ಪುಟ:Mysore-University-Encyclopaedia-Vol-2-Part-2.pdf/೧೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಇಸ್ಲಾಮೀ ವಾಸ್ತುಶಿಲ, ಕಲೆ

ಅನಂತರ ಬಂಡ ತೈಮುರಿದರ್ರ ಕಾಲದಲ್ಲಿ (೧೩೦೯-೧೫೦೯) ಈ ರೂಪ ಚಿತ್ರಣ ಲಿಪಿ ಸಂಬಂಧವಾದ ಅಲಂಕಾರದ ಹಿನ್ನೆಲೆಯಿಂದ ಪ್ರತ್ಯ್ಕೇಕಿಸಲ್ಪಟ್ಟು ಎರಡನೆಯ ಮಂಗೋಲರ ದಾಳಿಯ (೧೩೮೧-೧೩೯೨) ಕಾಲದಲ್ಲಿ ಹೊಸ ಮಾಧುರ್ಯ ಪಡೆಯಿತು. ಬರಹದ ಹಿನ್ನಲೆ ಕೊನೆಗಂಡು ಪ್ರರ್ಕರತಿ ಚಿತ್ರಣದ ಹಿನ್ನೆಲೆಯಲ್ಲಿ ರೂಪಚಿತ್ರಣ ಹೊಸ ಸೂಕ್ಷ್ಮತೆಯನ್ನೂ ರಮ್ಯತೆಯನ್ನೂ ಹೊಂಡಿ ಬೆಳೆಯಿತು. ಪ್ರಕ್ರುತಿ ಸೊಂದರ್ಯ ಚಿತ್ರಣಕ್ಕೆ ಮಾನ್ಯತೆ ದೊರೆತದ್ದು ಈಗಲೇ, ಈ ಚಿತ್ರದಲ್ಲಿ ವೈದಿಧ್ಯವಿತ್ತು. ಸೂಕ್ಷ್ಮ ವಿವರಣೆಯಿತ್ತು. ಲಾಲಿತ್ಯವಿತ್ತು. ಚೀನಿಯರ ಮೀಂಗ್ ಕಾಲದ ನಕ್ಷೆಗಳು ಪುಷ್ಪಭರಿತವಾದ ಗಿಡಗಳು-ಪ್ರತಿ ಚಿತ್ರದಲ್ಲಿಯೂ ಕಂಡುಬಂದವು. ಆದರೆ ಸ್ವಲ್ಪ ಕಾಲಾನಂತರ ಪರ್ಷಿಯನ್ನರು ತಮ್ಮ ಸ್ವಾಭಾವಿಕ ಸೊಂದರ್ಯ ಪ್ರಜ್ಞೆಯನ್ನು ಮತ್ತೊಮ್ಮೆ ಪಡೆದು ತಮ್ಮ ಉದ್ದೇಶಗಳಿಗೆ ಅನುಗುಣವಾದ ಮೇಲ್ಮಟ್ಟದ್ ಅಲಂಕಾರಕ್ಕೆ ತೆರಳಿ, ಚೀನಿ ಕಲೆಯ ಆಧ್ಯಾತ್ಮಿಕ ದ್ರುಷ್ಟಿಯಿಂದ ಪಾರಾದರು. ತೈಮೂರ್ ಒಂದು ಅಚ್ಚುಕಟ್ಟಿನಲ್ಲಿ ಮಾತ್ರ ಸ್ವೇಚ್ಛೆಯನ್ನು ಪ್ರೋತ್ಸಾಹಿಸಿದರೆ, ಅವನ ಮಗನಾದ ಷಾ-ರುಖ್ (೧೪೦೪-೧೪೪೭) ತಂದೆಯ ನಿರ್ಬಂಧಗಳನ್ನು ಸಡಿಲಿಸಿದ, ಇವನ ಕಾಲದಲ್ಲಿನ ಅತ್ಯುತ್ತಮವಾದ ಹಸ್ತಲಿಖಿತ ಸೂಕ್ಷ್ಮಚಿತ್ರಗಳ ಪುಸ್ತಕಗಳು ಎಂದರೆ ಚಂಗೀಗ್ ಖಾನನ ದಿಗ್ವಿಜಯವನ್ನು (೧೧೬೭-೧೨೨೭) ಚಿತ್ರಿಸುವ ಕಾವ್ಯಸಂಗ್ರಹ, ಕಾರ್ಮಾನ್ -ಖಾಜು ಕವಿಯ ೪೩ ಕವನಗಳ ಸಂಗ್ರಹ (೧೨೮೧-೧೩೫೦) ಈ ಎರಡರಲ್ಲಿ ವಿನಿಯೋಗಿಸಿದ ಬಣ್ಣಗಳಲ್ಲಿ ಚಿನ್ನದ ನೀರು ಮತ್ತು ಟಾರ್ಕ್ಚಾಯಿಸ್ ಪ್ರಾಧ್ಯಾನ ಹೊಂದಿದೆ. ತೈಮೂರ್ ಸುಲ್ತಾನನ ಮೊಮ್ಮಗನಾದ ಸುಲ್ತಾನ್ ಇಸ್ಕಾನ್ ಸಂಗ್ರಹಿಸಿದ ಕವನಗಳ ಹಸ್ತಲಿಪಿಗಳಲ್ಲಿ ಲೈಲಾ-ಮಜನೂ ಪ್ರೇಮದ ಘಟ್ಟವೂ ಮಂಗೋಲರ ಚರಿತ್ರೆಯೂ ಇವೆ. ಸುಲ್ತಾನ್ ಷಾ-ರುಖ್ ಆಡಳಿತದಲ್ಲಿ ರಾಜಧಾನಿ ಹೀರತ್ಗೆ ಬದಲಾವಣೆಯಾದುದರಿಂದ ಈ ಕಲಾ ಸಂಪ್ರದಾಯಕ್ಕೆ ಹೀರತ್ ಶೈಲಿ ಎಂದು ಹೆಸರಾಯಿತು. ಈ ಕಾಲದಲ್ಲಿ (೧೪೦೪-೧೪೪೭) ಸೂಕ್ಷ್ಮ ರೂಪರಚನೆ ಒತನ್ಯ ಹೊಂದಿತು. ವಿಶ್ವವಿಖ್ಯಾತ ಕಲೆಗಾರನಾದ ಬಿಜ್ಹದ್ ಈ ಯುಗಕ್ಕೆ ಸೇರಿದವ. ಅಲಂಕಾರವನ್ನು ವಿರಳವಾಗಿಸಿದ್ದೇ ಇವರ ವೈಶಿಷ್ಟ್ಯ. ಸಘವಿದ್ ಯುಗದಲ್ಲಿ (೧೫೦೨-೧೭೫೬೦ ಸೂಕ್ಷ್ಮಚಿತ್ರರಚನೆ ಮತ್ತುಷ್ಟು ಮೇಲ್ಮಟ್ಟಕ್ಕೇರಿತು. ಬಿಜ್ಹದ್ ಶೈಲಿ ಹರಡಿತು. ಮೂಲಪುರುಷನಾದ ಇಸ್ಮಾಯೀಲ್ನ ರಾಜಧಾನಿಯಾದ ಟೈಬ್ರಿಜ್ ನಲ್ಲಿ ಅಸಂಖ್ಯಾತ ಬರೆಹಗಾರರೂ, ಕಲೆಗಾರರೂ, ರಾಜ ಘೋಷಣೆಯಲ್ಲಿ ಪಾಲ್ದೊಂಡರು. ಅವರಲ್ಲಿ ಮಿರಾಕ್, ಕಾಸಿಂ ಆಲಿ, ಸುಲ್ತಾನ್ ಮಹಮ್ಮದ್ ಮುಂತಾದವರಿದ್ದರು. ಇವರಲ್ಲಿ ಅಗ್ರಸ್ಥಾನ ಪಡೆದಿದ್ದ ಸುಲ್ತಾನ್ ಮಹಮ್ಮದ್ ಸೂಕ್ಷ್ಮಚಿತ್ರರಚನೆಯಲ್ಲೂ ಹಸ್ತಲಿಖಿತ ಪುಸ್ತಕಾಲಂಕಾರದಲ್ಲೂ ಹಳೆಯ ಸಂಪ್ರದಾಯವನ್ನೇ ಅನುಸರಿಸಿದ. ಆತ ಮೀರ್ ಸೈಯದ್ ಆಲಿ ನೈಜ ಜಾಮಿಯ ಕವನಗಳನ್ನು ಸುಂದರವಾಗಿ ಚಿತ್ರಿಸಿದ್ದಾನೆ. ಸಹ - ಇಡ್ರ ಕಾಲದಲ್ಲಿ ಭಾವಚಿತ್ರಗಳಿಗೆ ಹೆಚ್ಚಾಗ ರೂಪಗಳು ಪ್ರಚಾರಕ್ಕೆ ಬಂದುವು. ಈ ಯುಗದಲ್ಲಿ ಅಸಂಪೂರ್ಣ ಸೂಕ್ಷಮಚಿತ್ರಣ, ಮುಖ್ಯಾಂಶಗಳನ್ನು ಮಾತ್ರ ಎತ್ತಿ ತೋರುವ ಉದ್ದೇಶದಿಂದ ಮೊದಲನೆಯ ಬಾರಿ ಚಿತ್ರಿತವಾದವು. ರಿಜಾ-ಅಬ್ಬಾಸಿ ಉತ್ತಮ ದರ್ಜೆಯ ಭಾವಚಿತ್ರಗಳನ್ನೂ ಸಾಮಾನ್ಯ ಜೀವನದ ದೃಶ್ಯಗಳನ್ನೂ ಚಿತ್ರಿಸಿದ. ಖುಸ್ರಾ ಮತ್ತು ಷಿರಿನ ಹಸ್ತಲಿಖಿತ ಪ್ರತಿಯನ್ನು ಕೂಡ (೧೬-೧೭) ಬಣಿಸಿರುತ್ತಾನೆ. ಇವನ ಅನಂತರ ಸೂಕ್ಷ್ಮ ಚಿತ್ರಣ ಯೂರೋಪಿಯನ್ನರ ಪ್ರಭಾವದಿಂದ ಕ್ಷೀಣಿಸಿತು. ಆದರೆ, ಸುಸಂಸ್ಕ್ರುತಿ ಹೊಂದಿದ ಪಾರಸೀ ಕಲಾವಿದರು ಪಾಶ್ಚಾತ್ಯ ಆವರಣವನ್ನು ಮಾತ್ರ ಅನುಕರಿಸಿಕೊಂಡು ತಮ್ಮ ರೂಪಚಿತ್ರಣದಲ್ಲಿ ಹಿಂದಿನ ಸಂಪ್ರದಾಯವನ್ನೇ ಮುಂದೂ ಹರಡಿದರು. ಸಾಮಾನ್ಯರು ಕಾಂಚನಕಾಂಕ್ಷೆಯಿಂದ ಅಧಮ ದರ್ಜೆಯ ಕಲಾಕ್ರುತಿಗಳ ರಚನೆಯಲ್ಲಿ ಲೀನವಾದರು. ಇದಕ್ಕೆ ಮೀರ್-ಆಪ್ಞಲ್ ನ ಚಿತ್ರಗಳು ಉದಾಹರಣೆಗಳಾಗಿವೆ. ೧೯ ನೇ ಶತಮಾನದಲ್ಲಿ ಮೆರುಗಣ್ಣೆ (ಲ್ಯಾಕರ್) ಚಿತ್ರಗಳು ಮುಂದುವರಿದವು. ಪರಿಣಾಮವಾಗಿ ಪುಸ್ತಕಗಳ ಹೊದಿಕೆಯ ಅಲಂಕಾರ, ಪೆಟ್ಟಿಗೆ, ಸಂಪುಟ ಮತ್ತು ಗೃಹೋಪಕರಣಗಳ ಶೃಂಗಾರ ಹೆಚ್ಚಿತು. ಭಾರತ ಕಲಾ ಸಂಸ್ಕ್ರುತಿಯ ಸಂಪರ್ಕದಿಂದ ಪರಿಣಿಮಿಸಿದ ಇಸ್ಲಾಂ ಕಲೆ ಮತ್ತಷ್ಟು ವೈಶಿಷ್ಟ್ಯಗಳಿಸಿತು.

ಈಜಿಪ್ಟ್ ಕಲಾಚರಿತ್ರೆಯಲ್ಲಿ ಇಸ್ಲಾಮಿನ ಕಾಣಿಕೆ ಪ್ರಶಂಸನೀಯವಾಗಿದೆ. ೧೨೦೦ ರಲ್ಲಿ ಐಬಾಕಿನಿಂದ ಸ್ಥಾಪಿತವಾದ ಮಾಲೂಕ್ ಸುಲ್ತಾನರ ಆಡಳಿತದಲ್ಲಿ ನಿರ್ಮಾತವಾದ ವಾಸ್ತುಶಿಲ್ಪ ಉತ್ತತಮಟ್ಟದ್ದು. ತುರ್ಕರ ಮತ್ತು ಮಂಗೋಲರ ಸಮ್ಮಿಳಿತದ ಮೊದಲ ಬಾಹ್ರೀ ವಂಶ ೧೨೫೦-೧೩೯೦ ರ ವರೆಗೂ ಆಡಳಿತ ನಡೆಸಿತು. ಸುಲ್ತಾನ್-ಆಲ್-ಹಸನ್ ಮಸೀದಿ (೧೩೬೨) ೧೯ನೆಯ ಕಲೀಫ್ ಆಲ್-ಹಸನ್ ಕಾಲದಲ್ಲಿ (೧೩೪೭-೬೧) ನಿರ್ಮಾಣಗೊಂಡಿತು. ಅದರ ರಮ್ಯ, ಭವ್ಯ, ಅಲಂಕರಣಗಳು ಕಲಾ ಪ್ರಪಂಚಕ್ಕೆ ಅದು ನೀಡಿದ ಕಾಣಿಕೆಯಾಗಿವೆ. ಅದು ಶಿಲುಬೆಯಾಕಾರದ ಮದ್ರಸಾ ಮಿಳಿತವಾದ ಮಸೀದಿ, ಸರ್ ಕೇಶಿಯ ಪರಂಪರೆ (೧೩೮೦-೧೫೧೭) ನಿರ್ಮಿಸಿದ ಮಸೀದಿಗಳನ್ನು ಎರಡನೆಯ ಬುರ್ಜೀ ವಂಶದ ಸುಲ್ತಾನರು ಪರಿಪೂರ್ಣತೆಗೆ ತಂದರು. ಹಿಂದಿನ ಗೋಪುರಗಳಂತೆ ಇವರ ಗೋಪುರಗಳು ಸಹ ಹಗುರವಾಗಿಯೂ ಅವುಗಳ ಹೊರ ಮೇಲೆ ಲಘುವಾಗಿಯೂ ಅಲಂಕಾರ ಮತ್ತಿಷ್ಟು ಸೊಂದರ್ಯದಿಂದ ಕೂಡಿಯೂ ಮುಂದುವರಿಯಿತು. ಕಲ್ಲುಕಟ್ಟಡದ ವಿಧಾನದಲ್ಲಿ, ಮುಖ್ಯವಾಗಿ ಕಮಾನುಗಳ ರಚನೆಯಲ್ಲಿ, ಬಿಳಿ ಕಪ್ಪು ಪಟ್ಟಿಗಳ ಪ್ರಾಧ್ಯಾನ ಹೆಚ್ಚಿತು. ರೇಖಾಗಣಿತ ನಕ್ಷೆಗಳ ಅಲಂಕಾರ, ಕೂಫಿಕ್ ಬರಹದ ಶೃಂಗಾರ, ಜೇನುಗೊಡುಗಳಂತೆ ಒಳಮಾಳಿಗೆಯಿಂದ ಜೋಲಾಡುವ ನಯಗಾರೆಯ ಕೆಲಸ, ಇಲ್ಲಿ ಹೆಚ್ಚು ಪ್ರಶಂಸನೀಯವಾಗಿವೆ. ಆದರೆ ಈ ಅಲಂಕಾರದಲ್ಲಿ ಸ್ಪೇನ್, ಪರ್ಷಿಯಗಳ ಕಲೆಗಳಲ್ಲಿ ಹೇರಳವಾಗಿರುವಂತೆ ಪ್ರಾಣಿರೂಪಗಳು ಇಲ್ಲ. ಮಾಮಲೂಕ್ ರ ಕಾಲದ ಕುಂದಣ ಕೊಶಲ, ಕುರಾನ್ ಹೊದ್ದಿಕೆಗಳ ಮೇಲಿನ ಶೃಂಗಾರಗಳು ಮಧುರವಾಗಿದ್ದು ಇಸ್ಲಾಮೀ ಕಲೆಗೆ ಮೆರಗುಕೊಟ್ತಿವೆ. ಕ್ವಾ-ಇಟ್-ಬೇ ನಿರ್ಮಿಸಿದ ಮದ್ರಾಸ ಸುಂದರವಾಗಿದೆ. ಸೂಕ್ಷ್ಮಾಕೃತಿಗಳ ರಚನೆಯಲ್ಲಿ ಪ್ರಗತಿ ಸಾಧನೆಯಷ್ಟು ಆಗಿಲ್ಲ. ಆಟೊಮನ್ ಆಡಳಿತ ಈಜಿಫ್ಟ್ ಮತ್ತು ಸಿರಿಯ ಪ್ರದೇಶಗಳಲ್ಲಿ ಹರಡಿದ ಅನಂತರ ಹೊಳೆಯುವ ಹೆಂಚುಗಳ ತಯಾರಿಕೆಯಲ್ಲಿ ವಿನಾ ಉಳಿದಂತೆ ಇಸ್ಲಾಂ ಕಲೆ ಅವನತಿ ಹೊಂದಿತೆಂದೇ ಹೇಳಬಹುದು. ಸೆಲ್ಯೂಕರು ಬೈಜಾಂಟೀಯನ್ ಆಡಳಿತಯಿಂದ ರೋಮನ್ನರ ಪ್ರದೇಶಗಳನ್ನು ಕೈಕೊಂಡ ಆನಂತರ ಇಕೋನಿಯಂ ನಗರ ಕೋನಿಅಯ ಆಗಿ ಬದಲಾವಣೆ ಹೊಂದಿ ನಂತರ ರಾಜಧಾನಿಯಾಯಿತು. ಸೆಲ್ಯೂಕರು ನಿರ್ಮಿಸಿದ ಭವ್ಯವಾದ ಅಂತಃಪುರ ಹಾಗೂ ಮಸೀದಿಗಳೂ ಪ್ರಖ್ಯಾತವಾದುವು. ಪ್ರಪಂಚವನ್ನು ನೋಡದೇ ಇದ್ದರೂ ಸರಿ, ಕೋನಿಯ ನೋಡಬೇಕು ಎನ್ನುವ ಲೋಕೋಕ್ತಿ ಜಾರಿಗೆ ಬಂತು. ಮ್ಯಾಕ್ ವಂಶದವರ ಪೈಕಿ ಅರೇಬಿಯನ್ ನೈಟ್ಸ್ ಖ್ಯಾತಿಯ ಅಲಾ-ಯನ್-ದೀನ್ (೧೨೧೯-೧೨೩೬) ಕಾಲದಲ್ಲಿ ಕೋನಿಯ ಅಂತರಾಷ್ಟ್ರೀಯ ಸಂಸ್ಕ್ರುತಿಗಳ ಕೇಂಡ್ರವಾಗಿ ಪರಿಣಮಿಸಿತು. ಮೆಹ್ಲಾವಿ-ಸೋಫೀ ಎಂಬ ಉದಾರ ಧೋರಣೆಯ ಪಂಥ ಲುದ್ದೀನ್ ರೂಮಿನಿಂದ ಸ್ಥಾಪಿತವಾಯಿತು. ಈ ಪಂಗಡದ ಮುಸಲ್ಮಾನರು ವಿವಿಧ ಮತಗಳ ಆದೇಶಗಳನ್ನು ಖಂಡಿಸುತ್ತ, ದೇವತಾರಾಧನೆಯಲ್ಲಿ ಸಂಗೀತಕ್ಕೂ ತಾಳಮೇಳಕ್ಕೂ ತಕ್ಕಂಥ ಪ್ರಾಧ್ಯಾನ್ಯ ಕೊಡುತ್ತ, ಕವಿತ್ರೆಗೆ, ಚಿತ್ರರಚನೆಗೆ, ನಾಟ್ಯಕಲೆಗೆ ಪ್ರೋತ್ಸಾಹವನ್ನು ನೀಡಿದರು. ಒಟ್ಟಿನಲ್ಲಿ ಅವರು ಕಲೆಯ ಮೂಲಕ ದೇವರನ್ನು ಪಡೆಯಲು ಯತ್ನಿಸಿದರು. ಸೊಂದರ್ಯ ನಿಧಿಯಾದ ದೇವರು ಸೊಂದರ್ಯವನ್ನು ಪ್ರೀತಿಸುತ್ತಾನೆ ಎಂಬ ಮಹಮ್ಮದನ ನುಡಿ ಈ ಮತಕ್ಕೆ ತಳಹದಿಯಾಗಿತ್ತು. ಈ ಪಂಗಡದ ಚಿತ್ರಕಾರದಲ್ಲಿ ಬೆದ್ದ-ದೀನ್-ಬೆಬ್ರಜಿ, ಬೆದ್ದ-ಜೀನ್-ಯವಸಿ ಆದ್ವಿತೀಯರಾಗಿರುತ್ತಾರೆ. ಆದರೆ ಆಟೋಮನರ್ರು ೧೩೨೬ ರಲ್ಲಿ ಆಡಳಿತಕ್ಕೆ ಬಂದ ಅನಂತರ ೧೪೫೩ ರಲ್ಲಿ ಬೈಜಾಂಟೀಯನ್ ಅನ್ನು ಗೆದ್ದ ಮೇಲೆ ಕಾನ್ ಸ್ಟ್ಯಾಂಟಿನೋಪಲ್ (ಇಸ್ತಾನ್ ಬುಲ್) ರಾಜಧಾನಿ ಆದ ಮೇಲೆ ಸೇಂಟ್ ಸೋಫಿಯ ದೇವಾಲಯ ಮಸೀದಿಯಾಯಿತು. ಅಲ್ಲಿನ ಕ್ರೈಸ್ತರ ಚಿತ್ರಗಳನ್ನು ಸುಣ್ಣದಿಂದ ಮುಚ್ಚಿ, ಅವುಗಳ ಮೇಲೆ ಮುಸಲ್ಮಾನರ ಗೂಢ ಸಾರಾಂಶದ ಚಿತ್ರಾಲಂಕಾರವನ್ನು ರಚಿಸಲಾಯಿತು. ಕೂಫಿ ಕೈಬರಹದ ಶೃಂಗಾರ ಚಿಕ್ಕ ದೊಡ್ಡ ಗೋಪುರಗಳ ಮೇಲೆ, ಮಸೀದಿಗಳಲ್ಲಿ ಕಂಡು ಬಂತು. ಆಟೊಮನ್ ಸುಲ್ತಾನರ ಉತ್ಕರ್ಷ ಕಾಲದಲ್ಲಿ ಅಂದರೆ ೧೫, ೧೬ ನೆಯ ಶತಮಾನಗಳಲ್ಲಿ ಅಲಂಕಾರ, ಸೊಲಭ್ಯ ಮತ್ತು ಮನೋರಂಜನೆಯ ಪ್ರವೃತ್ತಿ ಇಸ್ಲಾಮೀ ಕಲೆಯಲ್ಲಿ ಕಂಡುಬಂದವು. ಇದರ ಸಾರಾಂಶದ ಶೈಲಿಯಲ್ಲಿ ಕ್ಷೇತ್ರಗಣಿತ ನಕ್ಷೆಗಳೂ ಸೇರಿವೆ. ಆದರೆ ಇದರಲ್ಲಿ ವಾಸ್ತವಿಕತೆ ಇಲ್ಲ. ಸೆಲ್ಯೂಕರ ಅಲಂಕರ ವಿನ್ಯಾಸದಲ್ಲಿ ಪ್ರದರ್ಶಿತವಾದ ಮನುಷ್ಯ ಮತ್ತು ಪ್ರಾಣಿಗಳ ರೂಪಗಳು ಇಲ್ಲಿಲ್ಲ. ಪರಿಣಾಮವಾಗಿ ಅಲಂಕಾರದ ಸ್ಥೂಲತೆಯನ್ನು ಕಳೆದುಕೊಂಡು ಹಗುರವಾಗಿದೆ. ಕಾಲಕ್ರಮೇಣ ಮುಸ್ತವ್ವೀರ್ ಪಂಗಡದ ಕಲೆಗಾರರು ಸಾಮಾನ್ಯ ಜೀವನದ ಅವಶ್ಯಗಳನ್ನೂ ಭಾವಚಿತ್ರಗಳನ್ನೂ ರಚಿಸಿದ ಮೇಲೆ ಬರಹದ ಅಲಂಕಾರ ಕ್ಷೀಣಿಸಿತು. ಜೊತೆಯಲ್ಲಿ ಪುಸ್ತಕಾಲಂಕಾರದ ಸೂಕ್ಷ್ಮ ಚಿತ್ರಗಳು ಹೆಚ್ಚಿದ್ದವು. ಬೇಟೆ, ಅಂತಃಪುರದ ಉತ್ಸವಗಳು ಮತ್ತು ಸಾಮಾನ್ಯ ಜೀವನದ ದೃಶ್ಯಗಳನ್ನೊಳಗೊಂಡ ಫ್ಯೂನರ್-ನಾಮ ಮುಂತಾದ ಹಸ್ತಲಿಖಿತ ಪ್ರತಿಗಳು ತಲೆದೋರಿದುವು.