ಪುಟ:Mysore-University-Encyclopaedia-Vol-2-Part-1.pdf/೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗೆರೆಯ ಮೇಲಿರಲು ಸಾಧ್ಯವಾಗುವಂತೆ ಬಿರುಕುಗಳನ್ನು ಹೊಂದಿವೆ. ಆಲಿಡೇಡನ್ನು ಸಮತಟ್ಟು ಮೋಜಣಿಯ ಆಂಗವಾಗಿ ಮೇಲ್ಮೈಯ ವಿಸ್ತೀರ್ಣವನ್ನು ಆಳೆಯಲು ಮತ್ತು ಭೂಪಟವನನ್ನು ತಯಾರಿಸಲು ಉಪಯೋಗಿಸುತ್ತಾರೆ. ಕೆಲವು ವೇಳೆ ಕೋನಗಳನ್ನು ಆಳೆಯಬಲ್ಲ ಸಾಧನಕ್ಕೂ ಆಲಿಡೇಡ್ ಎಂಬ ಹೆಸರಿದೆ. ಆಲಿಡೇದಡ್ ನಲ್ಲಿ ಎರಡು ಬಗೆಯುಂಟು. ಒಂದು ಸಾಮಾನ್ಯ ಆಲಿಡೇದ್,ಮತ್ತೊಂದು ದುರ್ಬೀನು ಆಲಿಡೇದ್. ಸಾಮಾನ್ಯ ಆಲಿಡೇಡನ್ನು ಕ್ಷೇತ್ರರ್ಯದಲ್ಲಿ,ಅದರಲ್ಲಿಯೂ ಪ್ರಾಯೋಗಿಕ ಕೆಲಸದಲ್ಲಿ, ವಿದ್ಯಾರ್ಥಿಗಳು ಬಹಳವಾಗಿ ಬಳಸುತ್ತಾರೆ. ದುರ್ಬೀನು ಆಲಿಡೇಡಿನ ಉಪಯೋಗ ವಿಶೇಷವಾಗಿ ಮೋಜಣಿದಾರರಿಗೆ. ಇದರಲ್ಲಿ ಸಾಮಾನ್ಯ ಆಲಿಡೇಡಿನ ಜೊತೆಗೆ ಒಂದು ದುರ್ಬೀನು ಮತ್ತು ಅಳತೆ ಮಾಡುವ ಗೋಳಾಂಶ ಇವೆ. ಇವುಗಳ ಮೂಲಕ ಎತ್ತರ ಮತ್ತು ಉದ್ದವನ್ನು ಸುಲಭವಾಗಿ ಅಳೆಯಬಹುದು.

ಆಲಿಫಾಂಟ್ ,ಮಾರ್ಗರೇಟ್: ೧೮೨೮-೯೭. ಸ್ಕಾಟ್ಲೆಂಡಿನ ಲೇಖಕಿ. ಕಾದಂಬರಿ, ಜೀವನಚರಿತ್ರೆ ಬರೆದಿದ್ದಾಳೆ.೧೮೫೨ರಲ್ಲಿ ಫ಼್ರಾನ್ಸಿಸ್ ವಿಲ್ಸನ್ ಆಲಿಫಾಂಟ್ ಎಂಬಾತನನ್ನು ಮದುವೆಯಾದಳು. ೧೮೪೯ರಲ್ಲಿ ಪ್ರಕಟವಾದ ಮಿಸಸ್ ಮಾರ್ಗರೆಟ್ ಮೇಟ್ಲೆಂಡ್ ಎಂಬ ಈಕೆಯ ಕಾದಂಬರಿ ಹಾಸ್ಯ,ಕರುಣ ಪಾತ್ರಚನೆಗಳ ಕೌಶಲದಿಂದ ಈಕೆಯ ಖ್ಯಾತಿಯನ್ನು ಹೆಚ್ಚಿಸಿತು. ಚರಿತ್ರೆ, ಜೀವನಕಥೆಗಳನ್ನೂ ಈಕೆ ಬರೆದಿದಾಳೆ. ಅವಸರದಿಂದ ಬರೆಯುತ್ತಿದ್ದುದರಿಂದ ಶೈಲಿ, ವಸ್ತುನಿರೂಪಣೆಗಳಲ್ಲಿ ಅನೆಕ ದೋಷಗಳು ಕಂಡುಬರುತ್ತವೆ. ದಿ ಕ್ರಾನಿಕಲ್ಸ್ ಆಫ಼್ ಕಾರ್ಲಿಂಗ್ ಫ಼ರ್ಡ್ (೧೮೬೩-೭೬),ದಿ ಮಿನಿಸ್ಟರ್ಸ್ ವೈಫ಼್ (೧೮೬೯),ಎಫಿ ಆಗಿಲ್ವಿ (೧೮೮೬), ಕರ್ಸಟೀನ್ (೧೮೯೦), ಎ ಬಿಲೀಗರ್ಡ್ ಸಿಟಿ (೧೮೮೦), ಎ ಲಿಟಲ್ ಪಿಲ್ ಗ್ರಿಂ ಇನ್ ದಿ ಅನ್ ಸೀನ್ (೧೮೮೨) ಎಂಬ ಕಾದಂಬರಿಗಳನ್ನೂ ಸ್ಕೆಚಸ್ ಅಫ಼್ ದಿ ರೇನ್ ಆಫ಼್ ಜಾರ್ಜ್ ]] (೧೮೬೯), ದಿ ಮೇಕರ್ಸ್ ಆಫ಼್ ಫ್ಲಾರೆನ್ಸ್ (೧೮೭೬), ಲಿಟರರಿ ಹಿಸ್ಟರಿ ಆಫ಼್ ಇಂಗ್ಲೆಂಡ್ ೧೭೯೦-೧೮೨೫ (೧೮೮೨), ರಾಯಲ್ ಎಡಿನ್ಬರೂ (೧೮೯೦), ಸೇಂಟ್ ಫ್ರಾನ್ಸಿಸ್ ಆಫ಼್ ಅಸಿಸಿ, ಎಡ್ವರ್ಡ್ ಇರ್ವಿಂಗ್-ಇವೇ ಮುಂತಾದ ಜೀವನಕಥೆಗಳನ್ನೂ ಜೀವನಚರಿತ್ರೆಗಳನ್ನೂ ಈಕೆ ಬರೆದಿದ್ದಾಳೆ.

ಆಲಿಫ್ಯಾಟಿಕ್ ಸಂಯುಕ್ತಗಳು: ಕಾರ್ಬನ್ ಮತ್ತು ಹೈಡ್ರೊಜನ್ ಗಳನ್ನೊಳಗೊಂಡ ಸಂಯುಕ್ತಗಳನ್ನು ವಿಶಾಲವಾಗಿ ಆಲಿಫ್ಯಾಟಿಕ್ ಮತ್ತು ಆರೊಮ್ಯಾಟಿಕ್ ಎಂಬ ಎರಡು ಗುಂಪುಗಳನ್ನಾಗಿ ವಿಂಗಡಿಸಿದೆ. ಆದರೆ ಆಲಿಫ್ಯಾಟಿಕ್ (ಕೊಬ್ಬುಳ್ಳ) ಮತ್ತು ಆರೊಮ್ಯಾಟಿಕ್ (ಸುವಾಸನೆಯುಳ್ಳ) ಎಂಬ ಪದಗಳಿಗೆ ಮೊದಲಿಗೆ ಕೊಟ್ಟ ಆರ್ಥಕ್ಕೆ ಯಾವ ಮಹತ್ತ್ವವೂ ಇಂದು ಇಲ್ಲ. ಆಲಿಫ್ಯಾಟಿಕ್ ಸಂಯುಕ್ತಗಳು ತೆರೆದ ಸರಣಿ (ಓಪನ್ ಚೈನ್). ಸಂಯುಕ್ತಗಳನ್ನೂ ಇವನ್ನು ಹೋಲುವ, ಆದರೆ ಆವರ್ತರಚನೆಯುಳ್ಳ (ಸೈಕ್ಲಿಕ್ ಸ್ಟ್ರಕ್ಚರ್) ಸಂಯುಕ್ತಗಳನ್ನೂ ಒಳಗೊಂಡಿವೆ. ಈಸಂಯುಕ್ತಗಳು ಮುಖ್ಯವಾಗಿ ಸೇರ್ಪಡೆ (ಆಡಿಷನ್) ಮತ್ತು ಆದೇಶಕ್ರಿಯೆಗಳನ್ನು (ಸಬ್ ಸ್ಟಿಟ್ಯೂಷನ್) ಅನುಸರಿಸುತ್ತವೆ. ಸೇರ್ಪಡೆಕ್ರಿಯೆ ಅಣುವಿನಲ್ಲಿ ದ್ವಿಬಂಧ ಮತ್ತು ತ್ರಿಬಂಧಗಳಿರುವೆಡೆಯಲ್ಲಿಯೂ ಆದೆಶ ಕ್ರಿಯೆಗಳು ಇತಡೆಗಳಲ್ಲಿಯೂ ಜರುಗುತವೆ.

ಆಲಿಘ್ಯಾಟಿಕ್ ಸಂಯುಕ್ತಗಳಲ್ಲಿ ಮೀಥೇನ (CH2) ಮೊದಲನೆಯ ಸಂಯುಕ್ತ. ಉಳಿದೆಲ್ಲ ಸಂಯುಕ್ತಗಳೂ ಇದರಿಂದ ಉದ್ಭವವಾಗಿರುವುದೆಂದು ಪರಿಗಣಿಸಬಹುದು. ಹೈಡ್ರೊಕಾಬ೯ನ್ ಸಂಯುಕ್ತಗಳನ್ನು ರಾಸಾಯನಿಕ ಗುಣಗಳ ಆಧಾರದ ಮೇಲೆ 1. ಅಲ್ಕೇನ್. 2. ಆಲ್ಲೀನ್. 3. ಆಲ್ಕೇನ್. 4. ಸೈಕ್ಲಿಕ್ ಆಲಿಫ್ಯಾಟೆಕ್ ಎಂದು ಎಂಗಡಣೆ ಮಾಡಲಾಗಿದೆ.

ಆಲ್ಕೇನ್ ಗುಂಪಿಗೆ ಸೇರಿದ ಸಂಯುಕ್ತಗಳಲ್ಲಿ ಕಾಬ೯ನ್ನಿನ ನಾಲ್ಕು ವೇಲೆನ್ಸಿಗಳೂ ಪರ್ಯಾಪ್ತತೆ (ಸ್ಕಾಚುರೇಷೆನ್) ಹೊಂದಿವೆ. ಈ ಸೆಂಯುಕ್ತಗಳ ಹೆಸರು ಪರ್ಯಾಪ್ತ ಹೃಡೆಪ್ರೀವುಬ೯ನ್ಗೆಳು, ಆಲ್ಲೀನ್ ಮತ್ತು ಆಲೈಶೆನ್ಗಳಲ್ಲಿ ಕಾಬ೯ನ್ನಿನ ಪರಮಾಣುಗಳ ಮೇಲಿನ್ಸಿ ಹೈಡ್ರೊಕಾರ್ಬನ್ ಗಳನ್ನು ಪರ್ಯಾಪ್ತಿಪಡಿಸುವಷ್ಟು ಹೈಡ್ರೊಜನ್ ಪರಮಾಣುಗಳಿಲ್ಲ. ಅದ್ಧರಿಂದ ಅವುಗಳಿಗೆ ಅಪರ್ಯಾಪ್ತ ಹೈಡ್ರೊಕಾರ್ಬನ್ಗಳೆಂದು ಹೆಸರಿದೆ. ಸೈಕ್ಲಿಕ್

ಹೈಡ್ರೊಕಾರ್ಬನ್ ಗಳಲ್ಲಿಯೂ ಈ ಎರಡು ಬಗೆಯ ಸಂಯುಕ್ತಗಳು ಕಾಣಬರುತ್ತೆವೆ.ಆಯಾ ಗುಂಪಿಗೆ ಸೇರಿದ ಆಲಿಘ್ಯಾಟಿಕ್ ಸಂಯುಕ್ತಗಳನ್ನು ಕಾಬ೯ನ್ನಿನ ಸಂಖ್ಯೆಗಳು ಹೆಚ್ಚುವ ರೀತಿಯಲ್ಲಿ ಜೋಡಿಸಿ ಪರೀಕ್ಷಿಸಿದರೆ ಆನುಕ್ರಮವಾದ ಆಣುಗಳ ಸೂತ್ರದಲ್ಲಿ ಒಂದು CH2 ಗುಂಪಿನ ವ್ಯತ್ಯಸ ಕಂಡುಬರುತ್ತದೆ.