ಪುಟ:Mysore-University-Encyclopaedia-Vol-2-Part-1.pdf/೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆವರ್ತನ - ಆವರ್ತಮಾರುತ

ಇದರಲ್ಲಿ C, ಮೊದಲಾಗಿ 6 ಸಾಂದ್ರಕಗಳು (ಕಂಡೆನ್ನರ್ಸ್) ನಿಯಂತ್ರಣ ಸಾಧನಗಳು. ಆವರ್ತದರ್ಶಕ ದೀಪಗಳು ಚಲನಚಿತ್ರ ಛಾಯಾಗ್ರಹಣದಲ್ಲಿ ಒಂದು ಹೊಸ ಅಧ್ಯಾಯವನ್ನೇ ತೆರೆದಿವೆ. ಮೊದಲಲ್ಲಿ ಈ ದೀಪ ಮಿನುಗುವಿಕೆ ಮತ್ತು ಛಾಯಾಗ್ರಾಹಕದ ಕವಾಟ ತೆರೆಯುವಿಕೆ ಎರಡು ಒಟ್ಟಿಗೆ ನಡೆಯುವಂತೆ ಕಾಲ ಹೊಂದಾಣಿಕೆ ಅಗತ್ಯವಾಗಿದ್ದರಿಂದ ಕಷ್ಟ ಕೊಡುತ್ತಿತ್ತು. ಈ ಚಲನಚಿತ್ರಗ್ರಹದಲ್ಲಿ ಅಭಿನಯದ ದೃಶ್ಯ ನಡೆಯುವಾಗ ಅದರ ಚಿತ್ರಗಳನ್ನು ಸೆಕೆಂಡಿಗೆ ಸು. 25 ಚಿತ್ರಗಳನ್ನು ಸಮವೇಗದಲ್ಲಿ ತೆಗೆದುಕೊಂಡು, ಪುನಃ ಅದೇ ವೇಗದಲ್ಲಿ ಚಿತ್ರಗಳನ್ನು ತೆರೆಯಮೇಲೆ ಪ್ರದರ್ಶಿಸಿದರೆ, ಆಗ ಆ ಅಭಿನಯ ತೆರೆಯಮೇಲೆ ಪ್ರದರ್ಶಿತವಾಗುತ್ತದೆ. ಇದಕ್ಕಾಗಿ ಚಿತ್ರಗ್ರಹಣ ಮಾಡುವಾಗ ಛಾಯಾಗ್ರಾಹಿ ತಟ್ಟೆ ಒಂದಾದ ಮೇಲೊಂದು ದೃಶ್ಯಕ್ಕೆ ಎದುರಾಗಿ ಬರಬೇಕಲ್ಲದೆ ಒಂದು ತಟ್ಟೆ ಚಿತ್ರ ಚೌಕಟ್ಟು ಸಂಪೂರ್ಣವಾಗಿ ಅಲ್ಲಿಂದ ಸರಿದು ಮತ್ತೊಂದು ಅದರ ಜಾಗವನ್ನು ಆಕ್ರಮಿಸಿಕೊಂಡ ಮೇಲೆ ಛಾಯಾಗ್ರಾಹಕದ ಕವಾಟ ತೆರೆಯಲ್ಪಟ್ಟು ದೃಶ್ಯದ ಚಿತ್ರ ಗ್ರಹಣವಾಗುತ್ತದೆ. ಆವರ್ತದರ್ಶಕ ದೀಪಗಳ ನಿರ್ಮಾಣ ಮಾಡುವ ಮೊದಲು ಈ ಕಾರ್ಯಗಳು ಸಂಪೂರ್ಣ ಹೊಂದಾಣಿಕಯಲ್ಲಿ ನಡೆಯುವುದು ಅಸಾಧ್ಯವಾನಗಿ, ಚಲನಚಿತ್ರ ಪ್ರದರ್ಶಿತವಾದಾಗ ಮಧ್ಯೆ ಮಧ್ಯೆ ದೃಶ್ಯಗಳು ಮಸುಕಾಗುವುದು, ಅಸಂಬದ್ಧವಾಗಿ ಕಾಣುವುದು ಮತ್ತು ಅಸಮಂಜವಾಗುವುದು-ಇವು ಸಾಧಾರಣವಾಗಿದ್ದುವು. ಆವರ್ತದರ್ಶಕ ದೀಪಗಳು ಬಂದಮೇಲೆ, ಅದೂ 10 ವರ್ಷಗಳಿಂದ ಈಚೆಗೆ ಚಲನಚಿತ್ರ ಛಾಯಾಗ್ರಾಹಕದ ಪ್ರವೇಶದ್ವಾರದ ಕವಾಟವನ್ನೇ ತ್ಯಜಿಸಲಾಗಿದೆ. ಇದಕ್ಕೆ ಬದಲಾಗಿ ಛಾಯಾಗ್ರಾಹಕದ ಒಂದು ಚೌಕಟ್ಟು ಸರಿದು ಇನೊಂದು ಅದರ ಜಾಗಕ್ಕೆ ಸರಿಯಾಗಿ ಬಂದೊಡನೆ ಮಿಂಚುವಂತೆ ಆವರ್ತದರ್ಶಕ ದೀಪವನ್ನು ನಿಯಂತ್ರಿಸಬಹುದು. ಇತ್ತೀಚೆಕೆ ಈ ಛಾಯಾಗ್ರಾಹಿ ಚೌಕಟ್ಟುಗಳನ್ನು ಸರಿಸುವ ಮತ್ತು ದೀಪವನ್ನು ಮಿಂಚಿಸುವ ಕಾರ್ಯಗಳೆರದಡೂ ಒಂದೇ ವಿದ್ಯುನ್ಮಂಡಲದಿಂದ ಕಾಲ ಹೊಂದಾಣಿಕೆಯಲ್ಲಿ ನಡೆಯಿಸಲ್ಪಡುತ್ತಿವೆ. ಇದರಿಂದ ಪ್ರದರ್ಶಿತ ಚಲನಚಿತ್ರಗಳಲ್ಲಿ ಹೊಂದಾಣಿಕೆಯ ನ್ಯೂನತೆಗಳಿಂದ ಆಗುತ್ತಿದ್ದ ಆಭಾಸಗಳು ಕಾಣುವುದಲ್ಲ.

ವ್ಯವಹಾರಸೌಲಭ್ಯಕ್ಕಾಗಿ ಅಮೆರಿಕದ ಮೆಸಾಚುಸೆಟ್ಸನಲ್ಲಿಯ ವೈಜ್ಞಾನಿಕ ಕಾರ್ಯಾಲಯದ ಹೆರಾಲ್ಡ್ ಎಡ್ಗರಟನ್ ಮತ್ತು ಅವರ ಸಂಗಡಿಗರು ಅನೇಕ ಸರಳ ವಿದ್ಯುನ್ಮಂಡಲಗಳಿಂದ ನಿಯಮಿತವಾದ ಆವರ್ತದರ್ಶಕ ದೀಪಗಳನ್ನು ನಿರ್ಮಿಸಿದ್ದಾರೆ. ಇವುಗಳಲ್ಲಿ ಒಂದೇ ಬಾರಿ ಮಿಂಚು ಉರಿದು ಹೋಗುವ, ಛಾಯಾಚಿತ್ರಿಗ್ರಹಣಕ್ಕೆ ಉಪಯುಕ್ತವಾದ ಅತಿ ಪ್ರಕಾಶದ ದೀಪಗಳಿಂದ ಹಿಡಿದು ಮೇಲೆ ಹೇಳಿದ ಚಲನಚಿತ್ರಗ್ರಹಣ ಮತ್ತು ಪ್ರದರ್ಶನಗಳಿಗೆ ಉಪಯುಕ್ತವಾಗುವ ಸೆಕೆಂಡಿಗೆ 1,500 ಬಾರಿ ಮಿಂಚುವ ದೀಪಗಳವರೆಗೆ, ನಾನಾ ಸಂದರ್ಭಗಳಲ್ಲಿ ಉಪಯೋಗಕ್ಕೆ ಬರುವ ವಿವಿಧ ಆವರ್ತದರ್ಶಕ ದೀಪಗಳಿವೆ. ಇವುಗಳಲ್ಲಿ ಅತಿ ವೇಗ ಚಲನೆಯಲ್ಲಿರುವ ವಸ್ತುಗಯಳ ಚಲನ ಛಾಯಾಗ್ರಹಣವನ್ನು ಮಾಡಿ, ಮಂದವೇಗದಲ್ಲಿ ಅದರ ಚಿತ್ರವನ್ನು ತೆರೆಯಮೇಲೆ ಪ್ರದರ್ಶಿಸಿ, ಚಲನಯ ವಿವಿಧ ಸ್ಥಿತಿಯಲ್ಲಿನ ವಿವರಗಳನ್ನು ಪರೀಕ್ಷಿಸಲು ಸಹಾಯ ಮಾಡುವ ವಿವಿಧ ದೀಪಗಳಿವೆ. ಹೀಗೆಯೇ ಹಾರಾತ್ತಿರುವ ಗುಂಡು, ಜೆಟ್ ವಿಮಾನ ಮುಂತಾದವುಗಳ ಚಲನೆಯ ಪರಿಶೀಲನೆಗೆ 10-3 ಸೆಕೆಂಡಿಗೊಮ್ಮೆ ಮಿಂಚುವ ದೀಪಗಳು, ಶಬ್ದವೇಗ ಮತ್ತು ಕ್ಷಿಪಣಿ ವೇಗಗಳ ಅಧ್ಯಯನಕ್ಕೆ 10-3 ಸೆಕೆಂಡಿಗೊಮ್ಮೆ ಮಿಂಚುವ ದೀಪಗಳು ಉಪಯೋಗಕ್ಕೆ ಒದಗಿವೆ. ಕ್ಷಣಿಕವಾದರೂ ಸೂರ್ಯನಷ್ಟು ಬೆಳಕನ್ನು ಚೆಲ್ಲಿ ಆರುವ ಆವರ್ತದರ್ಶಕ ದೀಪಗಳು ಕೂಡ ಈಗ ನಿರ್ಮಿತವಾಗಿವೆ. ಇವುಗಳ ಉಪಯೋಗ ವಿಜ್ಞಾನ ಮತ್ತು ಕೈಗಾರಿಕೆಗಳಲ್ಲಿ ಹೆಚ್ಚುತ್ತಲೂ ಇವೆ.

ಯಂತ್ರಗಳ ವೇಗ ಆಳೆಯುವ ಉಪಕರಣದ ಹೆಸರು ವೇಗಮಾಪಕ (ಟ್ಯಾಕೋ ಮೀಟರ್). ಇದನ್ನು ಯಂತ್ರಕ್ಕೆ ಜೋಡಿಸಿರುವುದರಿಂದ ಯಂತ್ರ ಇದರ ಭಾರವನ್ನು ಹೊತ್ತಿರುವುದು. ದೊಡ್ಡ ಯಂತ್ರಗಳಿಗೆ ಈ ಭಾರ ಹೆಚ್ಚೇನೂ ಅಲ್ಲ; ಪರಿಣಾಮಕಾರಿಯೂ ಅಲ್ಲ. ಆದರೆ ಒಂದು ಅಶ್ವಸಾಮರ್ಥ್ಯಕ್ಕಿಂತ ಕಡಿಮೆ ಸಾಮರ್ಥ್ಯದ ಯಂತ್ರವನ್ನು ಅಳೆಯಲು ವೇಗಮಾಪಕವನ್ನು ಅದರ ಮೇಲೆ ಹೇರಿದರೆ ಯಂತ್ರದ ಕೆಲಸವೇ ಬದಲಾಗಬಹುದು. ಇಂಥಲ್ಲಿ ಯಂತ್ರವನ್ನು ಅವಲಂಬಿಸದ, ಅದರೂ ಅದರ ವೇಗವನ್ನು ನ ಷ್ಟವಾಗಿ ಆಳೆಯುವ ಒಂದು ಹೊಸ ವೇಗಮಾಪಕ ಬೇಕು. ಅಂಥ ಉಪಕರಣದ ಹೆಸರು ಆವರ್ತಕದದರ್ಶಕ ವೇಗಮಾಪಕ-ಯಾಂತ್ರಿಕವಾಗಿಯಾಗಲೀ ವಿದ್ಯುಚ್ಛಕ್ತಿಗಾಗಲೀ-ಹೊಂದಿಕೊಂಡಿಲ್ಲ. ಆದ್ದರಿಂದ ಯಂತ್ರದ ವೇಗವನ್ನು ಎಂಥ ಸನ್ನಿವೇಶದಲ್ಲಿಯೂ ಈ ಉಪರಣದ ಸಹಾಯದಿಂದ ಅಳೆಯಬಹುದು.

ಆವರ್ತನ: ಯಾವುದೇ ನಿಯತಕಾಲಿಕ ವಿದ್ಯಮಾನವನ್ನು ವಿವರಿಸುವಾಗ ಈ ಪದವನ್ನು ಬಳಸಲಾಗುತ್ತದೆ. ಉದಾಹರಣೆಗೆ ಲೋಲಕದ ಆವರ್ತನ. (ಎಸ್.ಎನ್.ಕೆ.)

ಆವರ್ತನ, ಪರಿಭ್ರಮಣೆ: ಭೂಮಿ ಅಥಾವ ಯಾವುದೇ ಆಕಾಶಕಾಯ ತನ್ನ ಅಕ್ಷದ ಮೇಲೆ ಬುಗುರಿಯಂತ ಸುತ್ತುವ ವಿದ್ಯಮಾನಕ್ಕೂ ಆವರ್ತನೆ ಅಥಾವ ಭ್ರಮಣೆ ಎಂಬ ಹೆಸರಿದೆ. ಉದಾ: ಭೂ ಆವರ್ತನಾವಧಿ 24 ಗಂಟೆಗಳು.

ಹಗಲಿನ ಎರಡನೆ ಅರ್ಧದ ಪ್ರಾರಂಭಕಾಲ. ಸೂರ್ಯನಿಗೆ ಅಭಿಮುಖವಾದ ನಮ್ಮ ಶರೀರ ಅಥಾವ ಪದಾರ್ಥದ ನೆರಳು ಪಶ್ಚಿಮದಿಂದ ಪೂರ್ವದಿಕ್ಕಿಗೆ ತಿರುಗುವ ಸಮಯ. ಈ ಕಾಲದ ಪೂರ್ವಭಾಗ ಪೂರ್ವಾಹ್ನ, ಪಶ್ಚಿಮ ಭಾಗ ಅಪರಾಹ್ನ. ಈ ಕಾಲವಿಭಾಗವನ್ನನುಸರಿಸಿ ಧರ್ಮಶಾಸ್ತ್ರದಲ್ಲಿ ಕೆಲವು ವಿಧಿಗಳು ವಿಹಿತವಾಗಿವೆ. (ವೈ.ವಿ.ಐ)

ಆವರ್ತಮಾರುತ: ವಾಯುಮಂಡಲದಲ್ಲಿ ಉಷ್ಣತೆ ಹೆಚ್ಚಾಗಿರುವ ಪ್ರದೇಶದಲ್ಲಿ ಕಡಿಮೆ ಒತ್ತಡವಿರುವ ಒಂದು ಕೇಂದ್ರದೆಡೆಗೆ ಎಲ್ಲ ಕಡೆಗಳಿಂದಲೂ ನುಗ್ಗುವ ಗಾಳಿ (ಸೈಕ್ಲೋನ್); ಸುಳಿಮಾರುತವೆಂದೂ ಚಕ್ರವಾತವೆಂದೂ ಕರೆಯುತ್ತಾರೆ. ಪಶ್ಮಿಮ ಸಮುದ್ರ ಭಾಗಗಳ ಉತ್ತರಾರ್ಧಗೋಳದಲ್ಲಿ ಬೇಸಗೆಯಲ್ಲೂ ದಕ್ಷಿಣಾರ್ಧಗೋಳದಲ್ಲಿ ಚಳಿಗಾಲ ಮತ್ತು ವಸಂತದಲ್ಲೂ ಕಾಣಿಸಿಕೊಳ್ಳುವ ಇಂಥ ಮಾರುತವನ್ನು ಚಂಡಮಾರುತವೆಂದೂ (ಹರಿಕೇನ್) ತೂಫೂನ್) ಎಂದೂ ಕರೆಯುತ್ತಾರೆ. ಹರಿಕೇನಗಿಂತ ಇನ್ನೂ ಬಿರುಸಾದ, ಆದರೆ ಆಷ್ಟು ಹೊತ್ತು ಬೀಸದ ಒಂದು ಸುಂಟರಗಾಳಿ ಇದೆ. ಅದನ್ನು ಟಾರ್ನೇಡೊ ಎನ್ನುತ್ತಾರೆ. ಅಮೇರಿಕ ಸಂಯುಕ್ತ ಸಂಸ್ಥಾನದಲ್ಲಿ ಇದನ್ನು ಗುರುತಿಸಿದ್ದಾರೆ.