ಪುಟ:Mysore-University-Encyclopaedia-Vol-2-Part-2.pdf/೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

314

  ಇಟಲಿಯ ಇತಿಹಾಸ

ಸ್ವಯಂಸೇವಕರು ಬಹು ಕಡಿಮೆಯಾಗಿದ್ದರೂ ನೆಪೊಲಿಟನ್ ದೊರೆಗಳ ರಾಜ್ಯಗಳನ್ನು ಪದಚ್ಯುತಿಗೊಳಿಸುವಷ್ತು ಬಲಿಷ್ಠರಾಗಿದ್ದರೂ ಆಸ್ತ್ರಿಯನ್ನರ ವಿರುದ್ಧ ಅಷ್ತು ಪರಿಣಾಮಕಾರಿಯಾಗಿರಲಿಲ್ಲ. ಪೀಡ್ ಮಾಂಟಿನ ಸೇನೆ ಮುಖ್ಯಪಾರ ವಹಿಸಿತು. ಫ್ರೆಂಚರು ಹೆಚ್ಚು ಹೋರಾಡಿದ್ದರು. ಆದರೆ ಬ್ರಿಟನ್ ನ ಅಪ್ರತ್ಯಕ್ಷ ನೆರವು ಮುಖ್ಯವಾಗಿತ್ತು. ಮ್ಯಾಟ್ಜಿನಿಯ ಬೋಧನೆಗಳನ್ನು ಅರ್ಥ ಮಾಡಿಕೊಂಡಿದ್ದವರ ಸಂಖೆ ಬಹು ಕಡಿಮೆ. ಆದರೆ ಅವನ ಬಗ್ಗೆ ಅಭಿಮಾನ ಹೊಂದಿದ್ದವರನೇಕ.ಏಕೀಕರಣಕ್ಕಾಗಿ ಇಟಲಿಯ ಜನ ಮತ ನೀಡಿದ್ದರು.ಆದರೆ ಹೊಸತರಲ್ಲಿ ಪ್ರೊತ್ಸಾಹಿಸಿ ಅನಂತರ ತಿರಸ್ಕಾರಭಾವದಿಂದ ನೋಡುವುದು ಇಟಲಿಯ ಪರಂಪರೆಯ ವಿಶೇಷ. ಇಟಲಿಯನ್ನು ಅರಿತಿದ್ದ, ಪ್ರೀತಿಸುತ್ತಿದ್ದ ಕ್ಯಾವರ್ ಕೇವಲ ಇಟಲಿಯ ಸ್ವಾತಂತ್ರ್ಯವನ್ನು ಅಪೇಕ್ಷಿಸಿ ಮಾತನಾಡಿದವನೇ ವಿನಾ ಪರ್ಯಾಯದ್ವೀಪದ ಉತ್ತರ ದಕ್ಷಿನಗಳನ್ನು ಒಟ್ಟುಗೂಡಿಸಲು ಪ್ರಯತ್ನಿಸಲಿಲ್ಲ. ಗ್ಯಾರಿಬಾಳ್ಡಿ ಕಾರ್ಯತಃ ೧೮೦೬ರಲ್ಲಿ ಉತ್ತರ ದಕ್ಷಿನ ಇಟಲಿಗಳ ಏಕೀಕರಣಕ್ಕಾಗಿ ಯತ್ನಿಸಿದ. ಕಡುಬದತನ ಹಾಗು ದರೋದೆಕಾರ ಪರಂಪರೆಯ ಜೊತೆಗೆ ದಾಸ್ಯದೊಂದ ಹೊರಹೊಮ್ಮುತ್ತಿದ್ದ ದಕ್ಷಿಣ ಇಟಲಿ, ಬಹು ಶೀಘ್ರವಾಗಿ ಕೈಗಾರಿಕೆಗಳಿಂದ ಮುಂದುವರೆಯುತ್ತಿದ್ದ ಪ್ರಗತಿಪೂರ್ಣ ಉತ್ತರ ಇಟಲಿಯಿಂದ ಭಿನ್ನವಾಗಿದೆ ಎಂಬುದನ್ನು ಕ್ಯಾವರ್ ಅರಿತಿದ್ದ. ೧೮೦೬ರ ಅನಂತರ ದಕ್ಷಿನ ಇಟಲಿಯನ್ನು ಅಭಿವೃದ್ಧಿಗೊಳಿಸಲು ಹಣ ವ್ಯಯಿಸುತ್ತಿದ್ದುದನ್ನು ಉತ್ತರ ಇಟಲಿ ವಿರೋಧಿಸಿತು. ಇಟಲಿಯ ಹೊಸ ಸರ್ಕಾರ ಆರ್ಥಿಕಾಭಿವೃದ್ಧಿಯ ಪ್ರಯತ್ನಗಳನ್ನು ನಡೆಸಿತು. ಟಸ್ಕನ್ ದೇಶಭಕ್ತ ರಿಕಾಸೊಲಿ, ಕ್ಯಾವರ್ ನ ಶಿಶ್ಯ ಮಿಂಗೆಟ್ ಹಾಗು ರೋಮನ್ನು ವಶಪಡಿಸಿಕೊಳ್ಳುವುದರಲ್ಲಿ ವಿಜಯಿಯಾದ ಲಾಂಜಾ ಇವರೆಲ್ಲರೂ ನೀತಿವಂತರಾಗಿದ್ದರು. ಈ ಕಾಲದಲ್ಲಿ ಇಟಲಿಯ ಸಂಸತ್ತು ಭ್ರಷ್ಟಾಚಾರಕ್ಕೆ ಹೆಸರಾಗಿತ್ತು. ಮುಸ್ಸೋಲಿನಿ ಹೊಸ ರೀತಿಯ ರಾಜ್ಯ ಸ್ಥಾಪಿಸುವವರೆಗೆ ಈ ಸ್ಥಿತಿ ಮುಂದುವರೆಯಿತು.

ವಿದೇಶ ಹಾಗು ವಸಾಹುತಿ ನೀತಿ - ಇಟಲಿಯ ಏಕೀಕರಣವನ್ನೂ ಸ್ವಾತಂತ್ರ್ಯವನ್ನೂ ಬಯಸಿದ್ದ ಫ್ರಾನ್ಸ್ ಇಟಲಿಯತ್ತ ಯಾವಾಗಲೂ ಸಂಶಯ ಹಾಗೂ ವೈರಭಾವ ತಳೆದಿತ್ತು. ೧೮೭೮ರ ಬರ್ಲಿನ್ ಕಾಂಗ್ರೆಸ್ಸಿನಲ್ಲಿ ಇಟಲಿಗೆ ಯಾವ ಮಿತ್ರರಾಷ್ತ್ರವೂ ಇರಲಿಲ್ಲ. ಈ ಸಮ್ಮೇಳನದ ತೀರ್ಮಾನದನ್ವಯ ೧೮೮೧ರಲ್ಲಿ ಫ್ರಾನ್ಸ್ ಟ್ಯೂನಿಸ್ಸ್ ನ ರಕ್ಷಣೆಗೆ ಬಂತು. ಈ ತಿರಸ್ಕಾರದಿಂದ ಇಟಲಿ ಸರ್ಕಾರ ಬಿಸ್ಮಾರ್ಕನ ಬಂಧನಕ್ಕೊಳಗಾಯಿತಲ್ಲದೆ ೧೮೮೨ರಲ್ಲಿ ಆಸ್ಟ್ರಿಯ, ಜರ್ಮನಿ ಮತ್ತು ಇಟಲಿಗಳು ಪರಸ್ಪರ ಸ್ನೇಹದ ಒಪ್ಪಂದ ಮಾಡಿಕೊಂಡವು. ಇಟಲಿಗೆ ಈ ಮಿತೃತ್ವ ಸುಲಭವೂ ಆಗಿರಲಿಲ್ಲ, ಪ್ರಿಯವೂ ಆಗಿರಲಿಲ್ಲ. ೧೯೧೪ರ ವರೆಗೆ ಅದು ಕಾಗದದ ಮೇಲಿದ್ದಿತ್ತೇ ವಿನಾ ಪರಿಣಾಮಕಾರಿಯಾಗಿರಲಿಲ್ಲ. ಐತಿಹಾಸಿಕವಾಗಿ, ಧಾರ್ಮಿಕವಾಗಿ, ಸಾಂಸ್ಕೃತಿಕವಾಗಿ ಹಾಗು ವಾಣಿಜ್ಯ ದೃಷ್ಟಿಯಿಂದ ಇಟಲಿ ಮಧ್ಯರಾಷ್ತ್ರಗಳಿಗಿಂತ ಫ್ರಾನ್ಸಿನೊಡನೆ ಹೆಚ್ಚು ಸಂಬಂಧ ಹೊಂದಿತ್ತು. ೧೮೮೭ರಲ್ಲಿ ಫ್ರಾನ್ಸಿಸ್ಕೋ ಕ್ರಿಸ್ಟಿ ಕೌನ್ಸಿಲ್ ನ ಅಧ್ಯಕ್ಷನಾದ. ಇವನು ಇಟಲಿಗೆ ವಸಾಹತು ವಿಸ್ತರಣ ತತ್ವವನ್ನು ನೀಡಿದ. ಕ್ರಿಸ್ಟಿಯೂ ಸಿಸಿಲಿಯವನಾಗಿದ್ದ, ಮ್ಯಾಟ್ಜಿನಿಯ ಶಿಷ್ಯನಾಗಿದ್ದ, ಗಾರೊಬಾಳ್ಡಿಯ ಆಪ್ತನಾಗಿದ್ದ. ಇವನು ಬಲಪಕ್ಷಕ್ಕೆ ಬಂದ. ಅಂದರೆ ರಾಜ್ಯವ್ಯವಸ್ಥೆಯನ್ನು ಒಪ್ಪಿಕೊಂಡಿದ್ದ ನೆಂದಾಯಿತು. ಆಫ್ರಿಕದ ಉತ್ತರ ತೀರದಲ್ಲಿ ನೆಲೆಸಿದ್ದ ಐರೋಪ್ಯ ವ್ಯಾಪಾರಗಾರರ ಪೈಕಿ ಇಟಲಿಯವರೇ ಹೆಚ್ಚು ಇವರಿಗೆ ಕೆಂಪುಸಮುದ್ರದ ಮೇಲೆ ಮಸ್ಸವದಲ್ಲಿ ೧೮೮೨ರಲ್ಲಿ ಹತೋಟಿ ದೊರಕಿತು. ಕ್ರಿಸ್ಟಿಯಿಂದ ೧೮೯೦ರಲ್ಲಿ ಎರಿಟ್ರಿಯ ವಸಾಹತು ಸ್ಥಾಪನೆಯಾಯಿತು. ಇವನು ಬ್ರಿಟಿಶ್ ಸಮ್ಮತಿ ಪಡೆದು ಇಲ್ಲಿಂದ ಸೋಮಾಲಿ ಲ್ಯಾಂಡ್ ತೀರದವರೆಗೆ ಮುನ್ನುಗ್ಗಿದ. ಕ್ರಿಸ್ಟಿ ದೊಡ್ಡ ಸಾಮ್ರಾಜ್ಯ ಸ್ಥಾಪಿಸುವ ಆಕಾಂಕ್ಷೆಯುಳ್ಳವನಾದ. ಅಬಿಸೀನಿಯದಲ್ಲಿ ಸಾಮ್ರಾಟನ ಬಗ್ಗೆ ಜನರಲ್ಲಿದ್ದ ಅಸಮಾಧಾನದ ಉಪಯೋಗ ಪಡೆದುಕೊಂಡು ೧೮೯೫ರಲ್ಲಿ ಟೈಗೆರ್ ಪ್ರಾಂತ್ಯವನ್ನು ಎರೊಟ್ರಿಯ ವಸಾಹತಿಗೆ ಸೇರಿಸುವುದಾಗಿ ಕ್ರಿಸ್ಟಿ ಘೋಷಿಸಿದ. ಆದರೆ ೧೮೯೫ ಡಿಸೆಂಬರಿನಲ್ಲಿ ದೊಡ್ದ ಸೇನೆಯೊಡನೆ ಅಬಿಸೀನಿಯದ ದೊರೆ ಮೆನೆಲಿಕ್ ಅಂಬಾ ಅಗಲಿನಲ್ಲಿ ಮುಂಬರುತ್ತಿದ್ದ ಸೈನ್ಯವನ್ನು ಸೋಲಿಸಿದ. ೧೮೯೬ ಮಾರ್ಚಿಯಲ್ಲಿ ಟೈಗರಿನಲ್ಲಿನ ಅಡೊವದಲ್ಲಿ ಇಟಲಿಯ ಮುಖ್ಯ ಸೈನ್ಯವನ್ನು ನಾಶಮಾಡಿದ. ಆಡೂವ ಪರಾಭವ ಇಟಲಿಗೆ ಬಹುದೊಡ್ಡ ಆಘಾತವನುಂಟುಮಾಡಿತು. ಸಂಪೂರ್ಣ ತಪ್ಪು ಕ್ರಿಸ್ಟಿಯದಾಗಿತ್ತು. ಸ್ವಲ್ಪ ಕಾಲಾನಂತರ ಕ್ರಿಸ್ಟಿ ಅವಮಾನದಿಂದ ಮೃತನಾದ. ಉತ್ತರ ಆಫ್ರಿಕದಲ್ಲಿ ಅವನ ತತ್ತ್ವತಿರುವು ಮುರುವಾಗಿ, ಎರಿಟ್ರಿಯ ಮತ್ತು ಸೋಮಾಲಿ ಲ್ಯಾಂಡ್ ಗಳು ಮಾತ್ರ ಉಳಿದುಕೊಂದವು. ಹಾಗೂ ಸಾಮ್ರಾಜ್ಯ ಕ್ಷೀಣಿಸಿತು. ಸ್ವಲ್ಪ ಕಾಲದ ಆನಂತರ ರಾಜಕೀಯ ಹತೋಟಿ ಗಿಯೊಲಿಟಿಯ ವಶಕ್ಕೊಳಗಾಯಿತು.

ಕೈಗಾರಿಕಾವಾದ ಮತ್ತು ಸಾಮ್ರಾಜ್ಯವಾದ - ದಕ್ಷಿಣದ ಕೆಲವಿ ಭಾಗಗಳ ಹೊರತು, ಮಿಕ್ಕ ಭಾಗಗಳಲ್ಲಿನ ದೇಶದ ಆರ್ಥಿಕ ಅಭ್ಯುದಯ ಭಯದಿಂದ ಸಾಗುತ್ತಿತ್ತು.