ಪುಟ:Mysore-University-Encyclopaedia-Vol-2-Part-2.pdf/೧೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಇಸ್ಮಾಯಿಲ್,ಮಿರ್ಜಾ ಮಹಮ್ಮದ್-ಇಸ್ರೇಲ್

ನಿರ್ದೇಶಿಸಿ ತಾಯಿಮಗನನ್ನು ಮನೆಯಿಂದ ಹೊರಗಟ್ಟುತ್ತಾಳೆ,ನೌಕರರು ಅವರನ್ನು ಅರೇಬಿಯದಲ್ಲಿ ತಂದು ಬಿಡುತ್ತಾರೆ.ನೀರಿಗಾಗಿ ಪರದಾಡುವಾಗ ಇಸ್ಮಾಯೀಲನ ಕಾಲಿನ ಬಳಿ ಚೆಲುಮೆಯೊಂದು ಚಿಮ್ಮುತ್ತದೆ.ಅದೇ ಇಂದಿನ ಜಂಜಂ ಚೆಲುಮೆ.ಅವರಿದ್ದ ಸ್ಥಳವೇ ಮುಂದೆ ಮೆಕ್ಕ ಪಟ್ಟಣವಾಗಿ ಬೆಳೆಯಿತು.ಅನಂತರ ಇಸ್ಮಾಯಿಲ್ ಅರಬ್ಬೀಯರ ಮೂಲಪುರುಷನೆಂದೂ ಒಬ್ಬ ಪ್ರವಾದಿಯೆಂದೂ ಪ್ರಖ್ಯಾತನಾದ.ಚಿಕ್ಕವನಿದ್ದಾಗ ಏಬ್ರಹಾಂನ ಕನಸಿನಲ್ಲಿ ದೇವರು ಅವನ ಮೆಚ್ಚಿನ ವಸ್ತುವನ್ನು ಬಲಿ ಕೇಳಿದನಂತೆ.ಅದರಂತೆ ಈಬ್ರಹಾಂ ತನ್ನ ಮೆಚ್ಚಿನ ಮಗ ಇಸ್ಮಾಯೀಲನನ್ನೇ ಬಲಿ ಕೊಡಲು ಸಿದ್ದನಾದ,ಭಕ್ತಿಗೆ ಮೆಚ್ಚಿ ದೇವರು ಬಲಿಸ್ಥಾನದಲ್ಲಿ ಇಸ್ಮಾಯೀಲಿನ ಬದಲಾಗಿ ಒಂದು ಕುರಿಯನ್ನು ತಂದಿಟ್ಟ.ಏಬ್ರಹಾಂ ಅದನ್ನೇ ಬಲಿಕೊಟ್ಟ.ಇದನ್ನೇ ಸಂಕೇತವಾಗಿಟ್ಟುಕೊಂಡು ಮುಂದೆ ಮುಸಲ್ಮಾನರಲ್ಲಿ ಬಕ್ರೀದ್ ಹಬ್ಬ ಬೆಳೆದು ಅಂದು ಕುರಿ,ಒಂಟೆಗಳನ್ನು ಬಲಿಕೊಡುವ ಸಂಪ್ರದಾಯ ಬೆಲೆದು ಬಂತು. ಏಬ್ರಹಾಂ ಮತ್ತು ಇಸ್ಮಾಯಿಲ್ ಮೆಕ್ಕದಲ್ಲಿರುವ ಪವಿತ್ರ ಕಾಬಾವನ್ನು ಕಟ್ಟಿದರು.ಇದರ ದಿಕ್ಕಿನಲ್ಲಿಯೇ ಪ್ರಪಂಚದ ಎಲ್ಲಾ ಮುಸಲ್ಮಾನರು ನಮಾಜನ್ನು ಮಾಡುವರು.

ಇಸ್ಮಾಯಿಲ್,ಮಿರ್ಜಾ ಮಹಮ್ಮದ್:1883-1959.ಪ್ರಸಿದ್ದ ಆಡಳಿತಗಾರರು,ಮೈಸೂರು ಸಂಸ್ಥಾನದ ದಿವಾನರು. ಪರ್ಷಿಯಾದಿಂದ ಬಂದು ಬೆಂಗಳೂರಿನಲ್ಲಿ ನೆಲೆಸಿದ್ದ ಕುಟುಂಬವೊಂದರಲ್ಲಿ 1883 ಅಕ್ಟೊಬರ್ 20ರಂದು ಜನಿಸಿದರು.ಬಾಲ್ಯ ವಿದ್ಯಾಭ್ಯಾಸ ಬೆಂಗಳೂರಿನ ಸೇಂಟ್ ಪ್ಯಾಟ್ರಿಕ್ ಶಾಲೆ ಮತ್ತು ವೆಸ್ಲಿಯನ್ ಶಾಲೆಗಳಲ್ಲಿ. ಅನಂತರ ಕೃಷ್ಣರಾಜ ಒಡೆಯರ ವಿದ್ಯಾಭ್ಯಾಸಕ್ಕೆ ಪ್ರಾರಂಭಿಸಿದ.ವಿಶೇಷ ಶಾಲೆಯಲ್ಲಿ ಅವರ ಸಹಪಾಟಿಗಳಾಗಿದ್ದು, ಮೂಂದೆ ಬೆಂಗಳೂರು ಸೆಂಟ್ರಲ್ ಕಾಲೇಜಿನಿಂದ ಪಧವೀಧರರಾಗಿ ಅದೇ ವರ್ಷ ಮೈಸೂರು ಸರ್ಕಾರದ ಪೊಲೀಸ್ ಇಲಾಖೆಯಲ್ಲಿ ಅಸಿಸ್ಟೆಂಟ್ ಸೂಪರಿಟೆಂಡೆಂಟ್ ಆಗಿ ನೇಮಕವಾದರು.ಮಹಾರಾಜರ ಉಪಕಾರ್ಯದರ್ಶಿ ಹುಜೂರ್ ಕಾರ್ಯದರ್ಶಿ ಅಪ್ತಕಾರ್ಯದರ್ಶಿ ಹುದ್ದೆಗಳನ್ನು ವಹಿಸಿಕೊಂಡು 1926ರಲ್ಲಿ ಸಂಸ್ಥಾನದ ದಿವಾನರಾದರು.

ಇವರು ದಿವಾನರಾಗಿದ್ದ ಹದಿನೈದು ವರ್ಷಗಳಲ್ಲಿ (1962-41) ಸರ್ ಎಂ.ವಿಶ್ವೇಶ್ವರಯ್ಯನವರು ಹಾಕಿದ್ದ ತಳಹದಿಯ ಮೇಲೆ ರಾಜ್ಯದ ಸರ್ವತೋಮುಖ ಬೆಳೆವಣಿಗೆಯನ್ನು ಸಾಧಿಸಲು ಯತ್ನಿಸಿದರು.ಮೈಸೂರು ಸಂಸ್ಥಾನ ಬ್ರಿಟಿಷರಿಗೆ ಕೊಡಬೇಕಾಗಿದ್ದ ಕಪ್ಪವನ್ನು ೩೫ ಲಕ್ಶದಿಂದ 101/2 ಲಕ್ಶಕ್ಕೆ ಇಳಿಸಿದರು.ಮಂಡ್ಯ,ಮಳವಳ್ಳಿ ಮತ್ತು ತಿರುಮಕೂಡಲು ನರಸೀಪುರ ತಾಲ್ಲೂಕುಗಳಲ್ಲಿ ನೀರಾವರಿ ಸೌಲಭ್ಯವನ್ನು ಒದಗಿಸುವ ಇರ್ಮಿನ್ ನಾಲೆ ನಿರ್ಮಾಣ ಮೊದಲಾದ ಕಾರ್ಯಗಳಿಂದ ಇವರ ಆಡಳಿತ ಕಾಲದಲ್ಲಿ 1,20,000 ಎಕರ ಭೂಮಿ ನೀರಾವರಿ ವ್ಯವಸಾಯಕ್ಕೆ ಬಂದಿತು.ಜೋಗ್ ಮತ್ತು ಶಿಂಷಾಗಳಲ್ಲಿ ವಿದ್ಯುದುತ್ಪಾದನಾ ಸ್ಥಾವರಗಳನ್ನು ಸ್ಥಾಪಿಸಿದ್ದಲ್ಲದೆ,ಗ್ರಾಮಗಳಿಗೂ ವಿದ್ಯುತ್ ಒದಗಿಸುವ ಯೋಜನೆಯನ್ನು ಇಡೀ ಭಾರತದಲ್ಲಿ ಮೊದಲು ಈ ಸಂಸ್ಥಾನದಲ್ಲಿ ಜಾರಿಗೆ ತಂದರು.ಭದ್ರಾವತಿಯಲ್ಲಿ ಕಾಗದ ಮತ್ತು ಸಿಮೆಂಟ್ ಕಾರ್ಖಾನೆಗಳು,ಬೆಂಗಳೂರಿನಲ್ಲಿ ಪಿಂಗಾಣಿ ಮತ್ತು ವಿಮಾನ ಕಾರ್ಖಾನೆಗಳು,ಮಂಡ್ಯದಲ್ಲಿ ಸಕ್ಕರೆ ಕಾರ್ಖಾನೆ,ಬೆಳಗೊಳದಲ್ಲಿ ರಾಸಾಯನಿಕ ಮತ್ತು ಗೊಬ್ಬರದ ಕಾರ್ಖಾನೆ,ಶಿವಮೊಗ್ಗದಲ್ಲಿ ಬೆಂಕಿಪೆಟ್ಟಿಗೆ ಕಾರ್ಖಾನೆ ಇತ್ಯಾದಿಗಳ ಸ್ಥಾಪನೆಯನ್ನು ಪ್ರೋತ್ಸಾಹಿಸಿ ರಾಜ್ಯದ ಔದ್ಯಮಿಕ ಪ್ರಗತಿಗೆ ಕಾರಣರಾದರು.ಗ್ರಾಮಕೈಗಾರಿಕೆಯನ್ನು ಉತ್ತಮಪಡಿಸಲು ಇವರು ಶ್ರಮಿಸಿದರು.ರೇಷ್ಮೆ ಕೈಗಾರಿಕೆಗೂ ಗಮನವಿತ್ತರು.ಮೈಸೂರಿನ ಉತ್ಪನ್ನಗಳಿಗೆ ವಿದೇಶಗಳಲ್ಲಿ ಮಾರುಕಟ್ಟೆ ಪಡೆಯುವ ಸಲುವಾಗಿ ಲಂಡನಿನಲ್ಲಿ ಒಬ್ಬ ಟ್ರೇಡ್ ಕಮಿಷರನ್ನು ನೇಮಿಸಿದರು.ಬೆಂಗಳೂರು ಮತ್ತು ಮೈಸೂರು ನಗರಗಳನ್ನು ಸುಂದರಗೊಳಿಸಿದ್ದಲ್ಲದೆ,ಕೃಷ್ಣರಾಜಸಾಗರ ಜಲಾಶಯದ ಹಿಂಬಂದಿಯಲ್ಲಿ ಪ್ರಸಿದ್ದ ಬೃಂದಾವನವನ್ನು ನಿರ್ಮಿಸಲು ಮಿರ್ಜಾರವರೇ ಕಾರಣ.ಗಾಂಧೀಜೀಯವರಲ್ಲಿ ಗೌರವವಿದ್ದ ಇವರು ಅವರನ್ನು ೧೯೨೭ರಲ್ಲಿ ಮೈಸೂರಿಗೆ ಆಹ್ವಾನಿಸಿ ಕೆಲವು ಕಾಲ ಆರೋಗ್ಯ ಸುಧಾರಣೆಗಾಗಿ ನಂದಿಬೆಟ್ಟದಲ್ಲಿ ತಂಗುವಂತೆ ಮಾಡಿದ್ದರು.ಮಿರ್ಜಾರವರು ಲಂಡನ್ನಿನಲ್ಲಿ ಮೂರು ದುಂಡುಮೇಜಿನ ಪರಿಷತ್ತುಗಳಲ್ಲೂ ದಕ್ಶಿಣ ಭಾರತದ ದೇಶಿ ರಾಜ್ಯಗಳ ಪ್ರತಿನಿಧಿಯಾಗಿ ಭಾಗವಹಿಸಿದ್ದರು.ಭಾರತದ ಭಾವೀ ರಾಜ್ಯ ಘಟನೆಯಲ್ಲಿ ದೇಶಿ ರಾಜ್ಯಗಳ ಮತ್ತು ಬ್ರಿಟಿಷ್ ಭಾರತದ ಪ್ರಾಂತ್ಯಗಳ ಸಂಯುಕ್ತ ವ್ಯವಸ್ಥೆಯ ಅಭಿಪ್ರಾಯವನ್ನು ಸ್ಪಷ್ಟೀಕರಿಸಿದರು.ಇವರ ಕಾಲದಲ್ಲಿ ಸ್ವಾತಂತ್ರ್ಯ ಸಂಗ್ರಾಮ ಮೈಸೂರು ರಾಜ್ಯದಲ್ಲೂ ನಡೆದು ಸರ್ಕಾರಕ್ಕೂ ಜನತೆಗೂ ನಡುವೆ ಅನೇಕ ಘರ್ಷಣೆಗಳುಂಟಾದವು.ನಾಲ್ವಡಿ ಕೃಷ್ಣರಾಜ ಒಡೆಯರ್ ಅನಂತರ ಜಯಚಾಮರಾಜ ಒಡೆಯರ್ ಅವರು ೧೯೪೦ರಲ್ಲಿ ಸಿಂಹಾಸನಕ್ಕೆ ಬಂದಮೇಲೂ ಕೆಲಕಾಲ ದಿವಾನರಾಗಿದ್ದು ೧೯೪೧ರ ಮೇ ತಿಂಗಳಲ್ಲಿ ವಿಶ್ರಾಂತಿ ಪಡೆದರು.

ಮೈಸೂರಿನಿಂದ ನಿವೃತ್ತರಾದ ಮೇಲೆ ಜಯಪುರದಲ್ಲಿ ಪ್ರಥಾನಮಂತ್ರಿಯಾಗಿ ಆ ನಗರದ ಸೌಂಧರ್ಯವರ್ಧನೆ, ರಾಜಸ್ಥಾನ ವಿಶ್ವವಿದ್ಯಾನಿಲಯದ ಸ್ಥಾಪನೆ ಮತ್ತು ಆ ದೇಶದ ಸಂವಿಧಾನದ ಹಲವು ಬದಲಾವಣೆಗಳಿಗೆ ಕಾರಣರಾದರು.ಅನಂತರ ೧೯೪೭ರ ಮೇ ವರೆಗೆ ಹೈದರಾಬಾದ್ ಸಂಸ್ಥಾನದ ಪ್ರಧಾನ ಮಂತ್ರಿಯಾಗಿದ್ದರು. ನಿಷಾವಿವಂತ ಅಧಿಕಾರಿಯೆಂದು ಹೆಸರುಗಳಿಸಿದ್ದ ಇವರಿಗೆ ಬ್ರಿಟಿಷ್ ಸಾರ್ವಭೌಮರಿಂದ ೧೯೩೦ರಲ್ಲಿ ಕೆ.ಸಿ.ಐ.ಇ ಪ್ರಶಸ್ತಿ ದೊರಕಿತು.ಮಿರ್ಜಾರವರು ೧೯೫೯ರಲ್ಲಿ ಬೆಂಗಳೂರಿನಲ್ಲಿ ನಿಧನರಾದರು.

ಇಸ್ಮಾಯ್ಲಿಯ:ಈಜಿಪ್ಟಿನಲ್ಲಿ ಸೂಯೆಜ್ ಕಾಲುವೆಯ ದಡದ ಮೇಲಿರುವ ಒಂದು ಪಟ್ಟಣ.ಮೆಡಿಟರೇನಿಯನ್ ಸಮುದ್ರ ತೀರದಿಂದ ಮತ್ತು ಕೆಂಪುಸಮೂದ್ರದಿಂದ ೮೦ ಕಿಮೀ ಮತ್ತು ಕೈರೋನಗರದಿಂದ ಈಶಾನ್ಯಕ್ಕೆ ೧೪೯ ಕಿಮೀ ದೂರದಲ್ಲಿದೆ.ಜನಸಂಖ್ಯೆ ಸು.೧ ಲಕ್ಶ. ಪೂರ್ಟ್ ಸೈದ್ ಮತ್ತು ಸೂಯೆಜ್ ನಗರಗಳಿಗೆ ಸಿಹಿ ನೀರಿನ್ನೊಯ್ಯುವ ಕಾಲುವೆ ಇದರ ಪಕ್ಕದಲ್ಲೇ ಹರಿಯುತ್ತದೆ;ಕೈರೋ ನಗರದಿಂದ ಆ ಎರಡು ನಗರಗಳಿಗೆ ಹೋಗುವ ರೈಲ್ವೆ ಮಾರ್ಗದಲ್ಲಿದೆ.ಸೂಯೆಜ್ ಕಾಲುವೆಯ ನಿರ್ಮಾಣಕ್ಕೆ ಅನುಕೂಲವಾಗಲೆಂದು ಈ ನಗರವನ್ನು ೧೮೬೩ರಲ್ಲಿ ಕಟ್ಟಿದರು;ಖೇಡಿವ್ ಇಸ್ಮಾಯಿಲ್ ನ ಹೆಸರನ್ನಿಟ್ಟರು.ಇದು ಆಧುನಿಕ ನಗರನಿರ್ಮಾಣಕ್ಕನುಸಾರವಾಗಿ ಕತ್ತಿರುವ ಊರು.ಸರಳ ಚೌಕಟ್ಟಿನ ನಕ್ಶೆಗನುಸಾರವಾಗಿ ನಿರ್ಮಿತವಾದ ಅನೇಕ ಚೌಕಗಳನ್ನೂ ಸಾಲು ಮರಗಳನ್ನು ಉದ್ಯಾನಗಳನ್ನೂ ಉನ್ನತ ಸೌಧಗಳನ್ನೂ ಹೊಂದಿರುವ ಸುಂದರ ನಗರ.ಸೂಯೆಜ್ ಕಾಲುವೆಯಲ್ಲಿ ಹಡಗು ಚಲನೆಯನ್ನು ನಿಯಂತ್ರಿಸುವ ಭಾರಿ ಕಚೇರಿಯೂ ಕೆಲಸಗಾರರ ವಸತಿಗೃಹಗಳೂ ಸಮಾಜ ಕಲ್ಯಾಣಕ್ಕೆ ಬೇಕಾದ ಇತರ ಅನುಕೂಲತೆಗಳೂ ಇವೆ.ಆಧುನಿಕ ವೈದ್ಯವಿಜ್ಣಾನಕ್ಕನುಸಾರವಾಗಿ ಮಲೇರಿಯ ನಿರ್ಮೂಲವನ್ನು ವೊತ್ತಮೊದಲು ನಡೆಸಿದ್ದು ಇಲ್ಲಿ.

ಇಸ್ರೇಲ್:ಬೈಬಲ್ಲಿನ ಕಾಲದಲ್ಲಿ ಯಹೂದಿ ಜನಸಮುದಾಯದ ಹೆಸರಾಗಿದ್ದು ಮುಂದೆ ಹೀಬ್ರು ರಜ್ಯಕ್ಕೂ ಇದೇ ಅಂಕಿತವಾಯಿತು.ಈಗ ನೈರುತ್ಯ ಏಷ್ಯದಲ್ಲಿರುವ ಒಂದು ಗಣರಾಜ್ಯ.೧೯೪೮ರ ಮೇ ೧೫ರಂದು ಅಸ್ತಿತ್ವಕ್ಕೆ ಬಂದಿತು.ಉತ್ತರದಲ್ಲಿ ಲೆಬನಾನ್ ಪೂರ್ವಕ್ಕೆ ಸಿರಿಯ ಮತ್ತು ಜೋರ್ಡನ್,ದಕ್ಶಿಣಕ್ಕೆ ಸೌದಿ ಅರೇಬಿಯ,ಪಶ್ಚಿಮಕ್ಕೆ ಈಜಿಪ್ಟ್ ಮತ್ತು ಮೆಡಟರೇನಿಯನ್ ಸಮುದ್ರಗಳಿವೆ.29.30'ದಿಂದ 33.15' ಉತ್ತರ ಅಕ್ಶಾಂಶದವರೆಗೂ ಮತ್ತು 34.15' ಪೂರ್ವ ರೇಖಾಂಶದಿಂದ 35.41' ಪೂರ್ವ ರೇಖಾಂಸದವರೆಗೂ ಹರಡಿವೆ.ವಿಸ್ತೀರ್ಣ 207700 ಚ.ಕಿ.ಮೀ.ಜನಸಂಖ್ಯೆ 7.2 ಮಿಲಿಯನ್.ಇದರಲ್ಲಿ 4/5 ಜನರು ಯಹೂದಿಯರು,1/4 ಅರಬ್ಬಿಯನ್ನರು.ಭಾಷೆ ಹೀಬ್ರು ಮತ್ತು ಅರೇಬಿಕ್.ಇಲ್ಲಿ ಯಹೂದಿ,ಇಸ್ಲಾಂ,ಮತ್ತು ಕ್ರಿಶ್ಚಿಯನ್ ಧರ್ಮದ ಜನರಿದ್ದಾರೆ.ರಾಜಧಾನಿ ಜೆರೂಸಲೆಂ ಜನಸಂಖ್ಯೆ 7,32,100.

ಮೇಲ್ವೆ ಲಕ್ಶಣ:ಇಲ್ಲಿ ನಲ್ಕು ಪ್ರಮೂಖ ಭೂ ಮೇಲ್ಮೈ ಸ್ವರೂಪಗಳು ಕಂಡುಬರುತ್ತವೆ.ಅವುಗಳೆಂದರೆ ಪಶ್ಚಿಮದಲ್ಲಿರುವ ಮೆಡಿಟಿರೇನಿಯನ್ ಕರಾವಳಿ ಮೈದಾನ,ಉತ್ತರದ