ಪುಟ:Mysore-University-Encyclopaedia-Vol-2-Part-1.pdf/೨೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೧೮ಇಂಗ್ಲೆಂಡ್ ಯುಗದ ಅಂತ್ಯದಲ್ಲಿ ತೀವ್ರಗತಿಯ ಭೂ ಚಟುವಟಿಕೆಗಳು ಮತ್ತೆ ತಲೆದೋರಿದುವು, ಇದಕ್ಕೆ ಸಂಬಂಧಿಸಿದ ಪರ್ವತಜನ್ಯ ಶಕ್ತಿಗಳನ್ನು ಆರ್ವೊರಿಕನ್, ಹರ್ಸಿನಿಯನ್, ಆಲ್ಟಾಯಿಡ್ ಮತ್ತು ವಾರ್ಸಿಕನ್ ಎಂದು ವಿವಿಧ ಘಟ್ಟಗಳಾಗಿ ಹೆಸರಿಸಲಾಗಿದೆ. ಇದು ಬಹುಮಟ್ಟಿಕೆ ಭೂಭಾಗಗಳ ಮೇಲ್ಮೈ ಲಕ್ಷಣಗಳನ್ನೇ ಬದಲಾಯಿಸಿದವು. ಯುರೋಪ್ ಖಂಡದಲ್ಲಂತೂ ಇವುಗಳ ಹಾವಳಿ ಬಹು ತೀವ್ರವಾಗಿತ್ತು. ಬಹುಶಃ ಪ್ಲಿಯೊಸೀನ್ ಯುಗಕ್ಕೆ ಕೊಂಚ ಮೊದಲು ಈ ಶಕ್ತಿಗಳು ಕುಗ್ಗಿದುವು.

ಪರ್ಮಿಯನ್ ಮತ್ತು ಟ್ರೈಯಾಸಿಕ್ ಯುಗಗಳು: (೧೯೦-೨೮೦ ದಶಲಕ್ಷ ವರ್ಷಗಳ ಹಿಂದಿನ ಕಾಲ): ಕಾರ್ಬಾನಿಫೆರಸ್ ಅನಂತರ ಮತ್ತು ಪರ್ವತ ಜನ್ಯ ಯುಗದಲ್ಲಿ ಇಡೀ ಬ್ರಿಟನ್ನಿನಲ್ಲಿ ಉಷ್ಣವಲಯದ ಮರುಳುಗಾಡಿನ ವಾತಾವರಣವಿತ್ತು. ಮರುಳು ಶಿಲೆಗಳು ನಿಕ್ಷೇಪಗೊಂಡವು. ಹಲವಾರು ಸರೋವರಗಳಲ್ಲಿ ಲವಣಗಳು ಶೇಖರವಾದುವು. ಚೆಷೈರ್ ಪ್ರಾಂತ್ಯದ ಸಮುದ್ರಭಾಗಗಳು ಭೂಮಧ್ಯ ಸಮುದ್ರವಾದ ಟೆಥಿಸಿನೊಡನೆ ಸಂಪರ್ಕ ಹೊಂದಿತ್ತು.

ಟ್ರೈಯಾಸಿಕ್ ಶಿಲಾಸ್ತರಗಳು ಮೀಸೋಜೋಯಿಕ್ ಕಲ್ಪದ ಮೊದಲ ಹಂತಕ್ಕೆ ಸೇರಿವೆ. ಪೆನ್ನೈನ್ ಶ್ರೇಣಿ ಈಡನ್ ಮತ್ತು ಕ್ಲಡ್ ಕಣಿವೆಗಳಲ್ಲಿ ಅಷ್ಟು ಮಂದವಲ್ಲದ ಪ್ಲಿಸ್ಟೋಸೀನ್ ಹಿಮಕಲ್ಪದ ಸ್ತರಗಳಿಂದ ಆವೃತವಾಗಿದೆ.

ಜೂರಾಸಿಕ್ ಯುಗ (೧೩೫-೯೦ ದಶಲಕ್ಷ ವರ್ಷಗಳ ಹಿಂದಿನ ಕಾಲ): ಈ ಯುಗದ ಶ್ರೇಣಿಯಲ್ಲಿ ಮರುಳು ಶಿಲೆ ಮತ್ತು ಜೇಡು ಶಿಲಾಸ್ತರಗಳಿವೆ. ಇವು ನೀಳವಾದ ಜಾಡಿನಲ್ಲಿ ಡಾರ್ಸ್ಟೆಟ್ ತೀರದಲ್ಲಿ ಪ್ರಾರಂಭವಾಗಿ ನಾರ್ಥ್ಯಾಂಪ್ಟನ್ಷೈರ್, ಹಂಬರ್ ಕಣಿವೆ. ಪಿಕರಿಂಗ್ ಕಣಿವೆ, ಕ್ಲೀವ್ಲ್ಯಾಂಡ್ ಬೆಟ್ಟಗಳು ಮತ್ತು ಉತ್ತರ ಯಾರ್ಕ್ಷೈರ್ ಮೈದಾನಗಳಲ್ಲಿ ವಿಸ್ತಾರಗೊಂಡಿವೆ. ಯುಗದಲ್ಲಿ ಇಂಗ್ಲೆಂಡಿನ ಬಹುಭಾಗ ಭೂಪ್ರದೇಶವಾಗಿತ್ತು.