ಪುಟ:Mysore-University-Encyclopaedia-Vol-2-Part-1.pdf/೨೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಇಕ್ತಿಯಾಲಜೆ-ಇಕ್ಸ್ವಾಕು ರಾಜರು ಆಗ ಪ್ರಚಾರದಲ್ಲಿದ್ದ ಡೋರಿಕ್ ಶಿಲ್ಪಕಲಾ ವೈಭವಕ್ಕೆ ಸಾಕ್ಷಿಯಾಗಿ ಈಗಲು ಈ ಮ‌‌‍ಂದಿರಗಳ ಆವಶೇಷಗಳಿವೆ. ಕರ್ನಾಟಕದ ಜಕಣಾರಿಯಂತೆ ಈತನ ವಿಶಯವಾಗಿಯೂ ಜನಜನಿತವಾದ ಆನೇಕ ವದಂತಿಗಳಿವೆ'

ಇಕ್ತಿಯಾಲಜಿ:ನೋಡಿ-ಮತ್ಸ್ಯವಿ‌‌ಜ಼ಾನ

ಇಕ್ತಿಯೊಪ್ಟೆರಿಯ: ಮೀಸೋಜ಼ೋಯಿಕ್ ಯುಗದಲ್ಲಿ (೬೫-೨೨೫ ದಶಲಕ್ಶ ವರ್ಷ ಪ್ರಾಚೀನ ಕಾಲದಲ್ಲಿ) ಇದ್ದ ಗತವಂಶೀ ಸರೀಸ್ಳಪಗಲಳ ಒಂದು ಉಪವರ್ಗ(ಸಬ್ ಕ್ಲಾಸ್).ಈ ಉಪವರ್ಗದ ಪ್ರಾಣಿಗಳು ನೀರಿನಲ್ಲಿ ವಾಸಿಸುತ್ತಿದ್ದವು. ದೊರೆತಿರುವ ಪಳೆಯುಳಿಕೆಗಳ ಸಹಾಯದಿಂದ ಅವನ್ನು ಅಭ್ಯಸಿಸಲಾಗಿದೆ.ಇದರಲ್ಲಿ ಎರಡು ಗಣಗಳಿವೆ:೧. ಮೀಸೊಸಾರಿಯ ೨.ಎಕ್ತಿಯೋಸಾರಿಯಾ ಮೀಸೊಸಾರಿಯ: ಸರೀಸೃಪಗಳ ಗುಂಪಿನಲ್ಲಿ ಇವುಗಳ ಸ್ಥಾನ ಎಲ್ಲಿ ಏನು ಎಂದು ಖಚಿತವಾಗಿ ಇನ್ನೂ ಹೇಳಲಾಗುವುದಿಲ್ಲ. ಇವು ಕರ್ಬಾನಿಫೆರಸ್ ಕಾಲದ ಉತರರ್ಧ್ಹದಲ್ಲಿ(೨೮೦ ದಶಲಕ್ಷ ವರ್ಷ ಹಿಂದೆ) ಅಥವಾ ಪರ್ಮಿಯನ್ ಕಾಲದ ಆದಿಯಲ್ಲಿದ್ದವು ಎಂಬುದಕ್ಕೆ ಪಳೆಯುಳಿಕೆಗಳ ದಾಖಲೆ ಇದೆ. ಇವು ಸಿಹಿನೀರಿನ ಸರೋವರ ವಾಸಿಗಳು. ದೇಹ ತೆಳ್ಳಗಿದ್ದು ಸು.೩ ಮೀ. ಉದ್ದವಾಗಿತ್ತು, ಹಿಂದಿನ ಕಾಲುಗಳು ಪ್ರಬಲವಾದ್ದವು. ಪಕ್ಕೆಗಳು ತೀರ ಉದ್ದವಾಗಿದ್ದುದರಿಂದ ಬಾಲ ಮೊಟಕಾಗಿತ್ತು. ಇಕ್ತಿಯೋಸಾರಿಯ: ಟ್ರಯಾಸಿಕ್ ಕಾಲದಲ್ಲಿ ಕಾಣಿಸಿಕೊಂಡು ಜುರಾಸಿಕ್ ಕಾಲದಲ್ಲಿ ಅಧಿಕ ಸಂಖ್ಯೆಯಲ್ಲಿದ್ದು (ಎಂದರೆ ೨೨೫-೧೭೫ ದಶಲಕ್ಷ ವರ್ಷಗಳ ಹಿಂದಿನ ಕಾಲ) ಕ್ರಿಟೇಷಿಯಸ್ ಕಾಲದ ಉತ್ತರಾರ್ಧದಲ್ಲಿ(೬೫ ದಶಲಕ್ಷ ವರ್ಶಗಳ ಹಿಂದೆ) ಕಾಣೆಯಾದವು.ಇವು ಮೀನಿನಂತಿರುವ ಸಮುದ್ರ ಸರೀಸೃಪಗಳು. ಇವುಗಳ ತಲೆಬುರುಡೆಯ ನೆತ್ತಿ ಪ್ರದೇಶದ ಪಕ್ಕಗಳಲ್ಲಿ ಒಂದೊಂದು ಶೂನ್ಯ ಪ್ರದೆಶವಿತ್ತು.ಈ ಪ್ರಾಣಿಗಳು ಸು.೧೦-೧೨ ಮೀ ಉದ್ದವಾಗಿದ್ದವು. ತಲೆ ದಪ್ಪ, ಮುಸುಡಿ ಉದ್ದವಾಗಿ ಕೊಕ್ಕಿನ ರೀತಿಯಲ್ಲಿತ್ತು. ತಲೆ ಮತ್ತು ಮುಂಡಗಳ ನಡುವೆ ಕತ್ತು ಇರಲಿಲ್ಲ. ಇವುಗಳಿಗೆ ಉದ್ದವಾದ ಬಾಲವೂ ಮೇಲುರೆಕ್ಕೆಯೂ ಇದ್ದವು. ಕೈಕಾಲುಗಳು ಹುಟ್ಟುಗಳ ರೀತಿ. ಹಲ್ಲುಗಳು ಚೂಪು. ಕಣ್ಣುಗಳಲ್ಲಿ ಬಿಳಿಯ ಕಣ್ಣು ಪೊರೆಗಳಿದ್ದವು. ಇವು ಮೀನಿನಂತಿದ್ದುದರಿಂದ ದಡಕ್ಕೆ ಬಂದು ಮೊಟ್ಟೆಗಳನ್ನಿಡಲು ಆಗುತ್ತಿರಲಿಲ್ಲವೆಂದು ತೋರುತ್ತದೆ. ಭೂಣಗಳು ದೇಹದಲ್ಲಿ ಪಕೆಲುಬುಗಳ ಮಧ್ಯೆ ಇದ್ದುದು ಪಳೆಯುಳಿಕೆಯಿಂದ ಗೊತ್ತಾಗಿದ್ದರೂ ಅವು ಮರಿಗಳನ್ನು ಹಾಕುತ್ತಿದ್ದುವೆಂಬುದಕ್ಕೆ ಖಚಿತವಾದ ಆಧಾರಗಳಿಲ್ಲ. ಈ ಪ್ರಾಣಿಗಳ ಪಿತೃಶ್ರೇಣಿಯ ಪ್ರಾಣಿಗಳು ಯಾವುವೆಂಬುದು ಖಚಿತವಾಗಿಲ್ಲ (ನೋಡಿ- ಇಕ್ತಿಯೋಸಾರ್) ಇಕ್ತಿಯೋಫ಼ಿಸ್: ನೋಡಿ- ಇತ್ತಲ- ಮಂಡಲ ಇಕ್ತಿಯೋಸಾರ್: ಮೀಸೊಜ಼ೋಯಿಕ್ ಕಲ್ಪದಲ್ಲಿ (೬೫-೨೨೫ ದಶಲಕ್ಶ ವರ್ಷಗಳ ಹಿಂದಿನ ಕಾಲ) ಇದ್ದ ಇಕ್ತಿಯೋಸಾರಿಯ ವರ್ಗಕ್ಕೆ ಸೇರಿದ, ಜಲವಾಸಿ ಸರಿಸೃಪ.ಇದರ ಜೀವಾವಶೇಷ ಮಾತ್ರ ಲಭ್ಯವಾಗಿದೆ.ಮೀಸೋಜ಼ೋಯಿಕ್ ಕಲ್ಪಕ್ಕೆ ಸರೀಸೃಪಗಳ ಕಾಲವೆಂದೂ ಹೆಸರಿದೆ. ಅಂದು ಈ ಪ್ರಾಣಿಗಳು ನೆಲದ ಒಡೆತನವನ್ನು ಹೊಂದಿದ್ದವು. ಅವುಗಳಿಗೆ ಸಮನಾಗಬಲ್ಲ ಬೇರೆ ಪ್ರಾಣಿಗಳೇ ಇರಲಿಲಲ್ಲ. ಕೆಲವು ಸರೀಸೃಪಗಳು ಜಲವಾದಸಿಗಳಾದವು.ಅಂಥವುಗಳಲ್ಲಿ ಇಕ್ತಿಯೋಸಾರ್ ಒಂದು. ಆದರೆ ಇದ್ದಕ್ಕೆ ಮತ್ಸ್ಯ ಅಥವಾ ದ್ವಿಚರ ಪ್ರಾಣಿಗಳಿಗಿರುವಂಥ ಜಲವಾಸಕ್ಕೆ ಅನುಕೂಲವಾದ ಅಂಗಗಳು ಇರಲಿಲ್ಲ.ಆದ್ದರಿಂದ ಜಲವಾಸಕ್ಕೆ ತೆರಳಿದ ಸರೀಸೃಪಗಳು ತಮ್ಮ ದೇಹಗಳನ್ನು ಮತ್ಸ್ಯರೂಪಕ್ಕೆ ಅಳವಡಿಸಿಕೊಂಡವು. ಅವೇ ಇಕ್ತಿಯೋಸಾರ್ ಸರೀಸೃಪಗಳು. ಇಕ್ತಿಯೋದಸಾರಿನ ದೇಹ ಕದರಿ(ಸ್ಪಿಂಡಲ್)ನಾಕಾರದಲ್ಲಿತ್ತು. ಉದ್ದ ೦.೭೫ಮೀ.-೨ಮೀ.ವರಗೆ.ಅದು ತಲೆಯಿಂದ ಭುಜದವರೆಗೆ ಕ್ರಮೇಣ ದಪ್ಪವಾಗುತ್ತ ಆನಂತರ ಬಾಲದ ಕಡೆಗೆ ಕ್ರಮೇಣ ತೆಳುವಾಗುತ್ತ ಬಂದಿದೆ. ಅದರ ಉದ್ದವಾದ ದವಡೆಗಳಲ್ಲಿ ಅನೇಕ ಹಲ್ಲುಗಳಿದ್ದವು. ಹಲ್ಲಿನ ಮೇಲ್ಭಾಗ ಕ್ಲಿಷ್ಟರಿತಿಯ ಸುಕ್ಕುಗಳಿಂದ ಕೂಡಿತ್ತು. ಈ ಲಕ್ಷಣ ಕಾತಿಲೋಸಾರ್ ಸರೀಸೃಪಗಳ ಸಂಬಂಧವನ್ನು ಸೂಚಿಸುತ್ತದೆ. ತಲೆ ಮತ್ತು ಮುಂಡಗಳ ಮಧ್ಯೆ ಸ್ಪಷ್ಟವಗಿ ಕುತ್ತಿಗೆಯೇನೂ ಇರಲಿಲ್ಲ.ಕಾಲುಗಳು ಹಲಗೆಯಾಕಾರದ ಈಜುರೆಕ್ಕೆಗಳಾಗಿ ಮಾರ್ಪಟ್ಟಿಸದ್ದವು. ಮುಂಡದ ಮೇಲ್ಭಾಗದಲ್ಲಿ ದೊಡ್ಡ ಮಾಂಸದಿಂದ ಕೂಡಿದ, ಆದರೆ ಎಲುಬುಗಳಿಲ್ಲದ ಈಜುರೆಕ್ಕೆ ಇತ್ತು.ಬಾಲದ ಈಜುರೆಕ್ಕೆ ಎರಡು ವಿಷಮಭಾಗಗಳಿಂದ ಕೂಡಿತ್ತು.ತಲೆಬುರುಡೆಯಲ್ಲಿ ಒಂದೇ ಒಂದು ಕಪೋಲರ್ಂಧ್ರವಿತ್ತು. ಇದರ ಕೆಳಭಾಗದಲ್ಲಿ ಪೊಸ್ಟ್ಟ್ ಫ಼್ರಾಂಟಲ್ ಮತ್ತು ಸುಪ್ರಟೆಂಪೊರಲ್ ಎಲುಬುಗಳಿದ್ದವು.ಬೆನ್ನೆಲುಬು ಅನೇಕ ಚಪ್ಪಟೆಯಾದ ಪರಸ್ಪರ ತಾಕು ಹಾಕಲ್ಪಟ್ಟ ಎಲುಬುಗಳಿಂದ ಕೂಡಿತ್ತು.ಈ ಎಲುಬುಗಳ ಮೇಲ್ಗಡೆ ನರಮುಳ್ಳುಗಳನ್ನು (ನ್ಯೂರಲ್ ಸ್ಪೈನ್ಸ್)ಹೊಂದಿದ್ದವು.ಬೆನ್ನೆಲುಬಿನ ಹಿಂಭಾಗದಲ್ಲಿ ತ್ತಿವ್ರವಾಗಿ ಬಗ್ಗಿ ಬಾಲದ ಈಜುರೆಕ್ಕೆಯೊಳಕ್ಕೆ ಮುಂದುವರಿದಿತ್ತು.ಇಕ್ತಿಯೊಸಾರಿನ ಅವಶೆಷ ಮೊದಲಬಾರಿಗೆ ಟ್ರೈಯಾಸಿಕ್ ಕಾಲದ ಇಕ್ತಿಯೋಸಾರುಗಳು ಸರಲ ಮತ್ತು ಮೂಲರೂಪಪ್ರಕಾರಗಳು.ಅವುಗಳ ತಲೆಬುರುಡೆ ಉದ್ದವಗಿರಲಿಲ್ಲ;ಹಲಗೆಯಾಕಾರದ ಈಜುರೆಕ್ಕೆಗಳು ಅಗಲವಾಗಿರಲಿಲ್ಲ ಮತ್ತು ಬಾಲದ ರೆಕ್ಕೆಯೂ ದೊಡ್ಡದಾಗಿರಲಿಲ್ಲ. ಕ್ರಿಟೇಷಸ್ ಮತ್ತು ಜುರಾಸಿಕ್ ಯುಗಗಳಲ್ಲಿ (೬೫-೧೯೦ದಶಲಕ್ಷ ವರ್ಷಗಳ ಹಿಂದಿನ ಕಾಲ).ಇವು ಹೆಚ್ಚು ಸಂಖ್ಯೆಯಲ್ಲಿದ್ದವು.ಇಕ್ತಿಯೋಸಾರುಗಳು ಕ್ಷಣಮಾತ್ರವೂ ನೆಲದ ಮೇಲೆ ಇರಲಾರದಷ್ಟು ಜಲವಾಸಕ್ಕೆ ಹೊಂದಿಕೊಂಡಿದ್ದವು.ಅದ್ದರಿಂದ ಮೊಟ್ಟೆಗಳನ್ನು ಮರಿಯಾಗುವವರೆಗೆ ಶರೀರದಲ್ಲೇ ಇಟ್ಟುಕೊಳ್ಳುವ ಸಾಧನಗಳನ್ನು ಹೊಂದಿದ್ದವು.ಅವುಗಳ ಅವಶೇಷಗಳು ಈ ಆಭಿಪ್ರಾಯವನ್ನು ಪುಷ್ಪಿಕರಿಸಿವೆ(ನೋಡಿ-ಇಕ್ತಿಯೋಪ್ಟೆರಿಜಿಯ). ಇಕ್ನಾಟನ್: ನೋಡಿ-ಅಕ್ನಟನ್ ಇಕ್ನಾಮಾನ್ ನೊಣ:ಹೈಮನಾಪ್ಪರ ಉಪವರ್ಗದ ಇಕ್ನೂಮಾನಿಡೀ ಕುಟುಂಬಕ್ಕೆ ಸೇರಿದ ಕೀಟಗಳು.ಪ್ರಪಂಚದ ಎಲ್ಲೆಡೆಯೂ ಇವೆ. ಲೆಪಿಡಾಪ್ಪರ ಅಥವಾ ಇತರ ಉಪವರ್ಗದ ಕೀಟಗಳ ದೇಹಗಳೊಳಗೆ ಉಪಜಿವಿಗಳಾಗಿ ಡಿಂಧಾವಸ್ಥೆಯನ್ನು ಕಳೆಯುತ್ತವೆ.ಡಿಂಭಗಳು ಲೆಕ್ಕವಿಲ್ಲದಷ್ಟು ಕಂಬಳಿಹುಳುಗಳನ್ನು ನಾಶಮಾಡಬಲ್ಲವು.ಅಲ್ಲದೆ ಅನೇಕ ವೇಳೆ ಜೇಡಾಗಳನ್ನೂ ತಿಂದುಹಾಕುತ್ತವೆ.ಸದಾ ಅದುರುತ್ತಿರುವ ತಂತುರೂಪದ ಕುಡಿ ಮೀಸೆಗಳು ಈ ನೊಣದ ವೈಶಿಷ್ತ್ಯ.ಮೆಗಾರಿಸ ಮತ್ತು ತಾಲೆಸ ಜಾತಿಯ ಹೆಣ್ಣು ಇಕ್ನೊಮಾನ್ ನೊಣಗಳಿಗೆ ೭-೧೦ಸೆಂಮಿ ಅಥವಾ ಉದ್ದದ ಮೊಟ್ಟೆಗಳನ್ನು ಸಾಗಿಸುವ ಚೂಪು ನಾಳಾಂಗವಿದೆ(ಓವಿಒಆಸಿಟರ್).ಪೊಷಕ ಜೀವಿಯ ದೇಹವನ್ನು ನಾಳಾಂಗದ ಸಹಾಯದಿಂದ ಕೊರೆದು ನೊಣ ಮೊಟ್ಟೆಗಳನ್ನಿಡುವುದು.ಬ್ರಿಟನ್ನಿನ ಪಿಜ಼ೋಮೆಕಸ್ ಎಂಬುದು ರೆಕ್ಕೆಗಳಿಲ್ಲದ ಇರುವೆಯನ್ನು ಹೋಲುತ್ತದೆ ಅರ್ಜಿಯೊಟೈಪಸ್ ಅರ್ಮೇತಟಸ್ ಎಂಬ ಇಕ್ನೊಮಾನ್ ನೊಣಗಳು ನೀರಿನಲ್ಲಿ ಮುಳುಗಿ ಟ್ರೈಕಾಪ್ಪರ ಕೀಟದ ಡಿಂಭಗಳಲ್ಲಿ ಮೊಟ್ಟೆಯಿಡುತ್ತವೆ. ಇಕ್ಷ್ವಕು ರಾಜರು:ಉತ್ತರಭಾರತದಿಂದ ದಕ್ಷಿಣದೇಶಕ್ಕೆ ವಲಸೆ ಬಂದು ಇಲ್ಲಿ ರಾಜ್ಯಗಳನ್ನು ಕಟ್ಟಿದ ಮತ್ಸ್ಯ ಕೇಕಯ ಮುಂತಾದ ಅರಸುಮನೆತನಗಳಲ್ಲಿ ಒಂದು.ಮನುವಿನ ಮಗ ಇಕ್ಷ್ವಾಕು ಅಯೊಧ್ಯೆಯನ್ನು ರಾಜದಾನಿಯನ್ನಾಗಿ ಮಾಡಿಕೊಂಡು ರಾಜ್ಯ ಕಟ್ಟಿದ.ಪುರಾಣಗಳಲ್ಲಿ ಮಾತ್ರವಲ್ಲದೆ ಪಾಳಿವಾಘ್ನಯದಲ್ಲಿ ಮತ್ತು ಜಾತಕ ಕಥೆಗಳಲ್ಲಿ,ಇಕ್ಷ್ವಾಕುವಿನ(ಒಕ್ಕಕ)ಉಲ್ಲೇಖ ಬರುತ್ತದೆ.ಈತ ಐತಿಹಾಸಿಕ ವ್ಯಕ್ತಿಯಂಬುದು ನಿಜ. ಅದರೆ ಇವನಿಗೆ ನೂರು ಮಕ್ಕಳಿದ್ದರೆಂದೂ ವಿಕುಕ್ಷಿಯೆಂಬ ಒರಸಪುತ್ರ ತಂದೆಯ ಅನಂತರ ಅಯೋಧ್ಯಾಪತಿಯಾದನೆಂದೂ ಉಳಿದವರು ನೆರೆಪ್ರಾಂತ್ಯಗಳಿಗೆ ತೆರಳಿ ಅಲ್ಲಲ್ಲಿ ಸಣ್ಣ ರಾಜ್ಯಗಳನ್ನು ಸ್ಥಾಪಿಸಿದರೆಂದೂ ಉಲ್ಲೆಖವಿದೆ. ಅದರಲ್ಲಿ ಹಲವರು ದಕ್ಷಿಣಾಪಥಕ್ಕೂ ಬಂದರಂತೆ.ಕುಶನೆಂಬ ಇಕ್ಷ್ವಾಕುಪುತ್ರ ದಕ್ಷಿಣ ಕೋಸಲವೆಂಬ ಹೆಸರಿನ ರಾಜ್ಯವೊಂದನ್ನು ಕಟ್ಟಿದನೆಂದೂ ಅದಕ್ಕೆ ಕುಶಸ್ಥಲಿಯೆಂಬ ಹೆಸರು ಬಂತೆಂದೂ ವಿಷ್ಣುಪುರಾಣ ಹೇಳುತ್ತದೆ.ಇವರಲ್ಲಿ ಹಲವಾರು ಮಂದಿ ದಕ್ಷಿಣ ದಕ್ಷಿಣಪ್ರಾಂತ್ಯಗಳಲ್ಲಿ ನೆಲೆಯೂರಿ ಪ್ರಸಿದ್ಧರಾಗಿದಾರೆ.ಗೋದಾವರೀ ತೀರದಲ್ಲಿ ರಜ್ಯಾಗಳನ್ನು ಕಟ್ಟೀದ ಅಶ್ಮಕ,ಮುಲಕ ಮುಂತಾದವರೆಲ್ಲ್ಲ ಈ ವಂಶದವರು.ಅಂಗದೇಶದ ಕಡೆಯಿಂದ ವೆಂಗಿನಾಡಿಗೆ ಬಂದು ನೆಲಸಿದ ಯಶೊಧರನೂ ಈ ವಂಶದವ.ಈತ ಜೈನತೀರ್ಥಂಕರ ವಾಸುಪೂಜ್ಯನ ಕಾಲದಲ್ಲಿದ್ದವನೆಂದು ಪ್ರತೀತಿ.