ಪುಟ:Mysore-University-Encyclopaedia-Vol-2-Part-1.pdf/೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಏಕಬಧದಿಂದ(c-c) ಸೇರಿರುವ ಕಾರ್ಬನ್ ಪರಮಾಣುಗಳಿಗೆ ಆ ಬಂಧದ ಸುತ್ತ ಭ್ರಮಿಸುವ ಸ್ವಾತಂತ್ರ್ಯವಿದೆ (ಫ಼್ರೀರೊಟೇಷನ್). ದ್ವಿಬಂಧಗಳಿದ್ದರೆ ಈ ಸ್ವಾತಂತ್ರ್ಯ ಮೊಟಕಾಗುತ್ತದೆ. ದ್ವಿಬಂಧದಿಂದ ಸೇರ್ಪಟ್ಟಿರುವ ಕಾರ್ಬನ್ನುಗಳಿಗೆ ಅನುಗುಣವಾದ ಗುಂಪುಗಳನ್ನು ಹೈಡ್ರೊಜನ್ನಿನ ಬದಲಿಗೆ ಸೇರಿಸಿದರೆ ಎರಡು ಸಮಘಟಕಗಲಳು ಉತ್ಪತ್ತಿಯಾಗುವುವು. ಸಾಮಾನ್ಯವಾಗಿ ಟ್ರಾನ್ಸ್.ಸಿಸ್ಘಟಕ ಸಂಯುಕ್ತಗಳಿಗಿಂತ ಹೆಚ್ಚು ಸ್ಮಿರವಾಗಿವೆ.