ಪುಟ:Mysore-University-Encyclopaedia-Vol-2-Part-1.pdf/೧೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆಹಾರ ಸಸ್ಯಗಳು-ಆಹಿತಾಗ್ನಿ

ಗುಣ ಸ್ವಲ್ಪಮಟ್ಟಿಗೆ ಅಥವಾ ಬಹಳವಾಗಿಯೇ ನಷ್ಟವಾಗಬಹುದು.ಆಹಾರ ಪದಾರ್ಥಗಳನ್ನು ಕೇವಲ ಲಾಭದ ದೃಷ್ಟಿಯಿಂದ ಮಾರಿದಾಗ ಅಥವಾ ಕೊಂಡಾಗ ಅದು ಬಹುಮಟ್ಟಿಗೆ ಕೆಳದರ್ಜೆಯದಾಗಿರುತ್ತದೆ.ಈ ರೀತಿಯ ಕಲಬೆರಕೆಯಲ್ಲಿ ಹಲವಾರು ವಿಧಗಳಿವೆ.ಮುಖ್ಯವಾಗಿ ಪದಾರ್ಥದ ಪ್ರಮಾಣವನ್ನು ಹೆಚ್ಚಿಸುವುದಕ್ಕೋಸ್ಕರ ಅಥವಾ ಕೀಳುದರ್ಜೆಯ ಪದಾರ್ಥವನ್ನು ಹೆಚ್ಚು ಆಕರ್ಷಣೇಯವಾಗಿ ಮಾಡುವುದಕ್ಕೆಂದು ಕಲಬೆರಕೆ ಮಾಡುತ್ತಾರೆ.ಸಾಮಾನ್ಯಜನತೆ ಇದನ್ನು ವಿವೇಚಿಸಿ ತಿಳಿಯುವುದು ಅಷ್ಟು ಸುಲಭವಲ್ಲ.ಇದಕ್ಕಾಗಿ ಸರ್ಕಾರದವರು ಆಯಾ ಪ್ರಾದೇಶಿಕ ಆಹಾರ ಪದಾರ್ಥಗಳಿಗನುಗುಣವಾಗಿ ಕಾಯಿದೆಗಳನ್ನು ಕೊಡ ಮಾಡಿದ್ದಾರೆ.ಉದಾಹರಣೆಗೆ,ಕಾಫಿಪುಡಿಗೆ ಸಾಮಾನ್ಯವಾಗಿ ಹುಣೆಸೇಬೀಜ ಅಥವಾ ಖರ್ಜೂರ ಬೀಜದ ಪುಡಿಗಳನ್ನು ಬೆರೆಸುತ್ತಾರೆ.ಒಳ್ಳೆಯ ತುಪ್ಪದೊಡನೆ ವನಸ್ಪತಿಯನ್ನು ಬೆರೆಸಿ ಮಾರುವುದನ್ನು ತಡೆಗಟ್ಟುವುದು ಒಂದು ಸುಪರಿಚಿತ ಸಮಸ್ಯೆಯಾಗಿದೆ. ಆಹಾರ ಸಸ್ಯಗಳು:ಮನುಷ್ಯನ ಮತ್ತು ಪ್ರಾಣೆಗಳ ದೇಹದ ಬೆಳೆವಣಿಗೆಗೆ ಆತ್ಯಾವಶ್ಯಕವಾದ ಪಿಷ್ಟಪದರ್ಥಗಳು,ನೈಟ್ರೊಜನ್,ಮೇದಸ್ಸು,ಜೀವಸತ್ವಗಳು,ಲವಣ,ಕ್ಯಾಲ್ಸಿಯಂ,ಫಾಸ್ಫರಸ್ ಮುಂತಾದ ಪೋಷಕಾಂಶಗಳನ್ನು ಒದಗಿಸುವ ತಿನ್ನಲು ಯೋಗ್ಯವಾದ ಸಸ್ಯಗಳು. ಈ ಸಸ್ಯಗಳ ಕಾಯಿ ಹಣ್ಣುಗಳನ್ನೋ ನೇರವಾಗಿ ಆವುಗಳ್ ಸೊಪ್ಪನ್ನೋ ಗೆಡ್ಡೆ ಬೇರು ದಿಂಡುಗಳನ್ನೊ ಬಳಸುವುದು ರೊಢಿ.ಈ ಎಲ್ಲ ಆಂಶಗಳೊ ಒಂದೇ ಜಾತಿಯ ಸಸ್ಯ ಅಥವಾ ಸಸ್ಯಭಾಗದಲ್ಲಿ ಕೊಡಿರುವುದಿಲ್ಲ. ಬೇರೆ ಬೇರೆ ಸಸ್ಯಗಳಲ್ಲಿ ಬೇರೆ ಬೇರೆ ಪೋಷಕಾಂಶಗಳಿರುತ್ತವೆ.ಆದ್ದರಿಂದ ಬೇರೆ ಬೇರೆ ಆಹಾರ ಸಸ್ಯಗಳನ್ನು ಆವು ನೀಡುವ ಫಲವನ್ನು ಯುಕ್ತರೀತಿಯಲ್ಲಿ ಉಪಯೋಗಿಸಬೇಕು.ಈ ಪೋಷಕಾಂಶಗಳನ್ನು ಪಡೆಯುವಲ್ಲಿ ಸಸ್ಯದ ಉತ್ಪನ್ನಗಳನ್ನು ಬಹುವಾಗಿ ಬಳಸಿದ ಆನಂತರ ಉಳಿದ ಭಾಗವನ್ನು ಪ್ರಾಣೆಗಳ ಸೇವನೆಗೆ ಉಳಿಸುವುದು ರೊಢಿ.ಪ್ರಾಣೆಗಳ ಆಹಾರಕ್ಕೆ ಹಲವು ಸಸ್ಯಗಳು ಮಾತ್ರ ಉಪಯುಕ್ತ ಅಂಥ ಸಸ್ಯಗಳ ಪೊರ್ಣಭಾಗ ಪ್ರಾಣೆಗಳಿಗೆ ಅಹಾರವಾಗುತ್ತದೆ.ಉದಾಹರಣೆಗೆ ಬತ್ತ,ರಾಗಿ,ಗೋದಿ ಇನ್ನು ಕೆಲವು ಸಸ್ಯದ ಕೆಲಭಾಗ ಮಾತ್ರ ಉಪಯುಕ್ತವಾಗುತ್ತವೆ-ಆಲೂಗಡ್ದೆ,ವಿವಿಧ ಹಣ್ಣಿನ ಮರಗಳು.ಪೋಷಕಾಂಶಗಳನ್ನು ಪ್ರಾಣೆಗಳಿಗೆ ಒದಗಿಸುವ ಸಸ್ಯಗಳನ್ನು ಆವುಗಳ ಉಪಯುಕ್ತ ಮತ್ತು ಸಸ್ಯಗಳಲ್ಲಿರುವ ಪೋಷಕಾಂಶಗಳ್ ದೃಷ್ಟಿಯಿಂದ ಮೂರು ಮುಖ್ಯಪಂಗಡವಾಗಿ ವಿಂಗಡಿಸಬಹುದು1.ಧಾನ2.ತರಕಾರಿ.3ಹಣ್ಣುಹಂಪಲು. ಧಾನ್ಯಗಳಲ್ಲಿ ಎರಡು ವಿಧಗಳಿವೆ:ಏಕದಳ ಧಾನ್ಯಗಳು,ದ್ವಿದಳ ಧಾನ್ಯಗಳು.ಏಕದಳಧಾನ್ಯಗಳು ಹುಲ್ಲು ಕುಟುಂಬದ ಜಾತಿಗೆ ಸೇರಿವೆ.ಬತ್ತ,ಗೋದಿ,ರೈ,ಬಾರ್ಲಿ,ರಾಗಿ,ಜೋಳ,ಮುಸುಕಿನಜೋಳ,ನವಣೆ,ಸಜ್ಜೆ ಇವೆಲ್ಲವೂ ಈ ಗುಂಪಿಗೆ ಸೇರಿದುವು.ಮನುಷ್ಯರ ಅಹಾರದಲ್ಲಿ ಇವು ಮುಖ್ಯಪಾತ್ರ ವಹಿಸುತ್ತದೆ.ಪ್ರಾಣಿಮೇವಿಗೊ ಉತ್ಪಾದನಯನ್ನು ದಾಸ್ತಾನು ಮಾಡಿಡುವದಕ್ಕೊ ಇವು ಅನುಕೂಲ.ಮಾನವ ಪ್ರಥಮವಾಗಿ ಧಾನ್ಯಗಳನ್ನು ಬೆಳೆಸಲು ಕಲಿತ.ಶೇಖ್ರಣಿಯ ಸಮಸ್ಯೆ ಮುಂದೆ ಬಂತು,ಧಾನ್ಯ ಶೇಖರಣೆಗಳ ಉಗ್ರಾಣಗಳು ಅತ್ಯಂತ ಪುರಾತನ ಮೊಹೆಂಜೊದಾರೊ ಮುಂತಾದೆಡೆಯಲ್ಲಿ ಕಂಡುಬಂಡಿವೆ.ಸಸ್ಯಾಹಾರವೇ ಆಹಾರಕ್ಕೆ ಮೂಲಭೊತವಾದದ್ದು.ಮಾಂಸಾಹಾರ ಹೆಚ್ಚು ಪ್ರಚಲಿತವಿರುವ ದೇಶಗಳಲ್ಲಿ ಸಸ್ಯಗಳನ್ನು ಬೆಳೆಸಿ ವಿವಿಧ ಪ್ರಾಣೆಗಳಿಗೆ ತಿನ್ನಿಸಿ ಅವುಗಳ ಮಾಂಸವನ್ನು ಬಳಸುತ್ತಾರೆ.ಧಾನ್ಯಗಳು ವಿವಿಧ ರೀತಿಯವಾದರೊ ಅವುಗಳಲ್ಲಿನ ಅಹಾರಾಂಶಗಳು ಒಂದೇ ರೀತಿಯವು.ಮೊತ್ತದಲ್ಲಿ ಮಾತ್ರ ಅಂತರವಿರಬಹುದು.ಸಾಮಾನ್ಯವಾಗಿ ಪಿಷ್ಟಪದರ್ಥಗಳೇ ಹೆಚ್ಚು ಎಲ್ಲದರಲ್ಲೂ ಕ್ಯಾಲ್ಸಿಯಂ ಅಂಶ್,ಕಬ್ಬಿಣ ಮತ್ತು ಎ ಜೀವಸ್ತತ್ವ ಕಡಿಮೆ.ಹಳದಿಬಣ್ಣದ ಮುಸುಕಿನಜೋಳದಲ್ಲಿ ಮಾತ್ರ ಎ ಜೀವಸತ್ವ ಸಮರ್ಪಕವಾಗಿರುತ್ತದೆ.ಧಾನ್ಯಗಳಲ್ಲಿ ಸಾರಜನಕವೂ(ನೈಟ್ರೊಜನ್) ಸೇರಿರುತ್ತದೆ.ಅದರೆ ಅದು ಮೊಟ್ಟೆ,ಹಾಲು,ಮಾಂಸಗಳಲ್ಲಿನ ನೈಟ್ರೊಜನ್ನಿಗಿಂತ ಭಿನ್ನವಾಗಿರುತ್ತದೆ.ಅವುಗಳನ್ನು ಸೇವಿಸುವಾಗ ನ್ಯೊನತೆಯಿರುವ ಆಹಾರಾಂಶ ಒದಗಿಸುವ ಇತರ ವಸ್ತುಗಳನ್ನು ಜೋತೆಗೆ ಸೇರಿಸಿ ಸೇವಿಸುವುದು ಅಗತ್ಯ ರಾಗಿಯಲ್ಲಿ ಮಾತ್ರ ಕ್ಯಾಲ್ಸಿಯಂ ಅಂಶ ಹೆಚ್ಚಾಗಿದೆ.ಧಾನ್ಯಗಳು ಸಾಕಷ್ಟು ಬಿ ಜೀವಸತ್ವವನ್ನು ಒದಗಿಸುತ್ತದೆ.ಬತ್ತ ಜಗತ್ತಿನಲ್ಲಿ ಅತಿಮುಖ್ಯ ಅಹಾರ.ಇದರಿಂದ ದೊರಕುವ ಅಕ್ಕಿಯನ್ನು ನೇರವಾಗಿ ಬೇಯಿಸಿ ಅಥವಾ ಅದರ ಹಿಟ್ಟಿನಿಂದ ವಿವಿಧ ಮಾದರಿಯ ಅಹಾರ ತಯಾರಿಕೆಗೆ ಉಪಯೋಗಿಸಲಾಗುತ್ತದೆ.ಅಕ್ಕಿಯಂತೆ ಗೋದಿಯೂ ಅತಿಮುಖ್ಯವಾದ ಆಹಾರ.ಇದನ್ನು ಪ್ರಪಂಚ ಹಲವೆಡೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಉಪಯೋಗಿಸುತ್ತಾರೆ.ಇದರಿಂದ ಸಿದಪಡಿಸಿದ ಆಹಾರಗಳನ್ನು ದಿರ್ಘಕಾಲ ಕೆಡದ ರೀತಿಯಲ್ಲಿ ಇಡಬಹುದು.ರಾಗಿ,ಜೋಳ,ಮುಸುಕಿನ ಜೋಳಗಳು,ಸಜ್ಜೆ,ನವಣೆ ಇವು ಇತರ ಮೂಖ್ಯ ಏಕದಳ ಧಾನ್ಯಗಳು.ಕಬ್ಬು ಸಹ ಇದೇ ಗುಂಪಿಗೆ ಸೇರುತ್ತದೆ.ಕಬ್ಬಿನಿಂದ ತೆಗೆದ ಸಕ್ಕರೆಯನ್ನು ಮಾನವ ಹಲವು ರೀತಿಯಲ್ಲಿ ಬಳಸಿಕೊಂಡಿದ್ದಾನೆ.ದ್ವಿದಳಧಾನ್ಯಗಳಲ್ಲಿ ವಿವಿಧ ಕಾಳುಕಡ್ಡಿಗಳು ಸೇರುತ್ತವೆ.ನೈಟ್ರೊಜನ್ನನ್ನು ಇವು ಹಚ್ಚಾಗಿ ಒದಗಿಸುತ್ತವೆ.ತೊಗರಿ,ಅವರೆ,ಹಲಸಂದೆ,ಉದ್ದು,ಸೋಯಬಿನ್,ಹುರುಳಿ,ಕಡಲೆ,ಮಡಿಕಿ ಇವೆಲ್ಲವೊ ನೈಟ್ರೊಜನಯುಕ್ತ ಆಹಾರಸಸ್ಯಗಳು.ಇವುಗಳಲ್ಲಿ ಈ ಸಸ್ಯಗಳ ಕಾಳು ಉಪಯುಕ್ತವಾಗುತ್ತದೆ.ಸಸ್ಯಭಾಗಗಳು ಪ್ರಾಣೆಗಳಿಗೆ ಮೇವು ಒದಗಿಸುತ್ತವೆ.ಇದರಿಂದಲೂ ಬಿ ಒದಗುತ್ತದೆ.ಮೊಳಕೆ ಬಂದ ಕಾಳುಗಳಲ್ಲಿ ಸಿ ಜೀವಸತ್ವ ಆಧಿಕ ಪ್ರಮಾಣದಲ್ಲಿರುತ್ತದೆ.ಅಹಾರದಲ್ಲಿ ತರಕಾರಿಗಳ ಪಾತ್ರ ಬಲು ಹಿರಿದು.ಧಾನ್ಯಗಳಿಗಿಂತ ಇವು ಅತಿಮುಖ್ಯ ಅಹಾರವಾದರೊ ಅವುಗಳ ಬಳಕ್ ಸಮಂಜಸೆವಾಗಿಲ್ಲ.ಅತ್ಯಲ್ಪ ಕಾಲದಲ್ಲಿಯೇ ಹೆಚ್ಚು ಪ್ರಮಾಣದ ಪೋಷಕಾಂಶಗಳನ್ನು ಇವುಗಳಿಂದ ಪಡೆಯಬಹುದು.ವಿವಿಧಜಾತಿಯ ಸೊಪ್ಪುಗಳು ಮತ್ತು ತಿಂಗಳ ಹುರುಳಿ ಇತ್ಯಾದಿ ಈ ಗುಂಪಿನ ಅಹಾರಕ್ಕೆ ಸೇರಿವೆ.ಒಂದು ನಿಯತ ಅವಧಿಯಲ್ಲಿ ಒಂದು ನಿರ್ದಿಷ್ಟಪ್ರದಶದಲ್ಲಿ ಬೆಳೆಯುವ ಧಾನ್ಯ್ಗಗಳಿಗಿಂತ.4-5ರಷ್ಟು ಹೆಚ್ಚು ಪ್ರಮಾಣ್ದಲ್ಲಿ ತರಕಾರಿಗಳನ್ನು ಬೆಳೆಸಬಹುದು.ಇವುಗಳ್ಲ್ಲಿ ಪಿಷ್ಟ್ಪದಾರ್ಥದ ಜೋತೆಗೆ ಲವಣಾಂಶಗಳೊ ಸಾರಜನಿಕ್ಸ್ ಅಂಶ್ ಮತ್ತು ಅತಿಮುಖ್ಯವಾದ ಜೀವಸತ್ವ್ಗಳೊ ಹೆಚ್ಚಾಗಿರುವುದರಿಂದ ಧಾನ್ಯ್ಗಳ್ಘ್ನೆ ಇದನ್ನು ಸೇರಿಸಿ ಸೇವಿಸಿದರೆ ದೇಹಕ್ಕೆ ಹೆಚ್ಚಿನ.ಸೇವಿಸಿದರೆ ದೇಹಕ್ಕೆ ಹೆಚ್ಚಿನ ಪುಷ್ಟಿ ದೊರಕುತ್ತದೆ. ಉಪಯುಕ್ತ ಸಸ್ಯಭಗಗಳ ಆದಾರವನ್ನನುಸರಿಸಿ ತರಕಾರಿಗಳನ್ನು ನಾಲ್ಕು ಮುಖ್ಯ ಪಂಗಡಗಳಾಗಿ ವಿಂಗಡಿಸಬಹುದು.1.ಆಲೂಗಡ್ಡೆ,ಗೆಣಸು,ಮರಗೆಣಸು ಮುಂತಾದವು.ಇವು ಧಾನ್ಯಗಳಂತೆಯೇ ಹೆಚ್ಚಿನ ಪಿಷ್ಟಾಂಶಗಳನ್ನು ಒದಗಿಸುತ್ತದೆ.ಇವು ಭೊಮಿಯೊಳಗಡೆ ಬೆಳೆಯುವ ಆಹಾರವಸ್ತುಗಳು.ಬೇರು ಅಥವಾ ಭೊಮಿಯೊಳಗಿನ ರೆಂಬೆಗಳಲ್ಲಿ ಆಹಾರ ಶೇಖರಿಸಲ್ಪಡುತ್ತದೆ.ಬೀಟ್ ರೊಟ್,ಕ್ಯಾರಟ್,ಮೂಲಂಗಿ,ಈರುಳ್ಳಿ,ಬೆಳ್ಳುಳ್ಳಿ,ಸುವರ್ಣಗಡ್ಡೆ ಮುಂತಾದುವುಗಳೆಲ್ಲ ಉತ್ತಮ ಆಹಾರ ಒದಗಿಸುವ ತರಕಾರಿಗಳು. 2.ಕಾಂಡ ಮತ್ತು ಎಲೆಗಳನ್ನು ಆಹಾರಕ್ಕಾಗಿ ಒದಗಿಸುವ ಸಸ್ಯಗಳು.ಈ ಬಗೆಯ ಸಸ್ಯಗಳು ದೇಹದಲ್ಲಿ ಮಲಬದ್ದತೆಗೆ ಅವಕಶವಿಲ್ಲದಂತೆ ನೋಡಿಕೊಳ್ಳುತ್ತವೆ.ವಿವಿಧ ಜೀವಸತ್ವಗಳನ್ನು ಒದಗಿಸುವ ವಿವಿಧ ಜಾತಿಯ ಸೊಪ್ಪುಗಳಲ್ಲಿ ಲೆಟಿಸ್ ಎಲೆಕೋಸು,ಪುದೀನ,ಬಸಳೆ ಮುಖ್ಯವಾದವು.ಇವುಗಳಲ್ಲಿ ಕ್ಯಾಲ್ಸಿಯಂ,ಕಬ್ಬಿಣ,ಸಿ ಮತ್ತು ಎ ಜೀವಸತ್ವಗಳು ಹೆಚ್ಚು. 3.ಕಾಯಿ ಮತ್ತು ಹಣ್ಣುಗಳನ್ನು ಮಾತ್ರ ಒದಗಿಸುವ ಸಸ್ಯಗಳು ಮೂರನೆಯ ವರ್ಗ.ಇವುಗಳ ಬೇರು,ಕಾಂಡ ಮತ್ತು ಎಲೆ ಉಪಯುಕ್ತವಾಗುವುದಿಲ್ಲ.ಕಾಯಿ ಮತ್ತು ಹಣ್ಣುಗಳು ಉತ್ತಮ ಆಹಾರವಾಗುತ್ತವೆ.ಬದನೆ,ಬೆಂಡೆ,ಟೊಮ್ಯಾಟೊ,ಕುಂಬಳ,ಸೋರೆ,ಪಡವಲ,ಸೌತೆ,ಹಾಗಲ,ಹೀರೆ,ಇವೆಲ್ಲವೊ ಈ ಗುಂಪಿನವು.ಸಿ,ಬಿ,ಮತ್ತು ಎ ಜೀವಸತ್ವಗಳು ಇವುಗಳಲ್ಲಿವೆ. 4.ನಾಲ್ಕನೆಯದು ಸಣ್ಣ ಪಂಗಡ.ಆವುಗಳಲ್ಲಿ ಹೊ ಮಾತ್ರ ಉಪಯುಕ್ತ.ಸಾಮಾನ್ಯವಾಗಿ ಸಮಶೀತೋಷ್ಣ ಪ್ರದೇಶಗಳಲ್ಲಿ ಚೆನ್ನಾಗಿ ಬೆಳೆಯುವ ಹೊಕೋಸ್ ಮತ್ತು ಬಾಳೆಯ ಮೋತೆ ಈ ಗುಂಪಿಗೆ ಸೇರಿವೆ. ಹಣ್ಣುಗಳ ವಿಭಾಗಕ್ಕೆ ವಿವಿಧ ಉಪಯುಕ್ತ ಬೀಜಗಳೊ ಸೇರುತ್ತವೆ.ಹಣ್ಣುಗಳಲ್ಲಿ ಹೊರತಿರುಳು ಅಥವಾ ಒಳಬೀಜ ಉಪಯುಕ್ತವಾಗುತ್ತವೆ.ಹಲವು ಹಣ್ಣುಗಳನ್ನು ಪೊರ್ಣವಾಗಿ ಉಪಯೋಗಿಸಲಾಗುವುದು.ಉದಾ;ಮಾವು,ಹಲಸು,ಸಪೋಟ,ಸೀಬೆ,ನಿಂಬೆ,ಕಿತ್ತಳೆ ಜಾತಿಗಳು,ಪರಂಗಿ,ಬಾಳೆ,ದ್ರಾಕ್ಷಿ,ಸೇಬು,ದಾಳಿಂಬೆ,ಇವುಗಳಲ್ಲೆಲ್ಲ ಸಿ ಜೀವಸತ್ವ ಆಧಿಕವಿರುತ್ತೆದೆ.ಮಾವು ಮತ್ತು ಪರಂಗಿ ಹಣ್ಣುಗಳಲ್ಲಿ ಅ ಜೀವಸತ್ವ ಇದೆ.ಹಣ್ಣುಗಳಲ್ಲಿ ಕೆಲವನ್ನು ಒಣಗಿಸಿ ಬಲುಕಾಲ ಇಟ್ಟು ಅನಂತರ ಉಪಯೋಗಿಸಬಹುದು.ಖರ್ಜೂರ ಮತ್ತು ದ್ರಾಕ್ಷಿ ಇವುಗಳಿಗೆ ಮುಖ್ಯ ಉದಾಹರಣೆ..ಇವುಗಳಲ್ಲಿ ಕಬ್ಬಿಣದ ಅಂಶ ಹೆಚ್ಚು ಬಾಳೆಯಲ್ಲಿ ಪಿಷ್ಪಪದಾರ್ಥ ಮತ್ತು ಕೆ ಜೀವಸತ್ವ ಇರುತ್ತದೆ.ಹಣ್ಣುಗಳ ಒಳತಿರುಳು ಆಹಾರಕ್ಕೆ ಉಪಯಕ್ತವಲ್ಲದೆ,ಕೇವಲ ಬೀಜ ಉಪಯಕ್ತವಾಗುವುದೊ ಊಂಟು.ನೆಲಗಡಲೆ ಮತ್ತಿತರ ಎಣ್ಣೆಬೀಜಗಳು,ಬಾದಾಮಿ,ಗೋಡಂಬಿ,ಪಿಸ್ತ ಇವುಗಳಲ್ಲಿ ಕೊಬ್ಬಿನ್ ಆಂಶ ಹೆಚ್ಚು ಇವು ಉತ್ತಮ ಪೋಷಕ ಅಹಾರ ವಸ್ತುಗಳು.ಈಅಹಾರಸಸ್ಯಗಳಲ್ಲದೆ,ನಾವು ಪ್ರತಿನಿತ್ಯ ಸೇವಿಸುವ ಆಹಾರಕ್ಕೆ ಒಳ್ಳೆಯ ರುಚಿಯನ್ನುಂಟುಮಾಡವ ಹಲವು ವಸ್ತುಗಳು ಅಹಾರಸಸ್ಯವರ್ಗಕ್ಕೆ ಸಂಬಂಧಿಸಿವೆ.ಮೆಣಸಿನಕಾಯಿ,ಮೆಣಸು,ಏಲಕ್ಕಿ,ದಾಲ್ಚಿನ್ನಿ,ಲವಂಗ ಮುಂತಾದವು ರುಚಿಪ್ರದಾನವಾಗಿ ಉಪಯುಕ್ತವಾದರೊ ಅವುಗಳಲ್ಲಿ ಅಹಾರಾಂಶಗಳೊ ಇವೆ.ಹಸಿ ಮೆಣಸಿನಕಾಯಿಯಲ್ಲಿ ಸಿ ಜೀವಸತ್ವ ಇದೆ.ಮಣಸಿನಕಾಯಿ,ಕೊತ್ತಂಬರಿಯಲ್ಲಿ ಕರೊಟಿನ್ ಹೆಚ್ಚಾಗಿದೆ.ಆರಿಸಿನ ಮತ್ತು ಹುಣೆಸೆಯಲ್ಲಿ ಕಬ್ಬಿಣಾಂಶ ಹೆಚ್ಚಾಗಿದೆ.ಅಲ್ಲದೆ ಇಂಗು ಮತ್ತು ಬೆಳ್ಳುಳ್ಳಿಯಲ್ಲಿನ ಸತ್ವ ಜೀರ್ಣಕಾರಿಯಾದ ಸೊಕ್ಷ್ಮಜೀವಿಹಳನ್ನು ಕರುಳಿನಲ್ಲಿ ವೃದ್ದಿಸಿ ಜೀರ್ಣಶಕ್ತಿ ಹೆಚ್ಚಿಸುತ್ತದೆ.(ನೋಡಿ-ತರಕಾರಿಗಳು;ಹಣ್ಣುಗಳು) ಆಹಿತಾಗ್ನಿ:ವೇದೋಕ್ತ ಕರ್ಮಗಳನ್ನು ಮಾಡಲು ಆಧಾನ ಕ್ರಿಯೇಯಿಂದ ಸಿದ್ದವಾದ ದಕ್ಷಿಣಾಗ್ನಿ,ಗಾರ್ಹಪತ್ಯ ಅಹವನೀಯ ಎಂಬ ಮೂರು ವಿಧ ಅಗ್ನಿಗಳನ್ನು ಇಟ್ಟುಕೊಂಡಿರುವ ಗೃಹಸ್ಥ.ಗೃಹಸ್ಥನಿಗೆ ಮಾತ್ರ ಆಹಿತಾಗ್ನಿಯಾಗಲು ಆಧಿಕಾರ.ಅದರೆ ಅವರಲ್ಲೂ ಕುರುಡ,ಕಿವುಡ,ಕುಂಟ ಮೊದಲಾದ ಅಂಗವಿಲರು ಆಧಿಕಾರಿಗಳಲ್ಲ.