ಪುಟ:Mysore-University-Encyclopaedia-Vol-2-Part-2.pdf/೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೦೨ ಇಚ್ಚಿತ್ತ

ಇಚ್ಚಿತ್ತ ರೋಗಿ ಹೀಗೇ ಇರುವನೆಂದು ಖಚಿತವಲ್ಲ. ಮುಖ್ಯವಾಗಿ, ಒಂದು ಸಂದರ್ಭದಲ್ಲಿ ರೋಗಿ ಹೇಗೆ ನಡೆದುಕೊಳ್ಳುವನೆಂದು ನೋಡಬೇಕೇ ಹೊರತು, ರೋಗಿಯಲ್ಲಿ ಇಂತಿಂಥ ಗುಣ, ಲಕ್ಷಣಗಳೇ ಇರಬೇಕು ಎನ್ನುವಂತಿಲ್ಲ.ರೋಗಿಯ ಕೆಟ್ಟ ಅಲ್ಲದೆ ಒಳ್ಳೆಯ ಅಭ್ಯಾಸಗಳು, ಬೆಳೆವ ರೀತಿಯಗಳ ಪರಿಶೀಲನೆಯಿಂದ ರೋಗವನ್ನು ವೈದ್ಯ ಗುರುತಿಸಬಹುದು.

ತಲೆಗೆ ಪೆಟ್ಟು, ಆಕಸ್ಮಿಕ ಗಾಯಗಳು ಆದ ಮೇಲೋ ಹೆರಿಗೆಯಾದ ಮೇಲೆ ಬಾಣಂತಿಯಲ್ಲೋ ವಿಷಮಜ್ವರ ತೆರನ ಯಾವುದಾದರೂ ಕಾಯಿಲೆ ಬಿದ್ದೆದ್ದ ಮೇಲೋ ಇಚ್ಚಿತ್ತ ಕಾಣಿಸಿಕೊಳ್ಳಬಹುದಾದರೂ ಯಾವೊಂದು ರೋಗವನ್ನೂ ಕಾರಣವೆಂದೂ ಖಚಿತವಾಗಿ ದೂರುವಂತಿಲ್ಲ. ಹೀಗೇ ಯಾವ ಕಾರಣದಿಂದಲೇ ಆಗಲಿ ಮೈಯೆಲ್ಲ ರಕ್ತವಿಷವೇರಿದ್ದರಿಂದ (ಟಾಕ್ಸೀಮಿಯ) ಎನ್ನುವಂತಿಲ್ಲ. ಅಲ್ಲದೆ, ಮೆಸ್ಕಲೀನ್, ಲೈಸರ್ಜಿಕಾಮ್ಲ ಮದ್ದುಗಳನ್ನು ನುಂಗಿದರೂ ಹಲವಾರು ರೀತಿಯಲ್ಲಿ ಇಚ್ಚಿತ್ತದಂತೆ ಬಹುಮಟ್ಟಿಗಿರುವ ಮನೋವಿಕಲತೆ ತೋರುವುದೆಂಬುದು ಸೋಜಿಗದ ವಿಚಾರ. ಆದರೆ ಈ ರೋಗಕ್ಕೂ ಈ ರಾಸಾಯನಿಕಗಳಿಗೂ ಯಾವ ಸಂಬಂಧವನ್ನು ಕಲ್ಪಿಸುವಂತಿಲ್ಲ. ಇದೇ ತೆರನಾಗಿ ಒಳಸುರಿಕ ಗ್ರಂಥಿಗಳಿಗೂ ಈ ಚಿತ್ತಗೆಡಿಕೆಗೂ ಇರಬಹುದಾದ ಖಚಿತ ಸಂಬಂಧ ಸರಿಯಾಗಿ ಗೊತ್ತಿಲ್ಲ.

ವ್ಯವಹಾರದಲ್ಲಿ ಸೋಲು, ಲೈಂಗಿಕ ನಿರಾಸೆ, ಭಯಂಕರ ಅನುಭವಗಳೇ ಮುಂತಾದವುಗಳಿಂದ ಇತ್ತೀಚೆಗೆ ಮನಸ್ಸು ಕೆಟ್ಟಿದ್ದರಿಂದ ಇಚ್ಚಿತ್ತ ಆಗಿರಬಹುದಾದರೂ ಮೊದಲೇ ಅದರ ಲಕ್ಷಣಗಳು ರೋಗಿಯಲ್ಲಿದ್ದಿರಬೇಕು. ಎಂದಿನದೋ ಅನುಭವದಿಂದಲೂ ಹೀಗಾಗದು. ರೋಗಿಯ ಮನಸ್ಸನ್ನು ಎಷ್ಟೇ ಆಳವಾಗಿ ವಿವರವಾಗಿ ಪರಿಶೀಲಿಸಿದರೂ ಮೊದಲಿನಿಂದಲೂ ಇದರ ಲಕ್ಷಣಗಳಿಲ್ಲದೇ ದಿನದ ನಡೆವಳಿಕೆಯಲ್ಲಿ ಇಚ್ಚಿತ್ತ ಮನೋಭಾವ ತೋರಲು ಕೇವಲ ಇತ್ತೀಚಿನ ಅನುಭವಗಳು ಸಾಕಾಗುವಂತೆ ಕಾಣವು. ಏನಿದ್ದರೂ ಇವು ಬೆಂಬಲವಾಗಿ ಇರಬಹುದಷ್ಟೆ.

ಜನಸಾಮಾನ್ಯರಲ್ಲಿ ನೂರಕ್ಕೊಬ್ಬ ಇಚ್ಚಿತ್ತರೋಗಿ ಇರುವನೆಂದು ಲೆಕ್ಕವಿದೆ. ಮಾನಸಿಕ ಆಸ್ಪತ್ರೆಗಳ ರೋಗಿಗಳಲ್ಲಿ ಇವರೇ ಸುಮಾರು ಅರೆಪಾಲಿನಷ್ಟು ಇರುವರು. ಮುಕ್ಕಾಲುಪಾಲು 15-25 ವರ್ಷಗಳವರಲ್ಲೇ ಬಲು ಸಾಮಾನ್ಯ. ಮಕ್ಕಳು ವಯಸ್ಸಿಗೆ ಬರುವ ಮುಂಚೆ ಈ ರೋಗ ತೋರುವುದು. 40 ವರ್ಷ ದಾಟಿದವರಲ್ಲಿ ಇದು ಮೊಟ್ಟ ಮೊದಲು ಕಾಣಿಸಿಕೊಳ್ಳುವುದಿಲ್ಲ. ವಿಚಿತ್ರ ನಡೆವಳಿಕೆಯ ಎಳೆಯ ಕೂಸುಗಳಲ್ಲೂ ಇತ್ತೀಚೆಗೆ ಇದನ್ನು ಗುರುತಿಸುತ್ತಿರುವರು. ಬುದ್ಧಿಶಕ್ತಿಗೂ ಇದಕ್ಕೂ ಸಂಬಂಧವಿಲ್ಲ. ಹೆಣ್ಣಿಗಿಂತ ಗಂಡಿನಲ್ಲಿ ಹೆಚ್ಚಿರಬಹುದು.

ರೋಗಲಕ್ಷಣಗಳು: ಈ ರೋಗಿಯಲ್ಲಿ ಮಿದುಳಿನ ರಚನೆ, ರಾಸಾಯನಿಕ ಅಂಗಕ್ರಿಯೆಗಳು, ಮೂತ್ರ ರಕ್ತಗಳ ವ್ಯತ್ಯಾಸಗಳನ್ನು ವಿವರಿಸಿದ್ದರೂ ಇವಾವವೂ ಇದೊಂದೇ ರೋಗದಲ್ಲಿ ವಿಶಿಷ್ಟವಾಗಿ ಕಾಣುವವಲ್ಲ. ಆದರೆ ಒಮೊಮ್ಮೆ ಸರದಿಯಾಗಿ ಬರುವ ಬಿಗುವೇರಿಳಿತದ (ಕೆಟಟೋನಿಕ್) ರೋಗಿಗಳ ಮೈಯಲ್ಲಿ ಸಾರಜನಕದ ಸಮತೋಲ ಏರೊಪೇರು ಆಗಿರುವುದನ್ನು ಗಮನಿಸಬೇಕಾದ್ದೆ. ಮೈಯಲ್ಲಿ ಸಾರಜನಕ ಹೆಚ್ಚಿದಾಗ ರೋಗಿ ಚಟುವಟಿಕೆಯಿಂದಿದ್ದು, ಇಳಿದಾಗ ಜಡವಾಗಿ ಬಿದ್ದಿರುವನು. ತೈರಾಕ್ಸಿನ್ ಮದ್ದನ್ನು ಕೊಟ್ಟು ಸಾರಜನಕದ ಮಟ್ಟವನ್ನು ಇಳಿಸಿಬಿಟ್ಟು, ಸಾರಜನಕ ಇನ್ನಷ್ಟು ಮೈಸೇರದಂತೆ ನೋಡಿಕೊಂಡರೆ ರೋಗದ ಲಕ್ಷಣಗಳು ಕಳೆಯುತ್ತವೆ.

ಮನಶ್ಶಾಸ್ತ್ರದ ರೀತ್ಯಾ, ರೋಗಿಯ ಭಾವನೆಗಳು, ಮನೋಚಾಲಕ (ಸೈಕೊಮೋಟಾರ್) ವರ್ತನೆಗಳು, ಒಳಗಿನ ಉಡುಗಣೆಗಳಲ್ಲಿ (ಇನ್‍ಹಿಬಿಷನ್ಸ್) ವ್ಯತ್ಯಾಸಗಳು ತೋರಿದರೂ ಇವಾವುವೂ ಇಚ್ಚಿತ್ತದಲ್ಲಿ ಮಾತ್ರವೇ ತೋರುವವಲ್ಲ. ಒಟ್ಟಿನಲ್ಲಿ ಇಷ್ಟು ಹೇಳಬಹುದು: ರೋಗಿಯ ಮನಸ್ಸಿನ ಏರುಪೇರುಗಳು ಅವನ ಪಾಲನೆ, ವಿದ್ಯೆ, ಪರಿಸರಗಳಂತೆ ಹೊರಗಾಣುತ್ತವೆ. ಮುಖ್ಯವಾಗಿ ಮನಸ್ಸು ಎರಡಾಗಿ ಒಡೆದಿರುತ್ತದೆ. ಒಂದು ಭಾಗಕ್ಕೂ ಇನ್ನೊಂದಕ್ಕೂ ಹೊಂದಾಣಿಕೆ ತಪ್ಪಿ, ಇಲ್ಲವೆ ವಿಚಿತ್ರವಾಗಿ, ಎರಡು ಚಿತ್ತಗಳಂತೆ ತೋರುವುದು. ದಿನದ ಸಂಪರ್ಕಗಳು, ನಿಜ ಸಂಗತಿಗಳ ಅನುಭವಕ್ಕೂ ಒಳಗಿನ ಮನಸ್ಸಿಗೂ ಏನೇನೂ ಸಂಬಂಧ ಇಲ್ಲದಂತೆ ರೋಗಿ ವರ್ತಿಸುತ್ತಾನೆ.

ಇಚ್ಚಿತ್ತ ರೋಗ ಇದ್ದಕ್ಕಿದ್ದಂತೆ ಕಾಣಿಸಿಕೊಳ್ಳುವುದಿಲ್ಲ. ಎಷ್ಟೋ ಬಾರಿ, ಕೇವಲ ವ್ಯಕ್ತಿತ್ವದ ವಿಚಿತ್ರ ಎನಿಸಿಕೊಂಡಿದ್ದುದು ಯಾವೊತ್ತಿನಿಂದ ರೋಗ ಮೊದಲಾಯಿತೆಂದು ಖಚಿತವಾಗಿ ಹೇಳಬರದು. ಒರಟು ನಡತೆ, ಪರಿವೆ ಇಲ್ಲದಿರುವಿಕೆ, ಅನಿರ್ಧಾರಗಳೊಂದಿಗೆ ತಲೆನೋವು, ಸುಸ್ತು, ಕಳವಳ, ಹಸಿವುನಾಶ, ನೋವುಮುಟ್ಟು ಆಗಿದ್ದಿರಬಹುದು. ಯೋಚನೆ, ತಿಳಿವಳಿಕೆಗಳಲ್ಲಿ ತನ್ನಲ್ಲೇ ಅಪಾರ ವ್ಯತ್ಯಾಸಗಳನ್ನು ರೋಗಿ ಅರಿಯಬಹುದು. ತ್ನ್ನ ನಡೆವಳಿಕೆ ತನಗೇ ವಿಚಿತ್ರ ಎನಿಸಬಹುದು. ಮೊದಲ ದಿನಗಳಲ್ಲಿ ಬಹುಮಟ್ಟಿಗೆ ಅಗುವಂತೆ, ಕೆಲವು ವರ್ಷಗಳಲ್ಲಿ ನಿಧಾನವಾಗಿ ಕಾಲಿಡುವುದರಿಂದ, ರೋಗವನ್ನು ಗುರುತಿಸುವುದು ಕಷ್ಟವಾಗಬಹುದು.

ಯೋಚನೆಯಲ್ಲಿ ತಾರುಮಾರು: ಯೋಚನೆಗಳೇನೋ ಚೆನ್ನಾಗಿದ್ದರೂ ಒಂದಕ್ಕೊಂದು ಸಂಬಂಧವೇ ಇರದೆ, ಎತ್ತೆತ್ತಲೋ ಹರಿದು ಕಲಬೆರಕೆ ಆಗಿರುತ್ತದೆ. ಕಾರಣ ಕಾರಕಗಳ ಸಂಬಂಧ ತಲೆಕೆಳಗಾಗುತ್ತದೆ. ಮಾತಾಡುವಾಗ ತುಂಡು ತುಂಡಾಗಿ ನಿಂತು ತಡೆಯಬಹುದು (ಬ್ಲಾಕಿಂಗ್). ಎಷ್ಟೋ ವೇಳೆ ತನ್ನ ಯೋಚನೆ ಸರಿಯಲ್ಲವೆಂದು ರೋಗಿ ಗಮನಿಸಿ ವಿವರ ಹೇಳುತ್ತಾನೆ. ತನ್ನ ಯೋಚನೆಗಳನ್ನು ತೆಗೆದುಹಾಕಿ ತನ್ನವಲ್ಲದ ಇನ್ನಾವುದೊ ಹೊರಗಿನವು ಬಂದು ತನ್ನ ಯೋಚನೆ ಸರಕ್ಕನೆ ಕಡಿದುವೆಂದೂ ಯಾವುದೋ ಹೊರಗಿನ ಶಕ್ತಿ ಹತೋಟಿಗೊಳಿಸುವುದೆಂದೂ ಭಾವಿಸುತ್ತಾನೆ. ಯೋಚನೆಯ ತಾರುಮಾರಿಗೆ ರೋಗಿಗಳ ಕೆಲವು ಹೇಳಿಕೆಗಳನ್ನು ಉದಾಹರಿಸಬಹುದು:'ಕಿಟಕಿಯಿಂದ ಬಾವಲಿಗಳೂ ಜೇನ್ನೊಣಗಳೂ ಬರುತ್ತಿದ್ದುವು. ನನ್ನ ಭಾವಮೈದುನ ನನ್ನನ್ನು ಕೀಟಲೆ ಮಾಡುತ್ತಿದ್ದುದೇ ಕಾರಣ. ನನ್ನ ಎದೆಯಲ್ಲಿ ಜೇನ್ನೊಣಗಳಿವೆ ಎಂದ ನನ್ನ ಭಾವಮೈದುನ.' 'ನಾನು ಇಲ್ಲಿ ಇಲ್ಲದಿರುವಾಗ ನಾನೇನಾದರೂ ಬಂದರೆ, ನಾನು ಬರುವ ತನಕ ನನ್ನನ್ನು ಇಲ್ಲೇ ಇರಿಸಿಕೊಂಡಿರು.' 'ನಾನು ಎಲ್ಲರಂತೆ ಇರಬೇಕಾದರೆ, ಕಾರುಗಳನ್ನೆಲ್ಲ ಹಡಗುಗಳಾಗಿ ಬದಲಾಯಿಸಬೇಕು, ಅನ್ನಿಸುತ್ತದೆ. ಅವಕ್ಕಿಂತ ನಾನೇ ಜೋರಾಗಿವೆ.' ಈ ತಾರುಮಾರು ಬಯಲಾಗಬೇಕಾದರೆ ರೋಗಿಯ ಕಣ್ಣು ಮರಳುಗಳ (ಡೆಲ್ಯೂಷನ್ಸ್) ವಿಚಾರ ಎತ್ತಿದರೆ ಮಾತ್ರ ಸಾಧ್ಯ. ಉಳಿದ ವಿಚಾರಗಳಲ್ಲಿ ರೋಗಿ ಎಲ್ಲರಂತೆ ಇರುವ. ಈ ವಿಚಿತ್ರವನ್ನು ಆರೋಗ್ಯವಂತರು ಕೂಡ ತಮ್ಮ ಕನಸುಗಳಲ್ಲೂ ನಿದ್ದೆ ಹತ್ತುವಾಗಲೂ ಕಾಣುತ್ತಾರೆ. ಆದರೆ ಇಚ್ಚಿತ್ತರೋಗಿ ಇವನ್ನು ಹಗಲಿನ ಎಚ್ಚರದ ಜೀವನದಲ್ಲೂ ಅನುಭವಿಸುವನು. ಇದರಿಂದಲೇ, ರೋಗಿಯೊಂದಿಗೆ ಮಾತಾಡುವವರು ಹಾಗೆ ಹುಚ್ಚುಹುಚ್ಚಾಗಿ ವಿಚಾರಗಳನ್ನು ಚೆನ್ನಾಗಿ ಹೇಳಿ ತಮ್ಮನ್ನೇ ಅಣಕಿಸುವನೆಂದು ಭಾವಿಸುವರು. ಹೀಗೇ ಬೇರೂರಿದ (ಕ್ರಾನಿಕ್) ಇಚ್ಚಿತ್ತ ರೋಗಿಯೊಬ್ಬ ತಮಾಷೆಗಾರ ಎನಿಸುಕೊಂಡು ಹೊಟ್ಟೆ ಹೊರೆದುಕೊಳ್ಳುತ್ತಿದ್ದನಂತೆ. ತನ್ನಲ್ಲಿ ತಾನು ಮುಳುಗಿರುವುದರಿಂದ ಈ ವಿಚಿತ್ರ ಪ್ರದರ್ಶನಗಳು ಸಾಧ್ಯ. ಅಲ್ಲದೆ ತನ್ನ ಹಗಲುಗನಸುಗಳಿಗೆ ಅಡ್ಡಿ ಬರುವುದನ್ನು ಸಹಿಸದೆ ರೋಗಿ ಗೊಣಗುತ್ತಿರುವನು.

ಬಹುಮಟ್ಟಿಗೆ ಯೋಚನೆ ಕೆಟ್ಟಿದ್ದರಿಂದ ಭ್ರಮೆಗಳು ಏಳುತ್ತವೆ. ಇವು ವಿಚಿತ್ರವಾಗಿರಬಹುದು. ಇದ್ದಕ್ಕಿದ್ದ ಹಾಗೆ ಮನಸ್ಸಿಗೆ ನಾಟುವುದರಿಂದ, ಇವನ್ನು ರೋಗಿ ಷೂರಾ ನಂಬಿ ವಾದಿಸುವನು. ಇದರಲ್ಲೂ ಇಚ್ಚಿತ್ತ ರೂಪ ತೋರಬಹುದು. ತನ್ನ ಹೆಂಡತಿ ತನಗೆ ವಿಷ ಹಾಕಿದಳೆಂದು ರೋಗಿ ಹೇಳಿದ್ದನ್ನು ವಿಚಾರಿಸಿಕೊಂಡ ಮೇಲೆ, ತಾನು ಅರಗಿಸಿಕೊಳ್ಳಲಾಗದ ಊಟ ಹಾಕುವಳೆಂದು ತೇಲಿಸಿ ಹೇಳುತ್ತಾನೆ.

ಎಲ್ಲದರಲ್ಲೂ ಏನೋ ಅರ್ಥವಿದೆ, ಒಳಗೊಳಗೇ ಏನೋ ನಡೆಯುತ್ತಿದೆ. ಇದರಿಂದ ತನಗೇನೋ ಕೆಟ್ಟದ್ದು ಕಾದಿದೆ ಎಂದು ಭ್ರಮಿಸುತ್ತಾನೆ. ಕೆಲವೇಳೆ ಇದನ್ನೆಲ್ಲ ಪತ್ತೆ ಹಚ್ಚಿ, ಇದಕ್ಕೆ ಮತದ ಇಲ್ಲವೇ ಜಾತಿಯ ಬಣ್ಣ ಹಚ್ಚುತ್ತಾನೆ. ಕೆಲವು ವೇಳೆ ತನಗೆ ಯಾರೋ ಮಾಯ ಮಾಟ ತಂತ್ರ ಮಾಡಿಸಿಬಿಟ್ಟಿರುವರು ಎಂದುಕೊಳ್ಳುವನು. ರೋಗಿಯ ವಿದ್ಯೆ, ಅಂತಸ್ತುಗಳಿಗೆ ತಕ್ಕ ಭ್ರಾಂತಿಗಳು ಹಟ್ಟುತ್ತವೆ. ಇಲ್ಲಿ ರೋಗಿಯ ಲಕ್ಷಣಗಳಲ್ಲಿ, ಚೆನ್ನಾಗಿರುವ ಬುದ್ಧಿಯೊಂದಿಗೆ ವಿಚಿತ್ರ ಭ್ರಮೆಗಳೂ ಸೇರಿಕೊಂಡಿರುತ್ತವೆ. ಕೆಲವೇಳೆ ಭ್ರಮೆಯ ನಂಬುಗೆಯಂತೆ ರೋಗಿ ವರ್ತಿಸುವುದಿಲ್ಲ.

ಬುದ್ಧಿ ಚೆನ್ನಾಗೇ ಇರುವುದು. ಎಚ್ಚರವಂತು ಎಂದಿಗೂ ತಪ್ಪದು. ನೆನೆಪು ಚೆನ್ನಾಗಿದ್ದರೂ ನಿರಾಸಕ್ತಿ, ಭ್ರಮೆ, ಭ್ರಾಂತಿಗಳು ಅಡ್ಡಿಯಾಗಬಹುದು. ಎಷ್ಟೋ ದಿನಗಳಿಂದ ಮತಿಗೆಟ್ಟವನಂತೆ ಇದ್ದವನಿಗೆ ಅಮೈಲೊಬಾರ್ಬಿಟೋನ್, ಇನ್ಸುಲಿನ್ ತೆರನ ಮದ್ದು ಕೊಟ್ಟರೆ, ಬಲವಾದ ಬೇರೆ ಸಖತ್‍ಕಾಯಿಲೆಯೋ ಆಘಾತವೋ ತಾಕಿದರೆ, ಮನಸ್ಸು ಕೆಟ್ತೇ ಇಲ್ಲ ಎನ್ನುವಂತೆ ವರ್ತಿಸುತ್ತಾನೆ. ಕೆಲವು ಬಾರಿ ಯಾರೂ ನಿರೀಕ್ಷಿಸದ ಕೆಲಸಗಳನ್ನು ಮಾಡುತ್ತಾನೆ. ಅವನ ಮಾತು ಬರವಣಿಗೆಗಳಲ್ಲಿ ಯೋಚನೆಯ ತಾರುಮಾರನ್ನು ಚೆನ್ನಾಗಿ ಕಾಣಬಹುದು:ತನ್ನವೇ ಬೇರೆಯಾದ ಪದ, ಸಂಕೇತ, ವ್ಯಾಕರಣ, ಹೇಳಿದ್ದೇ ಹೇಳುವುದು, ತೊದಲು ನುಡಿಯಲ್ಲಿ ಮತ್ತೊಬ್ಬರು ಹೇಳುವಂತೆ ಮಾತು. ಆದರೂ ಮಾತು, ಬರಹಗಳಲ್ಲಿ ಹೊರಗೇನೂ ವಿಚಿತ್ರ ತೋರದಿರಲೂಬಹುದು. ರೋಗ ಬೇರೂರಿದ ರೋಗಿ ಬೇರೆ ಗಂಟಲಿನ ದನಿಯಲ್ಲಿ ಮಾತಾಡಬಹುದು. ಬರವರಣಿಗೆ ಚಿತ್ತಾರವಾಗಿರಬಹುದು.

ಮನೋಭಾವದ ಅಸಜಹತೆ:ಎಂದಿನಿಂದಲೂ ತಾನು ಪ್ರೀತಿಸುತ್ತಿದ್ದವರಲ್ಲಿ ಒಲವು ಕುಗ್ಗಿರುವುದೂ ಹಲವು ವೇಳೆ ಅವರನ್ನು ಕಂಡರೆ ಆಗದಿರುವುದೂ ಮೊದಮೊದಲು ರೋಗಿಗೇ ಅರಿವಾಗುತ್ತದೆ. ಒಮ್ಮೊಮ್ಮೆ ಆನಂದ, ನಿರಾಸೆ, ದಿಗಿಲು, ಸಾವಿನ ನರಳಿಕೆ, ಪೂರಾ ಜಡತೆ,ಧ್ಯಾನ ಹೀಗೆಲ್ಲ ಮಿತಿಮೀರಿದ ಉದ್ವೇಗಗಳು ಇಚ್ಚಿತ್ತ ರೋಗಿಯಲ್ಲಿ ಕಾಣುವುದು ಹೆಚ್ಚೇನಲ್ಲ. ಇನ್ನೂ ಹೆಚ್ಚಿನದಾಗಿ, ಕರುಣಾಜನಕ ಸುದ್ದಿಯನ್ನು ತನಗಿನಿತೂ ತಟ್ಟದವನಂತೆ ಕೇಳುತ್ತಾನೆ, ನಿರಾಸಕ್ತನಾಗಿರುತ್ತಾನೆ. ತನ್ನವರಿಗೇ ಆದ ಅನಾಹುತಗಳನ್ನು ಕೇಳಿ ನಗುತ್ತಾನೆ. ಇಲ್ಲವೇ ಬೇಜಾರು ಪಡುತ್ತಾನೆ. ಆದರೆ, ರೋಗಿಗೆ ಇವುಗಳಿಂದ ಆಗುವ ಅರ್ಥಗಳೇ ಬೇರೆ. ರೋಗಿ ಆಡುವ ಮಾತುಗಳಿಂದಲೂ ಅವನ ನಿಜವಾದ ಯೋಚನೆಗಳು ನಮಗೆ ತಿಳಿಯವು. ಏಕೆಂದರೆ, ಮಾತುಗಳಿಗೆ ಆತ ಕೊಡುವ ಅರ್ಥಗಳೇ ಬೇರೆ. ಹೀಗೆ, ಏನೇನೂ ತಿಳಿಯದಂತೆ ಕುಳಿತಿದ್ದಾತ ಇದ್ದಕ್ಕಿದ್ದ ಹಾಗೆ ರೇಗು, ಕಳವಳ, ಅಳು, ಉದ್ರೇಕ, ಪ್ರೀತಿ ತೋರಬಹುದು. ಅವನಾಡುವ ಮಾತುಗಳಿಗೂ ಮೊಗಚರ್ಯೆಗೂ ಸಂಬಂಧ ಇರದಂತೆ ಕಾಣುತ್ತಾನೆ. ಆಗ ತಾನೇ ಕಂಡು ಚೆನ್ನಾಗಿ ಮಾತನಾಡಿಸಿದ ಒಬ್ಬನನ್ನು ಇನ್ನೊಂದು ಗಳಿಗೆಯಲ್ಲಿ ಸಿಕ್ಕಾಪಟ್ಟೆ ಬಯ್ಯಬಹುದು. ಆ ಗಳಿಗೆಯಲ್ಲಿ ತನ್ನ ಚಿತ್ತ ಹೇಗಿರುವುದೋ ಹಾಗೆ ವರ್ತಿಸುತ್ತಾನೆ.

ಭ್ರಮೆಗಳು: ಏನೇನೋ ಕಂಡೆ, ಕೇಳಿದೆ ಎಂದು ರೋಗಿ ವಿವರಿಸಲು ಭ್ರಮೆ, ಭ್ರಾಂತಿಗಳೇ ಕಾರಣ. ಎಲ್ಲರೂ ತನ್ನನ್ನು ಕೊಲ್ಲಲು ಹವಣಿಸುತ್ತಿರುವರು ಎನ್ನುತ್ತಾನೆ. ತಾನೊಬ್ಬ ಮಹಾ ಪಂಡಿತ, ನಟ, ಕವಿ, ಚಕ್ರವರ್ತಿಯೆಂದೇ ವರ್ತಿಸುತ್ತಾನೆ. ಈ ರೋಗಿಯಲ್ಲಿ ಇವು ಬಲು