ಪುಟ:Mysore-University-Encyclopaedia-Vol-2-Part-1.pdf/೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆಲಿಡೇಡ್. ಶಿಲೆಗಳ ಮೇಲೆ ಸುಣ್ಣದ ನಿಕ್ಷೇಪವಿದೆ. ಇದರ ಹೆಸರು ಕ್ಯಾಲ್ಕರೆ ಡಿಬ್ರೀ. ಮಧ್ಯದಲ್ಲಿ ವಿಸ್ತಾರವಾದ ಸಾಗರ ನಿಕ್ಷೇಪಗಳಿವೆ. ಇವು ಆಸ್ಟ್ರಿಯ, ಕಾರ್ಬುಲ ಮೊದಲಾದ ಲೆಮೆಲ್ಲಿಬ್ರ್ಯಾಂಕ್‍ಗಳಿಂದ ಕೂಡಿದ ಮಾರಲ್ ಶಿಲೆಗಳಿಂದ ಪ್ರಾರಂಭವಾಗುತ್ತವೆ. ಇವುಗಳ ಮೇಲೆ ಮರಳು ಪದರಗಳಿವೆ. ಇವುಗಳ ಕೆಳಭಾಗವನ್ನು ಚೌರೆ ಮರಳುಗಳೆಂದೂ ಮೇಲ್ಭಾಗವನ್ನು ಫೌಂಟನ್ ಬ್ಲೊ ಮರಳುಗಳೆಂದೂ ಕರೆದಿದೆ. ಇವೆಲ್ಲವೂ ಜೀವ್ಯಶೇಷರಹಿತವಾದುವು. ಇವು ಗಾಜು ತಯಾರಿಕೆಗೆ ಅತ್ಯುತ್ತಮವಾಗಿವೆ. ಮೇಲ್ಭಾಗ ಕೆಳಗಿನಿಂದ ಕ್ರಮವಾಗಿ ಸುಣ್ಣ ಶಿಲೆ, ಹಸಿರು ಮಾರಲ್, ಮರಳು ಮತ್ತು ಮರಳುಶಿಲೆಗಳಿಂದ ಕೂಡಿದೆ. ಮರಳುಗಳಲ್ಲಿ ಸ್ತನಿಗಳ ಅವಶೇಷಗಳಿವೆ. ಅವುಗಳಲ್ಲಿ ಅಂತ್ರಕೊತೀರಿಯಂ ಮತ್ತು ಮೈಕ್ರೊಬೊನಂ ಮುಖ್ಯವಾದುವು.

ಬೆಲ್ಜಿಯಂನಲ್ಲಿ ಆಲಿಗೊಸೀನ್‍ಸ್ತೋಮ ಆಂಟ್‍ವರ್ಪ್‍ನ ಸುತ್ತಮುತ್ತ ವ್ಯಾಪಿಸಿದೆ. ಇಂಗ್ಲೆಂಡಿನಲ್ಲಿ ಈ ಸ್ತೋಮ ಹ್ಯಾಂಪ್‍ಷೈರ್ ಮತ್ತು ವೈಟ್ ದ್ವೀಪಗಳಿಗೆ ಮಾತ್ರ ಸೀಮಿತವಾಗಿದೆ. ಈ ಎರಡು ಪ್ರದೇಶಗಳಲ್ಲಿಯೂ ಕೆಳ ಮತ್ತು ಮಧ್ಯ ಭಾಗಗಳು ಮಾತ್ರ ರೂಪುಗೊಂಡಿವೆ. ಬೆಲ್ಜಿಯಂನಲ್ಲಿನ ಭೂಕೊರೆತವನ್ನು ಪರಿಶೀಲಿಸಿದಾಗ ಅಲ್ಲಿ ಭೂಮಿಯ ಮೇಲ್ಭಾಗವಿರುವುದು ಕಂಡುಬಂದಿ.

ಉತ್ತರ ಅಮೆರಿಕದಲ್ಲಿ ಆಲಿಗೊಸೀನ್ ಯುಗ ಜ್ಕ ರ್ಯಾಚರಣೆಯೊಡನೆ ಪ್ರಾರಂಭವಾಯಿತು. ಪಶ್ಚಿಮ ಪ್ರದೇಶವನ್ನು ಜ್ವಾಲಾಮುಖಿಯ ಬೂದಿ ಮುಚ್ಚಿತು. ಯೆಲ್ಲೋಸ್ಟೋನ್ ಪಾರ್ಕ್ ಮತ್ತು ಕೊಲರೆಡೊ ಪ್ರಾಂತ್ಯದ ಸ್ಯಾನ್ಜುವಾನ್ ಪರ್ವತ ಪ್ರದೇಶಗಳಲ್ಲಿ ಜ್ವಾಲಾಮುಖಿಗಳ ಹಾವಳಿ ತೀವ್ರವಾಗಿತ್ತು. ಆಲಿಗೊಸೀನ್ಲದ ಭೂನಿಕ್ಷೇಪಗಳು ದಕ್ಷಿಣ ಡಕೋಟ, ನೆಬ್ರಾಸ್ಕ, ವೋಮಿಂಗ್ ಮತ್ತು ಕೊಲರೆಡೊ ಪ್ರಾಂತ್ಯಗಳಲ್ಲಿ ಚೆನ್ನಾಗಿ ಸಂಚಯನಗೊಂಡಿವೆ. ಈ ನಿಕ್ಷೇಪಗಳನ್ನು ವೈಟ್ ರಿವರ್ ಶಿಲಾಶ್ರೇಣಿ ಎಂದು ಕರೆದಿದೆ; ಇವು ಶಿಥಿಲೀಕರಣ ಹೊಂದಿ ಬ್ಲಾಕ್‍ಹಿಲ್‍ಗೆ ಆಗ್ನೇಯದಲ್ಲಿ ಅಪ್ರಯೋಜಕ ಬೃಹದ್‍ಭೂಮಿ ಎನಿಸಿಕೊಂಡಿವೆ. ಈ ಪ್ರದೇಶ ಬೆನ್ನೆಲುಬುಳ್ಳ ಪ್ರಾಣಿಗಳ ಅವಶೇಷಗಳ ಗಣಿ ಎನಿಸಿದೆ.

ಭಾರತದಲ್ಲಿ ಆಲಿಗೊಸೀನ್ ಕಾಲ ಹಿಮಾಲಯ ಪರ್ವತದ ಮೇಲೊಗೆತದ ಒಂದನೆಯ ಮತ್ತು ಎರಡನೆಯ ಹಂತಗಳ ಮಧ್ಯಕಾಲ. ಇಯೊಸೀನ್ ಕಲ್ಪದ ಅಂತ್ಯದಲ್ಲಿ ನಿಕ್ಷೇಪಗಳು ಮೇಲೊಗೆಯಲ್ಪಟ್ಟು ಹಿಮಾಲಯ ಪರ್ವತಗಳ ಉದಯಕ್ಕೆ ನಾಂದಿಯಾಯಿತು. ಟೆತಿಸ್ ಸಾಗರದ ನಿಕ್ಷೇಪಗಳು ದಿಂಡುದಿಂಡಾಗಿ ಮಾಡಲ್ಪಟ್ಟುದರಿಂದ, ಸಾಗರ ದಕ್ಷಿಣಕ್ಕೆ ಹಿಂಜರಿದು, ಈಗಿನ ಬಲೂಚಿಸ್ತಾನ ಮತ್ತು ಸಿಂಧ್ ಪ್ರದೇಶದಲ್ಲಿ ಮಾತ್ರ ಉಳಿಯಿತು. ಪೂರ್ವದಲ್ಲಿ ಅಸ್ಸಾಂ ಮತ್ತು ಬರ್ಮಕ್ಕೆ ಮಧ್ಯೆ ಒಂದು ದೊಡ್ಡ ದಿಂಡುಂಟಾಗಿ ಸಾಗರ ಇಬ್ಭಾಗವಾಗಿ ಅಸ್ಸಾಂ ಮತ್ತು ಬರ್ಮಗಳಲ್ಲಿ ದಕ್ಷಿಣದ ಸ್ವಲ್ಪ ಪ್ರದೇಶಗಳಲ್ಲಿ ಮಾತ್ರ ಉಳಿಯಿತು. ಆದ್ದರಿಂದ ಆಲಿಗೊಸೀನ್ ನಿಕ್ಷೇಪಗಳು ಈ ಪ್ರದೇಶದಲ್ಲಿ ಮಾತ್ರ ಕಾಣಬರುತ್ತ.

ಬಲೂಚಿಸ್ತಾನದಲ್ಲಿ ಅನೇಕ ಅಡಿಗಳಷ್ಟು ಮರಳುಶಿಲೆ ಮತ್ತು ಹಸಿರು ಬಣ್ಣದ ಮರಳುಮಿಶ್ರಿತ ಜೇಡುಶಿಲೆಗಳು ನಿಕ್ಷೇಪಗೊಂಡಿವೆ. ಸ್ವಲ್ಪ ಸುಣ್ಣಶಿಲೆಯೂ ಇದೆ. ನಿಕ್ಷೇಪಗಳು ಆಲ್ಪ್ಸ್‍ಪ್ರದೇಶದ ಆಲಿಗೊಸೀನ್ ಕಾಲದ ಪ್ಲಿಸ್ಟ್ ನಿಕ್ಷೇಪವನ್ನು ಹೋಲುವುವು. ಇವುಗಳಿಗೆ ಕೊಜಕ್ ಜೇಡುಶಿಲೆಗಳು ಎಂಬ ಹೆಸರಿದೆ. ಇವುಗಳಲ್ಲಿ ಜೀವ್ಯಶೇಷಗಳಿರುವುದು ಅತ್ಯಲ್ಪ. ಅಪೂರ್ವವಾಗಿ ಸಿಕ್ಕುವ ಶಂಖಗಳ ಆಲಿಗೊಸೀನ್ ಕಾಲವನ್ನು ಸೂಚಿಸುತ್ತವೆ. ಬಲೂಚಿಸ್ತಾನದ ನಿಕ್ಷೇಪಗಳಿಗಿಂತ ಸಿಂಧ್‍ನಲ್ಲಿರುವ ಆಲಿಗೊಸೀನ್ ನಿಕ್ಷೇಪಗಳು ಆಸಕ್ತಿಯನ್ನು ಕೆರಳಿಸುತ್ತವೆ. ಕಿರ್ತಾರ್ ಶಿಲಾಶ್ರೇಣಿಯ ಮೇಲೆ ಅನುರೂಪತೆಯಿಂದ ನಿಕ್ಷೇಪಗೊಂಡಿರುವ ನಾರಿಶ್ರೇಣಿಯ ಕೆಳಭಾಗ ಈ ಕಾಲದ್ದು.

ಅಸ್ಸಾಂನಲ್ಲಿ ನಿಕ್ಷೇಪಗೊಂಡಿರುವ ಆಲಿಗೊಸೀನ್ ಶಿಲೆಗಳಿಗೆ ಬರೈಲ್ ಶಿಲಾಶ್ರೇಣಿ ಎಂಬ ಹೆಸರಿದೆ. ಇವುಗಳಲ್ಲಿ ಜೀವ್ಯಶೇಷಗಳು ಬಲು ವಿರಳ. ಈ ಶ್ರೇಣಿಯ ಮೇಲೆ ಅನನುರೂಪತೆಯಿಂದ ನಿಕ್ಷೇಪಗೊಂಡಿರುವ ಮಯೊಸೀಸ್ ಶಿಲೆಗಳ ಆಧಾರದ ಮೇಲೆ ಇದರ ಕಾಲ ನಿಶ್ಚಯಿಸಲಾಗಿದೆ. ಬರ್ಮದ ಪೆಗು ಶಿಲಾಶ್ರೇಣಿ ಈ ಕಾಲಕ್ಕೆ ಸೇರಿದೆ. ಇವುಗಳಲ್ಲಿ ಜೀವ್ಯಶೇಷಗಳು ಹೇರಳ; ಅಲ್ಲದೆ ಇವು ತೈಲಾಶ್ರಯಗಳ ತವರು.

ಆಲಿಗೊಸೀನ್ ಯುಗ ಪ್ರಾರಂಭವಾಗುವ ವೇಳೆಗೆ ಕ್ರಿಯೊಡಾಂಟ ಶಾಖೆಯ ಒಂದು ಜಾತಿಯನ್ನುಳಿದು ಪ್ರಾಚೀನ ಸಸ್ತನಿಗಳೆಲ್ಲ ಗತವಂಶಿಗಳಾಗಿದ್ದುವು. ಮಾರ್ಸೋಪಿಯ ಮತ್ತು ಕೀಟಾಹಾರಿಗಳು ಪ್ರಾಮುಖ್ಯ ಹೊಂದಿರಲಿಲ್ಲ. ಆದರೆ ಪ್ರಗತಿಪರ ಸಸ್ತನಿಗಳು ಪ್ರಬಲವಾಗುತ್ತಿದ್ದುವು. ಮೂರು ಬೆರಳಿನ ಮೀಸೊಹಿಪ್ಪಸ್ ಮತ್ತು ಮಯೋಹಿಪ್ಪಸ್‍ಗಳು ಅತಿ ಸಾಮಾನ್ಯ ಕುದುರೆಗಳಾಗಿದ್ದುವು. ಓಡುವ, ದ್ವಿಚರ ಮತ್ತು ನಿಜ ಎಂಬ ಮೂರು ಜಾತಿಯ ಖಡ್ಗಮೃಗಗಳಿದ್ದವು. ಮೊದಲ ಎರಡು ಜಾತಿಯ ಖಡ್ಗಮೃಗಗಳು ಆಲಿಗೊಸೀನ್ಕಾ ಲಕ್ಕೆ ಸೀಮಿತಗೊಂಡಿವೆ. ಆದರೆ ಮೂರು ಜಾತಿಗಳಲ್ಲೂ ದೈತ್ಯಾಕಾರಿಗಳು ಉದಯಿಸಿದವು. ದ್ವಿಚರ ಖಡ್ಗಮೃಗಗಳ ಗಾತ್ರ ಗಣನೀಯವಾದುದು. ಬಲೂಚಿತೀರಿಯಂ ಎಂಬ ಖಡ್ಗಮೃಗ ಆಗಿನ ಇತರ ಎಲ್ಲ ಪ್ರಾಣಿಗಳಿಗಿಂತ ದೊಡ್ಡದಾಗಿತ್ತೆಂದು ಹೇಳಬಹುದು. ಈ ಕಾಲದ ಯಾವ ಖಡ್ಗಮೃಗಕ್ಕೂ ಕೊಂಬುಗಳಿರಲಿಲ್ಲ. ಬಲೂಚಿತೀರಿಯಂ ಖಡ್ಗಮೃಗವನ್ನು ಬಿಟ್ಟರೆ ಟೈಟನೊತೀರ್‍ಗಳೇ ದೊಡ್ಡಗಾತ್ರದ ಪ್ರಾಣಿಗಳಾಗಿದ್ದುವು. ಈ ಪ್ರಾಣಿಗಳು ಆಲಿಗೊಸೀನ್ ಯುಗದ ಅಂತ್ಯಕ್ಕೆ ಮೊದಲೇ ಆಶ್ಚರ್ಯಕರವಾದ ರೀತಿಯಲ್ಲಿ ನಿರ್ನಾಮವಾದುವು. ಕ್ರಿಯಾಡಾಂಟಗಳ ವಿಕಾಸದ ಉನ್ನತ ಶಿಖರವನ್ನು ಮುಟ್ಟಿದುವುಗಳಲ್ಲಿ ಒಂಟೆ, ಟಪೀರ್, ಬೀವರ್, ಅಳಿಲು, ಮೊಲ ಮತ್ತು ಇಲಿಗಳೂ ಇದ್ದುವು. ನಾಯಿ, ಕಚ್ಚುವ ಮತ್ತು ಇರಿಯುವ ಬೆಕ್ಕುಗಳು ಈ ಕಾಲದ ಮುಖ್ಯ ಮಾಂಸಾಹಾರಿಗಳು. ಆಲಿಗೊಸೀನ್ ಕಾಲದಲ್ಲಿ ಯುರೋಪಿನ ಸಸ್ಯವರ್ಗ, ಉಷ್ಣವಲಯದ ಗಿಡಮರಗಳು ಮತ್ತು ಶೀತವಲಯದ ಸಸ್ಯಗಳ ಮಿಶ್ರಣದಿಂದ ಕೂಡಿತ್ತು. ಆದರೆ ಯೂರಲ್ ಪರ್ವತ ಪ್ರದೇಶ ಮತ್ತು ಜಪಾನ್‍ಗಳು, ಉತ್ತರ ಅಮೆರಿಕ ಮತ್ತು ಯುರೋಪುಗಳ ಅಕ್ಷಾಂಶಗಳಲ್ಲಿಯೇ ಇದ್ದರೂ ಆ ಪ್ರದೇಶಗಳಲ್ಲಿ ಸಮಶೀತೋಷ್ಣವಲಯದ ಸಸ್ಯವರ್ಗ ಇದ್ದುದು ವ್ಯಕ್ತವಾಗಿದೆ. ಹೀಗೆ ಉತ್ತರಾರ್ಧಗೋಳದ ಪಶ್ಚಿಮದಲ್ಲಿ ಉಷ್ಣವಲಯದ ಸಸ್ಯಪ್ರಾಂತ್ಯವೂ ಪೂರ್ವದಲ್ಲಿ ಸಮಶೀತೋಷ್ಣವಲಯದ ಸಸ್ಯಪ್ರಾಂತ್ಯವೂ ಕಂಡುಬರುತ್ತಿದ್ದುವೆಂದು ತಿಳಿಯಬಹುದು. ಸಿಂಧ್ ಪ್ರಾಂತ್ಯದಲ್ಲಿ ಆಲಿಗೊಸೀನ್ ಶಿಲೆಗಳಲ್ಲಿ ನಮ್ಮುಲೈಟಿಸ್, ಇಂಟರ್‍ಮೀಡಿಯಸ್ ಮತ್ತು ಲೆಪಿಡೊಸೈಕ್ಲಿನ ಡಯಲೇಟ ಎಂಬ ಪೊರಮಿನಿಫೆರ್‍ಗಳ ಅವಶೇಷಗಳು ಹೇರಳವಾಗಿವೆ. ಮೊದಲನೆಯದು ಆಲಿಗೊಸೀನ್ ಸ್ತೋಮದ ಕೆಳಭಾಗದ ವಿಶಿಷ್ಟ ಅವಶೇಷ. ಇವೇ ಅಲ್ಲದೆ ಮಾಂಟ್ಲಿವಾಲಿಷಿಯ ಎಂಬ ಹವಳ, ಸ್ಕೆಜಾಸ್ಟರ್, ಯೂಪೆಟಗಸ್ ಮತ್ತು ಕ್ಲಿಪಿಯಾಸ್ಟರ್ ಎಂಬ (ಎಕಿನಾಯಿಡ್) ಕಂಟಕಚರ್ಮಿಗಳು ಹೆಚ್ಚು ಸಂಖ್ಯೆಯಲ್ಲಿವೆ. ಅಲ್ಲದೆ ಆಸ್ಟ್ರಿಯ, ಲ್ಯೂಸಿನ, ಪೆಕ್ಟೆನ್, ವೀನಸ್ಮುಂ ತಾದ ಮೃದ್ವಂಗಿಗಳೂ ಇದ್ದವು ಎಂದು ತಿಳಿದುಬಂದಿದೆ.

ಆಲಿಡೇಡ್: ಮೋಜಣಿ ಕಾರ್ಯದಲ್ಲಿ ಬಳಸುವ ಒಂದು ಉಪಕರಣ. ದರ್ಶಕಪಟ್ಟಿ ದಿಕ್ಸೂಚಿಕ ಎಂದೂ ಕರೆಯುವುದಿದೆ. ಯಾವುದೇ ದಿಕ್ಕಿನಲ್ಲಿ ನೇರನೋಟದಲ್ಲಿ ಬರುವ ವಸ್ತುವನ್ನು ಸಮತಟ್ಟಿನ ಮೇಜಿನ ಹಾಳೆಯ ಮೇಲೆ ಬಿಂಬಿಸಲು ಇದು ಸಹಾಯಕಾರಿ. ಆದಕಾರಣ ಮೋಜಣಿದಾರರಿಗೆ, ಭೂಮಿತಿ ವಿe್ಞÁನಿಗಳಿಗೆ, ಕ್ಷೇತ್ರಸ್ವರೂಪ (ಟೋಪೊಗ್ರಾಫಿ) ತಿಳಿಯಬಯಸುವವರಿಗೆ ಆಲಿಡೇಡ್ ಅತ್ಯುಪಯುಕ್ತ ಉಪಕರಣ. ಇದನ್ನು ಒಂದು ಚಪ್ಪಟೆ ಮತ್ತು ನೇರವಾದ ಕಬ್ಬಿಣ ಅಥವಾ ಮರದ ಪಟ್ಟಿಯಿಂದ ತಯಾರುಮಾಡಿದೆ. ಈ ಪಟ್ಟಿಯ ಎರಡು ತುದಿಗಳಲ್ಲಿ ಚಿಕ್ಕ ನಿಲುವಿನ ಲೋಹದ ಭಾಗಗಳಿವೆ.