ಪುಟ:Mysore-University-Encyclopaedia-Vol-2-Part-1.pdf/೨೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕೋಟೆ-ಅರಮನೆ: ಸಮಕಾಲೀನ ಕೋಟೆಗಳ ಪೈಕಿ, ಶಿವಮೊಗ್ಗ ಜಿಲ್ಲೆಯ ನಗರದಲ್ಲಿರುವ (ಬಿದನೂರು) ಕೋಟೆ ಇದ್ದುದರಲ್ಲಿ ಸುಮಾರು ಒಳ್ಳೆಯ ಸ್ಥಿತಿಯಲ್ಲಿ ಉಳಿದಿದೆ. ಇಕ್ಕೇರಿ ಅರಸರು ತಮ್ಮ ರಾಜಧಾನಿಯನ್ನು ೧೬೩೮ರ ಹೊತ್ತಿಗೆ ಅಲ್ಲಿಗೆ ಬದಲಾಯಿಸಿದ್ದರು. ಈಗ ಅಲ್ಲಿರುವ ಬಹುತೇಕ ಕಟ್ಟಡಗಳನ್ನು ಶಿವಪ್ಪನಾಯಕನ ಕಾಲದಲ್ಲಿ ಕಟ್ಟಿರಬಹುದೆಂಬ ನಂಬಿಕೆ ಇದೆ. ಇಕ್ಕೇರಿ ರಾಜವಂಶದ ಪತನದ (೧೭೬೩) ಅನಂತರ, ಹೈದರ್ ಆಲಿ ಮತ್ತು ಟಿಪ್ಪುಸುಲ್ತಾನರ ಕಾಲದಲ್ಲೂ ಈ ಕೋಟೆ ಊಜಿ‍ತಸ್ಥಿತಿಯಲ್ಲಿದ್ದು, ಅನಂತರ ಶಿಥಿಲವಾಗಲಾರಂಭಿಸಿತು. ಕೋಟೆಪೂಣ‍ವಾಗಿ ಕಲ್ಲುಕಟ್ಟಡ; ವಿನ್ಯಾಸದಲ್ಲಿ ಮಾವಿನಕಾಯಿಯಂತಿದ್ದು ಸುತ್ತಲೂ ಕಂದಕದಿಂದ ಅವೃತವಾಗಿದೆ. ಮೇಲೆ ಹೋದಂತೆಲ್ಲ ಕಿರಿದಾಗುವ ಅದರ ಗೋಡೆಯ ಮೇಲ್ಭಾಗದಲ್ಲಿ, ಬಂದೂಕನ್ನು ಉಪಯೋಗಿಸಲು ಅನುಕೂಲವಾಗುವಂತೆ ಮಧ್ಯೆ ಮಧ್ಯೆ ಸ್ಥಳಗಳನ್ನು ಬಿಟ್ಟು ದಂತಪಂಕ್ತಿಯಂತೆ ಎತ್ತಿರುವ ಕೈಪಿಡಿಗೋಡೆಯಿದೆ. ಕೋಟೆಗೋಡೆಯ ಹೊರ ಮೈ ಹೆಚ್ಚು ಕಡಿಮೆ ನೇರವಾಗಿದ್ದರೂ ಅಲ್ಲಲ್ಲಿ ದುಂಡನೆಯ ಒತ್ತುಗೋಡೆಗಳಿವೆ. ಕೋಟೆಯ ಉತ್ತರ ಭಾಗದಲ್ಲಿ ಅದರ ಮುಖ್ಯದ್ವಾರವಿದೆ. ಅದನ್ನು ತಲುಪಲು ಕಂದಕದ ಮೇಲೆ ಸೇತುವೆಯೊಂದಿಗೆ. ದ್ವಾರದ ಎರಡು ಪಕ್ಕಗಳಲ್ಲೂ ದುಂಡನೆಯ ಬತೇರಿಗಳಿವೆ. ಅವುಗಳಲ್ಲೊಂದರಲ್ಲಿ ಒಂದು ಸಣ್ಣ ದಿಡ್ಡಿಬಾಗಿಲಿದೆ. ಕೋಟೆಯ ಒಳಭಾಗದಲ್ಲಿ ಅರಮನೆಯ ಭಾಗಗಳಷ್ಟನ್ನೇ ಆವರಿಸುವಂತೆ ಒಂದು ಒಳಕೋಟೆಯಿದೆ. ರಕ್ಷಣೆಯ ಅವಶ್ಯಕತೆಯ ತಕ್ಕಂತೆ ಆಯಕಟ್ಟಿನ ಸ್ಥಳಗಳಲ್ಲಿ ಕಾವಲುಗಾರರ ಕೋಟೆಗಳೂ ಬತೇರಿಗಳೂ ಬಾವಿಗಳೂ ನೀರಿನ ತೊಟ್ಟಿಗಳೂ ಮುದ್ದಿನ ಮನೆಗಳೂ ಇದ್ದುವು. ಅದೇ ಜಿಲ್ಲೆಯ ಚನ್ನಗಿರಿಯಲ್ಲಿ ಎರಡು ಸುತ್ತಿನ ಕೋಟೆಯಿದೆ. ಅದು ರಾಣಿ ಚೆನ್ನಮ್ಮಾಜಿ ಕಟ್ಟಿಸಿದ್ದೆಂದು ತಿಳಿದುಬರುತ್ತದೆ. ಹಾಗೆಯೇ ಕವಲೆದುಗ‍, ಹೊನ್ನಾವರ, ಕುಮಟ, ಭಾರಂಗಿ ಮುಂತಾದೆಡೆಗಳಲ್ಲೂ ಆ ಕಾಲದ ಕೋಟೆಗಳ ಅವಶೇಷಗಳಿವೆ. ನಗರದ ಒಳಕೋಟೆಯ ಒಳಭಾಗದಲ್ಲಿದ್ದ ಶಿವಪ್ಪನಾಯಕನ ಕಾಲದ ಅರಮನೆಯ ಕೆಲವು ಕಂಬಗಳು ಮತ್ತು ಅಡಿಪಾಯಗಳು ಮಾತ್ರವೇ ಉಳಿದಿದ್ದು, ಅವುಗಳಲ್ಲಿ ದಬಾ‌‌ರು ಹಚಾರ, ಒಳಕೋಣೆ ಮುಂತಾದುವು ಇದ್ದ ಸ್ಥಳಗಳನ್ನು ಮಾತ್ರ ಗುರುತಿಸಬಹುದು. ಇಕ್ಕೇರಿ ಮತ್ತು ಕೆಳದಿಯ ಅರಮನೆಯಗಳಲ್ಲಿ ಏನೂ ಉಳಿದಿಲ್ಲವೆಂದೇ ಅವಶೇಷಗಳಿವೆ. ನಗರದ ಒಳಕೋಟೆಯ ಒಳಭಾಗದಲ್ಲಿದ್ದ ಶಿವಪ್ಪನಾಯಕನ ಕಾಲದ ಅರಮನೆಯ ಕೆಲವು ಕಂಬಗಳು ಮತ್ತು ಅಡಿಪಾಯಗಳು ಮಾತ್ರವೇ ಉಳಿದಿದ್ದು, ಅವುಗಳಲ್ಲಿ ದಬಾ‍ರು ಹಚಾರ, ಒಳಕೋಣೆ ಮುಂತಾದುವು ಇದ್ದ ಸ್ಥಳಗಳನ್ನು ಮಾತ್ರ ಗುರುತಿಸಬಹುದು. ಇಕ್ಕೇರಿ ಮತ್ತು ಕೆಳದಿಯ ಅರಮನೆಗಳಲ್ಲಿ ಏನೂ ಉಳಿದಿಲ್ಲವೆಂದೇ ಹೇಳಬಹುದು. ಕೊಳಗಳು : ಇಕ್ಕೇರಿಯ ವೈಭವದ ದ್ಯೋತಕವಾಗಿ, ಆ ಕಾಲದ ಕೆಲವು ಕೊಳಗಳು ಇನ್ನೂ ಒಳ್ಳೆಯ ಸ್ಥತಿಯಲ್ಲಿ ಉಳಿದಿವೆ. ಇವುಗಳಲ್ಲಿ ನಗರದ ಸಮೀಪದಲ್ಲಿರುವ ದೇವಗಂಗೆ ಒಂದು ವಿಚಿತ್ರರೀತಿಯ ಕೊಳ. ಇಲ್ಲಿ ಸು.೮೬.೮೬ಮೀ. ಉದ್ದ ೨೯.೨೬ಮೀ. ಅಗಲದ ಪ್ರಾಂಗಣದ ಮಧ್ಯೆ ಅನೇಕ ಕೊಳಗಳು ನಿಮಿ‍ತವಾಗಿವೆ. ಇವುಗಳಲ್ಲಿ ಅತಿ ದೊಡ್ಡದು ೨.೮೦ಮೀ ಉದ್ದ ಮತ್ತು ೧೦.೦೫ಮೀ ಅಗಲವಿದೆ. ಇದರ ಮಧ್ಯಭಾಗದಲ್ಲಿ ಒಂದು ಚಿಕ್ಕ ಮಂಟಪವಿದ್ದು ಅದಕ್ಕೆ ಹೋಗಲು ಒಂದು ಸಣ್ಣ ಸೇತುವೆಯೂ ಇದೆ. ಇಲ್ಲಿನ ಇತರ ಕೆಲವು ಕೊಳಗಳ ತಳವಿನ್ಯಾಸ ಪದ್ಮ, ನಕ್ಷತ್ರ ಮುಂತಾದ ಆಕಾರಗಳಲ್ಲಿವೆ. ಇವೆಲ್ಲಕ್ಕೂ ಬೆಟ್ಟದೆಡೆಯಿಮದ ಹರಿಯುತ್ತಿದ್ದ ಚಿಕ್ಕ ಝರಿಯೊಂದನ್ನು ತಿರುಗಿಸಿ ನೀರೊದಗಿಸಲಾಗುತ್ತಿತ್ತು. ಈ ಕೊಳಗಳು ಅಂತಃಪುರದವರ ಜಲಕ್ರೀಡೆಗಾಗಿ ಕಟ್ಟಲಾಗಿತ್ತೆಂದು ಪ್ರತೀತಿ. ಚಂಪಕಾ ಸರಸ್ಸು ಎಂದು ಕರೆಯುವ ಇನ್ನೊಂದು ಸುಂದರ ಕೊಳ ಶಿವಮೊಗ್ಗ ಜಿಲ್ಲೆಯ ಅನಂದಾಪುರದಲ್ಲಿದೆ. ದೇವಾಲಯಗಳು : ಇಕ್ಕೇರಿ ಅರಸರ ಆಳ್ವಿಕೆಯ ಕಾಲದಲ್ಲಿ, ಅವರು ಆಳುತ್ತಿದ್ದ ಮಲೆನಾಡಿನ ಭಾಗಗಳಲ್ಲಿ ಒಂದು ವಿಶಿಷ್ಟರೀತಿಯ ದೇವಾಲಯ ರಚನಾ ಶೈಲಿ ಬೆಳೆದು ಬಂದಿತು. ಇದೇ ಕಾಲದಲ್ಲಿ ದಕ್ಷಿಣಭಾರತದ ಇತರೆಡೆಗಳಲ್ಲಿ ಪ್ರಚಲಿತವಾಗಿದ್ದ ವಿಜಯನಗರ ರೀತಿಯ ದ್ರಾವಿಡ ವಾಸ್ತುಶೈಲಿಯ ಮತ್ತು ಹಿಂದೆ ಇದೇ ಮಲೆನಾಡು ಪ್ರದೇಶದಲ್ಲಿ ವಿಶೇಷವಾಗಿ ಮೆರೆದಿದ್ದ ಹೊಯ್ಸಳ ವಾಸ್ತುಶೈಲಿಯ ಮಿಶ್ರಣ ಇಲ್ಲಿ ಕಂಡುಬರುತ್ತದೆ. ಈ ಸಂಕರಶೈಲಿಯನ್ನು ಇಕ್ಕೇರಿ ಶೈಲಿ ಅಥವಾ ಮಲೆನಾಡು ಶೈಲಿಯೆಂದು ಕರೆಯುವ ರೂಢಿಯಿದೆ. ಸು.೧೫೨೦ರಲ್ಲಿ ಕಟ್ಟಲಾಗಿರುವ ಇಕ್ಕೇರಿಯಲ್ಲಿರುವ ಅಘೋರೇಶ್ವರ ದೇವಾಲಯ ಈ ಶೈಲಿಗೆ ಒಳ್ಳೆಯ ಉದಾಹರಣೆ. ಮಂಟಪದ ಹೊರಗೋಡೆಯ ಮೇಲೂ ಅಲ್ಪ ಉಬ್ಬಿನ ಶಿಲ್ಪಗಳ ಅಲಂಕರಣವಿದೆ. ಇಲ್ಲಿ ಆರು ಪಟ್ಟಿಕೆಗಳಿದ್ದು, ಕೆಳಗಿನದರಲ್ಲಿ, ಮಧ್ಯೆ ಮಧ್ಯೆ ಸಿಂಹ, ಕೋತಿ ಕಾಮಕೇಳಿಯ ಚಿತ್ರಗಳನ್ನೊಳಗೊಂಡಿರುವ ಹಂಸಗಳ ಸಾಲೂ ಎರಡನೆಯದರಲ್ಲಿ ಕಂಬಗಳ ಮೇಲೆ ಎತ್ತಿರುವ ಗೋಪುರಗಳ ಸಾಲೂ ಇವೆ. ಇದರ ಮೇಲುಗಡೆ ಜಾಲಂದ್ರಣಗಳನ್ನುಳ್ಳ ಕಿಟಕಿಗಳ ಅಲಂಕರಣವಿದ್ದು, ಇವುಗಳ ಮಧ್ಯೆ ಕಮಾನಿಕಾಕೃತಿಯ ಕೋಟ್ಟಕಗಳಿವೆ. ಕೋಷ್ಟಕಗಳಲ್ಲಿ ಯಕ್ಷರು, ದಿಕ್ಪಾಲಕರು, ವಿಷ್ಣು, ಭೈರವ ಇತ್ಯಾದಿ ಶಿಲ್ಪಗಳಿವೆ. ಇದರ ಮೇಲೆ ಕಿನ್ನರಿಯರು, ಪುರುಷಾಮೃಗ, ಹುಲಿಯನ್ನೇರಿರುವ ಯೋಗಿ ಇತ್ಯಾದಿ ಶಿಲ್ಪಗಳ ಸಾಳೂ ೫ನೆಯ ಪಟ್ಟಿಗಳಲ್ಲಿ ಹೂಗಳೂ ೬ನೆಯದರಲ್ಲಿ ಎಲೆಯಾಕಾರದ ನಕಾಶೆಯ ಸಾಲೂ ಇವೆ. ಈ ಬಿತ್ತಿಯ ಅಲಂಕರಣ ವಿನ್ಯಾಸ ಹೊಯ್ಸಳ ದೇವಾಲಯಗಳ ನೆನಪನ್ನು ತರುತ್ತದೆ.