಂದು ಕರೆಯಲಾಗಿದೆ.ಇದು ಒಂಬತ್ತು ಅಕಾಡೆಮಿ ಪುರಸ್ಕಾಗಳಲ್ಲಿ ಒಂದಾಗಿದೆ. ಪ್ರಪಂಚದಲ್ಲೇ ಅತ್ಯಂತ ಪುರಸ್ಕಾರಗಳಲ್ಲೊಂದಾದ ಆಸ್ಕರ್ ಪುರಸ್ಕಾರ ಪ್ರದಾನ ಸಮಾರಂಭವನ್ನು ಪ್ರತಿವರ್ಷ ಒಂದು ನೂರು ದೇಶಗಳಲ್ಲಿ ದೂರದರ್ಶನದಲ್ಲಿ ನೇರಪ್ರಸಾರ ಮಾಡಲಾಗುವುದು. ಇದು ತುಂಬ ಪ್ರಾಚೀನವಾದುದು,ಇದರ ಸಂವಾದಿ ಪುರಸ್ಕಾರಗಳೆಂದರೆ (ಸಂಗಿತಕ್ಕೆ) ಗ್ರ್ಯಾಮಿ ಪುರಸ್ಕಾರ,'ಟೆಲಿವಿಷನ್'ಗೆ ಎಮ್ಮಿ ಪುರಸ್ಕಾರ ಮತ್ತು (ರಂಗಕ್ಷೇತ್ರಕ್ಕೆ) ಟೋನಿ ಪುರಸ್ಕಾರ. AMPAS ಸಂಸ್ಥೆಯು ಮೆಟ್ರೋ-ಗೋಲ್ಡ್ವಿನ್-ಮೇಯರ್ ಸ್ಟುಡಿಯೋದ ಮಾಲೀಕ ಲೂಯಿ,ಬಿ.ಮೇಯರನ ಚಿಂತನೆಯ ಫಲ.ಈ ಸಂಸ್ಥೆ ಸಿನಿಮಾ ಉದ್ಯಮದ ಬಗ್ಗೆ ಜನಾಭಿಪ್ರಾಯ ಸುಧಾರಿಸುವಂತೆ ಮಾಡಿ,ಕಾರ್ಮಿಕ ಕಲಹಗಳನ್ನು ನಿವಾರಿಸಲು ನೆರವು ನೀಡುತ್ತದೆ. ಮೊದಲನೆಯ 'ಅಕ್ಯಾಡೆಮಿ ಪುರಸ್ಕಾರ' ಸಮಾರಂಭವು 1929ರ ಮೇ 16ರಂದು ಹಾಲಿವುಡ್ ನ 'ಹೋಟೆಲ್ ರೂಸ್ ವೆಲ್ಟ್'ನಲ್ಲಿ 270 ಜನ ಪ್ರೇಕ್ಷಕರ ಎದುರು ನಡೆಯಿತು.84ನೇ ಆಸ್ಕರ್ ಪುರಸ್ಕಾರ ಸಮಾರಂಭವು (2011ರ ಚಲನಚಿತ್ರಗಳಿಗೆ ಸಂಬಂಧಿಸಿದ್ದು) 2012ರ ಫೆಬ್ರವರಿ 26ರಂದು ಹಾಲಿವುಡ್ ಆಂಡ್ ಹೈಲ್ಯಾಂಡ್ ಸೆಂಟರ್ ನಲ್ಲಿ ನಡೆಯಿತು.ಚಲನಚಿತ್ರಕ್ಷೇತ್ರದಲ್ಲಿ ಮಹತ್ತ್ವಪೂರ್ಣ ಕೊಡುಗೆ ನೀಡಿದ ಗಣ್ಯರು ಇದರ ಸದಸ್ಯರಾಗಿರುವರು.ಇವರು AMPASನ ಆಡಳಿತ ಮಂಡಳಿಯ ಸದಸ್ಯರು.ಅನೇಕ ವರ್ಷಗಳ ಕಾಲ ಸೋಮವಾರ ರಾತ್ರಿ 9 ಗಂಟೆಗೆ (ಪೂರ್ವ ಪೆಸಿಫಿಕ್ ಕಾಲಮಾನ) ನಡೆಯುತ್ತಿದ್ದ ಸಮಾರಂಭವು ಹೆಚ್ಚು ಹೆಚ್ಚು ಪ್ರೇಕ್ಷಕರನ್ನು ಆಕರ್ಷಿಸಲು,1999ರಿಂದ ಈಚೆಗೆ ಭಾನುವಾರಗಳಂದು ರಾತ್ರಿ 8.30 ಗಂಟೆಗೆ ನಡೆಯುತ್ತದೆ. 2012ರಲ್ಲಿ AMPAS ಸಂಸ್ಥೆಯಲ್ಲಿ 5783 ಜನ ಮತ ಚಲಾಯಿಸುವ ಹಕ್ಕುಗಳ ಸದಸ್ಯರಿದ್ದಾರೆ.ಇಂಗ್ಲಿಷ್ ಭಾಷೆಯನ್ನು ಬಿಟ್ಟು ಬೇರೆ ಭಾಷೆಯ ಚಿತ್ರಗಳನ್ನು ಈ ಪುರಸ್ಕಾರಕ್ಕೆ ಪರಿಶೀಲಿಸಿರಿವುದು ಕಡಿಮೆ.ಇದುವರೆಗೆ ಕೇವಲ ಇತರ ಎಂಟು ಭಾಷೆಯ ಚಿತ್ರಗಳಿಗೆ (ಫ್ರೆಂಚ್,ಸ್ವೀಡಿಷ್,ಇಟ್ಯಾಲಿಯನ್,ಸ್ಪ್ಯಾನಿಷ್,ಚೀನೀ,ಜಪಾನಿ ಮೊದಲಾದವು)