ಪುಟ:Mysore-University-Encyclopaedia-Vol-2-Part-1.pdf/೧೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆಸ್ಟ್ರೇಲಿಯ

ಪ್ರಮುಖ ಸಾಕುಪ್ರಾಣಿಗಳೆಂದರೆ: ಕುದುರೆಗಳು(ಮಾಂಸವನು ರಫ಼್ತು ಮಾಡುವುದಕ್ಕಾಗಿ ಸಾಕುವರು); ದನಕರುಗಳು-ಕುರಿಗಳು ಮತ್ತು ಹಂದಿಗಳು. ಈ ಸಾಕುಪ್ರಾಣಿಗಳಿಂದ ದೊರಕುವ ಹಾಲಿನ ಮತ್ತಿತರ ವಸ್ತುಗಳು-ಬೆಣ್ಣಿ ಗಿಣ್ಣು ಘನೀಕರಿಸಿದ ಹಾಲು,ಗಟ್ಟೇ ಹಾಲು,ಕಚ್ಚ ಎಣ್ಣೀ ಮತ್ತು ಮೊಟ್ಟೆಗಳು. ಖನಿಜಸಂಪತ್ತು: ಆಸ್ಟ್ರೇಲಿಯದ ಭೂರಚನೆಗೊ ಅದರ ಖನಿಜ ಸಂಪತ್ತಿಗೊ ಬಹು ಹತ್ತಿರದ ಸಂಬಂಧವಿದೆ.ಲೋಹ ಖನಿಜಗಳು ಅಂತರಗ್ನಿ ಶಿಲೆಗಲೊಂದಿಗೆ ಸಂಯೋಜಿತವಾಗಿ ಘನಾಕೃತಿಯಲ್ಲಿವೆ-ತವರ,ಟಂಗ್ ಸ್ಪನ್,ಚಿನ್ನ,ತಾಮ್ರ,ಸೀಸ,ಸತು,ಬೆಳ್ಳಿ,ಆಂಟಿಮೊನಿ ಮತ್ತು ಪಾದರಸ ಇವುಗಳಲ್ಲಿ ಮುಖ್ಯವಾದುವು. ಶಿಲಾಪದರಗಳು ಶಿಥಿಲೀಕರಣ ಪ್ರಕ್ರಿಯೆಯ ಸಮಯದಲ್ಲಿ ಸ್ಪಟಿಕಾಕೃತಿ ಶಿಲೆಗಳಾಗಿ ನಿರ್ಮಾಣವಾದಗ ಶಿಲಾಹಂಚಿಕೆಯ ವ್ಯವಸ್ಥೆ ಏರುಪೇರಾಯಿತು. ಇದರಿಂದ ಆದಿರುನಿಕ್ಷೇಪಗಳ ವ್ಯಾಪ್ತಿಯನ್ನು ನಿಷ್ಕರ್ಷಿಸುವುದು ಕಷ್ಟವಾಯಿತು.ಆದಾಗ್ಯು ಗ್ರೇಟ್ ಆಸ್ಟ್ರೇಲಿಯನ್ ಷೀಲ್ಡ್(ಪೀಟಭೂಮಿ ಪ್ರದೇಶ)ಲೋಹದ ಖನಿಜಗಳಿಂದ ಕೊಡಿದ್ದು ಸಂಪದ್ಭರಿತವಗಿದೆ.ಗ್ರೇಟ್ ಡಿವೈಡಿಂಗ್ ಶ್ರೇಣೆಯ ಪ್ರದೇಶಕ್ಕೊ ಇದು ಆನ್ವಿಯಿಸುತ್ತದೆ.ಪಶ್ಛಿಮ ಆಸ್ಟ್ರೇಲಿಯದಲ್ಲಿ ಆನೇಕ ಖನಿಜಗಳು ದೊರೆಯುತ್ತವೆ.ಇಲ್ಲಿ 6 ಸಮಾನಾಂತರ ವಲಯಗಳನ್ನು ಸುಲಭವಾಗಿ ಕಾಣಬಹುದು. 1 ಸಮುದ್ರತೀರದ ಬಳಿ ಇರುವ ಬೆಣಚುಕಲ್ಲಿನ ಪದರ ಶಿಲೆ,ನುಣುಪು ಶಿಳೆ,ಭಿನ್ನಸ್ತರ ಶಿಳೆಯ ವಲಯ. 2 ಗ್ರಾಫ್ಯೆಟ್,ಕಲ್ನಾರು ಮತ್ತು ತವರಗಳನ್ನು ಹೊಂದಿರುವ ನುಣುಪು ಶಿಳೆ ಮತ್ತು ನೀಸ್ ಶಿಳೆಗಳ ವಲಯ. 3 ಶುಷ್ಕ್ ಸ್ಪಟಿಕಾಕೃತಿಗಳು. 4 ಹೇರಳವಾಗಿ ಚಿನ್ನ ದೊರೆಯುವ ಸ್ಪಟಿಕಾಕೃತಿ ಶಿಳೆಗಳು. 5 ಆದಿರಿನಿಂದ ಕೊಡಿರದ ಸ್ಪಟಿಕಾಕೃತಿ ಶಿಳೆಗಳ ನೀಸ್. 6 ಚಿನ್ನದ ಅದಿರುಗಳಿರುವ ಸ್ಪಟಿಕಾಕೃತಿ ಶಿಳೆಗಳು.

ಆರನೆಯ ವಲಯ ಎಸ್ಪೆರಾನ್ಸಿನ ದಕ್ಷಿಣ ತೀರದಲ್ಲಿ ಪ್ರಾರಂಭವಾಗಿ ನಾಸೆರ್ಮನ್ ಮತ್ತು ಕಾಲ್ಗೂರ್ಲಿ ಮುಖಾಂತರ ಲಿಯೊನಾರವನ್ನು ಹಾಯ್ದು ಉತ್ತರ ತೀರದ ಪಿಲ್ ಬರವನ್ನು ತಲುಪುತ್ತದೆ.ರೈಲುಮರ್ಗ ಇದರಪ್ರಾಮುಖ್ಯವನ್ನು ಒತ್ತಿ ಹೇಳುತ್ತದೆ.ನಾಲ್ಕನೆಯ ಚಿನ್ನದ ವಲಯ ಫಿಲಿಪ್ಸ್ ನದಿಯ ಹತ್ತಿರ ಪ್ರಾರಂಭವಾಗಿ ಸದರ್ನ್ ಕ್ರಾಸ್ ಮತ್ತು ಆಸ್ಟಿನ್ ಸರೋವರ ಪ್ರದೇಶವನ್ನೊಳಗೊಂಡ 240 ಕಿಮೀ ದೊರದಲ್ಲಿರುವ ಗ್ಯಾಸ್ಕಾಯಿನ್ ಮತ್ತು ಆಷ್ಯೆರ್ಟನ್ ನದಿಗಳವರೆಗೊ ವ್ಯಾಪಿಸಿದೆ. ನ್ಯೊ ಸೌತ್ ವೇಲ್ಸ್,ಕ್ವೀನ್ಸ್ ಲೆಂಡ್ ತಾಮ್ರಕ್ಕೆ ಪ್ರಸಿದ್ದಿ ಪಡೆದಿವೆ.ಈ ಪ್ರದೇಶದಲ್ಲಿ ಮರುಳುದಿಣ್ಣೆಗಳಿಲ್ಲ; ಆದುದರಿಂದ ಗಣಿಗಳನ್ನು ಸುಲಭವಾಗಿ ತಲುಪಬಹುದು.

ಪೊರ್ವದ ಎತ್ತರ ಪ್ರದೇಶಗಳಲ್ಲಿ ತಾಮ್ರ ಮತ್ತು ತವರದ ನಿಕ್ಷೀಪಗಳು ಹೇರಳವಾಗಿವೆ.ಚಿಲ್ಲಾಂಗೊ,ಗೊಟಾಟ್,ಚಾರ್ಟರ್ಸ್ ಟವರ್ಸ್, ಮೌಂಟ್ ಮಾರ್ಗನ್ ಮತ್ತು ಜಿಂಪಿಕ್ ಇವೆಲ್ಲ ಕ್ವೀನ್ಸಲೆಂಡ್ ನಲ್ಲಿವೆ.ನ್ಯೊ ಸೌತ್ ವೇಲ್ಸ್ ನಲ್ಲಿ ಗ್ರೇಟ್ ಡಿವ್ಯೆಡಿಂಗ್ ಶ್ರೇಣೆಯ ಪಶ್ಚಿಮಕ್ಕೆ ಅನೇಕ ಕಡೆಗಳಲ್ಲಿ ಚಿನ್ನ ದೊರೆಯುತ್ತದೆ.ವಿಕ್ಟೊರಿಯದಲ್ಲಿ ಬೆಲ್ಲಾರಟ್ ಮತ್ತು ಬೆಂಡಿಗೊಗಳಲ್ಲಿ ಚಿನ್ನದ ಗಣಿಗಳಿವೆ.ಟಸ್ಮೆನಿಯದಲ್ಲಿ ತವರ,ತಾಮ್ರ ಮತ್ತು ಸತುವಿನ ಗಣಿಗಳಿವೆ.ಆಸ್ಟ್ರೇಲಿಯದಲ್ಲಿ ದೊರೆತಯುವ ಖನಿಜಗಳು-ಕಲ್ಲಿದ್ದಲು(ಕಪ್ಫು ಮತ್ತು ಬೂದು)ಕಬ್ಭಿಣದ ಆದಿರು,ಸೀಸ,ಸತು,ತಾಮ್ರ,ಟೈಟೇನಿತಯಂ,ತವರ,ಟಂಗ್ ಸ್ಪನ್,ಚಿನ್ನ ಮತ್ತು ಬೆಳ್ಳಿ.

ಸಂಚಾರ ಮರ್ಗಗಳು:ಸಂಚಾರ ಮರ್ಗಗಳ ಹಂಚಿಕೆ ಖಂಡದ ಆಗ್ನೇಯ, ನೈಋತ್ಯ ಮತ್ತು ಈಶಾನ್ಯ ದಿಕ್ಕಿನಲ್ಲಿ ಒತಾಗಿರುವುದನ್ನು ಕಾಣಬಹುದು.ವಿಶಾಲ ಮರುಭೊಮಿ ಪ್ರದೇಶಗಳಲ್ಲಿ ಸಾಗಾಣಿಕೆ ಬಹಳ ಕಡಿಮೆ.ವಾಯುಸಂಚಾರ ಮಾತ್ರ ಹೆಚ್ಚಾಗಿದೆ.ಜನವಸತಿಗಳಿರುವ ವಿಭಾಗಗಳಲ್ಲಿ ಉತ್ತಮವಾದ ರಸ್ತೆ ಮತ್ತು ರೈಲು ಮಾರ್ಗಗಳ ವ್ಯವಸ್ಥೆಯಿದೆ.ದೇಶದ ಬಹಳಷ್ಟು ಸರಕು ಮತ್ತು ಪ್ರಯಾಣಿಕರನ್ನು ಸಾಗಿಸುತ್ತವೆ.ಅಷ್ಟೇ ಮುಖ್ಯವಾಗಿ ಬಂದರುಗಳ ಸೌಲಭ್ಯವೊ ಉಂಟು.ವ್ಯಾಪಾರ ಮತ್ತು ವಾಣಿಜ್ಯ ಈ ಕೆಳಗೆ ಕಂಡ ವಸ್ತುಗಳನ್ನು ಒಳಗೊಂಡಿದೆ. ರಫ಼್ತು ಸರಕುಗಳು: ಹಾಲಿನ ವಸ್ತುಗಳು ಮುಖ್ಯವಾಗಿ ಬೆಣ್ಣೆ,ದನಕರುಗಳ ಮಾಂಸ,ಗೋದಿ,ಲೋಹ ಮತ್ತು ಅಲೊಹ ಕೈಗಾರಿಕಾ ವಸ್ತುಗಳು ಮತ್ತು ಕಚ್ಚಾ ಉಣ್ಣೆ.ಆಮದು ವಸ್ತುಗಳು:ವಿಮಾನಗಳು,ಹಡಗು ಮತ್ತು ರೈಲ್ವೇ ಉಪಕರಣಗಳು.ಮೋಟರು ವಾಹನಗಳು,ಗ್ರಾಮೀಣ ಕೈಗಾರಿಕಾ ಉಪಕರಣಗಳು ಮತ್ತು ಕಟ್ಟಡ ನಿರ್ಮಾಣ ಉಪಕರಣಗಳು.

ಬ್ರಿಟನ್ ಆಸ್ಟ್ರೇಲಿಯದ ಮುಖ್ಯ ಗಿರಾಕಿ,ಅದು ಅಸ್ಟ್ರೇಲಿಯದ ಶೇ.17ಭಾಗ ರಫ಼್ತುನ್ನು ಪಡೆದು ಶೇ.26 ಭಾಗ ಆಮದುನ್ನು ಒದಗಿಸುತ್ತದೆ.ಸಾಮ್ರಾಜ್ಯಾಧಿಮಾನ ಆಯಾತನಿರ್ಯಾತ ಶುಲ್ಕ ಕ್ರಮದ ಆಶ್ರಯದಲ್ಲಿ ಅಸ್ಟ್ರೇಲಿಯ ಬ್ರಿಟನ್ನಿನ ರಫ಼್ತುಮಾಡುವ ವಸ್ತುಗಳು ಆಹಾರ ಪದಾರ್ಥ,ಉಣ್ಣೆ,ಖನಿಜಗಳನ್ನು ಒಳಗೊಂಡಿವೆ.ಲೋಹಗಳಿಗೆ ಬದಲಾಗಿ ಯಂತ್ರಗಳು ಮತ್ತು ಮರಮುಟ್ಟುಗಳನ್ನು ಆಮದು ಮಾಡಿಕೊಳ್ಳಲಾಗುತ್ತದೆ.ಆಮೆರಿಕ ಸಂಯುಕ್ತ ಸಂಸ್ಥಾನ, ಕೆನಡ,ಜೆಪಾನ್ ಮತ್ತು ಪಶ್ಚಿಮ ಜರ್ಮನಿಗಳೊಡನೆ ಆಸ್ಟ್ರೇಲಿಯದ ವ್ಯಾಪಾರ ಇತ್ತೀಚೆಗೆ ಹೆಚ್ಚಾಗುತ್ತಿದೆ.ಯುರೋಪ್ ವಾಣಿಜ್ಯ ಮಾರುಕಟ್ಟೆ ಆಸ್ಟ್ರೇಲಿಯವನ್ನು ದೊರವಿರಿಸಿದರೊ ಕಾಮನ್ ವೆಲ್ತ್ ಸಂಬಂಧದಿಂದ ಅದರಲ್ಲೂ ಮುಖ್ಯವಾಗಿ ಸಾಮ್ರಾಜ್ಯಾದಿಮಾನ ಆಯಾತನಿರ್ಯಾತ ಶುಲ್ಕಕ್ರಮದ ಆಶ್ರಯದಲ್ಲಿ ಹೆಚ್ಚಿನ ಅನುಕೂಲಗಳನ್ನು ಪಡೆದಿದೆ.

ಜನಸಂಖ್ಯೆ ಮತ್ತು ಜನವಸತಿ: ಆಸ್ಟ್ರೇಲಿಯವನ್ನು ಮೊದಲು ಆಕ್ರಮಿಸಿದ ಜನರು 12,000 ವರ್ಷಗಳ ಹಿಂದೆ ವಲಸೆ ಬಂದ ನೀಗ್ರೊ ಮೂಲನಿವಾಸಿಗಳು.ಜನ ಸಂಖ್ಯೆ 40,081(1966).ಇದು ಆಸ್ಟ್ರೇಲಿಯದ ಜನಸಂಖ್ಯೆಯಲ್ಲಿ ಶೇ.1 ಭಾಗಕ್ಕಿಂತಲೂ ಕಡಿಮೆ.ಯುರೋಪಿನ ನೆಲೆಸಿಗರು ಇವರ ಸಂಖ್ಯೆಯನ್ನು ಕಡಿಮೆ ಮಾಡಿದರು.ಕ್ಯಾಪ್ಟನ್ ಕುಕ್ 1688ರಲ್ಲಿ ಆಸ್ಟ್ರೇಲಿಯಕ್ಕೆ ಸಮುದ್ರಯಾನ ಮಾಡಿದಾಗಿನಿಂದ ಇಲ್ಲಿ ಯುರೋಪಿಯನ್ನರ ವಸತಿ ಪ್ರಾರಂಭವಾಯಿತು.2001ರ ಜನಗಣತಿ ಪ್ರಕಾರ ಶೇ.58ರಷ್ಟು ಜನರು ದೊಡನಗರಗಳಲ್ಲಿ ಶೇ.85ರಷ್ಟು ಜನರು ಸಣ್ಣ ನಗರಗಲ್ಲೂ ಶೇ.15 ಹಳ್ಳಿಗಳಲ್ಲೂ ಇದ್ದಾರೆ.ಶೇ 0.24 ವಲಸೆ ಹೋಗುವ ಜನಸಂಖ್ಯೆಯೂ ಇದೆ.ಜನಸಾಂದ್ರತೆ ಚ.ಕಿ.ಮೀಗೆ 3 ಜನರಿಗಿಂತಲೂ ಕಡಿಮೆ.2009ರ ಜನಗಣತಿಯಂತೆ ಆಸ್ಟ್ರೇಲಿಯದ ದೊಡ್ಡನಗರಗಳಲ್ಲಿ ಮುಖ್ಯವಾದುವು:ಕ್ಯಾನ್ಬೆರ(403,118),ಸಿಡ್ನಿ(4,504,469),ಮೆಲ್ಬರ್ನ್(3,995,537),ಬ್ರಿಸ್ಬನ್(2,004,262),ಆಡಿಲೇಡ್(1,187,466),ಪರ್ತ್(1,658,992),ನ್ಯೊಕ್ಯಾಸಲ್(540,796),ವೂಲೋನಗಾಂಗ್(2,88,984),ಹೋಬರ್ಟ್(2,12,019),ಗೀಲಾಂಗ್(1,75,803).

ಜನವಸತಿ: ಮೊಟ್ಟಮೊದಲು ಯುರೋಪಿನ ಸಂಪರ್ಕ 1606ರಲ್ಲಿ ಆಯಿತು.ಡೈಫ಼ಕನ್ ಎಂಬ ಡಚ್ ಹಡಗಿನಲ್ಲಿನ ಜೇನ್ ಎಂಬಾತ 1616ರಲ್ಲಿ ಪಶ್ಚಿಮತೀರದಲ್ಲಿ ಕಾಲಿರಿಸಿದ.ಏಬಲ್ ಟಾಸ್ಮನ್ ಟಾಸ್ಮೇನಿಯ ಮತ್ತು ನ್ಯೂಜ಼ೆಲ್ಂಡ್ಗಳನ್ನು 1642ರಲ್ಲಿ ತಲುಪಿದ.1688ರಲ್ಲಿ ಪಶ್ಚಿಮ ತೀರದಲ್ಲಿ ಡ್ಯಾಂಪಿಯರ್ ಎಂಬ ಬ್ರಿಟಿಷ್ ಪ್ರಜೆ ಇಳಿದ.1770 ರಲ್ಲಿ ಜೇಮ್ಸ್ ಕುಕ್ ಪೂರ್ವತೀರವನ್ನು ಮೋಜಣಿಮಾಡಿ,ಬ್ರಿಟನ್ನಿನ ಹೆಸರಿನಲ್ಲಿ ಆ ಪ್ರದೇಶವನ್ನು ಸ್ವಾಧೀನಪಡಿಸಿಕೊಂಡ.19ನೆಯ ಶತಮನದ ಪ್ರರಂಭದಲ್ಲಿ ಮ್ಯಾಥ್ಯೂ ಫ್ರಿಂಡರ್ಸ್ ಎಂಬ ಆಂಗ್ಲ ನಾವಿಕ ಆಸ್ಟ್ರೇಲಿಯ ಎಂಬ ಹೆಸರನ್ನು ಉಪಯೋಗಿಸಿದ. ಅದುವರೆವಿಗೊ ಈ ಖಂಡವನ್ನು ನ್ಯೂ ಹಾಲೆಂಡ್ ಎಂದೂ ನ್ಯೂ ಸೌತವೇಲ್ಸ್ ಅಥವಾ ಬಾಟನಿ ಬೇ ಎಂದೂ ಕರೆಯಲಾಗುತ್ತಿತ್ತು.1788ರಲ್ಲಿ ಮೊಟ್ಟಮೊದಲು ಯುರೋಪಿಯನ್ನರು ನೆಲೆಸಲಾರಂಭಿಸಿದರು. ಕ್ಯಾಪ್ಟನ್ ಆರ್ಥರ್ ಫಿಲಿಪ್ ಎಂಬಾತ 206 ಸೈನಿಕರು ಮತ್ತು 759 ಕೈದಿಗಳೊಂದಿಗೆ ಸಿಡ್ನಿ ಬಳಿಯಲ್ಲಿ ಅದ್ದೇ ವರ್ಷದ ಜನವರಿ 26ರಂದು ಇಳಿದ.ಇದರ ನೆನಪಿಗಾಗಿ ಆ ದಿನವನ್ನು ಆಸ್ಟ್ರೇಲಿಯ ದಿನಾಚರಣೆ ಎಂಬುದಾಗಿ ಆಚರಿಸುತ್ತಾರೆ.1813ರಲ್ಲಿ ಬ್ಲ್ಯಾಕ್ ಲೆಂಡ್,ವೆಂಟವರ್ತ್ ಮತ್ತು ಲಾಸನರವರು ಬ್ಲೂಮೌಂಟನ್ಸ್ ದಾಟಿ,ಅದರಾಚೆ ಇರುವ ಮೈದಾನ ಪ್ರದೇಶಗಳನ್ನು ತಲುಪಿದರು.ಎಡ್ವರ್ಡ್ ಹಾರಗ್ರೇವ್ಸನಿಗೆ 1851ರಲ್ಲಿ ಬ್ಯಾಥರ್ಸ್ಟನಲ್ಲಿ ಚಿನ್ನ ಕಂಡುಬಂತು:ಆನಂತರ ಬೆಲ್ಲಾರಟ್,ಬೆಂಡಿಗೊ ಮುಂತಾದ ಇತರ ಕಡೆಗಳಲ್ಲೂ ದೊರಕಿತು.ಇದು ತಿಳಿದ ಕೊಡಲೆ ಒಂದೇ ದಶಕದಲ್ಲಿ ಜನಸಂಖ್ಯೆಯನ್ನು ಮುಮ್ಮಡಿಗೊಳಿಸುವಷ್ಟು ಹೊಸ ವಲಸೆಗಾರರು ಬಂದರು.ಇವರಲ್ಲಿ ಯೆಹೊದ್ಯರು ಮತ್ತು ಯುರೋಪಿಯನ್ನುರು ಖಂಡದ ತುಂಬ ಹರಡಿದರು.ನಿಗದಿಯಾದಷ್ಟು ಮಾತ್ರ ನೆಲೆಸಬೇಕೆಂಬ ನಿಯಮದಂತೆ ಆಫ್ರೀಕನ್ನರು ಮತ್ತು ಏಷ್ಯನರು ಖಂಡದೊಳಗಡೆ ನೆಲೆಸುವುದನ್ನು ನಿಯಂತ್ರಿಸಲು ವಲಸೆ ಕಾನೊನುಗಳನ್ನು ಮಾಡಿದ್ದರೊ ಜಪಾನೀಯರ ನೆಲೆಸುವಿಕೆ ಹೆಚ್ಚಾಗುತ್ತಿದೆ.ಇದು(1970ರ ಅಂದಾಜಿನಂತೆ)120ಲಕ್ಷ ಜನಸಂಖ್ಯೆಗೆ ಕಾರಣವಾಗಿದೆ.ಖಂಡದ ವಿಶಾಲತೆಗೆ ಇದು ಕಡಿಮೆ ಎನಿಸಿದರೊ ಸರ್ಕಾರಕ್ಕೆ ಇದೊಂದು ಸಮಸ್ಯೆಯಾಗಿದೆ.

ಆರ್ಥಿಕವಾಗಿ 1939ರವರೆಗೊ ಆಸ್ಟ್ರೇಲಿಯ ಆದರ ಕುರಿಗಳಿಗೆ ಸಂಬಂಧಿಸಿದ ಕೈಗಾರಿಕೆಗಳಿಗೆ ಪ್ರಸಿದ್ದವಾಗಿತ್ತು.ಆದರ 1951-61ರ ಮದ್ಯೆ 20ಲಕ್ಷ ವಲಸೆಗಾರರು ತಮ್ಮ ಕುಶಲ ಕೈಗಾರಿಕಾ ಕಾರ್ಯದಕ್ಷತೆಯಿಂದ ನಗರ ಕೈಗಾರಿಕೆಗಳನ್ನು ಆತಿ ಶೀಘ್ರವಾಗಿ ಆಭಿವೃದ್ದಿಪಡಿಸಿದರು.1966ರ ಜೂನ್ ಹೊತ್ತಿಗೆ ಜನಸಂಖ್ಯೆಯ ಶೇ. 0.5 ಗಣಿಗಾರಿಕೆ ಮತ್ತು ಕಲ್ಲುಗಣಿಗಳಲ್ಲೂ ಶೇ .13 ವಸ್ತುಗಳ ತಯಾರಿಕೆಯಲ್ಲೂ ಶೇ.19 ಸರ್ಕಾರಿ ಕೆಲಸಗಳಲ್ಲೂ ಶೇ.5 ಸಾಗಾಣಿಕೆ.ವಸ್ತುಗಳ ಸಂಗ್ರಗಹಣೆ ಮತ್ತು ಸಾರಿಗೆ ಸಂಪರ್ಕಗಳಲ್ಲೂ ಶೇ.10 ವಾಣಿಜ್ಯದಲ್ಲೂ ಉಳಿದವರೂ ಆರ್ಥಿಕವ್ಯವಸ್ಥೆ.ಸಾರ್ವಜನಿಕ ಚಟುವಟಿಕೆಗಳು,ಸಾಮೂಹಿಕ ಹಾಗೂ ವ್ಯಾಪಾರ ಸೇವೆಗಳು.ಮನರಂಜನೆ,ಹೊಟೇಲ್ ಮತ್ತು ವ್ಯಕ್ತಿಗತ ಸೇವೆಗಳಲ್ಲೂ ನಿರತರಾಗಿದ್ದರು.ಆಸ್ಟ್ರೇಲಿಯದಲ್ಲಿ ಸು.50 ವಿಶ್ವವಿದ್ಯಾಲಯಗಳಿವೆ.ಇವುಗಳಲ್ಲಿ ಆತ್ಯಂತ ದೊಡ್ಡದು ಸಿಡ್ನಿ ವಿಶ್ವವಿದ್ಯಾಲಯ. ಭೊ ಇತಿಹಾಸ: ಈ ಖಂಡದ ಬಹುಭಾಗ ಆರ್ಷೇಯ ಮತ್ತು ಕೇಂಬ್ರಿಯನ್ ಯುಗಗಳ ಶಿಲೆಗಳಿಂದ ಆವೃತವಾಗಿದೆ.ಈ ಶಿಲಾಸಮುದಾಯ ಸಿಡ್ನಿ ಪಶ್ಚಿಮ ಮತ್ತು ದಕ್ಷಿಣ ಆಸ್ಟ್ರೇಲಿಯಗಳಲ್ಲೂ ಉತ್ತರ ಪ್ರಾಂತ್ಯಗಳು,ಸೌತ್ ವೇಲ್ಸನ ಬ್ರೋಕನ್ ಹಿಲ್ ಮತ್ತು ಪಶ್ಚಿಮ ಟಾಸ್ಮೇನಿಯಗಳಲ್ಲೂ ನೋಡಬಹುದು.ಖಂಡದಲ್ಲೇ ಆತಿ ವಿಸ್ತಾರವಾದ ಪ್ರಸ್ಥಭೂಮಿಯಲ್ಲೂ ಈ ಶಿಲೆಗಳನ್ನು ಕಾಣಬಹುದು.ಈ ಭಾಗವನ್ನು ಷೀಲ್ಡ್ ಅಥವಾ