ಪುಟ:Mysore-University-Encyclopaedia-Vol-2-Part-2.pdf/೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಇಟಲಿಯ ಇತಿಹಾಸ ಇಟಲಿಯನ್ನಾಳುತ್ತಿದ್ದರು. ಮೂರನೇಯ ಆಟೋ ಕಾಲದಲ್ಲಿ ರೋಮ್ ಈ ರಾಜ್ಯದ ಕೇಂದ್ರವಾಗಬಹುದಿತ್ತು. ಆದರೆ ರೋಮನರು ಆತನನ್ನು ಅಲ್ಲಿಂದ ಓಡಿಸಿದರು. ಆತ ಸತ್ತಾಗ (೧೦೦೨) ರೋಮಿನಲ್ಲಿದ್ದ ಸ್ಥಳೀಯ ಅರಸುಮನೆತನದವನೊಬ್ಬ ಬಲಿಶ್ಠನಾದ. ವಿದೇಶಿಯರ ವಿರುದ್ಢವಾಗಿ ಜನಾಭಿಪ್ರಾಯದ ಉಪಯೋಗ ಪಡೆದುಕೊಂಡು ಆತನೇ ಕಿರೀಟ ಧರಿಸಿದನು. ಆಟೋ ಸಾಮ್ರಾಜ್ಯದ ಕಾಲದಲ್ಲಿ ಪೋಪ್ ವ್ಯವಸ್ಥೆಗೆ ಅಂತಾರಾಶ್ಟ್ರೀಯತೆಯ ಲಕ್ಷಣ ಬಂತು. ಮೊದಲನೇಯ ಆಟೋ ತನ್ನ ಕಾಲದಲ್ಲಿ ಒಂದು ಕ್ರೈಸ್ತಧರ್ಮಸಭೆ ನಡೆಸಿದ. ಚಕ್ರವರ್ತಿಯಿಂದ ನೇಮಕವಾದವನೇ ಪೋಪ್ ಆಗಬೇಕೆಂಬ ತತ್ವಕ್ಕೆ ರೋಮನರಿಂದ ಅಸ್ತು ಎನಿಸಿದ. ೩ನೇ ಆಟೋ ನೇಮಿಸಿದ ೫ನೇ ಗ್ರಿಗರಿ ಪ್ರಥಮ ಜರ್ಮನ್ ಪೋಪ್ ಆದ. ಈತನ ಕಾಲಾನಂತರ ಬಂದ ಆರಿಲಾಕ್ ನ ಗಿರ್ಬರ್ಟ್ ಎಂಬವನು ಇಮ್ಮಡಿ ಸಿಲ್ವೆಸ್ಟರ್ ಆದ. ಮುಮ್ಮಡಿ ಆಟೋನೊಂದಿಗೆ ಸಹಕರಿಸಿದ.ಪ್ರಪಂಚವ್ಯಾಪಿ ಕ್ರೈಸ್ತಪ್ರಭುತ್ವದ ರಚನೆಗೆ ನೆರವಾದ.ಚಕ್ರಾಧಿಪತಿಗಳೊಂದಿಗೆ ಚರ್ಚೂಧಾರಣಾ ಚಳುವಳಿಗೆ ಉತ್ತೇಜನ ದೊರಕಿತು. ಇದು ೧೧ನೇ ಶತಮಾನದ ಇತಿಹಾಸದ ಒಂದು ಪ್ರಮುಖ ಘಟನೆ. ಪೋಪ್ ತುರ್ತುರಕ್ಷಣೆಯಲ್ಲಿ ಅವರಿಗೂ ಅವರ ಅಧಿಕಾರಕ್ಕೂ ಅನೇಕ ವೈರಿಗಳುಂಟಾದರು. ದರ್ಮವಿಕ್ರಯ, ಪೋಪ್ ವಿವಾಹ ಮುಂತಾದವನ್ನು ಸುಧಾರಕರು ವಿರೋಧಿಸಿದರು. ಈ ರೀತಿಯಲ್ಲಿ ಸುಧಾರಕರು ಚಕ್ರವರ್ತಿಗಳೊಡನೆ ಹೋರಾಡುವುದು ಅನಿವಾರ್ಯವಾಯಿತು. ಈ ಹೋರಾಟ ಬಹುಕಾಲ ಮುಂದುವರೆಯಿತು.ಇಟಲಿಯಲ್ಲಿ ಈ ಹೋರಾಟದ ಪರಿಣಾಮವಾಗಿ ಚಕ್ರವರ್ತಿಯ ಶಕ್ತಿ ಕುಂಠಿತವಾಯಿತು. ಪೋಪ್ ವ್ಯವಸ್ಥೆಯಲ್ಲಿ ಗೌರವ ಹೆಚ್ಚಿತು. ನಗರಗಳು ಸ್ವತಂತ್ರವಾದವು. ೧೧ನೇ ಶತಮಾನದ ಕೊನೆಯ ವೇಳೆಗೆ ಇಟಲಿಯ ನಗರವಾಸಿಗಳು ಶಿಷ್ಠಾಚಾರಗಳನ್ನು ಕಲಿತಿದ್ದರು. ತಾವು ಆರಿಸಿದವರನ್ನು ಪ್ರತಿನಿಧಿಗಳೆಂದು ಕರೆಯುವ ಹಾಗೂ ರೋಮ್ ಜನರ ಹಕ್ಕುದಾರರಾಗಿ ಸ್ವಸರ್ಕಾರವನ್ನು ರಚಿಸಿಕೊಳ್ಳುವ ನ್ಯಾಯಾಂಗ ತರಬೇತಿ ಹೊಂದಿದ್ದರು.ಕೆಲವೊಮ್ಮೆ ನಗರವೊಂದಕ್ಕೆ ಸನ್ನದನ್ನು ನೀಡುವುದರ ಮೂಲಕ ನಗರವೊಂದರ ಬೆಂಬಲವನ್ನು ರಾಜ ಪಡೆಯುತ್ತಿದ್ದ. ಕೆಲವೊಮ್ಮೆ ಬಿಷಪ್ ಮಾಡುತ್ತಿದ್ದ ಧಾರ್ಮಿಕ ಕಟ್ಟಳೆಗಳು ಪ್ರಿಯವಾಗದಿದ್ದಲ್ಲಿ ಜನ ಅವನ ವಿರುದ್ಧ ದಂಗೆಯೇಳುತ್ತಿದ್ದರು. ಈ ರೀತಿಯಲ್ಲಿ ೧೨ನೇಯ ಶತಮಾನದಲ್ಲಿ ಉತ್ತರ ಮತ್ತು ಮಧ್ಯ ಇತಲಿಯ ನಗರರಾಜ್ಯಗಲೆಲ್ಲವೂ ತಮ್ಮತಮ್ಮಲ್ಲಿಯೇ ಬಲಿಷ್ಠವಾತಿದ್ದುವಲ್ಲದೆ ಹೊರಗಡೆ ಭೂಭಾಗಗಳನ್ನು ಹೊಂದಿದ್ದವರು ತಮ್ಮ ಅಧಿಕಾರವನ್ನು ಒಪ್ಪುವಂತೆ ಮಾಡಿದ್ದುವು.

ಸಾಮ್ರಾಜ್ಯ ಹಾಗು ಪೋಪಧ್ಕಾರ - ೧೧ನೇ ಶತಮಾನದಲ್ಲಿ ನಾರ್ಮನ್ನರು ದಕ್ಷಿಣ ಇಟಲಿಯನ್ನು ವಶಮಾಡಿಕೊಂಡರು. ೧೨ನೇ ಶತಮಾನದಲ್ಲಿ ಸಿಸಿಲಿಯನ್ನು ವಶಪಡಿಸಿಕೊಂಡು ತಮ್ಮ ಆದಾಯವನ್ನು ಅಧಿಕಗೊಳಿಸಿಕೊಂಡರು.ಅವರು ಚರ್ಚ್ ಹಾಗು ಸುಧಾರಣೆಗಳ ಬೆಂಬಲಿಗರಾಗಿದ್ದರು. ಪೋಪರು ಮೊದಮೊದಲು ಇವರ ಮುಂಬರವನ್ನು ತಡೆಗಟ್ಟಿದರೂ ಸಿಸಿಲಿಯನ್ನು ಚಕ್ರಾಧಿಪತ್ಯವಿರೊಧಿ ರಕ್ಷಣಾ ವ್ಯವಥೆಯನ್ನು ಗಮನಿಸಿದರು.೧೧೫೪ರಲ್ಲಿ ಫ್ರೆದರಿಕ್ ಬಾರ್ಬರೊಸ್ ಇಟಲಿಯಲ್ಲಿ ಪುನಹ ಸಾಮ್ರಾಜ್ಯಶಕ್ತಿ ಸ್ಥಾಪಿಸಲು ಆಲ್ಪ್ಸ್ ನ್ನು ದಾಟಿದಾಗ ತನ್ನ ಯವುದೇ ರಾಜತ್ವದ ಹಕ್ಕುಗಳನ್ನು ಅವರ ಮೇಲೆ ಹೇರಿದಲ್ಲಿ ವಿರೋಧಿಸಲಿದ್ದ ಮೂರು ರಾಜಕೀಯ ಕೇಂದ್ರಗಳನ್ನು ಗಮನಿಸಿದ; ಅವುಗಲ ಅಭಿವೃದ್ಧಿಯನ್ನು ಕುಂಠಿತಗೊಳಿಸಲು ಇಚ್ಛಿಸಿದ. ಸಾಮ್ರಾಜ್ಯ ಮತ್ತು ಪೊಪನ ಅಧಿಕಾರದ ವಿರಿದ್ಧ ಹೊಸ ಹೋರಾಟವೇ ಆರಂಭವಾಯಿತು. ಈ ಘಟನೆಗಳು ಬಹುಕಾಲ ನದೆದವು. ೧೩ನೇ ಹತಮಾನದ ಉತ್ತರಾರ್ಧದ ವೇಳೆಗೆ ಚಕ್ರವರ್ತಿಗಳ ಕೈವಾಡ ಕೊನೆಗೊಂಡಿತು.ನಗರರಾಜ್ಯಗಳು ತಮ್ಮ ಅಭ್ಯುದಯ ಶಿಖರವನ್ನೇರಿದವು; ಯಾವುದೇ ಅಧಿಪತಿಯ ಆದಳಿತಕ್ಕೊಳಗಾಗಬಾರದೆಂದು ನಿರ್ಧರಿಸಿದ್ದವು.ತನ್ನ ಶಕ್ತಿಯ ಅರಿವನ್ನು ಹೊಂದಿದ್ದ, ಗಣರಾಜ್ಯ ಪರಂಪರೆಯಲ್ಲಿ ಮೆರೆಯುತ್ತಿದ್ದ, ಕಲೆಯಲ್ಲಿ ಪ್ರಖ್ಯಾತವಾಗಿದ್ದ ಫ಼್ಲಾರೆನ್ಸ್ ನಾಗರಿಕ ಸ್ವಾತಂತ್ರ್ಯಕ್ಕೆ ಉತ್ತಮ ಉದಾಹರಣೆಯಾಗಿತ್ತು. ೮ನೇ ಬೋನಿಫ಼ೆಸನ (೧೨೦೪-೧೩೦೩) ಕಾಲದಲ್ಲಿ ಇತಲಿಯ ಮೆಲೆ ಪೋಪಧಿಕಾರ ಹೇರಲು ಪ್ರಯತ್ನಗಳು ನಡೆದವು. ಆದರೆ ಇವು ಯಶಸ್ವಿಯಾಗಲಿಲ್ಲ. ಮಧ್ಯಯುಗದ ಪೋಪಧಿಕಾರ ಕ್ಷೀಣಿಸಿಹೋಯಿತು.

ಸ್ಥಳೀಯ ನಿರಂಕುಶ ಪ್ರಭುತ್ವ ಪ್ರಾಬಲ್ಯ- ೧೪ನೇ ಶತಮಾನದಲ್ಲಿ ಇಟಲಿಯಲ್ಲಿ ವಾಣಿಜ್ಯಕ್ರಿಯೆ ಹೆಚ್ಚಿತು; ಕಲೆಯ ಅಭಿವ್ರಿದ್ಧಿಯಾಯಿತು. ಅಂತೆಯೇ ವಿಪರೀತವಾದ ರಾಜಕೀಯ ಗೊಂದಲವೂ ಉಂಟಾಯಿತು.ಊರಿಂದೂರಿಗೆ ಅಲೆದಾದುತ್ತಿದ್ದ ಡಾಂಟೆ ಮಹಾಕವಿಗೆ ಎಲ್ಲೆಲ್ಲೂ ಕ್ಷೋಭೆಯೇ ಕಾಣಿಸಿತು.ಪ್ರತಿಯೊಂದು ನಗರದಲ್ಲೂ ಇದ್ದ ಪರದೇಶಿಗಳ ಬಾಹ್ಯಶತ್ರುಗಳೊಡನೆ ಕೂಡಿ ಅಧಿಕಾರ ಪಕ್ಷದವರನ್ನುರುಳಿಸುವ ಯತ್ನದಲ್ಲಿ ತೊದಗಿದ್ದರು.ನಗರವಾಸಿಗಳು ಸರ್ವದಾ ಧಾಳಿಯ ಭೀತಿಗೆ ತುತ್ತಾದರು. ಇಟಲಿಯವರ ಸೃಷ್ಟ್ಯಾತ್ಮಕ ಶಕ್ಥಿಯನ್ನುತ್ತೆಜಿಸಬಲ್ಲ ಸುಭದ್ರ ಆಳ್ವಿಕೆಯ ಅವಶ್ಯಕತೆಯಿತ್ತು. ರೊಮನ್ ಜನತೆಯನ್ನು ಪ್ರತಿನಿಧಿಸಬಲ್ಲ ರಾಜನ ಆಗಮನದಿಂದ ಮಾತ್ರವೇ ಇಟಲಿಯ ರಾಜಕೀಯ ಏಕತೆಯನ್ನು ಸಾಧಿಸಬಹುದೆಂಬುದು ಡಾಂಟೆಯ ಅಭಿಪ್ರಾಯವಾಗಿತ್ತು. ಆಲ್ಪ್ಸ್ ಪರ್ವತದಾಚೆಯ ಚಕ್ರವತಿಯಿಂದ ಇಟಲಿಯವರನ್ನು ಸರಿಪಡಿಸಲು ಸಾಧ್ಯವಿಲ್ಲವೆಂಬುದು ೭ನೇ ಹೆನ್ರಿಯ (೧೩೦೮-೧೮) ಆಳ್ವಿಕೆಯಿಂದ ಸ್ಫಷ್ಠವಾಗಿತ್ತು. ಈತನಿಗೆ ರೋಮ್ ನಲ್ಲಿ ರಾಜ್ಯಾಭಿಷೇಕವಾಯಿತು.ಫ್ಲಾರೆನ್ಸನ್ನು ವಶ್ಪಡಿಸಿಕೊಂದ ಆನಂತರ ಈತ ಪೀಸಾದಲ್ಲಿ ಕಾಲವಾದ. ಇಟಲಿಯ ಏಕೀಕರಣಕ್ಕೆ ಅನೇಕ ಮಾರ್ಗಗಳನ್ನು ಅನುಸರಿಸಲಾಯಿತು.೧೩೧೩-೪೩ರ ವರೆಗೆ ನೇಪಲ್ಸ್ ನ ದೊರೆಯಾಗಿದ್ದ ಅಂಜೌನ ಆಳ್ವಿಕೆಯಲ್ಲಿ ಗೈಲ್ಪ್ ಜನರು ಹೆಚ್ಚು ನಿರೀಕ್ಷೆ ಇಟ್ಟುಕೊಂಡಿದ್ದರು.ಇವನಿಗೆ ಫ್ಲಾರೆನ್ಸಿನ ಅಧಿಪತ್ಯವನ್ನು ೫ ವರ್ಷಗಳ ಕಾಲ ನೀಡಲಾಗಿತ್ತು. ಈತ್ ಇಟಲಿಯ ಪೋಪ್ ಮತ್ತು ಫ್ರನ್ಸುಗಳೆರದನ್ನೂ ಪ್ರತಿನಿಧಿಸುತ್ತಿದ್ದ. ೧೩೪೭-೫೪ರ ವರೆಗೆ ರೀಂಜಿ ಎಂಬವನು ಇಟಲಿಯ ಒಗ್ಗಟ್ಟಿಗಾಗಿಯೂ, ಅಲ್ಲಿ ಪ್ರಜಾಪ್ರಭುತವ ಸ್ಥಾಪನೆಗಾಗಿಯೂ ಶ್ರಮಿಸಿದ.ಇದಾದ ಆನಂತರ ಪೋಪಧಿಕಾರವನ್ನು ಮತ್ತೆ ಸ್ಥಾಪಿಸುವ ಪ್ರಯತ್ನ ಮತ್ತೆ ನಡೆಯಿತು. ೧೩೬೭ರಲ್ಲಿ ರೋಮಿಗೆ ಹಿಂತಿರುಗಿದ ೫ನೇಯ ಆರ್ಬನ್ ಎಂಬುವನು ಅಲ್ಲಿ ಕೇವಲ ೩ ವರ್ಷಗಳ ಕಾಲ ಇದ್ದ.ಪೋಪನ ಸಾನಿಧ್ಯದಿಂದ ಶಾಂತಿಯೇನೂ ಇರಲಿಲ್ಲ. ಪ್ರತಿಯಾಗಿ ಕಲಹವೇ ತೀವ್ರವಾಯಿತು. ವಿದೇಶೀ ವ್ಯಾಪಾರಿಕೂಟಗಳು ದೇಶದಲ್ಲೆಲ್ಲ ಸುಲಿಗೆ ಹಾಗು ಕೊಲೆ ಮಾಡುತ್ತ ಸುತ್ತಡಿದವು.ನಗರ ರಾಜ್ಯಗಳಲ್ಲಿ ನಿರಂಕುಶಪ್ರಭುಗಳ ಅಭ್ಯುದಯದಿಂದ ಹೊಸರೀತಿಯ ರಾಜಕೀಯ ವ್ಯವಸ್ಥೆಯೊಂದು ಉದ್ಭವಿಸಿತು. ಹೋರಾತಗಳನ್ನು ಹತ್ತಿಕ್ಕಿ ದೇಶದಲ್ಲಿ ಶಾಂತಿ ನೆಲೆಸುವಂತೆ ಮಾಡಿ ಬಾಹ್ಯಶತ್ರುಗಳಿಂದ ದೇಶವನ್ನು ರಕ್ಷಿಸುವುದು ಎಲ್ಲ ವರ್ಗಗಳ ಹಿತಾಸಕ್ತಿಯ ದೃಷ್ಠಿಯಿಂದ ಆಳ್ವಿಕೆ ನಡೆಸುವುದೂ ಇದರ ಉದ್ದೆಶವಾಗಿತ್ತು.

ಹೊಸಹುಟ್ಟು ಹಾಗು ಅನಂತರ - ೧೫ನೇ ಶತಮಾನದ ಆರಂಭದಲ್ಲಿ ನೇಪಲ್ಸ್, ಪೋಪಾದಳಿತ, ಫ್ಲಾರೆನ್ಸ್, ಮಿಲಾನ್ ಹಾಗು ವೆನಿಸ್ ಗಳಲ್ಲಿ ಇಟಲಿ ಹಂಚಿಹೋಗಿತ್ತು. ಈ ಶತಮಾನದ ಮೊದಲಾರ್ಧ ಭಾಗದಲ್ಲಿ ಪ್ರತಿರಾಜ್ಯವೂ ತನ್ನ ಎಲ್ಲೆಗಳನ್ನು ವಿಸ್ತರಿಸುವುದರಲ್ಲಿ ಅಥ್ಹವ ಶಕ್ತಿಯನ್ನು ಪ್ರಬಲಗೊಳಿಸಿಕೊಳ್ಳುವುದರಲ್ಲಿ ನಿರತವಾಗಿತ್ತು. ಈ ನಗರಗಲ ನಡುವೆ ನಡೆಯುತ್ತಿದ್ದ ದೀರ್ಘಯುದ್ಧ ೧೪೫೪ರಲ್ಲಿ ನಿಂತಿತು. ಅಲ್ಲಿ ಪ್ರಬಲವಾಗಿದ್ದ ಮೂರು ರಾಜ್ಯಗಳು ಸೇರಿ ಒಂದು ರಕ್ಷಣಾಕೋಟೆ ಸ್ಥಾಪಿಸಿಕೊಂಡವು. ಇದು ರಾಷ್ತ್ರೀಯ ಏಕತೆಯ ಅಸ್ತಿಭಾರವಾಗುವಂತೆ ಕಂಡಿತು.ವಿದೇಶಿಯರ ಧಾಳಿಯನ್ನು ತಡೆಯುವುದರಲ್ಲಂತೂ ರಕ್ಷಣಾ ಕವಚವಯಿತು. ಇಟಲಿಯ ರಾಜರು ತಮ್ಮ ಸಾಮನ್ಯ ಆದರ್ಶಗಳು, ಆಸ್ತಿಗಳು ಹಾಗು ಹೆದರಿಕೆಗಳನ್ನು ಅಭಿವ್ಯಕ್ತಿಗೊಳಿಸಿದ್ದರು. ಎರಡು ಸಣ್ಣ ರಾಜ್ಯಗಳನ್ನು ಬಿಟ್ಟು ಮಿಕ್ಕೆಲ್ಲವೂ ಈ ಕೂಟದಲ್ಲಿ ಸೇರಿದ್ದುವು. ಆಗಲಿದ್ದ ಸಣ್ಣಪುಟ್ತ ಯುದ್ಧಗಳು ಇದರಿಂದ ನಿಂತುವು.ಇದು ೧೪೮೦ರಲ್ಲಿ ಮತ್ತೆ ೨೫ ವರ್ಷಗಳ ಜೀವದಾನ ಪಡೆಯಿತು. ೪೦ ವರ್ಷಗಳ ಕಾಲ ಯಾವುದೇ ಯುದ್ಧದ ಭಯವಿಲ್ಲದಂತಾಯಿತು. ಆಗ ಇಟಲಿ ತನ್ನೆಲ್ಲ ಶಕ್ತಿಯನ್ನೂ ಕಲೆಯ ಅಭಿವೃದ್ಧಿಗೆ ಉಪಯೋಗಿಸಿಕೊಂಡಿತು. ಹೊಸ ಹುಟ್ಟಿನ ನಾಗರಿಕತೆಗೆ ಪ್ರತಿಯೊಂದು ನಗರವೂ ತನ್ನದೇ ಆದ ಮಹತ್ಕಾಣಿಕೆ ನೀಡಿತು. ಕಟ್ಟಡಗಳ ರಚ್ನೆ ಹಾಗು ಉತ್ಸವಗಳಲ್ಲಿ ಒಂದರೊಡನೊಂದು ಪೈಪೋಟಿಯಿಂಅ ಸ್ಫರ್ಧಿಸಿದವು. ನಾಗರೀಕತೆಯ ಪ್ರಭಾವದಿಂದ ಇಟಲಿಯನ್ನಾಯುತ್ತಿದ್ದವರು ಯುದ್ಧಭಯವನ್ನೇ ಮರೆತಿದ್ದರು. ಶಾಂತಿಕಾಲದಲ್ಲಿ ಪ್ರೋತ್ಸಾಹ ಹೊಂದಿ ಅಭಿವೃದ್ಧಿಗೊಂಡಿದ್ದ ಕಲೆ ಪ್ರಥಮ ಫ್ರೆಂಚ್ ಧಾಳಿಯ ಕಾಲದಲ್ಲಿ (೧೪೯೪) ಮತ್ತೆ ಅಸ್ಥವ್ಯಸ್ಥಗೊಂಡಿತು. ಲೊರೆಂಜ಼ೋ ಡಿ ಮೆಡಿಚಿ ತನ್ನೆಲ್ಲ ಶಕ್ತಿಗಲನ್ನು ಇಟಲಿಯ ದೇಹಗಳ ನಡುವೆ ಶಾಂತಿ ಸೌಹಾರ್ಧಗಳನ್ನು ಬೆಳೆಯಿಸಲು ವ್ಯಯೀದ.ಇವನು ೧೪೯೨ನಲ್ಲಿ ಮೃತನಾದ. ಫ್ರಾನ್ಸಿನ ದೊರೆ ಮಿಲಾನ್, ನೇಪಲ್ಸ್ ಹಾಗು ಇಟಲಿಯ ಸಾಧನೆಗಲ ಮೇಲೆ ತನ್ನ ದೃಶ್ಠಿ ಬೀರಿದ. ಇತಲಿಯ ರಾಜ್ಯಗಳ ಸಾಮೂಹಿಕ ವಿರೋಧ ಎಂಟನೆಯ ಚಾರ್ಲ್ಸ್ ನ ಯತ್ನವನ್ನು ವಿಫಲಗೊಳಿಸಬಹುದಿತ್ತು.ಆದತೆ ಫ್ಲಾರೆನ್ಸ್ ಮೆಡಿಚಿಯನ್ನು ಮಿತ್ರನಂತೆ ಆಹ್ವಾನಿಸಿತು. ಇವನು ನೇಪಲ್ಸ್ ವರೆಗೆ ತಡೆಯಿಲ್ಲದೆ ತನ್ನ ವಿಜಯಯಾತ್ರೆ ಮುಂದುವರೆಸಿದ. ಚಾರ್ಲ್ಸ್ ಮುನ್ನುಗ್ಗುವುದರಲ್ಲಿ ಯಶಸ್ವಿಯಾದರೂ ಇಟಲಿಗೆ ಬಂದ ಒಂದೊ ವರ್ಷದಲ್ಲೇ ನೇಪಲ್ಸನ್ನು ತನ್ನ ಕೈಯಿಂದ ಕಳೆದುಕೊಂಡ. ಸ್ಪೇನಿನ ಫೆರ್ಡಿನೆಂಡ್ ಮತ್ತು ಮ್ಯಾಕ್ಸಿಮಿಲಿಯನ್ ಸಮ್ರಾಟರು ವೆನಿಸ್ ನ ಲೀಗ್ ಸೇರಿದರು. ಸ್ಪ್ಯಾನಿಶ್ ಸೈನ್ಯ ನೇಪಲನ್ನು ವಶಪಡಿಸಿಕೊಂಡಿತು. ಕ್ರಮೇಣ ಇಟಲಿ ಸ್ಪೇನಿಗೆ ಆಧೀನವಾಯಿತು. ೧೫೩೦ರಲ್ಲಿ ಬೊಲೊನಾದಲ್ಲಿ ೫ನೇ ಚಾರ್ಲ್ಸ್ ನ ರಾಜ್ಯಾಭಿಷೇಕವಾದ ಮೇಲೆ ಮುಂದಿನ ೩೦ ವರ್ಷಗಳಲ್ಲಿ ಸ್ಪ್ಯಾನಿಶ್ ಪ್ರಾಬಲ್ಯ ಮತ್ತಶ್ಟು ಅಧಿಕಗೊಂಡಿತು. ಈತ ಇಟಲಿಯ ಸಾಮ್ರಾಜ್ಯದ ಅಧಿಕಾರವನ್ನು ಸ್ಪೇನಿಗೆ ಬದಲಾಯಿಸಿದ. ಸ್ಪೇನಿನ ನಡೆನುಡುಗಳನ್ನು ಇಟಲಿಯ ಜನ್ರು ವ್ಯಾಪಕವಾಗಿ ಅನುಸರಿಸಲಾರಂಭಿಸಿದರು. ಆದರೆ ಅದಕ್ಕೆ ಮುಂಚಿನ ಯುದ್ಧವರ್ಷಗಳಲ್ಲಿ ಲಿಯೊನಾರ್ಡೊ, ರಾಫಾಎಲ್, ಮೈಕಲೆಂಜೆಲೊ, ಅರೊಸೋಟೋ ಮತ್ತು ಮ್ಯಾಕಿಯವೆಲಿ ಮೊದಲಾದವರಿಂದ ಕಲಾಕ್ಷೇತ್ರ ರಾಜಾಜಿಸಿತು.ಫ್ರೆಂಚರು ಈ ಹೊಸ ಹುಟ್ಟನ್ನು ತಮ್ಮೊದನೆ ತಮ್ಮ ನಾಡಿಗೂ ಕೊಂದೊಯ್ದರು.ವಿದೇಶಿಯರ ಆಳ್ವಿಕೆಗೆ ಇಟಲಿ ಒಳಗಾದರೂ ಇಟಲಿಯ ನಾಗರಿಕತೆ ಯುರೋಪನ್ನು ಸೆರೆಹಿಡಿದಿತ್ತು.

ವಿದೇಶಿಯರ ಪ್ರಭುತ್ವ - ಇಟಲಿಯ ರಾಜ್ಯಗಳಲೆಲ್ಲ ಅತ್ಯುತ್ತಮ ಆಡಳಿತವುಳ್ಳ ಅತಿ ವೈಭವಯುತಾದ ಮತ್ತು ಉದಾರನೀತಿ ಹೊಂದಿದ ರಾಜ್ಯ. ಸ್ಪ್ಯಾನಿಶರು ಇಟಲಿಯನ್ನು ಆಕ್ರಮಿಸಿದ್ದ ಕಾಲ ಅದರ ಇತಿಹಾಸದಲ್ಲಿ (೧೫೫೯-೧೭೦೦) ಅತ್ಯಂತ ಕಳಾಹೀನವಾದ