ಪುಟ:Mysore-University-Encyclopaedia-Vol-2-Part-1.pdf/೧೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನೀಡಲಾಗಿದೆ.ರಿಚರ್ಡ್ ಅಟೆನ್ ಬರೊ ನಿರ್ಮಾಪಕತ್ವದ 'ಗಾಂಧಿ'(೧೯೮೨)ಕ್ರಿಶ್ಚಿಯನ್ ಕಾಲ್ಸ್ನ್ ನಿರ್ಮಾಪಕತ್ವದ'ಸ್ಲಮ್ ಡಾಗ್ ಮಿಲಿಯನೇರ್'ಚಿತ್ರಗಳೂ ಆಸ್ಕರ್ ಪುರಸ್ಕೃತ ಚಿತ್ರಗಳಾಗಿವೆ.

ಆಸ್ಟಟೀನ್:ಅತ್ಯಧಿಕ ಭಾರದ ಹ್ಯಾಲೋಜನ್,ವಿಕಿರಣಪಟು ಧಾತು,ಸಂಕೇತ At,ಪರಮಾಣು ಸಂಖ್ಯೆ ೮೫.೧೯೪೦ ರಲ್ಲಿ ಸೆಗ್ರೆ.ಮೆಕೆನ್ಸೀ ಮತ್ತು ಕಾರ್ಸನ್ ಇವರು ಬಿಸ್ಮತ್ ೨೦೯ನ್ನು ಆಲ್ಫ ಕಣದಿಂದ ತಾಡಿಸಿ ೨೧೧ ತೂಕದ ಈ ಧಾತುವಿನ ಸಮಸ್ಥಾನಿಯೊಂದನ್ನು(ಐಸೊಟೋಪ್)ತಯಾರಿಸಿದರು.

ಇದರ ಅರ್ಧಾಯು ೭.೫ಗಂಟೆ.೨೦೧-೨೧೯ವರೆಗೆ ತೂಕವಿರುವ ಅನೇಕ ಸಮಸ್ಥಾನಿಗಳಿವೆ.ಇವುಗಳಲ್ಲಿ ಕೆಲವು ವಿವಿಧ ವಿಕಿರಣ ಶ್ರೇಣಿಗಳಲ್ಲಿ ಕಂಡುಬರುವುದಾದರೂ ಯಾವುದಕ್ಕೂ ಅರ್ಧಾಯೂ ೮.೫ ಗಂಟೆಗಳಿಗಿಂತ ಹೆಚ್ಚಿಗೆ ಇಲ್ಲ.ರಾಸಾಯನಿಕವಾಗಿ ಇದು ಹ್ಯಾಲೋಜನ್.ಅಂತೆಯೇ ಅಯಾನುಗಳನ್ನು ಗುರುತಿಸಲಾಗಿದೆ.ಆವರ್ತಕೋಷ್ಟಕದಲ್ಲಿ ಇದರ ಸಮೀಪವಿರುವ ಧಾತುಗಳನ್ನು ಶಕ್ತಿಯುತವಾದ ಕಣಗಳಿಂದ ಘಾತಿಸುವುದರಿಂದಲೂ ಆಸ್ಟಟೀನನ್ನು ತಯಾರಿಸಬಹುದು.ಉದಾಃಗೆ.ಇದು ಹ್ಯಲೋಜನ್ ಮತ್ತು ಅಯೊಡೀನ್ ಗಿಂತ ಹೆಚ್ಚು ಲೋಹಗುಣವುಳ್ಳದ್ದೆಂದು ಕಂಡುಬಂದಿದೆ.ಅಲ್ಪ ಪ್ರಮಾಣದಲ್ಲಿ ನಿಸರ್ಗದಲ್ಲಿದೆಯೆಂದು ಈಚೆಗೆ ತಿಳಿದುಬಂದಿದೆ.ಅಭದ್ರ,ಅಸ್ಥಿರ ಎಂದು ಅರ್ಥವಿರುವ ಒಂದು ಗ್ರೀಕ್ ಪದದಿಂದ ಆಸ್ಟಟೀನ್ ಪದ ನಿಷ್ಪನ್ನವಾಗಿದೆ.

ಆಸ್ಟನ್,ಫ್ರಾನ್ಸಿಸ್ ವಿಲಿಯಂ:೧೮೭೭-೧೯೪೫.ಬ್ರಿಟನ್ನಿನ ರಸಾಯನ ಮತ್ತು ಭೌತವಿಜ್ಞಾನಿ.ಪ್ರೌಢಶಾಲೆಯ ಕೊನೆಯ ಪರೀಕ್ಷೆಯಲ್ಲಿ ಇವನದೇ ಪ್ರಥಮಸ್ಥಾನ(೧೮೯೩).ಅಲ್ಲಿ ಕಲಿತದ್ದು ವಿಜ್ಞಾನ ಮತ್ತು ಗಣಿತ.ಮುಂದೆ ಮ್ಯಾಲ್ ವರ್ನ್ ಕಾಲೇಜ್,ಬರ್ಮಿಂಗ್ಯ್ಹಾಮ್ ಮಾತು ಕೇಂಬ್ರಿಜ್ ವಿಶ್ವವಿದ್ಯಾನಿಲಯದಲ್ಲಿ ಸಹಾಯಕ ಉಪಾಧ್ಯಾಯನಾಗಿ ಸೇರಿದ(೧೯೦೯).ಇವನಿಗೆ ೧೯೨೦ರಲ್ಲಿ ಕೇಂಬ್ರಿಜ್ ನ ಟ್ರಿನಿಟಿ ಕಾಲೇಜಿನ ಫೆಲೋ ಪದವಿ ದೊರಕಿತು.ಒಂದೇ ರಾಸಯಾನಿಕ ಗುಣಗಳಿದ್ದರೂ ಬೇರೆ ಬೇರೆ ಪರಮಾಣುಗಳಿರುವ ಸಮಸ್ಥಾನಿಗಳನ್ನು(ಐಸೋಟೊಪ್ಸ್)ನಿಷ್ಕೃಷ್ಟವಾದ ರೀತಿಯಲ್ಲಿ ಕಂಡುಹಿಡಿಯಲು ಜಡತ್ವರೋಹಿತಲೇಖಕ(ಮಾಸ್ ಸ್ಪೆಕ್ಟ್ರೋಗ್ರಾಫ್)ಎಂಬ ಉಪಕರಣವನ್ನು ನಿರ್ಮಿಸಿದ.ಇದರ ಸಹಾಯದಿಂದ ಎಲ್ಲ ಮೂಲವಸ್ತುಗಳಿಗೂ ಸಮಾಸ್ಥಾನಿಗಳನ್ನು ಕಂಡುಹಿಡಿಯುವುದರಲ್ಲಿ ನಿರತನಾಗಿ ಪರಮಾಣು ಭಾರಗಳನ್ನು ಹತ್ತು ಸಾವಿರದಲ್ಲೊಂದಕ್ಕಿಂತ ಕಡಿಮೆ ಅನಿಶ್ಚಿತತ್ವವಿರುವಂತೆ ಬಲು ನಿಷ್ಕೃಷ್ಟವಾಗಿ ನಿರ್ಧರಿಸಿದ್ದಾನೆ.ಈ ಸಾಧನೆಗಾಗಿ ರಸಾಯನವಿಜ್ಞಾನ ವಿಭಾಗದ ನೊಬೆಲ್ ಪಾರಿತೊಷಕ ಇವನಿಗೆ ದೊರಕಿತು(೧೯೨೨).ಮೆಕೆನ್ಸಿ ಡೇವಿಡ್ ಸನ್ ಪದಕ ೧೯೨೦ರಲ್ಲೂ ಹ್ಯೂಸ್ ಪದಕ ೧೯೨೨ರಲ್ಲೂ ರಾಯಲ್ ಪದಕ ೧೯೩೮ರಲ್ಲೂ ದೊರೆತುವಲ್ಲದೆ ಇನ್ನೂ ಅನೇಕ ಪದಕಗಳೂ ಎಫ್.ಆರ್.ಎಸ್.ಎಂಬ ಗೌರವವೂ ಇವನಿಗೆ ಲಭಿಸಿದವು.ಐಸೋಟೋಪ್ಸ್ ಎಂಬ ಪುಸ್ತಕವನ್ನು ೧೯೩೩ರಲ್ಲೂ ಇವನು ಬರೆದು ಪ್ರಸಿದ್ಧಪಡಿಸಿದ.ಇವು ಜಡತತ್ವರೋಹಿತದ ವಿಷಯದಲ್ಲಿ ಆದರ್ಶ ಪುಸ್ತಕಗಳಾಗಿವೆ.

ಆಸ್ಟನ್ ಸುಪ್ರಸಿದ್ಧ ಬ್ರಿಟಿಷ್ ಭೌತವಿಜ್ಞಾನಿ ಜೆ.ಜೆ.ಥಾಮ್ ಸನ್ ನ ಸಹಾಯಕನಾಗಿ ಕೆಲಸಮಾಡಿ ಬೆಳಕಿಗೆ ಬಂದವ.ಕಾಂತಕ್ಷೇತ್ರಗಳಲ್ಲಿ ಧನವಿದ್ಯುದಂಶದಿಂದ ಕೂಡಿದ ಆಯಾನುಗಳ ವಿಚಲನವನ್ನು(ಡಿಪ್ಲೆಕ್ಷನ್ ಆಫ್ ಪಾಸಿಟಿವ್ ಲಿ ಚಾರ್ಜ್ಡ್ ಅಯಾನ್ಸ್ ಇನ್ ಮ್ಯಾಗ್ನೆಟಿಕ್ ಫೀಲ್ಡ್ಸ್)ಕಂಡುಹಿಡಿಯಲು ಥಾಮ್ಸನ್ ನಿರ್ಮಿಸಿದ್ದ ಉಪಕರಣವನ್ನು ಇವನು ಸುಧಾರಿಸಿದ.ಇದರ ಪರಿಣಾಮವಾಗಿ ಒಂದು ನಿರ್ದಿಷ್ಟ ರಾಶಿಯ ಎಲ್ಲ ಅಯಾನುಗಳೂ ಫೋಟೋಗ್ರಾಫ್ ಫಿಲ್ಮಿನ ಒಂದು ಸೂಕ್ಷ್ಮರೇಖೆಯಲ್ಲಿ ಕೇಂದ್ರೀಕೃತವಾಗುವುದು ಸಾಧ್ಯವಾಯಿತು.ಪರಮಾಣುಗಳ ಭಾರವನ್ನು ನಿಷ್ಕೃಷ್ಟವಾಗಿ ನಿರ್ಣಯಿಸುವಲ್ಲಿ ಇದು ಮಹತ್ತ್ವದ ಸುಧಾರಣೆ.ಭವಿಷ್ಯದಲ್ಲಿ ಮನುಷ್ಯ ಪರಮಾಣು ಶಕ್ತಿಯನ್ನು ಪಡೆಯುವ ಸಾಹಸ ಸಾಧಿಸುತ್ತಾನೆ ಎಂದು ಆಸ್ಟನ್ ದೃಢವಾಗಿ ನಂಬಿದ್ದ.ಇಂಥ ಸನ್ನಿವೇಶದಲ್ಲಿ ಒದಗಬಹುದಾದ ಅಪಾಯಗಳನ್ನು ಕುರಿತು ಅವನು ತನ್ನ ನೊಬೆಲ್ ಬಹುಮಾನಸಂಬಂಧ ಭಾಷಣದಲ್ಲಿ ಪ್ರಸ್ತಾಪಿಸಿದ್ದಾನೆ.ಅಂದು ಇವನ ಜೀವನದ ಕೊನೆಯ ತಿಂಗಳುಗಳಲ್ಲಿ ಬಂದ ಹಿರೋಷೀಮಾದ ಪರಮಾಣು ಬಾಂಬ್ ಹತ್ಯಾಕಾಂಡದ ವರದಿ ಆಸ್ಟನ್ ಕನಸುಗಾರನಲ್ಲ ಎಂದು ಸಿದ್ಧಪಡೆಸಿತು.

ಆಸ್ಟರ್:ಬಹುಜನಪ್ರಿಯವೂ ರಮ್ಯವೂ ಆದ ವಾರ್ಷಿಕ ಸಸ್ಯ ಆಸ್ಟರೇಸೇ ಅಥವಾ ಕಾಂಪಾಸಿಟೀ ಕುಟುಂಬಕ್ಕೆ ಸೇರಿದೆ.ಸೀಮೆ ಸೇವಂತಿಗೆಯೆಂದೂ ಕರೆಯುತ್ತಾರೆ.ಇದನ್ನು ಮಡಿಗಳಲ್ಲೂ ಕುಂಡಗಳಲ್ಲೂ ಬೆಳೆಸುತ್ತಾರೆ.ಸೇವಂತಿಗೆಯಂತಿರುವ ಈ ಹೂಗಳನ್ನು ಮಂಜರಿಗಳಿಗೂ(ಬುಕೆ)ಕಳಶಗಳಲ್ಲಿ ಜೋಡಿಸುವುದಕ್ಕೂ ಮುಡಿಯಲೂ ಉಪಯೋಗಿಸಬಹುದು.ಇಂದಿನ ಹೂವಾಡಿಗರು ಬಳಸುವ ಆಸ್ಟರ್ ಹೂ ೧೭೩೧ರಲ್ಲಿ ಜೆಸ್ಯೂಟ್ ಪಾದ್ರಿಗಳು ಚೀನದಿಂದ ತಂದ ಒಂದು ವಿಧದ ಏಕದಳ ಪುಷ್ಪ.ಅದು ಕ್ರಮಕ್ರಮವಾಗಿ ವಿಕಾಸಗೊಂಡು ಇಂದಿನ ಸ್ವರೂಪವನ್ನು ತಾಳಿದೆ.ಬೆಳೆವಣಿಗೆ,ಬಣ್ಣ ಮತ್ತು ಹೂಗಳ ಆಕಾರಗಳಲ್ಲಿ ವೈವಿಧ್ಯವಿರುವ ಆಸ್ಟರ್ ಹೂಗಳು ಈಗ ಎಲ್ಲೆಲ್ಲೂ ದೊರೆಯುತ್ತವೆ.ಗಿಡ ಸಣ್ಣ ಸಣ್ಣ ರೆಂಬೆಗಳೊಡನೆ ೧-೩ಮೀ ಎತ್ತರದವರೆಗೆ ಹರಡಿಕೊಂಡು ಪೊದೆಯಂತೆ ಅಚ್ಚುಕಟ್ಟಾಗಿ ಬೆಳೆಯುತ್ತದೆ.ಆಸ್ಟರ್ ನಲ್ಲಿ ಹಳದಿ ಬಣ್ಣವನ್ನುಳಿದು ಮಿಕ್ಕ ಎಲ್ಲ ಬಣ್ಣದ ಹೂಗಳನ್ನೂ ಬಿಡುವ ಜಾತಿಗಳಿವೆ.ಇವುಗಳಲ್ಲಿ ಕ್ಯಾಲಿಫ಼ೊರ್ನಿಯನ್ ಜಯಂಟ್,ಕಾಮೆಟ್,ವಿಕ್ಟೋರಿಯ,ಮ್ಯಾಮತ್,ಪ್ಯೂನಿಪ್ಲವರ್ಡ್ ಮತ್ತು ಬ್ರ್ಯಾಂಚಿಂಗ್ ಆಸ್ಟರುಗಳು ಮುಖ್ಯವಾದುವು.

ಆಸ್ಟರುಗಳನ್ನು ಬೆಳೆಸುವುದು ಬಲು ಸುಲಭ.ಇವುಗಳಿಗೆ ಬಲು ಹಗುರವಾದ,ನೀರು ಸುಲಭವಾಗಿ ಇಂಗಿಹೋಗುವ ಮಣ್ಣು ಅಗತ್ಯ.ಇವನ್ನು ವರ್ಷದ ಎಲ್ಲ ಕಾಲಗಳಲ್ಲೂ ಹೆಚ್ಚು ಮಳೆ ಬೀಳುವ ಮಧ್ಯಮ ಪ್ರದೇಶಗಳಲ್ಲಿ ಬೆಳೆಸಬಹುದು.ಬಿತ್ತಿದ ಮೇಲೆ ೩-೪ ತಿಂಗಳಲ್ಲಿ ಹೂ ಬರುತ್ತವೆ.ಕ್ಯಾಲಿಫ಼ೊರ್ನಿಯನ್ ಜಯಂಟ್ ಮತ್ತು ಇತರ ಕೆಲವು ಆಸ್ಟರುಗಳು ೪-೫ ತಿಂಗಳಲ್ಲಿ ಹೂ ಬಿಡುತ್ತವೆ.ಸಸಿಗಳು ಆರು ಎಲೆಯಾದಾಗ ೩-೪ಮೀ ಅಂತರ ಕೊಟ್ಟು ನೆಡಬೇಕು.ಗಿಡ ೧೦ಸೆಂಮೀ-೯೦ಸೆಂಮೀ ಎತ್ತರದವರೆಗೂ ಬೆಳೆಯುತ್ತದೆ.ಕೆಂಪು ಇರುವೆಗಳು,ಕಿತ್ತಳೆ ಬಣ್ಣದ ಬೀಟಲ್ ಮತ್ತು ಲಾರ್ವಗಳು ಆಗಾಗ್ಗೆ ಬಂದು ಗಿಡಗಳನ್ನು ತಿಂದು ಹಾಳುಮಾಡುವುದುಂಟು.ಶೇ ೫೦ ಡಿ.ಡಿ.ಟಿ.ಅಥವಾ ಯಾವುದಾದರೂ ಕ್ರಿಮಿನಾಶಕವನ್ನು ಸಿಂಪಡಿಸುವುದರಿಂದ ಅಂಥ ಪಿಡುಗುಗಳನ್ನು ನಿವಾರಿಸಬಹುದು.

ಆಸ್ಟರಾಯ್ಡ್ ಗಳು:ನೋಡಿ-ಕ್ಷುದ್ರಗ್ರಹಗಳು

ಆಸ್ಟರ್ ಲಿಟ್ಸ್ ಕದನ:ಈ ಕದನದಲ್ಲಿ ನೆಪೋಲಿಯನ್ ೧೮೦೫ ಡೆಸೆಂಬರ್ ೨ನೆಯ ತಾರೀಖು ಆಸ್ಟ್ರಿಯ ಮತ್ತು ರಷ್ಯ ರಾಜ್ಯಗಳ ಸಂಯುಕ್ತ ಸೈನ್ಯವನ್ನೆದುರಿಸಿ,ಪ್ರಚಂಡ ವಿಜಯ ಗಳಿಸಿದ.ಆಸ್ಟ್ರಿಯದ ಮತ್ತು ರಷ್ಯದ ಚಕ್ರವರ್ತಿಗಳೇ ಈ ಕದನದಲ್ಲಿ ಭಾಗವಹಿಸಿದ್ದರಿಂದ ಇದನ್ನು ಮೂರು ಸಾಮ್ರಾಟರ ಕದನ ಎಂದೂ ಕರೆಯುತ್ತಾರೆ.ಇದರಲ್ಲಿ ನೆಪೋಲಿಯನ್ ತೋರಿಸಿದ ವ್ಯೂಹನಿರ್ಮಣವಿವೇಕ,ಸೈನ್ಯಸಂಚಾಲನೋಪಾಯಗಳು ಇಡೀ ಯುರೋಪನ್ನೇ ದಿಗ್ಭ್ರಮೆಗೆಳಿಸಿದವು.ಮುಂದೆ ಕೆಲವು ವರ್ಷಕಾಲ ಅವನ ಸೈನ್ಯವನ್ನೆದುರಿಸಲು ಯುರೋಪಿನ ಇತರ ರಾಷ್ಟ್ರಗಳು ಹೆದರಿದವು.ಈ ವಿಜಯ ಪ್ರಾಪ್ತವಾದದ್ದು ಆತ ಚಕ್ರವರ್ತಿ ಪದವಿ ಧರಿಸಿದ ಮೊದಲ ವಾರ್ಷಿಕೋತ್ಸವದ ದಿನ.ಲಿಯೋ ಟಾಲ್ ಸ್ಟಾಯ್ ತನ್ನ ವಾರ್ ಅಂಡ್ ಪೀಸ್ ಎಂಬ ಭವ್ಯ ಕಾದಂಬರಿಯಲ್ಲಿ ಈ ಕದನವನ್ನು ಮನೋಜ್ಞವಾಗಿ ಚಿತ್ರಿಸಿದ್ದಾನೆ.

ಆಸ್ಟಿನ್,ಜಾನ್:೧೭೯೦-೧೮೫೯.ಇಂಗ್ಲೆಂಡಿನ ನ್ಯಾಯಶಾಸ್ತ್ರಜ್ಞ ಹುಟ್ಟಿದ್ದು ಸಫ಼ೋಕ್ ನ ಕ್ರೀಟಿಂಗ್ ಮಿಲ್ ನಲ್ಲಿ.ಚಿಕ್ಕ ವಯಸ್ಸಿನಲ್ಲಿ ಸೈನ್ಯಕ್ಕೆ ಸೇರಿ,ಐದು ವರ್ಷಗಳ ಕಾಲ ಅಮೂಲ್ಯವಾದ ಸೇವೆಯನ್ನು ಸಲ್ಲಿಸಿ,ಆನಂತರ ವಿದ್ಯಾಬ್ಯಾಸದತ್ತ ಮನಸ್ಸು ತಿರುಗಿಸಿ,೧೮೧೮ರಲ್ಲಿ ಬ್ಯಾರಿಸ್ಟರ್ ಆದ.೧೮೨೦ರಿಂದ ಕೆಲವು ಕಾಲ ವಕೀಲ ವೃತ್ತಿಯಲ್ಲಿದ್ದು,ಅನಾರೋಗ್ಯದ ನಿಮಿತ್ತ ಅದನ್ನು ತ್ಯಜಿಸಿ,೮೨೬ರಲ್ಲಿ ಹೊಸದಾಗಿ ಸ್ತಾಪಿತವಾದ ಲಂಡನ್ ವಿಶ್ವವಿದ್ಯಾನಿಲಯದಲ್ಲಿ ನ್ಯಾಯಶಾಸ್ತ್ರದ ಪ್ರಾಧ್ಯಪಕನಾದ.೧೮೨೦ರಲ್ಲು ನಾರ್ ವಿಚ್ ನ ಸರಾಹ್ ಟೇಲರ್ ಳನ್ನು ಮದುವೆಯಾದ.ಎರಡು ವರ್ಷಗಳ ಕಾಲ ಜರ್ಮನಿಯಲ್ಲಿ ಪ್ರವಾಸ ಮಾಡಿ,ನ್ಯಾಯಶಾಸ್ತ್ರದ ಬಗ್ಗೆ ಉನ್ನತಮಟ್ಟದ ಪಾಂಡಿತ್ಯ ಪಡೆತು ೧೮೨೮ರಲ್ಲಿ ಲಂಡನ್ ವಿಶ್ವವಿದ್ಯಾನಿಲಯಕ್ಕೆ ಹಿಂದುರಿಗಿದ.ನಾಲ್ಕು ವರ್ಷಗಳ ಕಾಲ ನ್ಯಾಯಶಾಸ್ತ್ರದ ಬಗ್ಗೆ ಉಪನ್ಯಾಸ ಮಾಡಿ ೧೮೩೨ರಲ್ಲಿ ದಿ ಪ್ರಾವಿನ್ಸ್ ಆಫ್ ಜೂರಿಸ್ ಪ್ರೊಡೆನ್ಸ್ ಡಿಟರ್ಮಿನ್ಡ್ ಎಂಬ ತನ್ನ ಆರು ಉಪನ್ಯಾಸಗಳನ್ನೊಳಗೊಂಡ ಪುಸ್ತಕವನ್ನು ಪ್ರಕಾಶಪಡಿಸಿದ.ಅದೇ ವರ್ಷ ಪ್ರಾಧ್ಯಾಪಕ ಪದವಿಗೆ ರಾಜೀನಾಮೆಯಿತ್ತ.ಕೆಲವು ಕಾಲ ಪಾರ್ಲಿಮೆಂಟರಿ ಕಮಿಷನ್ ಗಳಲ್ಲಿ ಕೆಲಸ ಮಾಡಿ ಲಂಡನ್ನಿನ ಇನ್ನರ್ ಟೆಂಪಲ್ನಲ್ಲಿ ಉಪನ್ಯಾಸಕನಾಗಿ ಕೆಲಸ ಮಾಡಿದ.ಆನಂತರ ಮಾಲ್ಟದ ಬ್ರಿಟಿಷ್ ಕಲೋನಿಯಲ್ ಕಚೇರಿಯಲ್ಲಿ ಸೇವೆ ಸಲ್ಲಿಸಿದ.ಆ ವೇಳೆಗೆ ಆತನ ಪುಸ್ತಕ ಸಾಮಾನ್ಯರ ಪ್ರಶಂಸೆಗೆ ಒಳಗಾಗದೆ ಹೋದರೂ ತಜ್ಞರಿಂದ ಶ್ರೇಷ್ಠ ಗ್ರಂಥವೆಂದು