ಇಲೆನೈಟ್ - ಇವಾನ್ಸ್, ಸರ್ ಆರ್ಥರ್ ಜಾನ್ ಸರಿಪಡಿಸಿ, ಅವರೂ ಭಾರತೀಯ ಜಿಲ್ಲಾ ಹಾಗೂ ಸತ್ರ ನ್ಯಾಯಮೂರ್ತಿಗಳ ಮುಂದೆ ಹಾಜರಾಗುವಂತೆ ದಂಡಪ್ರಕ್ರಿಯಾ ಸಂಹಿತೆಯಲ್ಲಿ ಆವಶ್ಯಕ ತಿದ್ದುಪಡಿ ಮಾಡುವುದೇ ಈ ವಿಧೇಯಕದ ಉದ್ದೇಶ. ವರ್ಣಭೇದ ನೀತಿಯನ್ನು ನ್ಯಾಯಾಂಗದಿಂದ ತೊಡೆದು ಹಾಕುವ ಈ ಪ್ರಯತ್ನವನ್ನು ಭಾರತೀಯ ಪತ್ರಿಕೆಗಳು ಸ್ವಾಗತಿಸಿದವು. ಇದಕ್ಕೆ ರಾಷ್ಟ್ರಾಭಿಮಾನಿಗಳೆಲ್ಲರ ಬೆಂಬಲ ದೊರಕಿತು. ಆದರೆ ಭಾರತದಲ್ಲಿದ್ದ ಆಂಗ್ಲ ಸಮುದಾಯಕ್ಕೆ ಬಲು ಅಸಮಾಧಾನವಾಯಿತು. ಈ ವಿಧೇಯಕವನ್ನು ವಿರೋಧಿಸಿ ಅವರು ಭಾರತದಲ್ಲೂ ಇಂಗ್ಲೆಂಡಿನಲ್ಲೂ ಪ್ರಚಂಡ ಚಳವಳಿ ನಡೆಸಿದರು. ತಮ್ಮ ಈ ಹಕ್ಕಿನ ರಕ್ಷಣೆಗಾಗಿ ಸಂಘವೊಂದು ಸ್ಥಾಪಿತವಾಗಿ, ದೇಶಾದ್ಯಂತ ಇದರ ಶಾಖೋಪಶಾಖೆಗಳು ಎದ್ದವು. ಒಂದೂವರೆ ಲಕ್ಷ ರೂಪಾಯಿ ನಿಧಿ ಸಂಗ್ರಹವಾಯಿತು. ಭಾರತದ ವೈಸ್‌ರಾಯಿಗೂ ಬ್ರಿಟನ್ನಿನಲ್ಲಿದ್ದ ಭಾರತ ಮಂತ್ರಿಗೂ (ಸೆಕ್ರೆಟರಿ ಆಫ್ ಸ್ಟೇಟ್ ಫಾರ್ ಇಂಡಿಯ) ಮನವಿಗಳೂ ನಿಯೋಗಗಳೂ ಹೋದವು. ಭಾರತೀಯರಾದರೂ ಸುಮ್ಮನಿರಲಿಲ್ಲ. ಬಿಳಿಯರ ಈ ಆಂದೋಲನವನ್ನು ಪ್ರತಿಭಟಿಸಿದರು. ಆ್ಯಂಗ್ಲೋ-ಇಂಡಿಯನ್ ಪತ್ರಿಕೆಗಳು ಈ ವಿಧೇಯಕವನ್ನು ಖಂಡಿಸಿಯೂ ರಾಷ್ಟ್ರೀಯ ಪತ್ರಿಕೆಗಳು ಇದನ್ನು ಸಮರ್ಥಿಸಿಯೂ ಲೇಖನಗಳನ್ನೂ ಸಂಪಾದಕೀಯವನ್ನೂ ಪ್ರಕಟಿಸಿದವು. ಇಂಗ್ಲೆಂಡಿನಲ್ಲಿ ಆಗ ಅಧಿಕಾರದಲ್ಲಿದ್ದ ಲಿಬರಲ್ ಪಕ್ಷ ಇಲ್ಬರ್ಟ್ ವಿಧೇಯಕದ ಪರವಾಗಿತ್ತು ಈ ಭೇದಭಾವವನ್ನು ಇನ್ನೂ ಮುಂದುವರಿಸಿದರೆ ಭಾರತದ ಜನರಲ್ಲಿ ಅತೃಪ್ತಿ ಹೆಚ್ಚಿತು, ರಾಜದ್ರೋಹಾತ್ಮಕ ಚಳವಳಿಯತ್ತ ಅವರ ಮನಸ್ಸು ಹರಿದೀತು ಎಂದು ಜಾನ್ ಬ್ರೆಟ್ ಅಭಿಪ್ರಾಯಪಟ್ಟ, ಆಗ ಭಾರತದ ವೈಸ್‌ರಾಯಿಯಾಗಿದ್ದ ಲಾರ್ಡ್ ರಿಪ್ಪನ್ ಕೂಡ ಈ ವಿಧೇಯಕದ ಪರವಾಗಿದ್ದ. ಋುಜುಮಾರ್ಗ, ಧರ್ಮನಿಷ್ಠೆಗಳೇ ರಾಷ್ಟೋನ್ನತಿಯ ಸಾಧನೆಗಳೆಂಬ ಧೈಯವಾಕ್ಯದಲ್ಲಿ ಆತನಿಗೆ ಅಚಲವಾದ ನಂಬುಗೆ, ಸಾಮ್ರಾಜ್ಯ ಕಟ್ಟುವುದಕ್ಕೆ ಸೈನಿಕರ ಧೈರ್ಯಸ್ಥರ್ಯಗಳು ಮಾತ್ರವೇ ಸಾಲದು; ನೀತಿಯೂ ಧರ್ಮವೂ ನ್ಯಾಯಕಟ್ಟಳೆಗಳೂ ಒಂದು ಸಾಮ್ರಾಜ್ಯದ ಆಧಾರಸ್ತಂಭಗಳು. ಇತಿಹಾಸದಿಂದ ಈ ಪಾಠ ಕಲಿತಿದ್ದ ಲಾರ್ಡ್ ರಿಪ್ಪನ್ ಈ ಮಸೂದೆಯನ್ನು ಮನಃಪೂರ್ವಕವಾಗಿ ಸಮರ್ಥಿಸಿದ. ಆದರೆ ಬ್ರಿಟಿಷ್ ಹಿತಾಸಕ್ತಿಗಳ ಪ್ರಬಲ ಪ್ರಚಾರದಿಂದಲೂ ಒತ್ತಾಯದಿಂದಲೂ ಈ ವಿಧೇಯಕದ ಬದಲು ಅಷ್ಟು ತೀವ್ರವಲ್ಲದ ಇನ್ನೊಂದು ವಿಧೇಯಕ 1884ರಲ್ಲಿ ಕಾಯಿದೆಯಾಗಿ ಜಾರಿಗೆ ಬಂತು. ಭಾರತೀಯ ಜಿಲ್ಲಾ ನ್ಯಾಯಾಧೀಶರು ಹಾಗೂ ಸತ್ರ (ಸೆಷನ್ಸ್) ನ್ಯಾಯಾಧೀಶರು ಯುರೋಪಿಯನ್ ಬ್ರಿಟಿಷ್ ಪ್ರಜೆಗಳ ವಿಚಾರಣೆಯನ್ನೂ ನಡೆಸಬಹುದೆಂಬುದು ಈ ಕಾಯಿದೆಯ ಮುಖ್ಯಾಂಶ. ಇಲ್ಬರ್ಟ್ ವಿಧೇಯಕದ ವಿರುದ್ಧವಾದ ಚಳವಳಿಯ ವಿಜಯದಿಂದ ಭಾರತೀಯರ ಅಭಿಮಾನಕ್ಕೆ ಬರೆ ಬಿದ್ದ ಹಾಗಾಯ್ತು. ಆದರೆ ಒಗ್ಗಟ್ಟು ಸಂಘಟನೆಗಳಿಂದ ಎಷ್ಟರಮಟ್ಟಿಗೆ ಉದ್ದೇಶ ಸಾಧನೆಯಾದೀತೆಂಬುದನ್ನು ಭಾರತೀಯ ವಿದ್ಯಾವಂತರಿಗೆ ಮನವರಿಕೆ ಮಾಡಿಕೊಟ್ಟಿದ್ದರಿಂದ ಇದೂ ಒಂದು ಅಜ್ಞಾತ ವರಪ್ರಸಾದವೆಂದೇ ಹೇಳಬಹುದು.(ಎನ್.ಕೆ.) ಇಲೆನೈಟ್: ಒಂದು ಖನಿಜ, ರಾಸಾಯನಿಕ ಸೂತ್ರ FeTIO. ಫೆರಿಕ್ ಕಬ್ಬಿಣ ಮತ್ತು ಟೈರೀಸಿಯಂಗಳ ಇಮ್ಮಡಿ ಆ ಆಗಿರುವುದಕ್ಕಿಂತ ಮಿಗಿಲಾಗಿ ಫೆರಸ್ ಕಬ್ಬಿಣದ ಆಕ್ಸೆಡ್ ಟೈಟನೇಟ್ ಆಗಿದೆ. ಇದು ರಾಂಬೊಹೀಡ್ರಲ್ ವರ್ಗಕ್ಕೆ ಸೇರಿದ ಹರಳುಗಳಾಗಿ ದೊರೆಯುತ್ತದೆ. ಹರಳುಗಳಿಗೆ ಸಾಮಾನ್ಯವಾಗಿ ಮಂದವಾದ ಫಲಾಕೃತಿ ಇರುವುದು. ರಚನೆಯಲ್ಲಿ ಸ್ಕೂಲವಾಗಿ ಹಿಮಟೈಟ್‌ನ್ನು ಹೋಲುವುದು. ಅಲ್ಲದೆ ಅಸ್ಪಷ್ಟ ಮುದ್ದೆ ಅಥವಾ ಸಣ್ಣ ಸಣ್ಣ ಕಣರಚನೆಯೂ ತೋರಿಬರುವುದುಂಟು. ಹಲವು ವೇಳೆ ಮರಳಿನೋಪಾದಿಯಲ್ಲೂ ದೊರೆಯುತ್ತದೆ. ಬಣ್ಣದಲ್ಲಿ ಕಬ್ಬಿಣದ ಕಪ್ಪು ಅಪಾರದರ್ಶಕ. ಒರೆ ಕಪ್ಪು ಅಥವಾ ಕಂದು ಕೆಂಪು. ಮಿತಲೋಹ ಹೊಳಪು. ಶಂಖಾಕೃತಿಯ ಬಿರಿತ. ಅಯಸ್ಕಾಂತದ ಆಕರ್ಷಣೆ ಬಹು ದುರ್ಬಲ. ಕಾಠಿಣ್ಯ 5-6. ಅಂದರೆ ಉಗುರಿನಿಂದ ಗೀರಲು ಸಾಧ್ಯವಿಲ್ಲ. ಸಾಪೇಕ್ಷ ಸಾಂದ್ರತೆ 4.5-5. ರಾಸಾಯನಿಕ ಸಂಯೋಜನೆ: ಕಬ್ಬಿಣ ಮತ್ತು ಟೈಟೇನಿಯಂ ಆಡು. ಅನೇಕ ವೇಳೆ ನಿರ್ದಿಷ್ಟ ರಾಸಾಯನಿಕ ಸಂಯೋಜನೆಯನ್ನು ತೋರದ ಧಾತುಗಳ ಪ್ರಮಾಣದಲ್ಲಿ ಏರುಪೇರುಗಳನ್ನು ತೋರಿಸುವುದು ಉಂಟು. ಹಲವು ಬಾರಿ ಹಿಮಟೈಟ್ ಅಥವಾ ಮ್ಯಾಗ್ನಟೈಟ್ ಪದರುಗಳೊಡನೆ ಒಂದು ರೀತಿಯ ವಿಶಿಷ್ಟ ಹೆಣಿಗೆ ರಚನೆಯನ್ನು ಇಲೆನೈಟ್ ತೋರಿಸುತ್ತದೆ. ಇದು ವಿವಿಧ ಅಗ್ನಿಶಿಲೆಗಳಲ್ಲಿ ಅದರಲ್ಲೂ ಬಹುತೇಕ ಗ್ಯಾಬ್ ಮತ್ತು ಡಯೋರೈಟ್ ಗುಂಪಿನ ಶಿಲೆಗಳಲ್ಲಿ ಅಲ್ಪ ಪ್ರಮಾಣದಲ್ಲಿ ದೊರೆಯುತ್ತದೆ. ಹಲವು ಸಾರಿ ರೂಪಾಂತರಿತ ಶಿಲೆಗಳಲ್ಲೂ ಕಂಡು ಬರುವುದುಂಟು. ಈ ಖನಿಜದ ಉತ್ತಮ ಬಗೆಯ ಮೆಕ್ಕಲು ನಿಕ್ಷೇಪಗಳನ್ನು ಕಾಣಬಹುದು. ಟೈಟೇನಿಯಂ ಮತ್ತು ಟೈಟೇನಿಯಂ ಡೈ ಆಕ್ಸಡುಗಳು ಉತ್ಪತ್ತಿಗೆ ಮುಖ್ಯ ಮೂಲ ಖನಿಜ ಇಲೆನೈಟ್. ಈ ಆಡುಗಳನ್ನು ಪಡೆಯಲು ಖನಿಜದ ಅದಿರನ್ನು ವಿದ್ಯುತ್ ಕುಲುಮೆಗಳಲ್ಲಿ ಕಾಯಿಸಿ ಕರಗಿಸುತ್ತಾರೆ. ಹೀಗೆ ಕರಗಿಸಿದ ವಸ್ತುವನ್ನು ಸಲ್ಯೂರಿಕ್ ಆಮ್ಲದೊಡನೆ ಬೆರೆಸಿ ಶುದ್ದೀಕರಣಕ್ಕೊಳಪಡಿಸಿದಾಗ ಟೈಟೇನಿಯಂ ಅಕ್ಷರಗಳನ್ನು ಪಡೆಯಬಹುದು. ಈಚಿನ ವರ್ಷಗಳಲ್ಲಿ ಟೈಟೇನಿಯಂ ಡೈ ಆಡನ್ನು ಹೆಚ್ಚಿನ ಪ್ರಮಾಣದಲ್ಲಿ ನಾನಾ ಬಗೆಯ ಕೈಗಾರಿಕೆಗಳಲ್ಲಿ ಬಳಸಲಾಗುತ್ತಿದೆ. ಉದಾ: ದ್ರವಬಣ್ಣಗಳ ತಯಾರಿಕೆಗೆ ಅಗತ್ಯವಾದ ಬಿಳಿ ಬಣ್ಣ, ಕಾಗದ, ರಬ್ಬರ್, ಪ್ಲಾಸ್ಟಿಕ್ ಸಾಮಾನು, ಪಿಂಗಾಣಿ ಸಾಮಾನು, ಮುದ್ರಣ ಶಾಯಿ, ಹತ್ತಿ ಬಟ್ಟೆ, ಸಾಬೂನು, ಸುಗಂಧ ದ್ರವ್ಯಗಳು, ಕೃತಕ ದಂತ ನಿರ್ಮಾಣ, ಚರ್ಮ ಹದ ಮಾಡುವಿಕೆ ಹೀಗೆ ನಾನಾ ಬಗೆಯ ಕೈಗಾರಿಕೆಗಳಲ್ಲಿ ಇದೊಂದು ಅಗತ್ಯವಾದ ಮೂಲ ಪದಾರ್ಥವೆನಿಸಿದೆ. ಖನಿಜದ ಈ ಬಗೆಯ ಪ್ರಾಮುಖ್ಯಕ್ಕೆ ಮುಖ್ಯ ಕಾರಣಗಳು ಟೈಟೇನಿಯಂ ಡೈ ಆಡಿನ ಅಚ್ಚ ಬಿಳಿಯ ಬಣ್ಣ ಹೊಳಪು (ಬಹುಕಾಲ ಮಾಸದಿರುವ), ಬಣ್ಣ ಕೆಡದಿರುವಿಕೆ. ಯಾವ ತೆರನಾದ ರಾಸಾಯನಿಕ ಕ್ರಿಯೆಗೂ ಒಳಗಾಗದಿರುವಿಕೆ, ಆರೋಗ್ಯಕ್ಕೆ ಅಪಾಯಕಾರಿ ಯಾಗಿಲ್ಲದಿರುವುದು ಮತ್ತು ಸುಲಭವಾಗಿ ಇತರ ದ್ರವ ಬಣ್ಣಗಳೊಡನೆ ಬೆರೆಯುವುದು. ಇತ್ತೀಚಿನ ಸಂಶೋಧನೆಗಳಿಂದ ಖನಿಜದಿಂದ ದೊರೆಯುವ ರಾಸಾಯನಿಕ ವಸ್ತುಗಳ ಮತ್ತಷ್ಟು ಉತ್ತಮ ಗುಣಗಳು ಬೆಳಕಿಗೆ ಬಂದಿವೆ. ಇವುಗಳಲ್ಲಿ ಬಲು ಮುಖ್ಯವಾದ ಗುಣ- ಟೈಟೇನಿಯಂ ಬಲು ಹಗುರವಾಗಿರುವುದೇ ಅಲ್ಲದೆ ಹೆಚ್ಚಿನ ನಿರ್ವಹಣ ಶಕ್ತಿಯನ್ನೂ ಹೊಂದಿದೆ; ಅಲ್ಲದೆ ಬಹು ಕಾಲ ಉಪಯೋಗಿಸಿದರೂ ತುಕ್ಕು ಹಿಡಿಯುವುದಿಲ್ಲ. ಎಚ್‌ಸಿಎಲ್‌ನಲ್ಲಿ ಮಂದಗತಿಯಲ್ಲಿ ಕರಗುತ್ತದೆ. ಅಲ್ಯೂಮಿನಿಯಂ ಮತ್ತು ತುಕ್ಕು ಹಿಡಿಯದ ಉಕ್ಕಿನ ಉತ್ತಮ ಗುಣಗಳನ್ನು ಇಲೆನೈಟ್ ಹೊಂದಿರುವುದರ ಜೊತೆಗೆ ಅವಕ್ಕಿಂತಲೂ ಮಿಗಿಲಾದ ನಿರ್ವಹಣಾ ಶಕ್ತಿಯನ್ನು ಹೊಂದಿದೆ. ಈಗೀಗ ವಿಮಾನಗಳು, ನೌಕೆಗಳು ಮತ್ತು ರಕ್ಷಣಾ ಸಾಮಗ್ರಿಗಳ ತಯಾರಿಕೆಯಲ್ಲಿ ಇದರ ಬಳಕೆ ಹೆಚ್ಚುತ್ತಿದ್ದು ಇದಕ್ಕೆ ಎಲ್ಲಿಲ್ಲದ ಮಹತ್ತ್ವ ಬಂದಿದೆ. ಸದ್ಯದಲ್ಲಿ ಇದನ್ನು ಬಲುಮಟ್ಟಿಗೆ ವಿಪರೀತ ಗಡುಸಾದ ಮತ್ತು ಅಷ್ಟೇ ಪ್ರಮಾಣದ ಸ್ಥಿತಿಸ್ಥಾಪಕ ಸಾಮರ್ಥ್ಯವುಳ್ಳ ಲೋಹಗಳಾದ ಫಿ-ಟೀನಿಯ ಮತ್ತು ಫೆರೋ ಕಾರ್ಬನ್-ಟೈಟೇನಿಯಂಗಳ ತಯಾರಿಕೆಯಲ್ಲಿ ಬಳಸುತ್ತಾರೆ. ಹೀಗೆಯೇ ನಿಕ್ಕಲ್, ತಾಮ್ರ, ಮ್ಯಾಂಗನೀಸ್, ಕ್ರೋಮಿಯಂ, ಸಿಲಿಕಾನ್, ಟಂಗ್‌ಸ್ಟನ್ನುಗಳೊಡನೆ ಬೆರೆಸಿ ವಿಶೇಷ ರೀತಿಯ ಉಕ್ಕನ್ನು ತಯಾರಿಸುತ್ತಾರೆ. ಇಲೆನೈಟ್ ಮತ್ತು ಟೈಟೇನಿಯಂ ಡೈಆಡುಗಳನ್ನು ಉಕ್ಕಿನ ಸರಳುಗಳ ಬೆಸೆಯುವಿಕೆ, ಆರ್ಕ್ ಲ್ಯಾಂಪುಗಳಲ್ಲಿ ಬಳಸುವ ಎಲೆಕ್ಟೋಡುಗಳ ತಯಾರಿಕೆ, ಕೃತಕ ಮೋಡಗಳ ಉತ್ಪತ್ತಿಗೆ ಅಗತ್ಯವಾದ ಟೈಟೇನಿಯಂ ಟೆಟ್ರಕ್ಲೋರೈಡ್ ತಯಾರಿಕೆ ಮತ್ತು ಬಣ್ಣಗಚ್ಚುಗಳ ತಯಾರಿಕೆಗಳಲ್ಲೆಲ್ಲ ಉಪಯೋಗಿಸುತ್ತಾರೆ. ಹತ್ತಿ ಬಟ್ಟೆಗಳಿಗೆ ಬಣ್ಣ ಹಾಕಲು ಇದು ಬಲು ಅಗತ್ಯವಾದ ವಸ್ತು. ದೊರೆಯುವ ಪ್ರದೇಶಗಳು: ಈ ಖನಿಜವು ಮುಖ್ಯವಾಗಿ ಅಮೆರಿಕ ಸಂಯುಕ್ತ ಸಂಸ್ಥಾನ, ಭಾರತ, ಬ್ರೆಜಿಲ್ ಮತ್ತು ಆಸ್ಟ್ರೇಲಿಯ ದೇಶಗಳಲ್ಲಿ ದೊರೆಯುತ್ತದೆ. ಅಮೆರಿಕದಲ್ಲಿ ಮುಖ್ಯವಾಗಿ ವರ್ಜಿನಿಯ ಪ್ರಾಂತ್ಯ ಆಮ್‌ಹರ್ಸ್ಟ್ ಕೌಂಟಿ ಅಲ್ಲದೆ ಫ್ಲಾರಿಡದ ಜಾಕ್‌ಸನ್ ವಿಲೆ ಮತ್ತು ಟೇಲ್ ರಿಜ್ ಬಳಿಯ ಕರಾವಳಿ ಹಾಗೂ ಸ್ಯಾನ್‌ಫರ್ಡ್‌ನಲ್ಲಿಯೂ ಇಲೆನೈಟ್ ಉತ್ಪತ್ತಿಯಾಗುತ್ತಿದೆ. ಇದಲ್ಲದೆ ಕ್ವಿಜಿಕ್‌ನ ಅಲಾರ್ಡ್ ಸರೋವರದ ಬಳಿ ಇಡೀ ಪ್ರಪಂಚದಲ್ಲೇ ಅತಿ ದೊಡ್ಡ ಇಲೆನೈಟ್ ಮೂಲ ನಿಕ್ಷೇಪಗಳಿವೆ. ನಾರ್ವೆ ದೇಶದ ಬ್ಲಾಫೆಲ್ ಡೈಟ್ ಪ್ರದೇಶದಲ್ಲಿ, ಬ್ರೆಜಿಲ್, ಆಸ್ಟ್ರೇಲಿಯದ ನ್ಯೂಸೌತ್‌ವೇಲ್ಸ್, ಕ್ವಿನ್ಸ್‌ಲೆಂಡ್ ಹಾಗೂ ಜಪಾನಿನ ಹಾಂಡೂ ಸಮುದ್ರತೀರದ ಮರಳಿನಲ್ಲಿ ಇನೈಟ್ ದೊರೆಯುತ್ತದೆ. ಅಲ್ಪಸ್ವಲ್ಪ ಪ್ರಮಾಣದಲ್ಲಿ ಮಲೇಷಿಯದಲ್ಲೂ ದೊರೆಯುತ್ತದೆ. ಭಾರತ ಇಲೆನೈಟ್ ಅದಿರಿಗೆ ಪ್ರಸಿದ್ಧವಾದದ್ದು. ಪಶ್ಚಿಮ ಮತ್ತು ಪೂರ್ವ ಕರಾವಳಿ ಪ್ರದೇಶಗಳು ಈ ದೃಷ್ಟಿಯಿಂದ ಬಲು ಮುಖ್ಯ. ಕೇರಳ, ತಮಿಳುನಾಡು, ಆಂಧ್ರ ಪ್ರದೇಶ ಮತ್ತು ಮಹಾರಾಷ್ಟ್ರದ ಕರಾವಳಿಗಳಲ್ಲಿ ಇನೈಟಿನಿಂದ ಕೂಡಿದ ಮರಳು ನಿಕ್ಷೇಪಗಳಿವೆ. ಇವುಗಳಲ್ಲೆಲ್ಲ ಅತಿ ಮುಖ್ಯವಾದ ನಿಕ್ಷೇಪ ಕೇರಳದ ಪಶ್ಚಿಮ ಕರಾವಳಿಯ ಕ್ವಿಲಾನಿನಿಂದ ಮೊದಲಾಗಿ ದಕ್ಷಿಣಕ್ಕೆ ತಮಿಳು ನಾಡಿನ ಕನ್ಯಾಕುಮಾರಿಯ ಉದ್ದಕ್ಕೂ ಹರಡಿದೆ. ಮುಖ್ಯ ಮೆಕ್ಕಲು ನಿಕ್ಷೇಪಗಳು ಕ್ವಿಲಾನ್ ಜಿಲ್ಲೆಯ ಚವರ ಮತ್ತು ಕನ್ಯಾಕುಮಾರಿ ಬಳಿಯಿರುವ ಮನವಾಲ ಕುರುಚಿಯಲ್ಲಿವೆ. ಚವರ ಕೇಂದ್ರದಲ್ಲಿ ಉತ್ಪತ್ತಿಯಾಗುವ ಇನೈಟ್ ಬಲು ಉತ್ತಮ ದರ್ಜೆಯದು. ಭಾರತದ ನಾನಾ ಕೈಗಾರಿಕೆಗಳು ಸದ್ಯದಲ್ಲಿ ವರ್ಷಕ್ಕೆ ಸುಮಾರು 8,000 ಟನ್ನುಗಳಷ್ಟು ಇಲೆನೈಟನನ್ನು ಬಳಸುತ್ತಿದ್ದು ಮಿಕ್ಕ ಅದಿರನ್ನು ಇತರ ದೇಶಗಳಿಗೆ ಮಾರಾಟ ಮಾಡಲಾಗುತ್ತಿದೆ (1969). ಈ ಮುಖ್ಯ ಮೆಕ್ಕಲು ನಿಕ್ಷೇಪಗಳಲ್ಲದೆ ಬಿಹಾರ್, ಒರಿಸ್ಸ, ಕರ್ನಾಟಕ, ರಾಜಸ್ತಾನ ಮತ್ತು ಪಂಜಾಬಿನ ಶಿಲಾಸಮುದಾಯಗಳಲ್ಲಿ ಇನೈಟ್ ಅಲ್ಪಸ್ವಲ್ಪ ಪ್ರಮಾಣದಲ್ಲಿ ಹುದುಗಿವೆ. ಬಿಹಾರಿನ ಮಯೂರ್‌ಭಂಜ್, ಒರಿಸ್ಸದ ಕಿಯಂಝರ್ ಜಿಲ್ಲೆಗಳಲ್ಲಿನ ಎಪಿಡಯೊರೈಟ್, ಸರ್ಪೆಂಟಿನೈಟ್ ಮೊದಲಾದ ಕ್ಷಾರ ಶಿಲೆಗಳಲ್ಲಿ ಅಲ್ಲಲ್ಲೇ ಈ ಖನಿಜದ ಪಟ್ಟಿಗಳನ್ನು ಕಾಣಬಹುದು. ಇವು ತಾವು ಹುದುಗಿರುವ ಶಿಲೆಯಂತೆ ಮಾತೃಶಿಲಾದ್ರವದ ಚಟುವಟಿಕೆಯಿಂದ ಉಂಟಾದುವು. ಇಲ್ವಲ: ನೋಡಿ- ವಾತಾಪಿ (20.20.23.) ಇವಾನ್ಸ್, ಸರ್ ಆರ್ಥರ್ ಜಾನ್: 1851-1941. ಬ್ರಿಟಿಷ್ ಪ್ರಾಕ್ತನಶಾಸ್ತ್ರಜ್ಞ, ಕಾಗದ ತಯಾರಿಕೆ ಸಂಸ್ಥೆಯಾದ ಜಾನ್ ಡಿಕೆನ್ಸನ್ ಮತ್ತು ಕಂಪನಿಯ ಸರ್ ಜಾನ್ ಇವಾನ್ಸ್ ಎಂಬುವನ ಹಿರಿಯ ಮಗ, ಹ್ಯಾರೋ ಮತ್ತು ಬ್ರೇಸ್ ನೋಸ್‌ಗಳಲ್ಲಿ
ಪುಟ:Mysore-University-Encyclopaedia-Vol-2-Part-2.pdf/೧೦೩
ಗೋಚರ