ಪುಟ:Mysore-University-Encyclopaedia-Vol-2-Part-1.pdf/೧೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಾಯುಗುಣ:ಖಂಡದ ಮಧ್ಯಭಾಗದಲ್ಲಿ ಪೂರ್ವ ಪಶ್ಚಿಮವಾಗಿ ಮಕರ ಸಂಕ್ರಾಂತಿ ವೃತ್ತ ಹಾದುಹೋಗುತ್ತದೆ.ಇದರ ಉತ್ತರಕ್ಕಿರುವ ಪ್ರದೇಶ ಉಷ್ಣವಲಯದ ವಾಯುಗುಣವನ್ನೂ ಇದರ ಎರಡಷ್ಟು ವಿಸ್ತಾರವಾಗಿರುವ ದಕ್ಷಿಣ ಸಮಶೀತೋಷ್ಣ ವಾಯುಗುಣವನ್ನು ಹೊಂದಿವೆ.

ಮೆಡಿಟರೇನಿಯನ್ ವಾಯುಗುಣ ಹೊಂದಿದ ವಿಕ್ಟೋರಿಯ,ಮೆಲ್ಬರ್ನ್ಗಳಿಂದ ಅತ್ಯುಷ್ಣ ಪ್ರದೇಶವಾದ ಕ್ವೀನ್ಸ್ ಲೆಂಡ್ ನವರೆಗೂ ಇಲ್ಲಿನ ವಾಯುಗುಣ ಬದಲಾಗುತ್ತ ಹೋಗುತ್ತದೆ.ಶೀತೋಷ್ಣಗಳ ವೈಪರೀತ್ಯ ಕಂಡುಬರುವುದು ಆಲಿಸ್ ಸ್ಟ್ರಿಂಗ್ಸ್ ಪ್ರದೇಶದಲ್ಲಿ:ಅಲ್ಲಿ ಬೇಸಿಗೆಯಲ್ಲಿ ೪೭.೨ಸೆ. ಮತ್ತು ಚಳಿಗಾಲ (೫*ಸೆ.)ಉಷ್ಣತೆ ಇರುತ್ತದೆ.ಇಡೀ ಆಸ್ಟ್ರೇಲಿಯದ ವಾರ್ಷಿಕ ಮಳೆ ೨೫ ಸೆಂ.ಮೀ. ಅದರ ಪ್ರದೇಶಗಳಲ್ಲಿ ಚಳಿಗಾಲದಲ್ಲೂ ಬೀಳುತ್ತದೆ.ದಕ್ಷಿಣ ತೀರಪ್ರದೇಶದ ವಾಯುಗುಣ ಆಲ್ಜೀರಿಯ.ಸ್ಪೇನ್,ಕ್ಯಾಲಿಫೋರ್ನಿಯಗಳ ವಾಯುಗುಣದಂತೆ;ಅಂದರೆ ಹೆಚ್ಚು ಶಾಖವಿರುವ ಮಳೆಯಿಲ್ಲದ ಬೇಸಗೆ,ಚಳಿ ಕಡಿಮೆಯಾದ ಮಳೆ ಬೀಳುವ ಚಳಿಗಾಲ.

ಟಾಸ್ಮೇನಿಯದ ವಾಯುಗುಣ ಪ್ರಧಾನವಾಗಿ ವರ್ಷಪೂರ್ತಿ ಪಶ್ಚಿಮದಿಂದ ಬೀಸುವ ವಾಣಿಜ್ಯ ಪ್ರತಿಮಾರುತಗಳನ್ನವಲಂಬಿಸಿದೆ.ಮೆಲ್ಬರ್ನ್ ಸುತ್ತಮುತ್ತಣ ಪ್ರದೇಶ ಪೂರ್ತಿ ಈ ಮಾರುತದ ಪ್ರಭಾವಕ್ಕೊಳಪಟ್ಟಿದೆ.ಸಿಡ್ನಿ ಬಳಿಯ ತೀರದಲ್ಲಿ ಬೇಕಾದಷ್ಟು ಮಳೆ ಬೀಳುತ್ತದೆ.ಪಶ್ಚಿಮ ಆಸ್ಟ್ರೆಲಿಯದ ಮಧ್ಯಭಾಗದ ಮರುಭೂಮಿಯನ್ನು ತಲಪುವ ಮಾರುತಗಳು ಅರೆ ಉಷ್ಣವಲಯದ ಹೆಚ್ಚು ಒತ್ತಡವಿರುವ ಕಡೆಗೆ ಬರುವುದರಿಂದ ಆಗಾಗ್ಗೆ ಬಿರುಸಾಗುತ್ತದೆ.ಆದರೆ ಅವುಗಳಲ್ಲಿ ಜಲಾಂಶವಿರುವುದಿಲ್ಲ.

ಸ್ವಾಭಾವಿಕ ಸಸ್ಯವರ್ಗ:ಆಸ್ಟ್ರೇಲಿಯದ ಶೇ.೧ ಭಾಗಕ್ಕಿಂತಲೂ ಕಡಿಮೆ ಪ್ರದೇಶದಲ್ಲಿ ಅದರಲ್ಲೂ ಮರುಭೂಮಿಯ ಅಂಚುಗಳಲ್ಲಿ ಎತ್ತರಕ್ಕೆ ಬೆಳೆಯುವ ಹುಲ್ಲುಗಾವಲುಗಳಿವೆ.ಈ ಹುಲ್ಲನ್ನು ಕಾಂಗರೂ ಹುಲ್ಲು ಎಂದು ಕರೆಯುತ್ತಾರೆ.ತೀರಪ್ರದೇಶಗಳಲ್ಲಿ ದಟ್ಟವಾದ ಕಾಡುಗಳಿವೆ.ಕ್ವೀನ್ಸ್ ಲೆಂಡ್ ನ ಸದಾ ಹಸಿರಾಗಿರುವ ಮರಗಳು ಲಿಯಾನಾಸ್ ಮತ್ತು ಜರಿ ಮರಗಳನ್ನು ಒಳಗೊಂಡಿವೆ.ದಕ್ಷಿಣದ ಕಡೆಗೆ ಹೋದ ಹಾಗೆಲ್ಲ ಇವು ಸಮಶೀತೋಷ್ಣ ವಲಯದ ಕಾಡುಗಳಾಗಿ ಪರಿವರ್ತಿತವಾಗುತ್ತವೆ.ಈ ಕಾಡುಗಳಲ್ಲಿ ಮರಗಳ ಮಧ್ಯೆ ಬೆಳೆಯುವ ಕುರುಚಲು ಮುಂತಾದ ಸಸ್ಯಗಳಿಲ್ಲ.

ಇಲ್ಲೆಲ್ಲ ನೀಲಗಿರಿ ಮರಗಳು ಭವ್ಯವಾದುವು.ಇವುಗಳಲ್ಲಿ ೬೦೦ ವಿಧಗಳಿವೆ.ಕೆಲವು ಸ್ಥಳದಲ್ಲಿ ಇವು ೯೦ ಮೀ ಎತ್ತರವಾಗಿ ಬೆಳೆದಿವೆ.ಇದಕ್ಕಿಂತಲೂ ಹೆಚ್ಚು ಮಳೆ ಬೀಳುವ ಪ್ರದೇಶಗಳಲ್ಲಿ ಅಕೇಸಿಯ,ಮುಲ್ಫ್,ಮಲ್ಲೀ ಎನ್ನುವ ಹೆಚ್ಚು ಬೆಳವಣಿಗೆಯಿಲ್ಲದ ನೀಲಗಿರಿ(ಯೂಕಲಿಪ್ಟಸ್)ಮರಗಳು ಕಾಣುತ್ತವೆ.ಮರುಭೂಮಿಯ ಅಂಚುಗಳಲ್ಲಿನ ಶುಷ್ಕಭೂಮಿಯಲ್ಲಿ ಬೆಳೆಯುವ ಸಸ್ಯಗಳು ಅಂತರ್ಜಲವನ್ನು ಹೀರಿ ಜೀವಿಸುತ್ತವೆ.

ಪ್ರಾಣಿವರ್ಗ:ಈ ಖಂಡದಲ್ಲಿ ಬೇರೆಲ್ಲೂ ಇಲ್ಲದ ವಿಚಿತ್ರ ಪ್ರಾಣಿಗಳನ್ನು ಕಾಣಬಹುದು.ಕೆಲವು ಮನುಷ್ಯ ಹುಟ್ಟುವುದಕ್ಕೆ ಮುಂಚೆ ಇಲ್ಲಿ ಇದ್ದುವು.

ಸರೀಸೃಪಗಳು ಮತ್ತು ವಿಷಪೂರಿತ ಹಾವುಗಳು ಸಾಮನ್ಯವಾಗಿವೆ.ಪ್ಲಾಟಿಪಸ್ ಎನ್ನುವ ಸಸ್ತನಿ ಮೊಟ್ಟೆಗಳನ್ನಿಡುತ್ತದೆ ಮತ್ತು ಮರಿಗಳಿಗೆ ಮೊಲೆಯುಣಿಸುತ್ತದೆ.ಇದರ ಮೂತಿ ಬಾತಿನ ಕೊಕ್ಕಿನಂತಿದೆ.ಮೈತುಂಬ ತುಪ್ಪಳ ಚರ್ಮದ ಹೊದಿಕೆ ಇದೆ.

ಮಾರ್ಸ್ಯೂಪಿಯಲ್ ಎಂಬ ಇನ್ನೊಂದು ಸಸ್ತನಿ ಅರೆಬೆಳೆದ ಮರಿಗಳನ್ನು ಹಡೆದು ಆನಂತರ ಅವನ್ನು ತನ್ನ ಹೊಟ್ಟೆಯ ಹೊರ ಚೀಲದಲ್ಲಿಟ್ಟುಕೊಂಡು ಬೆಳೆಸುತ್ತದೆ.ಕಾಂಗರೂ,ಒಪ್ಪೋಸಂ ಇದೇ ರೀತಿಯ ಪ್ರಾಣಿಗಳು.ಕಾಂಗರೂ ಗಂಟೆಗೆ ೩೨ ಕಿಮೀ ವೇಗದಲ್ಲಿ ಓಡುತ್ತದೆ.ಈಮೂ ಎಂಬುದು ಇಲ್ಲಿನ ಪಕ್ಷಿಗಳಲ್ಲೆಲ್ಲ ದೊಡ್ಡದಾದುದು.ಲೈರ್ ಎಂಬ ನವಿಲಿನಂತಿರುವ ಸೊಗಸಾದ ಪಕ್ಷಿ ಇತರ ಧ್ವನಿಗಳನ್ನು ಬಹಳ ಚೆನ್ನಾಗಿ ಅನುಕರಿಸುತ್ತದೆ.ಡಿಂಗೊ ಎಂಬ ಕಾಡು ನಾಯಿ ನೋಡಲು ತೋಳದಂತಿದೆ.ವಲ್ಲಬಿ,ನೊಣಗಳನ್ನು ತಿನ್ನುವ ಎಕಿಡ್ನ,ಮರ ಹತ್ತುವ ಸಣ್ಣ ಆಕಾರದ ಕರಡಿ ಕೋಆಲ-ಇತ್ಯಾದಿ ಪ್ರಾಣಿಗಳು ಆಸ್ಟ್ರೇಲಿಯದ ರಕ್ಷಿತ ಕಾಡುಗಳಲ್ಲಿ ವಾಸಿಸುತ್ತವೆ.ಗಿಣಿಗಳು,ಉಷ್ಟ್ರಪಕ್ಷಿ,ಕ್ಯಾಸ್ಸೋವರಿ ಮತ್ತು ಇತರ ಬಗೆಯ ಪಕ್ಷಿಗಳೂ ಇಲ್ಲಿವೆ.

ವ್ಯವಸಾಯ:ಆಸ್ಟ್ರೇಲಿಯದಲ್ಲಿ ವ್ಯವಸಾಯಯೋಗ್ಯವಾದ ಭೂಮಿ ಬಹಳ ಕಡಿಮೆ.ಒಟ್ಟು ಭೌಗೋಳಿಕ ಪ್ರದೇಶದಲ್ಲಿ ಶೇ.೧೫ ಭಾಗ ಮಾತ್ರ ಕೃಷಿಗೆ ಯೋಗ್ಯ.ಸಮುದ್ರತೀರ ಮತ್ತು ನದಿ ಮೈದಾನಗಳಲ್ಲಿ ಮಾತ್ರ ವ್ಯವಸಾಯವಿದೆ.ಖಂಡದಲ್ಲಿ ಬಿಳಿಯ ಜನ ಹೆಚ್ಚಾಗಿ ಇರುವುದರಿಂದ ಸಮಶೀತೋಷ್ಣವಲಯದ ಬೆಳೆಗಳು ಹೆಚ್ಚಾಗಿ ಅಭಿವೃದ್ಧಿ ಹೊಂದಿವೆ.ಮುಖ್ಯಬೆಳೆ ಗೋದಿ,ಓಟ್ಸ್,ಕಬ್ಬು,ಬಾರ್ಲಿ,ಜೋಳ,ಆಲೂಗಡ್ಡೆ ಹಾಗೂ ಪ್ರಮುಖ ಹಣ್ಣುಗಳಾದ ದ್ರಾಕ್ಷಿ,ಸೇಬು,ಏಪ್ರಿಕಾಟ್,ಬಾಳೆ,ಕಿತ್ತಲೆ,ಪೀಚ್,ಪೇರು ಮತ್ತು ಪ್ಲಮ್.

ಬೆಟ್ಟಗುಡ್ಡಗಳ ಮೇಲೆ ಬಿದ್ದ ಮಳೆಯ ನೀರು ನೆಲದಲ್ಲಿ ಇಳಿದು ಭೂಮಿಯ ಪದರಗಳಲ್ಲಿ ಹರಿಯುತ್ತಿರುತ್ತದೆ.ಅಂಥ ಪ್ರದೇಶಗಳಲ್ಲಿ ಬಾವಿಯನ್ನು ತೆಗೆದರೆ ನೀರು ಬುಗ್ಗೆಯಂತೆ ಚಿಮ್ಮುತ್ತದೆ.ಇದೇ ಆರ್ಟೀಸಿಯನ್ ಬಾವಿ.ಇವನ್ನು ಬೇರೆ ಬೇರೆ ಗುಂಪುಗಳಾಗಿ ವಿಭಾಗಿಸಿದ್ದಾರೆ.ಮಧ್ಯದ ತಗ್ಗುಬಯಲುಗಳಲ್ಲಿರುವ ಗ್ರೇಟ್ ಆರ್ಟೀಸಿಯನ್ ಬಯಲು;ಮರೆ ಬಯಲು;ವಾಯವ್ಯ ಬಯಲು,ಮರುಭೂಮಿ ಬಯಲುಗಳು-ಇವು ಮುಖ್ಯವಾದ ಆರ್ಟೀಸಿಯನ್ ಬಾವಿ ಗುಂಪುಗಳು.ಈ ಬಾವಿಗಲು ನೀರಿಲ್ಲದ ಪ್ರದೇಶಗಲನ್ನು ಫಲವತ್ತಾದ ಭೂಮಿಯನ್ನಾಗಿ ಮಾಡಿ,ದನಕರುಗಳಿಗೆ ಮತ್ತು ವ್ಯವಸಾಯಕ್ಕೆ ನೀರನ್ನು ಒದಗಿಸುತ್ತವೆ.

ಪಶುಪಾಲನೆ:ಆಸ್ಟ್ರೇಲಿಯದಲ್ಲಿ ಪಶುಪಾಲನೆಯೇ ಜನರ ಮುಖ್ಯ ಕಸಬು.ಸಾಮಾನ್ಯ ಮಳೆ,ಅತಿಯಲ್ಲದ ಉಷ್ಣಾಂಶ,ವಿಶಾಲವಾದ ಹುಲ್ಲುಗಾವಲು-ಇಲ್ಲಿನ ಪಶುಪಾಲನೆಗೆ ಸಹಾಯಕವಾದ ಮುಖ್ಯ ಅನುಕೂಲಗಳು.ಮುಖ್ಯವಾಗಿ ಕುರಿ,ದನಕರುಗಳನ್ನು ಸಾಕುತ್ತಾರೆ.

ಕುರಿ ಸಾಕುವಿಕೆಗೆ ಈ ಖಂಡದಲ್ಲಿರುವಷ್ಟು ವಾಯುಗುಣದ ಅನುಕೂಲ ಮತ್ತೆಲ್ಲಿಯೂ ಇಲ್ಲ.ಗ್ರೇಟ್ ಡಿವೈಡಿಂಗ್ ಶ್ರೇಣಿಗಳ ಪಶ್ಚಿಮದುದ್ದಕ್ಕೂ ವಿಶಾಲ ಬಯಲುಗಳಲ್ಲಿ ಅಸಂಖ್ಯಾತ ಕುರಿಗಳನ್ನು ಉಣ್ಣೆ ಮತ್ತು ಮಾಂಸಕ್ಕಾಗಿ ಸಾಕುತ್ತರೆ.ಈ ಖಂಡದ ವಿಶಿಷ್ಟವಾದ ಉಣ್ಣೆ ಕೊಡುವ ಕುರಿ ಮೆರಿನೊ.

ಉತ್ತರದ ಮಳೆ ಪ್ರದೇಶಗಳು,ಪೂರ್ವದ ತೀರಪ್ರದೇಶಗಳಲ್ಲಿ ದನಕರುಗಳನ್ನು ಹೆಚ್ಚಾಗಿ ಸಾಕುತ್ತಾರೆ.ಇವನ್ನು ಹೆಚ್ಚಾಗಿ ಮಾಂಸಕ್ಕಾಗಿ ಸಾಕಿದರೂ ಹೈನದ ಉತ್ಪನ್ನಗಳಾದ ಹಾಲು,ಬೆಣ್ಣೆ,ಗಿಣ್ಣನ್ನೂ ಪಡೆಯುತ್ತಾರೆ.