ಪುಟ:Mysore-University-Encyclopaedia-Vol-2-Part-1.pdf/೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆವರಣಶಾಸ್ತ್ರ ನೈಟ್ರೋಜನ್ನುಗಳು ನೈಟ್ರೇಟುಗಳಾಗುತ್ತವೆ.ಇವನ್ನು ಸಾಮಾನ್ಯವಾಗಿ ಹಸಿರು ಗಿಡಗಳು ಉಪಯೋಗಿಸುತ್ತವೆ.ಅಂತ ನೈಟ್ರೋಜನ್ನುಗಳು ಸಸ್ಯದ ಮೂಲ ಭಾಗಗಳಾಗಿದ್ದರೆ ಆವರ್ತನೆ ಹಾಗೆಯೇ ಪೂರ್ಣವಾಗುತ್ತದೆ.ಆರ್ಗ್ಯಾನಿಕ್ ನೈಟ್ರೋಜನ್ನಿನ ಬಹುಭಾಗ ನೈಟ್ರೋಜನ್ ಒಳಗೊಂಡ ವಸ್ತುವಿನ ವಿಭಜನ ಕ್ರಿಯೆಯ ಫಲವಾಗಿ ಗಾಳಿಯನ್ನು ಮತ್ತೆ ಪ್ರವೇಶಿಸುತ್ತದೆ. ವಾಯುಮಂಡಲದ ನೈಟ್ರೋಜನ್ ಆವರ್ತನೆಗೆ ಜೀವಾಣುವಿನೋಡನೆ ಬೆರೆಯುವ ನೈಟ್ರೋಜನ್ ಕ್ರಿಯೆಯ ಮೂಲಕವಾಗಿ ಅಥವಾ ನೀಲಿ ಹಸುರಿನ ಪಾಚಿ (ಆಲ್ಗ) ಅಥಾವ ಮಿಂಚಿನ ಕ್ರಿಯೆಯ ಮೂಲಕವಾಗಿ ಹಿಂತಿರುವಾಗುತ್ತದೆ. ಪೌಷ್ಟಿಕ ಪದಾರ್ಥಗಳು ನೈಟ್ರೋಜನ್ ಅಂಶಗಳಾಗಿ ಪರಿವರ್ತನೆ ಆಗುವಾಗ ಒಡೆಯುವ ಆರ್ಗ್ಯಾನಿಕ್ ಪದಾರ್ಥಗಳಿಗೆ ಶಕ್ತಿಯನ್ನು ಒದಗಿಸುತ್ತದೆ.ಹೀಗೆ ಒದೆದು ಚೂರಾಗಿ ಹಿಂದಿರುಗುವ ಅರ್ಗ್ಯಾನಿಕ್ ಪದಾರ್ಥಗಳು ಸಾವಯವಾಂಶ ಅಥವಾ ಸೂರ್ಯನ ಶಕ್ತಿಯನ್ನು ಗಳಿಕೆಗಾಗಿ ಬಳಸಿಕೊಳ್ಳಬೇಕು.ಹುರುಳಿ ಕುಟುಂಬದ (ಲೆಗ್ಯೂಮಿನಸ್) ಸಸ್ಯದ ಬೇರಿನ ಗಂಟುಗಳಲ್ಲಿನ ಜೀವಾಣುಗಳು ಆತಿಥೇಯನಿಂದ ಶಕ್ತಿ ಸಂವರ್ಧನಕ್ಕಾಗಿ ಶರ್ಕರ ಪಿಷ್ಟಾದಿಗಳನ್ನು ಸ್ವೀಕರಿಸುತ್ತವೆ.ಆದರೆ ಈ ಜೀವಾಣುಗಳಿಗೆ ಮಣ್ಣಿನಲ್ಲಿರುವ ನೈಟ್ರೋಜನ್ನನ್ನು ಪಡೆಯುತ್ತವೆ.ನೈಟ್ರೋಜನ್ನಿನ ಕೆಲವು ಭಾಗ ಮಣ್ಣಿಗೆ ಇಳಿದು ಬಂದು ಇತರ ಸಸ್ಯಗಳ ಉಪಯೋಗಕ್ಕೆ ಅನುಕೂಲಿಸುತ್ತದೆ. ಇತರ ನೈಟ್ರೋಜನ್ನಿಗೆ ಬೆರೆಯುವ ಜೀವಾಣುಗಳು ಮಣ್ಣಿನಲ್ಲಿ ಸ್ವತಂತ್ರವಾಗಿರುತ್ತವೆ.ಇವುಗಳಿಗೆ ನಾಳ ರಚನೆಯ ಸಸ್ಯಗಳ ಸಹಾಯ ಅನಗತ್ಯ.ನೀರಿನಲ್ಲಿ ಮತ್ತು ನೀಲಿ ಹಸುರಿನ ಪಾಚಿ ಮಾದರಿಯ ಕೆಸರು ಮಣ್ಣಿನಲ್ಲಿ ಪರಿಶೀಲನೆಗೆ ತೆಗೆದುಕೊಂಡಾಗ ಅಲ್ಲಿ ನೈಟ್ರೋಜನ್ ಆವರ್ತನೆ ಪೂರ್ಣವಾಗಿರುವುದು ಕಂಡುಬರುತ್ತದೆ.

ಆಕ್ಸಿಜನ್,ಕಾರ್ಬನ್ ಡೈಆಕ್ಸೈಡ್ ಮತ್ತು ನೀರಿನ ಆವರ್ತನೆಗಳು:ಇವು ನೈಟ್ರೋಜನ್ ಆವರ್ತನೆಯಂತೆಯೇ ಬಹುತೇಕ ಸಮಾನವಾಗಿರುತ್ತದೆ. ಅಂದರೆ ಇನಾರ್ಗ್ಯಾನಿಕ್ಕಿನಿಂದ ಆರ್ಗ್ಯಾನಿಕ್ ಸ್ಥಿತಿಗಳ ಅಂತರದಲ್ಲಿ ಸತತವಾಗಿ ಪ್ರವಹಿಸುವಾಗ ಅನಿಲ ರೂಪದಲ್ಲಿರುವವರೆಗೆ ಮಾತ್ರ ವಾಯುಮಂಡಲದ ಕಾರ್ಬನ್ ಡೈಆಕ್ಸೈಡ್ ಹಸುರು ಸಸ್ಯಗಳಿಂದ ಶರ್ಕರಪಿಷ್ಟವಾಗಿ ಸೇರುತ್ತವೆ. ಈ ಕ್ರಿಯೆಯಲ್ಲಿ ಆಕ್ಸಿಜನ್ ಒಂದು ಉಪಪದಾರ್ಥವಾಗಿ ಉತ್ಪತ್ತಿಯಾಗುತ್ತದೆ. ವಾಯುಮಂಡಲದಲ್ಲಿನ ಆಕ್ಸಿಜನ್ ಆಹಾರ ಪದಾರ್ಥಗಳ ಉತ್ಕ ರ್ಷಣೆಯ(ಆಕ್ಸಿಡೈಸ್) ಸಂದರ್ಭದಲ್ಲಿ ಜೀವಿಗಳಿಗೆ ಬಳಕೆಯಾಗುತ್ತದೆ.ಆಗ ಅನಗತ್ಯವಾದ ಪದಾರ್ಥವಾಗಿ ಕಾರ್ಬನ್ ಪ್ರತಿಯೊಂದು ಡೈ ಆಕ್ಸೈಡ್ ಹೊರಬರುತ್ತದೆ. ಹಾಗೆಯೇ ಗಾಳಿಯಲ್ಲಿರುವ ಹಬೆ ರೂಪದ ಜೀವಾಣುಗಳು ನೀರಿನ ದ್ರವಕಣಗಳು ಭೂಮಿಗೆ ಮಳೆಯಾಗಿಯೋ ಮಂಜಾಗಿಯೋ ಬೀಳುತ್ತವೆ. ಜೀವಿಗಳು ನೀರನ್ನು ತಮ್ಮ ಜೀವದ್ರವ್ಯ ಪರಿಣಾಮದ ಅವಸ್ಥೆಯಲ್ಲಿ ಉಪಯೋಗಿಸಿಕೊಳ್ಳುತ್ತವೆ. ಅಲ್ಲದೆ ಆಹಾರ ಸಂಯೋಜನೆಯಲ್ಲಿ ಅವನ್ನು ನಿರರ್ಥಕ ಪದಾರ್ಥಗಳಾಗಿ ಹೊರಹಾಕುತ್ತವೆ. ನೀರೂ ಕೂಡ ಆಕೃತಿ ಬೆರೆಕೆಯ ಉಪ ಪದಾರ್ಥವಾಗಿ ಗಾಳಿಗೆ ಸೇರಿಕೊಳ್ಳುತ್ತದೆ.

ಫಾಸ್ಪರಸ್ ಆವರ್ತನೆ:ಫಾಸ್ಪರಸನ್ನು ಒಳಗೊಂಡಿರುವ ಆವರ್ತನೆ ಸ್ವಲ್ಪ ಅಪರಿಪೂರ್ಣ ಮತ್ತು ಸುಲಭಸ್ವರೂಪದ್ದಾಗಿದೆ. ಫಾಸ್ಪರಸಿನ ಆಕರಗಳೆಂದರೆ ಬಂಡೆಗಳು ಇಲ್ಲವೆ ಪ್ರಾಚೀನ ಭೂಗರ್ಭ ಕಾಲದಲ್ಲಿ ರೂಪುಗೊಂಡ ಇತರ ಆಕರಗಳು.ಇವು ಸಾಮಾನ್ಯವಾಗಿ ನಶಿಸಿ ಆವರಣಪರಿಸ್ಥಿತಿಗೆ ಫಾಸ್ಪರಸ್ ದ್ರವ್ಯಗಳನ್ನು ಹೊರಗೆಡಹುತ್ತವೆ.ಅವುಗಳಲ್ಲಿ ಹೆಚ್ಚಿನ ಭಾಗಗಳು ಸಮುದ್ರಕ್ಕೆ ನುಸುಳಿ ಹೋಗಿ ಸಾಗರದ ಕೆಸರಿನ ಭಾಗವಾಗಿ ಪರಿಣಮಿಸುತ್ತವೆ.ದುರದೃಷ್ಟದಿಂದ ಫಾಸ್ಪರಸನ್ನು ಆವರ್ತನೆಗೆ ಹಿಂತಿರುಗಿಸುವ ವಿಭಾಗಗಳು ಅವುಗಳ ನಷ್ಟಕ್ಕೆ ಸರಿದೂಗಿಸುವಷ್ಟು ಸಮತೂಕವಾಗಿ ಒದಗುತ್ತಿಲ್ಲ.ಕೆಲವು ಪಕ್ಷಿಗಳ ಮೂಲಕ ಸಮುದ್ರದಿಂದ ನೆಲಕ್ಕೆ ಫಾಸ್ಪರಸನ್ನು ವರ್ಗಾಯಿಸುವುದು ಸಾಧ್ಯ.ಉದಾಹರಣೆಗೆ ಪೆರು ಸಮುದ್ರತೀರದಲ್ಲಿ ಕೂಡು ಹಿಕ್ಕೆ ಗೊಬ್ಬರ ಫಾಸ್ಪರಸಿನ ಪ್ರಮುಖ ಮೂಲವನ್ನು ಪ್ರತಿನಿಧಿಸುತ್ತದೆ.ಆದರೂ ನೀರುಹಕ್ಕಿಗಳ ಮತ್ತು ಮೀನಿನ ಕ್ರಿಯೆ ಈ ಕಾರ್ಯದಲ್ಲಿ ಸಾಕಷ್ಟಿಲ್ಲ.ಭೂಮಿಗೆ ನೀರು ಹಕ್ಕಿಗಳು ಮತ್ತು ಮೀನುಗಳಿಂದ ಸುಮಾರು ೬೦೦೦೦ ಟನ್ ಪ್ರಮಾಣದ ಪ್ರಾಥಮಿಕ ಫಾಸ್ಪರಸ್ ಬಂಡೆಗಳನ್ನು ಅಗೆದು ತೆಗೆದು ಅವನ್ನು ಗೊಬ್ಬರಕ್ಕೆ ಉಪಯೋಗಿಸುತ್ತಾರೆ.ಆದರೆ ಇದರಲ್ಲಿ ಹೆಚ್ಚಿನ