ಪುಟ:Mysore-University-Encyclopaedia-Vol-2-Part-1.pdf/೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆಲೂಗಡ್ಡೆ ಮಿಶ್ರ ಬೆಳೆ : ಆಲೂಗೆಡ್ಡೆಯನ್ನು ಸಾಮಾನ್ಯವಾಗಿ ಶುದ್ಧ ಬೆಳೆಯನ್ನಾಗಿಯೇ ಬೆಳೆಸುತ್ತಾರೆ. ಕೆಲವು ಸಲ ಸೊಪ್ಪನ್ನು ಮಿಶ್ರ ಬೆಳೆಯಾಗಿ ಹಾಕಿ ಮಣ್ಣು ಏರು ಹಾಕುವ ಕಾಲಕ್ಕೆ ಸರಿಯಾಗಿ ಉಪಬೆಳೆ ಮುಗಿದು ಹೋಗುತ್ತದೆ. ಬದುಗಳ ಮೇಲೆ ಈರುಳ್ಳಿ, ಬೆಳ್ಳುಳ್ಳಿ, ಕೊತ್ತುಂಬರಿ ಮುಂತಾದವುಗಳನ್ನು ಮಿಶ್ರ ಬೆಳೆಯಾಗಿ ಹಾಕುವುದು ರೂಢಿಯಲ್ಲಿದೆ. ಆಲುಗೆಡ್ಡೆ ಬೇಸಾಯಕ್ಕೆ ಅಧಿಕ ಗೊಬ್ಬರ ಅಗತ್ಯ ಎಕರೆಗೆ ೨೦ ಗಾಡಿಯ‍ಷ್ಟು ಕೊಟ್ಟಿಗೆ ಗೊಬ್ಬರ ಬೇಕು ಎಕರೆಗೆ ೨೦೦ ಕೆ.ಜಿ. ನೈಟ್ರೋಜನ್, ೧೦೦ ಕೆ.ಜಿ. ಫಾಸ್ಫರಸ್ ಮತ್ತು ೨೦೦ ಕೆ.ಜಿ. ಪೊಟ್ಯಾಷ್ ಬೇಕಾಗುತ್ತದೆ. ನಡುವೆ ಪದ್ಡತಿ ನೀರಾವರಿಯನ್ನು ಅನುಸರಿಸಿದೆ. ಮಳೆ ಆಶ್ರಯಿಸಿ ಹಾಕುವ ಬೆಳೆಯನ್ನು ನೇಗಿಲ ಸಹಾಯದಿಂದ ಉತ್ತು ನೆಡುತ್ತಾರೆ. ಎರಡು ಅಂತರದಲ್ಲಿ ಹಾದು ಹೋದ ನೇಗಿಲ ಸಾಲಿನಲ್ಲಿ ಸು.೫೦ ಸೆಂಮೀ ಆಳದಲ್ಲಿ ಹಾಕಿ ಮಣ್ಣು ಮುಚ್ಚುತ್ತಾರೆ. ನೀರಾವರಿ ಬೆಳೆ ಹಾಕುವಾಗ ೫೦ ಸೆಂಮೀ ಅಂತರದಲ್ಲಿ ೪ ಆಳದ ಕಾಲುವೆಗಳನ್ನು ತೆಗೆದು ೩೦ ಸೆಂಮೀ ಅಂತರದಲ್ಲಿ ನೆಡುತ್ತಾರೆ. ಆದರೆ ಆಲೂಗಡ್ಡೆ ನೆಡುವುದಕ್ಕೆ ರೈತರು ಅಂತರದ ಬಗ್ಗೆ ಹೆಚ್ಚು ಗಮನ ಕೊಡುವುದಿಲ್ಲ ಕೆಲವು ಸಾರಿ ೬" ಅಂತರದಲ್ಲಿ ಸಹ ನೆಡುತ್ತಾರೆ. ಆಲುಗಡ್ಡೆ ಬೇಸಾಯದಲ್ಲಿ ಕಳೆಕೀಳುವುದು, ಮಣ್ಣು ಏರು ಹಾಕುವುದು ಮುಖ್ಯವಾದ್ ಮಧ್ಯಕಾಲದ ಬೇಸಾಯಕ್ರಮ, ನೆಟ್ಟಮೇಲೆ ಪೂರ್ತಿಯಾಗಿ ಮೊಳೆಯಲು ೨-೩ ವಾರಬೇಕು. ನೆಟ್ಟ ಒಂದು ತಿಂಗಳ ಅನಂತರ ಕಳೆ ಕೀಳಬೇಕು. ಎರಡನೇಯ ಸಲ ನೆಟ್ಟ ೧/೧/೨ ತಿಂಗಳ ಆನಂತರ ಕಳೆ ಕಿತ್ತು ಕೈ ಗುದ್ದಲಿಯಿಂದ ಮೊಳಕೆಗಳ ಎರಡು ಕಡೆಗಳಲ್ಲಿ ಮಣ್ಣನ್ನು ಏರು ಹಾಕಬೇಕು.ಆಲೂಗಡ್ಡೆ ನೆಟ್ಟ ೧೧/೨ ತಿಂಗಳಲ್ಲಿ ಮೇಲೆ ಸಸ್ಯದ ಹಸಿರು ಭಾಗ ಬೆಳೆಯುತ್ತದೆ.ಆ ಹೊತ್ತಿಗೆ ಸಣ್ಣ ಸಣ್ಣ ಗೆಡ್ಡೆಗಳು ಕಾಣಿಸಿಕೊಳ್ಳುತ್ತವೆ. ಇವು ಕ್ರಮೇಣ ದಪ್ಪವಾಗುತ್ತ ಬರುತ್ತವೆ. ನೆಟ್ಟ ೩ನೆಯ ತಿಂಗಳಲ್ಲಿ ಇವು ಪರಮಾವಧಿ ಗಾತ್ರ ಮುಟ್ಟುತ್ತವೆ. ಮಣ್ಣಿನಲ್ಲಿ ಸರಿಯಾದ ಗೊಬ್ಬರ ಪ್ರಮಾಣ ಇಲ್ಲದೆ ಇದ್ದು ಅಥವಾ ಯಾವುದೇ ಕಾರಣದಿಂದ ಮಣ್ಣು ಜಿಗುಟಾಗಿದ್ದರೆ ಗೆಡ್ಡೆ ದಪ್ಪವಾಗಲು ಅವಕಾಶವಿರುವುದಿಲ್ಲ. ಆಲುಗಡ್ಡೆ ಸಸ್ಯ ಅದರ ಜೀವಿತದ ಪರಮಾವಧಿ ಮುಟ್ಟಿದ ಮೇಲೆ ಎಲೆಗಳು ಹಳದಿ ಬಣ್ಣಕ್ಕೆ ತಿರುಗಿ ಕ್ರಮೇಣ ಒಣಗಲು ಪ್ರಾಂರಭಿಸುತ್ತವೆ. ಅಗತೆಗೆ ಬರುವ ಅವಧಿ ಜಾತಿಗಳನ್ನು ಅನುಸರಿಸಿ ವ್ಯತ್ಯಾಸವಾಗುತ್ತದೆ. ಮಳೆಯನ್ನು ಆಶ್ರಯಿಸಿರುವ ಬೆಳೆ ಸಾಮಾನ್ಯವಾಗಿ ಅಧಿಕ ಅವಧಿಯದು. ಅದಕ್ಕೆ ೫ ತಿಂಗಳು ಬೇಕಾಗುತ್ತದೆ.ನೀರಾವರಿ ಬೆಳೆ ನೆಟ್ಟ ೩ ತಿಂಗಳಲ್ಲಿ ಅಗತೆಗೆ ಬರುತೆಗೆ ಬರುತ್ತದೆ. ಬೆಳೆಯ ಮರಮಾವಧಿ ಸೂಚನೆ ಕಂಡ ಕೂಡಲೆ ನೀರು ಹಾಯಿಸುವುದನ್ನು ನಿಲ್ಲಿಸಬೇಕು. ಆ ನಂತರ ಗುದ್ದಲಿಯ ಸಹಾಯದಿಂದ ಪ್ರತಿ ಸಸ್ಯವನ್ನು ಕಿತ್ತು ಗೆಡ್ಡೆಗಳನ್ನು ಬೇರ್ಪಡಿಸಬೇಕು. ಬಿತ್ತನೆಗಾಗಿ ಬೆಳೆದ ಬೆಳೆಯನ್ನು ಪರಮಾವಧಿಗಿಂತ ೨ ವಾರಗಳ ಮುಂಚೆ ಅಗತೆ ಮಾಡುತ್ತಾರೆ. ಆಲೂಗಡ್ಡೆ ಹೆಚ್ಚು ಫಸಲು ಕೊಡುವ ಬೆಳೆ. ಎಕರೆಗೆ ೬-೧೦ ಟನ್ನು ಆಲೂಗಡ್ಡೆ ಸಿಕ್ಕುತ್ತದೆ. ಆದರೆ ಸಾಮಾನ್ಯವಾಗಿ ಫಸಲಿನ ಪ್ರಮಾಣ ಜಾತಿ, ಬೇಸಾಯ ಪದ್ಧತಿ, ಸೀಮೆಗೊಬ್ಬರ, ನೀರಾವರಿ ಸೌಲಭ್ಯ ಮುಂತಾದವುಗಳನ್ನು ಅವಲಂಬಿಸಿದೆ. ಆಲೂಗಡ್ಡೆ ಮಾರುಕಟ್ಟೆಗೆ ಒಂದೇ ಸಾರಿ ಬರುವುದರಿಂದ ಬೆಲೆ ತೀರ ಕಡಿಮೆಯಾಗುತ್ತದೆ. ಇದನ್ನು ಸಾಧಾರಣ ಸ್ಥಿತಿಯಲ್ಲಿ ಹೆಚ್ಚು ದಿವಸಗಳು ಇಡಲು ಸಾಧ್ಯವಾಗದೆ ಇರುವುದರಿಂದ ನ್ಯಾಯ ಬೆಲೆ ರೈತರಿಗೆ ಸಿಗುವುದು ಅಪೂರ್ವ. ಈ ತೊಂದರೆಯನ್ನು ತಪ್ಪಿಸಲು ಗ್ರಾಮಾಂತರ ಪ್ರದೇಶಗಳಲ್ಲಿ ಒಂದು ವಿಧಾನ ರೂಢಿಯಲ್ಲಿದೆ. ಆಲೂಗೆಡ್ಡೆಯನ್ನು ರಾಶಿ ಹಾಕಿ ಅದರ ಮೇಲೆ ೨"-೩" ದಪ್ಪವಾಗಿ ಸೊಪ್ಪು ಹೊದಿಸಿ ಅದರ ಮೇಲೆ ಮಣ್ಣು ಹಾಕುತ್ತಾರೆ. ಕೆಲವು ಕಡೆಗಳಲ್ಲಿ ರಂಧ್ರ ಮಾಡಿ ಗೆಡ್ಡೆಗಳಿಗೆ ಉಸಿರಾಡಲು ಅವಕಾಶ ಮಾಡಿಕೊಡುತ್ತಾರೆ. ಕರ್ನಾಟಕರಾಜ್ಯದ ತೋಟಗಾರಿಕೆ ಇಲಾಖೆಯವರು ಇದರ ಮಹತ್ವವನ್ನು ಅರಿತು ಹಾಸನದಲ್ಲಿ ಮತ್ತು ಬೆಂಗಳೂರಿನ ಲಾಲ್ ಬಾಗಿನಲ್ಲಿ ೨ ಶೀತಶೇಖರಣಾ ಕೇಂದ್ರಗಳನ್ನು ಸ್ಥಾಪಿಸಿದ್ದಾರೆ. ಬಿತ್ತಮೆ ಆಲೂಗಡ್ಡೆಯನ್ನು ಮರಳಿನಲ್ಲಿ ಶೇಖರಿಸುವುದು ಗ್ರಾಮಾಂತರ ಪ್ರದೇಶಗಳಲ್ಲಿ ರೂಢಿಯಲ್ಲಿರುವ ವಿಧಾನ. ಗಾರೆ ಮತ್ತು ಸಿಮೆಂಟ್ ಹಾಕಿರುವ ನೆಲದ ಮೇಲೆ ಬಿತ್ತನೆ ಆಲೂಗಡ್ಡೆಯನ್ನು ಹಾಕಬಾರದು. ಆಹಾರಾಂಶ: ಆಲೂಗೆಡ್ಡೆಯಲ್ಲಿರುವ ಮನುಷ್ಯನ ಬೆಳೆವಣಿಗೆಗೆ ಅವಶ್ಯವಾಗಿರುವ ಆಹಾರಾಂಶದ ವಿವರ ಈ ಕೆಳಗಿನಂತಿದೆ. ೧೦೦ ಗ್ರಾಂ ಆಲೂಗಡ್ಡೆಯಲ್ಲಿ ತೇವಾಂಶ (ನೀರು) ಶೇ.೭೪.೭೦, ಸಕ್ಕರೆ ಶೇ.೦೧.೬೦, ಜೀವಸತ್ವಗಳು (ವಿಟಮಿನ್ ಗಳು) ಶೇ.೦೦.೧೦, ಕೊಬ್ಬು ಶೇ.೦೦.೬೦, ಲವಣಗಳು-ಸುಣ್ಣ ಶೇ.೦೦.೧೦, ರಂಜಕ ಶೇ೦೦.೩೦, ಕಬ್ಬಿಣ ಶೇ.೦೦.೦೭, ಆಲೂಗಡ್ಡೆಯಲ್ಲಿ ಪಿಷ್ಟದ ಅಂಶ ಹೆಚ್ಚಾಗಿದೆ. ಆದ್ದರಿಂದ ಇದನ್ನು ಅಕ್ಕಿ ಮತ್ತು ಇತರ ಧಾನ್ಯಗಳ ಬದಲಾಗಿ ಉಪಯೋಗಿಸಬಹುದು. ಈ ಬೆಳೆ ಧಾನ್ಯಗಳಿಗಿಂತ ಕಡಿಮೆ ಕಾಲದಲ್ಲಿ ಹೆಚ್ಚು ಫಸಲು ಕೊಡಬಲ್ಲದು. ಒಂದು ಎಕರೆಯಲ್ಲಿ ಬೆಳೆದ ಆಲೂಗೆಡ್ಡೆ ಮತ್ತು ಬತ್ತದಲ್ಲಿ ದೊರೆಯುವ ಆಹಾರಾಂಶಗಳನ್ನು ಮುಂದೆ ಕೊಟ್ಟಿದೆ. ಪ್ರಾಯೋಗಿಕ ದೃಷ್ಟಿಯಿಂದ ಆಲೂಗೆಡ್ಡೆ ಪ್ರಮುಖ ಕಚ್ಚಾವಸ್ತು. ಇದನ್ನು ಆಹಾರ ಮತ್ತು ತರಕಾರಿಯಾಗಿ ಬಳಸುತ್ತಾರೆ. ಇದರಿಂದ ಫರೀನಾ ಎಂಬ ಪಿಷ್ಟವನ್ನು ತಯಾರಿಸಿ ಲಾಂಡ್ರಿಯಲ್ಲೋ ಬಟ್ಟೆ ಗಿರಣಿಗಳಲ್ಲೊ ಬಳಸುತ್ತಾರೆ. ಪಾಶ್ಚಾತ್ಯ ದೇಶಗಳಲ್ಲಿ ಇದರಿಂದ ಆಲ್ಕೊಹಾಲ್ ತಯಾರಿಸಿ ಕೈಗಾರಿಕೆಗಳಲ್ಲಿ ಬಳಸುತ್ತಾರೆ. ಆಗ ಉಳಿಯುವ ಹಿಂಡಿಯನ್ನು ದನಗಳ ಮೇವಿಗಾಗಿ ಉಪಯೋಗಿಸುತ್ತಾರೆ. ಒಂದು ಟನ್ ಆಲೂಗೆಡ್ಡೆಯಿಂದ ಶೇ.೯೫ ರಷ್ಟು ಶುದ್ಧವಾದ ೭೦ ಗ್ಯಾಲನ್ ಆಲ್ಕೊಹಾಲ್ ತಯಾರಾಗುವುದು. ಇದರಿಂದ ಡೆಕ್ಸ್ ಟ್ರಿನ್ ಮತ್ತು ಗ್ಲೂಕೋಸನ್ನೂ ತಯಾರಿಸುತ್ತಾರೆ. ಶತ್ರುಗಳು: ಗೆಡ್ಡೆ ಕೊರೆಯುವ ಕೀಟಗಳ ಹಾವಳಿಯಿಂದ ಶೇಖರಣೆ ಮಾಡಿದ ಆಲೂಗಡ್ಡೆ ಹಾಳಾಗುತ್ತದೆ. ಗೆಡ್ಡೆ ಕೊರೆಯುವ ಕೀಟಗಳ ಹಾವಳಿಯಿಂದ ಶೇಖರಣೆ ಮಾಡಿದ ಆಲೂಗಡ್ಡೆ ಹಾಳಾಗುತ್ತದೆ. ಗೆಡ್ಡೆಯ ಆಕಾರ ವಿಕೃತವಾಗುವುದು. ಕೀಟಪೀಡಿತ ಗೆಡ್ಡೆಯನ್ನು ನೆಟ್ಟರೆ ವ್ಯಾಧಿ ಸಾಂಕ್ರಾಮಿಕವಾಗುತ್ತದೆ. ಇಲ್ಲಿ ರಕ್ಷಣೆಯ ಮಾರ್ಗ : ಕಾರ್ಬನ್ ಡೈಸಲ್ಫೈಡ್ ಹೊಗೆಯನ್ನು ಹಾಯಿಸಿ ಆ ಪಿಡುಗನ್ನು ತಡೆಗಟ್ಟಬೇಕು : ಕೀಟಪೀಡಿತ ಗೆಡ್ಡೆಗಳನ್ನು ಬಿತ್ತನೆಗಾಗಿ ಉಪಯೋಗಿಸಬಾರದು. ಬಿತ್ತನೆ ಆಲೂಗಡ್ಡೆಯನ್ನು ಮಣ್ಣಿನಿಂದ ಮುಚ್ಚಿ, ಕೀಟದ ಹಾವಳಿಯನ್ನು ತಡೆಯಬೇಕು. ಕೊಂಬೆ ಕತ್ತರಿಸುವ ಹುಳುಗಳು : ಆಲೂಗೆಡ್ಡೆಯ ಸಸ್ಯ ಕತ್ತರಿಸುವ ಹುಳುಗಳ ಪಿಡುಗೂ ಹತ್ತುವುದುಂಟು. ಆ ಕೀಟದ ಕಂಬಳಿ ಹುಳು ಆಲೂಗಡ್ಡೆ ಎಳೆ ಸಸಿಗಳನ್ನು ಭೂಮಿಯ ಮಟ್ಟದಲ್ಲಿ ಕತ್ತರಿಸಿ ಹಾಕಿ ಬೆಳೆಯನ್ನು ನಾಶಮಾಡುತ್ತದೆ. ಇದನ್ನು ತಡೆಗಟ್ಟಲು ಶೇ.೫ ಇರುವ ಬಿ.ಎಚ್.ಸಿ. ಅಥವಾ ಡಿ.ಡಿ.ಟಿ. ಪುಡಿಯನ್ನು ಬೆಳೆಯ ಸಾಲುಗಳಲ್ಲಿ ಹಾಕಿ ಮಣ್ಣಿಗೆ ಮಿಶ್ರಮಾಡಬೇಕು. ಅಥವಾ ಶೇ.೫ ಇರುವ ಆಲ್ ಡ್ರೈನ್ ಅಥವಾ ಕ್ಲೋರೊಡನ್ ಪುಡಿಯನ್ನು ಎರಚಬೇಕು. ಹಸಿರುಬಣ್ಣದ ಕುಪ್ಪಳಿಸುವ ಅಗಾಧ ಸಂಖ್ಯೆಯ ಜಾಸಿಡ್ಡುಗಳು ಆಲೂಗಡ್ಡೆ ಸಸ್ಯದ ಎಳೆಯ ಭಾಗಗಳಲ್ಲಿ ಇದ್ದು ಸಸ್ಯರಸವನ್ನು ಹೀರುತ್ತವೆ. ಸಸ್ಯರಸವನ್ನು ಹೀರುವುದರಿಂದ ಎಲೆಗಳು ಮುದುರಿಕೊಂಡು ಹಳದಿ ಬಣ್ಣಕ್ಕೆ ತಿರುಗುತ್ತವೆ. ಹಾವಳಿ ಅತಿಯಾದಾಗ ಎಲೆ ಮತ್ತು ಇತರ ಎಳೆಯ ಭಾಗಗಳು ಒಣಗಿಹೋಗುತ್ತವೆ. ಈ ಪಿಡುಗನ್ನು ತಪ್ಪಿಸಲು ಶೇ.೫ ಇರುವ ೧.೨ ಕೆ.ಜಿ. ಡಿ.ಡಿ.ಟಿ. ಪುಡಿಯನ್ನು ೩೦ ಲೀಟರ್ ನೀರಿನಲ್ಲಿ ದ್ರಾವಣಮಾಡಿ ಬೆರೆಸಿ ಸಿಂಪಡಿಸಬೇಕು: ಅಥವಾ ೫ ಚಮಚ ಎಂಡರಿನ್ ಪುಡಿಯನ್ನು ೧೫ ಲೀಟರ್ ನೀರಿನಲ್ಲಿ ದ್ರಾವಣಮಾಡಿ ಸಿಂಪಡಿಸಬೇಕು. ಚಿಪ್ಪಿನ ಹುಳು: ಚಿಪ್ಪಿನ ಹುಳು ಮತ್ತು ಇವುಗಳ ಮರಿಗಳು ಸಸ್ಯದ ಎಲೆಯ ನಾಳಗಳನ್ನು ಬಿಟ್ಟು ಉಳಿದ ಭಾಗವನ್ನು ತಿಂದುಹಾಕುತ್ತವೆ. ಜಾಸಿಡ್ಡುಗಳಿಗೆ ಅನುಸರಿಸುವ ಹತೋಟಿಯಕ್ರಮ ಇದಕ್ಕೂ ಪರಿಣಾಮಕಾರಿಯಾಗುತ್ತದೆ. ಹೇನು: ಹೇನುಗಳು ಸಸ್ಯದ ತುದಿಯ ಎಳೆ ಭಾಗಗಳಲ್ಲಿ ಅಗಾಧ ಸಂಖ್ಯೆಯಲ್ಲಿದ್ದು ಸಸ್ಯರಸವನ್ನು ಹೀರಿ ಜೀವಿಸುತ್ತವೆ. ಕೆಲವು ಸಲ ಹೇನುಗಳು ನಂಜುರೋಗವನ್ನು ಹರಡಿ ಬೆಳೆಯನ್ನು ನಷ್ಟಪಡಿಸುತ್ತವೆ. ಇದರ ನಿವಾರಣೆಗೆ ಜಾಸಿಡ್ಡುಗಳಿಗೆ ಅನುಸರಿಸುವ ಹತೋಟಿಯ ಕ್ರಮವನ್ನು ಅನುಸರಿಸಬಹುದು. ಆಲೂಗೆಡ್ಡೆಗೆ ಇತರ ರೋಗಗಳೂ ತಗಲುತ್ತವೆ. ಅವುಗಳಲ್ಲಿ ಮುಖ್ಯವಾದವನ್ನು ಕೆಳಗೆ ಸೂಚಿಸಿದೆ: ಆರ್ಲಿಬ್ಲೈಟ್: ಆರ್ಲಿಬ್ಲೈಟ್ ರೋಗ ಗೆಡ್ಡೆಯಾಗುವುದಕ್ಕೆ ಮುಂಚೆ ಬರುತ್ತದೆ. ಇದು ಶಿಲೀಂಧ್ರಗಳಿಂದ ತಗಲುವುದು. ಆರ್ಲಿಬ್ಲೈಟ್ ರೋಗ ಎಲೆಗಳ ಮೇಲೆ ನಸು ಕಂದು ಬಣ್ಣದ ಮುಚ್ಚೆಗಳಿಂದ ಪ್ರಾರಂಭವಾಗುತ್ತದೆ. ಈ ಮಚ್ಚೆಗಳು ಅಗಲವಾಗಿ, ಎಲೆಗಳನ್ನು ಪೂರ್ಣವಾಗಿ ಆವರಿಸಿ ಒಣಗಿ ಪೂರ್ತಿ ಉದುರಿಹೋಗುವಂತೆ ಮಾಡುತ್ತವೆ. ಈ ರೋಗ ಗೆಡ್ಡೆಗಳನ್ನು ಸಹ ಮುಟ್ಟಿ ಮಚ್ಚೆಗಳನ್ನು ಉಂಟುಮಾಡಿ ಗೆಡ್ಡೆಗಳು ಕೊಳೆತು ಹೋಗುವಂತೆ ಮಾಡುತ್ತದೆ. ರೋಗಪೀಡಿತ ಸಸ್ಯಭಾಗ ಭೂಮಿಯಲ್ಲಿ ಉಳಿದರೆ ಇದು ಮತ್ತೆ ಮುಂದಿನ ಬೆಳೆಗೂ ರೋಗವನ್ನು ಹರಡುತ್ತದೆ. ಈ ರೋಗವನ್ನು ತಡೆಗಟ್ಟಲು ಕೈಗೊಳ್ಳಬೇಕಾದ ಕ್ರಮಗಳು: ಶುದ್ಧವಾದ ಬಿತ್ತನೆಯನ್ನು ನಾಟಿ ಮಾಡಬೇಕು. ಮುನ್ನೆಚ್ಚರಿಕೆಯ