ಪುಟ:Mysore-University-Encyclopaedia-Vol-2-Part-1.pdf/೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೮೦ ಆವರ್ತದರ್ಶಕ

ಆವರ್ತದರ್ಶಕ ಬೀರುವ ಬಿಟ್ಟು ಬಿಟ್ಟು ಬರುವ ಬೆಳಕಿನ ಕಂಬಿ, ವಸ್ತುವಿನ ಆವರ್ತವೇಗ ಇವುಗಳ ನಡುವೆ ಸ್ಪಷ್ಟ ಹೊಂದಾಣೆಕ ಆವಶ್ಯ. ಹೀಗಿದ್ದಲ್ಲಿ ನಾವು ನೋಡುವ ವಸ್ತು ನಿಯಸ್ಥಾಕ್ಕೆ ಬರುವಾಗ ಬೆಳಕಿನ ಕಂಬಿ ಅದರ ಮೇಲೆ ಬಿದ್ದು ಆ ವಸ್ತು ಬೆಳಗುವುದು.ಆದ್ದರಿಂದ ವಸ್ತುವಿನ ಆವರ್ತನಾವಧಿಯೂ ಬೆಳಕಿನ ಕಂಬಿಯ ಬಿಟ್ಟು ಬಿಟ್ಟು ಬರುವ ಅಂತರಾಯಿಕತೆಯ ಅವಧಿಯೂ ಸಮಾನವಾಗಿವೆ. ಸೆಕೆಂಡಿಗೆ ಇಪ್ಪತ್ತೈದು (ಅಥವಾ ಹಚ್ಚು) ಸಲ ಬೆಳಗಲ್ಪಟ್ಟ ಆವರ್ತನ ವಸ್ತುವಿನ ಪ್ರತಿಬಿಂಬ ನೇತ್ರಪಟಲದ ಮೇಲೆ ನಿಶ್ಚಲವಾಗಿರುತ್ತದೆ.

ಇಂದಿನ ಆವರ್ತದರ್ಶಕಗಲ್ಲಿ ಉಪಯೋಗಿಸುವ ವಿಧಾನವನ್ನು 1838ರಲ್ಲಿ ಜೋಸೆಫ್ ಆಯಾಂಟನಿ ಫರ್ಡಿ ನ್ಯಾಂಡ್ ಪ್ಲೇಟೊ ಮೊಟ್ಟ ಮೊದಲು ಬಳಸಿದನೆಂದು ಹೇಳುತ್ತಾರೆ. ಫ್ಯಾರಡೆ ಸಹ ಸ್ವಲ್ಪ ಹೆಚ್ಚು ಕಡಿಮೆ ಇದೇ ರೀತಿಯ ಉಪಕರಣವನ್ನು ವರ್ಣಿನಿದ್ದಾನೆ.1866ರಲ್ಲಿ ಆಗಸ್ಟ್ ಟಾಪ್ಪರ್ ಈ ಆವರ್ತದರ್ಶಕದ ಜೋಡಣೆ ಮತ್ತು ಉಪಯೋಗಗಳನ್ನು ವಿಮರ್ಶಿನಸಿ ಮೊದಲ ಬಾರಿಗೆ ವಿಜ್ಞಾನಿಗಳ ಗಮನವನ್ನು ಸೆಳೆದ. ಅವನ ಕಾಲದಿಂದ ವೈಜ್ಞಾನಿಕ ಅನ್ವೇಷಣೆಗಳಲ್ಲಿ ಮತ್ತು ಕೈಗಾರಿಕೋದ್ಯಮಗಳಲ್ಲಿ ಆವರ್ತದರ್ಶಕಗಳ ಉಪಯೋಗ ಪ್ರಾರಂಭವಾಯಿತು.

ಮೊದಮೊದಲಿನ ಆವರ್ತದಸರ್ಶಕಗಲ್ಲಿ ಆವ್ಯಾಹತ ವೀಕ್ಷಣಿ (ಕಂಟಿನ್ಯುಯಸ್ ಅಬ್ಸರ್ವೇಷನ್) ಮತ್ತು ಅನವ್ಯಾಹತ ಬೆಳಕಿನಲ್ಲಿ ವೀಕ್ಷಣಿ ಎಂಬ ಎರಡು ಪದ್ಧತಿಗಳು ರೂಢಿಯಲ್ಲಿದ್ದುವು. ವಸ್ತುಕಂಪನದಿಂದ ಶಬ್ದೋತ್ಪತ್ತಿಯಾಗುವ ವಿಷಯದ ಮೇಲೆ ಅನ್ವೇಷಣ ನಡೆಯುತ್ತಿದ್ದಾಗ ಆವರ್ತದರ್ಶಕದ ಉಪಯೋಗ ಮೊದಲಬಾರಿಗೆ ಆಯಿತು. ಮುಂದೆ ವಸ್ತುಕಂಪನವನ್ನು ಉಪಯೋಗಿಸಿಕೊಂಡ ಆವರ್ತದರ್ಶಕಗಳನ್ನು ಚಲನೆಯಲ್ಲಿರುವ ಯಂತ್ರಭಾಗಗಳ ಪರಿಶೀಲನೆಯಲ್ಲಿಯೂ ಕೈಗಾರಿಕೋದ್ಯಮಗಳಲ್ಲಿ ತಯಾರಾಗುವ ವಸ್ತುಗಳನ್ನು ತಯಾರಿಕೆ ನಡೆಯುತ್ತಿದ್ದಾಲೇ ಪರೀಕ್ಷಿಸಲೂ ಬಳಸಿದರು.

ಮೊದಲನೆಯ ಚಿತ್ರದಲ್ಲಿ ಆಡ್ಡಕಂಪನ ಸಂಖ್ಯೆ ಚಕ್ರಭ್ರಮಣ ವೇಗಕಕ್ಕೆ ಅನುಗುಣವಾಗಿ ಅಳವಡಿಕೆಯಾಗಿದೆ. A ಭಾಗ ಕಣ್ಣಿದುರಿಗೆ ಬರುವ ವೇಳೆಗೆ ಸರಿಯಾಗಿ ಅಡ್ಡ್ ಕಂಪನದಲ್ಲಿರುವ ತಟ್ಟೆಯ ಸೀಳಗಂಡಿಯೂ ಆ ನೇರಕ್ಕೆ ಬಂದು, ಚಕ್ರದ A ಭಾಗವನ್ನು ಕಣ್ಣಿಗೆ ಪ್ರತಿಸಲವೂ ಪ್ರದರ್ಶನ ಮಾಡುತ್ತದೆ. ಇದರಲ್ಲಿ ಕಂಪನ ಸಂಖ್ಯೆ 25ಕ್ಕೂ ಬಹುಶಃ ಜಾಸ್ತಿಯಾಗಿಯೇ ಇರುವುದರಿಂದ ಮತ್ತು ಸೆಕೆಂಡಿಗೆ 50ಕ್ಕೂ ಹೆಚ್ಚು ಬಾರಿ ಒಂದೇ ಸ್ಥಿತಿಯಲ್ಲಿರುವ ಭಾಗ ಕಣ್ಣೆಗೆ ಕಂಡುಬರುವುದರಿಂದ ಆ ಭಾಗ ನಿಶ್ಚಲವಾಗಿದ್ದಂತೆ ವಿವರಗಳನ್ನು ಸ್ಪಸ್ಟವಾಗಿ ಕಾಣಬಹುದು. ಇಲ್ಲಿ ಅವ್ಯಾಹತ ದೀಪವನ್ನು ಬಳಸಿದೆ.

ಎರಡನೆಯ ಚಿತ್ರದಲ್ಲಿ ಕಣ್ಣು ನೇರವಾಗಿ ಸತತವಾಗಿ ಯಂತ್ರದಿಂದ ಹೊರಬೀಳುವ ತಯಾರಿಕೆಯನ್ನು ಗಮನಿಸುತ್ತಿರುವಾಗ ಸುತ್ತಿಗೆಗಳು ಹಿಂದೆ ಸರಿಯುವ ವೇಳೆಗೆ ಸರಿಯಾಗಿ ಪ್ರತಿಸಲವೂ ದೃಶ್ಶಕ್ಷೇತ್ರ ಬೆಳಗಲ್ಪಡುತ್ತದೆ. ಹೀಗೆಯೇ ಯಾವ ಕಾರ್ಯಮುಖದಳಲ್ಲಿ ಬೇಕಾದರೆ ಅಲ್ಲಿ ಯಂತ್ರವನ್ನಾಗಲೀ ತಯಾರಿಕ ವಸ್ತುವನ್ನಾಗಲೀ ಗಮನಿಸಬಹುದು.

ಚಲಿಸುತ್ತಿರುವ ಬಲು ಚಿಕ್ಕ ಯಂತ್ರಬಭಾಹಗಗಳನ್ನು ಆವರ್ತದರ್ಶಕಗಳ ಸಹಾಯದಿಂದ ಸೆರೆಹಿಡಿದು ಪ್ರತಿಬಿಂಬವನ್ನು ಎಷ್ಟು ಬೇಕಾದರಷ್ಟು ವರ್ಧಿಸಿ ಪ್ರತಿಯೊಂದು ಬಿಂದುಗಳ ಸ್ಥಿತಿಯನ್ನು ಪರಿಶೀಲಿಸಬಹುದು.

ಆವರ್ತದರ್ಶಕ ವೀಕ್ಷಣೆಗಳಿಂದ ಕಾರ್ಯಾನಿರತವಾಗಿರುವ ಯಂತ್ರಭಾಗಗಳ ಸ್ಥಿತಿ ನಿಷ್ಕ್ರಿಯಸ್ಥಿತಿಗಿಂತ ಭಿನ್ನವಾಗಿರುವುದು ತಿಳಿದುಬಂದಿರುವುದಲ್ಲದೆ, ಸನ್ನಿವೇಶಕ್ಕೆ ತಕ್ಕಂತೆ ಅವುಗಳಲ್ಲಿ ಆಗುವ ವ್ಯತ್ಯಾಸಗಯಳು, ಒತ್ತಡವನ್ನು ತೀವ್ರವಾಗಿ ಅನುಭವಿಸುವ ಭಾಗಗಳು, ಒತ್ತಡವನ್ನು ಸ್ವಲ್ಪವೂ ಅನುಭವಿಸದೆ ಇರುವ ಭಾಗಗಳು ಇತ್ಯಾದಿಗಳ ವಿವರಗಳು ತಿಳಿದುಬರುತ್ತವೆ.ಇದರಿಂದ ವೈಜ್ಞಾನಿಕ ಕುತೂಹಲ ತೃಪ್ತಿಗೆ ಹೆಚ್ಚು ಅನ್ವೇಷಣೆಗಳು ನಡೆಯುವುದಕ್ಕೆ ಅವಕಾಶವಾಗುವುದರ ಜೊತೆಗೆ ಕೈಹಾರಿಕೆಯಲ್ಲಿ ಹೆಚ್ಚು ದಿನ ಬಾಳಿಕೆ ಬರುವ ಮತ್ತು ದಾರ್ಢ್ಯ್ ಮತ್ತು ದಕ್ಷತೆಗೆ ಬೇಕಾದ ಬಿಡಿಭಾಗಗಳಿರುವ ಯಂತ್ರಗಳನ್ನು ತಯಾರಿಸಲು ಸಾಧ್ಯವಾಗುವುದು.

ಆವರ್ತದರ್ಶಕದ ಸಮರ್ಥಕ್ರಿಯೆಗೆ, ಅದರ ಪ್ರತಿಯೊಂದು ಬಿಡಿಭಾಗದ ಕಾರ್ಯ ಪ್ರತ್ಯೋಕವಾಗಿಯೂ ಸಾಮೂಹಿಕವಾಗಿಯೂ ಅತ್ಯಂತ ಪರಿಷ್ಕೃತವಾಗಿರಬೇಕು.ಇಂಥ ಹೊಂದಾಣಿಕೆಯಲ್ಲಿ ಸ್ವಲ್ಪ ವ್ಯತ್ಯಾಸವಿದ್ದರೂ ದೃಶ್ಯ ನಿಶ್ಚಲವಾಗಿ ಕಾಣುವ ಬದಲು ನಿಧಾನವಾಗಿ ಚಲಿಸುವಂತೆ ಕಾಣುತ್ತದೆ. ಅನವ್ಯಾಹತ ದೀಪಗಳನ್ನು ಉಪಯೋಗಿಸುವ ಆವರ್ತದರ್ಶಕದಿಂದ ಒಂದು ಆವರ್ತಿಸುವ ವಸ್ತುವನ್ನು ನೋಡುತ್ತಿರುವಾಗ ದೀಪ ಹೊತ್ತಿ ಆರುವ ಕಾಲಾವಕಾಶವನ್ನು ವ್ಯತ್ಯಾಸ ಮಾಡುತ್ತಿದ್ದರೆ ಆ ವಸ್ತು ಬೇರೆ ಬೇರೆ ಮಂದ ವೇಗಗಳಿಂದ ಚಲಿಸುತ್ತಿರುವಂತೆ ಕಾಣುತ್ತದೆ. ಈ ವೇಗಗಳೆಲ್ಲವೂ ವಸ್ತುವಿನ ನಿಜವೇಗಕ್ಕಿಂತ ಕಡಿಮೆಯೇ ಇದ್ದರೂ ಪರಿಶೀಳಲನೆಗೆ ಆಡಚಣೆ ತರುತ್ತವೆ.

ಚಲನಚಿತ್ರಗಳಲ್ಲಿ ಈ ಮೇಲೆ ಹೇಳಿದಂತೆ ಹೇಳಿದಂತೆ ಹೊಂದಾವಣೆ ಬೇಕಾದಂತೆ ವ್ಯತ್ಯಾಸಮಾಡಿ ವಿಸ್ಮಯಕರ ಹಾಗೂ ತಮಾಷೆಯ ಸನ್ನಿವೇಶಗಳು ಕಾಣುವಂತೆ ಮಾಡುತ್ತಾರೆ. ಉದಾಹರಣೆಗೆ, ಆಕ್ಷದಮೇಲೆ ತಿರುಗುತ್ತಲಿರುವ ಮೋಟರ್ ಗಾಡಿಯೊಂದರ ಚಕ್ರವನ್ನು ಬೇಕು ಬೇಕಾದ ವೇಗಗಳಲ್ಲಿ ಹಿಂದಕ್ಕೆ ಅಥವಾ ಮುಂದಕ್ಕೆ (ಮೇಲಕ್ಕೆ ಮತ್ತು ಕೆಳಕ್ಕೆ ಸಹ ಯಾವ ದಿಕ್ಕಿನಲ್ಲಿ ಬೇಕಾದರಲ್ಲಿ) ಚಲಿಸುವಂತೆ ತೆರೆಯಮೇಲೆ ಚಿತ್ರಪ್ರದರ್ಶನ ಮಾಡಲು ಸಹಾಯವಾಗುವಂತೆ ಛಾಯಾಗ್ರಹಣ ಮಾಡಬಹುದು. ಚಕ್ರದ ಭ್ರಮಣಸಂಖ್ಯೆ ಛಾಯಾಗ್ರಾಹಕದ ಕವಾಟ ಮುಚ್ಚಿ, ತೆರೆಯುವ ಆವರ್ತ ಸಂಖ್ಯೆಗೆ ಸಮನಾದರ ಚಕ್ರ ನಿಶ್ಚಲವಾಗಿದ್ದಂತೆ ತೆರೆಯ ಮೀಲೆ ‍ಚೆತ್ರ ಬೀಳುವುದು. ಭ್ರಮಣಸಂಖ್ಯೆ ಹೆಚ್ಚಾದರೆ ಚಕ್ರ ಮುಂದೋಡುವಂತೆ, ಕಡಿಮೆಯಾದರೆ ಹಿಂದೋಡುವಂತೆ ಚಿತ್ರದಲ್ಲಿ ಕಾಣುವುದು (ಇವೆರಡು ಸಂಖ್ಯೆಗಳೊ ಸೆಕೆಂಡಿಗೆ 25ಕ್ಕೆ ಕಡಿಮೆ ಇರಕೊಡದು ಅಷ್ಷೆ). ಇದಕ್ಕೆ ಸರಿಯಾಗಿ ಅನವ್ಯಾಹತವಾಗುವ ದೀಪವೊ ಇದ್ದರೆ, ಕವಾಟ ಮುಚ್ಚಿ, ತೆರೆಯುವುದರಲ್ಲಿ ಬಂದ ತಪ್ಪುಗಳು ಸರಿಹೋಗುವುವು.

ಇದರಿಂದ ಚಲನಭಾಗ ಪರೀಕ್ಷೆಗಾಗಲಿ ಸಿನಿಮಾ ಛಾಯಾಗ್ರಣ ಉಪಯೋಗಕ್ಕಾಗಲಿ, ಚಳಕ ಪ್ರದರ್ಶನಕ್ಕಾಗಲಿ ಹೊಂದಾಣಿಕ ನಿಯಂತ್ರಣ ಮಾಡಲು ಸಾಧ್ಯವಾಗುವ ಮತ್ತು ಉಜ್ಜ್ವಲ ಪ್ರಕಾಶ ಬೀರುವ ದೀಪಗಳು ಬೇಕು. ಮೊದಲು ಉಪಯೋಗಿಸುತ್ತಿದ್ದ ಆವರ್ತದರ್ಶಕಗಳಲ್ಲಿನಂತೆ ಈಗಿನ ಸಂದರ್ಭಗಳಲ್ಲಿ ಯಂತ್ರಿಕವಾಗಿ ದೀಪದರ್ಶನ ಸಂಖ್ಯೆಯನ್ನು ನಿಯಂತ್ರಿಸಿದರೂ ದೊರೆಯುವ ಪ್ರತಿಫಲ ಅಷ್ಟು ಸಮರ್ಪಕವಾಹಗಿರುವುದಿಲ್ಲಿ. ಹೆಚ್ಚು ವಿಭವಾಂತರ ವಿದ್ಯುತ್ಪ್ರವಾಹದ ಅಂತರ ಕಡಿಮೆಯಿದ್ದಾಗ ಎರಡು ವಿದ್ಯುದ್ಧ್ರುವಗಳ ನಡುವೆ ತೇಜೋಮಯವಾದ ನಿಯಂತ್ರಿಸುವುದು ಬಲುಕಷ್ಟ. ಜೊತೆಗೆ ಕಿಡಿಯಿಂದ ವಿವಿಧಾ ಅನಿಲೋತ್ಪತ್ತಿಯಾಗುವುದರಿಂದ ಆದರ ಬೆಳಕನ್ನು ಪಾರದರ್ಶಕಗಳ ಮೂಲಕ ಉಪಯೋಗಿಸಬೇಕಾಗುತ್ತದೆ. ಇವು ಪ್ರಾರಂಭದಲ್ಲಿ ಸರಿಯಾಗಿದ್ದರೂ ಬಹುಬೇಗ ಅನಿಲದ ಹೊಗೆಯಿಂದ ಮಸಕಾಗುವುದರಿಂದ ಪುನಃ ಪುನಃ ಮಧ್ಯೆ ಮಧ್ಯೆ ಶುಚಿಪಡಿಸುವ ಕೆಲಸ ಬೇರೆ ಆಗಬೇಕಾಗುತ್ತದೆ. ಈ ತೊಂದರೆಗಳಿಂದ ಪಾರಾಹಗಲು ವಿದ್ಯುದ್ವಿಸರ್ಜಕ ಕೊಳವೆಗಳನ್ನು (ಎಲೆಕ್ಟ್ರಿಕ್ ಡಿಸ್ ಚಾರ್ಜ್ ಟ್ಯೂಬ್ಸ್) ಉಪಯೋಗಿಸುತ್ತಾರೆ. ಕಾಲಕಾಲಕ್ಕೆ ಸರಿಯಾಗಿ ಇವುಗಳ ಧ್ರುವಗಳಲ್ಲಿ ಅತಿ ಹೆಚ್ಚಿನ ವಿಭವಾಂತರ ಒಂದು ವಿಭವಾಂತರ ಉಂಟಾಗಿ ಉಜ್ಜ್ವಲ ಕಾಂತಿಯಿಂದ ವಿದ್ಯುದ್ವಿಸರ್ಜನೆಯಾಗುವಂತೆ ನಿಯಂತ್ರಿಸುವ ಒಂದು ವಿದ್ಯುನ್ಮಂಡಲವನ್ನು ಜೊತೆಗೆ ಉಪಯೋಗಿಸುತ್ತಾರೆ. ಈ ಮಂಡಲಸಹಿತವಾದ ದೀಪವನ್ನು ಅವರ್ತದರ್ಶಕ ದೀಪಗಳೆಂದು ಕರೆಯಲಾಗಿದೆ. ಈ ರೀತಿಯ ದೀಪವೊಂದನ್ನು ಚಿತ್ರ 3ಲ್ಲಿ ಕೊಡಲಾಗಿದೆ.

ಇದರ ಮಂಡಲದಲ್ಲಿನ ವಿಸರ್ಜಕ ಕೊಳವೆಯಲ್ಲಿ ನಾಲ್ಕು ವಿದ್ಯುನ್ನಾಳಗಳಿದ್ದು (ಎಲೆಕ್ಟ್ರೋಡ್ಸ್) ಅವರಣದಲ್ಲಿ ನಿಯಾನ್ ಅನಿಲವಿದೆ. ಇದನ್ನು ನಿಯಾನ್ ಥೈರಾಟ್ರಾನ್ ಎಂದು ಕರೆಯುತ್ತಾರೆ. ಇವರ ವಿದ್ಯುದ್ವಿಸರ್ಜಕ ಸಂಖ್ಯ್ ಮಿನಿಟಿಗೆ 600-14,140; ಇದನ್ನು ಬೇಕಾದಂತೆ ನಿಯಂತ್ರಿಸಬಹುದು. ಈ ದೀಪ ಬೆಳಗುವ ಕಾಲ 40*1೦-3 ಸೆಕೆಂಡ್.