ಪುಟ:Mysore-University-Encyclopaedia-Vol-2-Part-2.pdf/೧೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಇಳಿಮುಖ ಉಪಯುಕ್ತತೆಯ ಸೂತ್ರ

ಪ್ರಾರಂಭಿಸಿದರೆ ಮುಂದೆ ದ್ರವ ತುಂಬಿದ ಪಾತ್ರೆ ಖಾಲಿಯಾಗುವ ವರೆಗೆ ಅಥವಾ ಗಿಡ್ದ ಬಾಹು ದ್ರವಸ್ಪರ್ಶ ಕಳೆದುಕೊಳ್ಳುವವರೆಗೆ (ಯಾವುದು ಮೊದಲಾಗುವುದೋ ಅಲ್ಲಿಯವರೆಗೆ) ಇಳಿಗೊಳವೆಯ ಮೂಲಕ ದ್ರವ ಹರಿದು ಖಾಲಿ ಪಾತ್ರೆಯನ್ನು ತುಂಬುತ್ತದೆ. ಸೀಮೆ ಎಣ್ಣೆ ಟಿನ್ನು ಖಾಲಿ ಮಾಡುವಾಗ, ಕೊಳಾಯಿಯಿಂದ ನೀರನ್ನು ಕೆಳಗಿನ ತೊಟ್ಟಿಗೆ ಹರಿಸಬೇಕಾದಾಗ ಒಂದು ರಬ್ಬರ್ ನಳಿಗೆಯ ಸಹಾಯದಿಂದ ಇಳಿಗೊಳವೆ ಕ್ರಿಯೆ ನಡೆಸುವುದು ವಾಡಿಕೆ. ಇಳಿಗೊಳವೆಯ ತತ್ವ ವಿಷ್ಟು : ದ್ರವದ ಮೇಲ್ಮೈ ಮೇಲೆ ವಾಯು ಸಂಮರ್ದವಿದೆ. ಎಂದರೆ ದ್ರವಸಂಮರ್ದ ಮತ್ತು ವಾಯುಸಂಮರ್ದ ಪರಸ್ಪರ ಸಮಾನ ಮತ್ತು ವಿರುದ್ಧ ದಿಕ್ಕುಗಳಲ್ಲಿದ್ದು ದ್ರವ ಸಮತೋಲದಲ್ಲಿದೆ. ಒಂದು ನಿರ್ವಾತ ಕೊಳವೆಯ ಬಾಯಿಯನ್ನು ಕೊಳವೆಯಲ್ಲಿ ಮುಳುಗಿಸಿದಾಗ ಆ ಕೊಳವೆಯ ಒಳಗೆ ದ್ರವ ಒಂದು ನಿರ್ದಿಷ್ಟ ಎತ್ತರಕ್ಕೆ ಏರುವುದನ್ನು ನೋಡಬಹುದು. ಈ ಎತ್ತರ ದ್ರವದ ಸಾಂದ್ರತೆಯನ್ನು ಅವಲಂಬಿಸಿದೆಯೇ ವಿನಾ ಕೊಳವೆಯ ಆಕೃತಿ ಅಥವಾ ಅಡ್ಡಕೊಯ್ತವನ್ನಲ್ಲ. ದ್ರವ ಏರುವ ಈ ಎತ್ತರವನ್ನು ವಾಯುಭಾರ ಸೂಚಿಯಾಗಿ ಪರಿಗಣಿಸುತ್ತೇವೆ. ಒಂದೊಂದು ದ್ರವಕ್ಕ ಒಂದೊಂದು ಎತ್ತರದ ಸ್ಥಳದಲ್ಲಿ ಈ ಸೂಚಿ ಬೇರೆ ಬೇರೆಯಾಗಿರುವುದು. ಸಮುದ್ರಮಟ್ಟದಲ್ಲಿ ನೀರು ಏರುವ ಎತ್ತರ ಸು. ೩೩.೮ ಡಿಗ್ರಿ ಪಾದರಸ ಏರುವ ಎತ್ತರ ಸು ೩೦ ಡಿಗ್ರಿ

ಈ ಎತ್ತರ ದ್ರವ ಸೂಚಿಸುವ ವಾಯುಭಾರ, ತಾತ್ವಿಕವಾಗಿ, ಇಳಿ ಗೊಳವೆಯ ಪ್ರಯೋಗದಲ್ಲಿ ಅದನ್ನು ನಿರ್ವಾತಗೊಳಿಸಿ ಗಿಡ್ಡ ಬಾಹುವಿನ ತೆರೆದ ಬಾಯಿಯನ್ನು ದ್ರವ ತುಂಬಿದ ಪಾತ್ರೆಯೊಳಗೆ ಮುಳುಗಿಸುತ್ತೇವೆ. (ಅ) ಆಗ ಸಹಜವಗಿ ಅದರೊಳಗೆ ಏರಿದ ದ್ರವ ಬಾಗನ್ನು (ಬಿ) ಉತ್ತರಿಸಿ ಮುಂದಿನ ತಗ್ಗಿನ ಪ್ರದೇಶಕ್ಕೆ ಇಳಿಯುತ್ತದೆ.

ಇಲ್ಲಿ ಎತ್ತರ (ಎಂದರೆ ದ್ರವ ಮಟ್ಟದಿಂದ ಇಳಿಗೊಳವೆಯ ಬಾನವರೆಗಿನ ಲಂಬ ಎತ್ತರ) ಆ ದ್ರವ ಸೂಚಿಸುವ ವಾಯುಭಾರ ಎತ್ತರಕ್ಕಿಂತ ಹೆಚ್ಚಾಗಿದ್ದರೆ ದ್ರವ ಬಾಗಿನ ವರೆಗೆ ಏರದ ಕೆಳಮಟ್ಟದಲ್ಲಿಯೇ ನಿಲ್ಲುವುದು, ಆಗ ಇಳಿಗೊಳವೆ ಆಪ್ರಯೋಜಕವಾಗುತ್ತದೆ. ನೀರನ್ನು ಇಳಿಗೊಳವೆ ಮೂಲಕ ಸಾಗಿಸಿಬೇಕಾದಾಗ ಬೆಲೆ ಸು. ೩೦ ಡ್ರಿಗ್ರಿ ಗಿಂತ ಕಡಿಮೆ ಇರಬೇಕು. ಇನ್ನೂ ಒಂದು ರೀತಿಯಲ್ಲಿ ಇಳಿಗೊಳವೆಯ ತತ್ವವನ್ನು ಪರಿಶೀಲಿಸಬಹುದು.

ಗಿಡ್ಡ ಬಾಹುವಿನೊಳಗಿನ ಸಂಮರ್ದ = ವಾಯುಸಂಮರ್ದ

                                        ಎತ್ತರದ ದ್ರವಸಂಮರ್ದ

ಉದ್ದ ಬಾಹುವಿನೊಳಗಿನ ಸಂಮರ್ದ = ವಾಯುಸಂಮರ್ದ

                                       - ಎತ್ತದ ದ್ರವಸಂಮರ್ದ 

ಆದ್ದರಿಂದ ಗಿಡ್ಡ ಬಾಹುವಿನೊಳಗಿನ ಸಂಮರ್ದ ಉದ್ದ ಬಾಹುವಿನೊಳಗಿನ ಸಂಮರ್ದ ಕ್ಕಿಂತ ಹೆಚ್ಚು ಎಂಬುದು ಸ್ಪಷ್ಟವಾಗಿದೆ. ಇದರ ಪರಿಣಾಮವಾಗಿ ಅಧಿಕ ಸಂಮರ್ದವಿರುವಡೆಯಿಂದ ಕಡಿಮೆ ಸಂಮರ್ದವಿರುವೆಡೆಗೆ ದ್ರವ ಹರಿಯುತ್ತದೆ.

ಇಳಿಮುಖ ಉಪಯುಕ್ತತೆಯ ಸೂತ್ರ : ಯಾವುದೇ ಸರಕನ್ನು ಹೆಚ್ಚು ಹೆಚ್ಚು ಪ್ರಮಾಣಾದಲ್ಲಿ ಪಡೆದಾಗ, ಯಾವುದೋ ಒಂದು ಘಟ್ಟದ ಅನಂತರ ಅದರ ಬಯಕೆಯ ತೀವ್ರತೆ ಕಡಿಮೆಯಾಗುತ್ತ ಹೋಗುವುದೆಂಬ ಅನುಭವಸಿದ್ದವೂ ಸ್ವಾಭಾವಿಕವೂ ಆದ ವಿಷಯವನ್ನು ನಿರ್ದಿಷ್ಟವಾಗಿ ನಿರೂಪಿಸುವ ಅರ್ಥಶಾಸ್ತ್ರಸೂತ್ರ, ಒಬ್ಬ ಅನುಭೋಗಿಯ ಇತರ ಸರಕುಗಳ ಅನುಭೋಗ ಏಕರೀತಿಯಾಗಿದ್ದು, ಒಂದು ಸಕೈನ ಅನುಭೋಗವನ್ನು ಆತ ಹೆಚ್ಚಿಸುತ್ತ ಹೋದರೆ, ಹೀಗೆ ಹೆಚ್ಚುವ ಪ್ರಮಾಣ ಸರಕಿನ ಅಂಚಿನ ಉಪಯುಕ್ತತೆ (ಎಂದರೆ ಆ ಸರಕಿನ ಅಂಚಿನ ಘಟಕದ ಉಪಯುಕ್ತತೆ) ಕ್ರಮೇಣ ಇಳಿಯುತ್ತ ಸಾಗುತ್ತದೆ.

ಒಬ್ಬ ಅನುಭೋಗಿ ತಾನು ಬಯಸುವ ಸರಕೊಂದನ್ನು ಸಮಾನ ಪ್ರಮಾಣದ ಘಟಕಗಳಲ್ಲಿ ಒಂದೊಂದು ಘಟಕವನ್ನಾಗಿ ಪಡೆಯುತ್ತ ಹೋಗುವನೆಂದೂ ಹೀಗೆ ೫ ಘಟಕಗಳನ್ನು ಪಡೆಯುವನೆಂದೂ ಉಹಿಸಿದ ಪಕ್ಷದಲ್ಲಿ ಮೊದಲನೆಯ ಘಟಕದಿಂದ ಇಂತಿಷ್ಟು ಪ್ರಮಾಣದ ತೃಪ್ತಿ ದೊರಕುವುದೆಂದು ಭಾವಿಸಿದರೆ, ಎರಡು, ಮೂರು, ನಾಲ್ಕು ಮತ್ತು ಐದನೆಯ ಘಟಕಗಳ ಅನುಭೋಗದಿಂದ ಆತ ಹೊಂದುವ ಒಟ್ಟು ತೃಪ್ತಿಯ ಪ್ರಮಾಣ ಕ್ರಮವಾಅಗಿ ಹೆಚ್ಚಬಹುದಾದರೂ ಅ ಸರಕಿನ ಯಾವುದೋ ಘಟ್ಟದಿಂದ ಮುಂದಕ್ಕೆ ಇಳಿಯುತ್ತ ಹೋಗಬಹುದು. ಹೀಗೆ ಕ್ರಮ ಕ್ರಮವಗಿ ಸಮಪ್ರಮಾಣದ್ಲ್ಲಿ ಅಧಿಕಾಧಿಕವಾಗಿ ಆತ ಪಡೆಯುತ್ತಿರುವ ಒಂದೊಂದು ಹೆಚ್ಚಿನ ಘಟಕವೂ ಅಂಚಿನ ಘಟಕ. ಇದರ ಉಪಯುಕ್ತತೆಯೇ ಅಂಚಿನ ಉಪಯುಕ್ತತೆ, ಈ ಅಂಚಿನ ಉಪಯುಕ್ತತೆ ಒಂದು ಘಟ್ಟದಿಂದಾಚೆಗೆ ಅದಕ್ಕೆ ಬೆಲೆ ಕೊಡಬೇಕಾಗಿದ್ದಲ್ಲಿ ಅದರ ಅಂಚಿನ ಘಟಕಕ್ಕಾಗಿ ಹಣ ಕೊಡುವುದರ ಅನುಪಯುಕ್ತತೆಯನ್ನು (ಡಿಸ್ ಯುಟಿಲಿಟಿ) ಸರಕಿನಿಂದ ಲಭಿಸುವ ಉಪಯುಕ್ತತೆಯೊಡನೆ ಹೋಲಿಸಿ, ಉಚಿತವೆನಿಸುವ ಹಂತದಲ್ಲಿ ಆತ ಅದರ ಅನುಭೋಗ ನಿಲ್ಲಿಸುತ್ತಾನೆ. ಪದಾರ್ಥದ ಒಟ್ಟು ಉಪಯುಕ್ತತೆ ಇಳಿಮುಖದರದಲ್ಲೇ ಹೆಚ್ಚಾಗುವುದನ್ನು ಮುಂದೆ ಕೊಟ್ಟಿರುವ ಒಂದನೆಯ ನಕ್ಷೆಯೂ ಅಂಚೈನ ಉಪಯುಕ್ತತೆ ಇಳಿಮುಖವಾಗುವುದನ್ನು ಎರಡನೆಯ ನಕ್ಷೆಯೂ ತೋರಿಸುತ್ತದೆ.

ಮೊದಲನೆಯ ನಕ್ಷೆಯಲ್ಲಿ ಒಟ್ಟು ಉಪಯುಕ್ತತೆಯನ್ನು ತೋರಿಸಿದೆ. ಅನುಭೋಗಿ ಬಳಸುವ ಸರಕಿನ ಘಟಕ ಸಂಖ್ಯೆ ಏರಿದಂತೆ ಆತನಿಗೆ ಅವುಗಳ ಉಪಯುಕ್ತತೆ ಒಟ್ಟಿನಲ್ಲಿ ಏರುತ್ತ ಸಾಗಿದೆಯೆಂಬುದನ್ನು ಆ ಕಂಬಗಳ ಎತ್ತರ ಹೆಚ್ಚುತ್ತಿರುವುದರಿಂದ ಗೊತ್ತಾಗುತ್ತದೆ. ಆದರೆ ಹೀಗೆ ಅಧಿಕವಗಿ ಅನುಭೋಗಿಸುತ್ತ ಹೋದಂತೆಲ್ಲ ಆ ಸರಕಿನ ಅಂಚಿನ ಘಟಕದ ಉಪಯುಕ್ತತೆ ಕಡಿಮೆಯಾಗುತ್ತದೆಂಬುದನ್ನು ಆಯಾ ಘಟ್ಟಗಳ ಕಂಬಗಳ ಕಪ್ಪು ಛಾಯೆಯೆ ಭಾಗಗಳಿಂದ ವ್ಯಕ್ತವಾಗುತ್ತದೆ ಎಂದರೆ ಆ ಸರಕುಗಳ ಒಟ್ಟು ಉಪಯುಕ್ತತೆ ಇಳಿಯುವ ದರದಲ್ಲಿ ಏರುತ್ತದೆ.