ಪುಟ:Mysore-University-Encyclopaedia-Vol-2-Part-1.pdf/೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆಶಾವಾದ

ನಿಷ್ಕೃಷ್ಟವಾಗಿ ಈ ಪ್ರಮೇಯನವನ್ನು ರೂಪಿಸಿದಾಗ, ಘರ್ಷಣಾತ್ಮಕವಾದ ನಡೆವಳಿಕೆ ತನ್ನ ಬೆನ್ನಹಿಂದೆ ಆಶಾಭಂಗವಿರುವುದನ್ನು ತೋರುತ್ತದೆ; ಇದನ್ನೇ ತಿರುಗಿಸಿ ಹೇಳಬೇಕಾದರೆ, ಆಶಾಭಂಗವಿದ್ದರೆ ಯಾವುದಾದರೊಂದು ರೂಪದಲ್ಲಿ ಘರ್ಷಣೆ ತಲೆದೋರುತ್ತದೆ. ಗ್ರಂಥಕರ್ತರು ಈ ಕಲ್ಪನೆಗೆ ಪ್ರಾಯೋಗಿಕ ಚಿಕಿತ್ಸಾ ಮತ್ತು ಸಾಮಜಿಕ ಮನಶ್ಯಾಸ್ತ್ರದಿಂದ ಸಾಕ್ಷ್ಯವನ್ನು ಎತ್ತಿಕೊಡಲು ಪ್ರಯತ್ನಿಸಿದ್ದಾರೆ. ಆಶಾಭಂಗಕ್ಕೂ ಘರ್ಷಣೆಗೂ ಇರುವ ಸಂಬಂಧದ ಬಗ್ಗೆ ಎರಡು ಮೋಲ ಕಲ್ಪನೆಗಳು ಉಕ್ತವಾಗಿವೆ. ಮೊದಲನೆಯದಾಗಿ ಆಶಾಭಂಗದ ಅನುಭವದ ಪರಿಮಾಣಕ್ಕೆ ತಕ್ಕಂತೆ ಘರ್ಷಣೆಯನ್ನು ಪ್ರಚೋದಿಸುವ ಪ್ರೇರಣಾಬಲ ವ್ಯತ್ಯಾಸ ಹೊಂದುತ್ತದೆ. ಎಂದರೆ, ಆಶಾಭಂಗಾನುಭಾವದ ತೀವ್ರತೆಗೆ ತಕ್ಕಂತೆ ಘರ್ಷಣಾ ಪ್ರತಿಕ್ರಿಯೆ ಹೊಂದಿಕೊಂಡಿದೆ. ಎರಡನೆಯದಾಗಿ, ಘರ್ಷಣೆಯನ್ನು ಪ್ರಕಟಿಸುವ ಕ್ರಿಯೆಯ ನಿರೋಧಶಕ್ತಿ ಆ ಕಾರ್ಯದ ಫಲವಾಗಿ ನಿರೀಕ್ಷಿಸುವ ಶಿಕ್ಷೆಯ ಪ್ರಮಾಣಕ್ಕೆ ಅನುಗುಣವಾಗಿ ನೇರವಾಗಿ ವ್ಯತ್ಯಾಸ ಹೂಂದುತ್ತದೆ.ಘರ್ಷಣೆಯ ಪ್ರಕಟಣೆಯಿಂದ ಆಶಾಭಂಗ ಹೆಚ್ಚುತ್ತದೆಯೇ ವಿನಾ ಕುಗ್ಗುವುದಿಲ್ಲವೆಂಬುದು ಅನುಭವದಿಂದ ತಿಳಿದುಬಂದರೆ ಆಗ ಆ ಆಶಾಭಂಗಕಾರಕ ವ್ಯಕ್ತಿಯ ಮೇಲೆ ಪ್ರಯುಕ್ತವಾಗಬೇಕಾದ ಘರ್ಷಣಾಕ್ರಿಯೆಯೇ ನಿರುದ್ಧವಾಗುತ್ತದೆ. ಇಲ್ಲದಿದ್ದರೆ, ಇಬ್ಬರಿಗೂ ಸಂಬಂಧಪಡದೆ ತನ್ನ ಪಾಡಿಗೆ ತಾನಿರುವ ಮೂರವನೆಯತ್ತ ತಿರುಗುತ್ತದೆ.

೧೯೩೯ರಿಂದೀಚೆಗೆ, ಆಶಾಭಂಗ ಮತ್ತು ದುರಾಕ್ರಮಣದ ಕಲ್ಪನೆಯ ವಿಷಯದಲ್ಲಿ ತುಂಬ ಕುತೂಹಲಕಾರಕ ಅಂಶಗಳು ಪ್ರಕಟವಾಗಿವೆ. ಆಶಾಭಂಗ ಅನೇಕ ಭಿನ್ನ ಭಿನ್ನ ರೀತಿಯ ಪ್ರತಿಕ್ರಿಯೆಗಳನ್ನು ಪ್ರಚೋದಿಸುತ್ತದೆ; ಘರ್ಷಣೆಯ ಯಾವುದೋ ಒಂದು ಪ್ರಕಾರದ ಪ್ರಚೋದನೆ ಅವುಗಳಲ್ಲೊಂದು ಎಂದು ಮಿಲ್ಲರ್ ಹೇಳಿದ್ದಾನೆ.

ಯಾವ ಪರಿಸ್ಥಿತಿಯಲ್ಲಿ ಆಶಾಭಂಗ ಘರ್ಷಣೆಗೆ ದಾರಿ ಮಾಡಿಕೊಡುತ್ತದೆ ಎಂಬುದನ್ನು ಕಂಡುಹಿಡಿಯಲು ಕೆಲವು ಪ್ರಯೋಗಗಳು ನಡೆದಿವೆ. ನಿರಾಶನಾದವ ಗುರಿಗೆ ತೀರ ಹತ್ತಿರವಿದ್ದಾಗ ಆಶಾಭಂಗಕ್ಕೆ ಕಾರಣವಾದ ಅಂಶ ಅಷ್ಟು ಕಟ್ಟುನಿಟ್ಟಾಗಿಲ್ಲದಾಗ ಒದಗಬಹುದಾದ ಶಿಕ್ಷೆಯ ತಿಳಿವಳಿಕೆಯನ್ನವಲಂಬಿಸಿ, ಆರ್ಥಿಕ ಪರಿಸ್ಥಿತಿಗಳಿಗನುಗುಣವಾಗಿ ವ್ಯಕ್ತಿಯ ಸಾಮಾಜಿಕ ಅಂತಸ್ತು ಮತ್ತು ತನ್ನ ಗುರಿಯ ವಿಚಾರದಲ್ಲಿ ಇರುವ ನೀತಿ, ನಂಬಿಕೆಗಳಿಗನುಗುಣವಾಗಿ ದುರಾಕ್ರಮಣ ಮನೋಧರ್ಮ ಕೆಲಸಮಾಡುತ್ತದೆ.

ಅನೇಕವೇಳೆ ಆಶಾಭಂಗ ಘರ್ಷಣೆಗೆ ಎಡೆಮಾಡಿಕೊಡಬಹುದಾದರೂ ಎಲ್ಲ ಘರ್ಷಣೆಗೂ ಆಶಾಭಂಗವೇ ಕಾರಣವಾಗಬೇಕಾದ್ದಿಲ್ಲ. ದಿನಬಳಕೆಯ ಮಾತಿನಲ್ಲಿ ದುರಾಕ್ರಮಣಕ್ಕೆ ವಿರುದ್ಧವಾದ ಭಾವನೆ ಆತ್ಮರಕ್ಷಣೆ ಎನ್ನಿಸಿಕೊಳ್ಳುತ್ತದೆ. ಎಂದಮೇಲೆ ಘರ್ಷಣೆಯ ಪ್ರಮಾಣ ಆಶಾಭಂಗದ ಅನುಭವದ ಬಲ, ಪರಿಸ್ಥಿತಿಗಳ ಪ್ರಭಾವ-ಈ ಎರಡು ಅಂಶಗಳನ್ನು ಅವಲಂಬಿಸಿದೆ. ಸ್ನೇಹಿತರ ಬೆಂಬಲವಿದ್ದರೆ ಘರ್ಷಣಾ ಮನೋವೃತ್ತಿ ಅಧಿಕ ಸ್ವಾತಂತ್ರ್ಯದಿಂದ ಪ್ರವರ್ತಿಸುತ್ತದೆ. ವೃತ್ತಿಚ್ಯುತಿ ಮತ್ತು ಶಿಕ್ಷೆಯ ಭಯಗಳಿಂದ ಘರ್ಷಣೆ ನಿರುದ್ಧವಾಗಬಹುದು. ಈ ಪರಿಸ್ಥಿತಿಗಳಲ್ಲಿ ಅದು ತನಗೆದುರುಬೀಳದ ತನ್ನ ಅಂತಸ್ತಿನ ವ್ಯಕ್ತಿಯ ಮೇಲೋ ಅಥವಾ ಗುಂಪಿನ ಮೇಲೋ ತಿರುಗಬಹುದು, ಹೀಗೆ ಘರ್ಷಣೆ ಬೇರೆ ಕಡೆಗೆ ತಿರುಗಬೇಕಾದರೆ ಆಶಾಭಂಗದ ಪರಿಸ್ಥಿತಿಗೆ ಯಾವ ವಿಧದಲ್ಲೂ ಕಾರಣನಲ್ಲದವನ ಮೇಲೆ ಪ್ರಾಯಶಃ ಅದು ತಿರುಗುತ್ತದೆ. ಯಾವನು ಇದರಿಂದ ತನ್ನ ನೆಮ್ಮದಿಗೆ ಚ್ಯುತಿಬಾರದೆಂದುಕೊಂಡು ಆ ಪರಿಸ್ಥಿಯನ್ನು ಕುರಿತು ತನ್ನ ಮನೋಭಾವನೆಗಳನ್ನು ವ್ಯಕ್ತಪಡಿಸುತ್ತಾನೋಆತನೇ ಆ ಪರಿಸ್ಥಿತಿಯನ್ನು ಹದಕ್ಕೆ ತರಲೂ ಪ್ರಯತ್ನಿಸುತ್ತಾನೆ. ಒಬ್ಬ ವ್ಯಕ್ತಿಗೆ ಆಶಾಭಂಗದ ಅನುಭವವನ್ನು ತಂದೊಡ್ಡುವುದರಿಂದ ಅಷ್ಟೇನೂ ಕೆಡಕಾಗುವುದಿಲ್ಲ, ಆದರೆ ಏರುತ್ತಿರುವ ತನ್ನ ಮನಸ್ಸಿನ ಉದ್ವೇಗಗಳಿಗೆ ಥಟ್ಟನೆ ಪರಿಹಾರವನ್ನು ಕಂಡುಕೊಳ್ಳಲು ಆ ವ್ಯಕ್ತಿ ತಾನು ತೀರ ನಿಸ್ಸಹಾಯನೆಂಬ ಪರಿಸ್ಥಿತಿಯಲ್ಲಿ ಅದನ್ನು ತಂದೊಡ್ಡುವುದರಿಂದ ತುಂಬ ಕೆಡಕಾಗುತ್ತದೆ. ಒಬ್ಬಾತ ತನ್ನ ಆಶಾಭಂಗಕ್ಕೆ ಯಾವ ರೀತಿಯ ಪ್ರತಿಕ್ರಿಯೆಯನ್ನು ತೋರಿಸುತ್ತಾನೆ ಎಂಬುದನ್ನು ನಿರ್ಧರಿಸುವುದರಲ್ಲಿ ಸಂದರ್ಭಾಂಶಗಳಿಗಿರುವಷ್ಟೇ ಪ್ರಾಮುಖ್ಯ ವ್ಯಕ್ತಿಯ ಸ್ವಭಾವಕ್ಕೂ ಉಂಟು. ಆಶಾಭಂಗವನ್ನು ಸಹಿಸಿಕೊಳ್ಳುವುದರಲ್ಲೂ ಆಶಾಭಂಗದಿಂದುಂಟಾದ ಮನಸ್ಸಿನ ಉದ್ವೇಗಗಳನ್ನು ಉಪಶಮನಗೊಳಿಸಲು ಪ್ರಯುಕ್ತವದ ಉಪಾಯಗಳಲ್ಲೂ ವ್ಯಕ್ತಿ ವ್ಯಕ್ತಿಗೂ ವ್ಯತ್ಯಾಸವಿರುವುದು ತಿಳಿದುಬಂದಿದೆ.

ಆಶಾಭಂಗ ವ್ಯಕ್ತಿಯ ಮುಂದಿನ ನಡೆವಳಿಕೆಗಳಲ್ಲಿ ತರುವ ವ್ಯತ್ಯಾಸಗಳ ಬಗ್ಗೆ ಮುಖ್ಯವಾಗಿ ಆಶಾಭಂಗಕ್ಕೂ ಘರ್ಷಣೆಗೂ ಇರುವ ಸಂಬಂಧದ ವಿಷಯದಲ್ಲಿ ಎದ್ದಿರುವ ಸಾಮಾನ್ಯ ಸಮಸ್ಯೆ ಇನ್ನೂ ಅಸ್ಪಷ್ಟವಾಗಿಯೇ ಉಳಿದಿವೆ.

ಕೆಲವು ಆಶಾಭಂಗಗಳು ತರುವ ದುಷ್ಪರಿಣಾಮಗಳನ್ನು ಮಿತಗೊಳಿಸಲೂ ನಾವು ಆಶಾಭಂಗದ ಅನುಭವದ ತೀವ್ರತೆಯನ್ನೇ ತಗ್ಗಿಸಬೇಕು. ಅಲ್ಲದೆ ಆ ಉದ್ವೇಗಗಳು ಕೆಡುಕಿಲ್ಲದ ಬೇರೆ ದಾರಿಯಲ್ಲಿ ಹೊರಹರಿಯುವಂತೆ ಅವಕಾಶಗಳನ್ನು ಕಲ್ಪಿಸಬೇಕು. ಆಶಾಭಂಗದ ತೀವ್ರತೆ ಅದು ಆ ಮನುಷ್ಯನ ಮನಸ್ಸಿನಲ್ಲಿ ಎಂಥ ಪರಿಣಾಮವನ್ನುಂಟುಮಾಡುತ್ತದೆ ಎಂಬುದನ್ನೂ ಅದ್ಯೌ ಉದ್ಭವಿಸುವ ಸಂದರ್ಭಾಂಶಗಳನ್ನೂ ಅವಲಂಬಿಸಿದೆಯಷ್ಟೆ ಆದ್ದರಿಂದ ಮೈತ್ರಿಯ ವಾತವರಣದಲ್ಲಿ ಮನಸ್ಸು ನೆಮ್ಮದಿಯಿಂದಿರುವಾಗ ನಿರ್ಭಂದವನ್ನು ಹಾಕಿದಲ್ಲಿ ಪರಿಣಾಮರೂಪದ ಮನೋವಿಕಾರಗಳನ್ನೂ ದುರಾಕ್ರಮಣಬುದ್ಧಿಯನ್ನೂ ತಡೆಗಟ್ಟಬಹುದು. (ಬಿ.ಸಿ.ಎಂ.)

ಆಶಾವಾದ: ಮಾನವನ ಬಾಳನ್ನು ಸಮಗ್ರವಾಗಿ ವೀಕ್ಷಿಸಲು ನಮಗಿರುವ ಎರಡು ಅತಿರೇಕದ ಹಾಗೂ ಪರಸ್ಪರ ವಿರುದ್ಧವಾದ ಮಾರ್ಗಗಳೆಂದರೆ ಆಶಾವಾದ(ಆಪ್ಟಿಮಿಸಂ) ಮತ್ತು ನಿರಾಶಾವಾದ(ಪೆಸಿಮಿಸಂ). ಒಂದರ ಪೂರ್ಣ ಪರಿಚಯವಾಗಬೇಕಾದರೆ ಮತ್ತೊಂದರ ಅರಿವು ಅನಿವಾರ್ಯ. ಈ ಮಾರ್ಗಗಳು ಬಹುವ್ಯಕ್ತಿಗತ ಸ್ವಭಾವ ಸಂಸ್ಕೃತಿ ಮತ್ತು ಮೌಲ್ಯಮಾಪನ ಕ್ರಮದಿಂದ ಬಹುಮಟ್ಟಿಗೆ ಪ್ರಭಾವಗೊಳ್ಳುತ್ತವೆ. ಈ ಜಗತ್ತು ಸುವ್ಯವಸ್ಥಿತವೂ ನಿಯಮಬದ್ಧವೂ ಪ್ರಗತಿಪರವೂ ಆಗಿದ್ದು ಮಾನವನ ಪ್ರಗತಿಗೆ ಸಹಕಾರಿಯಾಗಿದೆ. ಅಲ್ಲದೆ ಇದರಲ್ಲಿ ದುಃಖದ ಪಾಲಿಗಿಂತಲೂ ಸುಖದ ಪಾಲೇ ಹೆಚ್ಚು ಎಂಬುದೇ ಆಶಾವದ. ಬಾಳು ಸುಖಶಾಂತಿಯ ಸಾಧನ. ದುಃಖದ ಹಿಂದೆ ಸುಖ ಸುಪ್ತವಾಗಿದೆ. ಶುಭದ ಅಪೂರ್ಣ ಗ್ರಹಿಕೆಯೇ ಅಶುಭ. ಅಖಂಡತೆಯನ್ನು ಖಂಡಗೊಳಿಸುವುದರಿಂದುದಿಸುವುದೇ ದುಃಖ, ಇಲ್ಲವೆ ನಿರಾಶೆ. ಆದರೆ ಈ ನಿರಾಶೆ ಬಾಳಿನ ನೈಜಸ್ವರೂಪವಲ್ಲ. ಸುಖಸಂತೋಷ ಮತ್ತು ಶ್ರದ್ಧೆಯೇ ಬಾಳಿನ ಸಹಜಧರ್ಮ. ಅತ್ಯಂತ ಶ್ರೇಷ್ಠವಾದ ಈ ಜಗತ್ತಿನಲ್ಲಿ ಕಾಣುವುದೆಲ್ಲವೂ ಶ್ರೇಷ್ಠವೇ. ಆದರೆ ಅದನ್ನು ಗ್ರಹಿಸಲು ಬೇಕಾದ ವ್ಯಾಪಕದೃಷ್ಟಿ ನಮ್ಮಲ್ಲಿ ನಿಚ್ಚಳಗೊಳ್ಳಬೇಕು. ಇದೇ ಆಶಾವದದ ಪೂರ್ಣಸ್ವರೂಪ.

ಮಾನವರು ತಮ್ಮ ಬಾಳಿನಲ್ಲಿ ಕಾಣುವ ಶುಭಾಶುಭಗಳನ್ನು ಗ್ರಹಿಸಲು ಸಹಕಾರಿಯಾಗಿ ತಮ್ಮವೇ ಆದ ಕೆಲವು ಶ್ರದ್ಧೆ ಅಥವಾ ನಂಬಿಕೆಗಳನ್ನು ಆಶ್ರಯಿಸುವುದರಿಂದ ಆಶಾವಾದದ ಕಲ್ಪನೆ ತತ್ತ್ವಶಾಸ್ತ್ರಕ್ಕಿಂತಲೂ ಹೆಚ್ಚಾಗಿ ಧರ್ಮದ ವ್ಯಾಪ್ತಿಗೆ ಸೇರಿದೆ. ಈ ಕಲ್ಪನೆ ತಾತ್ತ್ವಿಕ ಚಿಂತನೆಗೊಳಪಡಲು ಅರ್ಹವೆನಿಸುವಷ್ಟು ನಿಖರತೆಯನ್ನು ಪಡೆದಿದೆಯೇ ಎಂದು ಅನುಮಾನಿಸುವವರೂ ಇದ್ದಾರೆ. ಇದನ್ನು ಕುರಿತು ಆಳವಾಗಿ ಪರಿಶೀಲಿಸುವ ಮುನ್ನ ಆಶೆಗೆ ಪ್ರೇರಕವಾದ ಸುಖದ ಸ್ವರೂಪವೇನೆಂಬುದನ್ನು ತಿಳಿಯುದು ಅವಶ್ಯ ವಾಸ್ತವಿಕ ಅನುಭವವನ್ನೇ ಆಧಾರವಾಗಿ ಉಳ್ಳ ವಾಸ್ತವವಾದಿಗಳು, ಐಹಿಕ ಭೋಗವನ್ನು ಸುಖವೆಂದು ಗಣಿಸಿ ಈ ಭೋಗವನ್ನು ಪಡೆಯಲು ಜಗತ್ತಿನಲ್ಲಿ ಅನೇಕ ಅಡಚಣೆಗಳಿರುವುದರಿಂದ ಜಗತ್ತಿನ ವಿಚಾರದಲ್ಲಿ ನಿರಾಶೆಯನ್ನು ತಳೆಯುತ್ತಾರೆ. ವಿವೇಚನೆ ಮತ್ತು ಚಿಂತನಾಶೀಲರಾದ ಆದರ್ಶವಾದಿಗಳು ಮತ್ತು ಧ್ಯೇಯವಾದಿಗಳು ಈ ಜಗತ್ತನ್ನು ವಿಕಾಸದ ಸೋಪಾನವೆಂಬುದು ಪರಿಗಣಿಸಿ ಆಶಾವಾದಿಗಳಾಗಿ ನಿಲ್ಲುತಾರೆ. ಇನ್ನು ಮಾನವನನ್ನು ಸುಖದಿಂದ ಪಾರುಗೊಳಿಸಿ ನಿತ್ಯ ಸುಖದತ್ತ ಕೊಂಡೊಯ್ಯುವ ಸಾಧನವೆನಿಸಿದ ಧರ್ಮ ಜಗತ್ತನ್ನು ದುಃಖಮಯವೆಂದು ಕರೆದರೂ ಸರಿ ಅದಕ್ಕೆ ಪರಿಹಾರರೂಪವಾಗಿ ಮುಕ್ತಿಮಾರ್ಗವನ್ನು ಸೂಚಿಸುವುದರಿಂದ ಆಶಾವಾದ ಮತ್ತು ನಿರಾಶಾವಾದಗಳೆರಡೂ ಇದರಲ್ಲಿ ಕಾಣಬರುತ್ತವೆ. ಜಗತ್ತು ಮಾಯೆ ಇಲ್ಲವೇ ನಶ್ವರವೆಂದು ಹೇಳಿದ ಹಿಂದು ಧರ್ಮ ಈ ಜಗತ್ತಿನಲ್ಲೇ ಇದ್ದು ಜಯಿಸಬೇಕೆಂದು ಸಾರಿತು. ಮೂಲರೂಪವಾದ ಪಾಪವನ್ನು ಒಪ್ಪಿದ ಕ್ರೈಸ್ತ ಧರ್ಮ ಸಹ ಮುಕ್ತಿಯ ಆಕರ್ಷಣೆಯನ್ನು ಮಾನವನ ಮುಂದೆ ಇಟ್ಟಿದೆ. ಹೀಗೆ ದುಃಖದಿಂದ ಸುಖದ ಕಡೆ ಇಲ್ಲವೇ ನಿರಾಶೆಯಿಂದ ಆಶೆಯ ಕಡೆ ಸಾಗಲು ಧರ್ಮ ತೋರಿದ ದಾರಿಯಲ್ಲಿ ನೀತಿಯ ಪಾತ್ರ ಬಹು ಹೆಚ್ಚೇನೋ ಎನಿಸುವಷ್ಟಿದೆ.

ಆಶಾವಾದದ ಇತಿಹಾಸವನ್ನು ನೋಡಬೇಕಾದರೆ ಇದು ಬೆಳೆದು ಬಂದ ದಾರಿ ಹಾಗೂ ಇದರಿಂದ ಪ್ರಭಾವಿತರಾದ ದಾರ್ಶನಿಕರು ಕೆಲವರ ವಿಚಾರಧಾರೆಯ ಪರಿಚಯ ಅಗತ್ಯ. ಸಾಕ್ರಟೀಸ್ ಮತ್ತು ಪ್ಲೇಟೋಗಳ ಕಾಲದಿಂದಲೇ ಮೊದಲಾದ ಈ ವಿಚಾರದೃಷ್ಟಿ ೧೭, ೧೮ ಶತಮಾನದ ಕಾಲಕ್ಕೆ ಐರೋಪ್ಯ ದಾರ್ಶನಿಕನಾದ ಲೈಬ್ನಿಟ್ಸ್ ನಿಂದ ಒಂದು ಸ್ಪಷ್ಟರೋಪವನ್ನು ಪಡೆಯಿತು. ನಮ್ಮ ಈ ಜಗತ್ತು ಸರ್ವೋತ್ಕೃಷ್ಟವಾದದ್ದು ಎಂಬುದೇ ಇವನ ಸಿದ್ಧಾಂತ. ಈ ಜಗತ್ತು ಒಂದು ಶ್ರೇಷ್ಠ ಧ್ಯೇಯದ ಕಡೆಗೆ ತನ್ನನ್ನು ತಾನು ರೂಪಿಸಿಕೊಳ್ಳುತ್ತಿದೆ. ಆದರೆ ಈ ಉದ್ದೇಶ ಮಾನವನ ಕಲ್ಪನೆಯನ್ನವಲಂಬಿಸಿ ನಿಂತಿಲ್ಲ. ವಿಶ್ವದ ವಿವಿಧ ಮೂಲ ಘಟಕಗಳನ್ನೆಲ್ಲ( ಚಿದಣು; ಮೊನ್ಯಾಡ್) ನಿಯಂತ್ರಿಸಬಲ್ಲ ಪೂರ್ವನಿಶ್ಚಿತ ವ್ಯವಸ್ಥೆಯೊಂದು ಜಗತ್ತಿನ ಪಚನೆಯಲ್ಲಿ ಹಾಸುಹೊಕ್ಕಾಗಿದೆ. ತನ್ನ ಈ ಚಿಂತನೆಗೆ ಇಂಬುಗೊಡಲೋಸುಗ ಲೈಬ್ನಿಟ್ಸ್ ದೇವರು ಮತ್ತು ಅವನ ಸರ್ವಜ್ಞ್ನತೆ ಹಾಗೂ ಸರ್ವಶಕ್ತತೆಯನ್ನು ಆಧರಿಸಿ ಪೂರ್ವನಿಶ್ಚಿತ ವ್ಯವಸ್ಥೆಯ ತತ್ತ್ವವನ್ನು ಸ್ಥಾಪಿಸುತ್ತಾನೆ. ಇವನ ಪ್ರಕಾರ ಕೆಟ್ಟದ್ದು ಇಲ್ಲವೆ ದುಃಖ ಎಂಬುದು ಕತ್ತಲು ಅಥವಾ ಶೈತ್ಯದಂತೆ ಸ್ವತಂತ್ರ ಅಸ್ತಿತ್ವವಿಲ್ಲದ ಅವಲಂಬನ ತತ್ತ್ವ ಮಾತ್ರ ಒಳ್ಳೆಯದರ ಕ್ಷೀಣ ಸ್ವರೂಪವನ್ನೇ ಕೆಟ್ಟದೆಂದು ಹೆಸರಿಸಲಾಗುವುದು. ಪ್ರಕೃತಿಯಲ್ಲಿ ಕಾಣಬರುವ ವಿಪತ್ತು ಮಾನವನೆಸಗಿದ ಧರ್ಮೋಲ್ಲಂಘನೆಯ ಫಲ. ಅದು ಪ್ರಕೃತಿಯ ವಿಕೋಪವಷ್ಟೆ. ಇದು ನ್ಯಾಯಸಮ್ಮತವೆಂದೇ ಲೈಬ್ನಿಟ್ಸ್ ನ ಅಭಿಮತ. ಸರಿಯಾದ ಕಾರಣದಿಂದಾದ ವಿಪತ್ತುಗಳು ಮೂಲತಃ ಶುಭದಾಯಕವಾದ ದೈವಶಾಸನದ ರಕ್ಷೆಗೆ ಒಳಪಟ್ಟೇ ಇರುತ್ತದೆ. ಈ ಶಾಸನದ ಆಶ್ರಯದಲ್ಲಿಯೇ ಸರ್ವವ್ಯಾಪಾರಗಳೂ ನಡೆಯುತ್ತವೆಂದ ಮೇಲೆ ಇನ್ನು ನಿರಾಶೆಗೆ ಕಾರಣವೇ ಇಲ್ಲ.

ಇವನಾದಮೇಲೆ ಆಶಾವಾದದ ಬಗ್ಗೆ ಆಲೋಚನೆ ಮಾಡಿದ ದಾರ್ಶನಿಕರಲ್ಲಿ ಪ್ರಮುಖವಾಗಿ ಡೇವಿಡ್ ಹ್ಯೂಮ್, ಇಮ್ಯಾನ್ಯುಯಲ್ ಕಾಂಟ್, ಷೋಪೆನ್‍ಹೌರ್ ಮತ್ತು ಹಾರ್ಟ್‍ಮನ್‍ಗಳ ಹೆಸರನ್ನು ಹೇಳಬೇಕು. ಜಗತ್ತಿನಲ್ಲಿ ನಡೆಯುವ ವಿಪತ್ತು ಮತ್ತು ನೈತಿಕ ಪಾಪಗಳನ್ನು ಕೂಲಂಕುಶವಾಗಿ ವಿಚಾರ ಮಾಡಿದ ಹ್ಯೂಮ್ ವಿಶ್ವದಲ್ಲಿ ಕಾಣಬರುವ ದುಃಖದ ಧಾರಣೆ ಮಾನವನ ವಿವೇಕಕ್ಕೆ ಮೀರಿದೆ ಎಂದೂ ಇದನ್ನು ತಾತ್ತ್ವಿಕವಾಗಿ.