ಪುಟ:Mysore-University-Encyclopaedia-Vol-2-Part-1.pdf/೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

'ಆಲಿಂಗ್ಯಾಮ್ ಮಾರ್ಜರಿ - ಆಲಿಹೊಸೀನ್

          ಆಲಿಂಗ್ಯಾಮ್ ಮಾರ್ಜರಿ:೧೯೦೪-೬೬. ಇಂಗ್ಲಿಷ್ ಕಾದಂಬರಿಕಾರ್ತಿ.ಜನನ ಲ್ಂಡನ್ನಿನಲ್ಲಿ. ತಂದೆಯೂ ಬರೆಹಗಾರ. ಆನೇಕ ಪತ್ತೆದಾರಿ ಕಾದಂಬರಿಗಳನ್ನು  ಬರೆದಳು. ೧೯೨೭ರಲ್ಲಿ ಕಲಾವಿದ ಯಂಗ್ ಮನೆ ಕಾರ್ಟಾರನನ್ನು ಮದುವೆಯಾದಳು. ಆಕೆ ಚಿತ್ರಿಸಿದ ಪತ್ತೆದಾರ ಆಲ್ಬರ್ಟ್ ಕ್ಯಾಂಪಿಯನ್ ಬಹಳ ಜವಪ್ರಿಯನಾದ.
          ದಿ ಕ್ರೈಮ್ ಅಟ್ ಬ್ಲಾಕ್ ಡಾಡ್ಲಿ (೧೯೨೯), ಪ್ಲವರ್ಸ್ ಫಾರ್ ದಿ ಜಜೆ (೧೯೩೬), ಮೋರ್ ವರ್ಕ್ ಫಾರ್ ದ್ ಅಂಡರ್ಟೇಕರ್ (೧೯೪೯), ದಿ ಟೈಗರ್ ಇನ್ ದಿ ಸ್ಮೋಕ್ (೧೯೫೨), ನೋ ಲವ್ ಲಾಸ್ಟ್ (೧೯೫೪)- ಇವು ಈಕೆಯ ಪ್ರಮುಖ ಕಾದಂಬರಿಗಳು. ಮಿಸ್ಟರ್ ಕ್ಯಂಪಿಯನ್ ಆಂಡ್ ಆದರ್ಸ್ (೧೯೩೯) ಈಕೆಯ ಕಥಾ ಸಂಕಲನ.   (ಎಚ್.ವಿ.ಎಸ್.)

ಆಲಿಂಗ್ಯಾಮ್, ವಿಲಿಯಂ: ೧೮೨೪-೮೯. ಐರಿಷ್ ಕವಿ. ಫ್ರೋಸರ್ಸ್ ಮ್ಯಾಗಜಿನಿನ ಸಂಪಾದಕನಾಗಿದ್ದ. (೧೮೭೪-೭೯) ಪೋಯಮ್ಸ್(೧೮೩೦), ಡೇ ಆಂಡ್ ನೈಟ್ ಸಂಗ್ಸ್(೧೮೫೪), ಲಾರೆನ್ಸ್ ಬ್ಲೂಫೀಲ್ಡ್ ಇನ್ ಐರ್ಲೆಂಡ್ (೧೮೬೪), ಐರಿಷ್ ಸಾಂಗ್ಸ್ ಆಂಡ್ ಪೊಯೆಮ್ಸ್ (೧೮೮೭)- ಇವು ಈತನ ಮುಖ್ಯ ಕೃತಿಗಳು. ಸ್ವತಃ ಕಾಲಾವಿದೆಯಾದ ಈತನ ಪತ್ನಿ ಇವನ ಮರಣಾನಂತರ ಇವನ ಪತ್ರಗಳನ್ನು ಪ್ರಕಟಿಸಿದಳು. ಯೇಟ್ಸ್ನ ಆರಂಭದ ಕವನಗಳಲ್ಲಿ ಈತನ ಪ್ರಭಾವ ಕಾಣುತ್ತದೆ. (ಎನ್.ಎಸ್.ಎಲ್೧.)

          ಆಲಿಕಲ್ಲು: ಪದರುಗಟ್ಟಿದ ಮೋಡಗಳಿಂದ (ಕ್ಯೂಮುಲೋ ನಿಂಬಸ್ ಕ್ಲೌಡ್ಸ್) ಕೆಳಗೆ ಬೀಳುವ ಹಿಮಗಡ್ಡೆಯ ಸಣ್ಣ ಉಂಡೆಗಳು (ಹೇಲ್). ಹವಾಶಾಸ್ತ್ರದ ಪ್ರಕಾರ ಆಲಿಕಲ್ಲು ಉತ್ಪನ್ನವಾಗುವ ಸನ್ನಿವೇಶಗಳು ಮೂರು : ೧. ಕೆಳಮಟ್ಟದಲ್ಲಿ ತೇವಪೂರಿತ ಬಿಸಿಗಾಳಿ, ೨. ಉನ್ನತ ಎತ್ತರಗಳವರೆಗೆ (೫೦೦೦೦' ಗಳನ್ನು ಮೀರಿ) ವ್ಯಾಪಿಸಿರುವ ಸಿಡಿಲಿನಿಂದ ಕೂಡಿದ ಬಿರುಗಾಳಿ, ೩. ನೆಲದಿಂದ ೧೦೦೦೦'-೧೨೦೦೦' ಎತ್ತರದಲ್ಲಿ ಹಿಮಬಿಂದು (ಫ಼್ರೀಸಿಂಗ್ ಪಾಯಿಂಟ್). ಹಿಮ ಮತ್ತು ನೀರು ಇವುಗಳ ಪರ್ಯಾಯ ಮಿಶ್ರಣದಿಂದ ಆಲಿಕಲ್ಲು ಬೆಳೆದು ವೃದ್ಧಿಯಾಗಿ ಹರಳುಗಟ್ಟುವುದು. ಗುಡುಗು, ಬಿರುಗಾಳಿಯಿಂದ ಕೂಡಿದ ಮಳೆಯಲ್ಲಿ ಒಮ್ಮೊಮ್ಮೆ ಆಲಿಕಲ್ಲಿಗಳು ಬೀಳುತ್ತವೆ. ರೂಢಿಯಲ್ಲಿ ಇಂಥ ಮಳೆಯನ್ನು ಕಲ್ಮಳೆ ಎನ್ನುತ್ತಾರೆ.ಆಲಿಕಲ್ಲಿನ ವಿವಿಧ. ಇಂದು ಕೆ.ಜಿ.ತೂಕದವನ್ನೂ ಕಂಡವರಿದ್ದಾರೆ. ತೇವಾಂಶವುಳ್ಳ ಗಾಳಿ ಶೀಘ್ರವಾಗಿ ಮೇಲಕ್ಕೇರುವುದರಿಂದ ಆಲಿಕಲ್ಲುಗಳು ಉತ್ಪತ್ತಿಯಾಗುತ್ತವೆ. ನೀರಿನ ಹೆಪ್ಪುಗಟ್ಟಿ ನೀರಿನಲ್ಲಿ ತೇವಾಂಶ ಹೆಚ್ಚಿದಂತೆಲ್ಲ ಇವುಗಳ ಗಾತ್ರ ಮತ್ತು ತೂಕ ಹೆಚ್ಚುತ್ತವೆ. ತೂಕ ಹೆಚ್ಚಿದಾಗ ಮೇಲಕ್ಕೆ ಏರಿ ಹೋಗಲು ಸಾಧ್ಯವಿಲ್ಲದೆ ಕೆಳಕ್ಕೆ ಬೀಳುತ್ತವೆ. ಕೆಳಕ್ಕೆ ಬೀಳುವಾಗ ಗಾಳಿಯಲ್ಲಿನ ತೇವಾಂಶವನ್ನು ಹೀರಿ ಇವುಗಳ ಗಾತ್ರ ಹೆಚ್ಚಬಹುದು. ಆಲಿಕಲ್ಲಿನಿಂದ ಕೂಡಿದ ಬಿರುಗಾಳಿಯ ಮಳೆಯೂ ಬೆಳೆಗಳಿಗೆ ವಿಪರೀತ ನಷ್ಟವನ್ನುಂಟುಮಾಡುತ್ತದೆ; ಮಾವು ಮುಂತಾದ ಹಣ್ಣುಗಳು ಕೋಳೆಯೂತ್ತವೆ; ಕಾಯಿಗಳು ಉದುರಿಹೋಗುತ್ತವೆ. ಕುಂಬಳ ಮೂಂತಾದುವು ಕೆಡುತ್ತವೆ. ಕೆಲವು ವೇಳೆ ಈ ಮಳೆಗೆ ಸಿಕ್ಕಿಹಾಕಿಕೊಂಡ ಪ್ರಾಣಿಗಳು ಮತ್ತು ಜನರು ಸಾಯುವುದೂ ಉಂಟು. ಸಾಮಾನ್ಯವಾಗಿ ಆಲಿಕಲ್ಲು ಹೆಸರಿಗೆ ತಕ್ಕಂತೆ ಕಲ್ಲಿನಂತಿರುತ್ತಾದರೂ ಹಿಮದ ಹರಳುಗಳಿಂದ ಕೂಡಿದ ಮೃದು ಆಲಿಕಲ್ಲು ಅನೇಕವೇಳೆ ಹಿಮವನ್ನು ಹೋಲುತ್ತದೆ (ನೋಡಿ-ಹವಾಶಾಸ್ತ್ರ, ಮೋಡಗಳು ಮಳೆ).
          ಆಲಿಗೊ ಕೀಟ: ವಲಯವಂತ (ಅನೆಲಿಡ) ವಂಶದ ಒಂದು ವರ್ಗ. ಉದಾ:ಎರೆಹುಳು. ಇವುಗಳ ಚಲನೆಗೆ ಅನುಕೂಲವಾಗುವಂತೆ ಕೈಟಿನ್ ವಸ್ತುವಿನಿಂದಾದ ಸೀಟ ಎಂಬ ಬಿರುಗೂದಲುಗಳಿವೆ.
          ನೆಲವಾಸಿ ಆಲಿಗೋಕೀಟ: ಉದಾ: ಯೂಡ್ರಿಲಸ್, ಲುಂಬ್ರಿಕಸ್, ಯುಜಿನಸ್ ಮುಂತಾದವು.
          ಜಲವಾಸಿ ಆಲಿಗೋಕೀಟ: ಉದಾ: ಟ್ಯುಬಿಫೆಕ್ಸ್. 
          ಆಲಿಗೊಸೀನ್: ಭೂ ವಿನ್ಯಾನದಲ್ಲಿ ಟರ್ಷಿಯರಿ (ನೋಡಿ: ಸ್ತರ ವಿವರಣಾ ಸ್ತರ ವಿವರಣಾ ಸ್ತಂಭ  - ಟರ್ಷಿಯರಿ (ನೋಡಿ: ಸ್ತರ ವಿವರಣಾ ಸ್ತಂಭ - ಟರ್