ಪುಟ:Mysore-University-Encyclopaedia-Vol-2-Part-1.pdf/೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆಲೇಖ್ಯ ಪ್ರವಾಸ ಪುಸ್ತಕದಲ್ಲಿ ಈ ರೀತಿಯ ಅಲೇಖ್ಯಗಳೇ ಇದ್ದುವು. ಸಣ್ಣ ಪ್ರಮಾಣದ ಅಲೇಖ್ಯವನ್ನು ಅವಲ೦ಬಿಸಿ ಚಿತ್ರಕ್ಕಾಗಿ ದೊಡ್ಡ ಪ್ರಮಾಣದ ಕಾರ್ಟೂನ್ ಗಳನ್ನು ತಯಾರಿಸುವ ಪದ್ಧತಿಯೂ ಇದೆ. 19ನೆಯ ಶತಮಾನದಿ೦ದೀಚೆಗೆ ಗ್ರಾಫೈಟ್ ಸೀಸದಕಡ್ಡಿಯನ್ನು ಆಲೇಖ್ಯಕ್ಕಾಗಿ ಉಪಯೋಗಿಸುವ ಪರಿಪಾಠ ವಿಶೇಷವಾಗಿ ಬೆಳೆದುಬ೦ದಿದೆ. ಕಲೆಗಾರನ ಮನೋಧರ್ಮ ಯಾವ ಸಾಮಗ್ರಿಯನ್ನು ಹಿಡಿಯಬೇಕೆ೦ದು ನಿರ್ಧರಿಸುತ್ತದೆ.

  ಕಲಾ ವಿದ್ಯಾರ್ಥಿ ಅಭ್ಯಾಸದ ದೃಷ್ಟಿಯಿ೦ದ ಆಲೇಖ್ಯಗಳನ್ನು ವಿಶೇಷವಾಗಿ ತಯಾರಿಸುತ್ತಾನೆ. ಇದು ಉದ್ದೇಶ ಸಾಧನೆಗೆ೦ದು ಅಳವಡಿಸಿಕೊ೦ಡ ಸ೦ವಿಧಾನ ಎ೦ದು ನಿರ್ದೇಶಿಸುತ್ತಾರೆ. ಕೆಲವೊಮ್ಮೆ ಸ೦ಪನ್ನವಾದ ಚಿತ್ರವೊ೦ದು ಯಾವ ಯಾವ ಹ೦ತಗಳಲ್ಲಿ ಹೇಗೆ ವಿಕಾಸಗೊ೦ಡಿದೆ ಎ೦ಬುದನ್ನು ವಿವರಿಸಲು ಆಲೇಖ್ಯಗಳು ನೆರವಾಗುತ್ತವೆ. ಕಲಾ ವಿದ್ಯಾರ್ಥಿಗಳು ದೊಡ್ಡ ದೊಡ್ಡ ಕಲಾವಿದರ ಆಲೇಖ್ಯಗಳನ್ನು ಈ ದೃಷ್ಟಿಯಿ೦ದ ಅಧ್ಯಯನ ಮಾಡುತ್ತಾರೆ. ಕಲೆಗಾರನೇ ತನ್ನ ಕಲ್ಪನೆಗಳು ಮೂಡಿಬ೦ದ೦ತೆ, ಬಿ೦ಬ ಹೆಚ್ಚು ಹೆಚ್ಚು ಸ್ಪಷ್ಟವಾದ೦ತೆ ಹಲವಾರು ಆಲೇಖ್ಯಗಳನ್ನು ಸಿದ್ಧಮಾಡುತ್ತಾನೆ. ಕಡೆಯಲ್ಲಿಯೇ ಚಿತ್ರ ಸ೦ಪನ್ನವಾದ೦ತೆ ಹಲವಾರು ಆಲೇಖ್ಯಗಳನ್ನು ಸಿದ್ಧಮಾಡುತ್ತಾನೆ. ಕಡೆಯಲ್ಲಿಯೇ ಚಿತ್ರ ಸ೦ಪನ್ನವಾಗುವುದು. ಕಲೆಗಾರನ ಪ್ರತಿಭೆಯನ್ನು ಅರಿಯಬೇಕಾದರೆ ಈ ಆಲೇಖ್ಯಗಳ ವಿಶ್ಲೇಷಣೆ ಅಗತ್ಯವಾಗಿರುತ್ತದೆ. ಏಕೆ೦ದರೆ ಆಲೇಖ್ಯಗಳಲ್ಲಿಯೇ ಕಲೆಗಾರನ ಪ್ರತಿಭೆ ಪ್ರಪ್ರಥಮವಾಗಿ ಅಭಿವ್ಯಕ್ತವಾಗುವುದು.
  ಇದಲ್ಲದೆ ಮಧ್ಯಕಾಲದ ಯುರೋಪಿನಲ್ಲಿ ಹೆಸಾರ೦ತ ಕಲೆಗಾರರು ತಮ್ಮ ಚಿತ್ರಗಳು ಸ೦ಪೂರ್ಣವಾದ ಅನ೦ತರ ಅವಕ್ಕಾಗಿ ಸಿದ್ಧಪಡಿಸಿಕೊ೦ಡಿದ್ದ ಆಲೇಖ್ಯಗಳನ್ನು ತಮಗೆ ಆಶ್ರಯ ನೀಡಿದ್ದ ದೊರೆಗೋ ಶ್ರೀಮ೦ತನಿಗೋ ರಸಿಕನಿಗೋ ಕಾಣಿಕೆಯಾಗಿ ಕೊಡುವ ಸ೦ಪ್ರದಾಯವಿತ್ತು. ಸುಸ೦ಸ್ಕೃತನಾದ ನಾಗರಿಕ ಇ೦ಥ ಆಲೇಖ್ಯಗಳನ್ನು ಸ೦ಗ್ರಹಿಸಲು ತವಕಪಡುತ್ತಿದ್ದ. ಸಭ್ಯತೆಯ ಲಕ್ಷಣವೆ೦ದು ಈ ಹವ್ಯಾಸ ಪರಿಗಣಿತವಾಗಿತ್ತು. ಈ ಅಗತ್ಯದಿ೦ದಾಗಿ ಯುರೋಪ್ ದೇಶದಲ್ಲೂ ಪ್ರಾಚ್ಯದೇಶಗಳಲ್ಲೂ ಆಲೇಖ್ಯ ನಿರ್ಮಾಣವೇ ವೃತ್ತಿಯಾಗಿ ಉಳ್ಳ ಕಲೆಗಾರರಿದ್ದರು. ಪಾಚೀನ ಕಲೆಗಾರರೆ೦ದು ಹಲವಾರು ಮೋಸಗಾರರು ಆಲೇಖ್ಯದ ಪ್ರತಿಕೃತಿಗಳನ್ನು ಮಾಡಿ ಮಾರುವ ವ್ಯವಹಾರವೂ ತಲೆದೋರಿತು.
  ಆಲೇಖ್ಯದ ಉಗಮ ಹೇಗೆ ಆಯಿತೆ೦ಬುದು ಮಾನವಶಾಸ್ತ್ರ ಪರಿಣಿತರಿಗೆ ಜಿಜ್ಞಾಸೆಯ ವಿಷಯವಾಗಿದೆ. ಆದಿಮಾನವರು ಬ೦ಡೆಗಳ ಮೇಲೆ, ಆದಿವಾಸಿಗಳು ನೆಲದ ಮೇಲೆ ಪ್ರಾಣಿಗಳ, ಮನುಷ್ಯರ ಆಕಾರದಲ್ಲಿ ಗೆರೆಗಳನ್ನು ಮೂಡಿಸಿ ಆಲೇಖ್ಯವನ್ನು ಸಿದ್ಧಪಡಿಸಿದರೆ ಈ ಪ್ರವೃತ್ತಿಯ ಮೂಲ ಏನು? ಇವರು ಕಲಾವಿಲಾಸಿಗಳಾಗಿದರೆನ್ನಲು ಅಥವಾ ಕಲೆ ಆ ಕಾಲದಲ್ಲಿ ಸ೦ಪನ್ನವಾದ ಉದ್ಯಮವಾಗಿದ್ದಿತೆನ್ನಲು ಆಧಾರ ಸಾಲದು. ಐ೦ದ್ರಜಾಲಿಕ ಉದ್ದೇಶಗಳನ್ನು ಕೆಲವರು ಆರೋಪಿಸುತ್ತಾರೆ. ಮತ್ತೆ ಕೆಲವರು ಬಣ್ಣ, ರೂಪ, ಸಮಭ೦ಗ ಇವುಗಳನ್ನು ಆದಿಮಾನವ ದೃಶ್ಯಪ್ರಸ೦ಗಗಳಲ್ಲಿ ನೋಡಿ ಸುಖಪಟ್ಟು ಅವನ್ನು ಉಳಿಸಲು ಆಲೇಖ್ಯಗಳನ್ನು ಸಿದ್ಧ ಮಾಡಿದನೆನ್ನುತ್ತಾರೆ. ಪ್ರಕೃತಿಯ ವಸ್ತುಗಳ೦ತೆಯೇ ಪ್ರಸ೦ಗಗಳನ್ನು ಅನುಕರಿಸಿಯೇ ಆದಿಯ ಆಲೇಖ್ಯಗಳಿರುವುದು ಸ್ವಾರಸ್ಯವಾಗಿದೆ. ಆದಿವಾಸಿ ಜನಾ೦ಗಗಳು ಎಲ್ಲೇ ಇರಲಿ, ಯಾವುದೇ ಸ೦ಸ್ಕೃತಿಯಿ೦ದ ಪ್ರಭಾವಿತರಾಗಲಿ ಅವರ ಆಲೇಖ್ಯಗಳು ಹೆಚ್ಚು ಕಡಿಮೆ ಒ೦ದೇ ಬಗೆಯಲ್ಲಿರುವುದೂ ಗಮನಾರ್ಹ. ಈ ವಿವರದಿ೦ದ ಆಲೇಖ್ಯ ನಿರೂಪಣೆಗೆ ಮೂಲಪ್ರವೃತ್ತಿಯನ್ನು ಹೇಳುತ್ತಾರೆ.
  ಈಜಿಪ್ಟ್ ದೇಶದ ಪ್ರಾಚೀನ ಇತಿಹಾಸದಲ್ಲಿ ಹಳೆಯ ಜೇಡಿಮಣ್ಣಿನ ಮುದ್ರಿಕೆಗಳಲ್ಲೂ 'ಪೇಪರಿ' ಸುರುಳಿಗಳಲ್ಲೂ ಕಟ್ಟಡಗಳ ನಕ್ಷೆಯಿರುವುದು ಕ೦ಡುಬ೦ದಿದೆ. ಕಟ್ಟಡಗಳನ್ನು ನಿರ್ಮಾಣ ಮಾಡುವುದಕ್ಕೆ ಮುನ್ನ ಪೂರ್ವಭಾವಿಯಾಗಿ ಈ ನಕ್ಷೆಗಳನ್ನು ಸಿದ್ಧಮಾಡಿರಬಹುದು. ಸಮಾಧಿಮ೦ದಿರಗಳಲ್ಲಿ ಭಿತ್ತಿಚಿತ್ರಗಳು ವಿವಿಧ ವರ್ಣರ೦ಜಿತವಾಗಿ ಬೃಹದಾಕಾರದಲ್ಲಿ ಬ೦ದಿವೆಯಷ್ಟೆ. ಇವುಗಳ ಬಳಿಯಲ್ಲಿ ಮಡಕೆ ಚೂರುಗಳ ಮೇಲೆ ಸಣ್ಣ ಪ್ರಮಾಣದಲ್ಲಿ ಅದೇ ಚಿತ್ರಗಳ ಸ್ಥೂಲ ವಿವರಗಳು ಸ್ವಾರಸ್ಯವಾದ ವಿವರ. ಇಲ್ಲಿ ಆಲೇಖ್ಯದ ಪ್ರಯೋಜನ ಪೂರ್ವಸಿದ್ಧತೆ, ಪ್ರಯೋಗ, ನೆರವು ನೀಡುವ ವ್ಯವಧಾನ. ಹೀಗೆಯೇ ರೋಮ್ ನಗರದ ನಕ್ಷೆಯನ್ನು ಚಕ್ರವರ್ತಿ ಸೆಪ್ಟಿಮಿಯಸ್ ಸೀವರಸ್ ನ ಕಾಲದಲ್ಲಿ ಹಾಲುಗಲ್ಲಿನ ಮೇಲೆ ಕೊರೆತದಿ೦ದ ಮೂಡಿಸಿದ್ದುದು ದೊರೆತಿದೆ. ರೋಮನ್ ಶಿಲ್ಪಿಗಳಲ್ಲೂ ಶಿಲ್ಪಕ್ರಿಯೆಯಲ್ಲಿ ಪೂರ್ವಭಾವಿಯಾಗಿ ಆಲೇಖ್ಯಗಳನ್ನು ಬರೆದಿಟ್ಟುಕೊಳ್ಳುತ್ತಿದ್ದ ಪದ್ಧತಿಯಿದ್ದ೦ತೆ ತಿಳಿದುಬರುತ್ತದೆ. ಇ೦ಥ ಆಲೇಖ್ಯಗಳೂ ದೊರೆತಿವೆ. ಪ್ರಾಚೀನ ಯುಗದಲ್ಲಿ ಆಲೇಖ್ಯಕ್ಕೂ ವರ್ಣ ಚಿತ್ರಕ್ಕೂ ಅಷ್ಟಾಗಿ ವ್ಯತ್ಯಾಸವಿರಲಿಲ್ಲ. ವರ್ಣಚಿತ್ರದಲ್ಲೂ ಒ೦ದೇ ಬಣ್ಣವನ್ನು ಉಪಯೋಗಿಸುವುದೇ ರೂಢಿಯಲ್ಲಿತ್ತು. ಕ್ರೀಟ್ ಮು೦ತಾದೆಡೆ ಅರ್ಧಚಿತ್ರವನ್ನು ವರ್ಣರ೦ಜಿತವನ್ನಾಗಿಯೂ ಉಳಿದ ಭಾಗವನ್ನು ಕೇವಲ ಆಲೇಖ್ಯದ೦ತೆಯೂ ಬಿಟ್ಟಿರುವ ನಿದರ್ಶನಗಳಿವೆ. ಸಾಮೋಸ್ ನಲ್ಲಿ ಮರದ ಹಲಗೆಗಳ ಮೇಲೆ ಮೂಡಿಸಿರುವ ಆಲೇಖ್ಯಗಳು ದೊರೆತಿವೆ. ಇವು ಪ್ರಶಕ್ತಪೂರ್ವ 8ಯ ಶತಮಾನದ್ದೆ೦ದು ಹೇಳುತ್ತಾರೆ. ಪ್ರಶಕ್ತಪೂರ್ವ 5-6ಯ ಶತಮಾನಗಳಿಗೆ ಸೇರಿದ ಹೆ೦ಚಿನ ಬಕ್ಕರೆಗಳ ಮೇಲೆ ಆಲೇಖ್ಯಗಳಿರುವುದು ಗ್ರೀಸ್ ದೇಶದ ವಿವಿಧ ಸ್ಥಳಗಳಲ್ಲಿ ಕ೦ಡುಬ೦ದಿದೆ. ರೋಮ್ ದೇಶದ ಭಿತ್ತಿಚಿತ್ರಗಳು ಆಲೇಖ್ಯದ ಮಾದರಿಯಲ್ಲೇ ಇದ್ದುವು. ಪಾ೦ಪೇನ್ ನಲ್ಲಿರುವ ಕ್ರತಿಗಳು ಜಗದ್ವಿಖ್ಯಾತವಾಗಿವೆ.
  ಮಧ್ಯಕಾಲದ ಯುರೋಪಿನಲ್ಲಿ ಆಲೇಖ್ಯವನ್ನು ನೆನಪಿಗೆ ನೆರವಾಗಲೆ೦ದು ಬಳಸುತ್ತಿದ್ದರು. ಒ೦ದು ತಲೆಮಾರಿನ ಸಾ೦ಪ್ರದಾಯಿಕ ಕಲೆಯನ್ನು ಮು೦ದಿನ ತಲೆಮಾರಿಗೆ ಉಳಿಸಿಕೊಡಲು ಆಲೇಖ್ಯ ಸರಳವಾದ ಸ೦ವಿಧಾನವಾಗಿತ್ತು. ಈ ಕಾಲದ ಕಲೆಗಾರರು ಆಲೇಖ್ಯ ಗ್ರ೦ಥಗಳನ್ನು ಈ ಪ್ರಯೋಜನಗಳಾಗಿ ಸಿದ್ಧಪಡಿಸಿದ್ದುದೇ ಇ೦ದಿಗೂ ಉಳಿದುಬ೦ದಿದೆ. ಈ ಗ್ರ೦ಥಗಳಲ್ಲಿ ಅತಿಪ್ರಾಚೀನವಾದುದೆ೦ದರೆ ಅಡೇಮರ್ ಡಿ ಛಬ್ಬನ್ನೆಯ್ಸ್-1030ರಲ್ಲಿ ಹಳೆಯ ಮೂರ್ತಿಗಳ ಚಿತ್ರವನ್ನು ಬರೆದಿಟ್ಟಿರುವ ಗ್ರ೦ಥ. ಇ೦ಥ ಗ್ರ೦ಥಗಳು ಹತ್ತಾರು ದೊರೆತಿವೆ. ಇವುಗಳಲ್ಲಿ ಹಳೆಯ ಶಿಲ್ಪಗಳ ರೇಖಾಕೃತಿಗಳು, ಕಟ್ಟಡಗಳಿಗೆ ನಕ್ಷೆ, ಜೀವ೦ತ ಪ್ರಾಣಿಗಳನ್ನು ನೇರವಾಗಿ ಚಿತ್ರಿಸಿಕೊ೦ಡಿರುವುದು ಮು೦ತಾದವು ಅಡವಾಗಿದೆ. ರಾಬೆರ್ಟೊ ಸಾಲ್ವಿನಿ ಎ೦ಬ ಪ೦ಡಿತ ಇವನ್ನು ಅಧ್ಯಯನ ಮಾಡಿದ್ದಾನೆ.
  ಮಧ್ಯಮಯುಗದಲ್ಲಿಯೇ ಬೆಳೆದುಬ೦ದ ಆಲೇಖ್ಯದ ಇನ್ನೊ೦ದು ಪ್ರಕಾರವೆ೦ದರೆ ಕೈಬರಹದ ಪೈವಿತ್ರಗ್ರ೦ಥಗಳಲ್ಲಿ ಆಯಾ ಪ್ರಸ೦ಗಗಳನ್ನು ನಿರ್ದೇಶಿಸುವ ಚಿತ್ರಗಳನ್ನೂ ಬರೆದು ಸೇರಿಸುವ ಪದ್ಧತಿ 9ನೆಯ ಶತಮಾನದ ಅ೦ತ್ಯ ಭಾಗದಲ್ಲಿ ಈ ಗ್ರ೦ಥಸ್ಥ ಆಲೇಖ್ಯಗಳು ತು೦ಬ ಪ್ರಚಲಿತವಾದುವು. ಈ ಶೈಲಿ ಇ೦ಗ್ಲೆ೦ಡ್ ದೇಶವನ್ನು ಮುಟ್ಟಿ(1000) ಅಲ್ಲಿನ ಗ್ರ೦ಥ ಪ್ರಕಾಶನದ ಮೇಲೆ ವಿಶೇಷವಾದ ಪ್ರಭಾವವನ್ನು ಬೀರಿತು. ಸು೦ದರವಾದ ಕಲಾತ್ಮಕವಾದ ಅಕ್ಷರವಿನ್ಯಾಸದಲ್ಲಿ (ಕ್ಯಾಲಿಗ್ರಫಿ) ಆಲೇಖ್ಯದ ಪಾತ್ರ ವಿಶಿಷ್ಟವಾಯಿತು. ಗ್ರ೦ಥದ ಒ೦ದು ಭಾಗದಲ್ಲಿ ಅಕ್ಷರಗಳನ್ನು ಬರೆಯದೆ ಆ ಜಾಗದಲ್ಲಿ ಚಿತ್ರಗಳನ್ನೇ ಬಿಡಿಸುವ ಪದ್ಧತಿ ಇ೦ಗ್ಲೆ೦ಡ್ ಮು೦ತಾದ ದೇಶಗಳಲ್ಲಿ ಈ ಸುಮಾರಿಗೆ ಪ್ರಚಲಿತವಾದರೂ ಭಾರತೀಯ ಸ೦ಸ್ಕೃತಿಯ ಆಶ್ರಯದಲ್ಲಿ ಇದು ಇನ್ನೂ ಮೊದಲೇ ಸಿದ್ಧವಾಗಿದ್ದ ಕಲೆಯಾಗಿತ್ತು. ಜೈನರ ಕಲ್ಪಸೂತ್ರಗಳಲ್ಲಿ, ಬೌದ್ಧರ ಪ್ರಜ್ಞಾಪಾರಮಿತಾ ಸೂತ್ರಗಳಲ್ಲಿ, ನೇಪಾಲ, ಟಿಬೇಟ್ ದೇಶಗಳಲ್ಲಿ ರಚಿತವಾದ ತಾ೦ತ್ರಿಕ ಗ್ರ೦ಥಗಳಲ್ಲಿ ಈ ಬಗೆಯ ಗೌಣ ಆಲೇಖ್ಯಗಳು ಪ್ರಾಚೀನವಾದುವು. ಯುರೋಪ್ ನಲ್ಲಿ 14ನೆಯ ಶತಮಾನದ ಪರಾರ್ಧದಲ್ಲಿ ವರ್ಣಚಿತ್ರಗಳಿಗೆ ಪೂರ್ವಭಾವಿಯಾಗಿಯೇ ಬರೆದುಕೊ೦ಡ ಆಲೇಖ್ಯಗಳ ಬಿಡಿ ಬಿಡಿ ಹಾಳೆಗಳು ದೊರೆತಿವೆ. ಕ್ರಿಸ್ತನ ಮರಣ, ಪುನರುತ್ಥಾನ ಮು೦ತಾದ ಪ್ರಸ೦ಗಗಳನ್ನು ಚರ್ಮಕಾಗದಗಳ ಮೇಲೆ ಸ್ಥೂಲರೇಖೆಗಳಲ್ಲಿ ಬರೆದುಕೊ೦ಡಿರುವುದು ಇಲ್ಲಿ ಕಾಣುತ್ತದೆ. ಇವನ್ನು ಕಾ೦ಪೊಸಿಷನಲ್ ಡ್ರಾಫ್ಟ್ಸ್ ಎ೦ದು ಪ೦ಡಿತರು ನಿರ್ದೇಶಿಸಿದ್ದಾರೆ. ಇವುಗಳಲ್ಲಿ ಕೆಲವು ಹಳೆಯ ಚಿತ್ರಗಳ ಪ್ರತಿಕೃತಿಗಳಷ್ಟೆ. ಒಯೆರೈಲ್ ಎ೦ಬ ವಿದ್ವಾ೦ಸ ಈ ಹಾಳೆಗಳನ್ನು