ಪುಟ:Mysore-University-Encyclopaedia-Vol-2-Part-1.pdf/೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕೊಂಬೆಗಳನ್ನು ನೆಟ್ಟು ಮರ ಬೆಳೆಸಬಹುದು. ಕಾಡು ಅಲಿವ್ ಹಾಗೂ ಕೃಷಿ ಅಲಿವ್ ಮರಗಳ ಕೊಂಬೆಗಳನ್ನು ಕಸಿಕೊಟ್ಟು ಹೊಸ್ ಜಾತಿಯ ಅಲಿವ್ ಮರಗಳನ್ನು ಬೆಳೆಸುವುದುಂಟು. ಬೀಜಗಳನ್ನು ಮೊಳೆಯಿಸಿಯೂ ಇವನ್ನು ಬೆಳೆಸುತ್ತಾರೆ. ಆದರೆ ಅದು ಸ್ವಲ್ಪ ಪ್ರಯಾಸಕರ. ಆದರೂ ಇವುಗಳ ಮೊಳೆಯೂವಿಕೆಯನ್ನು ತ್ವರಿತಗೊಳಿಸಲು ಅನೇಕ ವಿಧಾನಗಳನ್ನು ಬಳಸುವುದುಂಟು. ಬೀಜದ ತುದಿಯನ್ನು ಸುಲಿಯುವುದು ಅಂಥ ಒಂದು ಕ್ರಮ. ಕ್ಯಾಲಿಫೋರ್ನಿಯದಲ್ಲಿ ಈ ಮರಗಳಿಗೆ ಅಲಿವ್ ನಾಟ್ ಎಂಬ ರೋಗ ತಗಲುತ್ತದೆ. ಸಣ್ಣ ದೊಡ್ಡ ಎಲೆಗಳಲ್ಲಿ ಕೊಂಬೆ ರೆಂಬೆಗಳಲ್ಲಿ ಅನೇಕ ಗಂಟುಗಳು ಅಥವಾ ಟ್ಯೂಮರ್ ಗಳು ಬೆಳೆಯುವುದೇ ಈ ರೋಗದ ಲಕ್ಷಣ. ಸ್ಯಾವಸ್ಟೋನಾಯ್ ಎಂಬ ಅಣುಜೀವಿ ಈ ರೋಗಕ್ಕೆ ಕಾರಣ. ಕೆಲವೊಮ್ಮೆ ಒಂದು ರೀತಿಯ ಅಣಬೆ ರೋಗವು ಈ ಎಲೆಗಳಿಗೆ ಬರುವುದುಂಟು. ಆದರೆ ಇದರಿಂದ ಮರಕ್ಕೆ ಅಪಾಯವಿಲ್ಲ. ಅಲಿವ್ ಕಾಯಿಗಳನ್ನು ಹಸಿರಾಗಿರುವಾಗ ಕಿತ್ತು ಉಪ್ಪಿನಕಾಯಿ ತಯಾರಿಸುವರು. ಕಾಯಿಗಳು ಕಹಿಯಾಗಿರುವುದು. ದುರ್ಬಲವಾದ ಬಲು ಬಿಸಿಕ್ಷಾರಗಳನ್ನು ಉಪಯೋಗಿಸಿ ಆ ಮೂಲಕ ಇದರ ಕಹಿ ರುಚಿಯನ್ನು ಹೋಗಲಾಡಿಸುತ್ತಾರೆ. ಆ ಬಳಿಕ ಉಪ್ಪುನೀರಿನಲ್ಲಿ ಹಾಕಿ ಉಪ್ಪಿನಕಾಯಿ ತಯಾರಿಸುತ್ತಾರೆ. ಪಾಶ್ಚಾತ್ಯರಿಗೆ ಇದು ಬಲು ಇ‍‍‍ಷ್ಱ. ಅಲಿವ್ ಹಣ್ಣುಗಳು ಚೆನ್ನಾಗಿ ಮಾಗಿದಾಗ ಅವನ್ನು ಕೀಳುತ್ತಾರೆ. ಇವುಗಳ ಗುಳ ಮತ್ತು ಸಿಪ್ಪೆಯಲ್ಲಿ ಜುಂಗಿನ ಅಂಶ ಹೆಚ್ಚಾಗಿರುವುದು. ಇವುಗಳ ಬೀಜಗಳಲ್ಲಿ ಸ್ವಲ್ಪ ಎಣ್ಣೆಯಿರುವುದು. ಆದರೆ ಕಾಯಿಗಳಲ್ಲಿ ಎಣ್ಣೆ ಅಂಶ ತೀರ ಕಡಿಮೆ. ಕಡಲೆಕಾಯಿ ಎಣ್ಣೆ ಎಳ್ಳೆಣ್ಣೆಯಂತೆ ಅಲಿವ್ ಎಣ್ಣೆಯೂ ಆವಿಯಾಗುವುದಿಲ್ಲ. ಶುದ್ದ ಆಲಿವ್ ಎಣ್ಣೆ ದೀರ್ಘಕಾಲದವರೆಗೆ ಕೆಡದೇ ಉಳಿಯಬಲ್ಲದು. ಆದರೆ ಆಲಿವ್ ಎಣ್ಣೆಯಿರುವ ಸೀಸೆಗಳನ್ನು ಮುಚ್ಚದೇ ತೆರೆದಿಟ್ಟರೆ, ವಾತಾವರಣದಲ್ಲಿರುವ ನೀರಿನ ಅಂಶ ಅದರಲ್ಲಿ ಸೇರಿಕೊಂಡು ಬಲುಬೇಗ ಅದರಲ್ಲಿ ಬೂಷ್ಱು ಬೆಳೆದು ಕೆಡುವುದು ದುರ್ವಾಸನೆ ಬರುವುದು. ಒಳ್ಳೆಯ್ ಆಲಿವ್ ಎಣ್ಣೆಗೆ ಚಿನ್ನದ ಬಣ್ಣವಿರುತ್ತದೆ. ಇದಕ್ಕೆ ಸಪ್ಪೆ ರುಚಿ, ವಾಸನೆ ಇವೆ. ತಿಳಿಯಾಗಿಯೂ ನಿರ್ಮಲವಾಗಿಯೂ ಇರುವ ಇದಕ್ಕೆ ವರ್ಜಿನ್ ಎಣ್ಣೆ ಅಥವಾ ಉತ್ಪೃಷ್ಱ್ ಎಣ್ಣೆ ಎನ್ನುವರು. ಕೆಳದರ್ಜೆ ಆಲಿವ್ ಎಣ್ಣೆ ಮಂದವಾಗಿ ಹಳದಿ ಅಥವಾ ಹಸಿರು ಬಣ್ಣಕ್ಕಿರುವುದು. ಆಲಿವ್ ಮರದ ಕಟ್ಟಿಗೆ ಬಲು ಗಟ್ಟಿಯಾಗಿ ಧೀರ್ಘಕಾಲ ಬಾಳಿಕೆ ಬರುವುದು. ನಾಜೂಕಾದ ಕೆತ್ತನೆ ಕೆಲಸ ಮಾಡಬಹುದಾಗಿರುವುದರಿಂದ ಪೀಠೋಪಕರಣಗಳನ್ನು ತಯಾರಿಸುವುದರಲ್ಲಿ ಅದನ್ನು ಉಪಯೋಗಿಸುತ್ತಾರೆ. ಆಲಿವ್ ಎಣ್ಣೆಯನ್ನು ಅಡುಗೆ ಎಣ್ಣೆಯಾಗಿ ಉಪಯೋಗಿಸುವರು. ಆಲಿವ್ ಎಲೆ ಮತ್ತು ತೊಗಟೆಗಳಲ್ಲಿ ಗಾಯದಿಂದ ಸೋರುವ ರಕ್ತವನ್ನು ತಡೆಯುವ ಆಲಿಯಾಕಸ್ಟಿಡೇಟಾ ಎಂಬ ಔಷಧೀಯ ಸತ್ವವಿದೆ. ಓಲಿಯಡಯಾಯ್ತೆ ಮರದ ತೊಗಟೆಯಲ್ಲಿ ಏರಿದ ಜ್ವರದ ಕಾವು ತಗ್ಗಿಸುವ ಶಕ್ತಿಯಿದೆ. ಈ ಎಣ್ಣೆಯಲ್ಲಿ ಕೊಬ್ಬಿನಂಶ ಅಧಿಕ. ಸಾರ್ಡೀನು ಮುಂತಾದ ಮೀನುಗಳನ್ನು ಹದಮಾಡಲು, ರಕ್ಷಿಸಿ ಇಡಲು ಈ ಎಣ್ಣೆಯನ್ನು ಉಪಯೋಗಿಸುವರು. ಆಲಿವ್ ಎಣ್ಣೆಯಲ್ಲಿ ಮುಖ್ಯವಾಗಿ ಓಲೀಯಕ್ ಅಲ್ಲದೆ ಇತರೆ ಆಮ್ಲಗಳ ಸಾಂದ್ರಮಿಶ್ರಣವಿದೆ. ಸ್ವಲ್ಪ ಪ್ರಮಾಣದ ಲಿನೋಲಿಕ್ ಆಮ್ಲವೂ ಇದೆ. ಆಲಿವ್ ಎಣ್ಣೆ ಪುಷ್ಱಿಕರ. ಬೇಧಿ ಔ‍ಷಧಿಯಾಗಿಯೂ ಬಳಸುತ್ತಾರೆ. ಹೊಟ್ಟೆ ಸಂಬಂಧದ ಉರಿ ಮೊದಲಾದ ಬೇನೆಗಳಲ್ಲಿ ಶಮನಕಾರಿ. ಗುದದ ಮೂಲಕ ಕೊಡುವ ಮದ್ದುಗಳನ್ನು ಆಲಿವ್ ಎಣ್ಣೆ ಮಿಶ್ರಣದಲ್ಲಿ ಕೊಡಬಹುದು. ಈ ಎಣ್ಣೆಯನ್ನು ಉರಿವ ಚರ್ಮಕ್ಕೆ ಶಾಮಕವಾಗಿ ಲೇಪಿಸುತ್ತಾರೆ. ಇದನ್ನು ಉಜ್ಜು ತೈಲ, ಮುಲಾಮು, ಅಂಟುಪಟ್ಟಿ, ಉಣ್ಣೆಬಟ್ಟೆ ಮತ್ತು ಸಾಬೂನುಗಳ ತಯಾರಿಕೆಯಲ್ಲಿ ಬಳಸುತ್ತಾರೆ. ಆಲಿವೀನ್ : ಮೆಗ್ನೀಸಿಯಂ ಮತ್ತು ಫೆರಸ್ ಆರ್ಥೋಸಿಲೀಕೇಟುಗಳಿಂದ ಕೂಡಿದ ಶಿಲಾರೂಪಕ ಖನಿಜ. ಆಲಿವ್ ಬಣ್ಣವಿರುವುದರಿಂದ ಈ ಹೆಸರು ಬಂದಿದೆ. ಇದರ ರಾಸಾಯನಿಕ ಸಂಕೇತ (Mg Fe)SiO4 ರೂಢಿಯಲ್ಲಿ ಈ ಬಣ್ಣದ ಎಲ್ಲ ಕಲ್ಲುಗಳನ್ನೂ ಆಲಿವೀನ್ ಎಂದು ತಪ್ಪಾಗಿ ಕರೆಯುವುದುಂಟು. ಆಲಿವೀನ್ ಆರ್ಥೋರಾಂಬಿಕ್ ಹರಳಿನ ವರ್ಗಕ್ಕೆ ಸೇರಿದೆ. ಗಾಜಿನಂಥ ಹೊಳಪು. ಕಾಠಿಣ್ಯ(ಹಾರ್ಡ್ ನೆಸ್) 6.5-7 ಸಾಪೇಕ್ಷ ಸಾಂದ್ರತೆ 3.27-3.37, ಶಿಲಾರೂಪಕ ಖನಿಜಗಳೆಲ್ಲೆಲ್ಲ ಇದು ಅತಿ ತೂಕವಾದುದು. ಇದು ಮುಖ್ಯವಾಗಿ ಅಲ್ಪಸಿಲಿಕಾಂಶ(ಬೇಸಿಕ್) ಮತ್ತು ಅತ್ಯಲ್ಪಸಿಲಿಕಾಂಶ ಶಿಲೆಗಳಲ್ಲಿ ಕಂಡುಬರುತ್ತದೆ. ಗ್ಯಾಬ್ರೊ, ಪೆರಿಡೊಟೈಟ್ ಮತ್ತು ಡನೈಟ್ ಶಿಲೆಗಳಲ್ಲಿ ಇದು ಹೆಚ್ಚಿನ ಪ್ರಮಾಣದಲ್ಲಿದೆ. ಇದು ಹಸಿರುಬಣ್ಣದ ನೂಲಿನಂತೆ ಎಳೆ ಎಳೆಯಾದ ಸರ್ಪೇಂಟೈನ್ ಎಂಬ ಖನಿಜವಾಗಿ ಮಾರ್ಪಡುತ್ತದೆ. ಈ ಬದಲಾವಣೆಗೆ ನೀರಿನ ಅಂಶ ಬಹು ಅಪೇಕ್ಷಣೀಯ. ಏಕೆಂದರೆ ಆಲಿವೀನ್ ಗಿಂತ ಸರ್ಪೇಂಟೈನ್ ನಲ್ಲಿ ನೀರಿನ ಅಂಶ ಹೆಚ್ಚು. ಆಲಿವೀನ್ ಶಿಲೆಗಳಲ್ಲಿ ಕ್ರೋಮೈಟ್ ಹೆಚ್ಚಾಗಿರುತ್ತದೆ. ಕರ್ನಾಟಕ ರಾಜ್ಯದ ಬೈರಾಪುರ ಮತ್ತು ಕಡಕೊಳ ಪ್ರಾಂತ್ಯಗಳಲ್ಲಿನ ಅಲಿವೀನ್ ಶಿಲೆಗಳಲ್ಲಿ ಹೆಚ್ಚು ಪ್ರಮಾಣದ ಕ್ರೋಮೈಟ್ ಅದರು ದೊರೆಯುತ್ತದೆ. ಆಲಿವೀನ್ ಹರಳುಗಳನ್ನು ಪೆರಿಡೋಟ್ ಎಂಬ ರತ್ನವಾಗಿ ಉಪಯೋಗಿಸುವುದುಂಟು. ಬರ್ಮ ಮುಂತಾದೆಡೆ ಸಿಗುವ ಆಲಿವೀನ್ ಪಾರದರ್ಶಕ ಹರಳುಗಳನ್ನು ರತ್ನಗಳಾಗಿ ಉಪಯೋಗಿಸುತ್ತಾರೆ. ಶಿಲೆಗಳಿಂದ ಕೂಡಿದ ಉಲ್ಕೆಗಳಲ್ಲಿ ಆಲಿವೀನ್ ಹೆಚ್ಚಾಗಿ ಕಂಡುಬರುತ್ತದೆ. ಆಲಿವ್ಸ್ ಬೆಟ್ಟಸಾಲು : ಜೆರೂಸಲೆಂನ ಪೂರ್ವಕ್ಕಿರುವ ಸುಣ್ಣಕಲ್ಲು ರಚಿತ ಬೆಟ್ಟಗಳ ಸಾಲು ಇದಕ್ಕೂ ಜೆರೂಸಲೆಂಗೂ ಮದ್ಯೆ ಕಿಡ್ರಾನ್ ಕಣಿವೆ ಇದೆ. ಈ ಮಾರ್ಗವಾಗಿಯೇ ಡೇವಿಡ್ ಜೆರೊಸಲೆಂನಿಂದ ಓಡಿಹೋದನೆಂದು ಬೈಬಲ್ಲಿನ ಹಳೆ ಒಡಂಬಡಿಕೆಯಲ್ಲೂ ಯೇಸು ಆಗಾಗ್ಗೆ ಇಲ್ಲಿಗೆ ಬರುತ್ತಿದ್ದನೆಂದು ಹೊಸ ಒಡಂಬಡಿಕೆಯಲ್ಲೂ ಹೇಳಿದೆ. ಕ್ರೈಸ್ತ ಧರ್ಮಾವಲಂಬಿಗಳಿಗಾಗಿ ಇಲ್ಲಿ ಒಂದು ಆರಾಧನ ಮಂದಿರವನ್ನು ಕಟ್ಟಿಸಲಾಗಿತ್ತು. ಕಾಲಕ್ರಮೇಣ ಇದನ್ನು ಮಹಮ್ಮದೀಯರು ಮಸೀದಿಯನ್ನಾಗಿ ಮಾರ್ಪಡಿಸಿದರು. ಬೆಟ್ಟದ ತಳಭಾಗದಲ್ಲಿ ಸ್ವಲ್ಪವೇ ದೂರದಲ್ಲಿರುವ ಶಿಲೆಯಿಂದ ನಿರ್ಮಿತವಾಗಿರುವ ಗುಹೆಯನ್ನು ಧರ್ಮೋಪದೇಶಕರ ಸಮಾಧಿ ಎಂದು ಕರೆಯುತ್ತಾರೆ. ಆಲಿವ್ಸ್ ಸರಣಿಯ ಅತಿ ಎತ್ತರವಾದ ಶಿಖರ ಆಲಿವ್ಸ್ ಪರ್ವತ (808 ಮೀ) ಸ್ಕೊಪಿಸ್ ಶಿಖರ ಆಲಿವ್ಸ್ ಬೆಟ್ಟಗಳ ಒಂದು ಭಾಗ. 1925 ರಲ್ಲಿ ಇಲ್ಲಿ ಹೀಬ್ರೂ ವಿಶ್ವವಿದ್ಯಾನಿಲಯವನ್ನು ಸ್ಥಾಪಿಸಲಾಯಿತು. 1927ರ ಜುಲೈನಲ್ಲಾದ ಭೂಕಂಪದಿಂದ ಈ ಪ್ರದೇಶಕ್ಕೆ ಅಪಾರ ಹಾನಿಯುಂಟಾಯಿತು. ರಾಜಕೀಯವಾಗಿ ಇಸ್ರೇಲಿ ಆಡಳಿತ ವ್ಯವಸ್ಥೆಗೆ ಸಂಬಂಧ ಗ್ರೇಟಕ್ ಜೆರೊಸಲೆಂನ ಪುರಸಭೆಗೆ ಸೇರಿದ ಒಂದು ಭಾಗ. ಕ್ರೈಸ್ತ ಮತ್ತು ಯೆಹೂದಿ ಧರ್ಮಗಳ ಪುಣ್ಯಕ್ಷೇತ್ರ. ಆಲಿ ಸಹೋದರರು : ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರವಹಿಸಿದ ಸಹೋದರರು : ಮಹಮ್ಮದ್ ಅಲಿ ಮತ್ತು ಷೌಕತ್ ಅಲಿ. 19ನೆಯ ಶತಮಾನದ 8ನೆಯ ದಶಕದಲ್ಲಿ ಜನಿಸಿದರು. ತಂದೆ ರಾಮಪುರ ರಾಜ್ಯದ ಉನ್ನತಾಧಿಕಾರಿಯಗಿದ್ದ. ವಿದ್ಯಾಭ್ಯಾಸ ರಾಮಪುರದಲ್ಲಿ. ಅನಂತರ ಇಂಗ್ಲೆಂಡಿನಲ್ಲಿ ಆಯಿತು, ಇವರಿಬ್ಬರಲ್ಲಿ ಮಹಮ್ಮದಾಲೀಯೇ ಹೆಚ್ಚು ಕ್ರಿಯಾಸಕ್ತ. ತಾರುಣ್ಯದಲ್ಲೇ ಇವರು ಸಾರ್ವಜನಿಕ ಕಾರ್ಯಗಳಲ್ಲಿ ಭಾಗವಹಿಸತೊಡಗಿದರು. ಮುಸ್ಲಿಂ ಲೀಗನ್ನು ಸ್ಥಾಪಿಸುವ ಕಾರ್ಯದಲ್ಲಿ ದುಡಿದರು. ಮಹಮ್ಮದಾಲಿ ಭಾಷಣ ಮಾಡುವುದರಲ್ಲಿ ಒಳ್ಳೆಯ ಹೆಸರು ಪಡೆದ. ಕಾಮ್ರೇಡ್ ಎಂಬ ಪತ್ರಿಕೆಯನ್ನು ಸ್ಥಾಪಿಸಿ (1919) ಜನತೆಗೆ ತಮ್ಮ ಶೋಚನೀಯ ಪರಿಸ್ಥಿತಿಯ ಅರಿವು ಮಾಡಿಕೊಟ್ಟ ಆಲೀಗಢ